ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ದಶಮೀ, ನಿತ್ಯನಕ್ಷತ್ರ: ಶ್ರಾವಣ, ಯೋಗ: ಧೃತಿ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 24 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 13 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:22 ರಿಂದ 10:50, ಯಮಘಂಡ ಕಾಲ ಮಧ್ಯಾಹ್ನ 01:48ರಿಂದ 03:16ರವರೆಗೆ, ಗುಳಿಕ ಕಾಲ ಬೆಳಗ್ಗೆ 06:25 ರಿಂದ 07:53 ರವರೆಗೆ.
ಮೇಷ ರಾಶಿ : ನಿಮ್ಮ ಜೀವನದ ಅತ್ಯಂತ ನಿರ್ಣಾಯಕ ಕ್ಷಣವನ್ನು ಎದುರಿಸುವಾಗ ಜಾಗರೂಕರಾಗಿರಿ. ಕಾನೂನಿನ ವಿಚಾರದಲ್ಲಿ ನಿಮಗೆ ಸಕಾರಾತ್ಮಕ ಬೆಳವಣಿಗೆಯು ಇರಲಿದೆ. ಮಕ್ಕಳ ಜೊತೆ ವಾಗ್ವಾದ ಮಾಡುವ ಸಂದರ್ಭವು ಬರಬಹುದು. ಪ್ರಾರಬ್ಧಕರ್ಮಗಳನ್ನು ಅನುಭವಿಸಿ ತೀರುವುದೇ ದಾರಿ. ಆಗಿಹೋದ ಘಟನೆಗಳು ನಿಮ್ಮ ಸ್ಮರಣೆಗೆ ಬರಲಿದ್ದು ಅದನ್ನು ಮರೆಯುವ ಪ್ರಯತ್ನ ಮಾಡಿದರೂ ಅಸಾಧ್ಯ ಎನಿಸಬಹುದು. ಮನಸ್ಸನ್ನು ಒಂದೇ ವಿಚಾರದಲ್ಲಿ ಮನಸ್ಸನ್ನು ನಿಲ್ಲಿಸಲು ಪ್ರಯತ್ನಿಸುವಿರಿ. ವಾಹನ ಸಂಚಾರದಿಂದ ನಿಮಗೆ ನೆಮ್ಮದಿ. ಭವಿಷ್ಯದ ಬಗ್ಗೆ ಹತ್ತಾರು ಕನಸುಗಳು ಇರಲಿವೆ. ವಿದ್ಯಾರ್ಥಿಗಳು ಅಧ್ಯಯನಕ್ಕೆ ತೊಡಗುವುದು ಕಷ್ಟವಾದೀತು. ಸಹೋದ್ಯೋಗಿಗಳ ವರ್ತನೆಯು ಇಷ್ಟವಾಗದೇ ಸಿಟ್ಟಾಗುವಿರಿ. ಹಲವಾರು ವರ್ಷದ ಕನಸಿಗೆ ಗರಿಬಂದಂತೆ ಆಗಬಹುದು.
