ಉಟ್ಟ ಬಟ್ಟೆಗೆ ಬೆಂಕಿ ತಗುಲಿದರೆ ಆ ಶಕುನದ ಅರ್ಥ ಹೀಗಿದೆ; ಸಿಎಂ ಸಿದ್ದರಾಮಯ್ಯ ಅಗ್ನಿಪರೀಕ್ಷೆ ಗೆದ್ದುಬಿಟ್ಟರಾ?

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ವಿಧಾನಸೌಧದಲ್ಲಿ ಕಿತ್ತೂರು ಉತ್ಸವಕ್ಕೆ ಚಾಲನೆ ನೀಡುವಾಗ ಅವರು ತೊಟ್ಟಿದ್ದ ಬಟ್ಟೆಗೆ ಬೆಂಕಿ ತಗುಲಿತ್ತು. ಜ್ಯೋತಿ ಬೆಳಗುವಾಗ ಅವರ ಶರ್ಟ್​ಗೆ ಸ್ವಲ್ಪ ಬೆಂಕಿ ತಾಗಿ ಸುಟ್ಟುಹೋಗಿತ್ತು. ತೊಟ್ಟ ಬಟ್ಟೆಗೆ ಬೆಂಕಿ ತಗುಲಿದರೆ ಜ್ಯೋತಿಷ್ಯದ ಪ್ರಕಾರ ಅದರ ಅರ್ಥವೇನು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಉಟ್ಟ ಬಟ್ಟೆಗೆ ಬೆಂಕಿ ತಗುಲಿದರೆ ಆ ಶಕುನದ ಅರ್ಥ ಹೀಗಿದೆ; ಸಿಎಂ ಸಿದ್ದರಾಮಯ್ಯ ಅಗ್ನಿಪರೀಕ್ಷೆ ಗೆದ್ದುಬಿಟ್ಟರಾ?
ಸಿದ್ದರಾಮಯ್ಯ
Follow us
ಸ್ವಾತಿ ಎನ್​ಕೆ
| Updated By: ಸುಷ್ಮಾ ಚಕ್ರೆ

Updated on:Oct 02, 2024 | 8:44 PM

ಕೆಲವು ಶಕುನಗಳು, ಮುನ್ಸೂಚನೆಗಳು ಒಳಿತನ್ನು ಅಥವಾ ಕೆಡುಕನ್ನು ಮುಂಚಿತವಾಗಿಯೇ ತಿಳಿಸುತ್ತವೆ. ಈ ಮಾತು ಯಾಕೆ ನೆನಪಾದದ್ದು ಅಂದರೆ, ಅಕ್ಟೋಬರ್ ಎರಡನೇ ತಾರೀಕಿನ ಬುಧವಾರದ ದಿನ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ವೇಳೆ ಅವರು ಧರಿಸಿದ್ದ ಬಟ್ಟೆಗೆ ಬೆಂಕಿ ತಗುಲಿದೆ. ಹೆಚ್ಚಿನ ಅನಾಹುತಗಳು ಆಗದಂತೆ ಆ ಬೆಂಕಿಯನ್ನು ಕೂಡಲೇ ನಂದಿಸಲಾಗಿದೆ ಎಂಬುದು ಸುದ್ದಿ. ಜ್ಯೋತಿಷ್ಯ ಅಥವಾ ಶಾಸ್ತ್ರ ರೀತಿಯಾಗಿ ಹೇಳಬೇಕೆಂದರೆ, ಈ ರೀತಿ ಬೆಂಕಿ ತಗುಲಿದ ವಸ್ತ್ರವನ್ನು ಮತ್ತೊಮ್ಮೆ ಧರಿಸುವಂತೆ ಇಲ್ಲ. ಇನ್ನು ಈ ರೀತಿಯಾಗಿ ಬೆಂಕಿ ತಗುಲಿದ ವಸ್ತ್ರವನ್ನು ಹಾಲಿನ ಪಾತ್ರೆಯಲ್ಲಿ ನೆನೆಸಿಟ್ಟು, ಆ ನಂತರದಲ್ಲಿ ಆ ಬಟ್ಟೆಯನ್ನು ಮನೆಯಿಂದ ಹೊರಗೆ ಎಲ್ಲಾದರೂ ಬಿಸಾಡಲಾಗುತ್ತದೆ. ಹೀಗೊಂದು ಕ್ರಮವಿದೆ.

