AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today 23 December: ಇಂದು ಈ ರಾಶಿಯವರಿಂದ ಉದ್ಯೋಗವನ್ನು ಕಳೆದುಕೊಳ್ಳುವ ಸ್ಥಿತಿ ಬರಲಿದೆ

ಇಂದಿನ ಶಾಲಿವಾಹನ ಶಕೆ ೧೯೪೮ರ ಮಂಗಳವಾರದ ಪಂಚಾಂಗದೊಂದಿಗೆ ಮೇಷ, ವೃಷಭ, ಮಿಥುನ ರಾಶಿಗಳ ಸಮಗ್ರ ದಿನಭವಿಷ್ಯ ಇಲ್ಲಿದೆ. ಮೇಷ ರಾಶಿಗೆ ಹಣಕಾಸಿನ ಲಾಭ, ವೃಷಭ ರಾಶಿಗೆ ಹೊಸ ಆಲೋಚನೆಗಳು, ಮಿಥುನ ರಾಶಿಗೆ ಕಚೇರಿ ವಿಳಂಬದ ಜೊತೆಗೆ ವೇತನ ಹೆಚ್ಚಳದ ಸುಳಿವು. ನಿಮ್ಮ ಜೀವನಕ್ಕೆ ಮಾರ್ಗದರ್ಶನ ನೀಡುವ ಪ್ರಮುಖ ಅಂಶಗಳು ಹಾಗೂ ಶುಭಾಶುಭ ಕಾಲಗಳನ್ನು ತಿಳಿದುಕೊಳ್ಳಿ.

Horoscope Today 23 December: ಇಂದು ಈ ರಾಶಿಯವರಿಂದ ಉದ್ಯೋಗವನ್ನು ಕಳೆದುಕೊಳ್ಳುವ ಸ್ಥಿತಿ ಬರಲಿದೆ
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Dec 23, 2025 | 1:15 AM

Share

ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಪೌಷ ಮಾಸ ಶುಕ್ಲ ಪಕ್ಷದ ತೃತೀಯಾ ತಿಥಿ ಮಂಗಳವಾರ ಆತಂಕ, ಇಬ್ಬಂದಿತನ, ಬೇಸರ, ಅಪಪ್ರಚಾರ, ವಿಶ್ವಾಸಘಾಸಿ, ಸಹಾಯ, ಹಗುರ ಮಾತು, ಧನಾಗಮನ ಇವೆಲ್ಲ ಇಂದಿನ ವಿಶೇಷ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಧನು, ಮಹಾನಕ್ಷತ್ರ : ಮೂಲಾ, ವಾರ : ಮಂಗಳ, ಪಕ್ಷ : ಶುಕ್ಲ, ತಿಥಿ : ತೃತೀಯಾ, ನಿತ್ಯನಕ್ಷತ್ರ : ಉತ್ತರಾಷಾಢ, ಯೋಗ : ವ್ಯಾಘಾತ, ಕರಣ : ಗರಜ, ಸೂರ್ಯೋದಯ – 06 – 46 am, ಸೂರ್ಯಾಸ್ತ – 06 – 01 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:12 – 16:37, ಯಮಗಂಡ ಕಾಲ 09:35 – 10:59, ಗುಳಿಕ ಕಾಲ 12:24 – 13:48

ಮೇಷ ರಾಶಿ :

ಶತ್ರಗಳು ನಿಮ್ಮ ಕರುಣೆಯಿಂದಲೇ ಶಾಂತಗೊಳ್ಳಬಹುದು. ಭಾವನೆ ಮತ್ತು ವಿವೇಕ ಸಮತೋಲನದಲ್ಲಿದ್ದರೆ ದಿನ ಸುಂದರವಾಗಿ ಸಾಗುತ್ತದೆ. ಬರಬೇಕಾದ ಹಣವನ್ನು ನೀವು ಪಡೆದುಕೊಳ್ಳುವಿರಿ. ‌ನಿಮ್ಮನ್ನು ಅಪಹಾಸ್ಯ ಮಾಡುವವರಿಗೆ ಪ್ರತ್ಯುತ್ತರ ನೀಡುವಿರಿ. ಕಾನೂನಿಗೆ ಸಂಬಂಧಿಸಿದಂತೆ ಹೆಚ್ಚಿನ ಓಡಾಟವಾಗಬಹುದು. ಬರಬೇಕಾದ ಹಣವನ್ನು ನೀವು ಬಹಳ ಶ್ರಮದಿಂದ ಪಡೆಯಬೇಕಾಗಬಹುದು. ನಿಮ್ಮ ಇಂದಿನ ಕೆಲಸಗಳು ಅಡೆತಡೆಯ ನಡೆವೆಯೂ ಮಾಡಿಕೊಳ್ಳುವಿರಿ. ಪರರ ವಸ್ತುವನ್ನು ಬಳಸಿ, ಹಿಂದಿರುಗಿಸಿ. ವಾಹನ ಖರೀದಿಗೆ ಹಣವನ್ನು ಹೊಂದಿಸುವುದು ಸವಾಲಾಗಬಹುದು. ಉದ್ಯಮದಲ್ಲಿ ಅನುಭವವೇ ನಿಮ್ಮ ಮಾರ್ಗದರ್ಶಿ. ಹಣದ ವಿಷಯದಲ್ಲಿ ಎಚ್ಚರಿಕೆ ಸೂಚನೆ. ವಿದೇಶ ಪ್ರಯಾಣ ಕನಸಿನ ಹಂತದಲ್ಲೇ ಉಳಿಯುವುದು. ಕೆಲವು ಭಾವ ಭಿತ್ತಿಯನ್ನು ಒಡೆದರೆ ಮಾರ್ಗ ಸುಲಭ. ನಿಮಗೆ ಸಂಬಂಧವಿಲ್ಲದೇ ಇರುವ ವಿಚಾರಕ್ಕೆ ಮಧ್ಯ ಪ್ರವೇಶ ಬೇಡ. ನಿಮ್ಮ ಬುದ್ಧಿಯು ನಕಾರಾತ್ಮಕ ವಿಚಾರವನ್ನೇ ಯೋಚಿಸುವುದು. ಬಂಧುಗಳ‌ ಜೊತೆ ದೂರ ಪ್ರಯಾಣ ಮಾಡುವಿರಿ.

