Marriage Astrology: ವಿಚಿತ್ರ ಕಾರಣಗಳಿಂದಾಗಿ ಈ 5 ರಾಶಿಯವರು ಮದುವೆ ಆಗದೆ ಉಳಿದು ಬಿಡುವ ಸಾಧ್ಯತೆ ಹೆಚ್ಚು!

Marriage Astrology: ವಿಚಿತ್ರ ಕಾರಣಗಳಿಂದಾಗಿ ಈ 5 ರಾಶಿಯವರು ಮದುವೆ ಆಗದೆ ಉಳಿದು ಬಿಡುವ ಸಾಧ್ಯತೆ ಹೆಚ್ಚು!
ಸಾಂಕೇತಿಕ ಚಿತ್ರ

ಜ್ಯೋತಿಷ್ಯದ ಪ್ರಕಾರ ಈ 5 ರಾಶಿಯ ಜನರು ನಾನಾ ಕಾರಣಗಳಿಗಾಗಿ ಮದುವೆ ಆಗದೆ ಉಳಿದು ಬಿಡುವ ಸಾಧ್ಯತೆ ಇರುತ್ತದೆ. ಯಾವುದು ಆ 5 ರಾಶಿಗಳು ಎಂಬ ವಿವರಣೆ ಇಲ್ಲಿದೆ.

TV9kannada Web Team

| Edited By: Skanda

Jul 31, 2021 | 6:50 AM

ಮದುವೆ ಅನ್ನೋ ವಿಚಾರಕ್ಕೆ ಒಬ್ಬೊಬ್ಬರದು ಒಂದೊಂದು ರೀತಿಯ ಕನಸಿರುತ್ತದೆ. ಕೆಲವರಿಗೆ ಅದೊಂದು ಕೆಟ್ಟ ಕನಸಿನಂತೆಯೂ ಅನಿಸಬಹುದು. ಏನನ್ನೋ ಹುಡುಕುತ್ತಾ, ಮತ್ಯಾವುದೋ ಕೆಟ್ಟ ನೆನಪಿನಿಂದ ಘಾಸಿಯಾಗಿ ಮದುವೆ ವಯಸ್ಸನ್ನು ಹಾಗೇ ದಾಟಿ ಬಿಡುವವರು ಕೂಡ ಅನೇಕರು. ಆದರೆ ಈ ಬಗ್ಗೆ ಜ್ಯೋತಿಷ್ಯದಲ್ಲಿ ತಿಳಿಸಿರುವ ಕೆಲವು ಸಂಗತಿಯನ್ನು ಇಲ್ಲಿ ಹೇಳಬೇಕಿದೆ. ಈ ಲೇಖನದಲ್ಲಿ ತಿಳಿಸುವ 4 ರಾಶಿಯವರು ಮದುವೆ ವಿಚಾರ ಬಂದಾಗ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ. ಇಲ್ಲದಿದ್ದಲ್ಲಿ ಇವರು ಹಾಗೆಯೇ ಉಳಿದುಬಿಡುವ ಅಪಾಯ ಇರುತ್ತದೆ. ಯಾವ ರಾಶಿಗಳು ಹಾಗೆ ಎಂಬುದನ್ನು ತಿಳಿದುಕೊಳ್ಳಲು ಮುಂದೆ ಓದಿ.

ಮೇಷ ಮದುವೆ ವಿಚಾರ ಅಂತ ಬಂದಾಗ ಈ ರಾಶಿಯವರಿಗೆ ತಮಗೆ ಏನು ಬೇಕು ಎಂಬ ಬಗ್ಗೆಯೇ ಸ್ಪಷ್ಟತೆ ಇರುವುದಿಲ್ಲ. ಇದನ್ನು ಯಾರಾದರೂ ಹೇಳಿದರೂ ಇವರ ಅಹಂಕಾರಕ್ಕೆ ಪೆಟ್ಟು ಬೀಳುತ್ತದೆ. ಮೊದಮೊದಲಿಗೆ ಇವರಿಗೆ ಸಂಬಂಧಗಳನ್ನು ಹೇಳುವವರು ಸಹ ಕ್ರಮೇಣ ಬೇಸರ ಪಟ್ಟುಕೊಂಡು ಸುಮ್ಮನಾಗಿ ಬಿಡುತ್ತಾರೆ. ಜತೆಗೆ ಇವರ ಪೋಷಕರು ಸಹ ತಮ್ಮ ಮಕ್ಕಳ ಇಚ್ಛೆಗೆ ವಿರುದ್ಧವಾಗಿ ಹೋಗಬಾರದು ಎಂದುಕೊಂಡು, ಹೇಳಿದ ಮಾತನ್ನು ಕೇಳುವುದು ಹೆಚ್ಚಾಗಿರುತ್ತದೆ. ಇನ್ನೂ ಕೆಲವರಿಗೆ ಮದುವೆ ವಯಸ್ಸು ಸಮೀಪಿಸುತ್ತಿದ್ದಂತೆ ಗಂಭೀರವಾದ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡು, ಅದರಿಂದಲೇ ತಡೆಗಳು ಸಂಭವಿಸುತ್ತವೆ.

