AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 24ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 24ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ನಿಮ್ಮ ಅಂದಿನ ಕಾರ್ಯಗಳಿಗೆ ಸೂಕ್ತ ಮಾರ್ಗದರ್ಶನ ಪಡೆಯಲು ಈ ಭವಿಷ್ಯವನ್ನು ಓದಿ, ಉತ್ತಮ ದಿನವನ್ನಾಗಿ ಮಾಡಿಕೊಳ್ಳಿ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 24ರ ದಿನಭವಿಷ್ಯ
ದಿನ ಭವಿಷ್ಯ
ಸ್ವಾತಿ ಎನ್​ಕೆ
| Edited By: |

Updated on: Dec 24, 2025 | 12:55 AM

Share

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಈ ದಿನ ಒಂದಲ್ಲ ಒಂದು ಕಾರ್ಯದಲ್ಲಿ ನಿರತರಾಗಿ ಇರುತ್ತೀರಿ ಹಾಗೂ ಅವುಗಳು ಫಲದಾಯಕವಾಗಿಯೂ ಇರುತ್ತವೆ. ಏನಾದರೊಂದು ಕಾರಣಕ್ಕೆ ಬಾಕಿ ಉಳಿದು ಹೋದ ಕೆಲಸಗಳನ್ನು ಮುಗಿಸಲು ಅವಕಾಶ ಸಿಗುತ್ತದೆ. ನೀವು ಈಗಾಗಲೇ ಸಾಲ ನೀಡಿದ್ದಲ್ಲಿ ಅದರ ಹಣ ವಸೂಲಿ ಮಾಡುವುದಕ್ಕೆ ಅಥವಾ ಮುಖ್ಯವಾದ ವ್ಯವಹಾರ ಒಪ್ಪಂದ ಪೂರ್ಣ ಮಾಡಿಕೊಳ್ಳುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ನಿಮ್ಮ ಸಾಮರ್ಥ್ಯ ಗುರುತಿಸಲಾಗುತ್ತದೆ. ಹೆಚ್ಚಿನ ಜವಾಬ್ದಾರಿಗಳನ್ನು ಸಹ ವಹಿಸಬಹುದು. ಆದರೆ ನಿಮಗೆ ಈ ದಿನದ ಅತಿ ಮುಖ್ಯವಾದ ಎಚ್ಚರಿಕೆ ಏನೆಂದರೆ, ಯಾವುದೇ ವಿಚಾರದಲ್ಲಿಯೂ ಕೋಪ ಹಾಗೂ ಆತುರ ನಿಯಂತ್ರಣದಲ್ಲಿರಲಿ. ಕುಟುಂಬದ ಸದಸ್ಯರಿಂದ ನಿಮ್ಮ ನಿರ್ಧಾರಗಳಿಗೆ ಬೆಂಬಲ ಸಿಗುತ್ತದೆ. ರಕ್ತದೊತ್ತಡ ಅಥವಾ ಉರಿಮೂತ್ರದ ಸಮಸ್ಯೆ ಕಂಡುಬರಬಹುದು. ನೀವೇನಾದರೂ ಶಾಂತ ಮನಸ್ಥಿತಿಯಲ್ಲಿ ನಡೆದುಕೊಂಡರೆ ದಿನ ಸಂಪೂರ್ಣ ನಿಮ್ಮ ಪರವಾಗಿರುತ್ತದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಕುಟುಂಬದ ಕಡೆಯಿಂದಲೂ ಉದ್ಯೋಗ ಸ್ಥಳದಲ್ಲಿಯೂ ಈ ದಿನ ಜವಾಬ್ದಾರಿಗಳ ಒತ್ತಡ ಹೆಚ್ಚಾಗುತ್ತದೆ. ಕೆಲಸದ ಕಾರಣದಿಂದ ಬೇಸರ ಆಗಬಹುದು. ಹಣಕಾಸಿನಲ್ಲಿ ಸಾಲ, ಕಂತು, ತೆರಿಗೆ ಪಾವತಿ ವಿಚಾರಗಳಿಗೆ ವಿಶೇಷವಾದ ಗಮನ ಕೊಡಿ. ವ್ಯಾಪಾರ- ವ್ಯವಹಾರದಲ್ಲಿ ಪ್ರಗತಿ ನಿಧಾನವಾಗಿರುತ್ತದೆ. ಕುಟುಂಬದ ಬೆಂಬಲ ಇದ್ದರೂ ನಿಮ್ಮ ಆಪ್ತರಿಗೆ ಅಂತ ಸಮಯ ಕೊಡಲು ಸಾಧ್ಯವಾಗದೇ ಅಸಮಾಧಾನಕ್ಕೆ ಕಾರಣ ಆಗಬಹುದು. ಸಂಧಿ ನೋವು ಅಥವಾ ಭುಜದ ನೋವು ಕಾಡಬಹುದು. ಶಿಸ್ತು ಮತ್ತು ಸಮಯಪಾಲನೆ ಇಟ್ಟುಕೊಂಡರೆ ದಿನ ನಿಮ್ಮ ಪಾಲಿಗೆ ಕೆಲವು ಅವಕಾಶಗಳು ಹುಡುಕಿಕೊಂಡು ಬರಲಿವೆ. ನಾನು ಮಾಡಿದ್ದೇ ಸರಿ ಎಂದು ಯಾವುದೇ ವಾದ ಮಾಡುವ ಮುನ್ನ ಅದಕ್ಕೆ ಸಂಬಂಧಿಸಿದಂತೆ ಕೆಲವು ಮುಖ್ಯ ವಿಚಾರಗಳನ್ನು ಪರೀಕ್ಷಿಸಿಕೊಳ್ಳುವುದು ಒಳ್ಳೆಯದು. ಸರ್ಕಾರಿ ಕೆಲಸ- ಕಾರ್ಯಗಳಲ್ಲಿ ಅತಿಯಾದ ಒತ್ತಡ ಹಾಕಬೇಡಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಹೆಚ್ಚು ಮಾತನಾಡದೆ, ಇತರರ ಜತೆಗೆ ಸೇರಿಕೊಳ್ಳದೆ ಏಕಾಂಗಿಯಾಗಿ ಇರುವುದಕ್ಕೆ ಬಯಸುತ್ತೀರಿ. ಈ ದಿನ ಮನಸ್ಸು ಹೆಚ್ಚು ಅಂತರ್ಮುಖಿ ಆಗಿರುತ್ತದೆ. ಒಂಟಿಯಾಗಿಯೇ ಕೆಲಸ- ಕಾರ್ಯಗಳನ್ನು ಮಾಡುವ ಆಸಕ್ತಿ ಹೆಚ್ಚಾಗುತ್ತದೆ. ಸಂಬಂಧಕ್ಕೆ ಸಂಬಂಧಿಸಿದಂತೆ ದೊಡ್ಡ ನಿರ್ಧಾರಗಳನ್ನು ಇವತ್ತಿನ ಮಟ್ಟಿಗೆ ಮುಂದೂಡುವುದು ಒಳಿತು. ಹಣಕಾಸಿನ ವಿಚಾರದಲ್ಲಿ ಷೇರು- ಮ್ಯೂಚುವಲ್ ಫಂಡ್ ಈ ರೀತಿ ಹೊಸ ಹೂಡಿಕೆ ಬೇಡ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಏಕಾಗ್ರತೆ ಕಡಿಮೆ ಆಗಬಹುದು. ದೇಹದಲ್ಲಿ ನೀರಿನ ಅಂಶದ ಕೊರತೆ ಅಥವಾ ಮೂತ್ರಕೋಶಕ್ಕೆ ಸಂಬಂಧಿಸಿದ ಕೆಲವು ತೊಂದರೆಗಳನ್ನು ಅನುಭವಿಸುತ್ತೀರಿ. ಹಣದ ವಿಚಾರವಾಗಿ ಯಾರಿಗೆ ಮಾತು ನೀಡುವ ಮುಂಚಿತವಾಗಿ ಅದು ಸಾಧ್ಯವಾ- ಇಲ್ಲವಾ ಎಂಬ ಎಚ್ಚರಿಕೆ ಅಗತ್ಯ. ಅನಗತ್ಯ ಚರ್ಚೆಗಳಿಂದ ದೂರ ಉಳಿದರೆ ಮನಸ್ಸಿಗೆ ಶಾಂತಿ ಸಿಗುತ್ತದೆ. ದಿನವನ್ನು ಹೆಚ್ಚು ಧಾವಂತ ಇಲ್ಲದೆ ಕಳೆದರೆ ಒತ್ತಡ ಕಡಿಮೆಯಾಗುತ್ತದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಈ ದಿನ ಮನೆ ಮತ್ತು ಕುಟುಂಬಕ್ಕೆ ಸಂಬಂಧಿಸಿದ ವಿಚಾರಗಳು ಮುಖ್ಯ ಸ್ಥಾನ ಪಡೆದುಕೊಳ್ಳುತ್ತವೆ. ಮನೆ ಖರ್ಚು, ಅಲಂಕಾರ ಅಥವಾ ದುರಸ್ತಿ ಬಗ್ಗೆ ಚರ್ಚೆ ನಡೆಯಬಹುದು. ದಿನಸಿ ಪದಾರ್ಥಗಳ ಖರೀದಿಯಲ್ಲಿ ಖರ್ಚು ಹೆಚ್ಚಾಗಲಿದೆ. ಸಾವಯವ ಉತ್ಪನ್ನಗಳ ಖರೀದಿಗಾಗಿಯೋ ಅಥವಾ ಒಣಹಣ್ಣುಗಳ ಖರೀದಿಗೋ ಹೆಚ್ಚು ಖರ್ಚು ಬರಲಿದೆ. ಇನ್ನು ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಕಾರ ಸಿಗುತ್ತದೆ. ಮುಂದಿನ ಆರು ತಿಂಗಳ ಒಳಗೆ ಬಡ್ತಿ ಸಿಗುವ ಬಗ್ಗೆ ಸೂಚನೆ ಸಿಗಲಿದೆ. ಭಾವುಕತೆಗೆ ಒಳಗಾಗಿ ಹೆಚ್ಚು ಖರ್ಚು ಮಾಡುವುದನ್ನು ತಪ್ಪಿಸಿ. ಸಂಬಂಧಗಳಲ್ಲಿ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಯುತ್ತದೆ. ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ಚರ್ಮ, ಕಣ್ಣು ಅಥವಾ ಹಾರ್ಮೋನ್ ಸಮಸ್ಯೆಗಳು ಕಾಡಬಹುದು. ದೈಹಿಕವಾದ ವಿಶ್ರಾಂತಿ ಮತ್ತು ಆಹಾರ ಸಮತೋಲನ ಅಗತ್ಯ. ಕುಟುಂಬಕ್ಕೆ ಸಮಯ ಕೊಟ್ಟರೆ ದಿನ ಸುಖಕರವಾಗುತ್ತದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಇಡೀ ದಿನ ಒಂದಲ್ಲಾ ಒಂದು ಚಟುವಟಿಕೆಯಲ್ಲಿ ಬಿಡುವಿಲ್ಲದಷ್ಟು ಕೆಲಸಗಳಲ್ಲಿ ತೊಡಗಿರುತ್ತೀರಿ. ಫೋನ್ ಕರೆಗಳು, ಸಂದೇಶಗಳು, ಭೇಟಿಗಳು ಜಾಸ್ತಿ ಆಗುತ್ತವೆ. ಉದ್ಯೋಗ ಅಥವಾ ವ್ಯವಹಾರದಲ್ಲಿ ಹೊಸ ಅವಕಾಶದ ಮಾತು ಬರಬಹುದು, ಆದರೆ ತಕ್ಷಣ ಒಪ್ಪಿಕೊಳ್ಳಬೇಡಿ. ಪ್ರಭಾವಿಗಳ ಸಂಪರ್ಕದಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಇನ್ನು ಒಂದು ಕಡೆ ಹಣ ಬರುತ್ತದೆ, ಆದರೆ ಖರ್ಚು ಸಹ ಹೆಚ್ಚಾಗುವ ಸಾಧ್ಯತೆ ಇದೆ. ಪ್ರಯಾಣ ಮಾಡುವಾಗ ಸಮಯ ಮತ್ತು ಹಣ ಎರಡಕ್ಕೂ ಲೆಕ್ಕವಿರಲಿ. ಆರೋಗ್ಯದ ದೃಷ್ಟಿಯಿಂದ ನಿದ್ರೆಗೆ ಕೊರತೆ ಅಥವಾ ತಲೆನೋವು ಕಾಡಬಹುದು. ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್ ಹೂಡಿಕೆ ಮಾಡಬೇಕು ಎಂದೇನಾದರೂ ಇದ್ದಲ್ಲಿ ಆತುರಕ್ಕಿಂತ ವಿವೇಕ ಬಳಸಿದರೆ ಲಾಭದಾಯಕವಾಗುತ್ತದೆ. ಜತೆಗೆ ಫೈನಾನ್ಷಿಯಲ್ ಅಡ್ವೈಸರ್ ಗಳ ಸಲಹೆ- ಮಾರ್ಗದರ್ಶನ ಪಡೆದುಕೊಳ್ಳಲು ಆದ್ಯತೆಯನ್ನು ನೀಡಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಪ್ರಯಾಣದಲ್ಲಿ, ಉದ್ಯೋಗಕ್ಕೆ ಸಂಬಂಧಿಸಿದ ವಿಚಾರದಲ್ಲಿ ಏಕಾಏಕಿ ಸಿಟ್ಟು ಹೊರ ಹಾಕುವುದಕ್ಕೆ ಹೋಗಬೇಡಿ. ಈ ದಿನ ತಾಳ್ಮೆ ಬಹಳ ಅಗತ್ಯ. ಸರ್ಕಾರಿ ಕೆಲಸ, ದಾಖಲೆ ಅಥವಾ ಬ್ಯಾಂಕ್ ಸಂಬಂಧಿಸಿದ ವಿಚಾರಗಳಲ್ಲಿ ವಿಳಂಬ ಆಗಬಹುದು. ಹಣಕಾಸಿನ ವಿಷಯದಲ್ಲಿ ಸಣ್ಣ ಲಾಭದ ಸೂಚನೆ ಇದ್ದರೂ ಅದನ್ನು ಎಲ್ಲರಿಗೂ ಹೇಳಿಕೊಳ್ಳಬೇಡಿ. ನಿಮ್ಮಲ್ಲಿ ಕೆಲವರು ಚಿನ್ನ- ಬೆಳ್ಳಿ ಇತರ ಬೆಲೆ ಬಾಳುವ ಲೋಹದಲ್ಲಿ ಹೂಡಿಕೆ ಮಾಡುವುದಕ್ಕೆ ಆಲೋಚನೆ ಮಾಡಲಿದ್ದೀರಿ. ಉದ್ಯೋಗ ಬದಲಾವಣೆಗೆ ಪ್ರಯತ್ನ ಮಾಡುತ್ತಾ ಇದ್ದಲ್ಲಿ ಕೆಲಸ ನಿಧಾನವಾಗಿ ಸಾಗುತ್ತದೆ, ಆದರೆ ನಿಮ್ಮ ಕಡೆಯಿಂದ ತಪ್ಪು ಕಡಿಮೆ ಇರುತ್ತದೆ. ಬೆನ್ನು ಅಥವಾ ಕುತ್ತಿಗೆ ನೋವು ಕಾಡಬಹುದು, ಹೆಚ್ಚೆಚ್ಚು ವಾಹನ ಚಾಲನೆಯನ್ನು ತಪ್ಪಿಸಿ. ಕುಟುಂಬದವರ ಜೊತೆ ಸಮಯ ಕಳೆಯುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಕ್ರೆಡಿಟ್ ಕಾರ್ಡ್ ಸಾಲ ಮಾಡದಂತೆ ಜಾಗ್ರತೆ ವಹಿಸಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ಈ ದಿನ ಖರ್ಚಿನ ವಿಚಾರವೇ ಹೆಚ್ಚು ಯೋಚನೆಗೆ ಕಾರಣ ಆಗುತ್ತದೆ. ಕೆಲವು