Daily Horoscope 3 September 2024: ಬರಬೇಕಾದ ಹಣ ಸಿಗದೇ ಒದ್ದಾಟ, ಆತುರದ ನಿರ್ಧಾರದಿಂದ ಸಮಸ್ಯೆಗಳನ್ನು ತಂದುಕೊಳ್ಳುವಿರಿ
ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2024 ಸೆಪ್ಟೆಂಬರ್ 03) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಪೂರ್ವಾಫಲ್ಗುಣೀ, ಯೋಗ: ಸಿದ್ಧಿ, ಕರಣ: ನಾಗವಾನ್, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:41 ಗಂಟೆ, ರಾಹು ಕಾಲ ಮಧ್ಯಾಹ್ನ 03:37 ರಿಂದ ಸಂಜೆ 05:09, ಯಮಘಂಡ ಕಾಲ ಬೆಳಿಗ್ಗೆ 09:27 ರಿಂದ 10:59ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:32 ರಿಂದ 02:04ರ ವರೆಗೆ.
ಮೇಷ ರಾಶಿ: ಒಮ್ಮನಸ್ಸಿನಿಂದ ಇಂದು ಕಾರ್ಯ ಅಸಾಧ್ಯ. ಕಿರಿಕಿರಿಯನ್ನು ನಿಭಾಯಿಸುವುದೂ ಕಷ್ಡವಾದೀತು. ನಿಮ್ಮ ತೊಂದರೆಯ ಪರಿಹಾರಕ್ಕೆ ಹತ್ತಾರು ಮಾರ್ಗಗಳು ಇವೆ. ಅದನ್ನು ಅನ್ಯರ ಮೂಲಕ ಕೇಳಿ ತಿಳಿದುಕೊಳ್ಳುವ ಪ್ರಯತ್ನ ಮಾಡಿ. ಸುತ್ತಲಿನವರು ನಿಮ್ಮನ್ನು ಅರ್ಥಮಾಡಿಕೊಳ್ಳುವರು. ಆದರೆ ಅವರಿಂದ ಗೌರವ ಸಿಗುತ್ತಿಲ್ಲ ಎಂಬ ಕೊರಗು ಕಾಡಬಹುದು. ಶತ್ರುಗಳನ್ನೇ ಆದರೂ ಅವರನ್ನು ನೋಡಿಕೊಳ್ಳುವ ಕ್ರಮ ಗೊತ್ತಿರಲಿ. ಮನೋರಂಜನೆಯ ಕಾರ್ಯಕ್ರಮದಲ್ಲಿ ನೀವು ಭಾಗವಹಿಸುವಿರಿ. ಕೆಲಸದಿಂದ ಹೊರಬಂದ ಸ್ನೇಹಿತರಿಗೆ ಸಹಾಯ ಮಾಡುವಿರಿ. ಹೊಸತನ್ನು ಕಲಿಯಬೇಕು ಎನ್ನುವ ಬಯಕೆ ಹೆಚ್ಚು ಇರಲಿದೆ. ಅನಿರೀಕ್ಷಿತವಾಗಿ ಆರೋಗ್ಯ ಕೆಡಬಹುದು. ಸಂಗಾತಿಯಿಂದ ಸಹಕಾರವು ನಿಮಗೆ ಸಿಗಲಿದೆ. ಇನ್ನೊಬ್ಬರ ವಿಮರ್ಶೆಯಲ್ಲಿ ಸಮಯ ಹೋಗುವುದು. ಪ್ರತಿಭೆ ಪ್ರದರ್ಶನಕ್ಕೆ ಒಳ್ಳೆಯ ಅವಕಾಶ ಸಿಗಲಿದೆ. ದೂರಪ್ರಯಾಣವನ್ನು ಇಂದು ಇಷ್ಟಪಡುವಿರಿ. ಇನ್ನೊಬ್ಬರ ಕಷ್ಟಕ್ಕೆ ಕಿಂಚಿತ್ತಾದರೂ ಸ್ಪಂದಿಸುವಿರಿ.
