AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Astrology: ಅಪರಿಚಿತರ ಜೊತೆ ವ್ಯವಹಾರಿಸುವಾಗ ಎಚ್ಚರ, ಗುಟ್ಟು ರಟ್ಟಾದೀತು

ರಾಶಿ ಭವಿಷ್ಯ, ಶುಕ್ರವಾರ(ಅಕ್ಟೋಬರ್: 11): ಸಹೋದ್ಯೋಗಿಗಳ ಬಗ್ಗೆ ನಿಮಗೆ ಅಸಮಾಧಾನ ಇರಲಿದೆ. ಮನೆಯಲ್ಲಿ ದೇವರಿಗೆ ಸಂಬಂಧಿಸಿದ ತೊಂದರೆಗಳು ಕಾಣಿಸಿಕೊಳ್ಳಬಹುದು. ದುರಭ್ಯಾಸವು ನಿಮಗೆ ಹಣಕಾಸಿನ ನಷ್ಟವನ್ನು ಮಾಡಿಸೀತು. ಹಾಗಾದರೆ ಅಕ್ಟೋಬರ್: 11ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Astrology: ಅಪರಿಚಿತರ ಜೊತೆ ವ್ಯವಹಾರಿಸುವಾಗ ಎಚ್ಚರ, ಗುಟ್ಟು ರಟ್ಟಾದೀತು
ಅಪರಿಚಿತರ ಜೊತೆ ವ್ಯವಹಾರಿಸುವಾಗ ಎಚ್ಚರ, ಗುಟ್ಟು ರಟ್ಟಾದೀತು
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Oct 11, 2024 | 12:12 AM

Share

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಉತ್ತರಾಷಾಢ, ಯೋಗ: ಸುಕರ್ಮ​, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 24 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 13 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 10:51 ರಿಂದ 12:19, ಯಮಘಂಡ ಕಾಲ ಮಧ್ಯಾಹ್ನ 03:17ರಿಂದ 04:45ರವರೆಗೆ, ಗುಳಿಕ ಕಾಲ ಬೆಳಗ್ಗೆ 07:53 ರಿಂದ 09:22 ರವರೆಗೆ.

ಧನು ರಾಶಿ: ನೀವು ಪ್ರಯಾಣವನ್ನು ಅನಿವಾರ್ಯ ಕಾರಣಕ್ಕೆ ಮಾಡಬೇಕಾಗಬಹುದು. ಉದ್ಯೋಗದಲ್ಲಿ ಇಷ್ಟವಿಲ್ಲದೆ ಕಡೆ ವರ್ಗಾವಣೆ ಆಗಲಿದೆ. ಸಹೋದ್ಯೋಗಿಗಳ ಬಗ್ಗೆ ನಿಮಗೆ ಅಸಮಾಧಾನ ಇರಲಿದೆ. ಮನೆಯಲ್ಲಿ ದೇವರಿಗೆ ಸಂಬಂಧಿಸಿದ ತೊಂದರೆಗಳು ಕಾಣಿಸಿಕೊಳ್ಳಬಹುದು. ದುರಭ್ಯಾಸವು ನಿಮಗೆ ಹಣಕಾಸಿನ ನಷ್ಟವನ್ನು ಮಾಡಿಸೀತು. ಯಾರಿಂದಲಾದರೂ ಸಿಗುವ ಅಲ್ಪ ಸಹಾಯವೂ ಅಧಿಕವೆಂದು ಭಾವಿಸಿ. ಉತ್ತಮ‌ ಅವಕಾಶಗಳಿಂದ ನೀವು ವಂಚಿತರಾಗುವ ಸಾಧ್ಯತೆಬಿದೆ. ಕುಟುಂಬದ ಸದಸ್ಯರನ್ನು ಅರ್ಥ ಮಾಡಿಕೊಳ್ಳಲು ಸೋಲುವಿರಿ. ಅಪರಿಚಿತರ ಜೊತೆ ವ್ಯವಹಾರವನ್ನು ಮಾಡುವಾಗ ಗುಟ್ಟನ್ನು ಬಿಟ್ಟಕೊಡಬೇಡಿ. ಅತಿಥಿ ಸತ್ಕಾರವನ್ನು ಇಂದು ನೀವು ಮಾಡುವಿರಿ. ಯಾರಾದರೂ ನಿಮ್ಮನ್ನು ಚೇಡಿಸಬಹುದು. ಸ್ನೇಹಿತರಿಗೆ ನಿಮ್ಮದಾದ ಕೆಲವು ಆಯ್ಕೆಗಳನ್ನು ಹೇಳಿ. ಧಾರ್ಮಿಕ ಆಚರಣೆಯು ನಿಮ್ಮ ಮನಸ್ಸಿಗೆ ಹಿತವೆನಿಸುವುದು.‌ ನಕಾರಾತ್ಮಕ ಆಲೋಚನೆಗೆ ಅವಕಾಶವನ್ನು ಕೊಡಬೇಡಿ.