ಅನಿವಾರ್ಯ ವೆಚ್ಚಗಳನ್ನು ತಪ್ಪಿಸಲು ಸಾಧ್ಯವೇ ಆಗುವುದಿಲ್ಲ. ಉದ್ಯೋಗ ಅಥವಾ ವ್ಯವಹಾರದಲ್ಲಿ ನಿಮ್ಮ ಸಲಹೆಗೆ ಮೌಲ್ಯ ಸಿಗುತ್ತದೆ, ಆದರೆ ತಕ್ಷಣ ಫಲವನ್ನು ನಿರೀಕ್ಷಿಸಬೇಡಿ. ಹಳೆಯ ಸಂಪರ್ಕಗಳು ನಿಮಗೆ ಸಹಾಯ ಮಾಡಬಹುದು. ಈ ಹಿಂದೆ ನಿಮ್ಮ ಜೊತೆಗೆ ಕೆಲಸ ಮಾಡಿದ್ದಂಥ ವ್ಯಕ್ತಿಗಳೇ ಕೆಲವು ಆಕರ್ಷಕ ಆಫರ್ ಗಳನ್ನು ತರಲಿದ್ದಾರೆ. ನಿಮ್ಮ ಸ್ನೇಹಿತರು- ಸಂಬಂಧಿಕರ ಕುಟುಂಬದಲ್ಲಿನ ವಿಚಾರಗಳಲ್ಲಿ ಆಗಿರುವ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ ಮಧ್ಯಸ್ಥಿಕೆ ವಹಿಸಬೇಕಾದ ಸಂದರ್ಭ ಬರುತ್ತದೆ. ಆರೋಗ್ಯದ ದೃಷ್ಟಿಯಿಂದ ನಿಮ್ಮ ಆತ್ಮವಿಶ್ವಾಸ ಕಡಿಮೆ ಆಗುವಂಥ ಬೆಳವಣಿಗೆ ಆಗಬಹುದು. ಹೊಟ್ಟೆ ಅಥವಾ ತೂಕಕ್ಕೆ ಸಂಬಂಧಿಸಿದ ತೊಂದರೆ ಕಾಣಿಸಬಹುದು. ಹಣವನ್ನು ಹಿಡಿತದಲ್ಲಿ ಖರ್ಚು ಮಾಡಿದಲ್ಲಿ ಈ ದಿನ ನಿಮ್ಮ ನಿಯಂತ್ರಣದಲ್ಲಿಯೇ ಇರುತ್ತದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8);

ಈ ದಿನ ನಿಮ್ಮ ಮನಸ್ಥಿತಿ ಹೇಗಿರುತ್ತದೋ ಅದು ನೀವು ಮಾಡುವ ಕೆಲಸದ ಮೇಲೆ ಪ್ರಭಾವ ಬೀರುತ್ತದೆ. ಒಂದು ವೇಳೆ ಬೇಡ ಎನಿಸಿ, ನಿಮ್ಮ ಮನಸ್ಸು ಒಪ್ಪದ ಕೆಲಸಗಳನ್ನೂ ಮಾಡಬೇಕಾದ ಅನಿವಾರ್ಯ ಎದುರಾಗಲಿದೆ. ವ್ಯಾಪಾರ- ವ್ಯವಹಾರಕ್ಕೆ ಸಂಬಂಧಿಸಿದಂತೆ ಬರಬೇಕಾದ ಹಣಕಾಸಿನ ವಿಷಯದಲ್ಲಿ ದೊಡ್ಡ ಬದಲಾವಣೆ ನಿರೀಕ್ಷೆ ಮಾಡಬಹುದು. ಒಂದು ವೇಳೆ ಬಾಕಿ ಹಣ ವಸೂಲಿಗೆ ಪ್ರಯತ್ನವನ್ನು ಪಟ್ಟರೆ ಫಲ ಸಿಗಲಿದೆ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಲಹೆ ಹಾಗೂ ಅನುಭವದ ಮಾತುಗಳನ್ನು ಕೇಳಿಸಿಕೊಳ್ಳುವುದರಿಂದ ಉಪಯುಕ್ತವಾಗುತ್ತದೆ. ಕುಟುಂಬದಲ್ಲಿ ಹಿರಿಯರ ಸಲಹೆ ಕೇಳುವುದು ಒಳಿತು. ಸಂಬಂಧಗಳಲ್ಲಿ ಅತಿಯಾದ ಸಂಶಯ ಬೇಡ. ನಿದ್ರೆ ಸರಿಯಾಗಿ ಆಗದಿದ್ದರೆ ದಣಿವು