ಈ ಘಟನೆ ಬಗ್ಗೆ ಖ್ಯಾತ ಜ್ಯೋತಿಷಿಗಳಾದ ಪಂಡಿತ್ ವಿಠ್ಠಲ್ ಭಟ್ ಅವರನ್ನು ಟಿವಿ9 ಕನ್ನಡ ವೆಬ್ ಸೈಟ್ ನಿಂದ ಮಾತನಾಡಿಸಲಾಯಿತು. ಅದಕ್ಕೆ ಅವರು ಪ್ರತಿಕ್ರಿಯಿಸಿದ್ದು ಹೀಗೆ: ಒಬ್ಬ ಜೀವಂತ ವ್ಯಕ್ತಿಯ ಮೈ ಮೇಲಿನ ಬಟ್ಟೆಯನ್ನು ಕತ್ತರಿಸುವಂತಿಲ್ಲ, ಅದೇ ರೀತಿ ಬಟ್ಟೆಯನ್ನು ಹಾಕಿರುವಂತೆಯೇ ಹೊಲಿಯುವುದು, ಬಟ್ಟೆಗೆ ಬೆಂಕಿ ತಗುಲುವುದು ಇವೆಲ್ಲ ಆಗಬಾರದು. ಮೇಲುನೋಟಕ್ಕೆ ಕಣ್ಣಿಗೆ ಕಂಡಿಲ್ಲ ಅಂತಲೋ ಅಥವಾ ನಿರ್ಲಕ್ಷ್ಯದಿಂದ ಹೀಗಾಗಿರುತ್ತದೆ ಅಷ್ಟೇ ಅಂತ ಹೇಳುವವರು ಸಹ ಇರಬಹುದು. ಆದರೆ ಇಂಥ ಘಟನೆಗಳು ಏನನ್ನೋ ಸೂಚಿಸುತ್ತವೆ. ಅದನ್ನು ಗ್ರಹಿಸುವ ಹಾಗೂ ಮುಂಜಾಗ್ರತೆ ವಹಿಸುವ ಎಚ್ಚರಿಕೆ ಅತ್ಯಗತ್ಯ.

ಅಪಾಯದ ಮುನ್ಸೂಚನೆ:

ಮಾತನ್ನು ಮುಂದುವರಿಸಿದ ಅವರು, ಒಂದು ಮನೆಯ ಯಜಮಾನನಿಗೆ ಕೆಟ್ಟ ಶಕುನ ಅಂತಾದಲ್ಲಿ ಅದು ಆ ಮನೆಗೆ, ಯಜಮಾನನಿಗೆ ಹಾಗೂ ಕುಟುಂಬ ಸದಸ್ಯರಿಗೆ ಕೆಡುಕು ಸಂಭವಿಸುವುದರ ಮುನ್ಸೂಚನೆ ಎಂಬಂತೆ ಪರಿಗಣಿಸಲಾಗುತ್ತದೆ. ಈಗ ಅಧಿಕಾರ ಇರುವಂಥ ವ್ಯಕ್ತಿಗೆ ಹೀಗಾದಾಗ ಅದರ ಪರಿಣಾಮ- ಪ್ರಭಾವದ ವ್ಯಾಪ್ತಿ ಮತ್ತೂ ಹೆಚ್ಚಾಗುತ್ತದೆ. ಮುಖ್ಯಮಂತ್ರಿ ಅಂದಾಗ ಒಂದು ರಾಜ್ಯಕ್ಕೆ ಸಂಬಂಧಿಸಿದಂತೆ ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳುವ ಸ್ಥಾನದಲ್ಲಿ ಇರುವಂಥವರು. ಈ ಘಟನೆಯ ಪರಿಣಾಮವು ವೈಯಕ್ತಿಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಪಾಯದ ಮುನ್ಸೂಚನೆ ಆಗುತ್ತದೆ. ಅಷ್ಟೇ ಅಲ್ಲ, ರಾಜ್ಯಕ್ಕೂ ಇದು ಕೆಡುಕೊಂದರ ಮುನ್ಸೂಚನೆ ಅಂತ ವಿಶ್ಲೇಷಣೆ ಮಾಡಬಹುದು ಎಂದರು.

