Horoscope Today July 7, 2024: ಈ ರಾಶಿಯವರು ಮನೆಯ ಹಿರಿಯರ ವಿರುದ್ಧ ಮಾತನಾಡುವಿರಿ, ಉದ್ಯೋಗದ ಬಗ್ಗೆ ಆತಂಕ
2024 ಜುಲೈ 07 ದಿನ ಭವಿಷ್ಯ ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಭಾನುವಾರ (ಜುಲೈ 07) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ಜಾತಕವು ಸಾಮಾನ್ಯವಾಗಿ ಜ್ಯೋತಿಷ್ಯದ ಆಧಾರದ ಮೇಲೆ ಮುನ್ಸೂಚನೆ ಅಥವಾ ಭವಿಷ್ಯವನ್ನು ಸೂಚಿಸುತ್ತದೆ, ಇದು ವ್ಯಕ್ತಿಯ ಜನ್ಮ ಸಮಯ ಮತ್ತು ಸ್ಥಳಕ್ಕೆ ಸಂಬಂಧಿಸಿದಂತೆ ಗ್ರಹಗಳು ಮತ್ತು ನಕ್ಷತ್ರಗಳನ್ನು ಒಳಗೊಂಡಿರುತ್ತದೆ. ಈ ಸ್ಥಾನಗಳು ವ್ಯಕ್ತಿಯ ವ್ಯಕ್ತಿತ್ವ, ಸಂಬಂಧಗಳು ಮತ್ತು ಅವರ ಜೀವನದಲ್ಲಿನ ಘಟನೆಗಳ ಮೇಲೆ ಪ್ರಭಾವ ಬೀರಬಹುದು ಎಂದು ನಂಬಲಾಗುತ್ತದೆ. ಅನೇಕ ಜನರು ಕುತೂಹಲಕ್ಕೆ, ಮಾರ್ಗದರ್ಶನ ಅಥವಾ ತಮ್ಮ ಜೀವನದಲ್ಲಿ ಸಂಭವನೀಯ ಬೆಳವಣಿಗೆಗಳ ಬಗ್ಗೆ ತಿಳಿದುಕೊಳ್ಳಲು ತಮ್ಮ ಜಾತಕವನ್ನು ಓದುತ್ತಾರೆ. ಹಾಗಾದ್ರೆ ಜುಲೈ 07ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಪುನರ್ವಸು, ಯೋಗ: ಧ್ರುವ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 10 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 05:00ರಿಂದ 07:05ರ ವರೆಗೆ, ಯಮಘಂಡ ಕಾಲ 12:38 ರಿಂದ 02:15ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:51 ರಿಂದ 05:28ರ ವರೆಗೆ.
ಮೇಷ ರಾಶಿ: ಇಂದು ನಿಮಗೆ ಬೇರೆ ಬೇರೆ ಕಾರಣಗಳಿಂದ ಜೀವನ ಬಹಳ ಸುಂದರ ಎನಿಸುವುದು. ತೆರೆದರೆ ಬೆಳಕು, ತೆರೆಯದಿದ್ದರೆ ಕತ್ತಲು ಇರುತ್ತದೆ ಎನ್ನುವುದನ್ನು ಅರಿತುಕೊಳ್ಳಿ. ಸಂಗಾತಿಯ ಆಯ್ಕೆಯನ್ನು ನೀವೇ ಮಾಡಿ. ಪರಿಶ್ರಮವು ಎಂದಿಗಿಂತ ಅಧಿಕವಾಗಿದ್ದು, ಅದಕ್ಕೆ ಯೋಗ್ಯವಾದ ಫಲವು ಸಿಗುವುದು. ವಾಹನ ಖರೀದಿಗೆ ಓಡಾಟ ಮಾಡಬೇಕಾದೀತು. ನಿಮಗೆ ಅನೇಕ ಗೊಂದಲಗಳು ಹುಟ್ಟಿಕೊಳ್ಳಬಹುದು. ಭೂಮಿಯ ವ್ಯವಹಾರದಲ್ಲಿ ಹಿನ್ನಡೆಯಾಗಬಹುದು. ಮಕ್ಕಳ ಸಂತೋಷಕ್ಕಾಗಿ ಹಣವನ್ನು ಖಾಲಿ ಮಾಡುವಿರಿ. ಅದೃಷ್ಟವನ್ನು ನಂಬಿ ಕೆಲಸವನ್ನು ಮಾಡುವಿರಿ. ಯಾವ ಸಂತೋಷವೂ ಸುಮ್ಮನೇ ಸಿಕ್ಕದು. ಕರ್ತವ್ಯಕ್ಕೆ ನಿಮ್ಮ ಮನಸ್ಸನ್ನು ಕೊಟ್ಟುಕೊಳ್ಳುವಿರಿ. ಸಂಗಾತಿಯ ಜೊತೆ ದೂರ ಪ್ರಯಾಣ ಮಾಡುವಿರಿ. ಚುರುಕುತನದ ಅಗತ್ಯತೆ ಬಹಳ ಇದೆ. ಸುಮ್ನನಿದ್ದರೆ ಎಲ್ಲ ನಿಮ್ಮ ದಾಟಿ ಹೋಗುವರು.
