AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ದಿನಭವಿಷ್ಯ: ಇಂದು ಈ ರಾಶಿಯವರ ಮಾತಿಗೆ ಬೆಲೆ ಇಲ್ಲವಾದೀತು

ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಮೇ.31 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ದಿನಭವಿಷ್ಯ: ಇಂದು ಈ ರಾಶಿಯವರ ಮಾತಿಗೆ ಬೆಲೆ ಇಲ್ಲವಾದೀತು
ದಿನಭವಿಷ್ಯ
TV9 Web
| Edited By: |

Updated on: May 31, 2024 | 12:30 AM

Share

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಮೇ​​​​​ 31ರ ರಾಶಿ ಭವಿಷ್ಯದಲ್ಲಿ ಮೇಷ ರಾಶಿಯಿಂದ ಕಟಕ ರಾಶಿಯವರೆಗೆ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಶತಭಿಷಾ, ಯೋಗ: ವಿಷ್ಕಂಭ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 57 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 10:54ರಿಂದ ಮಧ್ಯಾಹ್ನ 12:31ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:44 ರಿಂದ ಸಂಜೆ 05:21ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 07:41 ರಿಂದ 09:17ರ ವರೆಗೆ.

ಸಿಂಹ ರಾಶಿ: ಇಂದು ನಿಮ್ಮ ಹಳೆಯ ಕನಸಿಗೆ ಮೂರ್ತರೂಪ ಸಿಗುವುದು. ನಿಮ್ಮಿಂದ ಹೆತ್ತವರು ಸುಖಪಡುವರು. ಸ್ನೇಹಿತರಿಗೆ ಮಾಡಿದ ಸಹಾಯದಿಂದ ನಿಮಗೆ ಅನುಕೂಲವಗಲಿದೆ. ಸಾಮಾಜಿಕ ಕಾರ್ಯದಲ್ಲಿ ನಿಮಗೆ ಆಸಕ್ತಿಯು ಉಂಟಾಗುವ ಸಾಧ್ಯತೆ ಇದೆ. ಅತಿಯಾದ ಆಪ್ತತೆಯಿಂದ ನಿಮಗೆ ತೊಂದರೆಯಾಗಬಹುದು. ಕೆಲವು ಸಂದರ್ಭಗಳಲ್ಲಿ ಹಿನ್ನಡೆಯೂ ಕೂಡ ಪ್ರಯೋಜನಕಾರಿಯೇ ಆಗಿದೆ. ಯಾರದೋ ತಪ್ಪಿನಿಂದ ನೀವು ಕಷ್ಟವನ್ನು ಪಡಬೇಕಾದೀತು. ಸರ್ಕಾರಿ ಕೆಲಸವು ವಿಳಂಬವಾಗುವ ಸಾಧ್ಯತೆ ಇದೆ. ಸಿಕ್ಕ ಯಶಸ್ಸನ್ನು ಲಾಭವಾಗಿಸಿಕೊಳ್ಳುವಿರಿ. ಸಂಗಾತಿಯ ಪ್ರೀತಿಯು ನಿಮಗೆ ಅಚ್ಚರಿಯನ್ನು ಉಂಟುಮಾಡೀತು. ಮೋಹದಿಂದ ಸರಿ ತಪ್ಪುಗಳ ವಿವೇಚನೆ ದೂರಾಗುವುದು. ಯಾರಾದರೂ ನಿಮ್ಮನ್ನು ತೆಗಳಿದರೆ ಅದನ್ನು ನೀವು ಸಕಾರಾತ್ಮಕವಾಗಿ ಸ್ವೀಕರಿಸಿ. ಬಂಧುಗಳ ಚರಾಸ್ತಿಯು ಸಿಗಬಹುದು. ಸಂಗಾತಿಯ ಮಾತನ್ನು ನಿರ್ಲಕ್ಷಿಸಿದ ಕಾರಣ ಸಿಟ್ಟಾಗಬಹುದು. ಆದಾಯದ ಮೂಲಗಳು ಹೆಚ್ಚಾಗುವುದು.‌

