Daily Horoscope 13 September 2024: ಇಂದು ನಿಮ್ಮ ಭರವಸೆಯ ಕನಸುಗಳು ನನಸಾಗುವ ಸಾಧ್ಯತೆ ಇದೆ

ಸೆಪ್ಟೆಂಬರ್​ 13,​ 2024ರ​​ ನಿಮ್ಮ ಭವಿಷ್ಯ ಹೇಗಿದೆ?: ಇಂದಿನ ಆರಂಭವು ತುಂಬಾ ಆಹ್ಲಾದಕರವಾಗಿರುತ್ತದೆ. ಶಾಂತವಾಗಿ ಮತ್ತು ಚಿಂತನಶೀಲವಾಗಿ ಕೆಲಸ ಮಾಡಿ. ಇಂದು, ನೀವು ಹಣಕಾಸಿನ ವಿಷಯಕ್ಕೆ ಸಂಬಂಧಿಸಿದ ಕಾನೂನು ವಿಷಯಗಳಲ್ಲಿ ಎಚ್ಚರಿಕೆಯಿಂದ ಇರಿ. ಇದು ಹಣಕಾಸಿನ ಲಾಭಕ್ಕೆ ಕಾರಣವಾಗುತ್ತದೆ. ಹಾಗಾದರೆ ಇಂದಿನ (2024 ಸೆಪ್ಟೆಂಬರ್​ 13) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

Daily Horoscope 13 September 2024: ಇಂದು ನಿಮ್ಮ ಭರವಸೆಯ ಕನಸುಗಳು ನನಸಾಗುವ ಸಾಧ್ಯತೆ ಇದೆ
ರಾಶಿಭವಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 13, 2024 | 12:01 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ದಶಮೀ, ನಿತ್ಯನಕ್ಷತ್ರ: ಪೂರ್ವಾಷಾಢ, ಯೋಗ: ಸೌಭಾಗ್ಯ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:35 ಗಂಟೆ, ರಾಹು ಕಾಲ ಬೆಳಿಗ್ಗೆ 10:50 ರಿಂದ 12:23, ಯಮಘಂಡ ಕಾಲ ಮಧ್ಯಾಹ್ನ 03:27 ರಿಂದ 04:59ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 07:46 ರಿಂದ 09:18ರ ವರೆಗೆ.

ಮೇಷ ರಾಶಿ : ಇಂದು ನಿಮ್ಮ ಇಚ್ಛೆಯನ್ನು ಕಾಪಾಡಿಕೊಳ್ಳಲ ಕೆಲವು ನಿರ್ಣಯಗಳನ್ನು ಮಾಡುವಿರಿ. ನಿಮ್ಮ ಆಕರ್ಷಕ ವರ್ತನೆಯಿಂದ ಎಲ್ಲರ ಗಮನವನ್ನು ಸೆಳೆಯುವಿರಿ. ಇಂದು ನೀವು ಸಹೋದ್ಯೋಗಿಗಳು ಅಚ್ಚರಿಯ ಕಾರ್ಯ ಸಾಧನೆ ಮಾಡಲಿದ್ದೀರಿ. ಕೆಲಸವನ್ನು ವಹಿಸಿಕೊಂಡು ಮಾಡುವ ಗುತ್ತಿಗೆದಾರರಿಗೆ ಇಂದು ಸಕಾಲವಾಗಿದೆ. ಹೆಚ್ಚು ಪ್ರಯತ್ನದಿಂದ ಅಧಿಕ ಲಾಭವನ್ನು ಪಡೆಯಬಹುದಗಿದೆ. ಸಮಾಜದಲ್ಲಿ ಅನೇಕ ಸಾಮಾಜಿಕ ಕಾರ್ಯವನ್ನು ಮಾಡುವವರಿಗೆ ಯೋಗ್ಯ ಗೌರವ, ಸಮ್ಮಾನಗಳು ಸಿಗಲಿದೆ. ಮಿತ್ರರ ಸಹಕಾರದಿಂದ ಹೊಸತನ್ನು ಸಾಧಿಸಬಹುದು. ಸುಲಭವಾಗಿ ಯಾವುದೂ ಸಾಧ್ಯವಿಲ್ಲ ಎಂಬ ಸತ್ಯ ನಿಮ್ಮ ಅರಿವಿಗೆ ಬರುವುದು. ಆದರೂ, ಕೆಲಸದಲ್ಲಿ ನಿರ್ಲಕ್ಷ್ಯವು ನಿಮಗೆ ಭಾರೀ ನಷ್ಟವನ್ನು ಉಂಟುಮಾಡಬಹುದು. ನೂರಾರು ಕೆಲಸಗಳ ನಡುವೆ ಪ್ರಮುಖ ಅಗತ್ಯತೆಗಳಿಗೆ ಆದ್ಯತೆ ನೀಡಿ. ಸಮಾನ ಮನಸ್ಕರ ಜೊತೆ ಸಮಯ ಕಳೆಯುವುದು ನಿಮಗೆ ಸಕಾರಾತ್ಮಕ ದೃಷ್ಟಿಕೋನವನ್ನು ನೀಡುತ್ತದೆ. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯದ ಮೇಲೆ ವಿಶ್ವಾಸವಿಟ್ಟು ಮುಂದ್ರಿಯಬೇಕು. ಇಂದು ಸಾಲಕ್ಕೆ ಸಂಬಂಧಿಸಿದ ಯಾವುದೇ ವ್ಯವಹಾರವನ್ನು ಮಾಡಬೇಡಿ.