ಮಕರ ರಾಶಿ; ನೀವು ಹಿರಿಯರ ಜೊತೆ ಗೌರವಯುತವಾಗಿ ವರ್ತಿಸಿ. ಅನಗತ್ಯ ಹರಟೆಯಿಂದ ಈ ದಿನವನ್ನು ಕಳೆಯುವಿರಿ. ಹಣಕಾಸಿನ ವ್ಯವಹಾರವನ್ನು ಮಾಡುತ್ತಿದ್ದರೆ ನಿಮಗೆ ಲಾಭವು ನಿಮ್ಮದಾಗಬಹುದು. ಸಮಯಾದ ಅಭಾವದಿಂದ ಇಂದಿನ‌ ಕೆಲಸಗಳು ಹಾಗೆಯೇ ಇರಬಹುದು. ಉದ್ಯೋಗದಲ್ಲಿರುವ ಜನರು ತಮ್ಮ ಕಾರ್ಯಕ್ಷೇತ್ರದಲ್ಲಿ ಎಚ್ಚರಿಕೆಯಿಂದಿರಬೇಕು. ಯಾವುದನ್ನೂ ಪಳಗಿಸುವುದು ಸುಲಭದ ಕಾರ್ಯವಲ್ಲ. ಆಲಸ್ಯತನದಲ್ಲಿ ವೃತ್ತಿಯಲ್ಲಿ ತಪ್ಪುಗಳು ನುಸುಳುವ ಸಾಧ್ಯತೆ ಇದೆ. ನೀವು ಹಿರಿಯರ ಜೊತೆ ವಾಗ್ವಾದಕ್ಕೆ ಇಳಿಯುವಿರಿ. ಮನೆಯ ಕೆಲಸದಲ್ಲಿ ಸಮಯ ಕಳೆದಿದ್ದು ಗೊತ್ತಾಗದು. ಮಕ್ಕಳಿಗೆ ಪ್ರಿಯವಾದುದನ್ನು ಮಾಡುವಿರಿ. ಧನಸಹಾಯವನ್ನು ಮಾಡಲು ನಿಮಗೆ ಇಷ್ಟವಾಗದು. ಕಳೆದುಕೊಂಡ ವಸ್ತುಗಳನ್ನು ಮರಳಿ ಪಡೆಯುವಿರಿ. ನಿತ್ಯ ಕರ್ಮದಲ್ಲಿ ಸಮಯವು ವ್ಯತ್ಯಾಸವಾಗಲಿದೆ. ನಿಮಗೆ ಮಕ್ಕಳು ಅವಶ್ಯಕತೆ ಇರುವ ಹಣದ ಸಹಾಯವನ್ನು ಮಾಡುವರು.

