Horoscope: ದಿನಭವಿಷ್ಯ: ಇಂದು ಮಾತುಗಳನ್ನು ಹೆಚ್ಚು ಎಚ್ಚರದಿಂದ ಆಡಿ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಜೂ.17 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ದಿನಭವಿಷ್ಯ: ಇಂದು ಮಾತುಗಳನ್ನು ಹೆಚ್ಚು ಎಚ್ಚರದಿಂದ ಆಡಿ
ದಿನಭವಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 17, 2024 | 12:30 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಸೋಮವಾರ (ಜೂನ್. 17) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠಾ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ದಶಮೀ, ನಿತ್ಯನಕ್ಷತ್ರ: ಚಿತ್ರಾ, ಯೋಗ: ವರಿಯಾನ್, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 05 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 02 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 07:42 ರಿಂದ 09:20ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 10:57 ರಿಂದ ಮಧ್ಯಾಹ್ನ 12:34ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:11 ರಿಂದ 03:48ರ ವರೆಗೆ.

ಸಿಂಹ ರಾಶಿ: ನೀವು ಅಧಿಕಾರವನ್ನು ಅನ್ಯ ಕಾರಣಕ್ಕೆ ಬಳಸಿಕೊಂಡು ಸಿಕ್ಕಿಬೀಳುವಿರಿ. ಪ್ರಭಾವಿಗಳ ಸಹಾಯವನ್ನು ಉದ್ಯೋಗಕ್ಕೆ ಬಳಸಿಕೊಳ್ಳುವಿರಿ. ಮನೆ ನಿರ್ಮಾಣ ಮಾಡುತ್ತಿದ್ದವರಿಗೆ ಇದ್ದ ಅಡೆತಡೆಗಳು ಸ್ವಲ್ಪಮಟ್ಟಿಗೆ ದೂರವಾಗಲಿದೆ. ಸಾಹಿತ್ಯದಲ್ಲಿ ಆಸಕ್ತರಿಗೆ ಹೆಚ್ಚಿನ ಕೆಲಸ ದೊರೆಯುತ್ತದೆ. ಬಂಧುಗಳ ಗಲಾಟೆಗಳಲ್ಲಿ ಮಧ್ಯಸ್ಥಿಕೆ ವಹಿಸುವುದು ನಿಮಗೆ ದುಬಾರಿಯಾಗಬಹುದು. ಪೋಷಕರಿಂದ ಮಕ್ಕಳ ಆಸೆಗೆ ಪ್ರೋತ್ಸಾಹ ದೊರೆಯುತ್ತದೆ. ಮೂಳೆ ತೊಂದರೆ ಇರುವವರು ಚಿಕಿತ್ಸೆ ಪಡೆಯುವುದು ಒಳ್ಳೆಯದು. ಕೃಷಿ ಭೂಮಿ ವಿಸ್ತರಣೆಯನ್ನು ಮಾಡುವ ಕಾರ್ಯಕ್ಕೆ ಈಗ ಮುಂದಾಗುವಿರಿ. ಹಳೆಯ ಮಿತ್ರನ ಭೇಟಿಯಾಗಿದ್ದು ಅವರ ಹೆಚ್ಚು ಸಮಯವನ್ನು ಕಳೆಯುವಿರಿ. ಇಂದು ಮಾಡುವ ಕೆಲಸದಲ್ಲಿ ಶ್ರದ್ಧೆ ಇರಲಿದೆ. ನಿಮ್ಮ ಮೇಲೆ‌ ನಂಬಿಕೆಯು ಕಡಿಮೆಯಾದೀತು. ಹೂಡಿಕೆಯ ವಿಚಾರದ ಬಗ್ಗೆ ಚರ್ಚೆ ನಡೆಸುವಿರಿ. ಕಛೇರಿಯಲ್ಲಿ ಒತ್ತಡದ ಕಾರ್ಯವನ್ನು ಮುಗಿಸಿದರೂ ನಿಮ್ಮಲ್ಲಿ ಉತ್ಸಾಹವು ಅಧಿಕವಾಗಿರುವುದು.