ವೃಷಭ ರಾಶಿ : ಇಂದು ಆಸ್ತಿ ಖರೀದಿಯ ಯೋಜನೆ ಯಶಸ್ವಿಯಾಗಬಹುದು. ಆದ್ದರಿಂದ ನಿಮ್ಮ ಗಮನವು ಪೂರ್ಣವಾಗಿ ಅತ್ತಕಡೆಗೆ ಇರಲಿ. ಎಲ್ಲರಿಗೂ ಸಲ್ಲುವಂತಾಗಬೇಕು ಎನ್ನುವುದು ಕಷ್ಟ. ಇಂತಹ ಸಂದರ್ಭಗಳಲ್ಲಿ ತಾಳ್ಮೆ ಮುಖ್ಯವಾಗಿ ಬೇಕಾಗುವುದು. ನಿಮ್ಮ ಹಳೆಯ ದ್ವಿಚಕ್ರ ವಾಹನವನ್ನು ಮಾರಾಟ ಮಾಡಿ ಲಾಭ ಪಡೆದುಕೊಳ್ಳುವಿರಿ. ಉದ್ಯಮದ ಲಾಭಾಂಶವನ್ನು ಸತ್ಕಾರ್ಯಕ್ಕೆ ವಿನಿಯೋಗಿಸುವ ಬಗ್ಗೆ ಆಲೋಚನೆ ಬರುವುದು. ಅನಿರೀಕ್ಷಿತ ಧನ ಲಾಭದಿಂದ ಹೊಸ ಕೆಲಸಗಳನ್ನು ಮಾಡಲು ಪ್ರಯತ್ನಿಸುವಿರಿ. ಇಂದು ನೀವು ಸಂಗಾತಿಯ ಮಾತನ್ನೇ ಹೆಚ್ಚು ಕೇಳಬೇಕಾದೀತು. ಬಂಧುಗಳೇ ನಿಮಗೆ ಹಿತವೆನಿಸುವುದು. ಸಂತೋಷವನ್ನು ಹರಡುವ ಮೂಲಕ ನಿಮ್ಮ ಆರೋಗ್ಯವನ್ನು ಬೆಳೆಸಿಕೊಳ್ಳಿ. ನಿಮ್ಮ ಕೆಲದಲ್ಲಿ ಸರಿಯಾದ ಮಾರ್ಗದರ್ಶನ ಬೇಕು. ನಿಮ್ಮ ಶತ್ರುಗಳ ಚಲನವಲನಗಳನ್ನು ನಿರ್ಲಕ್ಷಿಸಿ ಸಮಯವನ್ನು ಹಾಳುಮಾಡುವುದು ಬೇಡ. ಇಲ್ಲದಿದ್ದರೆ ನೀವು ತೊಂದರೆಗೆ ಸಿಲುಕಬಹುದು. ಹಣಕಾಸಿನ ಹೂಡಿಕೆಯ ಬಗ್ಗೆ ಬುದ್ಧಿವಂತಿಕೆಯಿಂದ ತೀರ್ಮಾನಿಸಿ.