ವೃಷಭ ರಾಶಿ: ನಿಮ್ಮ ಮಾತುಗಳನ್ನು ನಂಬುವವರ ಸಂಖ್ಯೆ ಕಡಿಮೆ ಆದೀತು. ಇಂದು ಅಕಾರ್ಯಕ್ಕೆ ಧನವು ವ್ಯಯವಾಗಬಹುದು. ನಿಮಗೆ ಅನೇಕ ಅವಕಾಶಗಳು ಸಿಗಲಿದ್ದು ಅದನ್ನು ಬಿಡುವಿರಿ. ಕೃಷಿ ಚಟುವಟಿಕೆಗಳನ್ನು ತೊಡಗಿಕೊಳ್ಳುವ ಸಾಧ್ಯತೆ ಇದೆ. ಕುಟುಂಬದ ಸೌಖ್ಯವನ್ನು ಇಚ್ಛಿಸುವಿರಿ. ಕೆಲವನ್ನು ಮಾತನಾಡಿ ಕೆಡಿಸಿಕೊಳ್ಳುವಿರಿ. ಇದು ನಿಮ್ಮನ್ನು ಚಿಂತೆಗೆ ಚಿಂತೆಗೆ ಒಳಗಾಗುವಿರಿ. ಅಧಿಕಾರಿವರ್ಗವು ನಿಮ್ಮ ಮೇಲೆ ಒತ್ತಡವನ್ನು ತರಬಹುದು. ಮನೆಯ ನಿರ್ಮಾಣದಲ್ಲಿ ನಿಮಗೆ ಗೊಂದಲ ಹೆಚ್ಚಾಗುವುದು. ನಿಮ್ಮನ್ನು ಕಡೆಗಣಿಸಿದ ಜನರ ಮುಂದೇ ನೀವು ಎದ್ದು ನಿಲ್ಲುವಿರಿ. ಇಂದಿನ ಕಾರ್ಯಗಳು ಮುಕ್ತಾಯವಾಗದೇ ಆತಂಕ ಪಡುವಿರಿ. ಸಂಗಾತಿಯನ್ನು ಹೆಚ್ಚು ಇಷ್ಟಪಡುವಿರಿ. ನೀವೇ ನಿಮಗೆ ವೈರಿಯಾಗುವ ಸಾಧ್ಯತೆ ಇದೆ. ಸಾಮರಸ್ಯದ ಕೊರೆತೆಯು ನೀಗಲಿದೆ. ಮಕ್ಕಳಿಂದ ನೀವು ಸ್ವತಂತ್ರರಾಗಲು ಬಯಸುವಿರಿ. ಇಂದು ನಿಮ್ಮ ವೈಯಕ್ತಿಕ ಕೆಲಸಗಳಿಗೆ ತೊಂದರೆ ಬರುವುದು. ಇಲ್ಲದೆ ಸಮಸ್ಯೆಯನ್ನು ಸುಮ್ಮನೇ ಸೃಷ್ಟಿಸಿಕೊಳ್ಳುವಿರಿ. ಸಂಗಾತಿಯ ಮೇಲೆ ಬೇಸರವಾಗುವುದು.
ಮಿಥುನ ರಾಶಿ: ವಿದ್ಯಾರ್ಥಿಗಳಿಗೆ ಮಾನಸಿಕವಾದ ಭಯವನ್ನು ತೆಗೆದರೆ ಮುನ್ನಡೆಗೆ ಅವಕಾಶವಿದೆ. ಅಪೇಕ್ಷೆ ಇಲ್ಲದೇ ಕೆಲಸವನ್ನು ಮಾಡುವುದು ನಿಮಗೆ ಇಷ್ಟವಾಗುವುದು. ಮಕ್ಕಳ ಭಾವನೆಗೆ ಸ್ಪಂದಿಸಿ ಅವರನ್ನು ಖುಷಿಪಡಿಸುವಿರಿ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದ್ದು ನಿಮಗೆ ಭಯವಾಗಬಹುದು. ಹೊಸ ಯಂತ್ರವನ್ನು ನೀವು ಖರೀದಿಸುವ ಅನಿವಾರ್ಯತೆ ಬರಬಹುದು. ಇನ್ನೊಬ್ಬರಿಗೆ ಸಹಾಯ ಮಾಡಿದ ಧನ್ಯತೆ ನಿಮಗೆ ಆಗಲಿದೆ. ಇದು ನಿಮ್ಮನ್ನು ಖುಷಿಯಿಂದ ಇಡುವುದು. ಕಲಹವು ಸಣ್ಣದೇ ಆಗಿದ್ದರೂ ಅದ ಫಲವು ಬಹಳ ದೊಡ್ಡಾದಾಗಿರುವುದು. ಮಾತಿನ ಮೇಲೆ ನಿಮ್ಮ ನಿಯಂತ್ರಣವಯ ಅಗತ್ಯ. ಬಂಧುಗಳು ನಿಮ್ಮನ್ನು ಪ್ರಶಂಸಿಸುವರು. ಮಹಿಳೆಯರು ಸ್ವ ಉದ್ಯೋಗವನ್ನು ಮಾಡಲು ಬಯಸಬಹುದು. ಅನಿವಾರ್ಯ ಕಾರಣದಿಂದ ಮನೆಗೆ ಹೋಗಲು ಆಗದೇ ಇರಬಹುದು. ಸೂಕ್ತ ಕ್ರಮಗಳನ್ನು ಮಾಡಿಕೊಳ್ಳಿ. ಆಲಸ್ಯದ ಕಾರಣ ಎಲ್ಲರಿಂದ ದೂರುಬರಬಹುದು.