ಹೀಗೊಂದು ಘಟನಾವಳಿ ಸಂಭವಿಸಿದಾಗ ತಕ್ಷಣಕ್ಕೆ ಏನು ಮಾಡಲಾಗುತ್ತದೆ ಅಂದರೆ, ಮನೆಯಲ್ಲಿನ ದೇವರ ಕೋಣೆಯಲ್ಲಿ ದೀಪ ಹಚ್ಚಿ, ಹೆಚ್ಚಿನ ಅನಾಹುತ ಆಗದಂತೆ ಕಾಪಾಡಿದೆ ಭಗವಂತ ಎಂದು ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಆ ನಂತರದಲ್ಲಿ ಯಜಮಾನರ ಜಾತಕದ ವಿಶ್ಲೇಷಣೆಯನ್ನು ಮಾಡಿಸಲಾಗುತ್ತದೆ. ಶೇಕಡಾ ತೊಂಬತ್ತಕ್ಕೂ ಹೆಚ್ಚು ಪ್ರಕರಣಗಳಲ್ಲಿ ಗ್ರಹಗಳ ಕ್ರೂರತೆ ಅಥವಾ ಗ್ರಹ ಸ್ಥಿತಿಯ ಕಾರಣಕ್ಕೆ ಶಾಂತಿ- ಪೂಜೆ- ಪುನಸ್ಸರಾದಿಗಳನ್ನು ಮಾಡಿಕೊಳ್ಳಬೇಕು ಎಂಬುದನ್ನು ಸೂಚಿಸುವಂಥದ್ದೇ ಆಗಿರುತ್ತದೆ. ಹಾಗೊಂದು ವೇಳೆ ಇಲ್ಲದಿದ್ದಲ್ಲಿ ಪ್ರಶ್ನಾ ಸಮಯಕ್ಕೆ ಕುಂಡಲಿಯನ್ನು ಸಿದ್ಧ ಮಾಡಿಕೊಂಡು, ಇದು ಯಾವುದರ ಮುನ್ಸೂಚನೆ ಎಂಬುದನ್ನು ವಿಶ್ಲೇಷಣೆ ಮಾಡಬೇಕಾಗುತ್ತದೆ ಎಂದು ಹೇಳಿದರು.

ಅಗ್ನಿಪರೀಕ್ಷೆ ಮುಗಿಯಿತು:

ಸಿದ್ದರಾಮಯ್ಯ ಅವರ ವಸ್ತ್ರಕ್ಕೆ ಬೆಂಕಿ ತಗುಲಿರುವುದು ಅಮಾವಾಸ್ಯೆಯಂದು, ಅದರಲ್ಲೂ ಮಹಾಲಯ ಅಮಾವಾಸ್ಯೆಯಂದು. ಭಾರತದಲ್ಲಿ ಗೋಚರ, ಗ್ರಹಣಾಚರಣೆ ಇಲ್ಲದಿದ್ದರೂ ಕೇತುಗ್ರಸ್ತ ಸೂರ್ಯ ಗ್ರಹಣದ ಪ್ರಭಾವವು ಅದರದೇ ರೀತಿಯಲ್ಲಿ ಇರುತ್ತದೆ. ಸಿದ್ದರಾಮಯ್ಯ ಅವರ ಜನ್ಮ ರಾಶಿಗೆ ಈಗ ನಡೆಯುತ್ತಿರುವ ಗ್ರಹಣದ ಸ್ಥಾನವು ಹನ್ನೊಂದನೇ ಮನೆ ಆಗುತ್ತದೆ. ಅವರಿಗೆ ಇದ್ದಂಥ ಕೆಡುಕು ಈ ಮೂಲಕವಾಗಿ ಕಳೆದುಹೋಯಿತು ಎಂಬುದಾಗಿಯೂ ವಿಶ್ಲೇಷಿಸಬಹುದು ಎಂದು ತಮ್ಮ ಹೆಸರನ್ನು ಉಲ್ಲೇಖ ಮಾಡಬಾರದು ಎಂಬ ಷರತ್ತಿನೊಂದಿಗೆ ಜ್ಯೋತಿಷಿಗಳೊಬ್ಬರು ಹೇಳಿದರು. ಅಗ್ನಿಯಲ್ಲಿ ಎಲ್ಲವೂ ಶುದ್ಧವಾಗುತ್ತದೆ. ಯಾವ ವಸ್ತುವನ್ನು ಬೇಕಾದರೂ ಬೆಂಕಿಗೆ ಹಾಕಬಹುದು. ಅದರಿಂದ ಶುದ್ಧತೆಯನ್ನು ಹೇಳಬಹುದು. ಹಾಗೆ ನೋಡಿದರೆ ಸಿದ್ದರಾಮಯ್ಯ ಅವರು ಅಗ್ನಿಪರೀಕ್ಷೆಯಲ್ಲಿ ಗೆದ್ದಿದ್ದಾರೆ ಅಂತ ಹೇಳಬೇಕಾಗುತ್ತದೆ ಎಂದು ಹೇಳಿದರು.

ಅವರೇ ಮಾತನ್ನು ಮುಂದುವರಿಸಿ, ಅಕ್ಟೋಬರ್ ಇಪ್ಪತ್ತನೇ ತಾರೀಕಿನ ಆಚೆಗೆ ಸಿದ್ದರಾಮಯ್ಯ ಅವರ ಬದುಕಿನ ಅತಿದೊಡ್ಡ ಯುದ್ಧ ಎದುರಾಗಲಿದೆ. ಡಿಸೆಂಬರ್ ಮೊದಲ ವಾರದ ತನಕ ಅಕ್ಷರಶಃ ನಿಶ್ಶಸ್ತ್ರರಾಗುವಂಥ ಸಿದ್ದರಾಮಯ್ಯ ಅವರಿಗೆ ಯಾರ ಸಹಾಯ- ನೆರವು ಸಿಗಲಾರದಂಥ ಸನ್ನಿವೇಶ ಇದಾಗಿರುತ್ತದೆ. ಮುಖ್ಯಮಂತ್ರಿಗಳ ಜೊತೆಗೆ ಗುರುತಿಸಿಕೊಂಡರೆ ಏನು ತೊಂದರೆ ಆದೀತೋ ಎಂದು ಅವರ ಆಪ್ತಬಳಗದಲ್ಲಿ ಇರುವಂಥವರೇ ದೂರವಾಗುವುದನ್ನು ಈ ಬೆಂಕಿ ಮೂಲಕ ತಿಳಿಸಿದೆ ಎಂಬುದನ್ನು ಈ ಮೇಲ್ಕಂಡ ಸನ್ನಿವೇಶದ ಮೂಲಕ ವಿಶ್ಲೇಷಿಸಬಹುದು ಎಂದು ಅವರು ಮಾತು ಮುಗಿಸಿದರು.

