Daily Horoscope 5 September 2024: ಸುಳ್ಳಿನಿಂದ ಇಂದು ನಿಮ್ಮ ವ್ಯಕ್ತಿತ್ವಕ್ಕೆ ತೊಂದರೆ ಆದೀತು ಎಚ್ಚರ
ಸೆಪ್ಟೆಂಬರ್ 5, 2024ರ ನಿಮ್ಮ ಭವಿಷ್ಯ ಹೇಗಿದೆ?: ಈ ರಾಶಿಯವರು ಯಾರದ್ದಾರೂ ಮಾತು ನಿಮಗೆ ಖುಷಿಕೊಡುವುದಾದರೆ ಅಂತಹುದನ್ನು ಕೇಳಿ. ಇಂದು ನೀವು ಬೇರೆಯವರ ಕಷ್ಟಕ್ಕೆ ನೆರವಾಗುವಿರಿ. ನೀವು ಇಂದು ನಂಬಿಕೆಯನ್ನು ಸುಳ್ಳು ಮಾಡುವಿರಿ. ನಿಮ್ಮ ಪ್ರಾಬಲ್ಯವೇ ಮೇಲಾದೀತು. ಹಾಗಾದರೆ ಇಂದಿನ (2024 ಸೆಪ್ಟೆಂಬರ್ 05) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಹಸ್ತಾ, ಯೋಗ: ಶುಭ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:40 ಗಂಟೆ, ರಾಹು ಕಾಲ ಮಧ್ಯಾಹ್ನ 02:03 ರಿಂದ ಸಂಜೆ 03:36, ಯಮಘಂಡ ಕಾಲ ಬೆಳಿಗ್ಗೆ 06:22 ರಿಂದ 07:54ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 09:27 ರಿಂದ 10:59ರ ವರೆಗೆ.
ಮೇಷ ರಾಶಿ : ನಿಮ್ಮ ಪಾಲಿಗೆ ಬರಬೇಕಾದುದು ಬಂದೇಬರುತ್ತದೆ. ಇಂದು ನೀವು ವಿವಾದಗಳಿಗೆ ಆತಂಕಪಡುವಿರಿ. ಇತರರಿಗೆ ಒಳ್ಳೆಯದನ್ನು ಮಾಡುವ ಕಾರ್ಯಕ್ಕೆ ಪ್ರತಿಫಲವಿದೆ. ಇಂದು ಮನೆಯಲ್ಲಿ ಏನಾದರೂ ತೊಂದರೆ ಕಾಣಿಸಿಕೊಳ್ಳಬಹುದು. ನಿಮ್ಮ ನಿರೀಕ್ಷಿತ ಗುರಿಯನ್ನು ತಲುಪಲು ನೀವು ವಿಳಂಬ ಆಗಬಹುದು. ತಾಳ್ಮೆಯ ಕೊರತೆ ಇದ್ದಂತೆ ಕಾಣುತ್ತದೆ. ಸಂತೋಷವು ಇಂದು ಹೆಚ್ಚಾಗಬಹುದು. ಬಂಧುಗಳು ನಿಮ್ಮನ್ನು ಬೇಕೆಂದೇ ತಪ್ಪು ದಾರಿ ತೋರಿಸುವರು. ನಿಮ್ಮ ವಿವೇಚನಾ ಶಕ್ತಿಯು ಕೆಲಸ ಮಾಡಲಿ. ದಾರಿಯನ್ನು ಸರಿ ಮಾಡಿಕೊಳ್ಳುವುದು ಉತ್ತಮ. ಪರೀಕ್ಷೆಗಳನ್ನು ಎದುರಿಸುವುದು ನಿಮಗೆ ಸಹಜ ಕೆಲಸವಾಗಿದೆ. ಸಣ್ಣ ಕಾರ್ಯವನ್ನು ಮಾಡಲು ನಿಮಗೆ ಬಾರದು. ಕೇಳಿದವರಿಗೆ ನಿಮ್ಮ ಸಹಾಯವು ಸಿಗಲಿದೆ. ಹೆಚ್ಚಿನ ಆದಾಯದ ಬಗದಗೆ ಚಿಂತನೆ ಮಾಡುವಿರಿ. ಕೇಳಿದ್ದಕ್ಕೆ ಮಾತ್ರ ನಿಮ್ಮ ಉತ್ತರವಿರಲಿ. ವಿಚಲಿತವಾಗುವ ಮನಸ್ಸನ್ನು ಒಂದೆಡೆ ಕೇಂದ್ರೀಕರಿಸಿ.