ಮಿಥುನ ರಾಶಿ : ನಿಮ್ಮ ಮನಸ್ಸಿನಲ್ಲಿ ಹೊಸ ಯೋಜನೆಗಳಿಗೆ ರೂಪಕೊಡುವಿರಿ. ಅವುಗಳನ್ನು ಕಾರ್ಯಗತಗೊಳಿಸಲು ಇದು ಸರಿಯಾದ ಸಮಯ. ಕುಟುಂಬದಲ್ಲಿ ಯಾರಾದರೂ ಒಬ್ಬರೂ ತಲೆಬಾಗಲೇಬೇಕಾದೀತು. ಇನ್ನೊಬ್ಬರಿಗಾಗಿ ಕಾಯುವುದು ಬೇಡ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆಯುವರು. ಕೆಲಸಕ್ಕಾಗಿ ಬಹಳ ಹುಡುಕುತ್ತಿದ್ದರೆ ನಿಮಗೆ ಅನುಗುಣವಾಗಿ ಉದ್ಯೋಗವು ಪ್ರಾಪ್ತಿಯಾಗುವುದು. ಧಾರ್ಮಿಕಕ್ಷೇತ್ರಗಳ ದರ್ಶನವನ್ನು ಪಡೆಯುವ ಸದವಕಾಶ ಸಿಗಲಿದೆ. ಆರೋಗ್ಯವು ಸುಧಾರಿಸಿದ್ದರಿಂದ ತೃಪ್ತಿ ಇರುವುದು. ದುರಭ್ಯಾಸದಿಂದ ನೀವು ಎಲ್ಲರ ಕಡೆಯಿಂದ ಮುಖಭಂಗವಾಗಲಿದೆ. ಇಂದು ನಿಮ್ಮ ನೇತೃತ್ವದಲ್ಲಿ ಕೆಲವು ಕಾರ್ಯಗಳು ನಡೆಯುವುದು. ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸ್ನೇಹಿತರ ಸಲಹೆ ಪಡೆದು ನೀವು ನಿರ್ಧರಿಸಿ. ಸಂಬಂಧಿಕರ ಆಗಮನದಿಂದ ಮನೆಯ ವಾತಾವರಣ ಸಂತೋಷದಿಂದ ಇರಲಿದೆ. ಸಹೋದರರ ಜೊತೆ ಯಾವುದೋ ವಿಚಾರದಲ್ಲಿ ಜಗಳ ಉಂಟಾಗಬಹುದು.

ಕರ್ಕಾಟಕ ರಾಶಿ : ಇಂದು ನಿಮ್ಮ ಭರವಸೆಯ ಕನಸುಗಳು ನನಸಾಗುವ ಸಾಧ್ಯತೆ ಇದೆ. ಇಂದು ನಿಮ್ಮ ಇಚ್ಛಾಶಕ್ತಿಯ ಕೊರತೆಯ ಕಾರಣಕ್ಕೆ ಭಾವನಾತ್ಮಕವಾದ ಸವಾಲುಗಳಿಗೆ ಒಳಗಾಗುವಿರಿ. ವಿವೇಕಪೂರ್ಣವಾದ ಮಾತುಗಳಿಂದ ನಿಮ್ಮನ್ನು ಸರಿದಾರಿಗೆ ತರುವುದು ಕಷ್ಟವಾದೀತು. ಬಹುದಿನಗಳಿಂದ ವಿವಾಹದ ಸಿದ್ಧತೆಯಲ್ಲಿ ಇದ್ದವರಿಗೆ ಕಂಕಣ ಬಲ ಕೂಡಿ ಬರಲಿದೆ. ಕುಟುಂಬದಲ್ಲಿ ಕಿರಿಕಿರಿಯಾದರೂ ಸಮಾಧಾನದಿಂದ ಹೋಗುವುದು ಒಳಿತು. ಕಛೇರಿಯ ಕೆಲಸದಲ್ಲಿ ಆಕಸ್ಮಿಕ ಬದಲಾವಣೆಯಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಅಧಿಕಾರಿಗಳ ಸಹಾಯವನ್ನು ಕೇಳಿವಿರಿ. ಅಸಮಾಧಾನವನ್ನು ಅಸಭ್ಯವಾಗಿ ಹೊರಹಾಕುವಿರಿ. ಆರ್ಥಿಕ ವಹಿವಾಟುಗಳು ದಿನವಿಡೀ ನಡೆಯುತ್ತವೆ. ದಿನದ ಅಂತ್ಯವು ಸಂತೋಷದಲ್ಲಿ ಮುಕ್ತಾಯವಾಗಲಿದೆ. ಕುಟುಂಬದ ಸದಸ್ಯರಲ್ಲಿ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಬರಲಿವೆ. ಕೆಲಸದ ಕ್ಷೇತ್ರದಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳು ಯಶಸ್ವಿಯಾಗುವುದು.

