Horoscope: ರಾಶಿಭವಿಷ್ಯ; ಈ ರಾಶಿಯವರು ವಿವಾದಕ್ಕೆ ಹೋಗಿ ಮೂರ್ಖರಾಗುವುದು ಬೇಡ, ಆಲಸ್ಯ ಬಿಡುವುದು ಅನಿವಾರ್ಯವಾದೀತು

ಚಂದ್ರ, ಸೂರ್ಯನ ಸಂಚಾರ ಚೆನ್ನಾಗಿರಬೇಕು. ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (ನವೆಂಬರ್​ 13) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ರಾಶಿಭವಿಷ್ಯ; ಈ ರಾಶಿಯವರು ವಿವಾದಕ್ಕೆ ಹೋಗಿ ಮೂರ್ಖರಾಗುವುದು ಬೇಡ, ಆಲಸ್ಯ ಬಿಡುವುದು ಅನಿವಾರ್ಯವಾದೀತು
ದಿನಭವಿಷ್ಯImage Credit source: iStock Photo
Follow us
TV9 Web
| Updated By: Rakesh Nayak Manchi

Updated on: Nov 13, 2023 | 12:15 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ನವೆಂಬರ್​​​ 13 ಸೋಮವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ತುಲಾ ಮಾಸ, ಮಹಾನಕ್ಷತ್ರ: ವಿಶಾಖಾ, ಮಾಸ: ಆಶ್ವಯುಜ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಅಮಾವಾಸ್ಯಾ, ನಿತ್ಯನಕ್ಷತ್ರ: ವಿಶಾಖಾ, ಯೋಗ: ಸೌಭಾಗ್ಯ, ಕರಣ: ಕಿಂಸ್ತುಘ್ನ, ಸೂರ್ಯೋದಯ ಬೆಳಗ್ಗೆ 06 ಗಂಟೆ 33 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ, ರಾಹು ಕಾಲ ಬೆಳಗ್ಗೆ 07:59 ರಿಂದ 09:25ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 10:51 ರಿಂದ ಮಧ್ಯಾಹ್ನ 12:17ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 01:43 ರಿಂದ 03:08ರ ವರೆಗೆ.

ಮೇಷ ರಾಶಿ: ಅನಿರೀಕ್ಷಿತ ಮಾತುಗಳಿಂದ ಬೇಸರವಾಗಬಹುದು. ಆರೋಗ್ಯವು ಹದತಪ್ಪುವುದು. ನಂಬಿಕೆಯನ್ನು ಗಳಿಸುವುದು ನಿಮಗೆ ಸವಾಲಾಗಬಹುದು. ನಿರೀಕ್ಷಿತ ಉಡುಗೊರೆಯಿಂದ ಸಂತೋಷವು ಸಿಗುವುದು. ಕಾರ್ಯದಲ್ಲಿ ಉಂಟಾದ ತೊಂದರೆಯನ್ನು ನೀವು ಲೆಕ್ಕಿಸದೇ ಮುನ್ನಡೆಯುವಿರಿ. ಆಭರಣ ಪ್ರಿಯರಿಗೆ ಸಂತೋಷವಾಗುವುದು. ಹಳೆಯ ವ್ಯವಹಾರವು ಪುನಃ ಮುನ್ನೆಲೆಗೆ ಬಂದು ಕಲಹದಲ್ಲಿ ಅಂತ್ಯವಾಗಬಹುದು. ಅಶಿಸ್ತಿನ ಕಾರ್ಯಕ್ಕೆ ಅಪಹಾಸ್ಯ ಮಾಡಬಹುದು. ಮಾತಿನಲ್ಲಿ ಮಿತಿ ಇರಲಿದ್ದು ಎಲ್ಲರಿಗೂ ಆಶ್ಚರ್ಯವಾದೀತು. ಆಲಸ್ಯದಿಂದ ದೂರವಿದ್ದರೂ ಸೋಮಾರಿ ಬಿರುದು ಬರಬಹುದು. ‌ವಿವಾದಕ್ಕೆ ಹೋಗಿ ಮೂರ್ಖರಾಗುವುದು ಬೇಡ. ಆಲಸ್ಯವನ್ನು ಬಿಡುವುದು ಅನಿವಾರ್ಯವಾದೀತು.

ವೃಷಭ ರಾಶಿ: ನಿಮ್ಮ ಕೃತಕ ಸ್ವಭಾವವು ಇತರರಿಗೆ ಇಷ್ಟವಾಗದೇ ಹೋಗುವುದು. ಕೆಲವು ಸನ್ನಿವೇಶವನ್ನು ನೀವಾಗಿಯೇ ಸೃಷ್ಟಿಸಿಕೊಳ್ಳುವಿರಿ. ಆರ್ಥಿಕತೆಯು ದುರ್ಬಲವಾಗಿದ್ದು ಇದೇ ದೊಡ್ಡ ಚಿಂತೆಯಾಗಬಹುದು. ಏಕಕಾಲಕ್ಕೆ ಹತ್ತಾರು ಚಿಂತನೆಯನ್ನು ಮನಸ್ಸು ಮಾಡಲಿದೆ. ಯಾರ ಬೆಂಬಲವನ್ನು ಬಯಸದೇ ಸ್ವತಂತ್ರವಾಗಿ ಕೆಲಸವನ್ನು ಮಾಡುವಿರಿ. ಮನೆಯಲ್ಲಿ ನಿಮಗೆ ಪೂರಕವಾದ ವಾತಾವರಣವಿದ್ದರೂ ಸಂತೋಷವು ಇರದು. ಇಂದು ನಿಮ್ಮ ಬಗ್ಗೆಯೇ ನಿಮಗೆ ಅಸಮಾಧಾನವಿರಬಹುದು. ಬರಬೇಕಿದ್ದ ಹಣವು ಬಹಳ ದಿನವಾದರೂ ಬಾರದೇ ಇದ್ದುದು ಚಿಂತೆಯಾಗುವುದು. ಇಂದು ಎಲ್ಲರಿಂದ ದೂರವಿರುವುದು ನಿಮಗೆ ಇಷ್ಟವಾಗುವುದು. ಹೊಸ ಸ್ಥಳವು ನೀವು ಒಗ್ಗಿಕೊಳ್ಳುವುದು ಕಷ್ಟವಾದೀತು. ದೇವರಲ್ಲಿ ನಂಬಿಕೆ ಕಡಿಮೆಯಾಗುವುದು.