ವೃಷಭ ರಾಶಿ: ನಿಮ್ಮ ದೃಢ ಸಂಕಲ್ಪವು ಯಶಸ್ಸಿನ ಗುಟ್ಟೂ ಆಗುವುದು. ಹಣವನ್ನು ಗಳಿಸುವ ಆಸೆಯು ತೀರ್ವವಾಗಿದ್ದರೂ ಸಫಲವಾಗುವುದಿಲ್ಲ. ನಿಮ್ಮ ಪ್ರಾಮಾಣಿಕ ಕೆಲಸಕ್ಕೆ ಅಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ಮಿತ್ರರೆಂದು ಬಂದವರ ವಿಚಾರದಲ್ಲಿ ಜಾಗರೂಕತೆ ಇರಲಿ. ಮಾನಸಿಕವಾಗಿ ನಿಮಗೆ ಇಂದು ಅವರು ತೊಂದರೆ ಕೊಡಬಹುದು. ಪ್ರಭಾವಿಗಳ ಸಂಪರ್ಕವು ಅನಾಯಾಸವಾಗಿ ಲಭ್ಯವಾಗುವುದು. ಕುಟುಂಬ ಆಸ್ತಿಯನ್ನು ನಯವಾಗಿ ಪಡೆಯಲು ಯತ್ನಿಸುವಿರಿ. ಬರಬೇಕಾದ ಹಣವು ಬಾರದೇ ಸಾಲವನ್ನು ಮಾಡಬೇಕಾಗಬಹುದು. ಯಾರ ಒತ್ತಾಯಕ್ಕೂ ಮಣಿಯದೇ ನಿಮ್ಮದೇ ದಾರಿಯಲ್ಲಿ ಇರುವಿರಿ. ಕುಟುಂಬ ನಿರ್ವಹಣೆಯ ವಿಚಾರದಲ್ಲಿ ದಂಪತಿಗಳ ನಡುವೆ ಭಿನ್ನಾಭಿಪ್ರಾಯ ಬರಬಹುದು. ಕಛೇರಿಗೆ ಒಲ್ಲದ ಮನಸ್ಸಿನಿಂದ ಹೋಗುವಿರಿ. ವಿನೀತಭಾವವು ನಿಮ್ಮನ್ನು ಇಷ್ಟಪಡುವಂತೆ ಮಾಡಬಹುದು. ಉದ್ಯೋಗದಲ್ಲಿ ನೀವು ಪ್ರಗತಿಯನ್ನು ಸಾಧಿಸುವಿರಿ.