ವೃಷಭ ರಾಶಿ :

ವಿರೋಧಿಗಳು ಅಜ್ಞಾತವಾಗಿ ಸಹಕಾರ ತೋರಬಹುದು. ತೆರೆದ ಮನಸ್ಸು ಇಂದು ನಿಮಗೆ ಉತ್ಸಾಹವನ್ನೂ ಸಂತೋಷವನ್ನೂ ಕೊಡುತ್ತದೆ. ಸತ್ಯದ ನಡುವೆ ಇರುವ ಸುಳ್ಳಿಗೆ ಸತ್ಯದಷ್ಟೇ ಬೆಲೆ. ಅದನ್ನೇ ಮುಂದುವರಿಸಿದರೆ ನಿಮಗೂ ಬೆಲೆ ಇರದು. ಸಮಯದ ಹೊಂದಾಣಿಕೆಯಿಂದ ಕಾರ್ಯವನ್ನು ಸಾಧಿಸಬಹುದು. ನಿಮ್ಮ ಒರಟಾದ ಮಾತು ಇನ್ನೊಬ್ಬರಿಗೆ ಬೇಸರವನ್ನು ಕೊಡುವುದು. ವಸ್ತುಗಳ ಖರೀದಿಗೆ ಹಣವನ್ನು ಖರ್ಚು ಮಾಡಬಹುದು. ಪರೀಕ್ಷಿಸಿ ಖರೀದಿಸಿ. ವಿರೋಧಿಗಳು ಊಹಿಸಿದಂತೆ ನಿಮ್ಮ ಆಲೋಚ‌ನೆ ಇರುವುದು. ಏಕಾಂತದಲ್ಲಿ ಇರುವುದು ನಿಮಗೆ ಇಷ್ಟವಾಗುವುದು. ಸಹೋದರಿಯ ನಡುವೆ ವಾಗ್ವಾದ ಮಾಡುವಿರಿ. ವಿಭಿನ್ನ ಆಲೋಚನೆಗಳಿಂದ ನೀವು ಇತರರ ಗಮನ ಸೆಳೆಯುವಿರಿ. ಉದ್ಯಮದಲ್ಲಿ ಹೊಸ ವಿಧಾನ ಪ್ರಯೋಗಿಸಲು ಮನಸ್ಸಾಗುವುದು. ಸ್ನೇಹದ ಮೂಲಕ ವಿದೇಶ ಸಂಪರ್ಕ ನಡೆಯುವುದು. ಒತ್ತಾಯಕ್ಕೆ ಮಣಿದು ಇಷ್ಟವಿಲ್ಲದ ಕೆಲಸವನ್ನು ಮಾಡುವಿರಿ. ಆತ್ಮಪ್ರಶಂಸೆಯಿಂದ ಸೋಲಾಗುವುದು. ನಿಮ್ಮ ಬಗ್ಗೆ ಹಿಂದಿನಿಂದ‌ ಮಾತನಾಡಿಕೊಳ್ಳುವುದು ಗೊತ್ತಾದೀತು.