ಕಟಕ ರಾಶಿ: ಬರಬೇಕಾದ ಹಣವು ನಿಮಗೆ ಸಿಗುಬುದು ಕಷ್ಡವಾಗುವುದು. ಓಡಾವೂ ವ್ಯರ್ಥವಾಗಿ, ಬೇಸರ ತರಬಹುದು. ಇಂದು ಹೊಸ ಉತ್ಸಾಹದಿಂದ ವೃತ್ತಿಗೆ ತೆರಳಿದರೂ ನಿಮ್ಮೊಳಗೆ ಆತಂಕವಂತೂ ಇರುವುದು. ಧನನಷ್ಟವಾದರೂ ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸುವಿರಿ. ಉದ್ಯೋಗದಲ್ಲಿ ಬದಲಾವಣೆ ಮಾಡಲು ಇಚ್ಛಿಸುವಿರಿ. ನಿಮ್ಮ ಕೆಲಸಗಳಿಗೆ ಆಪ್ತರ ವಿರೋಧವಿರಲಿದೆ. ಆತುರದ ನಿರ್ಧಾರದಿಂದ ಸಮಸ್ಯೆಗಳು ಹುಟ್ಟಿಕೊಳ್ಳಬಹುದು. ಒಳಿತಿಗಾಗಿ ಸಮಯವನ್ನು ನೀವು ನಿರೀಕ್ಷಿಸಬೇಕಾಗುತ್ತದೆ. ನೀವು ಮಾನಸಿಕವಾಗಿ ಗಟ್ಟಿಯಾಗಬೇಕಾಗಿದೆ. ದುರ್ಬಲ ಮನಸ್ಸಿಗೆ ನಕಾರಾತ್ಮಕ ಅಂಶಗಳು ಬರಬಹುದು. ಅನಾರೋಗ್ಯದಿಂದ ಒಪ್ಪಿಕೊಂಡ ಕಾರ್ಯವನ್ನು ಮಸಡಿಕೊಡಲಾಗದು. ಪಿತ್ರಾರ್ಜಿತ ಆಸ್ತಿಯ ಬಗ್ಗೆ ನಿಮಗೆ ಆಸೆಯಾಗಲಿದೆ. ಸಂಗಾತಿಯ ಮಾತು ನಿಮಗೆ ತಾಳ್ಮೆಯನ್ನು ಕಡಿಮೆ ಮಾಡೀತು. ಅಪರಿಚಿತ ವ್ಯಕ್ತಿಗಳ ಜೊತೆ ಯಾವ ವ್ಯವಹಾರವನ್ನು ಕಡಮೆ ಮಾಡಿ.
