ಇಂದಿನ ರಾಶಿ ಭವಿಷ್ಯ (Horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ಡಿಸೆಂಬರ್ 02) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಅನೂರಾಧಾ, ಮಾಸ: ಕಾರ್ತಿಕ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಪುಷ್ಯಾ, ಯೋಗ: ಬ್ರಹ್ಮ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 43 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 00 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:33 ರಿಂದ 10:57 ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 01:47 ಗಂಟೆ 03:11 ನಿಮಿಷಕ್ಕೆ, ಗುಳಿಕ ಕಾಲ ಬೆಳಗ್ಗೆ 06:43 ರಿಂದ 08:08ರ ವರೆಗೆ.
ಧನು ರಾಶಿ : ವೈದ್ಯವೃತ್ತಿಯು ಹೊಸ ತಿರುವನ್ನು ಪಡೆದುಕೊಳ್ಳಬಹುದು. ನಿಮ್ಮಿಂದಾಗದ ಕಾರ್ಯದಲ್ಲಿ ಶ್ರದ್ಧೆಯು ಆಧಿಕವಾಗಿರುವುದು. ತಮಾಷೆಗೆ ಆಡಿದ ಮಾತು ಕಲಹವಾಗಿ ಪರಿವರ್ತಿತವಾದೀತು. ಸರ್ಕಾರದ ಅಧಿಕಾರಗಳ ಭಯವು ಇರಲಿದೆ. ಕಳೆದುಕೊಂಡಿದ್ದನ್ನು ಮತ್ತೆ ಪಡೆಯುವ ಆಸೆ ಇರಲಿದೆ. ಆಹಾರ ವ್ಯತ್ಯಾಸದಿಂದ ಹೊಟ್ಟೆಯಲ್ಲಿ ಶೂಲೆ ಕಾಣಿಸಿಕೊಳ್ಳಬಹುದು. ದೇಹದಂಡನೆಯು ಹೊಸ ಖಯಿಲೆಯನ್ನು ತರಿಸಬಹುದು. ಮನೆಯ ಔಷಧಿಯಿಂದ ಅದನ್ನು ಸರಿ ಮಾಡಿಕೊಳ್ಳಿ. ನಿಮಗೆ ಸಂಸ್ಥೆಯಲ್ಲಿ ಕಾರ್ಯವನ್ನು ನಿರ್ವಹಿಸಲು ಕರೆ ಬರಬಹುದು. ನಿಮ್ಮ ಕಳೆದ ಜೀವನವನ್ನು ಮೆಲುಕುಹಾಕುವಿರಿ. ಇಂದು ಸಾಲದಿಂದ ನೀವು ಮುಕ್ತರಾಗಿ ಸ್ವಲ್ಪ ನೆಮ್ಮದಿ ಪಡುವಿರಿ. ಕೃಷಿಕರು ತಮ್ಮ ಉತ್ಪನ್ನದಿಂದ ಅಲ್ಪ ಲಾಭ ಪಡೆವರು. ವಿನಾಕಾರಣ ಇನ್ನೊಬ್ಬರ ಮೇಲೆ ಸಿಟ್ಟಾಗುವುದು ಬೇಡ. ಇನ್ನೊಬ್ಬರ ಮಾತನ್ನು ಕೇಳುವ ಸಹನೆ ಇರಲಿ. ಮರೆವು ಹೆಚ್ಚಾದಂತೆ ಅನ್ನಿಸೀತು.
ಮಕರ ರಾಶಿ : ನಿಮ್ಮವರು ಎಂಬ ಮನೋಭಾವ ಅಧಿಕವಾಗಿ ಕಾಡುವುದು. ಅಪರಿಚಿತ ಪ್ರದೇಶವು ನಿಮಗೆ ಆತಂಕವನ್ನು ಹೆಚ್ಚಿಸಬಹುದು. ಸಂಗಾತಿಯ ಬಳಿ ವಾಹನ ಖರೀದಿಗಾಗಿ ಒತ್ತಾಯಿಸುವಿರಿ. ಆಪ್ತರಿಂದ ನಿಮಗೆ ಇಷ್ಟವಾದ ವಸ್ತುವು ಪ್ರಾಪ್ತವಾಗುವುದು. ಆಕಸ್ಮಿಕವಾಗಿ ಅನಾರೋಗ್ಯವು ಕಾಣಿಸಿಕೊಳ್ಳಬಹುದು. ಸಾಲಪಡೆದವರು ನಿಮ್ಮನ್ನು ಪೀಡಿಸಬಹುದು. ಸಂಗಾತಿಯನ್ನು ಕಳೆದುಕೊಳ್ಳುವ ಭೀತಿ ಇರಲಿದೆ. ಪಾಲುದಾರಿಕೆಯಲ್ಲಿ ಇಂದು ಸಣ್ಣ ವಿಚಾರಕಗಕೇ ಕಲಹವಾಗುವುದು. ಇಂದು ಅಗತ್ಯವಿರುವಷ್ಟು ಮಾತ್ರವೇ ಮಾತನಾಡಿ. ನಿಮ್ಮದಲ್ಲದ ವಸ್ತುಗಳನ್ನು ಯಾರಿಗಾದರೂ ಕೊಡುವ ಮೊದಲು ಯೋಚಿಸಿ. ಗೊತ್ತಿಲ್ಲ ಕೆಲಸಕ್ಕೆ ಹುಂಬುತನ ಬೇಡ. ನಿಮ್ಮ ಮಾತುಗಳು ಹಾಸ್ಯಾಸ್ಪದವಾಗುವುದು. ಹಿರಿಯರ ಜೊತೆ ಅನುಭವವನ್ನು ಹಂಚಿಕೊಳ್ಳುವಿರಿ.
