Cancer Ascendant: ಕರ್ಕಾಟಕ ಲಗ್ನದವರ ಗುಣ, ಸ್ವಭಾವ, ದೌರ್ಬಲ್ಯಗಳೇನು ಗೊತ್ತೆ?

ಜ್ಯೋತಿಷ್ಯದ ಪ್ರಕಾರವಾಗಿ ಕರ್ಕಾಟಕ ಲಗ್ನದ ವ್ಯಕ್ತಿಗಳ ಗುಣ, ಸ್ವಭಾವ ಹೇಗಿರುತ್ತದೆ ಎಂಬುದರ ವಿವರ ಈ ಲೇಖನದಲ್ಲಿ ಇದೆ.

Cancer Ascendant: ಕರ್ಕಾಟಕ ಲಗ್ನದವರ ಗುಣ, ಸ್ವಭಾವ, ದೌರ್ಬಲ್ಯಗಳೇನು ಗೊತ್ತೆ?
ಕರ್ಕಾಟಕ
Follow us
TV9 Web
| Updated By: ಆಯೇಷಾ ಬಾನು

Updated on: Aug 05, 2021 | 7:41 AM

ಯಾವುದೇ ಜಾತಕದಲ್ಲಿ ಲಗ್ನ (Ascendant) ಬಹಳ ಪ್ರಾಮುಖ್ಯ ವಹಿಸುತ್ತದೆ. ನೀವೂ ಜಾತಕವನ್ನು ಒಮ್ಮೆ ನೋಡಿಕೊಳ್ಳಿ, ಏಕೆಂದರೆ ಇಂದಿನಿಂದ ಲಗ್ನಗಳ ಬಗ್ಗೆ ಸರಣಿಯನ್ನು ಆರಂಭಿಸಲಾಗುವುದು. ಯಾವ ಲಗ್ನವಾಗಿದ್ದಲ್ಲಿ ಏನು ವಿಶೇಷ, ಆ ವ್ಯಕ್ತಿ ಹೇಗಿರುತ್ತಾರೆ, ಅವರ ಜೀವನದಲ್ಲಿ ಎಂಥ ಎತ್ತರಕ್ಕೆ ಏರುತ್ತಾರೆ ಎಂಬಿತ್ಯಾದಿ ಸಂಗತಿಗಳನ್ನು ತಿಳಿಸಲಾಗುತ್ತದೆ. ಇಂದಿನ ಲೇಖನದಲ್ಲಿ ಕರ್ಕಾಟಕ ಲಗ್ನದವರ ಬಗ್ಗೆ ತಿಳಿದುಕೊಳ್ಳಿ. ಇವರ ಗುಣ, ಸ್ವಭಾವ, ಅದೃಷ್ಟ ಇತ್ಯಾದಿ ವಿಚಾರಗಳ ಕುರಿತು ಆಸಕ್ತಿಕರವಾದ ಸಂಗತಿಗಳನ್ನು ತಿಳಿಸಲಾಗುತ್ತದೆ. ನಿಮಗೆ ಗೊತ್ತಿರಲಿ, ಇವರಿಗೆ ಬಾಲ್ಯದಲ್ಲಿ ಅನುಭವ ಶಿಕ್ಷಣ ತುಂಬ ಚೆನ್ನಾಗಿ ಸಿಕ್ಕಿರುತ್ತದೆ. ತಾಯಿಗಿಂತ ತಂದೆ ಪ್ರೀತಿಯನ್ನು ಪಡೆದಿರುತ್ತಾರೆ. ಆದರೆ ಅದು ಕೂಡ ಪೂರ್ಣ ಪ್ರಮಾಣದಲ್ಲಿ ಸಿಗುವುದಿಲ್ಲ. ಏಕೆಂದರೆ ಬಹಳ ಭಾವನಾ ಜೀವಿಗಳಾದ ಇವರಿಗೆ, ತಂದೆ- ತಾಯಿ ಮಧ್ಯೆ ಆಗುವ ಸಣ್ಣ- ಪುಟ್ಟ ವೈಮನಸ್ಯಗಳು ಸಹ ಬೇಗ ಬೇಸರ ಆಗುವಂತೆ ಮಾಡುತ್ತವೆ. ಇತರರಿಗೆ ತಮ್ಮಂತೆಯೇ ಆಗಬಾರದು ಎಂಬ ಕಾರಣಕ್ಕೆ ನಾನಾ ರೀತಿಯಲ್ಲಿ ಶ್ರಮ ಹಾಕುತ್ತಾರೆ.