ಹೆಚ್ಚಾಗುತ್ತದೆ. ಈ ದಿನ ಪ್ರೀತಿ- ಪ್ರೇಮದ ವಿಚಾರದಲ್ಲಿ ನಿಧಾನವಾಗಿ, ತಾಳ್ಮೆಯಿಂದ ವರ್ತಿಸಿದರೆ ನೆಮ್ಮದಿ ಇರುವುದಕ್ಕೆ ಸಾಧ್ಯವಾಗುತ್ತದೆ, ಜೊತೆಗೆ ಸಂಬಂಧಗಳಿಗೂ ಹಾನಿ ಆಗುವುದಿಲ್ಲ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಈ ದಿನ ಕೆಲಸದ ವಿಚಾರದಲ್ಲಿ ನೀವು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲೇ ಬೇಕು ಎಂಬ ಬೇಸಂದರ್ಭ ಬರುತ್ತದೆ. ಮುಂದೂಡುತ್ತಾ ಬಂದಿದ್ದ ಕೆಲವು ಜವಾಬ್ದಾರಿಗಳನ್ನು ಇಂದೇ ಮುಗಿಸಬೇಕಾಗುತ್ತದೆ. ಗಡುವಿನೊಳಗೆ ಉತ್ತರ ಹೇಳಬೇಕಾದ ಸಂಗತಿಗಳನ್ನು ಆದ್ಯತೆ ಮೇಲೆ ಮಾಡುತ್ತಾ ಬನ್ನಿ. ಇನ್ನು ವ್ಯವಹಾರದ ವಿಷಯಕ್ಕೆ ಬಂದಲ್ಲಿ ಲಾಭಕ್ಕಿಂತ ಸ್ಥಿರತೆ ಮುಖ್ಯವಾಗುತ್ತದೆ. ಹೊಸ ಸಾಲ ಅಥವಾ ಹೂಡಿಕೆ ನಿರ್ಧಾರವನ್ನು ಈ ದಿನದ ಮಟ್ಟಿಗೆ ಕೈ ಬಿಡುವುದು ಒಳಿತು. ಉದ್ಯೋಗದಲ್ಲಿ ಮೇಲಧಿಕಾರಿಗಳ ಜೊತೆ ನಿಮ್ಮ ಭವಿಷ್ಯದ ಬೆಳವಣಿಗೆ ಬಗ್ಗೆ ಮಾತುಕತೆ ನಡೆಯಬಹುದು; ಮಾತಿನಲ್ಲಿ ಸಂಯಮ ಇರಲಿ. ಕುಟುಂಬದ ಖರ್ಚು ಅಥವಾ ಆರೋಗ್ಯ ವಿಚಾರದಲ್ಲಿ ಸ್ವಲ್ಪ ಒತ್ತಡ ಬರುತ್ತದೆ. ಗಂಟಲು, ನಾಲಗೆ ಅಥವಾ ಜೀರ್ಣಕ್ರಿಯೆಗೆ ಸಂಬಂಧಿಸಿದಂತೆ ತೊಂದರೆ ಕಾಣಿಸಬಹುದು. ಆಹಾರ ಸೇವನೆಯಲ್ಲಿ ಸ್ವಚ್ಛತೆಗೆ ಹಾಗೂ ಸಮಯ ಪಾಲನೆಗೆ ಗಮನವನ್ನು ನೀಡಿ.

ಲೇಖನ- ಎನ್‌.ಕೆ.ಸ್ವಾತಿ

ದರ್ಶನ್ ಫ್ಯಾನ್ಸ್ ಎಂಥವರು ಗೊತ್ತಾ? ನೇರವಾಗಿ ಮಾತಾಡಿದ ತರುಣ್ ಸುಧೀರ್
ದರ್ಶನ್ ಫ್ಯಾನ್ಸ್ ಎಂಥವರು ಗೊತ್ತಾ? ನೇರವಾಗಿ ಮಾತಾಡಿದ ತರುಣ್ ಸುಧೀರ್
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
CM ಕುರ್ಚಿ ಕದನ:ಡಿಕೆಶಿ ಹಿಂದೆನೇ ದೆಹಲಿಗೆ ತೆರಳಿದ ಸ್ವಾಮೀಜಿ ಹೇಳಿದ್ದಿಷ್ಟು
CM ಕುರ್ಚಿ ಕದನ:ಡಿಕೆಶಿ ಹಿಂದೆನೇ ದೆಹಲಿಗೆ ತೆರಳಿದ ಸ್ವಾಮೀಜಿ ಹೇಳಿದ್ದಿಷ್ಟು