ವೃಷಭ ರಾಶಿ : ದುಡುಕಿ ಮಾತನಾಡಿ ಬರಬೇಕಾದುದನ್ನು ಕಳೆದುಕೊಳ್ಳುವಿರಿ. ಕುಟುಂಬದಲ್ಲಿ ಒಂದು ಮಟ್ಟಿನ ಸೌಖ್ಯವು ಇರಲಿದೆ. ಇಷ್ಟಮಿತ್ರರು ನಿಮ್ಮನ್ನು ಭೇಟಿ ಮಾಡುವರು. ಕ್ಷೇಮಸಮಾಚಾರವನ್ನು ಹಂಚಿಕೊಳ್ಳುವರು. ನಿಮ್ಮ ಕೆಲಸಗಳಿಗೇ ನೀವು ಇಂದು ಹೆಚ್ಚು ಪ್ರಾಮುಖ್ಯ ನೀಡಿ. ಹೂಡಿಕೆಯ ಚಿಂತನೆಯಲ್ಲಿ ನೀವು ಇರುವಿರಿ. ಸಂತಾನದ ಸುಖವನ್ನು ನೀವುಬಪಡೆಯುವಿರಿ. ಸಾಹಸ ಮಾಡಲು ಹೋಗುವಾಗ ಎಚ್ಚರವಿರಲಿ. ಮುಖಭಂಗ ಮಾಡಿಕೊಂಡು ಬರಬೇಕಾದೀತು. ಆಪ್ತರಿಂದ ಧನವನ್ನು ನಿರೀಕ್ಷಿಸಿ, ಪಡೆದುಕೊಳ್ಳುವಿರಿ. ವಿದ್ಯಾಭ್ಯಾಸವನ್ನು ನೀವು ಅನ್ಯರ ಒತ್ತಾಯಕ್ಕೆ ಮಾಡುವಿರಿ. ಅನಾರೋಗ್ಯದ ಲಕ್ಷಣವು ನಿಮ್ಮಲ್ಲಿ ಕಾಣಿಸಿಕೊಳ್ಳಬಹುದು. ಅತಿಯಾದ ಮರೆವು ಉಂಟಾಗಲಿದೆ ಇಂದು. ವಾಹನವನ್ನು ಚಲಿಸುವಾಗ ಬಹಳ ಎಚ್ಚರಿಕೆ ಅಗತ್ಯ. ಪರೋಪಕಾರಕ್ಕೆ ಸಮಯವನ್ನು ಕೊಡುವಿರಿ. ಅತಿಯಾದ ವೇಗದಲ್ಲಿ ವಾಹನ ಚಾಲನೆ ಬೇಡ. ವಿಳಂಬವಾದರೂ ಏನೂ ತೊಂದರೆಯಾಗದು.
ಮಿಥುನ ರಾಶಿ : ಭೂಮಿಯ ವ್ಯವಹಾರವನ್ನು ಯಾವುದೋ ತೊಂದರೆಯಿಲ್ಲದೇ ಮಾಡಲಾಗದು ಎಂಬ ಮನೋಭಾವ ಬದಲಾಗುವುದು. ನಿಮಗೆ ಮಕ್ಕಳ ಮುಂದಿನ ವಿದ್ಯಾಭ್ಯಾಸದ ಚಿಂತೆ ಹೆಚ್ಚಾಗುವುದು. ಸರ್ಕಾರದಲ್ಲಿ ಆಗಬೇಕಾದ ನಿಮ್ಮ ಕೆಲಸವು ಸ್ವಲ್ಪ ವೇಗವನ್ನು ಪಡೆಯವುದು. ಅಧಿಕಾರಿಗಳ ಭೇಟಿಯಿಂದ ನಿಮ್ಮ ಉದ್ಯೋಗದಲ್ಲಿ ಪ್ರಭಾವವು ಹೆಚ್ಚಾಗಬಹುದು. ನಿಶ್ಚಿತ ಗುರಿಯನ್ನು ನೀವು ತಲುಪುವ ಕಡೆ ಹೆಜ್ಜೆಹಾಕುವಿರಿ. ಆದಾಯವು ಚಿಂತಿಸಿದ ಮಟ್ಟದಲ್ಲಿದ್ದರೂ ಖರ್ಚು ಅದಕ್ಕಿಂತಲೂ ಹೆಚ್ಚಾಗಲಿದೆ. ಸಂಸಾರದಲ್ಲಿ ಸಣ್ಣ ವಿಚಾರಗಳನ್ನು ದೊಡ್ಡ ಮಾಡಿಕೊಳ್ಳುವುದು ಬೇಡ. ಮನೆಯಲ್ಲಿ ಯಾರಾದರೂ ತಟಸ್ಥರಾದರೆ ಕಲಹವು ಶಾಂತವಾಗಬಹುದು. ಶಾಂತವಾದ ಮನಸ್ಸಿನಿಂದ ನೆಮ್ಮದಿ ಕಾಣುವುದು. ಸ್ವಲ್ಪ ಮಾನಸಿಕ ಆಲಸ್ಯವು ಇರುವುದು. ಗೊಂದಲವನ್ನು ಇನ್ನೊಬ್ಬರ ಬಳಿ ಹೇಳಿ. ಇನ್ನೊಬ್ಬರ ಮೇಲೆ ಬಲಪ್ರಯೋಗ ಬೇಡ. ಪರಿಹಾರವನ್ನು ಕಂಡುಕೊಳ್ಳಬಹುದು. ಪರೋಪಕಾರದ ಬಗ್ಗೆ ನಿಮಗೆ ಹೆಚ್ಚು ಒಲವು.