ಸಿಂಹ ರಾಶಿ: ಆಕಸ್ಮಿಕ ಅಪಘಾತಗಳಿಂದ ನೋವು ಹೆಚ್ಚಾಗುವುದು. ಆತುರದಲ್ಲಿ ಇಂದು ಅಸಂಬದ್ಧವಾಗುವ ಸಾಧ್ಯತೆ ಇದೆ. ವಿವಾಹದ ಪ್ರಸ್ತಾಪಗಳು ಬಂದು ಮತ್ತೆ ಹೋಗುತ್ತವೆ ಅಷ್ಟೇ. ಪ್ರಯತ್ನಪೂರ್ವಕವಾಗಿ ನಿಮ್ಮ ಕೆಲಸವನ್ನು ಪೂರೈಸುವಿರಿ. ಉದ್ಯೋಗದಲ್ಲಿ ಭಡ್ತಿಗಾಗಿ ಪ್ರಯತ್ನಿಸುವಿರಿ. ಆಲಸ್ಯವು ಇಂದಿನ ಕಾರ್ಯವನ್ನು ನಿಧಾನ ಮಾಡಬಹುದು. ನೀವು ಇಟ್ಟ ನಂಬಿಕೆ ಹುಸಿಯಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಕಲಹವಾಗುವ ಸಾಧ್ಯತೆ ಇದೆ. ವಾಹನವನ್ನು ಬಹಳ ಜಾಗರೂಕತೆಯಿಂದ ಚಲಾಯಿಸಿ. ವಿದ್ಯಾರ್ಥಿಗಳಿಗೆ ಸಮಯದ ಅಭಾವವು ಆಗಬಹುದು. ಕೆಲವು ದಿನಗಳ ವಿರಾಮವನ್ನು ಪಡೆದು ಪ್ರವಾಸ ಹೋಗುವಿರಿ. ನಿಮ್ಮ ವಸ್ತುವನ್ನು ಸರಿಯಾಗಿ ಇಟ್ಟುಕೊಳ್ಳಿ. ಮೇಲಧಿಕರಿಗಳು ನಿಮ್ಮ ಕಾರ್ಯವನ್ನು ಪರಿಶೀಲಿಸಬಹುದು. ಎಲ್ಲರೆದುರೂ ನಿಮ್ಮ ಸಾಹಸಪ್ರದರ್ಶನ ಬೇಡ. ಶ್ರಮಪಟ್ಟು ಆರಂಭಿಸಿದ ಕಾರ್ಯಗಳು ಪಿತೂರಿಯಿಂದ ಅರ್ಧಕ್ಕೆ ಸ್ಥಗಿತವಾಗಬಹುದು. ನಿಮ್ಮ ಗುರಿಯನ್ನು ಯಾರಾದರೂ ತಪ್ಪಿಸಬಹುದು. ನಿಮ್ಮ ಇಂದಿನ ದುಃಖಕ್ಕೆ ಕಾರಣವು ತಡವಾಗಿ ಗೊತ್ತಾದೀತು.
ಕನ್ಯಾ ರಾಶಿ: ನೌಕರರಿಂದ ನಿರೀಕ್ಷಿಸಿದ್ದು ಸುಳ್ಳಾಗಬಹುದು. ಇಂದು ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸದ ಆಸಕ್ತಿ ಹೆಚರಚಾಗುವುದು. ಔದ್ಯೋಗಿಕ ವಿಚಾರದಲ್ಲಿ ನೀವು ಹೆಚ್ಚಿನ ಗಮನ ಅವಶ್ಯಕ. ಹಿರಿಯರ ಉಪದೇಶವು ನಿಮಗೆ ಕಿರಿಕಿರಿ ಎನಿಸಬಹುದು. ಗೃಹನಿರ್ಮಾಣದಲ್ಲಿ ವಿಘ್ನಗಳು ಬರಲಿದೆ. ನಿಮ್ಮ ಆದಾಯದ ಮೂಲವಾದ ವ್ಯಾಪಾರವು ಲಾಭವನ್ನು ಕೊಡಬಹುದು. ಹಳೆಯ ರೋಗಕ್ಕೆ ಔಷಧದಿಂದ ಪರಿಹಾರ ಸಿಗಲಿದೆ. ಕಛೇರಿಯ ಬಗೆಗಿನ ಮೋಹ ದೂರಾಗುವುದು. ನಿಮ್ಮ ಪ್ರೀತಿಪಾತ್ರರನ್ನು ನೀವು ಭೇಟಿಯಾಗಲು ಬಯಸುವಿರಿ. ಸ್ವಂತ ಉದ್ಯಮವನ್ನು ನಡೆಸುತ್ತಿದ್ದರೆ ಸರ್ಕಾರದ ಅಧಿಕಾರಿಹಳಿಂದ ಒತ್ತಡವು ಬರಬಹುದು. ಆಪ್ತರ ಜೊತೆ ಪ್ರಯಾಣ ಮಾಡುವಿರಿ. ಪ್ರೇಮವು ಅತಂತ್ರ ಸ್ಥಿತಿಗೆ ಹೋಗಬಹುದು. ನೀರಿನ ಪ್ರದೇಶದಲ್ಲಿ ಜಾಗರೂಕತೆ ಅವಶ್ಯಕ. ಆಪ್ತರ ಜೊತೆ ದೂರದ ಊರಿಗೆ ಪ್ರಯಾಣ ಮಾಡುವ ಸಾಧ್ಯತೆ ಇದೆ. ಸಂಗಾತಿಯ ಬಗ್ಗೆ ಪ್ರೀತಿ ಹೆಚ್ಚಾಗುವುದು. ನಿಮ್ಮ ಇಂದಿನ ಅಸಹಾಯಕತೆಯನ್ನು ಯಾರ ಎದುರೂ ಹೇಳುವುದು ಬೇಡ. ನಿಮ್ಮ ಎಲ್ಲ ಕಾರ್ಯಕ್ಕೂ ಯಶಸ್ಸು ಬೇಕು ಎಂಬ ಹಂಬಲ ಬೇಡ.