ಕನ್ಯಾ ರಾಶಿ: ಮಿತಿ ಮೀರಿದ ಕಾರ್ಯಗಳಿಂದ ದೇಹ ಮನಸ್ಸಿಗೆ ಹೆಚ್ಚು ಆಯಾಸ. ದಾಯಾದಿ ಕಲಹವು ಇಂದು ನ್ಯಾಯಾಲಯಕ್ಕೆ ಹೋಗಲಿದೆ‌. ಸಂಗಾತಿಯ ಜೊತೆ ಅನೌಪಚಾರಿಕ ಹರಟೆಯಿಂದ ಕಾಲವನ್ನು ಕಳೆಯುವಿರಿ. ಆರ್ಥಿಕಸಮಸ್ಯೆಯನ್ನು ಸಮಸ್ಯೆಯಾಗಿ ಇಟ್ಟುಕೊಳ್ಳದೇ ಅದರ ಮುಂದಿನ ಹಂತಕ್ಕೆ ಹೋಗಬೇಕಾಗಿದೆ. ಆದಾಯದ ಮೂಲದಲ್ಲಿ ವ್ಯತ್ಯಾಸವಾಗಲಿದೆ. ಹೊರಬರಲು ಸರಿಯಾದ ಅವಕಾಶವಿದೆ. ಇಂದಿನ ಯೋಜಿತ ಕೆಲಸಗಳು ಪೂರ್ಣಗೊಳ್ಳುತ್ತವೆ. ಗುಂಪಿನಲ್ಲಿದ್ದಾಗ ನೀವೇನು ಹೇಳುತ್ತೀರೆಂದು ಎಚ್ಚರ ವಹಿಸಿ. ಹಠಾತ್ ಟೀಕೆಗಳಿಗೆ ನೀವು ತೀವ್ರವಾಗಿ ಉದ್ವೇಗಕ್ಕೆ ಸಿಲುಕುವಿರಿ. ನಿಮ್ಮ ಶಕ್ತಿ ಮತ್ತು ಉತ್ಸಾಹವನ್ನು ಮರಳಿ ತರುವ ಒಂದು ಆನಂದಮಯ ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ಬಂಧುಗಳ ನಡುವೆ ವಾಗ್ವಾದವು ನಡೆದು ವೈಮನಸ್ಯ ಉಂಟಾಗಬಹುದು. ಕಾರ್ಯದ ಒತ್ತಡದಿಂದ ಸಂಗಾತಿಯು ನಿಮ್ಮ ಜೊತೆ ಸರಿಯಾಗಿ ಮಾತನಾಡದೇ ಇರಬಹುದು. ಬೇಸರಿಸದೇ ನೀವೇ ಮಾತನಾಡಿಸಿ.

ತುಲಾ ರಾಶಿ: ಇಂದು ಬೇಕೆಂದೇ ಹಿತತ್ರುಗಳು ನಿಮ್ಮ ಸಂಪತ್ತನ್ನು ಕೇಳುವರು. ಹೂಡಿಕೆಗೆ ಬೇಕಾದ ಆಲೋಚನೆಗಳನ್ನು ಮಾಡಬಹುದು. ಮನೆಯನ್ನು ಕಟ್ಟಲು ಸಾಲವನ್ನು ಮಾಡಬೇಕಾಗುವುದು. ಮನೆಯ ಕೆಲಸಕ್ಕೆ ಸಹಾಯ ಮಾಡಲಿದ್ದೀರಿ. ನಿಮ್ಮ ಭಾವನೆಗಳಿಗೆ ಘಾಸಿಯಾಗುವ ಸಮಾಚಾರವು ಇಂದು ಬರಲಿದೆ. ಮಾತುಗಳನ್ನು ಹೆಚ್ಚು ಎಚ್ಚರದಿಂದ ಆಡಿ. ಇಲ್ಲದಿದ್ದರೆ ಮುಜುಗರಕ್ಕೆ ಒಳಗಾಗುವ ಸಂದರ್ಭವಿದೆ. ಹಣದ ಒಳಹರಿವು ಮಂದಗತಿಯಲ್ಲಿ ಇರಬಹುದು. ಮಾರಾಟದಲ್ಲಿ ಚುರುಕುತನ ಅವಶ್ಯಕ. ಧಾರ್ಮಿಕ ಆಚರಣೆಗಳಲ್ಲಿ ಆಸಕ್ತಿ ಕಡಿಮೆಯಾಗಬಹುದು. ಚಿತ್ತ ಚಾಂಚಲ್ಯ ನಿಮ್ಮನ್ನು ಒಂದು ಕಡೆಗೆ ಇರಲು ಬಿಡದು. ವೃತ್ತಿಯಲ್ಲಿ ಹೆಚ್ಚು ತಿರುಗಾಟವಿರಲಿದೆ. ಸಂಗಾತಿಯ ಸಿಡುಕಿನ ನುಡಿಗಳು ನಿಮಗೆ ನೋವು ತರುತ್ತದೆ. ಆಕಸ್ಮಿಕವಾಗಿ ಸಿಕ್ಕ ಉದ್ಯೋಗವನ್ನು ಸರಿಯಾಗಿ ಬಳಸಿಕೊಳ್ಳಿ. ಆರೋಗ್ಯದ ಏರಿಳಿತವನ್ನು ಯಾರ ಬಳಿಯಾದರೂ ಹೇಳಿ.

ವೃಶ್ಚಿಕ ರಾಶಿ: ಇಂದು ನೀವು ಸನ್ನಿವೇಶವೂ ಕೈ ಮೀರದಂತೆ ನೋಡಿಕೊಳ್ಳಿ. ಕಲಾವಿದರಿಗೆ ಗಲಿಬಿಲಿಯ ಸನ್ನಿವೇಶವು ಬರಲಿದೆ. ಅನಾರೋಗ್ಯ ವಿಚಾರವಾಗಿ ಸ್ನೇಹಿತರ ಜೊತೆ ಮಾತನಾಡಿ. ದೈನಂದಿನ ಸಂಪಾದನೆಯನ್ನು ಮಾಡುವವರಿಗೆ ಕಷ್ಟವಾಗುವುದು. ನ್ಯಾಯವಾದಿಗಳಿಗೆ ಹೆಚ್ಚಿನ ಬೇಡಿಕೆ ಇದ್ದು ಆದಾಯವೂ ಹೆಚ್ಚಬಹುದು. ವಿದ್ಯಾರ್ಥಿಗಳು ಅಂತ್ಯಕಾಲದಲ್ಲಿ ಅಧ್ಯಯನ‌ ಮಾಡಿದರೆ ಯಾವ ಪ್ರಯೋಜನವಿಲ್ಲ. ಇಂದು ಸೇವಿಸುವ ಆಹಾರದಿಂದ ಅನಾರೋಗ್ಯ ಉಂಟಾಗಬಹುದು. ವ್ಯವಹಾರವನ್ನು ವ್ಯವಹಾರವಾಗಿಯೇ ಮಾಡಿ. ಆಗ ನಿಮ್ಮ ಮಾತಿಗೆ ಹೆಚ್ಚು ಬೆಲೆ ಬಂದೀತು. ಹೂಡಿಕೆಯು ದ್ವಿಗುಣವಾಗಬಹುದು. ಅದನ್ನು ಪಡೆದುಕೊಳ್ಳಲು ಕಷ್ಟವಾದೀತು. ನೌಕರರು ನಿಮ್ಮ‌ಆಪ್ತರಾಗಿ ನಿಮ್ಮ ಕೆಲಸದಲ್ಲಿ ಭಾಗಿಯಾಗುವರು. ನಿಮ್ಮ ಸಂಪತ್ತನ್ನು ಸದುಪಯೋಗ ಮಾಡಿಕೊಳ್ಳುವ ದಾರಿಯನ್ನು ಕಂಡುಕೊಳ್ಳಿ.