ಕರ್ಕಾಟಕ ರಾಶಿ : ಒಳ್ಳೆಯ ಸಂಬಂಧಗಳು ನಿಮಗೆ ಪಥ್ಯವಾಗದೇ ಇರಬಹುದು. ನಿಮ್ಮ ಕಠಿಣ ಪರಿಶ್ರಮದಿಂದ ಅಂದುಕೊಂಡಿದ್ದನ್ನು ಸಾಧಿಸುವಿರಿ. ಆದರೆ ಅದಕ್ಕೆ ಬೇಕಾದ ಸರಳ ಮಾರ್ಗವನ್ನು ಮರೆಯುವಿರಿ. ಇಂದು ನೀವು ಮಾಡುವ ಕೆಲಸಗಳು ಲಾಭದಾಯಕ ಆಗಿದ್ದರೂ ಪರಿಶ್ರಮವೂ ಹೆಚ್ಚಿರಲಿದೆ. ಚಂಚಲವಾದ ಮನಸ್ಸನ್ನು ನೀವು ನಿಯಂತ್ರಿಸಲು ಬೇಕಾದ ಕ್ರಮವನ್ನು ಅನುಸರಿಸಿ. ನಿಮ್ಮ ಬಂಧುಗಳು ಹಣಕಾಸಿನ ಸಹಾಯಕ್ಕಾಗಿ ನಿಮ್ಮನ್ನು ಕೇಳಿಯಾರು. ಕೊಟ್ಟರೂ ಕೊಡದಿದ್ದರೂ ಮನಸ್ತಾಪ ಏಳಬಹುದು. ಬಂಧುಗಳ ಜೊತೆಗಿನ ಕಲಹವು ನಿಮ್ಮ ಪ್ರತಿಷ್ಠೆಯ ಪ್ರಶ್ನೆಯಾಗಲಿದೆ. ಬೆಳವಣಿಗೆಗೆ ಬೇಕಾದ ಸಾಮರ್ಥ್ಯ ಕೊರತೆ ಇದ್ದು ಅದನ್ನು ಸರಿಮಾಡಿಲೊಳ್ಳಬೇಕಿದೆ. ಯೋಗ್ಯ ವಿವಾಹಸಂಬಂಧವು ಬರಬಹುದು. ನಿಮ್ಮ ಕ್ಷುಲ್ಲಕ ಕಾರಣದಿಂದ ಅದನ್ನು ಬಿಟ್ಟ ಬಿಡುವುದು ಬೇಡ. ಮನಸ್ಸನ್ನು ಸಂಗಾತಿಯ ಜೊತೆ ಹಂಚಿಕೊಳ್ಳಿ. ಒಬ್ಬರಮೇಲೆ ಒಬ್ಬರು ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತ ಇಂದು ಇರಬಹುದು. ನಿಮ್ಮ ಯಶಸ್ಸನ್ನು ಮನೆಯವರು ಸಂಭ್ರಮಿಸಬಹುದು.
