AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Astrology: ಈ ನಾಲ್ಕು ರಾಶಿಯವರು ಭಾವನಾತ್ಮಕವಾಗಿ ಬಲು ಗಟ್ಟಿಗರು, ವಿಪರೀತ ಧೈರ್ಯಶಾಲಿಗಳು

ಎಂಥ ಸನ್ನಿವೇಶವನ್ನೂ ಧೃತಿಗೆಡದಂತೆ ಎದುರಿಸುವುದು ಸುಲಭವಲ್ಲ. ಆದರೆ ಈ ನಾಲ್ಕು ರಾಶಿಯವರು ಹಾಗಲ್ಲ. ಎಂಥ ಪರಿಸ್ಥಿತಿಯಲ್ಲೂ ಧೈರ್ಯಗೆಡುವುದಿಲ್ಲ. ಆತ್ಮವಿಶ್ವಾಸ ಕಳೆದುಕೊಳ್ಳುವುದಿಲ್ಲ. ಯಾವುವು ಆ ರಾಶಿಗಳು ಎಂಬ ವಿವರ ಇಲ್ಲಿದೆ.

Astrology: ಈ ನಾಲ್ಕು ರಾಶಿಯವರು ಭಾವನಾತ್ಮಕವಾಗಿ ಬಲು ಗಟ್ಟಿಗರು, ವಿಪರೀತ ಧೈರ್ಯಶಾಲಿಗಳು
ರಾಶಿ ಚಕ್ರ
TV9 Web
| Edited By: |

Updated on: Jun 24, 2021 | 6:45 AM

Share

ಎಂಥ ಬಂಡೆಗಲ್ಲಿನಂಥ ವ್ಯಕ್ತಿತ್ವ- ಹೀಗೆ ಕೆಲವರನ್ನು ನೋಡಿದ ತಕ್ಷಣ ಅನಿಸುತ್ತದೆ. ಎಂಥ ಸವಾಲಿನ ಸಂದರ್ಭಕ್ಕೂ ಅವರು ಎದೆಗುಂದುವುದಿಲ್ಲ. ಧೈರ್ಯಗೆಡುವುದಿಲ್ಲ. ಅಯ್ಯೋ, ಮುಂದೇನು ಎಂದು ಧೃತಿಗೆಡುವುದಿಲ್ಲ. ಹೀಗೆ ಇರುವುದಕ್ಕೂ ಜ್ಯೋತಿಷಕ್ಕೂ ಏನಾದರೂ ಸಂಬಂಧ ಇದೆಯಾ ಅಂತ ನೋಡಿದರೆ, ಹೌದು, ಖಂಡಿತಾ ಇದೆ. ಕೆಲವು ರಾಶಿಯವರಲ್ಲಿ ಮೂಲತಃ ಆ ಸ್ವಭಾವ ಇರುತ್ತದೆ. ನೀವು ಗಮನಿಸಿ ನೋಡಿ, ಎಂಥ ಸಂದಿಗ್ಧ ಸನ್ನಿವೇಶದಲ್ಲೂ ಒಂಚೂರು ಸಹ ವಿಚಲಿತರಾಗುವುದಿಲ್ಲ. ಬಡಪೆಟ್ಟಿಗೆ ಬಗ್ಗಲ್ಲ ಅಂತಾರಲ್ಲ ಹಾಗೆ. ಇವರನ್ನು ಬಗ್ಗಿಸುವುದು ಸಲೀಸಲ್ಲ. ಹೀಗೆ ನಾಲ್ಕು ರಾಶಿಗಳಂತೂ ಬಲು ಗಟ್ಟಿ. ಯಾವುವು ಆ ರಾಶಿಗಳು ಅಂತ ತಿಳಿಯುವುದಕ್ಕೆ ಮುಂದೆ ಓದಿ.