ಮಿಥುನ ರಾಶಿ :

ವಿದೇಶ ಪ್ರಯಾಣದ ವಿಷಯದಲ್ಲಿ ಕಚೇರಿಯಿಂದ ವಿಳಂಬ. ಶತ್ರುಕಾಟದಲ್ಲಿ ನಿಯಮ ಮತ್ತು ಶಿಸ್ತು ಜಯ ತರುತ್ತದೆ. ತಪ್ಪಿಸಿಕೊಳ್ಳುವ ಪ್ರಯತ್ನಕ್ಕಿಂತ ಎದುರಿಸುವ ಧೈರ್ಯ ಒಳಿತು. ಶಿಸ್ತನ್ನು ಬಿಡದೇ ಪಾಲಿಸುವುದು ನಿಮಗೆ ಗೌರವವನ್ನು ತಂದು ಕೊಡುವುದು. ಅಲಂಕಾರಿಕ ವಸ್ತುಗಳ ಖರೀದಿಯಿಂದ ಲಾಭವಾಗಲಿದೆ. ಹಲವು ಪ್ರಯತ್ನದ ಬಳಿಕ ಮಾನಸಿಕ ಕಿರಿಕಿರಿಯನ್ನು ನೀವು ದೂರ ಮಾಡಿಕೊಳ್ಳುವಿರಿ. ನಿರೀಕ್ಷಿತ ಸ್ಥಾನವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ಸಹೋದ್ಯೋಗಿಗಳ ಸಹಕಾರವು ಸಿಗಬಹುದು. ನಿಮ್ಮ ವಿದ್ಯಾಭ್ಯಾಸವನ್ನು ಕಂಡು ಆಚ್ವರಿಯಾಗಬಹುದು. ಪ್ರತಿಷ್ಠೆಗೋಸ್ಕರ ಹೊಣೆಗಾರಿಕೆಯನ್ನು ಹೆಚ್ಚು ಮಾಡಿಕೊಳ್ಳುವಿರಿ. ಉದ್ಯಮದಲ್ಲೂ ಕೆಲಸದ ಒತ್ತಡ ಜಾಸ್ತಿ. ಸಾಲ ಇಂದು ಅತ್ಯವಶ್ಯಕವಾಗಬಹುದು. ಪ್ರಯೋಜನವಿಲ್ಲದ ಮಾತುಕತೆಯಲ್ಲಿ ದಿನ‌ವನ್ನು ಕಳಯುವಿರಿ.‌ ನಿಮ್ಮದೇ ವಸ್ತುವಾದರೂ ನಿಮಗೆ ಬೇಕಾದ ಸಮಯಕ್ಕೆ ಲಭ್ಯವಾಗದು. ವೇತನವು ಹೆಚ್ಚಾಗುವ ಸಾಧ್ಯತೆ ಇದೆ.

ಕರ್ಕಾಟಕ ರಾಶಿ :

ಹಣಕಾಸಿನಲ್ಲಿ ಸುಧಾರಣೆ ಸೂಚನೆ ತಳ್ಳಿಹಾಕುವಂತಿಲ್ಲ. ವಿದೇಶದ ಗಮನಕ್ಕೆ ಹಿರಿಯರ ನೆರವು ಸಾಧ್ಯ. ವಿರೋಧಿಗಳೊಂದಿಗೆ ಸಂಘರ್ಷಕ್ಕಿಂತ ಸಂಧಾನ ಸರಳ ಮತ್ತು ಲಾಭ. ಸಂದೇಹದಿಂದ ಮನಸ್ಸು ಹಾಳಾಗುತ್ತದೆ. ಹಾಳಾದ ಮನಸ್ಸಿನಿಂದ ಕೆಲಸವೂ ಹಾಳು. ಗ್ರಾಹಕರಿಗೆ ಅನುಕೂಲವಾಗುವಂತೆ ನಡೆದುಕೊಳ್ಳುವಿರಿ. ಸಾಹಿತ್ಯ ಕ್ಷೇತ್ರದಲ್ಲಿ ನಿಮ್ಮನ್ನು ಗುರುತಿಸುವರು. ನಿಮ್ಮ‌ ವರ್ತನೆಯನ್ನು ಬದಲಿಸಿಕೊಳ್ಳಬೇಕು ಎನಿಸುವುದು. ಸ್ಪರ್ಧೆಯಲ್ಲಿ ಸೋಲನ್ನು ಒಪ್ಪಿಕೊಳ್ಳಲಾರಿರಿ. ಭೂಮಿಯ ವ್ಯವಹಾರವು ಪಾಲುದಾರರ ಸಹಕಾರದಿಂದ ಸುಗಮವಾಗಿ ಸಾಗಲಿದೆ. ಆರ್ಥಿಕ ಸಮಸ್ಯೆಯನ್ನು ಹೆಚ್ಚಿಸಿಕೊಳ್ಳುವಿರಿ. ಮಕ್ಕಳ ವಿದ್ಯಾಭ್ಯಾಸಕ್ಕೆ ಹಣವನ್ನು ಹಿಂದಿಸುವುದು ಕಷ್ಟವಾದೀತು. ಹೊಸ ದಿಕ್ಕು ಮನಸ್ಸಿನಲ್ಲಿ ಮೂಡುತ್ತದೆ. ಉದ್ಯಮದಲ್ಲಿ ವಿಸ್ತರಣೆ ಅಥವಾ ಬದಲಾವಣೆಯ ಯೋಚನೆ ಆರಂಭವಾಗಲಿದೆ. ಇಂದಿನ ಮಾತು ನಿಮ್ಮ ಮುಂದಿನ ಹೆಜ್ಜೆಗೆ ದಾರಿ ತೋರಿಸುತ್ತದೆ.