ಸಿಂಹ ರಾಶಿ : ಒಳ್ಳೆಯ ವಿಚಾರಗಳನ್ನು ಪ್ರಚಾರ ಮಾಡುವ ಬಗ್ಗೆ ಚಿಂತಿಸಿ. ಇಂದು ನಿಮ್ಮ ಕೆಲಸ ಕಾರ್ಯಗಳಲ್ಲಿ ಕೊಂಚ ಬದಲಾವಣೆಯನ್ನು ಮಾಡಲಿದ್ದೀರಿ. ಅಧಿಕಾರದ ಬಲಾಬಲವನ್ನು ತಿಳಿದುಕೊಳ್ಳ ವಾಗ್ವಾದವು ಅಧಿಕಾರಿಗಳ ನಡುವೆ ನಡೆಯಬಹುದು. ಕುಂಟುತ್ತಿರುವ ಉದ್ಯಮಕ್ಕೆ ವೇಗವನ್ನು ನೀವೇ ಕೊಡಬೇಕು. ಒಬ್ಬರಿಂದ ಆಗದ್ದನ್ನು ಮಾಡಲು ಹೋಗಬೇಡಿ. ನಿಮ್ಮ ಅಹಂಕಾರವೇ ನಿಮ್ಮನ್ನು ಜನರಿಂದ ದೂರವಿರುವಂತೆ ಮಾಡಬಹುದು. ಸಾಲವನ್ನು ವೇಗವಾಗಿ ತೀರಿಸಲು ನೀವು ಇಂದು ಶ್ರಮ ಪಡುವಿರಿ. ಯಾರದೋ ಮಾತು ನಿಮ್ಮ ಬುದ್ಧಿಯನ್ನು ಹಾಳುಮಾಡೀತು. ನಿಮ್ಮ ಜೊತೆಗೆ ನಿಮ್ಮನ್ನು ದ್ವೇಷಿಸುವವರು ಇರುವರು. ಜಾಗರೂಕರಾಗಿರುವುದು ಉಚಿತ. ಎಲ್ಲವನ್ನೂ ನಂಬಿಕೆಯ ಆಧಾರದ ಮೇಲೆ ಸ್ವೀಕರಿಸಬೇಕಿಲ್ಲ. ಪ್ರೇಮವು ಬುದ್ಧಿಯ ನೇತೃತ್ವದಲ್ಲಿ ನಡೆಯಲಿ. ಸರ್ಕಾರಿ ಉದ್ಯೋಗಿಗಳಿಗೆ ನಿಮ್ಮ ಚಾತುರ್ಯದ ಕಾರಣದಿಂದ ಹೆಚ್ಚಿನ ಅಧಿಕಾರವು ಪ್ರಾಪ್ತವಾಗುವುದು. ತುರ್ತಾಗಿ ಆಗಬೇಕಾದುದನ್ನು ಮೊದಲು ಪಟ್ಟಿ ಮಾಡಿ ಅರಂಭಿಸಿ.
ಕನ್ಯಾ ರಾಶಿ : ಒಬ್ಬರನ್ನೇ ನಂಬಿ ಕುಳಿತರೆ ನಿಮಗೆ ಆಗಬೇಕಾದುದು ಸಕಾಲಕ್ಕೆ ಆಗದು. ನೀವು ಅಧಿಕಾರವನ್ನು ಪಡೆಯಲು ಮಾರ್ಗವನ್ನು ಬದಲಿಸುವಿರಿ. ಖರ್ಚನ್ನು ನೀವು ನಿಯಂತ್ರಣ ಮಾಡುವ ಅವಶ್ಯಕತೆ ಇಂದು ಬರಬಹುದು. ಮಹಿಳೆಯರು ನಿಮ್ಮಿಂದ ಸಹಾಯವನ್ನು ಪಡೆಯುವರು. ನೀವೇ ನಿರ್ಮಿಸಿಕೊಂಡ ಹಳೆಯ ಮನೆಗೆ ಹೋಗಿ ವಾಸಮಾಡಬೇಕಾದೀತು. ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಹುದು. ಹವಾಮಾನ ಬದಲಾವಣೆಯಿಂದ ನಿಮ್ಮ ದೇಹದ ಮೇಲೆ ವಿರುದ್ಧ ಪರಿಣಾಮವನ್ನು ಉಂಟುಮಾಡಬಹುದು. ನಿಮ್ಮ ಪ್ರಯಾಣವು ಸರಿಯಾದ ಯೋಜನೆಯಿಂದ ಇದ್ದಿರಲಿ. ಬಹಳ ದಿಮಗಳಿಂದ ಮಾಡದೇ ಉಳಿದ ಕಾರ್ಯವನ್ನು ಪೂರ್ಣಮಾಡುವಿರಿ. ಕಲಹವು ಇಂದು ದ್ವೇಷವಾಗಿ ಪರಿವರ್ತನೆ ಆಗಬಹುದು. ಯಾರನ್ನೂ ಅವಲಂಬಿಸಲು ಹೋಗಬೇಡಿ. ನ್ಯಾಯಾಲಯದ ವಿಚಾರದಲ್ಲಿ ನಿಮಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಸ್ತ್ರೀಯರ ಮಾತಿನ ಮೇಲೆ ನಿಮಗೆ ನಂಬಿಕರ ಹೋಗಬಹುದು. ಮನೆಯಲ್ಲಿಯೂ ನಿಮ್ಮ ಮಾತಿಗೆ ಸರಿಯಾದ ಬೆಲೆ ಸಿಗುವುದು.