ಸಿಂಹ ರಾಶಿ : ಇಂದು ಕೆಲವು ಸಮಯದಿಂದ ನಿಮ್ಮ ಸ್ವಂತ ಪ್ರಗತಿಗಾಗಿ ಮಾಡುತ್ತಿರುವ ಪ್ರಯತ್ನಗಳು ಸಫಲ ಆಗಲಿವೆ. ವೈಯಕ್ತಿಕವಾಗಿ ನೀವು ಗಳಿಸುವ ಸ್ಥಾನಮಾನಗಳು ಇತರರಿಗೆ ಕಷ್ಟವಾಗುವುದು. ನೂತನ ಗೃಹ ನಿರ್ಮಾಣಕ್ಕೆ ಹಣದ ಹೊಂದಿಸುವಿಕೆಯಲ್ಲಿ ಮಗ್ನರಾಗುವಿರಿ. ವಿರಾಮ ರಹಿತವಾದ ಮಾತುಗಳಿಂದ ಇನ್ನೊಬ್ಬರಿಗೆ ತೊಂದರೆಯಾಗಲಿದೆ. ಅವಿವಾಹಿತರಿಗೆ ದೂರದ ಸಂಬಂಧದಿಂದ ವಿವಾಹವು ಕೂಡಿಬರಬಹುದು. ಪ್ರತಿಫಲದ ನಿರೀಕ್ಷೆ ಇಲ್ಲದೇ ನೀವು ಸ್ನೇಹಿತನಿಗೆ ಸಹಾಯವನ್ನು ಮಾಡುವಿರಿ. ಇನ್ನೊಬ್ಬರಿಂದ ಸಿಗುವ ನಿಷ್ಕಾರಣ ಪ್ರೀತಿಯನ್ನು ಅನುಭವಿಸುವಿರಿ. ನಿರಾಧಾರದ ಮಾತನಾಡಿ ಅವಮಾನಿತರಾಗಬಹುದು. ಉದ್ಯಮಕ್ಕೆ ಸಂಬಂಧಿಸಿದಂತೆ ಹಣದ ಖರ್ಚು ಇರುವುದು. ಕಾರ್ಯದಲ್ಲಿ ಉಂಟಾದ ತೊಂದರೆಯನ್ನು ನೀವು ಲೆಕ್ಕಿಸದೇ ಮುನ್ನಡೆಯುವಿರಿ.

ಕನ್ಯಾ ರಾಶಿ : ಇಂದು ಬಂಧುಗಳ ಸಮಯಕ್ಕಾಗಿ ಕಾಯಬೇಕಾಗಬಹುದು. ಇಂದು ನೀವು ಹಣಕಾಸಿನ ವಿಚಾರದಲ್ಲಿ ನಿಷ್ಠುರದಿಂದ ವರ್ತಿಸಿದರೆ ಮಾತ್ರ ಲಾಭಗಳಿಸುವ ಸಾಧ್ಯತೆ ಇದೆ. ಯಾರನ್ನೋ ಸೋಲಿಸುವ ಸವಾಲನ್ನು ತೆಗೆದುಕೊಳ್ಳುವಿರಿ. ಇದರಿಂದ ಪ್ರೇಮಿಯು ದೂರಾಗಬಹುದು. ದುಃಖವೂ ಅಧಿಕವಾಗಲಿದೆ. ಸ್ನೇಹಿತರಿಂದ ಸಾಂತ್ವನ ಸಿಗಬಹುದು. ಇನ್ನೊಬ್ಬರನ್ನು ನೋಡಿ ಕಲಿಯುವ ವಿಚಾರವು ಸಾಕಷ್ಟಿರಬಹುದು. ರಾಜಕೀಯದಲ್ಲಿ ಆದ ಹಿನ್ನಡೆಯಿಂದ ಅಪಮಾನವಾಗಲಿದೆ. ವೃತ್ತಿ ಬದುಕಿಗೆ ಸಂಬಂಧಿಸಿದಂತೆ ಇಂದು ಸವಾಲಿನ ದಿನ. ಹಣಕಾಸಿನ ಕ್ಲಿಷ್ಟತೆ ಉದ್ಭವಿಸುವ ಸಾಧ್ಯತೆ ಇರುವುದರಿಂದ ಈ ಬಗ್ಗೆ ನಿಗಾವಹಿಸಿ. ವಾಹನ ಚಾಲನೆಯಲ್ಲಿ ಜಾಗರೂಕರಾಗಿರಿ. ನಿಮ್ಮ ಪ್ರಮುಖ ಸಮಸ್ಯೆಗೆ ಯಾವುದಾದರೂ ಒಂದು ಪರಿಹಾರ ಕಾಣಬಹುದು. ಆದಾಯದ ಜೊತೆಗೆ ಖರ್ಚಿನ ಸ್ಥಿತಿಯೂ ಉಳಿಯಬಹುದು. ಮಕ್ಕಳನ್ನು ಬಹಳ ಜೋಪಾನವಾಗಿ ನಿರ್ವಹಿಸಬೇಕಾಗಬಹುದು. ಆರೋಗ್ಯ ಉತ್ತಮ ಇರುತ್ತದೆ.