ಕನ್ಯಾ ರಾಶಿ: ಇಂದಿನ ನಿಮ್ಮ ಕೋಪವನ್ನು ಶಾಂತ ಮಾಡಲು ಸಂಗಾತಿಯು ಶ್ರಮಪಡಬಹುದು. ನಿಮ್ಮ ಮನಸ್ಸು ಅತಿ ಚಾಂಚಲ್ಯದಿಂದ ಇರಲಿದ್ದು, ಕೆಲಸವು ಹಾಳಾಗಬಹುದು. ಬಹಳ ಗೊಂದಲಗಳನ್ನು ಇಟ್ಟುಕೊಂಡಿರುವಿರಿ. ಮಾತನಿಂದ ಆಗದೇ ಇರುವ ಕೆಲಸವು ಮೌನದಿಂದ ಆಗಬಹುದು, ಪ್ರಯತ್ನಿಸಿ‌. ಇನ್ನೊಬ್ಬರ ಕುರಿತು ಕುತೂಹಲವನ್ನು ಇಟ್ಟುಕೊಂಡಿರುತ್ತೀರಿ. ಹಠವನ್ನು ನೀವು ಕಡಿಮೆ ಮಾಡದೇ ನಿಮ್ಮ ಯಾವ ಕಾರ್ಯಗಳು ಸರಿಯಾಗಿ ಮುಂದುವರಿಯದು. ಮಕ್ಕಳು ನಿಮ್ಮ ಜೊತೆ ಕಳೆಯಲು ಇಚ್ಛಿಸುವರು. ನಿಮ್ಮಿಂದ‌ ಕುಟುಂಬಕ್ಕೆ ಯಾವುದೇ ಸಲಹೆಯು ಇಲ್ಲದಂತೆ ಅನ್ನಿಸಬಹುದು. ಕೋಪದಿಂದ ಶಾಂತವಾಗಲು ಹಲವಾರು ದಾರಿಗಳನ್ನು ಕಂಡುಕೊಳ್ಳುವಿರಿ. ಬಂಧುಗಳ ಜೊತೆ ಆತ್ಮೀಯ ಒಡನಾಟ ಮಾಡುವಿರಿ. ಅಚಾತುರ್ಯವನ್ನು ಗಂಭೀರವಾಗಿ ತೆಗೆದುಕೊಳ್ಳಿ. ಇನ್ನೊಬ್ಬರ ಅಹಂಕಾರಕ್ಕೆ ಸೊಪ್ಪು ಹಾಕುವುದು ಬೇಡ. ನಿರ್ಲಕ್ಷ್ಯದಿಂದ ಎಲ್ಲವೂ ಸಾಧ್ಯ. ಹೂಡಿಕೆಯ ವಿಚಾರವಾಗಿ ಚರ್ಚಿಸುವಿರಿ.

ತುಲಾ ರಾಶಿ: ಇಂದು ನಿಮ್ಮ ಸಮಾಜಮುಖೀ ಕಾರ್ಯಗಳಿಗೆ ಗೌರವ, ಪ್ರಶಂಸೆಗಳು ಸಿಗಲಿವೆ. ನೆರೆ-ಹೊರೆಯವರನ್ನು ಚೆನ್ನಾಗಿ ಇಟ್ಟುಕೊಳ್ಳಿ. ನಿಮ್ಮ ಕಾರ್ಯಕ್ಕೆ ವಿದೇಶದಿಂದ ಕರೆ ಬರಬಹುದು. ಅದರಿಂದ ನಿಮ್ಮ ಯೋಜನೆಗಳು ಸ್ವಲ್ಪ ವ್ಯತ್ಯಾಸವಾಗಬಹುದು. ಸರಿಯಾಗಿ ಸಾಗುವ ಕಾರ್ಯಕ್ಕೆ ಅಡ್ಡಗಾಲು ಹಾಕುವುದು ಸರಿಯಾಗದು. ಯಾರಿಂದಲೂ ಏನನ್ನೂ ನಿರೀಕ್ಷಿಸದೇ ಕೆಲಸ ಮಾಡುವುದು ನಿಮ್ಮ ವ್ಯಕ್ತಿತ್ವಕ್ಕೆ ಇನ್ನಷ್ಟು ಗೌರವ ಸೇರ್ಪಡೆಯಾಗಲಿದೆ. ನಿಮ್ಮ‌ ಮಾತಿಗೆ ಬೆಲೆ ಇಲ್ಲವಾದೀತು. ದೈವದ ಮೇಲೆ‌ ಅಪನಂಬಿಕೆ ಬರಬಹುದು. ನಿಮ್ಮ ತಪ್ಪನ್ನು ಎಲ್ಲರೆದು ಒಪ್ಪಿಕೊಳ್ಳಲು ಆಗದು. ಅಧಿಕ ಆಸ್ತಿಯೇ ನಿಮಗೆ ತೊಂದರೆಯನ್ನು ಉಂಟುಮಾಡಬಹುದು. ಕಲಾವಿದರ ಜೊತೆ ನಿಮ್ಮ ನಂಟು ಬೆಳೆಯಬಹುದು. ನಿದ್ರೆಯಿಲ್ಲದೇ ಚಿಂತೆ ಆರಂಭವಾಗುವುದು. ಮಾತನ್ನು ಕಡಿಮೆ ಮಾಡಿ ಕಾರ್ಯದಲ್ಲಿ ತೋರಿಸಿ. ಅನಪೇಕ್ಷಿತ ವಿಚಾರದ ಬಗ್ಗೆ ಚರ್ಚೆ ಮಾಡಿ ಕಾಲಹರಣ ಮಾಡುವಿರಿ.