ಮಿಥುನ ರಾಶಿ: ಕುಟುಂಬದಲ್ಲಿ ಕಿರಿಕಿರಿ ಇರುವ ಕಾರಣ ಕಛೇರಿಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುವಿರಿ. ಚಿಂತೆಯು ನಿಮ್ಮ ದಿನವನ್ನು ಹಾಳು ಮಾಡೀತು. ಸರ್ಕಾರಿ ಉದ್ಯೋಗದ ಕಡೆ ನಿಮ್ಮ ಮನಸ್ಸು ಹೊರಳುವುದು. ನಿಶ್ಚಿತ ಕಾರ್ಯವು ನಿಮ್ಮಿಂದ ಆಗದೇ ಹೋಗಬಹುದು. ಪ್ರಯಾಣದ ಅನಿವಾರ್ಯತೆ ಇದ್ದರೆ ಸ್ವಂತ ವಾಹನದಲ್ಲಿ ಪ್ರಯಾಣ ಮಾಡಿ. ಗೊಂದಲವನ್ನು ನೀವು ಮೀರುವುದು ಕಷ್ಟವಾದೀತು. ಶತ್ರುಗಳನ್ನು ಹಿಮ್ಮೆಟ್ಟಿಸುವ ಕಾರ್ಯವು ನಿಮ್ಮ ಕಡೆಯಿಂದ ಆಗುವುದು. ಪುನಃ ಪುನಃ ನಿಮಗೆ ಆಗದ ವಿಚಾರಗಳೇ ನಿಮ್ಮ ಕಿವಿಗೆ ಬೀಳಬಹುದು. ಒತ್ತಡಗಳು ನಿಮ್ಮ ಕೆಲಸವನ್ನು ನಿಧಾನ ಮಾಡುವುದು. ಇಂದು ಹೊಂದಾಣಿಕೆಯ ಸ್ವಭಾವವನ್ನು ಬಿಡಬಹುದು. ಎಲ್ಲರಿಂದ ಗೌರವವನ್ನು ಪಡೆಯುವ ಬಯಕೆ ಇರಲಿದೆ. ಯಾರ ಹಂಗಿನಲ್ಲಿ‌ ಇರಲು ಬಯಸುವುದಿಲ್ಲ.

ಕರ್ಕ ರಾಶಿ: ನಕಾರಾತ್ಮಕ ವಿಚಾರಗಳು ನಿಮ್ಮ ಮನಸ್ಸನ್ನು ಕದಡಬಹುದು. ಎಲ್ಲರ ಮಾತಿಗೂ ಪ್ರತಿಕ್ರಿಯೆಯನ್ನು ಕೊಡಬೇಕೆಂದಿಲ್ಲ. ಮೌನವೂ ಉತ್ತರವಾದೀತು. ಕುಟುಂಬದ ಜವಾಬ್ದಾರಿಯು ನಿಮ್ಮ ಮೇಲೇ ಬರಬಹುದು‌. ಇಂದು ನಿಮ್ಮ ಮಾರ್ಗಗಳು ಎಲ್ಲವೂ ಮುಚ್ಚಿದಂತೆ ಅನ್ನಿಸಬಹುದು. ವೇಗದ ನಡಿಗೆಯಿಂದ ಬೀಳುವಿರಿ. ಆರ್ಥಿಕ ನೆರವನ್ನು ನೀಡಿದವರಿಗೆ ಕೃತಜ್ಞತೆಯನ್ನು ಸಲ್ಲಿಸಿ. ಸ್ತ್ರೀಯರಿಂದ ನಿಮಗೆ ಬೈಗುಳವು ಸಿಗಬಹುದು. ಅವಿವಾಹಿತರು ವಿವಾಹದ ಬಗ್ಗೆ ಚಿಂತೆಯಾದೀತು.‌ ಉದ್ಯೋಗದಲ್ಲಿ ಪ್ರಾಮಾಣಿಕರಾಗಿದ್ದರೂ ಅಪವಾದವು ಬರಬಹುದು. ಸಾಮಾಜಿಕ ಕಾರ್ಯಕ್ಕೆ ಜನಬೆಂಬಲವು ಸಿಗಬಹುದು. ಸಂಗಾತಿಯಿಂದ ಸಿಗಬೇಕಾದ ಪ್ರೀತಿಯು ಕಡಿಮೆ ಆಗಲಿದೆ. ಇಂದಿನ ನಿಮ್ಮ ವರ್ತನೆಯು ಬೇರೆ ರೀತಿಯಲ್ಲಿ ತೋರುವುದು. ಸರಳವಾಗಿ ಇರುವುದು ಇಷ್ಟವಾದೀತು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