ವೃಷಭ ಮಾನಸಿಕವಾಗಿ ವಿಪರೀತ ಎನಿಸುವಷ್ಟು ಗಟ್ಟಿ ಇವರು. ಏನನ್ನಾದರೂ ನಿರ್ಧಾರ ಮಾಡಿಬಿಟ್ಟರೆ ಆ ಕೆಲಸ ಪೂರ್ತಿ ಆಗುವ ತನಕ ಕೈ ಬಿಡುವವರಲ್ಲ. ಎಂಥ ಕಷ್ಟದ ಸನ್ನಿವೇಶದಲ್ಲೂ ಗುರಿಯತ್ತ ನೆಟ್ಟ ಕಣ್ಣನ್ನು ಆಚೀಚೆ ಮಾಡುವವರಲ್ಲ. ಕಾದಾಟ ಎಂದು ಬಂದುಬಿಟ್ಟರೆ ಸುಲಭಕ್ಕೆ ಸೋಲುಪ್ಪುವ ಜಾಯಮಾನದವರಲ್ಲ. ತಾವು ಪ್ರಯತ್ನ ಪಡುತ್ತಿರುವ ಕೆಲಸದಲ್ಲಿ ಸವಾಲಿದೆ ಎನಿಸಿಬಿಟ್ಟರೆ ತಮ್ಮೆಲ್ಲ ಶಕ್ತಿಯನ್ನೂ ಅದರಲ್ಲೇ ತೊಡಗಿಸುತ್ತಾರೆ. ಇವರ ಆತ್ಮವಿಶ್ವಾಸ ಕಂಡು, ಇತರರು ಹೆದರುವಂತಾಗುತ್ತದೆ.

ಕುಂಭ ಕುಂಭ ರಾಶಿಯ ಜಾತಕರು ಸಹ ಮಾನಸಿಕವಾಗಿ ಬಲು ಗಟ್ಟಿಗರು. ವ್ಯಕ್ತಿಗಳ ಸ್ವಭಾವವನ್ನು ಅರಿತುಕೊಳ್ಳುವ ಸಾಮರ್ಥ್ಯ ಇವರಲ್ಲಿ ಇರುತ್ತದೆ. ತಮ್ಮ ಹಿಂದಿನ ಸೋಲು, ಕೆಟ್ಟ ಅನುಭವಗಳಿಂದ ಬಹಳ ಬೇಗ ಹೊರಬರಬಲ್ಲಂಥ ಶಕ್ತಿ ಇವರಿಗೆ ಇರುತ್ತದೆ. ತಮ್ಮದೇ ದೌರ್ಬಲ್ಯಗಳ ವಿರುದ್ಧ ಕೂಡ ಭಾರೀ ಹೋರಾಟ ಮಾಡಿಯೇ ಹೊರಬರುತ್ತಾರೆ. ತಮ್ಮನ್ನು ಸದಾ ಅಪ್​ಡೇಟ್ ಆಗಿಟ್ಟುಕೊಳ್ಳುವುದಕ್ಕೆ ಬಯಸುವ ಇವರು, ಸದಾ ಚೈತನ್ಯಪೂರ್ಣರಾಗಿ, ಚಿಂತನಶೀಲರಾಗಿ ಕಾಣಿಸಿಕೊಳ್ಳುತ್ತಾರೆ.

