ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮೇ 2ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನೀವೆಲ್ಲಾದರೂ ವರ್ಗಾವಣೆಗಾಗಿ ಕೇಳಿಕೊಂಡಿದ್ದಲ್ಲಿ ಆ ಬಗ್ಗೆ ಆಗುವ ಬೆಳವಣಿಗೆಗೆ ಬಗ್ಗೆ ಮಾಹಿತಿ ಸಿಗುವ ಸಾಧ್ಯತೆ ಇದೆ. ಮಕ್ಕಳನ್ನು ಇಂಥದ್ದೇ ಶಾಲೆ ಅಥವಾ ಕಾಲೇಜಿಗೆ ಸೇರಿಸಬೇಕು ಎಂದು ನಿರ್ಧರಿಸಿದವರಿಗೆ ತಮ್ಮ ನಿಲವು ಬದಲಾವಣೆ ಮಾಡಿಕೊಳ್ಳಬೇಕಾಗಿ ಬರಬಹುದು. ಕೃಷಿ ಕ್ಷೇತ್ರದಲ್ಲಿ ಇರುವವರಿಗೆ ಹೊಸ ಜಮೀನು ಖರೀದಿ ಮಾಡುವ ಆಲೋಚನೆ ಬಂದೀತು.
ಮಸಾಲೆಯುಕ್ತ ಪದಾರ್ಥಗಳಿಂದ ದೂರ ಇರಿ. ದೂರದ ಊರು, ದೇಶಗಳಿಂದ ಆಪ್ತರು ಬರುವ ಸುದ್ದಿ ದೊರೆಯಲಿದೆ ಅಥವಾ ಹಾಗಲ್ಲದಿದ್ದರೆ ನೀವೇ ಅವರನ್ನು ಭೇಟಿ ಆಗಲು ತೆರಳುವ ಅವಕಾಶ ಸಿಗಬಹುದು. ಹೆಚ್ಚು ಹೊತ್ತು ಲ್ಯಾಪ್‌ಟಾಪ್ ಮುಂದೆ ಕೂರುವಂಥವರು ಅಥವಾ ಒಂದೇ ಕಡೆ ನಿಂತು ಅಥವಾ ಕೂತು ಕೆಲಸ ಮಾಡುವಂಥವರು ಆರೋಗ್ಯದ ಕಡೆ ಗಮನ ನೀಡಿ.
ಪೊಲೀಸ್ ಇಲಾಖೆ, ಸೈನ್ಯ, ಖಾಸಗಿ ಸೆಕ್ಯೂರಿಟಿ ಏಜೆನ್ಸಿಗಳಲ್ಲಿ ಕೆಲಸ ಮಾಡುತ್ತಿರುವಂಥವರು ಈ ದಿನ ಒಂದಿಷ್ಟು ಗಾಂಭೀರ್ಯ ಕಾಪಾಡಿಕೊಳ್ಳುವುದು ಮುಖ್ಯ. ಯಾವುದೋ ಮಾತಿನ ಭರಾಟೆಯಲ್ಲಿ ಇತರರ ಬಗ್ಗೆ ಉಚಾಯಿಸಿ ಆಡಿದ ಮಾತಿಗೆ ಭಾರೀ ಬೆಲೆ ತೆರಬೇಕಾದೀತು.
ಕ್ರಿಪ್ಟೋಕರೆನ್ಸಿ ಅಥವಾ ಡಿಜಿಟಲ್ ಸ್ವತ್ತುಗಳಲ್ಲಿ ಹೂಡಿಕೆ ಮಾಡಿದವರು ಪ್ರಮುಖ ತೀರ್ಮಾನ ಕೈಗೊಳ್ಳಬೇಕಾದ ದಿನ ಇದು. ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುವ ನಿಮ್ಮ ಸ್ವಭಾವ ಈ ದಿನ ನೆರವಿಗೆ ಬರಲಿದೆ. ಪಾರ್ಟನರ್‌ಷಿಪ್ ವ್ಯವಹಾರ ಮಾಡುತ್ತಿರುವವರಿಗೆ ನೆರವಿನ ಹಸ್ತ ದೊರೆಯಲಿದೆ.
ನಿಮ್ಮ ಅನುಮಾನಗಳು ನಿಜ ಆಗಬೇಕು ಅಂತೇನಿಲ್ಲ. ಹಿಂದೆ ಯಾವಾಗಲೋ ಆದ ಕೆಟ್ಟ ಅನುಭವವೊಂದನ್ನು ಈಗ ಹೋಲಿಕೆ ಮಾಡುತ್ತಾ ಹೋಗದಿರಿ. ವಿದೇಶಕ್ಕೆ ಹೋಗುವುದಕ್ಕೆ ಪ್ರಯತ್ನ ಪಡುತ್ತಿರುವವರಿಗೆ ಶುಭ ವಾರ್ತೆ ಕೇಳುವ ಯೋಗ ಇದೆ. ಸೈಟು ಖರೀದಿ ಮಾಡಬೇಕು ಅಂತಿದ್ದಲ್ಲಿ ಇಷ್ಟು ಆಗುವಂಥ ಜಾಗ ಸಿಗಲಿದೆ. ಈ ದಿನ ಮನೆಯಿಂದ ಹೊರಗೆ ಹೋಗುವ ಮುನ್ನ ಹಸಿ ಕಡಲೇಕಾಳು ಬಾಯಿಗೆ ಹಾಕಿಕೊಂಡು ಹೋಗಿ.