ಕುಂಭ ರಾಶಿ: ಇಂದು ಸಂಪತ್ತಿನ ವ್ಯಯ ಆಗುವುದು. ನೀವು ಮೊದಲೇ ನಿರ್ಧರಿಸಿರುವ ಕೆಲಸಗಳನ್ನು ಪೂರ್ಣ ಮಾಡಲು ಕಾಲಾವಕಾಶದ ಕೊರತೆ ಇರುವುದು. ಭವಿಷ್ಯದ ಬಗ್ಗೆ ಹೆಚ್ಚು ಚಿಂತಾಮಗ್ನರಾಗುವಿರಿ. ನಿಮ್ಮ ಒಳ್ಳೆಯತನವು ಈ ದಿನ ಮತ್ತೊಮ್ಮೆ ಸಾಬೀತಾಗುವುದು. ನೆರೆಹೊರೆಯವರಿಗೆ ಸ್ನೇಹದ ಹಸ್ತ ಚಾಚುವಿರಿ. ವಿವಾಹದ ಮಾತುಕತೆಗಳು ನಿಮ್ಮ ಖುಷಿಯನ್ನು ಹೆಚ್ಚಿಸಬಹುದು. ವೃತ್ತಿಗಾಗಿ ನೀವು ಮಾಡುವ ಪ್ರಯತ್ನದಿಂದ ಯಶಸ್ಸು ಸಿಗಲಿದೆ. ಅಪರಿಚಿತರ ಒಡನಾಟ ಹೆಚ್ಚು ಶ್ರೇಯಸ್ಕರ ಅಲ್ಲ. ನಿಮ್ಮ ಅನುಕೂಲಕ್ಕೆ ತಕ್ಕ ಕೆಲಸವನ್ನು ಮಾಡಿ. ಯಾರಾದರೂ ನಿಮ್ಮ ಬಳಿ ಕೆಲಸ ಮಾಡಿಕೊಡಲು ಸಹಾಯವನ್ನು ಕೇಳಬಹುದು. ಗೊತ್ತಿರುವುದನ್ನು ಹಂಚಿಕೊಳ್ಳಿ. ಒಂದು ಮಾತಿಗೆ ಹಲವಾರು ಅರ್ಥ. ಆಡುವಾಗ ಯೋಚನೆ ಇರಲಿ. ನೀವು ವಿರೋಧ ಮಾಡುವ ಯಾವ ಮಾತನ್ನು ಆಡುವುದು ಬೇಡ. ಧನಲಾಭವಾದರೂ ಮನಸ್ಸಿನಲ್ಲಿ ನೆಮ್ಮದಿ ಕೊರತೆ ಕಾಣುವುದು. ಭೂಮಿಯ ವ್ಯವಹಾರವನ್ನು ಮಾಡಲು ನಿಮಗೆ ಒತ್ತಡ ಬರಬಹುದು.

ಮೀನ ರಾಶಿ: ಇಂದು ಮನಸ್ಸಿನ ಕಿರಿಕಿರಿಯನ್ನು ಅನುಭವಿಸದೇ ಅನ್ಯ ಮಾರ್ಗವಿರದು. ವಿವಾಹಯೋಗವು ಬಂದರೂ ನಿಮಗೆ ಅಂತಹ ಯೋಗ್ಯತೆಯ ಕೊರತೆ ಎದ್ದು ಕಾಣುವುದು. ಭೂಮಿಗೆ ಸಂಬಂಧಿಸಿದ ಮಾತುಕತೆಯಲ್ಲಿ ಹಿನ್ನಡೆ ಉಂಟಾಗುವುದು. ಸದ್ಯಕ್ಕೆ ಸ್ಥಿರಾಸ್ಥಿ ಖರೀದಿಯ ಬಗ್ಗೆ ಚಿಂತಿಸುವುದು ಸೂಕ್ತವಲ್ಲ. ಆರೋಗ್ಯದ ಕಡೆ ಗಮನವಿರಲಿ. ನಂಬಿದ ದೈವವು ನಿಮಗೆ ಅನುಕೂಲವನ್ನೇ ಮಾಡುವುದು. ಅದನ್ನು ತಿಳಿಯುವ ದೃಷ್ಟಿ ಬೇಕು. ಕಾರ್ಮಿಕರ ವಿಚಾರದಲ್ಲಿ ನಿಮಗೆ ಅಸಮಾಧಾನವು ಇರುವುದು. ಸಂಗಾತಿಗೆ ನೀವು ಸುಳ್ಳು ಹೇಳಿ ಕೆಲಸಗಳನ್ನು ಮಾಡಿಸಿಕೊಳ್ಳುವಿರಿ. ಯಾರ ಮೇಲೂ ಪಕ್ಷಪಾತ ಮಾಡದೇ ಇರಬೇಕಾಗುವುದು. ನಿಮ್ಮ ನಿರೀಕ್ಷೆ ಸಂಪೂರ್ಣ ಸರಿಯಾಗದು. ವೃತ್ತಿಯ ಕೆಲಸಗಳ ನಡುವೆ ಕುಟುಂಬವನ್ನು ಮರೆತಿರುವಿರಿ. ಮಾತನ್ನು ನೀವು ಇಂದು ಕಡಿಮೆ ಮಾಡಿದ್ದೀರಿ. ಬಂಧುಗಳ ಜೊತೆ ವಿವಾದವು ಏರ್ಪಡಲಿದ್ದು ನಿಮ್ಮ ಬಗ್ಗೆ ನಕಾರಾತ್ಮಕ ಅಭಿಪ್ರಾಯವೂ ಬರಬಹುದು.

ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ
ಬಿಜೆಪಿಯಲ್ಲಿ ಮೊದಲ ಹಂತದ ಶುದ್ಧೀಕರಣ ಕಾರ್ಯ ಮುಗಿದಿದೆ: ಸದಾನಂದಗೌಡ
ಬಿಜೆಪಿಯಲ್ಲಿ ಮೊದಲ ಹಂತದ ಶುದ್ಧೀಕರಣ ಕಾರ್ಯ ಮುಗಿದಿದೆ: ಸದಾನಂದಗೌಡ
ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು
ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು
ಶಾಸಕರ ಆಹ್ವಾನ ಬೇಕಿಲ್ಲ, ಮಂಡ್ಯ ಜನ ಜವಾಬ್ದಾರಿ ನೀಡಿದ್ದಾರೆ: ಹೆಚ್​ಡಿಕೆ
ಶಾಸಕರ ಆಹ್ವಾನ ಬೇಕಿಲ್ಲ, ಮಂಡ್ಯ ಜನ ಜವಾಬ್ದಾರಿ ನೀಡಿದ್ದಾರೆ: ಹೆಚ್​ಡಿಕೆ
ಡಿಕೆಶಿ ಪರವೋ, ಸಿದ್ದರಾಮಯ್ಯ ಪರವೋ? ಲಕ್ಷ್ಮೀ ಹೆಬ್ಬಾಳ್ಕರ್ ಏನಂದರು ನೋಡಿ!
ಡಿಕೆಶಿ ಪರವೋ, ಸಿದ್ದರಾಮಯ್ಯ ಪರವೋ? ಲಕ್ಷ್ಮೀ ಹೆಬ್ಬಾಳ್ಕರ್ ಏನಂದರು ನೋಡಿ!
ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಎಂದು ನಂಬಿದ್ದೇನೆ: ಶಿವಕುಮಾರ್
ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಎಂದು ನಂಬಿದ್ದೇನೆ: ಶಿವಕುಮಾರ್
ಹೊತ್ತಿ ಉರಿದ ಮೈಸೂರು-ಉದಯ್​ಪುರ ಪ್ಯಾಲೇಸ್ ಕ್ವೀನ್ ಎಕ್ಸ್​ಪ್ರೆಸ್​ ರೈಲು
ಹೊತ್ತಿ ಉರಿದ ಮೈಸೂರು-ಉದಯ್​ಪುರ ಪ್ಯಾಲೇಸ್ ಕ್ವೀನ್ ಎಕ್ಸ್​ಪ್ರೆಸ್​ ರೈಲು
ರಂದೀಪ್ ಸುರ್ಜೇವಾಲಾ ಭೇಟಿಯ ನಂತರ ಕೊಂಚ ಖಿನ್ನರಾಗಿರುವ ಡಿಸಿಎಂ
ರಂದೀಪ್ ಸುರ್ಜೇವಾಲಾ ಭೇಟಿಯ ನಂತರ ಕೊಂಚ ಖಿನ್ನರಾಗಿರುವ ಡಿಸಿಎಂ