ತುಲಾ ರಾಶಿ : ಇಂದು ನೀವು ಉದ್ಯೋಗ ಕ್ಷೇತ್ರದಲ್ಲಿ ಆಗುವ ವಾದಗಳನ್ನು ತಪ್ಪಿಸಿ. ಅನ್ಯರು ನಿಮ್ಮ ಖಾಸಗಿ ವಿಚಾರಗಳಿಗೆ ಮನೆಯವರು ಮೂಗು ತೂರಿಸಿದರೆ ಸಿಟ್ಟುಗೊಳ್ಳುವಿರಿ. ಕೌಟುಂಬಿಕ ಅಗತ್ಯಗಳಿಗೆ ತಕ್ಷಣ ಗಮನ ನೀಡಬೇಕಾದೀತು. ಇಂದು ನೀವು ಯಾರ ಮಾತನ್ನೂ ಒಪ್ಪಿಕೊಳ್ಳಲಾರಿರಿ. ಇಲ್ಲವೇ, ನೀವೇ ಸಮಸ್ಯೆಯನ್ನು ಉಲ್ಬಣಗೊಳಿಸುವಿರಿ. ಸಂಭಾವ್ಯ ಮಾನನಷ್ಟವನ್ನು ತಪ್ಪಿಸಲು ಖಾಸಗಿ ವಿಷಯಗಳನ್ನು ಸಾರ್ವಜನಿಕರ ಕಣ್ಣಿನಿಂದ ದೂರವಿಡಿ. ಯಾವುದೇ ಸಾಮಾಜಿಕ ಅಥವಾ ಧಾರ್ಮಿಕ ಸಂಸ್ಥೆಗೆ ನಿಮ್ಮ ಕೊಡುಗೆ ನಿಮಗೆ ಹೊಸ ಗುರುತನ್ನು ನೀಡುತ್ತದೆ. ಕೆಲವು ನಕಾರಾತ್ಮಕ ಆಲೋಚನೆಗಳು ಮನಸ್ಸಿಗೆ ಬರುತ್ತದೆ. ಮನೆಯ ಹಿರಿಯರ ಆರೋಗ್ಯಕ್ಕೆ ವಿಶೇಷ ಗಮನ ಅಗತ್ಯ ಕೊಡಿ.