ವೃಶ್ಚಿಕ ರಾಶಿ: ನೀವು ಅಂದುಕೊಂಡಿದ್ದು ಮಾತ್ರ ಸತ್ಯವಾಗಲಾರದು. ಅದಕ್ಕಿರುವ ಮುಖವನ್ನು ಗಮನಿಸಿ ತೀರ್ಮಾನಕ್ಕೆ ಬನ್ನಿ. ಸಾಲವಾಧೆ ಎದುರಾಗಲಿದ್ದು ಸಮಸ್ಯೆಯನ್ನು ಎದುರಿಸಬೇಕಾಗಬಹುದು. ನಿಮ್ಮ ಹಣವು ನಿಮಗೆ ಸಿಗದೇ ಓಡಾಟವನ್ನು ನಡೆಸುವ ಸಾಧ್ಯತೆ ಇದೆ. ಅತಿಯಾದ ಆಲೋಚನೆಯಿಂದ ಮನಸ್ಸು ಹಾಳಾಗಬಹುದು. ನಿಮ್ಮ ಯೋಚನೆಗಳನ್ನು ಯಾರಮೇಲೂ ಹೇರಬೇಡಿ. ಶಿಸ್ತನ್ನು ಕಾಪಾಡಿಕೊಂಡು ನಿಮ್ಮ ಮೌಲ್ಯವನ್ನು ಹೆಚ್ಚಿಸಿಕೊಳ್ಳಿ. ಅನಗತ್ಯ ಚಟುವಟಿಕೆಗಳಲ್ಲಿ ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ. ಸಂತಾನದ ಬಗ್ಗೆ ನಿಮಗೆ ಅತಿಯಾದ ಆಸೆಯಾಗುವುದು. ಆಪ್ತರ ವಿಯೋಗವು ನಿಮ್ಮನ್ನು ಕುಗ್ಗಿಸಬಹುದು. ಅಧಿಕಾರದ ಬಗ್ಗೆ ವ್ಯಾಮೋಹವು ಕಡಿಮೆಯಾಗುವುದು. ನೀವು ಕಷ್ಟದಲ್ಲಿ ಸುಖವನ್ನು ಕಾಣುವ ಮಾರ್ಗವನ್ನು ಹುಡುಕಿಕೊಳ್ಳುವಿರಿ. ಕಳೆದ ವಸ್ತುವನ್ನು ಯಾರದೋ ಮೂಲಕ ಪಡೆದುಕೊಳ್ಳುವಿರಿ.

ಕಾಂಪೌಂಡ್ ತೆರವು ವಿಚಾರ: ಹಾಸನ ಪೊಲೀಸ್ ಠಾಣೆಗೆ ಯಶ್ ತಾಯಿ ಭೇಟಿ
ಕಾಂಪೌಂಡ್ ತೆರವು ವಿಚಾರ: ಹಾಸನ ಪೊಲೀಸ್ ಠಾಣೆಗೆ ಯಶ್ ತಾಯಿ ಭೇಟಿ
ಕರ್ನಾಟಕ ಕರಾವಳಿ ಆಗಲಿದೆ ಟೂರಿಸಂ ಹಬ್: ಡಿಕೆಶಿ ಮಹತ್ವದ ಘೋಷಣೆ
ಕರ್ನಾಟಕ ಕರಾವಳಿ ಆಗಲಿದೆ ಟೂರಿಸಂ ಹಬ್: ಡಿಕೆಶಿ ಮಹತ್ವದ ಘೋಷಣೆ
ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್