ಮಿಥುನ ರಾಶಿ: ಇಂದು ಅಪರೂಪಕ್ಕೆ ಸಿಕ್ಕ ಸ್ನೇಹಿತರು ನಿಮ್ಮ ಬಳಿ ಹಣವನ್ನು ಖಾಲಿಮಾಡಿಸಬಹುದು. ದಾಂಪತ್ಯ ಜೀವನವು ಜೀವನ್ಮರಣದ ಮಧ್ಯದಲ್ಲಿ ಒದ್ದಾಗುತ್ತಿದ್ದು ಬದುಕಿಸಿಕೊಳ್ಳಿ. ಸ್ತ್ರೀಯರು ಮನೆಯಲ್ಲಿ ಆದ ಘಟನೆಯಿಂದ ತಾಳ್ಮೆಯನ್ನು ಕಳೆದುಕೊಳ್ಳಬಾರದು. ಸಾಹಸೊ ಪ್ರವೃತ್ತಿಯಿಂದ ನಿನಗೆ ಯಶಸ್ಸು ಸಿಗಬಹುದು. ನಿಮ್ಮವರ ಆರೋಗ್ಯವನ್ನು ನೀವು ನೋಡಿಕೊಳ್ಳುವಿರಿ. ಸಂಗಾತಿಯ ಬಗ್ಗೆ ನೀವೇ ಇಲ್ಲದ ಮಾತನಾಡುವಿರಿ. ಪೂರ್ವ ಆಲೋಚನೆಗಳು ದಿಕ್ಕು ತಪ್ಪಬಹುದು. ದ್ವೇಷವನ್ನು ಮುಂದುವರಿಸದೇ ಮುಕ್ತಾಯ ಮಾಡಿಕೊಳ್ಳಿ. ಬಂಧುಗಳ ಆಗಮನವು ನಿಮಗೆ ಕಿರಿಕಿರಿಯನ್ನು ತಂದೀತು. ಭೂಮಿಯ ಖರೀದಿಗೆ ಹಿರಿಯರ ಮಾರ್ಗದರ್ಶನವೂ ಇರಲಿ. ಮೋಜಿನ ಆಟಕ್ಕೆ ಬಲಿಯಾಗುವ ಸಾಧ್ಯತೆ ಇದೆ. ಕಛೇರಿಯಲ್ಲಿ ಕೆಲವರ ವರ್ತನೆಯು ಬದಲಾದಂತೆ ತೋರುವುದು. ಅರಾಮಾಗಿ ಇರೋಣವೆಂದರೂ ಒತ್ತಡವು ಅಧಿಕವಾಗಿ ಇರಲಿದೆ.
ಕಟಕ ರಾಶಿ: ಇಂದು ಅನವಶ್ಯಕ ಖರ್ಚಿನ ಕಡೆ ಗಮನವಿರದು. ಹೆಚ್ಚು ಕೋಪವನ್ನು ತೋರಿಸಲಿದ್ದೀರಿ. ಯಾರ ಒತ್ತಾಯಕ್ಕೋ ಮಣಿದು ನಿಮ್ಮ ನಿರ್ಧಾರಗಳನ್ನು ಬದಲಿಸಿಕೊಳ್ಳಬೇಡಿ. ಕಛೇರಿಯಲ್ಲಿ ಉದ್ಯೋಗದ ಕಾರಣ ನಿಮ್ಮನ್ನು ದೂರದ ಊರಿಗೆ ಕಳುಹಿಸಬಹುದು. ಆಹಾರವನ್ನು ಮಿತಿವಾಗಿ ಬಳಸಿ. ಪರಿಚಯವಿಲ್ಲದವರ ಜೊತೆ ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುವುದು ಬೇಡ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಲು ಇಚ್ಛಿಸುವಿರಿ. ನಿಮ್ಮ ಗುರಿಯನ್ನು ತಪ್ಪಿಸಲು ಬೇಕಾದ ಪಿತೂರಿಯು ನಡೆಯಬಹುದು. ಬಾಂಧವ್ಯವನ್ನು ಗಟ್ಟಿಯಾಗಿಸಲು ಇಷ್ಟಪಡುವಿರಿ. ನಿಮ್ಮ ಮಾತಿನ ವೇಗವನ್ನು ಅರ್ಥಮಾಡಿಕೊಳ್ಳಲು ಕಷ್ಟವಾದೀತು. ಕಛೇರಿಯಲ್ಲಿ ಸ್ತ್ರೀಯರಿಂದ ಸಹಕಾರವನ್ನು ಪಡೆಯುವಿರಿ. ಭಯದಲ್ಲಿ ನೀವು ಬಹಳ ಇಂದಿನ ದಿನವನ್ನು ಕಳೆಯಬೇಕಾದೀತು. ಖಾಸಗಿ ಉದ್ಯೋಗದಲ್ಲಿ ಇರುವವರಿಗೆ ಆತಂಕವಿರಲಿದೆ. ನಿಮ್ಮಿಂದ ಉಪಕಾರವನ್ನು ಕೇಳಿ ಬರಬಹುದು.