ಕರ್ಕಾಟಕ ಈ ರಾಶಿಯವರು ಜಾಸ್ತಿ ನಿರೀಕ್ಷೆ ಮಾಡುತ್ತಾರೆ. ತಮ್ಮಂತೆಯೇ ಇರಬೇಕು ಎಂದು ಬಯಸುತ್ತಾರೆ. ಅದು ಯಾವ ಮಟ್ಟಕ್ಕೆ ಹೋಗುತ್ತದೆ ಅಂದರೆ, ನಿಶ್ಚಿತಾರ್ಥದ ತನಕ ಬಂದು, ಇನ್ನೇನು ಮದುವೆ ಹತ್ತಿರ ಇರುವಾಗ ಕೂಡ ನಿಂತುಹೋಗುತ್ತದೆ. ಹೀಗೆ ಇವರ ಜೀವನದಲ್ಲಿ ಪದೇಪದೇ ಆಗುತ್ತದೆ. ವಿಪರೀತ ಸೂಕ್ಷ್ಮ ಸ್ವಭಾವದವರಾದ ಕರ್ಕಾಟಕ ರಾಶಿಯವರ ಜತೆಗೆ ಮಾತುಕತೆಯೇ ಭಯಂಕರ ಕಷ್ಟ. ಇನ್ನು ಮದುವೆ, ಸಂಸಾರ ಎಂಬುದು ಸಾಹಸವೇ ಸರಿ. ಆದರೆ ವಿಪರೀತ ಭಾವುಕತೆಯಿಂದಾಗಿ ಮಾನಸಿಕ ಸಮಸ್ಯೆ ಮಾಡಿಕೊಂಡು, ವಿವಾಹ ಜೀವನ ಬೇಡ ಎಂದು ನಿರ್ಧರಿಸುವವರೇ ಹೆಚ್ಚಿರುತ್ತಾರೆ.

ವೃಶ್ಚಿಕ ತಮ್ಮ ಸಂಗಾತಿ ಬಗ್ಗೆ ನಿರ್ದಿಷ್ಟವಾಗಿ ಹೀಗೇ ಇರಬೇಕು, ಇಂಥದ್ದೇ ಶಿಕ್ಷಣ, ಬಣ್ಣ ಇತ್ಯಾದಿಯಾಗಿ ಕನಸುಗಳನ್ನು ಕಟ್ಟಿಕೊಳ್ಳುವ ಇವರು, ಹುಡುಕಾಟದಲ್ಲೇ ವಿಪರೀತ ಸಮಯವನ್ನು ಕಳೆಯುತ್ತಾರೆ. ಜತೆಗೆ ಇತರರ ಆಯ್ಕೆಗಳ ಬಗ್ಗೆ ಗುಮಾನಿ ಪಡುವಂಥವರು ವೃಶ್ಚಿಕ ರಾಶಿಯವರು. ಯಾರ ಬಗ್ಗೆ ಹೆಚ್ಚು ಒತ್ತಡ ಹಾಕಿ, ಇವರನ್ನು ಮದುವೆಯಾದಲ್ಲಿ ಸುಖವಾಗಿರುತ್ತೀರಿ ಅಂತ ಹೇಳಲಾಗುತ್ತದೋ ಆಗಲೇ ಇವರ ಅನುಮಾನ ಹೆಚ್ಚಾಗುತ್ತದೆ. ಇನ್ನು ತಾವು ಮೆಚ್ಚಿಕೊಳ್ಳುವುದಾದರೂ ಸರಿಯಾಗಿರುತ್ತದಾ ಅಂದರೆ, ಆ ಆಯ್ಕೆ ಕೂಡ ಉತ್ತಮವಾಗಿರುವುದಿಲ್ಲ. ಆದರೆ ಎಲ್ಲರೂ ಆ ಆಯ್ಕೆಯನ್ನು ಒಪ್ಪಲೇಬೇಕು ಎಂದು ಹಠ ಹಿಡಿಯುತ್ತಾರೆ. ಕೊನೆಗೆ ಯಾವುದೂ ತುದಿ ಮುಟ್ಟುವುದಿಲ್ಲ.

ಕುಂಭ ಈ ರಾಶಿಯವರಿಗೆ ಹಗಲುಗನಸು ಜಾಸ್ತಿ. ವಾಸ್ತವದಿಂದ ದೂರವಾಗಿ ಬದುಕುತ್ತಾ ಇರುತ್ತಾರೆ. ತಮ್ಮಷ್ಟಕ್ಕೆ ತಾವೇ ಏನೇನೋ ಊಹಿಸಿಕೊಳ್ಳುತ್ತಾರೆ. ತಾವೇ ಕೋಪಗೊಳ್ಳುತ್ತಾರೆ. ಬೇಸರ ಮಾಡಿಕೊಳ್ಳುತ್ತಾರೆ. ಕೊನೆಗೆ ತಾವೇ ಒಂಟಿಯಾಗಿ ಉಳಿದುಬಿಡುತ್ತಾರೆ. ಈ ರಾಶಿಯವರ ಸಮಸ್ಯೆ ಏನೆಂದರೆ, ಏನೇನೋ ಊಹೆ ಮಾಡಿಕೊಳ್ಳುವುದು. ಯಾರಿಗೂ ಪರ್ಸನಲ್ ಸ್ಪೇಸ್ ಕೊಡುವುದಿಲ್ಲ. ಎಲ್ಲ ವಿಚಾರಗಳೂ ಇವರಿಗೆ ಬೇಕು. ಆ ಕಾರಣಕ್ಕೆ ಸಂಬಂಧದಲ್ಲಿ ಪದೇಪದೇ ಜಗಳ ಆಗುತ್ತದೆ. ಇದ್ಯಾವುದೋ ಅನುಮಾನದ ಪ್ರಾಣಿ ಅಂತ ಎಲ್ಲರೂ ದೂರವಾಗುತ್ತಾರೆ.

ಸಿಂಹ ಎಲ್ಲವೂ ತನ್ನ ಮೂಗಿನ ನೇರಕ್ಕೆ ನಡೆಯಬೇಕು ಎಂದುಕೊಳ್ಳುವ ಸಿಂಹ ರಾಶಿಯವರಿಗೆ ಸಂಗಾತಿಗೆ ಗೌರವ ನೀಡಬೇಕು ಎಂಬುದು ದೂರದ ಸಂಗತಿ. ನನಗೆ ಸಿಗಬೇಕಾದ್ದು ಸಿಗಲಿಲ್ಲ, ಮರ್ಯಾದೆ ಕೊಡಲಿಲ್ಲ, ಇವರ್ಯಾರೂ ನನ್ನ ಸಮಕ್ಕೆ ಇಲ್ಲ… ಇಂಥದ್ದೇ ಭಾವನೆ ತಲೆಯಲ್ಲಿ ಸುಳಿದಾಡುತ್ತಿರುತ್ತದೆ. ಸಿಂಹ ರಾಶಿಯವರು ತಮ್ಮ ತಪ್ಪನ್ನು ಯಾರಾದರೂ ಎತ್ತಾಡಿದರೆ ಕುದ್ದು ಹೋಗುತ್ತಾರೆ. ಮುನಿಸಿಕೊಂಡು ದೂರು ಉಳಿಯುತ್ತಾರೆ. ಮದುವೆ ಅಂತ ಬಂದಾಗಲೂ ಹೀಗೇ ಆಗುತ್ತದೆ. ಇನ್ನೊಬ್ಬರ ಮೇಲೆ ಡಾಮಿನೆನ್ಸ್ ಮಾಡುವ ಗುಣದಿಂದ ಹಾಗೂ ಅಹಂಕಾರದ ಕಾರಣಕ್ಕೆ ಮದುವೆ ಆಗದೆ ಉಳಿದುಬಿಡುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: These 4 zodiac signs become rich: ಈ ನಾಲ್ಕು ರಾಶಿಯವರು ಚಿಕ್ಕ ವಯಸ್ಸಿನಲ್ಲೇ ಶ್ರೀಮಂತರಾಗ್ತಾರೆ

ಇದನ್ನೂ ಓದಿ: Astrology: ಈ ನಾಲ್ಕು ರಾಶಿಯವರು ಭಾವನಾತ್ಮಕವಾಗಿ ಬಲು ಗಟ್ಟಿಗರು, ವಿಪರೀತ ಧೈರ್ಯಶಾಲಿಗಳು

Follow us on

Related Stories

Most Read Stories

Click on your DTH Provider to Add TV9 Kannada