ಸಿಂಹ ರಾಶಿ :

ವಿದೇಶ ಪ್ರಯಾಣದ ಯತ್ನ ನಿಮ್ಮಲ್ಲಿ ಅನೇಕ ಗೊಂದಲವನ್ನು ಸೃಷ್ಟಿ ಮಾಡುವುದು. ಶತ್ರುಕಾಟದಲ್ಲಿ ಸತ್ಯವೇ ನಿಮ್ಮ ಆಯುಧವಾಗಿರಲಿ. ಯಾವುದೇ ತೀರ್ಮಾನಕ್ಕೆ ಮುನ್ನ ಎರಡು ಬಾರಿ ಯೋಚನೆ ಅಗತ್ಯ. ಸಿಟ್ಟನ್ನು ಮಾಡಿಕೊಳ್ಳುವುದು ಸರಿ ಎನಿಸಿದರೂ ಇದರಿಂದ ಆಗುವ ತೊಂದರೆಯಿಂದ ಸುಮ್ಮನಿರುವುದೇ ಒಳ್ಳೆಯದು. ಪ್ರವಾಸದಲ್ಲಿ ಇರುವವರಿಗೆ ಆಹಾರದ ವ್ಯತ್ಯಾಸದಿಂದ ಕಷ್ಟವಾಗುವುದು. ಸಂಶೋಧನೆಯ ವಿದ್ಯಾರ್ಥಿಗಳು ಉತ್ಸಾಹದಿಂದ ಕಾರ್ಯದಲ್ಲಿ ಪ್ರವೃತ್ತರಾಗುವರು. ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಯಶಸ್ಸು ಸಿಗುವುದು. ಸಾಲದ ವಿಷಯದಲ್ಲಿ ಕಟ್ಟುನಿಟ್ಟಿನ ಕ್ರಮವನ್ನು ಜಾರಿಗೆ ತರುವಿರಿ. ವಿದೇಶ ಪ್ರಯಾಣ ತಾತ್ಕಾಲಿಕವಾಗಿ ನಿಲ್ಲುತ್ತದೆ. ಶತ್ರುಗಳು ನಿಮ್ಮ ದೃಷ್ಟಿಯಿಂದಲೇ ಅಲುಗಾಡುತ್ತಾರೆ. ವೃತ್ತಿಯ ಕೆಲಸಗಳ ನಡುವೆ ಮನೆಯ ಕೆಲಸವೂ ನಿಮಗೆ ಕಷ್ಟವಾದೀತು‌. ಪರಿಶ್ರಮವಿಲ್ಲದೇ ಆದಾಯವು ಸಿಗಲಿ ಎನ್ನುವ ಮನೋಭಾವ ಇರಲಿದೆ. ಮೇಲಧಿಕಾರಿಗಳ ಹೊಸ ಯೋಜನೆಯನ್ನು ನಿರ್ವಹಿಸಲು ನಿಮ್ಮ ತಲೆಗೆ ಬರುವುದು.

ಕನ್ಯಾ ರಾಶಿ :