ಸಿಂಹ ರಾಶಿ: ಇಂದು ನಿಮ್ಮ ಹಿತಶತ್ರುಗಳಿಂದ ತೊಂದರೆ ಕೊಡಬಹುದು. ಹೊಸ ಉದ್ಯೋಗವನ್ನು ಆರಂಭಿಸುವುದಿದ್ದರೆ ಒಳ್ಳೆಯದು. ಹೆಚ್ಚು ಮಾತನಾಡಿ ನಿಮ್ಮನ್ನು ನೀವೇ ಸಣ್ಣವರನ್ನಾಗಿ ಮಾಡಿಕೊಳ್ಳಬೇಡಿ. ನಾನಾ ಮೂಲಗಳಿಂದ ವಿವಿಧ ಸಂಪತ್ತುಗಳು ಬರಲಿದೆ. ದಾಂಪತ್ಯದಲ್ಲಿ ವಿರಸವು ನಷ್ಟವಾಗುವುದು. ಅಧಿಕ ಆದಾಯಕ್ಕೆ ನಿಮ್ಮ ಉದ್ಯಮವನ್ನು ವಿಸ್ತರಿಸುವಿರಿ. ನಿಮ್ಮ ಕರ್ಮವೇ ನಿಮ್ಮನ್ನು ಸುತ್ತಿಕೊಳ್ಳುವುದು. ಮನಸ್ಸಿಗೆ ಶಾಂತಿಯು ಇರಲಿದ್ದು ಉದ್ವೇಗದ ಸಂದರ್ಭವನ್ನು ಆರಾಮಾಗಿ ದಾಟುವಿರಿ. ಇಂದು ಕೆಲವರ ವರ್ತನೆಯು ಬೇಸರ ತರಿಸಬಹುದು. ಇಂದು ನಿಮ್ಮಪೂರ್ವಜರ ಜ್ಞಾನವು ಸಿಗಲಿದೆ. ಸತ್ಸಂಗ ಮೂಲಕ ಸಮಯವನ್ನು ಕಳೆಯುವಿರಿ. ತಣ್ಣೀರಾದರೂ ತಣಿಸಿ ಕುಡಿಯುವದೇ ಉತ್ತಮ. ನಿಮ್ಮ ಸಮಜಾಯಿಷಿಯ ಅಗತ್ಯವಿಲ್ಲ. ಖರೀದಿಯನ್ನು ನೀವು ಬಹಳ ಉತ್ಸಾಹದಿಂದ ಮಾಡುವಿರಿ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ. ನಿಮ್ಮದಾದ ಜೀವನಕ್ರಮವು ನಿಮಗೆ ಹಿಡಿಸದೇ ಇರಬಹುದು.
ಕನ್ಯಾ ರಾಶಿ: ಸ್ನೇಹಿತರಿಂದ ಇಂದು ಮನೆ ತುಂಬಲಿದೆ. ಮನೆಯ ಹಿರಿಯರ ವಿರುದ್ಧ ಮಾತನಾಡುವಿರಿ. ಕುಟುಂಬದಲ್ಲಿ ಸಣ್ಣ ಮಟ್ಟಿನ ಕಲಹವೂ ಆದೀತು. ತಂದೆ ತಾಯಿಗಳನ್ನು ಬಹಳ ಸಂತೋಷದಿಂದ ನೋಡಿಕೊಳ್ಳುವಿರಿ. ಅವರು ಅಪೇಕ್ಷಿಸಿದ ಸ್ಥಳಕ್ಕೆ ಅವರನ್ನು ಕರೆದೊಯ್ಯುವಿರಿ. ನಿಮ್ಮ ಕೈಲಾದವರಿಗೆ ಸಹಾಯವನ್ನು ಮಾಡುವುದು ಒಳ್ಳೆಯದು. ರಾಜಕಾರಣಿಗಳು ತಮ್ಮ ಪ್ರಭಾವವನ್ನು ತೋರಿಸಬಹುದು. ವಿರೋಧಿಗಳಿಗೆ ನಿಮ್ಮ ಬಲ ಪ್ರದರ್ಶನವಾಗಲಿದೆ. ಒಂದೇ ಕಡೆಯಲ್ಲಿ ಉದ್ಯೋಗವನ್ನು ಮಾಡಲು ನೀವು ಇಚ್ಛಿಸುವುದಿಲ್ಲ. ಹೊಸ ಜನರ ಭೇಟಿಯು ನಿಮಗೆ ಹೊಸ ದಾರಿಯನ್ನು ಮಾಡಿಕೊಟ್ಟೀತು. ನಿಮ್ಮ ಮಾತು ಇತರಿಗೆ ಹಗುರವಾಗಿ ಅನ್ನಿಸುವುದು. ನಿಮ್ಮ ಗಾಯವನ್ನು ನಿಷ್ಕಾಳಜಿ ಮಾಡಿದ್ದರ ಫಲವು ಇಂದು ಗೊತ್ತಾಗುವುದು. ಖಾಸಗಿತನದ ಸಂಸ್ಥೆಯ ಮಾಲಿಕರಾಗುವ ಆಹ್ವಾನ ಬರಲಿದೆ. ಕರ್ತವ್ಯಗಳನ್ನು ದೃಢ ಮನಸ್ಸಿನಿಂದ ಮಾಡುವಿರಿ. ಒಡ ಹುಟ್ಟಿದವರ ಬಗ್ಗೆ ಅಸೂಯೆ ತೋರಿಸುವಿರಿ. ಇಂದು ನಿಮ್ಮ ಮನೋಬಲವು ದುರ್ಬಲವಾಗಬಹುದು.