ಕುಂಭ ರಾಶಿ : ನಿಮಗೆ ಆತ್ಮಸಂತೋಷವೇ ಮುಖ್ಯವಾಗಿದ್ದು, ಅದನ್ನು ಪಡೆಯುವಿರಿ. ಮಕ್ಕಳ ಕಾರಣದಿಂದ ನೀವು ತಲೆ ತಗ್ಗಿಸಬೇಕಾಗಬಹುದು. ಆಕಸ್ಮಿಕ ಧನಲಾಭದಿಂದ ಸಂತಸವು ಇರಲಿದೆ. ರಪ್ತು ಉದ್ಯಮದಲ್ಲಿ ನಿಮಗೆ ಲಾಭ ಸಿಗಲಿದೆ. ಮನಸ್ಸು ಬಹಳ ಉತ್ಸಾಹದಿಂದ ಇರಲಿದೆ. ಮನೆಯ ಹಿರಿಯರ ಸೇವೆಯನ್ನು ಮಾಡುವಿರಿ. ಪರೀಕ್ಷೆಯಲ್ಲಿ ನೀವು ಅಂದುಕೊಂಡಷ್ಟು ಫಲಿತಾಂಶ ಸಿಗದು. ನಿಮ್ಮ ಪ್ರೀತಿಗೆ ಬೆಲೆ ಸಿಗದೇಹೋದೀತು. ಸಂಗಾತಿಯು ನಿಮಗೆ ಒಂದೇ ವಿಚಾರಗಳನ್ನು ಮತ್ತೆ ಮತ್ತೆ ಹೇಳಿ ಬೇಸರ ತರಿಸುವರು. ಮೈ ಚಳಿಯನ್ನು ಬಿಟ್ಟು ಧೈರ್ಯದಿಂದ ಮುನ್ನಡೆಯಿರಿ. ನಿಮಗಾದ ಸಹಾಯವನ್ನು ನೀವು ಸ್ಮರಿಸಿಕೊಳ್ಳುವಿರಿ. ಅಧಿಕಾರಿಗಳ ಪ್ರಶ್ನೆಗೆ ನಿಮ್ಮ ಉತ್ತರವು ಸರಿಯಾಗಿ ಇರಲಿ. ನಿಮ್ಮನ್ನು ನೋಡುವ ದೃಷ್ಟಿಯು ಬದಲಾದೀತು. ಸಿಟ್ಟನ್ನು ಬಿಟ್ಟು ಶಾಂತವಾಗಿ ಸಮಾಧಾನ ಚಿತ್ತದಿಂದ ಮಾತನಾಡಿ.
ಮೀನ ರಾಶಿ : ಉದ್ಯೋಗದಲ್ಲಿ ಬಡ್ತಿ ಸಿಗಬಹುದು. ಸ್ಥಿರಾಸ್ತಿ ಅಲ್ಪ ಭಾಗವನ್ನು ಮಾರಾಟ ಮಾಡುವ ಚಿಂತನೆ ನಡೆಸುವಿರಿ. ಜೀವನ ಸಂಗಾತಿಯನ್ನು ಅಚ್ಚರಿಗೊಳಿಸುವಿರಿ. ನಿಮ್ಮ ಎಲ್ಲ ಕಾರ್ಯವನ್ನು ಬಿಟ್ಟು ಇಂದು ನೀವು ಅವರ ಜೊತೆ ಸಮಯವನ್ನು ಕಳೆಯುವಿರಿ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ನಿಮಗೆ ಚಿಂತೆ ಇರಲಿದೆ. ಸಹೋದರನಿಂದ ಆರ್ಥಿಕ ಸಹಕಾರವನ್ನು ನಿರೀಕ್ಷಿಸುವಿರಿ. ಆರೋಗ್ಯವು ನಿನ್ನೆಗಿಂತ ಉತ್ತಮವಾಗಿದ್ದು, ಹಾಗೆಯೇ ಉಳಿಸಿಕೊಳ್ಳಲು ಪ್ರಯತ್ನಿಸಿ. ಆಸ್ತಿಯನ್ನು ಮಾರಾಟಮಾಡುವ ಆಲೋಚನೆ ಇರಲಿದೆ. ನಿಮ್ಮ ಸ್ನೇಹಿತರಲ್ಲಿ ಇಂದು ದೊಡ್ಡ ಸಾಲವನ್ನು ಕೇಳುವಿರಿ. ಸ್ವೋದ್ಯೋಗವನ್ನು ಮಾಡುತ್ತಿದ್ದರೆ ಸ್ವಲ್ಪ ನಷ್ಟವಾಗಬಹುದು. ಕುಟುಂಬವು ನಿಮ್ಮ ಜೊತೆಗೆ ನಿಲ್ಲುವುದು. ಹಳೆಯ ವಿಚಾರಗಳನ್ನು ನೀವು ಮತ್ತೆ ಕೆದಕುವಿರಿ. ನಿಮ್ಮ ಮಾತಿನಿಂದ ಯಾವ ಕೆಲಸವು ಆಗದು.
-ಲೋಹಿತಶರ್ಮಾ – 8762924271 (what’s app only)