ಭಾವನೆಗಳನ್ನು ಕದಡುವ ಪರಿಸ್ಥಿತಿ ಎದುರಾಗಬಹುದು. ಉದ್ಯಮದಲ್ಲಿ ಮಧ್ಯಸ್ಥಿಕೆ ಪಾತ್ರ ವಹಿಸಬೇಕಾಗುತ್ತದೆ. ಹಣಕಾಸು ವ್ಯವಹಾರದಲ್ಲಿ ನ್ಯಾಯ ಮುಖ್ಯ. ನಿಮ್ಮವರೇ ನಿಮಗೆ ಶತ್ರುಗಳಂತೆ ಕಾಣಬಹುದು. ಇಂದು ನಿಮ್ಮ ಸಹಾಯಕರೇ ನಿಮಗೆ ತೊಂದರೆ ಕೊಟ್ಟಾರು. ಬಂಧುಗಳ ಆಶ್ರಯದಲ್ಲಿ ಇಂದು ನೀವು ಇರಬೇಕಾದೀತು. ಸಂಗಾತಿಗೆ ನೀವು ಉತ್ತಮ ಕೆಲಸವು ಕೊಡಿಸುವಿರಿ. ಕಛೇರಿಯಲ್ಲಿ ನಿಮ್ಮ ಕಾರ್ಯವನ್ನು ಪ್ರಶಂಸಿಸಬಹುದು. ಕೆಟ್ಟ ಆಲೋಚನೆಗಳು ಬಂದರೂ ಅದನ್ನು ದೂರ ಮಾಡಿಕೊಳ್ಳುವ ತಂತ್ರವನ್ನು ತಿಳಿಯಿರಿ. ಹೂಡಿಕೆಯ ವಿಚಾರದಲ್ಲಿ ಯಾರಾದರೂ ಒತ್ತಾಯ ಮಾಡಬಹುದು. ದೂರದಲ್ಲಿ ಉದ್ಯೋಗ ಮಾಡುತ್ತಿರುವವರಿಗೆ ಮನೆಯ ನೆನಪಾಗಬಹುದು. ಆಲಂಕಾರಿಕ ಉದ್ಯಮವನ್ನು ಮಾಡಿದರೆ ಆದಾಯ ಸಿಗಲಿದೆ. ರಹಸ್ಯವಾಗಿ ರೂಪಿಸಿದ ಯೋಜನೆ ಫಲ ಕೊಡುತ್ತದೆ. ಉದ್ಯಮದಲ್ಲಿ ಎಲ್ಲರಿಗೂ ನಿಮ್ಮ ಉದ್ದೇಶ ತಿಳಿಯಬೇಕಿಲ್ಲ. ತಂತ್ರ ಮತ್ತು ಸಹನೆಯ ಸಂಯೋಜನೆ ಜಯ ತರುತ್ತದೆ. ವಾಸ್ತವದಲ್ಲಿ ಜೀವಿಸುವುದನ್ನು ಕಲಿಯುವಿರಿ.

ತುಲಾ ರಾಶಿ :

ಸೂಕ್ಷ್ಮ ಗಮನವೇ ಇಂದು ಯಶಸ್ಸಿನ ಕೀಲಿಕೈ. ಉದ್ಯಮದಲ್ಲಿ ಸಣ್ಣ ತಪ್ಪು ದೊಡ್ಡ ಪರಿಣಾಮ ತರಬಹುದು. ಸಾಲದ ವಿಷಯದಲ್ಲಿ ಲೆಕ್ಕಾಚಾರ ಅಗತ್ಯ. ವಿದೇಶ ಸಂಪರ್ಕ ತಾಂತ್ರಿಕ ಕಾರಣಕ್ಕೆ ತಡೆ. ಇಂದು ನಿಮಗೆ ನಿಮ್ಮವರುಲೇ ಬಯಸದೇ ಇದ್ದರೂ ಸಹಾಯ ಮಾಡುವವರಿದ್ದಾರೆ. ವಕೀಲವೃತ್ತಿಯವರಿಗೆ ಹೆಚ್ಚಿನ ಕಾರ್ಯವು ಬರಲಿದ್ದು ನಿಭಾಯಿಸುವ ಕಲೆಯನ್ನು ಕಲಿತಿರುವಿರಿ. ನಿಮ್ಮ ಪ್ರೀತಿ ಪಾತ್ರರು ನಿಮಗೆ ಉಡುಗೊರೆಯನ್ನು ಕೊಡಬಹುದು. ಸಂಗಾತಿಯ ಪ್ರೀತಿಯಿಂದ ಖುಷಿಯಾಗಲಿದೆ.‌ ಮನಸ್ಸಿನಲ್ಲಿ ಹತಾಶೆ, ಗೊಂದಲಗಳಿಂದ ಏನನ್ನೂ ಮಾಡಲಾಗದ ಸ್ಥಿತಿಯು ಬರಲಿದೆ. ಹೊಸ ವಸ್ತುಗಳ ಖರೀದಿಗೆ ಉತ್ಸಾಹವು ಅಧಿಕವಾಗಿರಲಿದೆ. ಯಾರಾದರೂ ನಿಮಗೆ ಬೆಂಬಲವಾಗಬೇಕಿದೆ. ಮಾತನ್ನೂ ವಿರೋಧಿಗಳ ಟೀಕೆ ನಿಮ್ಮನ್ನು ಇನ್ನಷ್ಟು ಜಾಗ್ರತೆಯನ್ನಾಗಿಸುತ್ತದೆ. ಶಿಸ್ತು ಪಾಲಿಸಿದರೆ ಈ ದಿನ ನಿಮ್ಮ ಪರವಾಗಿರುವುದು. ನಿಮ್ಮ ಎಲ್ಲ ನಿರ್ಧಾರಗಳೂ ನಿಮಗೇ ನಕಾರಾತ್ಮಕವಾಗಿ ಇರುವಂತೆ ತೋರುವುದು. ನಿಮಗೆ ಸುಮ್ಮನೇ ಕುಳಿತರೇ ಹತ್ತಾರು ಆಲೋಚನೆಗಳಿಂದ ನಿಮ್ಮ ಮನಸ್ಸು ದುರ್ಬಲವಾಗುವುದು.‌