ತುಲಾ ರಾಶಿ; ನಿಮ್ಮಿಂದ ಉಪಕಾರ ಪಡೆದವರೇ ನಿಮಗೆ ವಂಚಿಸುವ ಸಾಧ್ಯತೆ ಇದೆ. ನೀವು ಆಯ್ಕೆ ಮಾಡಿಕೊಳ್ಳುವ ಕೆಲಸವೇ ನಿಮ್ಮ ಭವಿಷ್ಯಕ್ಕೆ ಮಾರ್ಗವನ್ನು ತೋರಿಸುವುದು. ಉದ್ಯೋಗದಲ್ಲಿ ಉನ್ನತ ಸ್ಥಾನವನ್ನು ಪಡೆಯುವ ಅವಕಾಶಗಳು ಲಭ್ಯವಾಗುವುವು. ಆಪ್ತರ ಸಹಾಯದಿಂದ ನಿಮಗೆ ಉದ್ಯೋಗವು ಸಿಗಬಹುದು. ಮಾತನ್ನು ಉಳಿಸಿಕೊಳ್ಳುವುದು ನಿಮಗೆ ಕಷ್ಟವಾದೀತು. ನಿಮ್ಮ ಇಂದಿನ ಕಾರ್ಯಕ್ಕೆ ಹಿರಿಯರ ಒಪ್ಪಿಗೆ ಪಡೆದು ಮುಂದುವರಿಯುವುದು ಅವಶ್ಯಕ. ಭವಿಷ್ಯದ ಕಲ್ಪನೆಯನ್ನು ಕುಟುಂಬದವರ ಜೊತೆ ಹಂಚಿಕೊಳ್ಳುವಿರಿ. ನಿಮ್ಮವರ ಮೇಲೆ ಅನುಮಾನವು ದೂರವಾಗಲು ಕಾರಣವಾಗಬಹುದು. ನಿಮ್ಮ ಹೇಳಿಕೆಗಳು ಸ್ಪಷ್ಟವಾಗಿರಲಿ. ಮಾಡಿದ್ದು ತಪ್ಪು ಎಂದು ಗೊತ್ತಿದ್ದರೂ ಪಶ್ಚಾತ್ತಾಪ ಪಡುವುದು ಬೇಡ. ನಿಮ್ಮದಲ್ಲದ ತಪ್ಪನ್ನೂ ನೀವು ಒಪ್ಪಿಕೊಂಡು ಕಲಹವಾಗುವುದನ್ನು ನಿಲ್ಲಿಸುವಿರಿ. ಮಕ್ಕಳ ವಿವಾಹಕ್ಕಾಗಿ ಓಡಾಡುವಿರಿ. ಸರ್ಕಾರಕ್ಕೆ ಸಲ್ಲಿಸಬೇಕಾದ ದಾಖಲೆಗಳನ್ನು ಸಲ್ಲಿಸಿರಿ. ಮನೋವಿಕಾರವನ್ನು ಕಡಿಮೆ ಮಾಡಿಕೊಳ್ಳಿ.