Published On - 8:05 pm, Wed, 2 October 24

ದರೋಡೆಕೋರನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನ
ದರೋಡೆಕೋರನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನ
ರಾಜ್ಯಾಧ್ಯಕ್ಷನ ಚುನಾವಣೆಯನ್ನು ಶಿವರಾಜ್ ಚೌಹಾನ್ ನೋಡಿಕೊಳ್ಳುತ್ತಾರೆ: ಅಶೋಕ
ರಾಜ್ಯಾಧ್ಯಕ್ಷನ ಚುನಾವಣೆಯನ್ನು ಶಿವರಾಜ್ ಚೌಹಾನ್ ನೋಡಿಕೊಳ್ಳುತ್ತಾರೆ: ಅಶೋಕ
ವರಿಷ್ಠರು ದೆಹಲಿಗೆ ತೆರಳಬೇಕಿದ್ದರಿಂದ ಬೇಗ ಭಾಷಣ ಮುಗಿಸಿದ ಸಿದ್ದರಾಮಯ್ಯ
ವರಿಷ್ಠರು ದೆಹಲಿಗೆ ತೆರಳಬೇಕಿದ್ದರಿಂದ ಬೇಗ ಭಾಷಣ ಮುಗಿಸಿದ ಸಿದ್ದರಾಮಯ್ಯ
ಅಮೆರಿಕದಲ್ಲಿನ ಅಭಿಮಾನಿಗಳ ಎದುರು ಹಾಡು ಹೇಳಿ ರಂಜಿಸಿದ ಶಿವರಾಜ್​ಕುಮಾರ್
ಅಮೆರಿಕದಲ್ಲಿನ ಅಭಿಮಾನಿಗಳ ಎದುರು ಹಾಡು ಹೇಳಿ ರಂಜಿಸಿದ ಶಿವರಾಜ್​ಕುಮಾರ್
ಪ್ರಧಾನ ಮಂತ್ರಿ ಹುದ್ದೆಯನ್ನೇ ಸೋನಿಯಾ ಗಾಂಧಿ ತ್ಯಾಗ ಮಾಡಿದ್ದರು: ಖರ್ಗೆ
ಪ್ರಧಾನ ಮಂತ್ರಿ ಹುದ್ದೆಯನ್ನೇ ಸೋನಿಯಾ ಗಾಂಧಿ ತ್ಯಾಗ ಮಾಡಿದ್ದರು: ಖರ್ಗೆ
ಎಐಸಿಸಿ ಕಟ್ಟಡಕ್ಕೆ ಗಾಂಧಿ ಭವನ ಅಂತ ಯಾಕೆ ಹೆಸರಿಟ್ಟಿಲ್ಲ? ಆರ್ ಅಶೋಕ
ಎಐಸಿಸಿ ಕಟ್ಟಡಕ್ಕೆ ಗಾಂಧಿ ಭವನ ಅಂತ ಯಾಕೆ ಹೆಸರಿಟ್ಟಿಲ್ಲ? ಆರ್ ಅಶೋಕ
ಪಕ್ಷದ ವಿದ್ಯಮಾನಗಳಿಂದ ತಳಮಟ್ಟದ ಕಾರ್ಯಕರ್ತ ನೊಂದಿದ್ದಾನೆ: ಸುನೀಲ ಕುಮಾರ್
ಪಕ್ಷದ ವಿದ್ಯಮಾನಗಳಿಂದ ತಳಮಟ್ಟದ ಕಾರ್ಯಕರ್ತ ನೊಂದಿದ್ದಾನೆ: ಸುನೀಲ ಕುಮಾರ್
ಬಿಗ್​ಬಾಸ್ ಮನೆಯಲ್ಲಿ ‘ಯಜಮಾನ’, ಝಾನ್ಸಿ ಆವಾಜ್​ಗೆ ತಲೆತಗ್ಗಿಸಿದ ರಜತ್
ಬಿಗ್​ಬಾಸ್ ಮನೆಯಲ್ಲಿ ‘ಯಜಮಾನ’, ಝಾನ್ಸಿ ಆವಾಜ್​ಗೆ ತಲೆತಗ್ಗಿಸಿದ ರಜತ್
ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ
ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ
Video: ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ
Video: ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