ವೃಷಭ ರಾಶಿ : ವಿದ್ಯಾಭ್ಯಾಸವನ್ನು ಮುಂದುವರಿಸುವುದು ಕಷ್ಟವಾಗಬಹುದು. ನಿಮ್ಮ ಉದಾರ ಮತ್ತು ಬೆಂಬಲದ ಸ್ವಭಾವದಿಂದ, ಜನರು ನಿಮ್ಮ ಬಳಿ ಬಂದು ನಿಮ್ಮ ಕೆಲಸದಲ್ಲಿ ನೆರವಾಗುತ್ತಾರೆ. ನಿಮ್ಮ ತೊಂದರೆಗಳನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳುವಿರಿ. ನಿಮ್ಮ ವಿರೋಧಿಗಳು ಸಹಜವಾಗಿ ಕಡಿಮೆಯಾಗುವರು. ನೀವು ನಿಯೋಜಿತ ಕಾರ್ಯಗಳನ್ನು ಒಂದೊಂದಾಗಿ ಮಾಡಿ ಮುಗಿಸುವುದು ಉತ್ತಮ. ದಾಂಪತ್ಯದಲ್ಲಿ ಉಂಟಾದ ಕಲಹವು ಮಧ್ಯಸ್ತಿಕೆಯಿಂದ ಪರಿಹಾರವಾಗುವುದು. ಮಾಡಿದ ತಪ್ಪನ್ನೇ ಮತ್ತೆ ಮಾಡಿ ಮನೆಯಲ್ಲಿ ಬೈಗುಳವನ್ನು ತಿನ್ನುವಿರಿ. ಅಪರಿಚಿತರ ಜೊತೆ ಅಂತರದಿಂದ ಮಾತನಾಡಿ. ಕಲಿತ ವಿದ್ಯೆಯನ್ನು ಎಲ್ಲಿಯಾದರೂ ಬಳಸುವುದು ಸೂಕ್ತ. ನಿಮ್ಮದಾದ ವಾಹನವಿಲ್ಲದೇ ನೀವು ಬೇಸರಿಸುವಿರಿ. ದೂರದ ಊರಿಗೆ ಪ್ರವಾಸ ಹೋಗುವ ಇಚ್ಛೆ ಇದ್ದರೂ ಅದು ಆಗದು. ನಿಮ್ಮ ಬಗ್ಗೆ ತಪ್ಪು ತಿಳಿವಳಿಕೆಯು ಬರಬಹುದು. ಪುಣ್ಯಕ್ಷೇತ್ರದ ದರ್ಶನವನ್ನು ಮಾಡಿ. ಮಿತವಾದ ಮಾತು ನಿಮಗೆ ಆಗದು.
ಮಿಥುನ ರಾಶಿ : ದುರಭ್ಯಾಸವು ಜಗಜ್ಜಾಹಿರಾಗಬಹುದು. ನಿಮ್ಮ ಈ ದಿನ ಚೆನ್ನಾಗಿ ಪ್ರಾರಂಭವಾಗಿರಲಿದ್ದು, ನಿಮ್ಮ ಸಾಮರ್ಥ್ಯಗಳಿಂದ ಪ್ರತಿಯೊಬ್ಬರನ್ನೂ ಅಚ್ಚರಿಗೊಳಿಸುವಿರಿ. ನಿಮ್ಮ ಆದಾಯದ ಮೂಲವನ್ನು ಎಲ್ಲರ ಜೊತೆ ಹಂಚಿಕೊಳ್ಳುವುದು ಬೇಡ. ಇದರಿಂದ ನಿಮ್ಮ ಆದಾಯಕ್ಕೆ ತೊಂದರೆ ಆಗುವ ಸಾಧ್ಯತೆ ಇದೆ. ನಿಮ್ಮ ತಮಾಷೆಗೂ ಒಂದು ಮಿತಿ ಇರಲಿ. ಉದ್ಯೋಗದ ಆರಂಭದ ದಿನಗಳು ನಿಮಗೆ ಕಷ್ಟ ಎಂದು ಅನ್ನಿಸಬಹುದು. ಸಹೋದ್ಯೋಗಿಗಳ ಸಹಾಯವನ್ನು ನೀವು ಪಡೆಯಬೇಕಾಗಬಹುದು. ನಿಮ್ಮ ಮಕ್ಕಳ ವರ್ತನೆಯಲ್ಲಿ ಬದಲಾವಣೆ ಆಗಲಿದೆ. ನಿಮ್ಮ ಜೀವನ ಸಂಗಾತಿಯ ಆರೋಗ್ಯವು ಹದ ತಪ್ಪಬಹುದು. ಮಾಡಬೇಕಾದ ಕೆಲಸಗಳನ್ನು ಆಸಕ್ತಿಯಿಂದ ಮಾಡುವಿರಿ. ನಿಮ್ಮನ್ನು ಭೂಮಿಯ ಖರೀದಿಗೆ ಒತ್ತಾಯಿಸಬಹುದು. ಉದ್ಯಮದಲ್ಲಿ ಕ್ರಿಯಾಶೀಲತೆಯನ್ನು ಬಯಸುವಿರಿ. ನೂತನ ವಸ್ತುಗಳಿಂದ ಸಂತೋಷವು ಸಿಗುವುದು.
ಕರ್ಕಾಟಕ ರಾಶಿ : ಕರ್ತವ್ಯದಲ್ಲಿ ಲೋಪವಾಗುವ ಸಾಧ್ಯತೆ ಹೆಚ್ಚು. ನಿಮ್ಮ ಸುತ್ತಲಿನ ಮಾತುಕತೆಗಳನ್ನು ಗಮನಿಸುತ್ತಿರಿ. ನಿಮಗೆ ಇದಮಿತ್ಥಂ ಎಂದು ಸರಿಯಾದ ನಿರ್ಧಾರವನ್ನು ತೆಗದುಕೊಳ್ಳಲು ನಿಮಗೆ ಆಗದು. ಒಂದು ಕಾರ್ಯಕ್ಕೆ ಹತ್ತಾರು ಆಲೋಚನೆಗಳು ಒಟ್ಟಿಗೇ ಬರುವ ಕಾರಣ ಹೀಗಾಗುವುದು. ದೈವಲೀಲೆಯ ಬಗ್ಗೆ ನಿಮಗೆ ನಂಬಿಕೆ ಹೆಚ್ಚಿರುವುದು. ಪರರಿಗೆ ಸಂತೋಷವನ್ನು ಕೊಡುವುದು ಪೂಜೆಯಷ್ಟೇ ಫಲ. ಹಠದ ಸ್ವಭಾವವನ್ನು ಮಕ್ಕಳೂ ಮುಂದುವರಿಸಬಹುದು. ಅವರೆದುರು ನಕಾರಾತ್ಮಕ ಗುಣಗಳು ಬೇಡ. ತಂದೆ ಮತ್ತು ಮಕ್ಕಳ ನಡುವೆ ಶೀತಲ ಸಮರವು ನಡೆಯುವುದು. ತಾಳ್ಮೆಯ ಮಟ್ಟವು ಮಿತಿಮೀರುವ ಸಂದರ್ಭವು ಬರಬಹುದು. ಹಿತವಾದ ಆಹಾರವನ್ನು ಸ್ವೀಕರಿಸಿ. ಹಣಕಾಸಿನ ವ್ಯವಹಾರದಲ್ಲಿ ವೈಮನಸ್ಯ ಉಂಟಾಗುವುದು. ನಿಮ್ಮ ಮೌನವು ಏನನ್ನೋ ಹೇಳುವುದು. ಸಮಾರಂಭಗಳಲ್ಲಿ ಬಂಧುಗಳು ನಿಮ್ಮನ್ನು ಭೇಟಿಯಾಗುವರು. ನಿಮ್ಮ ವಿರೋಧಿಗಳಗೆ ಮಾತಿನಿಂದ ಉತ್ತರಿಸಿ ಉಪಯೋಗವಿಲ್ಲ.