ತುಲಾ ರಾಶಿ : ನಿಮ್ಮ ತಪ್ಪಿಗೆ ಯಾವುದೋ ಒಂದು ರೀತಿಯಲ್ಲಿ ಪ್ರಾಯಶ್ಚಿತ್ತವಾಗಲಿದೆ. ನಿಮ್ಮ ಪೂರ್ವಯೋಜಿತ ವಿಷಯಗಳಿಂದ ಸಫಲತೆಯನ್ನು ಕಾಣಲಿದ್ದೀರಿ. ದೀರ್ಘಕಾಲದ ನೋವನ್ನು ಕಡಿಮೆ ಮಾಡಿಕೊಳ್ಳಲು ಇಂದು ಪ್ರಯತ್ನಿಸುವಿರಿ. ಪುಣ್ಯಸ್ಥಳದ ಕಡೆಗೆ ನಿಮ್ಮ ಗಮನವಿರುವುದು. ಉದ್ಯಮದಲ್ಲಿ ಹೊಸರೀತಿಯ ಲಾಭಾವನ್ನು ಪಡೆಯಲು ಆಲೋಚಿಸುವಿರಿ. ಮಾನಸಿಕ ಒತ್ತಡವು ನಿಮ್ಮ ಕೆಲಸಗಳನ್ನು ಹಾಳು ಮಾಡೀತು. ದಾಂಪತ್ಯದಲ್ಲಿ ಸಣ್ಣ ವಿರಸವು ಉಂಟಾಗಬಹುದು. ಮಕ್ಕಳ ವಿಚಾರದಲ್ಲಿ ನಿಮ್ಮ ವರ್ತನೆಯು ಬಾಲಿಶ ಎನಿಸಬಹುದು. ಯಾರನ್ನೋ ಮೆಚ್ಚಿಸಲು ನೀವು ಸಮಯವನ್ನು ಕಳೆಯಬೇಕಿಲ್ಲ. ದೀರ್ಘಕಾಲ ಸ್ನೇಹಿತರು ವಿವಾಹಕ್ಕೆ ಹಿರಿಯರ ಅನುಮತಿಯನ್ನು ಪಡೆಕೊಳ್ಳಿ. ಅನಿರೀಕ್ಷಿತ ಅತಿಥಿಸತ್ಕಾರವು ನಿಮಗೆ ಸಿಗಲಿದೆ. ದಿನದ ಕೆಲವು ಸಮಯದಲ್ಲಿ ನಿಮಗೆ ಉತ್ತಮ ಜೀವನದ ಸೂಚನೆ ಸಿಗಲಿದೆ. ಮಾನಸಿಕ ಗಟ್ಟಿತನವು ನಿಮಗೆ ಅವಶ್ಯವಾಗಿ ಬೇಕಾದೀತು.