ಒಂದು ಹೊಸ ಪ್ರೀತಿಯಲ್ಲಿ ಬೀಳುವ ಅವಕಾಶ ಇದೆ. ಅದು ಹುಡುಗ ಅಥವಾ ಹುಡುಗಿ ಹೊಸ ವಿದ್ಯೆ, ಕ್ಯಾಮೆರಾ, ಗ್ಯಾಜೆಟ್, ಹವ್ಯಾಸ ಹೀಗೆ ಪ್ರೀತಿಯಲ್ಲಿ ಬೀಳುತ್ತೀರಿ. ಅಡುಗೆ ಮನೆ ಕಡೆಗೆ ಈ ದಿನ ತುಂಬ ಸಲ ಹೋಗಬೇಡಿ. ಅದರಲ್ಲೂ ಸ್ವಲ್ಪ ಮರೆವಿನ ಸಮಸ್ಯೆ ಇದೆ ಅನ್ನುವವರು ಬೆಂಕಿ, ವಿದ್ಯುತ್, ಗ್ಯಾಸ್ ಸಿಲಿಂಡರ್ ಇಂಥವುಗಳ ಬಳಕೆ ಎಚ್ಚರಿಕೆಯಿಂದ ಮಾಡಿ.
ಎಲ್ಲರೂ ತಮ್ಮಿಂದ ಆಗಲ್ಲ ಎಂದು ಕೈಬಿಟ್ಟ ಜವಾಬ್ದಾರಿ ಅಥವಾ ಕೆಲಸ ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಅದು ಹೀಗೆ ಅಂತ ನಿಮಗೆ ಕೆಲಸ ತಂದವರು ಸಹ ಹೇಳುವ ಸಾಧ್ಯತೆ ಇಲ್ಲ. ಆದ್ದರಿಂದ ಕೂಲಂಕಷವಾಗಿ ನಿಮ್ಮ ಜವಾಬ್ದಾರಿ ಏನು ಹಾಗೂ ಒಂದು ವೇಳೆ ಮಾಡಲು ಆಗದಿದ್ದರೆ ಹೇಗೆ ಎಂಬುದನ್ನು ವಿಚಾರಿಸಿಕೊಳ್ಳಿ. ಮಧ್ಯಾಹ್ನದ ಹೊತ್ತಿಗೆ ಪಕ್ಷಿಗಳಿಗೆ ನೀವು ತಿನ್ನುವ ಆಹಾರದ ಅಲ್ಪ ಭಾಗವನ್ನಾದರೂ ಹಾಕಿ.
ಎಲ್ಲೆಲ್ಲಿಂದ ಹಣದ ಮೂಲಗಳಿಗೆ ಎಂದು ಆಲೋಚನೆ ಮಾಡುವುದಕ್ಕೆ ಶುರು ಮಾಡುತ್ತೀರಿ. ಈ ಹಿಂದೆ ಯಾವಾಗಲೂ ನೀವು ಕೆಲಸ ಮಾಡಿಕೊಟ್ಟ ರೀತಿಯನ್ನು ಬಹಳ ಇಷ್ಟಪಟ್ಟು ಮತ್ತೆ ಹುಡುಕಿಕೊಂಡು ಬರಲಿದ್ದಾರೆ. ಆದರೆ ಇವತ್ತು ನಿಮ್ಮ ಗ್ಯಾಜೆಟ್, ಲ್ಯಾಪ್‌ಟಾಪ್, ಮೊಬೈಲ್ ಹ್ಯಾಕ್ ಆಗುವ ಅಥವಾ ಅದನ್ನು ಬೇರೆಯವರು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಗಳಿವೆ.
ಹಾವನ್ನು ಹಿಡಿಯುವವರು ಬರೀ ಕೈಯಲ್ಲಿ ಹೋಗ್ತಾರಾ? ಅದೇ ರೀತಿ ಭರ್ಜರಿ ಬೇಟೆಗೆ ಸಿದ್ಧತೆ ಇಲ್ಲದೆ ತೆರಳುತ್ತಾರಾ? ಇವೆಲ್ಲ ಯಾಕೆ ಹೇಳುತ್ತಿದ್ದೇನೆ ಅಂದರೆ, ಇನ್ನೊಬ್ಬರ ಸಹಾಯಕ್ಕೆ ನಿಲ್ಲುವ ಮೊದಲು ಅವರ ಕಡೆ ಎಷ್ಟು ಸತ್ಯ ಇದೆ ಎಂಬುದನ್ನು ಆಲೋಚಿಸಿ. ಜತೆಗೆ ಸಿದ್ಧತೆ ಇಲ್ಲದೆ ಯಾವುದಕ್ಕೂ ಮುನ್ನುಗ್ಗಬೇಡಿ.
ಲೇಖನ- ಎನ್.ಕೆ.ಸ್ವಾತಿ