ವೃಶ್ಚಿಕ ರಾಶಿ :

ಉದ್ಯಮದಲ್ಲಿ ಅಧಿಕಾರದ ಹೊಣೆ ಹೆಚ್ಚಾಗುತ್ತದೆ. ಹಣದ ವಿಚಾರದಲ್ಲಿ ಗೌರವ ಬರುವಂತೆ ಇರಲಿ. ವಿದೇಶ ಸಂಬಂಧದಿಂದ ಮಾನ್ಯತೆ ಸಿಗಬಹುದು. ಶತ್ರುಗಳು ನಿಮ್ಮ ಆತ್ಮವಿಶ್ವಾಸಕ್ಕೆ ಹೆದರುತ್ತಾರೆ. ಶಿಕ್ಷಣಕ್ಷೇತ್ರದಲ್ಲಿ ಯಶಸ್ಸು ಸಿಗುವುದು. ಧಾರ್ಮಿಕ ಮುಖಂಡರಿಗೆ ಅಪವಾದ ಬರುವ ಸಾಧ್ಯತೆ ಇದೆ. ಸಕಾಲಕ್ಕೆ ಆರ್ಥಿಕ ನೆರವು ಸಿಗಲಿದ್ದು ಸ್ವಲ್ಪ ನೆಮ್ಮದಿ ಸಿಗುವುದು. ಸಾಲದ ಕಾರಣಕ್ಕೆ ತಲೆ ಮರೆಸಿಕೊಳ್ಳಬಹುದು. ದಾಂಪತ್ಯ ಜೀವನದಲ್ಲಿ ಕೆಲವು ಅನಿರೀಕ್ಷಿತ ತಿರುವುಗಳು ಬರಲಿದ್ದು ಅದಕ್ಕೆ ಹೊಂದಿಕೊಳ್ಳುವುದು ಅನಿವಾರ್ಯವಾದೀತು. ವೃತ್ತಿಯ ಸ್ಥಳದಲ್ಲಿ ರೋಚಕ ಅನುಭವವು ಇರಲಿದೆ. ಅನ್ನಿಸಿದ್ದನ್ನು ಹೇಳಲು ನಿಮಗೆ ಅವಕಾಶವು ಸಿಗದೇ ಹೋಗಬಹುದು. ಕೆಲವವುದರಿಂದ ಬಿಡುಗಡೆಯಾದರೆ ಸಮಾಧಾನ. ಪ್ರೇಮಪ್ರಕರಣವು ಬಿಸಿಯ ತುಪ್ಪದಂತಾಗುವುದು. ನಾಯಕತ್ವ ಇಂದು ಪರೀಕ್ಷೆಗೆ ಒಳಗಾಗುತ್ತದೆ. ಮಾತಿಗಿಂತ ಕಾರ್ಯದಿಂದ ನಿಮ್ಮ ಶಕ್ತಿ ತೋರಿಸುವ ದಿನ. ದೂರದ ಬಂಧುಗಳ ಭೇಟಿಯ ನಿರೀಕ್ಷೆಯಲ್ಲಿ ಇರುವಿರಿ. ಪೂರ್ವಾಪರ ಯೋಚನೆ ಇಲ್ಲದೇ ಮಾತನಾಡಿ ಸಂಬಂಧ ಹಾಳುಮಾಡಿ.

ಧನು ರಾಶಿ :

ವಿರೋಧಿಗಳು ನಿಮ್ಮ ದುರ್ಬಲತೆಯನ್ನು ಪರೀಕ್ಷಿಸುತ್ತಾರೆ. ದೃಢ ನಿಲುವು ಮತ್ತು ಸ್ಪಷ್ಟ ಮಾತು ನಿಮ್ಮನ್ನು ರಕ್ಷಿಸುತ್ತದೆ. ಇಂದು ಶಾಂತಿ ಉಳಿಸಿಕೊಂಡರೆ ನಷ್ಟ ತಪ್ಪಿಸಬಹುದು. ಹಿತಶತ್ರುಗಳಿಂದ ನಿಮಗೆ ನೆಮ್ಮದಿ ಕಡಿಮೆಯಾಗಬಹುದು. ಇಕ್ಕಟ್ಟಿನಿಂದ ಹೊರಬರಲು ಮನಸ್ಸು ಮಾಡುವಿರಿ. ಆದರೂ ಕಷ್ಟವಾದೀತು. ಕುಟುಂಬದ ಸದಸ್ಯರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಆಪ್ತರ ಒಡನಾಟವು ಖುಷಿಯನ್ನು ಕೊಡಬಹುದು. ವಿದ್ಯಾರ್ಥಿಗಳ ಪ್ರಗತಿಯಲ್ಲಿ ಮಂದಗತಿ ಇರುವುದು. ನಂಬಿಕೆಯನ್ನು ಉಳಿಸಿಕೊಳ್ಳಲು ಕಷ್ಟವಾದೀತು. ನಿಮ್ಮ ಬಳಿ‌ ಕೇಳಿದರೆ ಮಾತ್ರ ಸಲಹೆಯನ್ನು ಕೊಡಿ.‌ ಉದ್ಯಮದಲ್ಲಿ ಮನಸ್ಸು ಗೊಂದಲಗೊಳ್ಳಬಹುದು. ಹಣಕಾಸಿನಲ್ಲಿ ಕುಟುಂಬದ ಚರ್ಚೆ ಅಗತ್ಯ. ವಿದೇಶ ಸಂಬಂಧದಲ್ಲಿ ವಿಳಂಬ. ಶುಭ ಸಮಾರಂಭಗಳಿಗೆ ಭೇಟಿ ಮಾಡುವಿರಿ. ವ್ಯಾಪಾರದಲ್ಲಿ ಚಾಣಕ್ಷತೆಯಿಂದ ಲಾಭವನ್ನು ಪಡೆಯುವಿರಿ. ಇಂದು ನೀವು ಯಾವುದೋ ಚಿಂತೆಯಲ್ಲಿ ಇರುವಿರಿ. ಹೂಡಿಕೆದಾರರಿಗೆ ಮೇಲಿಂದಮೇಲೆ ಒತ್ತಡ ಕಾಣಿಸುವುದು.