ವೃಶ್ಚಿಕ ರಾಶಿ : ಇಂದು ಕೆಲಸ ಹೆಚ್ಚು ಆದರೂ ಎಲ್ಲವನ್ನೂ ಮಾಡಿಮುಗಿಸಿದ ಸಮಾಧಾನ ಇರುವುದು. ಉದ್ಯೋಗಸ್ಥರು ಉನ್ನತ ಅವಕಾಶವನ್ನು ಪ್ರತೀಕ್ಷೆ ಮಾಡಬಹುದು. ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಬೇಕಾದ ಉತ್ತಮ ಅವಕಾಶಗಳು ಸಿಗಲಿದೆ. ಹಣದ ಹರಿವಿನಿಂದ ತೃಪ್ತಿ ಉಂಟಾಗಬಹುದು. ಉದ್ಯೋಗದ ವಿಚಾರದಲ್ಲಿ ಸಂತಸವಿರುವುದು. ಸೂಕ್ಷ್ಮ ಸನ್ನಿವೇಶಗಳನ್ನು ನಿರ್ವಹಿಸುವ ಕಲೆಯು ಗೊತ್ತಾಗದು. ಗೆಲುವನ್ನು ಇವರು ನಿರೀಕ್ಷಿಸಬಹುದು. ಸಂತಾನದ ವಿಚಾರದಲ್ಲಿ ಶುಭ ಸೂಚನೆ ಇಂದು ನಿಮಗೆ ಸಿಗಲಿದೆ. ಎಲ್ಲರಿಂದ ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ಇಷ್ಟಪಡುವಿರಿ. ನಿಮ್ಮ ಆರ್ಥಿಕ ಪರಿಸ್ಥಿತಿಯು ದೃಢವಾಗಿರುತ್ತದೆ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ನಿಮ್ಮ ಆಸಕ್ತಿಯೂ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಅಲ್ಲಿ ಹಣದ ವಹಿವಾಟಿಗೆ ಸಂಬಂಧಿಸಿದ ನಷ್ಟವಾಗುತ್ತದೆ.

ಧನು ರಾಶಿ : ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಆಸಕ್ತಿಯು ಹೆಚ್ಚಾಗುತ್ತದೆ. ಆಶಾವಾದಿ ವರ್ತನೆ ಇಂದು ನಿಮ್ಮ ಸುತ್ತಲಿನವರ ಮೇಲೆ ಸಕಾರಾತ್ಮಕ ಪರಿಣಾಮ ಬೀರುವುದು. ಹೊಸ ಯೋಜನೆಗಳಿಗೆ ಹಣವನ್ನು ಎಷ್ಟೇ ಕಷ್ಟವಾದರೂ ಪಡೆಯುವಿರಿ. ಇಂದು ಧಾರ್ಮಿಕ ಆಚಾರವಂತರಿಗೆ ಆಚರಣೆಗೆ ಸಂಬಂಧಿಸಿದಂತೆ ಸಮಸ್ಯೆಗಳು ಎದುರಾಗಲಿದೆ. ಉನ್ನತ ಹುದ್ದೆಯಲ್ಲಿರುವ ಉದ್ಯೋಗಸ್ಥರಿಗೆ ಹಿರಿಯ ಅಧಿಕಾರಿ ವರ್ಗದಿಂದ ಆಪಾದನೆಗಳು ಬರಬಹುದು. ಪ್ರಯಾಣವನ್ನು ನೀವು ಧಾವಂತದಲ್ಲಿ ಮಾಡುವುದು ಬೇಡ. ಪತ್ನಿಯಿಂದ ಮನೆಯಲ್ಲಿ ಕಿರಿಕಿರಿಯಾದೀತು. ಆಪ್ತ ಮಿತ್ರರ ಭೇಟಿಯಾಗಲಿದೆ. ಆರೋಗ್ಯದಲ್ಲಿ ಸುಧಾರಣೆ ಇದ್ದರೂ ಉತ್ಸಾಹದಿಂದ ಹೆಚ್ಚಿನ ಕೆಲಸವನ್ನು ಮಾಡಬೇಡಿ. ನಿಮ್ಮ ಸಂಪರ್ಕದ ಗಡಿಯೂ ವಿಸ್ತರಿಸುತ್ತದೆ. ವೈಯಕ್ತಿಕ ಕೆಲಸಗಳ ಜೊತೆಗೆ ಕುಟುಂಬದೊಂದಿಗೆ ಸಮಯ ಕಳೆಯುವಿರಿ.