ಸಿಂಹ ರಾಶಿ : ನೀವು ಮಾಡಿದ ಉಪಕಾರವನ್ನು ಹೇಳಿಕೊಳ್ಳುತ್ತ ಇರುವುದು ಬೇಡ. ಪರಿಮಳವಿರುವ ಹೂವನ್ನೂ ಯಾರೂ ಪರಿಚಯಿಸಬೇಕಿಲ್ಲ. ನೀವು ಪುರಸ್ಕಾರಗಳ ಕುರಿತು ಆಲೋಚನೆ ಮಾಡದೇ ಸತತವಾಗಿ ಕಠಿಣ ಪರಿಶ್ರಮಪಡುವಿರಿ. ಸಾಮಾಜಿಕ ಕಾರ್ಯದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಲು ಪ್ರಯತ್ನಿಸುವಿರಿ. ನಿಮ್ಮ ಉದ್ಯಮದ ವಿಸ್ತರಣೆಗೆ ಕೆಲವು ಕ್ರಮವನ್ನು ಕೈಗೊಳ್ಳುವಿರಿ. ಒಂದೇ ವಿಷಯದಲ್ಲಿ ನಿಮ್ಮ ಗಮನವು ಅಧಿಕವಾಗಿ ಇರಲಿದೆ. ಕೆಲವು ಘಟನೆಗಳು ಕೌಟುಂಬಿಕ ಕಾಳಜಿಗಳ ಹೆಚ್ಚಾಗುವಂತೆ ಮಾಡುವುದು. ಎಷ್ಟೇ ಚತುರ ಮತಿಗಳಾದರೂ ಎಡವುವ ಸಾಧ್ಯತೆ ಇದೆ. ನಿಧಾನವಾದರೂ ಸರಿಯಾದುದನ್ನು ಆಯ್ಕೆ ಮಾಡಿಕೊಳ್ಳಿ. ಒಂದೇ ಶ್ರಮಕ್ಕೆ ಎರಡು ಫಲವನ್ನು ನೀವು ಪಡೆಯಲು ಬಯಸುವಿರಿ. ಉದ್ಯೋಗದ ಸ್ಥಳದಲ್ಲಿ ನಿಮ್ಮ ಮಾತು ಸಂತೋಷವನ್ನು ಇಮ್ಮಡಿಗೊಳಿಸಬಹುದು. ವಿದ್ಯಾರ್ಥಿಗಳಿಗೆ ನಿಮ್ಮಿಂದ ಮಾರ್ಗದರ್ಶನ ಸಿಕ್ಕೀತು. ಪ್ರಭಾವಿ ವ್ಯಕ್ತಿತ್ವವು ನಿಮಗೆ ಅನುಸರಣೀಯ ಆಗಬಹುದು. ಮಕ್ಕಳ ಪ್ರೀತಿಯನ್ನು ಪಡೆದುಕೊಳ್ಳುವಿರಿ. ಪ್ರೀತಿಪಾತ್ರರ ಜೊತೆ ಸಣ್ಣ ಕಲಹವಾಗಬಹುದು.
ಕನ್ಯಾ ರಾಶಿ : ಅತಿಥಿಗಳ ಆಗಮನದಿಂದ ಮನೆಯಲ್ಲಿ ಹರ್ಷ. ನಿಮ್ಮ ಸುತ್ತಲಿನ ಎಲ್ಲರೂ ನಿಮ್ಮ ಆಲೋಚನೆಗಳಿಗೆ ಪ್ರಶಂಸಿಸುವರು. ಯಾರನ್ನೂ ಪೂರ್ತಿಯಾಗಿ ತಿಳಿಯದೇ ಒಳಗೆ ತೆಗೆದುಕೊಳ್ಳುವುದು ಬೇಡ. ಅಪರಿಚಿತರು ಕೊಟ್ಟ ವಸ್ತುಗಳಿಂದ ನಿಮಗೆ ತೊಂದರೆ ಸಂಭವಿಸಬಹುದು. ಯಾರನ್ನೋ ಮೆಚ್ಚಿಸಿ ನಿಮ್ಮ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ವೃತ್ತಿಕ್ಷೇತ್ರದಲ್ಲಿ ನಿಮ್ಮ ಜ್ಞಾನವನ್ನು ಪ್ರದರ್ಶಿಸುವ ಮೂಲಕ ನಿಮ್ಮ ಸಾಮರ್ಥ್ಯದ ಪರಿಚಯ ಆಗುವುದು. ಬಹಳ ಕಾಲದ ಹಿಂದೇ ಚಿಂತಿಸಿರುವ ಕೆಲಸವು ಇಂದು ಆರಂಭಿಸಲು ಚಿಂತಿಸುವಿರಿ. ಕಲಾಕ್ಷೇತ್ರದ ಜನರು ತಮ್ಮ ಜೀವನವನ್ನು ಒಂದಲ್ಲ ಒಂದು ರೀತಿಯಲ್ಲಿ ಸಂಪತ್ತಿನಿಂದ ತುಂಬಿಕೊಳ್ಳುವರು. ಒಂದಿಲ್ಲೊಂದು ಅವಕಾಶಗಳು ನಿಮ್ಮ ಪಾಲಿಗೆ ಸಿಗಲಿದೆ. ಮುಂದಾಳುತ್ವವನ್ನು ವಹಿಸಬೇಕಾಗಬಹುದು. ಯಾವ ವಿವರಗಳನ್ನೂ ಕೊಡಬೇಡಿ. ಅದನ್ನು ಹೊಂದಿಸುವುದು ಕಷ್ಟವಾದೀತು. ವಾಗ್ವಾದವಾಗುವುದೆಂಬ ಭಯವೂ ನಿಮ್ಮನ್ನು ಕಾಡುವುದು.