ವೃಶ್ಚಿಕ ರಾಶಿ : ವ್ಯವಸ್ಥೆಯನ್ನು ಸರಿ ಮಾಡುವ ಉದ್ದೇಶವೇ ನಿಮ್ಮಲ್ಲಿ ಇರುವುದು. ನಿಮಗೆ ಮಕ್ಕಳ ವಿಚಾರದಲ್ಲಿ ಸಂತೋಷವಿರಲಿದೆ. ಸ್ತ್ರೀ ಪುರುಷರ ನಡವೆ ಪರಸ್ಪರ ದ್ವೇಷಬರಬಹುದು. ಖಾಸಗಿ ಉದ್ಯೋಗಿಗಳಿಗೆ ಒಳ್ಳೆಯ ಸುದ್ದಿ ಸಿಗಬಹುದು. ನಿಮ್ಮ ಗುರಿಗಳು ಬದಲಾದಷ್ಟೂ ನಿಮ್ಮ ಶ್ರಮವೂ ವ್ಯರ್ಥವಾಗಬಹುದು. ಸಂಗಾತಿಯ ಜೊತೆ ಹೆಚ್ಚು ಕಾಲ ಕಳೆಯುವ ಮನಸ್ಸಿದ್ದರೂ ಸಮಯದ ಅಭಾವದಿಂದ ಅದು ಸಾಧ್ಯವಾಗದು. ಇದೇ ನಿಮ್ಮ ನಡುವಿನ ಒಡಕು ಉಂಟಾಗಲು ಕಾರಣವಾಗಬಹುದು. ನಿಮ್ಮ ಕೊರತೆಯನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುವಿರಿ. ಇಟ್ಟುಕೊಳ್ಳಲು ಕೊಟ್ಟ ಹಣವು ಪುನಃ ಬಾರದೇ ಇದ್ದೀತು. ಹಿರಿಯರ ಎದುರು ಮಾತನಾಡಲು ನೀವು ಹೆದರುವಿರಿ. ನಿಮ್ಮ ಅಧ್ಯಯನದಿಂದ ನಿಮ್ಮನ್ನು ವಿಚಲಿತಗೊಳಿಸುವ ಅನಗತ್ಯ ವಾದಗಳನ್ನು ತಪ್ಪಿಸಿ. ಅಂದುಕೊಂಡಂತೆ ಕಾರ್ಯವು ಸಾಗದು ಎಂಬ ಕೊರಗು ಇರುವುದು. ಬೇಡವೆಂದ ಕಾರ್ಯವನ್ನು ಹಠದಿಂದ ಮಾಡುವಿರಿ. ನಿಮ್ಮ ಬಲದ ಮೇಲೇ ಕೆಲಸವನ್ನು ಪ್ರಾರಂಭಿಸಿ. ಎಲ್ಲವನ್ನೂ ಒಂದೇ ದೃಷ್ಟಿಯಿಂದ ನೋಡಲು ಸಾಧ್ಯವಾಗದು.
ಧನು ರಾಶಿ : ಹಿರಿಯರಿಗೆ ನಿಮ್ಮ ಮೇಲೆ ಸದಭಿಪ್ರಾಯ ಮೂಡದೇ ಇರಬಹುದು. ನಿಮ್ಮ ಸಹೋದರರಿಂದ ನಿಮಗೆ ಆಕಸ್ಮಿಕವಾಗಿ ಸಹಾಯ ಸಿಗಬಹುದು. ಮಕ್ಕಳ ಮೇಲೆ ನಿಮಗೆ ಬೇಸರ ಉಂಟಾಗಬಹುದು. ತಾಳ್ಮೆಯನ್ನು ಕಳೆದುಕೊಳ್ಳುವ ಸ್ಥಿತಿಯು ಎದುರಾಗಬಹುದು. ಹೆಚ್ಚಿನ ಆದಾಯಕ್ಕಾಗಿ ಸುಳ್ಳುಹೇಳಬೇಕಾದೀತು ಅಥವಾ ನಷ್ಟವನ್ನು ತುಂಬಿಕೊಳ್ಳಲು ಅನ್ಯಮಾರ್ಗವನ್ನು ಪ್ರವೇಶಮಾಡಬಹುದು. ಮನೆಯ ವಾತಾವರಣವು ನಿಮಗೆ ಹಿತವಾಗಲಿದೆ. ಸುಳ್ಳಿನಿಂದ ಇಂದು ನಿಮ್ಮ ವ್ಯಕ್ತಿತ್ವಕ್ಕೆ ತೊಂದರೆ ಆದೀತು. ವಿಶೇಷವಾದ ವಸ್ತುವನ್ನು ಕೊಳ್ಳುವ ವಿಚಾರದಲ್ಲಿ ಮೋಸ ಹೋಗುವಿರಿ. ವಾಹನದಿಂದ ಲಾಭವನ್ನು ಪಡಯುವಿರಿ. ಅತಿಯಾದ ವೇಗ ಬೇಡ. ಯಾರಮೇಲೂ ಒತ್ತಡಬೇಡ. ಭೂಮಿಯ ಬಗ್ಗೆ ಜಾಗರೂಕತೆ ಅವಶ್ಯಕ. ಸಣ್ಣ ಪಾಲು ಕೈತಪ್ಪಬಹುದು. ಸಂಗಾತಿಯ ಮಾತುಗಳು ನಿಮಗೆ ಅನಿರೀಕ್ಷಿತ ಆದೀತು. ಸ್ಥಿರಾಸ್ತಿಯನ್ನು ಮಾರಾಟ ಮಾಡುವ ಪ್ರಯತ್ನದಲ್ಲಿ ಇರುವಿರಿ.