ವೃಶ್ಚಿಕ ವೃಶ್ಚಿಕ ರಾಶಿಯವರು ಬಹಳ ಗುಟ್ಟಿನ ಜನರು. ತಮ್ಮ ಕಂಫರ್ಟ್ ಝೋನ್​ನಿಂದ ಹೊರಬಂದು ನಿಜವಾದ ಭಾವನೆಗಳನ್ನು ತೋರಿಸಿಕೊಳ್ಳುವುದು ಬಹಳ ಅಪರೂಪ. ಕೆಲವು ಸಲವಂತೂ ಇವರೆಷ್ಟು ಹೃದಯಹೀನರು ಎಂಬಂತೆ ನಡೆದುಕೊಳ್ಳುತ್ತಾರೆ. ಯಾವ ಮುಲಾಜು ಸಹ ನೋಡದೆ ಎದುರುಎದುರಿಗೇ ಬೈದು ಬಿಡುತ್ತಾರೆ. ಇವೆಲ್ಲವೂ ತಮ್ಮ ಭಾವನೆಗಳನ್ನು ಮುಚ್ಚಿಡುವುದಕ್ಕೆ ಅವರು ಕಂಡುಕೊಳ್ಳುವ ಮಾರ್ಗವಾಗಿರುತ್ತದೆ. ನೋವಿನಲ್ಲೂ ಇವರಿಗೊಂದು ಸಮಾಧಾನ ಇರುತ್ತದೆ. ಇದು ಕೂಡ ಜೀವನದ ಪ್ರಮುಖವಾದ ಭಾಗ ಅಂತಲೇ ಭಾವಿಸುತ್ತಾರೆ.

ಸಿಂಹ ಬದಲಾವಣೆಗೆ ಒಗ್ಗಿಕೊಳ್ಳುವುದರಲ್ಲಿ ಈ ರಾಶಿಯವರು ನಿಸ್ಸೀಮರು. ಅಚ್ಚರಿ ಹುಟ್ಟಿಸುವಷ್ಟು ಆತ್ಮವಿಶ್ವಾಸ ಇವರಲ್ಲಿ ಇರುತ್ತದೆ. ಕಷ್ಟಗಳು ಎದುರಾದಷ್ಟೂ ಹೆಚ್ಚೆಚ್ಚು ಗಟ್ಟಿಯಾಗುತ್ತಾ ಹೋಗುತ್ತಾರೆ. ಮಾನಸಿಕವಾಗಿ ಇನ್ನಷ್ಟು ದೃಢವಾಗುತ್ತಾರೆ. ಕಷ್ಟ ಎದುರಾದಾಗಲೇ ತರ್ಕಬದ್ಧವಾಗಿ ಆಲೋಚನೆ ಮಾಡುತ್ತಾರೆ. ತಮ್ಮ ಭಾವನೆಗಳ ಮೇಲೆ ನಿಯಂತ್ರಣ ಸಾಧಿಸಿರುವ ಇವರು, ಅಪರೂಪಕ್ಕೆ ಎಂಬಂತೆ ಕುಸಿದಂತೆ ಕಾಣಸಿಗುತ್ತಾರೆ. ಇವರು ಒಂದು ಬಗೆಯಲ್ಲಿ ನೀರಿದ್ದಂತೆ. ಯಾವ ಪಾತ್ರೆಯಲ್ಲಿ ಹಾಕಿದರೂ ಅದಕ್ಕೆ ತಕ್ಕಂತೆ ಹೊಂದಾಣಿಕೆ ಆಗಿಬಿಡುತ್ತಾರೆ. ನಿಜವಾದ ಯೋಧನ ರೀತಿಯಲ್ಲಿ ಅದೆಂಥ ಕಷ್ಟದ ಯುದ್ಧವನ್ನಾದರೂ ಮಾನಸಿಕ ಸಮತೋಲನದಿಂದಲೇ ಅರ್ಧ ಗೆದ್ದುಬಿಡುತ್ತಾರೆ.

ಇದನ್ನೂ ಓದಿ: Numerology: ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಸ್ವಭಾವ ಹೇಗಿರುತ್ತದೆ?

ಇದನ್ನೂ ಓದಿ: Car number astrology: ವಾಹನ ಖರೀದಿಸಬೇಕು ಅಂತಿದ್ದೀರಾ? ನಿಮ್ಮ ಅದೃಷ್ಟ ಸಂಖ್ಯೆ ಯಾವುದೆಂದು ತಿಳಿದುಕೊಳ್ಳಿ

(Here are the four zodiac signs, Taurus, Aquarius, Scorpio and Leo people have more will power and self confidence according to astrology)

Follow Us
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