ತುಲಾ ರಾಶಿ : ಇಂದಿನ ನಿಮ್ಮ ಕಾರ್ಯಗಳಿಗೆ ಜೊತೆಗಾರರು ಸಿಗಬಹುದು. ಇಬ್ಬರೂ ಸೇರಿ ಇಬ್ಬರ ಕಾರ್ಯವನ್ನು ಕಛೇರಿಯಲ್ಲಿ ಮಾಡಿ ಮುಗಿಸುವಿರಿ. ವಿಶ್ವಾಸ ನಿಮಗೆ ಸುಲಭವಾಗಿ ಗೊತ್ತಿಲ್ಲದ ದಾರಿಗಳಲ್ಲಿ ಸಂಚರಿಸಲು ನೆರವಾಗುತ್ತದೆ. ಭೂಮಿಯ ವ್ಯವಹಾರಸ್ಥರು ನಷ್ಟವನ್ನು ಅನುಭವಿಸಬೇಕಾದೀತು. ದುಸ್ಸಾಧ್ಯ ಎನಿಸಿದ್ದನ್ನು ಬಿಟ್ಟುಬಿಡಿವುದು ಒಳ್ಳೆಯದು. ಚಿಂತೆಗಳೇ ಇರುವ ಮನಸ್ಸನ್ನು ದೇವರ ಭಕ್ತಿಗೆ ಮೀಸಲಿಟ್ಟು ಸಮಾಧಾನಿಗಳಾಗಿ. ನೀವು ತೆಗೆದುಕೊಂಡ ದೃಢ ನಿರ್ಧಾರವು ನಿಮ್ಮ ಮಾನಸಿಕ ಧಾರ್ಷ್ಟ್ಯವನ್ನು ತೋರಿಸುವುದು. ಸಂಗಾತಿಯನ್ನು ನೀವು ಭೇಟಿಯಾಗಲು ಹೋಗುವಿರಿ. ಅವರ ಮೇಲೆ ಪೋಷಕ ಕಣ್ಣು ಇರಬೇಕಾದೀತು. ಅಧ್ಯಾತ್ಮದ ವಿಚಾರಗಳು ನಿಮ್ಮ ಮನಸ್ಸಿಗೆ ಹಿತ ಎನಿಸಬಹುದು. ಸುಮ್ಮನೇ ಕುಳಿತು ಸಮಯವನ್ನು ವ್ಯರ್ಥಮಾಡಬೇಡಿ. ಆರ್ಥಿಕ ವಿಚಾರಕ್ಕೆ ಯಾರಾದರೂ ಮಧ್ಯ ಪ್ರವೇಶಿಸುವುದರಿಂದ ಸಿಟ್ಟಾಗುವಿರಿ.