ಮಕರ ರಾಶಿ : ಯಾರದ್ದಾರೂ ಮಾತು ನಿಮಗೆ ಖುಷಿಕೊಡುವುದಾದರೆ ಅಂತಹುದನ್ನು ಕೇಳಿ. ಇಂದು ನೀವು ಬೇರೆಯವರ ಕಷ್ಟಕ್ಕೆ ನೆರವಾಗುವಿರಿ. ನೀವು ಇಂದು ನಂಬಿಕೆಯನ್ನು ಸುಳ್ಳು ಮಾಡುವಿರಿ. ನಿಮ್ಮ ಪ್ರಾಬಲ್ಯವೇ ಮೇಲಾದೀತು. ದೈವದತ್ತವಾದ ಆರೋಗ್ಯವನ್ನು ನೀವೇ ಹಾಳುಮಾಡಿಕೊಳ್ಳುವಿರಿ. ಸ್ವಂತ ಉದ್ಯೋಗವಿದ್ದರೆ ಜನರು ವಂಚಿಸಬಹುದು. ನಿಮ್ಮ ಸಂಗಾತಿಯ ಜೊತೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗಲಾರದು. ಕೆಲಸಕ್ಕೆ ಸಂಬಂಧಿಸಿದಂತೆ ಕೆಲವು ದಿನಗಳವರೆಗೆ ಮನೆಯಿಂದ ದೂರವಿರಬೇಕಾಗುವುದು. ಕಚೇರಿಯಲ್ಲಿ ನಿಮ್ಮ ಸಾಧನೆಗೆ, ನಿಷ್ಠೆಗೆ ಮೆಚ್ಚುಗೆ ಸಿಗಲಿದೆ. ನಿಮ್ಮ ಕೆಲಸದಲ್ಲಿ ನೀವು ಪ್ರಾಮಾಣಿಕರಾಗಿ ಇರುವಿರಿ. ಸಾಧನೆಯ ರುಚಿ ನಿಮಗೆ ಸಿಗಲಿದೆ. ಇದೇ ನಿಮಗೆ ಇಷ್ಟದ ವಿಚಾರವಾಗಿದೆ. ನೂತನ ವಸ್ತುಗಳ ಖರೀದಿಗೆ ಹಣವು ಖರ್ಚಾದೀತು. ಸ್ನೇಹದಿಂದ ಪ್ರೇಮವು ಉಂಟಾಗಲಿದೆ. ಸಂಬಂಧದ ಮಹತ್ವವನ್ನು ತಿಳಿಯುವುದು. ಕಷ್ಟವೆಂದುಕೊಂಡ ಕಾರ್ಯವು ಗೊತ್ತಾಗದೇ ಮುಗಿದುಹೋದೀತು. ಬೇಕಾದಷ್ಟು ಕೆಲಸಗಳಿದ್ದರೂ ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲ.
ಕುಂಭ ರಾಶಿ : ಸಾಲಕೂಪವೂ ದಿನದಿಂದ ದಿನಕ್ಕೆ ಹೆಚ್ಚಾದಂತೆ ತೋರುತ್ತದೆ. ನೀವು ಧಾರ್ಮಿಕ ಕಾರ್ಯಗಳಲ್ಲಿ ತೊಡಗುವ ಆಸಕ್ತಿ ಇರುವುದು. ಅನಿರೀಕ್ಷಿತ ಧನಾಗಮನವು ನಿಮಗೆ ಸಂತಸವನ್ನು ತರಲಿದೆ. ಅನವಶ್ಯಕ ವಸ್ತುಗಳನ್ನು ಖರೀದಿಸುವ ಚಪಲತೆ ಬರುವುದು. ಮನೆಗೆ ಬಂದರನ್ನು ಬರಿ ಕೈಯಲ್ಲಿ ಏನನ್ನಾದರೂ ಕೊಡಿಸುವುದು ಉಚಿತ. ಮಕ್ಕಳ ಮೇಲಿನ ಮೋಹವು ನಿಮ್ಮನ್ನು ಕುರುಡು ಮಾಡಬಹುದು. ವಿವಾಹದ ಮಾತುಕತೆ ವಿಳಂಬವಾಗಿ ನಿಮಗೆ ಬೇಸರ ತರಿಸಬಹುದು. ಲೆಕ್ಕಪತ್ರ ವಿಷಯದಲ್ಲಿ ನೀವು ಹಿಂದುಳಿಯುವಿರಿ. ಸಭೆಯಲ್ಲಿ ನಿಮ್ಮನ್ನು ಗೌರವಿಸಬಹುದು. ವಾಹನದಲ್ಲಿ ನೀವು ಪ್ರಯಾಣ ಮಾಡಲು ನಿಮಗೆ ಕಷ್ಟವಾದೀತು. ಸಿಗದುದರ ಬಗ್ಗೆ ಬಹಳ ಆಲೋಚನೆ ಬೇಡ. ಯಾರ ಮೆಚ್ಚುಗೆಯೂ ನಿಮಗೆ ಸಮಾಧಾನ ತರದು. ವಿನಾಕಾರಣ ಕಾಲಹರಣ ಮಾಡಲಿದ್ದು ಕಛೇರಿಯ ಕೆಲಸದ ಬಗ್ಗೆಯೇ ಚಿಂತೆ ಇರದು. ಮಾರಾಟದ ವಿಚಾರವಾಗಿ ನೀವು ಬೇರೆ ಊರಿಗೆ ಹೋಗಬೇಕಾಗಬಹುದು. ಕಳೆದುಕೊಂಡಿದ್ದರ ಬಗ್ಗೆ ನಿಮಗೆ ಬೇಸರವಿರದು.