ಕರ್ಕಾಟಕ ಲಗ್ನದವರಿಗೆ ಎಲ್ಲ ಹಂತದಲ್ಲೂ ಸವಾಲುಗಳು ಎದುರಾಗುತ್ತಲೇ ಇರುತ್ತವೆ. ಮುಖ್ಯವಾಗಿ ಭಾವನಾತ್ಮಕ ಸಂಗತಿಗಳು ಕಟ್ಟಿ ಹಾಕುತ್ತಲೇ ಇರುತ್ತದೆ. ಈ ರಾಶಿಯ ಗಂಡಸರಿಗಾದಲ್ಲಿ ಮದುವೆ ಆಚೆಗಿನ ಸೆಳೆತಗಳಿದ್ದಲ್ಲಿ, ಇಂಥದ್ದರಿಂದ ಮಹಿಳೆಯರು ಸಹ ಹೊರತಾಗುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಭಾವನಾತ್ಮಕವಾಗಿ ಇವರು ಇನ್ನೊಬ್ಬರ ಆಸರೆಯನ್ನು ಸದಾ ಬಯಸುತ್ತಲೇ ಇರುತ್ತಾರೆ. ಸಣ್ಣ- ಪುಟ್ಟ ಬೇಸರದಿಂದ ಕೂಡ ಹೊರ ಬರುವುದಕ್ಕೆ ಸಿಕ್ಕಾಪಟ್ಟೆ ಸಮಯ ತೆಗೆದುಕೊಳ್ಳುತ್ತಾರೆ. ಇನ್ನು ನಿರ್ಧಾರ ತೆಗೆದುಕೊಳ್ಳುವ ವಿಚಾರಕ್ಕೆ ಬಂದರೆ ಭಾರೀ ಗಟ್ಟಿ ಜನ. ಇವರದೇನು ಕಲ್ಲು ಹೃದಯವಾ ಎಂದು ಅನುಮಾನ ಪಡುವ ಮಟ್ಟಿಗೆ ನಡೆದುಕೊಳ್ಳುತ್ತಾರೆ. ಆದರೆ ಆ ತೀರ್ಮಾನಕ್ಕೂ ಅವರಿಗೆ ಪದೇಪದೇ ಬಿದ್ದ ಪೆಟ್ಟು ಕಾರಣವಾಗಿರುತ್ತದೆ.

ಸೇವಾ ವಲಯದಲ್ಲಿ ಈ ರಾಶಿಯವರು ಹೆಚ್ಚಾಗಿ ಕಂಡುಬರುತ್ತಾರೆ. ವೈದ್ಯಕೀಯ ಕ್ಷೇತ್ರ, ಸೇವಾ ವಲಯ, ಬ್ಯಾಂಕಿಂಗ್, ಚಿತ್ರರಂಗ, ಸಾಫ್ಟ್​ವೇರ್, ರಾಜಕೀಯದಲ್ಲಿ ಅಭೂತಪೂರ್ವ ಯಶಸ್ಸು ಪಡೆಯುತ್ತಾರೆ. ಕರ್ಕಾಟಕ ಲಗ್ನದ ಪುರುಷರಿಗಿಂತ ಸ್ತ್ರೀಯರು ತಮ್ಮ ಕ್ಷೇತ್ರದಲ್ಲಿ ಹೆಚ್ಚು ಯಶಸ್ವಿ ಆಗುತ್ತಾರೆ. ಇತಿಹಾಸದಲ್ಲಿ ಉಳಿದುಹೋಗುತ್ತಾರೆ. ಆದರೆ ಕರ್ಕಾಟಕ ಲಗ್ನದವರ ಜೀವನದಲ್ಲಿ ದೊಡ್ಡ- ದೊಡ್ಡ ಅಪಘಾತ ಸಂಭವಿಸುತ್ತವೆ. ಇನ್ನು ಮತ್ತೊಂದು ಸಮಸ್ಯೆ ಅಂದರೆ, ಇವರ ಮೇಲೆ ಹತ್ಯಾ ಯತ್ನಗಳು ನಡೆಯುತ್ತವೆ. ಪೂರ್ಣಾಯುಷ್ಯ ಪೂರೈಸುವ ಸಾಧ್ಯತೆಯೂ ಕಡಿಮೆ.

ಈ ಲಗ್ನದವರು ಸರಿಯಾಗಿ ನಿದ್ರೆ ಮಾಡಬೇಕು ಹಾಗೂ ವಿಶ್ರಾಂತಿ ಪಡೆಯಬೇಕು. ಮತ್ತೊಂದು ಸಂಗತಿ ಏನೆಂದರೆ, ಇತರರ ಮೇಲೆ ದ್ವೇಷ ಸಾಧನೆ ಮಾಡುವುದಕ್ಕಾಗಿ ತಮ್ಮ ಒಂದು ಕಣ್ಣು ಹೋದರೂ ಪರವಾಗಿಲ್ಲ, ಶತ್ರುವಿನದೂ ಎರಡೂ ಕಣ್ಣು ಹೋಗಬೇಕು ಎಂದು ಆಲೋಚಿಸುತ್ತಾರೆ. ಇಂಥ ಕೆಲವು ದೌರ್ಬಲ್ಯಗಳನ್ನು ಮೀರಬೇಕು.

ಇದನ್ನೂ ಓದಿ: Marriage Astrology: ವಿಚಿತ್ರ ಕಾರಣಗಳಿಂದಾಗಿ ಈ 5 ರಾಶಿಯವರು ಮದುವೆ ಆಗದೆ ಉಳಿದು ಬಿಡುವ ಸಾಧ್ಯತೆ ಹೆಚ್ಚು!

ಇದನ್ನೂ ಓದಿ: Astrology: ಉದ್ಯಮ ಸಾಮ್ರಾಜ್ಯ ಕಟ್ಟುವುದಕ್ಕೆ ಈ 4 ರಾಶಿಯವರು ಹೇಳಿ ಮಾಡಿಸಿದಂಥವರು

(Cancer Ascendant People Nature Characteristics And Weakness Explained Here)

ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್