ವೃಶ್ಚಿಕ ರಾಶಿ : ಯಶಸ್ಸಿಗಾಗಿಯೇ ಮಾಡುವ ಕಾರ್ಯದಿಂದ ಅಪಯಶಸ್ಸು ಸಿಗುವುದು. ನೀವು ಇಂದು ಯಾವುದೇ ಅವಕಾಶವನ್ನೂ ಬಿಡಬೇಡಿ. ಇಂದು ನಿಮ್ಮ ಆರ್ಥಿಕತೆಯ ಮಟ್ಟವು ಗೊತ್ತಾಗಲಿದೆ. ಬರುವ ಹಣವನ್ನು ನಿಮ್ಮ ಭವಿಷ್ಯದ ಸಂಪತ್ತಾಗಿ ಕೂಡಿ ಇಡುವಿರಿ. ಸಂಘ, ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಉತ್ತಮ ಅಭಿವೃದ್ಧಿಯನ್ನು ಪಡೆಯುವರು. ನಿಮ್ಮ ಮಾತುಗಳ ಮೇಲೆ ಹೆಚ್ಚು ನಿಯಂತ್ರಣದ ಅಗತ್ಯವಿದೆ. ಕಳ್ಳರಿ ಭೀತಿಯು ನಿಮಗಾಗಬಹುದು. ಉತ್ಸಾಹದಿಂದ ನೀವು ಕಾರ್ಯದಲ್ಲಿ ಪ್ರವೃತ್ತರಾಗುವಿರಿ. ಸಂಗಾತಿಯ ಜೊತೆ ಹೆಚ್ಚಿನ ಸಮಯವನ್ನು ಕಳೆದರೂ ಮತ್ತಷ್ಟು ಬೇಕು ಎನಿಸಬಹುದು. ಕೆಲಸದ ನಿಮಿತ್ತ ಬೇರೆ ಊರಿಗೆ ತೆರಳುವಿರಿ. ತಂದೆಯ ಮಾತು ನಿಮಗೆ ಸರಿ ಕಾಣಿಸದೇ ಇರುವುದು. ಕೃಷಿ ಚಟುವಟಿಕೆಯಲ್ಲಿ ಹಿನ್ನಡೆಯಾಗಲಿದೆ. ಗೃಹನಿರ್ಮಾಣದ ದಾಖಲಾತಿಗೆ ನೀವು ಓಡಾಟ ಮಾಡಬೇಕಾಗುವುದು.
ಧನು ರಾಶಿ : ನೀವು ಮಾಡಿದ ತಪ್ಪಿಗೆ ಸಮರ್ಥನೆಯನ್ನು ಕೊಡುವಿರಿ. ಇತರರ ಕೆಂಗಣ್ಣಿಗೆ ಬೀಳಬಹುದು. ಇಂದು ನೀವು ಸಮಯವನ್ನು ಕಳೆಯಲು ಬೇರೆ ಬೇರೆ ದಾರಿಗಳನ್ನು ಹುಡುಕುವಿರಿ. ಒಂಟಿಯಾಗಿ ಇರುವುದು ನಿಮಗೆ ಕಷ್ಟವೆನಿಸುವುದು. ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವುದು ಹೆಚ್ಚು ಒಳ್ಳೆಯದು. ಹೊಸತನ್ನು ಕಲಿಯಬೇಕು ಎನ್ನುವ ಆಸೆಯು ಬೇಡವೆನಿಸಬಹುದು. ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನೀವು ಹಿಂದೇಟು ಹಾಕುವಿರಿ. ಅಪರಿಚಿತರಿಂದ ಭಯಗೊಳ್ಳುವ ಸಾಧ್ಯತೆ ಇದೆ. ಸ್ಥಿರಾಸ್ತಿಯನ್ನು ಪಡೆಯುವ ಮನಸ್ಸು ಇನ್ನೊಬ್ಬರಿಂದ ಪ್ರೇರಿತವಾಗಿ ಬರಬಹುದು. ಅನಿರೀಕ್ಷಿತವಾಗಿ ಆರೋಗ್ಯದಲ್ಲಿ ವ್ಯತ್ಯಾಸವು ಆಗಿದ್ದು ನೀವು ಇದರಿಂದ ವಿಚಲಿತಗೊಳ್ಳುವಿರಿ. ನಿಮಗೆ ಸಿಕ್ಕ ಸಂಪತ್ತನ್ನು ಸದುಪಯೋಗ ಮಾಡುವತ್ತ ಗಮನವಿರಲಿ. ಕುಟುಂಬದವರು ನಿಮ್ಮನ್ನು ಬಹಳ ಪ್ರೀತಿಸುವರು. ಹೊಸ ವಸ್ತುಗಳನ್ನು ಖರೀದಿಸುವಾಗ ವಂಚನೆಯಾಗುವುದು.