ತುಲಾ ರಾಶಿ: ಇಂದು ನಿಮ್ಮೊಳಗೆ ಅತಿಯಾದ ಗೊಂದಲ ಇರುವುದು ಇತರರಿಗೂ ಗೊತ್ತಾಗುವುದು. ಕಾರ್ಯದ ನಿಮಿತ್ತ ವ್ಯರ್ಥ ಓಡಾಟವನ್ನು ಮಾಡುವಿರಿ. ನಿಮ್ಮ ಬಗ್ಗೆ ಸದ್ಭಾವನೆ ಇರುವವರು ನಿಮಗೆ ಶ್ರೇಯಸ್ಸನ್ನು ಹರಸುವರು. ಹಣಕಾಸಿನ ವಿಚಾರಕ್ಕೆ ಸಲ್ಲದ ಅಪವಾದ ಬಂದೀತು. ನಿಮ್ಮ ಸಮಸ್ಯೆಗಳನ್ನು ಆಪ್ತರ ಜೊತೆ ಹಂಚಿಕೊಳ್ಳುವುದು ಉತ್ತಮ. ಇಂದು ಕುಟುಂಬದ ಮಂಗಲ ಕಾರ್ಯದಲ್ಲಿ ಭಾಗಿಯಾಗುವಿರಿ. ಇಷ್ಟವಿಲ್ಲದಿದ್ದರೂ ಸಂಗಾತಿಯ ಮಾತನ್ನು ಅನುಸರಿಸಿ. ಮಕ್ಕಳನ್ನು ವಿದ್ಯಾಭಾಸಕ್ಕೆ ನೀವು ಪ್ರೇರೇಪಿಸುವಿರಿ. ಹಳೆಯ ವಸ್ತುಗಳನ್ನು ಕೊಟ್ಟು ಖಾಲಿ ಮಾಡುವಿರಿ. ನಿಮ್ಮ ಲಾಭಾಂಶವನ್ನು ದಾನ ಮಾಡುವಿರಿ. ನಿಮ್ಮ ಒಳಗುಟ್ಟನ್ನು ಬಿಟ್ಟುಕೊಡಬೇಡಿ. ನಿಮ್ಮನ್ನು ಹಗುರಾಗಿ ಕಾಣಬಹುದು. ನಿಮ್ಮ ಸಣ್ಣ ವಿಷಯಗಳೂ ಬೇಕಾದಷ್ಟು ಪ್ರಯೋಜನಕಾರಿಯಾಗಲಿವೆ. ನಿಮ್ಮ ಇಂದಿನ ಸ್ಥಿತಿಯು ಅಭಿವೃದ್ದಿಗೆ ಹಲವಾರು ದಾರಿಗಳನ್ನು ಹುಡುಕುವಿರಿ. ತಪ್ಪಿದ ಯೋಚನೆಯಿಂದ ನೀವು ಸರಿಯಾಗಬೆರಕಾಗುವುದು. ನಿಮಗಿರುವ ಚಂಚಲ ಮನಸ್ಸಿನಿಂದ ನಕಾರಾತ್ಮಕ ಯೋಚನೇಗಳೇ ಕಾಣಿಸಬಹುದು.
ವೃಶ್ಚಿಕ ರಾಶಿ: ನೀವು ಆರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯರ ಸಲಹೆಗಳನ್ನು ಪಾಲಿಸುವುದು ಉತ್ತಮ. ಇಂದು ನಿಮ್ಮ ಪ್ರತಿಭೆಯ ಪ್ರದರ್ಶನವಾಗಲಿದೆ. ಸ್ನೇಹಿತರ ಜೊತೆ ಹೆಚ್ಚು ಕಾಲವನ್ನು ಕಳೆದು ನೋವನ್ನು ಹಂಚಿಕೊಳ್ಳುವರು. ವಿದ್ಯುತ್ ಉಪಕರಣಗಳ ಮಾರಾಟವನ್ನು ನೀವು ಮಾಡುತ್ತಿದ್ದರೆ ಲಾಭವನ್ನು ಪಡೆಯಬಹುದಾಗಿದೆ. ಸಾರ್ವಜನಿಕವಾಗಿ ನೀವು ಹೆಚ್ಚು ಪ್ರಭಾವ ಉಳ್ಳವರಾಗಿದ್ದು ನಿಮಗೆ ಗೌರವವೂ ಸಿಗಲಿದೆ. ಸಹೋದ್ಯೋಗಿಗಳು ನಿಮ್ಮ ಮೇಲೆ ಒತ್ತಡ ಕೊಡುವ ಪ್ರಯತ್ನ ಮಾಡಬಹುದು. ಹೊಸ ಕೆಲಸಕ್ಕೆ ಹೋಗುವ ಸಾಧ್ಯತೆ ಇದೆ. ನಿಮ್ಮಿಂದ ಆಗುವ ಕೆಲಸಕ್ಕೆ ಹೆಚ್ಚು ಒತ್ತು ಕೊಡಿ. ತೊಂದರೆಗೆ ಸಿಕ್ಕಿಕೊಳ್ಳಲು ನೀವೇ ಕಾರಣ. ಇದೇ ನಿಮಗೆ ಮುಳುವಾಗಬಹುದು. ಇನ್ನೊಬ್ಬರಿಗೆ ನಿಮ್ಮನ್ನು ಹೋಲಿಸಿಕೊಂಡು ಬೇಸರಿಸುವಿರಿ. ಕುಟುಂಬದ ಬಗ್ಗೆ ನಿಮಗೆ ಅಭಿಮಾನದ ಕೊರತೆ ಕಾಣುವುದು. ಸಾಲಗಾರರಿಂದ ಹಿಂಸೆ ಹೆಚ್ಚಾಗುವುದು. ನಿಮಗೆ ಸಿಕ್ಕ ಪ್ರಶಂಸೆಯಿಂದ ಸಹೋದ್ಯೋಗಿಗಳು ತೊಂದರೆಯನ್ನು ಕೊಡಬಹುದು.
ಧನು ರಾಶಿ: ನಿಮಗಾದ ವಂಚನೆಯನ್ನು ಸರಿ ಮಾಡಿಕೊಳ್ಳಲು ಕಾನೂನಿಗೆ ವಿರುದ್ಧವಾಗಿ ಹೋಗುವಿರಿ. ಇದನ್ನು ತಡೆಯುವವರ ಮೇಲೆ ಸಿಟ್ಟಾಗುವಿರಿ. ವ್ಯಾಪಾರದಲ್ಲಿ ಅಧಿಕಲಾಭವನ್ನು ಗಳಿಸಲಿದ್ದೀರಿ. ಸರ್ಕಾರಿ ಅಧಿಕಾರಿಗಳು ಸಂಕಷ್ಟದಲ್ಲಿ ಸಿಲುಕಿಕೊಳ್ಳುವರು. ಇಂದು ಪರರ ವಿಚಾರದಲ್ಲಿ ಹೆಚ್ಚು ಮನಸ್ಸು ಇರಲಿದೆ. ನಿಮ್ಮ ಸುಳ್ಳು ಇತರರಿಗೆ ಗೊತ್ತಾಗಲಿದೆ. ಸಮಯಾಭಾವದಿಂದ ನೀವು ಒದ್ದಾಡುವ ಸಾಧ್ಯತೆ ಇದೆ. ಯಾವುದನ್ನೂ ಇಂದು ನಿಮ್ಮಿಂದ ಮುಚ್ಚಿಡಲಾಗದು. ಸಂಗಾತಿಯ ಮುನಿಸನ್ನು ನೀವು ಸಮಾಧಾನ ಮಾಡುವಿರಿ. ಮಾತಿನ ಮೇಲೆ ಯಾರನ್ನೂ ಅಳೆಯಬೇಡಿ. ಜೀವನ ನಿರ್ವಹಣೆಗೆ ಮತ್ತೊಂದು ವೃತ್ತಿಯನ್ನು ಆಶ್ರಯಿಸುವ ಸಂಭವವೂ ಇದೆ. ನಿಮ್ಮನ್ನು ನೀವು ಹೊಗಳಿಕೊಳ್ಳುವಿರಿ. ಆಪ್ತರ ಬಗ್ಗೆ ಇರುವ ನಕಾರತ್ಮಕ ಭಾವವನ್ನು ನೀವು ಅವರಿಗೆ ಹೇಳುವಿರಿ. ಭೂಮಿಯ ಉತ್ಪನ್ನದಿಂದ ಲಾಭವು ಸಿಗುವುದು. ಆತುರದಲ್ಲಿ ಯಾವ ನಿರ್ಧಾರವನ್ನೂ ಮಾಡದೇ ಯೋಚಿಸಿ ಮುಂದುವರಿಯಬೇಕಾಗುವುದು.
ಮಕರ ರಾಶಿ: ಇಂದು ನೀವು ಮಾಡುವ ಪ್ರಯಾಣದಿಂದ ಸುಖವಿರದು. ಹತಾಶೆಯಿಂದ ಹೊರಬಂದು ಒಳ್ಳೆಯ ಕಾರ್ಯದವನ್ನು ಮಾಡುವತ್ತ ಗಮನಹರಿಸಿ. ನಕಾರಾತ್ಮಕ ಭಾವನೆಗಳಿಗೆ ದಾರಿ ಮಾಡಿ ಕೊಡಬೇಡಿ. ಚಂಚಲಸ್ವಭಾವವನ್ನು ನಿಯಂತ್ರಿಸಲು ಕಷ್ಟವಾದೀತು. ಅಲಂಕಾರಿಕಕ್ಕೆ ಹೆಚ್ಚು ಒತ್ತನ್ನು ನೀಡುವಿರಿ. ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಮನಸ್ಸು ಮಾಡುವರು. ತಾಯಿಯ ಸಂಪತ್ತನ್ನು ಪಡೆಯುವ ಸಾಧ್ಯತೆ ಇದೆ. ನಿಮ್ಮ ಕಾರ್ಯಗಳಿಗೆ ಪ್ರಶಂಸೆಯು ಸಿಗಬಹುದು. ನಿಮಗೆ ಮಾರ್ಗದರ್ಶನದ ಅಗತ್ಯವು ಹೆಚ್ಚಿದೆ. ಸರಳವಾಗಿ ಜೀವನವನ್ನು ನಡೆಸಲು ಇಂದು ಇಷ್ಟಪಡುವಿರಿ. ನಿವೃತ್ತಿಯ ಅಂಚಿನಲ್ಲಿದ್ದು ನಡತೆಯನ್ನು ಸರಿಯಾಗಿ ಇಟ್ಟುಕೊಳ್ಳಿ. ಮನೆಮಂದಿಯವರ ಜೊತೆ ಸಿಟ್ಟಗೊಂಡರೆ ನಿಮಗೇ ತೊಂದರೆಯಾದೀತು. ನಿಮ್ಮ ಇಂದಿನ ಕಾರ್ಯದಿಂದ ಕಛೇರಿಯಲ್ಲಿ ನಿರೀಕ್ಷೆ ಮೀರಿ ಪ್ರಶಂಸೆ ಸಿಗುವುದು.