ವೃಶ್ಚಿಕ ರಾಶಿ: ಮಕ್ಕಳಿಗಾಗಿ ಪಟ್ಟಶ್ರಮವು ಇಂದು ಸಾರ್ಥಕ ಎನಿಸಬಹುದು. ಮನೆಯ ಸಂತೋಷದ ವಾತಾವರಣವು ಪುಟ್ಟ ಕಾರಣಕ್ಕೆ ಹಾಳಾಗಬಹುದು. ತನಗೆ ಬೇಕಾದುದನ್ನು ಪಡೆಯುವ ಆತುರತೆ ಇರಲಿದೆ. ಸ್ನೇಹಿತರಿಂದ ನಿಮಗೆ ಉಡುಗೊರೆ ಸಿಗಬಹುದು. ಸುಖಕ್ಕಾಗಿ ಕಷ್ಟಪಡಬೇಕಿಲ್ಲ. ಜಾಣ್ಮೆಯಿಂದ ಕಾರ್ಯವನ್ನು ಸಾಧಿಸಬಹುದು. ಉದ್ಯೋಗದಲ್ಲಿ ಅಸಹಾಯಕರಾಗಿ ಕೆಲಸವನ್ನು ಪೂರ್ಣಮಾಡುವಿರಿ. ಅವಕಾಶಗಳು ಪಡೆಯಲು ತಂತ್ರವನ್ನು ಹೂಡುವಿರಿ. ಮಾತಿನಲ್ಲಿ ಸತ್ಯತೆ ಇದ್ದರೂ ಸ್ಪಷ್ಟತೆ ಇರಲಿ. ಉದ್ಯೋಗದ ನಿಮಿತ್ತ ದೂರ ಹೋದವರಿಗೆ ತೊಂದರೆ ಆಗಬಹುದು. ನಿಮಗೆ ಬೇಕಾದ ವಸ್ತುವು ಯಾರಿಂದಲಾದರೂ ಸಿಗಬಹುದು. ಇಂದು ನಿಮಗೆ ಸಿಕ್ಕಿದ್ದರಲ್ಲಿ ಸಂತೋಷಿಸಿ. ಅಧಿಕಾರಿಗಳ ಕರುಣೆಯ ಕಾರಣ ಆಪತ್ತಿನಿಂದ ಹೊರಬರುವಿರಿ. ಅಪರಿಚರಿಂದ ಮೋಸ ಹೋಗುವ ಸಾಧ್ಯತೆ ಇದೆ. ನಿಮ್ಮ ಮೆಚ್ಚುಗೆಯಿಂದ ಅಪರಿಚಿತರಿಗೆ ಖುಷಿಯಾಗಬಹುದು. ಹೊಸ ವಸ್ತುಗಳ ಬಗ್ಗೆ ಅಸೆ ಬರುವುದು. ನಿಧಾನವಾಗಿ ವರ್ಧಿಸುತ್ತಿರುವ ಆದಾಯದಿಂದ ನಿಮ್ಮ ಆರ್ಥಿಕ ಪರಿಸ್ಥಿತಿಯು ಸುಧಾರಿಸುವುದು.
ಧನು ರಾಶಿ: ಸಣ್ಣದಾದರೂ ಸ್ವಂತ ಉದ್ಯೋಗವಿರಬೇಕು ಎನ್ನುವ ಧ್ಯೇಯ ನಿಮ್ಮದು. ನೀವು ಅನಿರೀಕ್ಷಿತವಾಗಿ ಎದುರಾದ ಪರಿಸ್ಥಿತಿಯನ್ನು ನಿಭಾಯಿಸುವ ವಿಧಾನವನ್ನು ಕಲಿಯುವುದು ಯೋಗ್ಯ. ಕೋಪವನ್ನು ಬಹಳ ಶ್ರಮದಿಂದ ನಿಯಂತ್ರಣ ಮಾಡಿಕೊಳ್ಳುವಿರಿ. ನಿಮ್ಮ ವಿದ್ಯಾಭ್ಯಾಸವು ಪ್ರಗತಿಯತ್ತ ಸಾಗುವುದು. ಹಣಕಾಸಿನ ವಿಚಾರದಲ್ಲಿ ವಿಳಂಬವಾದರೂ ತಿಂದರೆ ಇಲ್ಲ. ಸ್ನೇಹಿತನಿಗಾಗಿ ಸಾಲಮಾಡಬೇಕಾದೀತು. ಸರಿಯಾಗಿರಲಿ. ಮೋಸ ಹೋಗಬೇಕಾದೀತು. ನಿಮಗೆ ಇಂದು ನಿಮ್ಮ ಸಹೋದ್ಯೋಗಿಗಳ ವರ್ತನೆಯಲ್ಲಿ ಅನುಮಾನ ಕಾಣಬಹುದು. ಅವರಿಂದ ದೂರವಿರುವುದು ಉತ್ತಮ. ನಿಮ್ಮ ಆದಾಯದ ಮೂಲವು ಹೊರಗಿನಿಂದ ಬರುವುದಾಗಿದೆ. ಹಾಗಾಗಿ ಹಣಕ್ಕಾಗಿ ತಲೆ ಕೆಡಸಿಕೊಳ್ಳುವುದಿಲ್ಲ. ಬೇಕಾಗಿದ್ದನ್ನು ಪಡೆಯುವಿರಿ. ಸೇವಾ ಮನೋಭಾವವನ್ನು ಇಟ್ಟುಕೊಳ್ಳುವಿರಿ. ನಿಮ್ಮ ಕಷ್ಟಕ್ಕೆ ಬಂದವರು ನಿಮ್ಮ ಆಪ್ತರಾಗಲಿದ್ದಾರೆ. ಆಮದು ವ್ಯವಹಾರದಲ್ಲಿ ತಡೆಯಾಗಬಹುದು. ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಪ್ರಯತ್ನವು ನಡೆಯುವುದು.