ಮಕರ ರಾಶಿ : ಇಂದಿನ ಆರಂಭವು ತುಂಬಾ ಆಹ್ಲಾದಕರವಾಗಿರುತ್ತದೆ. ಶಾಂತವಾಗಿ ಮತ್ತು ಚಿಂತನಶೀಲವಾಗಿ ಕೆಲಸ ಮಾಡಿ. ಇಂದು, ನೀವು ಹಣಕಾಸಿನ ವಿಷಯಕ್ಕೆ ಸಂಬಂಧಿಸಿದ ಕಾನೂನು ವಿಷಯಗಳಲ್ಲಿ ಎಚ್ಚರಿಕೆಯಿಂದ ಇರಿ. ಇದು ಹಣಕಾಸಿನ ಲಾಭಕ್ಕೆ ಕಾರಣವಾಗುತ್ತದೆ. ಮನಶ್ಚಾಂಚಲ್ಯವಿದ್ದರೆ ಧ್ಯಾನವನ್ನು ಮಾಡಬೇಕಾದೀತು.‌ ಎಂದೋ ಕೂಡಿಟ್ಟ ಹಣವು ಇಂದು ಉಪಯೋಗಕ್ಕೆ ಬಂದೀತು. ಆರೋಗ್ಯವು ಹದ ತಪ್ಪಬಹುದು. ನಿರ್ಲಕ್ಷ್ಯ ಮಾಡದೇ ಇರುವುದು ಉತ್ತಮ. ಸಜ್ಜನರ ವಿಚಾರದಲ್ಲಿ ನೀವು ಅನಾದರ ತೋರಿಸಬಹುದು. ಉತ್ಪಾದನಾ ವಲಯದ ಉದ್ಯಮದಲ್ಲಿ ಹಿನ್ನಡೆಯಾಗಲಿದೆ. ಬಾಕಿಯಿರುವ ಮನೆಯ ಕಾರ್ಯಗಳಿಗೆ ಸಮಯ ಬೇಕಾಗಬಹುದು. ಕೆಲವು ಯೋಜನೆಗಳು ಮಕ್ಕಳ ಭವಿಷ್ಯದ ಬಗ್ಗೆಯೂ ಫಲಪ್ರದವಾಗುತ್ತದೆ. ನೀವು ಭಾವನಾತ್ಮಕವಾಗಿ ತಪ್ಪು ನಿರ್ಧಾರ ತೆಗೆದುಕೊಳ್ಳಬಹುದು, ಬೇರೆಯವರು ಇದರ ಪ್ರಯೋಜನೆಯನ್ನು ತೆಗೆದುಕೊಳ್ಳಬಹುದು.

ಕುಂಭ ರಾಶಿ : ನಿಮ್ಮ ಕಾರ್ಯ ಕೌಶಲದ ಮೂಲಕ ಯಾವುದೇ ರೀತಿಯ ಕೆಲಸವನ್ನು ಮಾಡಲು ಸಾಧ್ಯವಾಗುತ್ತದೆ. ಇಂದು ನಿಮ್ಮ ಆಹಾರ ಪದ್ದತಿ, ತೂಕ ಹೆಚ್ಚಳದ ಬಗ್ಗೆ ವಿಶೇಷ ಗಮನಹರಿಸಿ. ತಂದೆಯ ವಿಚಾರದಲ್ಲಿ ನಿಮಗೆ ಬೇಸರವಾದೀತು. ಹೆಚ್ಚು ಮಾತುಕತೆಗಳು ತಂದೆಯ ಜೊತೆ ಆಡಬಹುದು. ವಿದ್ಯಾಭ್ಯಾಸ ಹಿನ್ನಡೆಯಿಂದ ನಿಮ್ಮಲ್ಲಿ ಆತಂಕವು ಹೆಚ್ಚಾಗುವುದು. ಸಹಾಯವನ್ನು ಕೇಳಿ ಬಂದವರಿಗೆ ಇರುವುದನ್ನು ಕೊಟ್ಟು ಸಂತೋಷಪಡಿಸಿ. ಅಪರಿಚಿತರನ್ನು ನಂಬಿ ಮೋಸಹೋಗಬೇಕಾದೀತು. ಹೂಡಿಕೆಯಲ್ಲಿ ಹೆಚ್ಚು ಹಣವನ್ನು ಹೂಡಿಕೆ ಮಾಡುವಿರಿ. ನಿಮ್ಮ ಕಾರ್ಯದಲ್ಲಿ ಗುಣಮಟ್ಟ ಕಡಿಮೆ ಆಗಬಹುದು. ಯಾರ ಬೆಂಬಲವನ್ನು ಬಯಸದೇ ಸ್ವತಂತ್ರವಾಗಿ ಕೆಲಸವನ್ನು ಮಾಡುವಿರಿ. ಮಕ್ಕಳಿಗೆ ಗಮನ ಬೇಕಾಗಬಹುದು ಆದರಿದು ನಿಮ್ಮ ಜೀವನಕ್ಕೆ ಸಂತೋಷವನ್ನು ತರುತ್ತದೆ. ನಿಮ್ಮ ಪ್ರೀತಿಯ ಜೀವನವು ಇಂದು ಅದ್ಭುತವಾಗಿದೆ. ನಿಮ್ಮ ಯಾವುದೇ ಯೋಜನೆಗಳನ್ನು ಪ್ರಾರಂಭಿಸುವ ಮೊದಲು ಮತ್ತೊಮ್ಮೆ ಯೋಚಿಸಿ. ಕೆಲವೊಮ್ಮೆ ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆ ಬರಬಹುದು. ಅನುಭವಿ ಜನರು ಮತ್ತು ಪ್ರಕೃತಿಯ ಸಹವಾಸದಲ್ಲಿ ಸ್ವಲ್ಪ ಸಮಯವನ್ನು ಕಳೆಯಿರಿ.