ಕುಂಭ ರಾಶಿ: ಇಂದು ನಿಮ್ಮ ಯೋಜನೆಗೆ ಇಂದು ಎಲ್ಲವೂ ವಿರುದ್ಧವಾಗಬಹುದು. ಯಾರ ಮೇಲೂ ದ್ವೇಷವನ್ನು ಸಾಧಿಸುವುದು ಬೇಡ. ಮನಸ್ಸು ಕೆಡುತ್ತದೆಯಷ್ಟೇ. ಇನ್ನೊಬ್ಬರು ಆಡುವ ಮಾತುಗಳು ಅಸತ್ಯವೆನಿಸುವುದು. ಕಾರ್ಯದಲ್ಲಿ ವಿಳಂಬಗತಿ ಇರುವುದು. ನಂಬಿಕೆಯನ್ನು ಉಳಿಸಿಕೊಳ್ಳಲು ಬೇಕಾದ ಪ್ರಯತ್ನ ಮಾಡುವಿರಿ. ಯಶಸ್ಸಿಗೆ ಅಡ್ಡದಾರಿಯನ್ನು ಹುಡುಕಬೇಡಿ. ಸಂಬಂಧಗಳಲ್ಲಿ ಹದವು ತಪ್ಪಬಹುದು. ಸಂಗಾತಿಯ ಸ್ವಭಾವವನ್ನು ಅರ್ಥಮಾಡಿಕೊಳ್ಳಲು ಬಯಸುವಿರಿ. ಆಪ್ತವಲಯನ್ನು ಕಟ್ಟಿಕೊಳ್ಳುವುದು ಸುಲಭದ್ದಲ್ಲ. ಹೊಸ ವಿಷಯಗಳತ್ತ ಉತ್ಸಾಹವೇ ಇರಲಿದ್ದು, ಇದು ತಾತ್ಕಾಲಿಕ ಅಷ್ಟೇ. ನೀವು ಖರೀದಿಸುವ ಭೂಮಿಯ ದಾಖಲೆಯನ್ನು ಸಮಾಧಾನಚಿತ್ತದಿಂದ ಕೂಲಂಕಷವಾಗಿ ಪರಿಶೀಲಿಸಿ. ದಾಂಪತ್ಯದಲ್ಲಿನ ವಿರಸದಿಂದ ಮಾನಸಿಕ ಆರೋಗ್ಯವನ್ನು ಕೆಡಿಸುವುದು.
ಮೀನ ರಾಶಿ: ನಿಮ್ಮ ಜೀವನಕ್ಕೆ ಇಂದು ಯಾರಾದರೂ ಆಸರೆ ಬೇಕೆನಿಸಬಹುದು. ನಿಮ್ಮ ಬುದ್ಧಿ, ಮನಸ್ಸುಗಳಿಗೆ ಕೆಲಸವನ್ನು ಕೊಡಿ. ಸಂಗಾತಿಯ ಜೊತೆ ವಿವಾದವಾಗುವುದು. ಯಾವುದೇ ವಿವಾದವನ್ನು ಎಳೆದುಕೊಳ್ಳಬೇಡಿ. ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಮುಂದೆ ಸಾಗಿರಿ. ಇಷ್ಟಪಟ್ಟವರ ಜೊತೆ ಸಮಯವನ್ನು ಕಳೆಯಬಯಸುವಿರಿ. ಮಕ್ಕಳ ವಿಚಾರದಲ್ಲಿ ನೀವು ಅಸ್ವಂತ್ರರು. ನಿಮ್ಮ ಮಾತು ಇತರರಿಗೆ ಇಷ್ಟವಾಗದೇ ಇದ್ದೀತು. ಒಳ್ಳೆಯದರ ನಿರೀಕ್ಷೆಯಲ್ಲಿ ನೀವು ಇದ್ದು, ದಿನಾಂತ್ಯದಲ್ಲಿ ಸಿಗುವ ಸಾಧ್ಯತೆ ಇದೆ. ಧಾರ್ಮಿಕ ಆಚರಣೆಗಳನ್ನು ಶ್ರದ್ಧೆಯಿಂದ ಮಾಡಲು ಇಷ್ಟಪಡುವಿರಿ. ಇಂದಿನ ಕಾರ್ಯವನ್ನು ಮುಂದೂಡುವುದು ಬೇಡ. ನಿಮ್ಮ ಗುಣಗಳನ್ನು ಇತರರು ಆಡಿಕೊಳ್ಳಬಹುದು. ಪೋಷಕರನ್ನು ಕಡೆಗಣಿಸಿದ್ದು ನಿಮಗೆ ಪಾಪಪ್ರಜ್ಞೆ ಕಾಡಬಹುದು.
-ಲೋಹಿತ ಹೆಬ್ಬಾರ್ – 8762924271 (what’s app only)