ಮಕರ ರಾಶಿ : ನಿಮಗೆ ಇಷ್ಟವಾಗದ ಕಾರ್ಯವನ್ನು ಎಷ್ಟೇ ಒತ್ತಾಯ ಮಾಡಿದರೂ ಮಾಡಲಾರಿರಿ. ನಿಮಗೆ ಇಂದು ದಣಿವಾಗುವ ಸಾಧ್ಯತೆ ಹೆಚ್ಚಿದೆ. ಮಕ್ಕಳ ವಿಚಾರದಲ್ಲಿ ನಿಮ್ಮ ಧೋರಣೆಯು ಬದಲಾಗುವುದು. ಮನೆಯಲ್ಲಿ ಯಾರ ಮೇಲೂ ಪಕ್ಷಪಾತ ಮಾಡುವುದು ಬೇಡ. ಕೆಲಸಕ್ಕಾಗಿ ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ. ಕಛೇರಿಯ ಕೆಲಸದಲ್ಲಿ ನೀವು ಹೆಚ್ಚು ಆಸ್ಥೆಯನ್ನು ತೋರಿಸುವಿರಿ. ನಿಮ್ಮ ಅನನುಕೂಲದ ಸ್ಥಿತಿಗೆ ದೈವವು ಯಾರದೋ ಮೂಲಕ ಸಹಾಯವನ್ನು ಮಾಡಿಸುವುದು. ನೀವು ನಿಮ್ಮ ಕೆಲಸವನ್ನು ನಿಷ್ಠೆಯಿಂದ ಮುಂದುವರಿದು ಉತ್ತಮ. ವ್ಯಾಪಾರದಲ್ಲಿ ನೀವು ಹೆಚ್ಚು ಲಾಭವನ್ನು ಗಳಿಸಲು ತಂತ್ರಗಳನ್ನು ರೂಪಿಸುವರಿ. ಬೇರೆಯವರು ನಿಮ್ಮ ಮೇಲೆ ಇಟ್ಟ ನಂಬಿಕೆಯು ನಿಮಗೇ ಅಚ್ಚರಿ ಆಗುವಂತೆ ಇರುವುದು. ಮಕ್ಕಳಿಂದ ಶುಭವಾರ್ತೆ ಇರಲಿದೆ. ಯಾರನ್ನೂ ಒತ್ತಾಯಿಸದೇ ಕೆಲಸವನ್ನು ಮಾಡಿಸಿಕೊಳ್ಳಿ. ಕೃಷಿಯಲ್ಲಿ ಲಾಭ ಗಳಿಸಬೇಕೆಂದು ನಾನಾ ಪ್ರಯತ್ನವನ್ನು ಮಾಡುವಿರಿ. ನಿಮ್ಮಿಂದ ಆಗದಿರುವುದನ್ನು ಅನ್ಯರು ಮಾಡಿ ತೋರಿಸಿ ಅಪಮಾನ ಮಾಡಬಹುದು.