ಮಕರ ರಾಶಿ: ದುರಸ್ತಿ ಕಾರ್ಯವನ್ನು ಮಾಡುವವರಿಗೆ ಈ ದಿನ ಒತ್ತಡವಿರುವುದು. ಇಂದು ನೀವು ಅತಿಯಾದ ಹಿಂಸೆಯನ್ನು ಅನುಭವಿಸಬೇಕಾದ ಸ್ಥಿತಿಯು ಬರಬಹುದು. ಹೊಸ ಗೆಳೆತನ ನಿಮಗೆ ಬಹಳ ಇಷ್ಟವಾಗುವುದು. ವಿವಾದದಲ್ಲಿ ಜಯವಿದೆ ಎಂದು ಎಲ್ಲರ ಬಳಿಯೂ ವಾದಕ್ಕೆ ಹೋಗುವುದು ಬೇಡ. ಆಕಸ್ಮಿಕ ಧನಲಾಭವು ನಿಮಗೆ ಸಂತೋಷವನ್ನು ಕೊಡಲಿದೆ. ಹಿರಿಯರನ್ನು ಗೌರವಿಸುವಿರಿ. ನಿಮ್ಮ ಉಪಕಾರಕ್ಕೆ ಪ್ರತ್ಯುಪಕಾರವನ್ನು ಮಾಡುವಿರಿ. ನಿಮ್ಮವರ ಬಳಿ ಸಹಾಯವನ್ನು ಕೇಳುವಿರಿ. ಇಂದು ನಿದ್ರೆಯು ಬಾರದೇ ಮನಸ್ಸು ಸರಿ ಇರದು. ಅನವಶ್ಯಕ ಮಾತುಗಳಿಂದ ವಿವಾದವು ಸೃಷ್ಟಿಯಾಗುವುದು. ಕುಟುಂಬದ ಕಲಹವು ನಿಮಗೆ ಹಲವು ವಿಚಾರಗಳನ್ನು ತಿಳಿಸೀತು. ಸಹೋದರನಿಂದ ಸಹಕಾರವು ನಿಮಗೆ ಸಿಗಬಹುದು. ಸ್ನೇಹಿತರ ವರ್ಗವು ಬೆಳೆಯಬಹುದು. ನಿಮ್ಮ ವಿಷಯವನ್ನು ಯಾರ ಬಳಿಯೂ ಹೇಳುವುದು ಬೇಡ. ಹೆಚ್ಚಿನ ಆದಾಯದಿಂದ ದುರಭ್ಯಾಸವು ಹೆಚ್ಚಾಗಬಹುದು. ಉದ್ಯೋಗದಲ್ಲಿ ಅಧಿಕ ವೇತನದ ನಿರೀಕ್ಷೆ ಇರುವುದು. ಕೆಲವನ್ನು ನೀವು ಅನಗತ್ಯವಾಗಿ ತೆಗೆದುಕೊಳ್ಳುವಿರಿ.