ಮಕರ ರಾಶಿ :

ಶತ್ರು ನಿಮ್ಮ ಯೋಜನೆಗಳನ್ನು ಊಹಿಸಲಾರ. ಮಾಹಿತಿ ಹಂಚಿಕೆಯಲ್ಲಿ ಜಾಗ್ರತೆ ವಹಿಸಿದರೆ ಲಾಭ ಹೆಚ್ಚಾಗುತ್ತದೆ. ನಿಮ್ಮ ಹಳೆಯ ನೌಕರರನ್ನು ಕೈಬಿಡುವ ಯೋಚನೆ ಮಾಡುವಿರಿ. ಇಂದು ನಿಮ್ಮ ಆಲೋಚನಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣವು ಇದ್ದು ಉತ್ಸಾಹದಿಂದ ಇರುವಿರಿ.‌ ವಾಹನವನ್ನು ಚಲಾಯಿಸುವ ಬೇರೆಯ ಯಾವ ಚಟುವಟಿಕೆಗಳನ್ನು ಮಾಡುವುದು ಬೇಡ. ನಿಮ್ಮ ಕುಶಲ ಕಾರ್ಯಗಳು ಮೇಲಧಿಕಾರಿಗಳಿಗೆ ತಿಳಿಯುವುದು. ವೇತನವು ಹೆಚ್ಚಾಗುವ ಸಾಧ್ಯತೆ ಇದೆ. ತಾಯಿಗೆ ಏನಾದರೂ ಕೊಟ್ಟು ಖಷಿಪಡಿಸುವಿರೊ. ಮಾತಿನ ಚಾತುರ್ಯದಿಂದ ಕೆಲಸ ಮುನ್ನಡೆಯುತ್ತದೆ. ಉದ್ಯಮದಲ್ಲಿ ಹೊಸ ಪರಿಚಯಗಳು ಉಪಯುಕ್ತ. ವಿದೇಶ ಪ್ರಯಾಣ ಯೋಚನೆ ಬದಲಾಗಬಹುದು. ಸಂಗಾತಿಗೆ ನೀವು ಸಹಾಯವನ್ನು ಮಾಡುವಿರಿ. ಸಂಪತ್ತಿನ ಉಳಿತಾಯದ ದಾರಿಯನ್ನು ನೀವೇ ಕಂಡುಕೊಳ್ಳುವಿರಿ. ಮುಚ್ಚು ಮರೆ ಇಲ್ಲದೇ ಎಲ್ಲವನ್ನೂ ಆಪ್ತರ ಜೊತೆ ಹಂಚಿಕೊಳ್ಳಿ.

ಕುಂಭ ರಾಶಿ :