ಕುಂಭ ರಾಶಿ : ಇಂದು ನೀವು ಅತಿಯಾದ ಒತ್ತಡವನ್ನು ತಂದುಕೊಳ್ಳುವ ಅಗತ್ಯ ಇಲ್ಲ. ನೀವು ನೆಪವೊಡ್ಡಿ ಯಾವುದೇ ಕಾರ್ಯದಲ್ಲಿ ತೊಡಗಲಾರಿರಿ. ಧಾರ್ಮಿಕ ಆಚರಣೆಗಳನ್ನು ಮಾಡುತ್ತಿದ್ದರೂ ಅದು ಕೃತಕದಂತೆ ಅನ್ನಿಸಬಹುದು. ಒಂದೇ ವಿಷಯವು ಅನೇಕ ಬಾರಿ ಕೇಳಿ ಹಿಂಸೆಯಾಗುವುದು. ಶೀತಲ ಸಂಘರ್ಷವು ಸ್ಫೋಟವಾಗಬಹುದು. ಹಳೆಯದನ್ನು ಮರೆತು ಹೊಸತನದಲ್ಲಿ ಮುನ್ನಡೆಯುವುದು ಉತ್ತಮ. ಹಗೆತನದಿಂದ ನಿಮಗೇ ತೊಂದರೆ. ಯಾರ ಮಾತನ್ನೂ ಕೇಳದೇ ಉದ್ಧಟತನ ತೋರುವುದು ಸರಿಯಾಗದು. ಆರ್ಥಿಕ ಅಭಿವೃದ್ದಿಗೆ ನಾನಾ ಯೋಚನೆಯನ್ನು ಮಾಡುವಿರಿ. ನಿಮ್ಮ ಸತ್ಯವನ್ನು ನಿಮ್ಮವರು ನಂಬುವುದು ಕಷ್ಟವಾದೀತು. ಆರೋಗ್ಯದಲ್ಲಿ ಆಗುವ ಸಣ್ಣ ಸಣ್ಣ ವ್ಯತ್ಯಾಸವು ನಿಮಗೆ ಕಿರಿಕಿರಿ ಆಗಬಹುದು. ಕಾರ್ಯಕ್ಷೇತ್ರದಲ್ಲಿ, ನೀವು ಬಯಸಿದ ಕೆಲಸವನ್ನು ಮಾಡುವಿರಿ.
ಮೀನ ರಾಶಿ : ನಿಮಗೆ ಇಂದು ವಿಶ್ರಾಂತಿಯನ್ನು ಪಡೆಯುವ ಕಾಲ. ಇಂದು ನೀವು ಅನಗತ್ಯ ಸನ್ನಿವೇಶಗಳಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸಗಳನ್ನು ಒಪ್ಪಿಕೊಳ್ಳಿ. ಕಾರ್ಯದ ಸ್ಥಳವನ್ನು ಬದಲಾಯಿಸುವ ಸಾಧ್ಯತೆ ಇದೆ. ಮೂರನೇ ವ್ಯಕ್ತಿಗಳ ಮೂಲ ನಿಮ್ಮ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಸರಿಯಾದ ಮೂಲದಿಂದ ಬಮನದ ವಿಚಾರವನ್ನು ಮಾತ್ರ ಮಾತನಾಡಿ. ನಿಮ್ಮದಲ್ಲದ ಸಂಪತ್ತನ್ನು ನಿಮ್ಮದಾಗಿಸಿಕೊಳ್ಳಲು ಹೋಗುವುದು ಬೇಡ. ಸಂಕಷ್ಟದ ಸನ್ನಿವೇಶಗಳನ್ನು ಬುದ್ಧಿವಂತಿಕೆಯಿಂದ ದಾಟಬೇಕಾಗುವುದು. ಅನಪೇಕ್ಷಿತ ವಿಚಾರಗಳನ್ನು ಚರ್ಚಿಸುವುದು ನಿಮಗೆ ಇಷ್ಟವಾಗದು. ಅನಿವಾರ್ಯ ಕಾರಣದಿಂದ ಆಸ್ಪತ್ರೆಗೆ ಅಲೆದಾಡಬೇಕಾಗುವುದು. ನ್ಯಾಯಾಲಯಕ್ಕೆ ಸಂಬಂಧಿಸಿದಂತೆ ಸಕಾರಾತ್ಮಕ ನಿಲುವು ಇರಲಿ. ಮಕ್ಕಳು ನಿಮ್ಮ ಜೊತೆ ವಾಗ್ವಾದ ಬರಬಹುದು. ಒಳ್ಳೆಯ ಸುದ್ದಿಯು ನಿಮ್ಮ ಉತ್ಸಾಹವನ್ನು ಹೆಚ್ಚಿಸುವುದು.
-ಲೋಹಿತ ಹೆಬ್ಬಾರ್ – 8762924271 (what’s app only)