ಮೀನ ರಾಶಿ : ಇಂದು ಮನೆ ನಿರ್ವಹಣೆಗೆ ಸಂಬಂಧಿಸಿದ ಕಾರ್ಯಗಳಲ್ಲಿ ನಿಮಗೆ ವಿಶೇಷ ಬೆಂಬಲವಿದೆ ಸಿಗಲಿದೆ. ನಿಮ್ಮ ಕುಟುಂಬ ಸದಸ್ಯರ ಹರ್ಷಚಿತ್ತದ ವರ್ತನೆ ನಿಮ್ಮ ಮನೆಗೆ ಧನಾತ್ಮಕ ಕಂಪನ್ನು ತರುತ್ತದೆ. ನಿಮ್ಮ ಆತ್ಮವಿಶ್ವಾಸವು ಹೆಚ್ಚುತ್ತದೆ. ಮನೆಯಲ್ಲಿ ಮತ್ತು ಸಮಾಜದಲ್ಲಿ ನಿಮ್ಮ ಯಾವುದೇ ವಿಶೇಷ ಯಶಸ್ಸಿನ ಬಗ್ಗೆ ಚರ್ಚೆಗಳು ಸಹ ನಡೆಯುತ್ತವೆ. ಇನ್ನೊಬ್ಬರಿಗೆ ಅಪಮಾನವಾಗುವಂತೆ ಇಂದಿನ‌ ನಿಮ್ಮ ಮಾತು ಇರಬಹುದು. ಮರದ ವೃತ್ತಿಯನ್ನು ಮಾಡುವವರಗೆ ಲಾಭ ಕಡಿಮೆ ಇದ್ದೀತು. ಸ್ನೇಹಿತರು ನಂಬಿಕೆಗೆ ದ್ರೋಹ ಬಗೆಯಬಹುದು. ವಿದೇಶಕ್ಕೆ ಪ್ರಯಾಣಿಸಲು ಅನುಮತಿ ಪತ್ರವು ಸಿಗಲಿದೆ. ನಿರೀಕ್ಷಿಸಿದ ಗೌರವವು ಕಡಿಮೆಯಾದಂತೆ ಅನ್ನಿಸಬಹುದು. ಖರೀದಿಯ ವೇಳೆ ಅಸಲಿ ನಕಲಿಗಳ ಬಗ್ಗೆ ಅರಿವು ಇರಲಿ. ಮಕ್ಕಳ ಚಟುವಟಿಕೆಗಳಲ್ಲಿ ಆಸಕ್ತಿ ವಹಿಸುವುದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ನಿಮ್ಮ ಯಶಸ್ಸಿನ ಕಾರಣದಿಂದಾಗಿ, ಕೆಲವು ಜನರು ನಿಮ್ಮ ಬಗ್ಗೆ ಅಸೂಯೆ ಹೊಂದಬಹುದು. ಕೆಲಸದ ಕ್ಷೇತ್ರದಲ್ಲಿ, ನಿಮ್ಮ ಕಠಿಣ ಪರಿಶ್ರಮಕ್ಕೆ ಅನುಗುಣವಾಗಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.

-ಲೋಹಿತ ಹೆಬ್ಬಾರ್ – 8762924271 (what’s app only)

ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