ಕುಂಭ ರಾಶಿ: ಇನ್ನೊಬ್ಬರಿಗೆ ಹೇಳುವಾಗ ನೀವು ಅದನ್ನು ಆಚರಿಸಬೇಕಾಗಬಹುದು. ಇಲ್ಲವಾದರೆ ನಿಮ್ಮ ಮೇಲೆ ಪ್ರಶ್ನೆಗಳು ಬರಬಹುದು. ನಿಮ್ಮ ದುರಭ್ಯಾಸದಿಂದ ಇಂದಿನ ಸಮಯವನ್ನು ನಷ್ಟಮಾಡಿಕೊಳ್ಳುವಿರಿ. ನಿಮ್ಮನ್ನು ಸರಿ ದಾರಿಗೆ ತರುವ ಪ್ರಯತ್ನದಲ್ಲಿ ಮನೆಯವರು ಇರುವರು. ನಿಮ್ಮ ಆಲೋಚನೆಗಳಿಂದ ನಿಮ್ಮ ಸ್ಥಾನವೇ ಬದಲಾಗಬಹುದು. ಬಾಂಧವ್ಯವು ಗಟ್ಟಿಯಾಗಬಹುದು. ಸಂಗಾತಿಯಿಂದ ಉತ್ತಮ ಸಲಹೆಯನ್ನು ಪಡೆಯುವಿರಿ. ನಿಮ್ಮ ಕೆಲಸಗಳನ್ನು ಅರ್ಧಕ್ಕೆ ನಿಲ್ಲಿಸಬೇಕಾಗಬಹುದು. ಕಾನೂನಿನ ಸಮರದಲ್ಲಿ ನಿಮಗೆ ಜಯವಾಗಬಹುದು. ಒತ್ತಡದಿಂದ ಹೊರಬಂದ ಕಾರಣ ನಿರಾಳವೆನಿಸಬಹುದು. ಸಮಾಜಮುಖೀ ಕಾರ್ಯದಲ್ಲಿ ತೊಡಗಿಕೊಳ್ಳುವಿರಿ. ಆರ್ಥಿಕ ತೊಂದರೆಯನ್ನು ನಿಭಾಯಿಸುವ ಕಲೆ ಗೊತ್ತಾಗಲಿದೆ. ನಿಮ್ಮ ಸಮಯವನ್ನು ಸದುಪಯೋಗ ಮಾಡಿಕೊಳ್ಳಲು ಪ್ರಯತ್ನಿಸಬಹುದು. ಸಾಮಾಜಿಕ ಕಾರ್ಯದಲ್ಲಿ ಉತ್ಸಾಹದಿಂದ ಇರುವಿರಿ. ನಿಮ್ಮ ಬದುಕಿನ ಬದಲಾವಣೆಯನ್ನು ಅನಿವಾರ್ಯವಾಗಿ ಮಾಡಿಕೊಳ್ಳಬೇಕಾಗಬಹುದು.
ಮೀನ ರಾಶಿ: ಧಾರ್ಮಿಕ ನಂಬಿಕೆಗಳು ನಿಮಗೆ ಸತ್ಯವೆನಿಸಿ, ಶ್ರದ್ಧೆಯು ಹೆಚ್ಚಾಗುವುದು. ಇಂದು ನಿಮ್ಮ ಸಲ್ಲದ ಯೋಚನೆಗಳಿಂದ ಮನಸ್ಸು ಹಾಳಾಗುವುದು. ಇತರರು ನಿಮ್ಮ ಕುರಿತು ಬೇಡದ ಮಾತುಗಳನ್ನು ಆಡುವ ಸಾಧ್ಯತೆಯೂ ಹೆಚ್ಚು. ಹಣವು ಬಂದ ಹಾಗೇ ಹೋಗುವುದು. ನೌಕರರಿಂದ ನಿಮಗೆ ತೊಂದರೆಯಾಗಬಹುದು. ವಿದ್ಯಾರ್ಥಿಗಳಿಗೆ ಯೋಗ್ಯವಾದ ಮಾರ್ಗದರ್ಶನ ಬೇಕಾಗುವುದು. ಸಂಗಾತಿಯನ್ನು ಕಡೆಗಣಿಸಿದ್ದಕ್ಕೆ ಬೇಸರ ಪಡಬೇಕಾದೀತು. ತಾಯಿಯ ಮಾತನ್ನು ಉಳಿಸಿಕೊಳ್ಳಲು ಪ್ರಯತ್ನಿಸುವಿರಿ. ತಾಯಿಯ ಕಡೆಯವರು ನಿಮಗೆ ಸಹಾಯ ಮಾಡುವರು. ಸುಖದಲ್ಲಿ ಇಂದು ಮಾಡಬೇಕಾದ ಕೆಲಸವನ್ನು ಮರೆಯುವಿರಿ. ಕಂಟಕದಿಂದ ನೀವು ಮುಕ್ತರಾಗುವಿರಿ. ಯಾವುದನ್ನೇ ಆರಂಭದಿಂದಲೇ ಅದು ಬರಬೇಕು. ನಿಮ್ಮ ಚಿಂತೆಯೂ ದೂರಾಗಬಹುದು. ಭೂಮಿಯನ್ನು ಖರೀದಿಸುವ ಆಲೋಚನೆ ಇರಲಿದೆ. ನಿಮ್ಮನ್ನು ಕೆಲವರು ಅನಾದರ ಮಾಡಿದಂತೆ ಕಾಣಿಸೀತು. ನೀವು ವರ್ಗಾವಣೆಗೆ ಒತ್ತಡವನ್ನು ತರುವಿರಿ.
ಲೋಹಿತ ಹೆಬ್ಬಾರ್ – 8762924271 (what’s app only)