ಮೀನ ರಾಶಿ : ನಿಮ್ಮ ಹಣವು ಒಳ್ಳೆಯ ಕಾರ್ಯಕ್ಕೆ ಉಪಯೋಗವಾದರೆ ಖುಷಿಪಡಿ. ಸಂಕಟಪಟ್ಟುಕೊಂಡು ಬರುವ ಪುಣ್ಯವನ್ನೂ ಕಳೆದುಕೊಳ್ಳಬೇಡಿ. ಇಂದು ನಿಮ್ಮ ಸ್ವಂತ ಕಾರ್ಯದಲ್ಲಿ ಹೆಚ್ಚಿನ ಪ್ರಗತಿ ಇರುವುದು. ನೀವು ಇಂದು ಸಂಪನ್ಮೂಲ ವ್ಯಕ್ತಿಳಾಗಿ ನೀವು ಇರುವಿರಿ. ನಿಮ್ಮ ಗುಣಗಳನ್ನು ಇತರರು ಹೇಳಿಯಾರು. ಸಮಯಕ್ಕೆ ನೀವು ಹೆಚ್ಚು ಮಹತ್ತ್ವವನ್ನು ಕೊಡಬಹುದು. ಗೃಹೋತ್ಪನ್ನಗಳ ಮಾರಟ ಮಾಡಲು ನಿಮಗೆ ದಾರಿ ಸಿಗುವುದು. ನಿಮ್ಮನ್ನು ಕೆರಳಿಸಲಿ ಯಾರಾದರೂ ಬರಬಹುದು. ನಿಮ್ಮ ಅಹಂಕಾರಕ್ಕೆ ಕಡಿವಾಣ ಹಾಕಿಕೊಳ್ಳಿ. ಸುಖದುಃಖಗಳು ಎರಡೂ ನಿಮಗೆ ಸಮವಾಗಿ ಸಿಗಬಹುದು. ಹೆಚ್ಚು ಶ್ರವಹಿಸಿ ಕೆಲಸ ಮಾಡುವುದನ್ನು ನಿಲ್ಲಿಸಬಹುದು. ಸಹೋದ್ಯೋಗಿಗಳು ತಪ್ಪಿಗೆ ನಿಮ್ಮ ಕಡೆ ಬೊಟ್ಟು ಮಾಡಿ ತೋರಿಸಿಯಾರು. ಹಳೆಯ ಕೆಲಸದಲ್ಲಿ ಮಂದಗತಿ ಇರಲಿದೆ. ಬಹಳ ದಿನಗಳ ಅನಂತರ ಚಿಕ್ಕ ಕುಟುಂಬದ ಜೊತೆ ಪ್ರಯಾಣ ಮಾಡುವಿರಿ. ವ್ಯಾಪಾರದಲ್ಲಿ ಅಲ್ಪ ಲಾಭವೇ ಆದರೂ ನೆಮ್ಮದಿ. ನೀವು ಯಾರಿಗೋ ಸಹಾಯ ಮಾಡಲು ಹೋಗಿ ಆಪತ್ತಿನಲ್ಲಿ ಸಿಕ್ಕಿಕೊಳ್ಳಬಹುದು.
-ಲೋಹಿತ ಹೆಬ್ಬಾರ್ – 8762924271 (what’s app only)