Daily Devotional: ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ

Updated on: Dec 23, 2025 | 7:06 AM

ಕಲಿಯುಗಕ್ಕೆ ಶ್ರೀ ವೆಂಕಟೇಶ್ವರನೇ ಪ್ರಮುಖ ದೈವ. ತಿರುಮಲದಲ್ಲಿ ನೆಲೆಸಿರುವ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಮುನ್ನ ಭೂವರಾಹ ಸ್ವಾಮಿಯ ದರ್ಶನ ಮಾಡುವುದು ಕಡ್ಡಾಯವಾಗಿದೆ. ಇದರ ಹಿಂದೆ ಒಂದು ದೈವಿಕ ಒಪ್ಪಂದ ಮತ್ತು ಪೌರಾಣಿಕ ಹಿನ್ನಲೆಯಿದೆ. ವೆಂಕಟಾಚಲ ಮಹಾತ್ಮೆ ಸೇರಿದಂತೆ ನಮ್ಮ ಶಾಸ್ತ್ರಗಳಲ್ಲಿ ಈ ಕುರಿತು ವರ್ಣನೆ ಇದೆ.

ಬೆಂಗಳೂರು, ಡಿಸೆಂಬರ್ 23: ಕಲಿಯುಗಕ್ಕೆ ಶ್ರೀ ವೆಂಕಟೇಶ್ವರನೇ ಪ್ರಮುಖ ದೈವ. ತಿರುಮಲದಲ್ಲಿ ನೆಲೆಸಿರುವ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಮುನ್ನ ಭೂವರಾಹ ಸ್ವಾಮಿಯ ದರ್ಶನ ಮಾಡುವುದು ಕಡ್ಡಾಯವಾಗಿದೆ. ಇದರ ಹಿಂದೆ ಒಂದು ದೈವಿಕ ಒಪ್ಪಂದ ಮತ್ತು ಪೌರಾಣಿಕ ಹಿನ್ನಲೆಯಿದೆ. ವೆಂಕಟಾಚಲ ಮಹಾತ್ಮೆ ಸೇರಿದಂತೆ ನಮ್ಮ ಶಾಸ್ತ್ರಗಳಲ್ಲಿ ಈ ಕುರಿತು ವರ್ಣನೆ ಇದೆ.

ಭಗವಾನ್ ವೆಂಕಟೇಶ್ವರ ಸ್ವಾಮಿ ಭೂಮಿಗೆ ಬರುವ ಮುನ್ನ, ತಿರುಮಲದ ಪ್ರದೇಶವು ಆದಿ ವರಾಹ ಕ್ಷೇತ್ರವಾಗಿತ್ತು. ದೈತ್ಯ ಹಿರಣ್ಯಾಕ್ಷಸನನ್ನು ಸಂಹರಿಸಿದ ನಂತರ ಆದಿ ವರಾಹ ಸ್ವಾಮಿ ಅಲ್ಲಿ ವಾಸವಾಗಿದ್ದರು. ವೆಂಕಟೇಶ್ವರ ಸ್ವಾಮಿ ಭೂಮಿಗೆ ಬಂದಾಗ ವಾಸಿಸಲು ಸ್ಥಳಾವಕಾಶವಿಲ್ಲದ ಕಾರಣ, ಭೂಮಿಯ ಮೂಲ ಮಾಲೀಕನಾದ ಭೂವರಾಹ ಸ್ವಾಮಿಯ ಬಳಿ ಜಾಗ ಕೇಳುತ್ತಾರೆ. ಆಗ ಭೂವರಾಹ ಸ್ವಾಮಿ ಒಂದು ಷರತ್ತು ವಿಧಿಸುತ್ತಾರೆ. ವೆಂಕಟೇಶ್ವರ ಸ್ವಾಮಿಯನ್ನು ದರ್ಶಿಸುವ ಭಕ್ತರು ಮೊದಲು ಭೂವರಾಹ ಸ್ವಾಮಿಯನ್ನು ದರ್ಶಿಸಬೇಕು. ಆಗ ಮಾತ್ರ ವೆಂಕಟೇಶ್ವರನ ದರ್ಶನದ ಪೂರ್ಣ ಫಲ ಲಭಿಸುತ್ತದೆ ಎಂಬುದು ಆ ಒಪ್ಪಂದ ಎಂದು ಗುರೂಜಿ ಹೇಳಿದ್ದಾರೆ.

Published on: Dec 23, 2025 07:06 AM