ಸಾಲದ ವಿಚಾರ ತಾತ್ಕಾಲಿಕ ಒತ್ತಡ ತರುತ್ತದೆ. ವಿದೇಶದ ವಿಚಾರದಲ್ಲಿ ಸ್ಪಷ್ಟತೆ ಇಲ್ಲ. ಶತ್ರುಕಾಟ ನೇರವಾಗಿರದು. ನಿಮ್ಮ ಸಹನೆ ಮತ್ತು ಸಮಯಪಾಲನೆ ಎಲ್ಲ ಸಮಸ್ಯೆಗಳನ್ನು ನಿಧಾನವಾಗಿ ಸರಿಪಡಿಸುತ್ತದೆ. ಇಂದು ನಿಮ್ಮ ಕಾರ್ಯಗಳು ನಿಧಾನಗತಿಯಲ್ಲಿ ಇರಲಿದೆ. ಸಂಗಾತಿಯಿಂದ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ. ಬಂಗಾರದ ಖರೀದಿಗೆ ಉತ್ಸಾಹವನ್ನು ತೋರುವಿರಿ. ಅಸಾಧ್ಯವಾದ ಕಾರ್ಯವನ್ನು ಮಾಡಬೇಕು ಎನಿಸಬಹುದು. ಬರುವ ಅಲ್ಪ ಆದಾಯವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ಕುಟುಂಬದ ಪ್ರೀತಿಯು ಸಿಗಲಿದೆ. ದುಡುಕುವುದು ಕಾರ್ಯದ ನಿಮಿತ್ತ ಓಡಾಟವು ಹೆಚ್ಚಾಗುವುದು. ಸ್ಥಿರತೆ ಇಂದು ನಿಮ್ಮ ದೊಡ್ಡ ಶಕ್ತಿ. ವ್ಯವಹಾರದಲ್ಲಿ ಹಳೆಯ ಸಂಪರ್ಕಗಳಿಂದ ಲಾಭ. ಆಲಸ್ಯದಿಂದ ನಿಮ್ಮ ಎಲ್ಲ ಕಾರ್ಯಗಳೂ ಉಳಿಯಬಹುದು. ಯಾವುದನ್ನೂ ನೀವು ಅತಿಯಾಗಿ ಆಸೆ ಪಡುವುದು ಬೇಡ.‌ ನಿಮ್ಮ ಪರೀಕ್ಷೆಯ ಕಾಲವೂ ಇಂದು ಆಗಿರುವುದು. ಆಪ್ತರ ಮೇಲೆ ಹುಸಿ ಮುನಿಸು ಇರಲಿದೆ.

ಮೀನ ರಾಶಿ :

ವಿದೇಶ ಸಂಬಂಧಿತ ಕನಸುಗಳಿಗೆ ಇನ್ನೂ ಕಾಲ ಬೇಕು. ವಿರೋಧಿಗಳ ಮಾತು ಮನಸ್ಸಿಗೆ ತಾಗದಂತೆ ಗಮನ ವಹಿಸಿ. ಮೌನವೇ ನಿಮ್ಮ ರಕ್ಷಣೆ. ಇಂದು ನಿಮ್ಮ ಸ್ವಂತ ಉದ್ಯಮದಲ್ಲಿ ನಿಮಗೆ ಲಾಭವಿದೆ. ಸ್ನೇಹಿತರ ಉತ್ಸಾಹದ ಮಾತಿಗೆ ಮರುಳಾಗುವ ಸಾಧ್ಯತೆ ಇದೆ. ಪ್ರೇಮಿಯನ್ನು ಭೇಟಿಯಾಗಲು ದೂರದ ಊರಿಗೆ ಪ್ರಯಾಣ ಮಾಡಬೇಕಾಗುವುದು.‌ ಹೂಡಿಕೆಯ ಬಗ್ಗೆ ತಜ್ಞರಿಂದ ಮಾಹಿತಿ ಪಡೆದು ಮುಂದುವರಿಯಿರಿ. ಸಾಮಾಜಿಕ ಮುಖಂಡರು ಸಂಘಟನೆಯಲ್ಲಿ ತೊಡಗುವರು. ಮಕ್ಕಳಿಂದ ಹಣವನ್ನು ಪಡೆಯುವಿರಿ. ಇಂದು ಮಾತುಗಳನ್ನು ಕಡಿಮೆ ಆಡುವಿರಿ. ಆತ್ಮವಿಶ್ವಾಸ ಹೆಚ್ಚಿದರೂ ಆತುರ ಕಡಿಮೆ ಇರಲಿ. ಉದ್ಯಮದಲ್ಲಿ ಹೊಸ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸಲಹೆ ಅಗತ್ಯ. ಅಪರಿಚಿತರು ನಿಮ್ಮನ್ನು ಭೇಟಿಯಾಗಬಹುಸು. ಮನೆಗೆ ಬೇಕಾದ ವಸ್ತುಗಳನ್ನು ನೀವು ಖರೀದಿಸುವಿರಿ. ಕೃಷಿಯಲ್ಲಿ ನಿಮಗೆ ಇಂದು ನಿರಾಸಕ್ತಿಯು ಇರುವುದು. ಸುಮ್ಮನೇ ಇದ್ದಷ್ಟೂ ನಿಮ್ಮ ಮೇಲೆ ಗೂಬೆ‌ ಕೂರಿಸಬಹುದು. ತಂತ್ರಜ್ಞಾನದಲ್ಲಿ ನಿಮಗೆ ಒಳ್ಳೆಯ ಹಿಡಿತ ಗೊತ್ತಾಗುವುದು.

-ಲೋಹಿತ ಹೆಬ್ಬಾರ್ – 8762924271 (what’s app only)

ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