Numerology Predictions: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮೇ 1ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮೇ 1 ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮೇ 1ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ನಿಮ್ಮ ಸುತ್ತಮುತ್ತಲಿನ ಜನರಿಂದ ಪ್ರಾಶಸ್ತ್ಯ ಹೆಚ್ಚು ಪಡೆದುಕೊಳ್ಳುತ್ತೀರಿ. ಹಿಂದೆ ನೀವು ಅದೇನು ಊಹೆ ಮಾಡಿದ್ದರೋ ಅದೇ ರೀತಿಯಲ್ಲಿ ಬೆಳವಣಿಗೆಗಳು ಆಗುವುದರಿಂದ ಬೇರೆಯವರಿಗೆ ನಿಮ್ಮ ಬಗ್ಗೆ ಗೌರವ ಮೂಡಲಿದೆ. ಈ ದಿನ ಕನಿಷ್ಠ ಒಂದು ಗಂಟೆ ನಿಮ್ಮ ಮೊಬೈಲ್‌ಫೋನ್‌ನಿಂದ ದೂರ ಇರಿ. ಅದರಲ್ಲೂ ಸಂಜೆ ನಂತರದಲ್ಲಿ ಹೀಗೆ ಮಾಡಿ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ನೀವು ಯಾವುದಕ್ಕಾಗಿಯೋ ಬಹಳ ನಿರೀಕ್ಷೆ ಮಾಡುತ್ತಿದ್ದೀರಿ ಅಂತಾದರೆ ಈ ದಿನ ಆ ಬಗೆಗಿನ ಕೆಲವು ಬೆಳವಣಿಗೆ ನಿಮ್ಮ ಅನುಭವಕ್ಕೆ ಬರಲಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರು ಭವಿಷ್ಯದ ಹೂಡಿಕೆ ವಿಚಾರದಲ್ಲಿ ಅನುಭವಿಗಳ ಸಲಹೆಯನ್ನು ಕೇಳಬೇಕು, ಪಾಲಿಸಬೇಕು. ಹಣಕಾಸಿನ ವಿಚಾರದಲ್ಲಿ ಅತಿಯಾದ ಆತ್ಮವಿಶ್ವಾಸ ಬೇಡ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಮನೆಯ ಪ್ರಮುಖ ಜವಾಬ್ದಾರಿ ನಿಮ್ಮ ಪಾಲಿಗೆ ಬರಲಿದೆ. ಅದು ಮದುವೆಯೋ ತಿಂಗಳು ತಿಂಗಳಿನ ಖರ್ಚೋ ಅಥವಾ ಒಂದು ಕುಟುಂಬವನ್ನು ನೋಡಿಕೊಳ್ಳಬೇಕು ಅಂತಲೋ ಒಟ್ಟಿನಲ್ಲಿ ಖರ್ಚಿನ ಬಾಬ್ತು. ಆದ್ದರಿಂದ ಹಣಕಾಸಿನ ಯೋಜನೆಯನ್ನು ಸರಿಯಾಗಿ ಹಾಕಿಕೊಳ್ಳಿ. ಇನ್ನು ಆರಂಭದಲ್ಲಿ ಒಪ್ಪಿಗೆ ಕೊಟ್ಟು, ಆ ನಂತರ ಆಗಲಿಲ್ಲ ಎನ್ನುವಂಥ ಸ್ಥಿತಿ ತಂದುಕೊಳ್ಳಬೇಡಿ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಎಲ್ಲ ಟೀಕೆಗಳಿಗೂ ಉತ್ತರಿಸಲೇಬೇಕು ಅಂತಿಲ್ಲ. ನಿಮ್ಮ ಉದ್ದೇಶದಲ್ಲಿ ಯಾವುದೇ ದೋಷವಿಲ್ಲ ಎಂದು ಸಾಬೀತು ಮಾಡುವುದಕ್ಕೆ ಜಾಸ್ತಿ ಸಮಯ ಕೊಡದಿರಿ. ಇನ್ನು ಮನರಂಜನೆಯ ದಿನವಾಗಿರಲಿದೆ, ನೀವು ಮುಕ್ತವಾಗಿ ಆಲೋಚಿಸಬೇಕು ಅಷ್ಟೇ. ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬೇಕು ಅಂದುಕೊಳ್ಳುವವರು ಈ ದಿನ ಸೂಕ್ತ ವ್ಯಕ್ತಿಯನ್ನು ಭೇಟಿ ಆಗಲಿದ್ದೀರಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ನೀವು ಸಮಯ ಕಳೆಯಲು ಇಷ್ಟಪಡುವಂಥ ವ್ಯಕ್ತಿಯ ಜತೆಗೆ ಇರುವುದಕ್ಕೆ ಅವಕಾಶ ಸಿಗುವ ಸಾಧ್ಯತೆ ಇದೆ. ಬಿಗುಮಾನವೋ ಸಂಕೋಚವೋ ಮಾಡಿಕೊಳ್ಳದಿರಿ. ಈ ದಿನ ನಿಮ್ಮ ಆಹಾರವನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳುವುದು ಮುಖ್ಯ. ಇಲ್ಲದಿದ್ದಲ್ಲಿ ಇಡೀ ದಿನ ಲಯ ತಪ್ಪುವಂತಹ ಸಾಧ್ಯತೆಗಳಿವೆ. ಒಮ್ಮೆಯಾದರೂ ಹೊರನಾಡು ಅನ್ನಪೂರ್ಣೇಶ್ವರಿ ದೇವಿಯನ್ನು ಸ್ಮರಿಸಿ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಆನ್‌ಲೈನ್ ಗೇಮ್ ಅಥವಾ ವ್ಯವಹಾರದಲ್ಲಿ ಹಣ ಕಳೆದುಕೊಳ್ಳುವ ಯೋಗ ನಿಮ್ಮ ಪಾಲಿಗೆ ಇದೆ. ಆದ್ದರಿಂದ ಯಾವುದೇ ಆನ್‌ಲೈನ್ ಗೇಮ್ ವ್ಯಸನ ಇದ್ದಲ್ಲಿ ಇಂದು ಕಡ್ಡಾಯವಾಗಿ ಆಡದಿರಿ. ಇಲ್ಲ ಅಂಥದ್ದು ಯಾವುದೂ ಇಲ್ಲ ಅಂತಾದಲ್ಲಿ ಆ ಕಡೆ ತಿರುಗಿಯೂ ನೋಡಬೇಡಿ. ಇಂದು ನಿಮ್ಮಿಂದ ಸಾಧ್ಯವಾದರೆ ಅಶಕ್ತರಿಂದ ಒಂದು ಹೊತ್ತಿನ ಊಟ ಕೊಡಿಸಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಬದಲಾವಣೆಯೊಂದಕ್ಕೆ ನೀವು ಸಿದ್ಧರಾಗಲಿದ್ದೀರಿ. ಇಷ್ಟು ಸಮಯ ವಿಚಾರಿಸಿ, ಅಳೆದು- ತೂಗಿ ನೋಡಿಯಾಗಿದೆ ಅಂದ ಮೇಲೆ ಇನ್ನೇನು ಅಖಾಡಕ್ಕೆ ಇಳಿಯುವುದು ಮಾತ್ರ ಬಾಕಿ. ಈ ದಿನ ಅಲರ್ಜಿ ಆಗಬಹುದಾದ ಆಹಾರದಿಂದ ದೂರ ಇರಿ. ಬಾಯಿ ಚಪಲಕ್ಕೆ ಬಿದ್ದಿರೋ ಆರೋಗ್ಯ ಸಮಸ್ಯೆ ಆದೀತು.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ನಿಮ್ಮ ತಾಳ್ಮೆಗೆ ಈ ದಿನ ಪರೀಕ್ಷೆ ಇರಲಿದೆ. ಹೇಳಿದ್ದನ್ನೇ ಅದೆಷ್ಟು ಸಲ, ಅದೆಷ್ಟು ಜನರ ಮುಂದೆ ಹೇಳಬೇಕು ಎಂದು ಸಿಟ್ಟಾಗಬೇಡಿ. ಇದು ನಿಮ್ಮ ಸಾಮರ್ಥ್ಯದ ಪರೀಕ್ಷೆ ಅಲ್ಲ, ಅದೃಷ್ಟದ ಪರೀಕ್ಷೆ. ಆದ್ದರಿಂದ ತಾಳ್ಮೆ ಇರಲಿ. ನಿಮ್ಮ ವಾಟ್ಸಾಪ್ ಡಿಪಿಯಲ್ಲಾಗಲೀ ಅಥವಾ ಸ್ಕ್ರೀನ್ ಸೇವರ್ ಆಗಿಯಾಗಲೀ ವೆಂಕಟೇಶ್ವರನ ಚಿತ್ರವನ್ನು ಹಾಕಿಕೊಳ್ಳಿ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಕೈ ಮಣಿಕಟ್ಟಿನ ನೋವು ಕಾಣಿಸಿಕೊಳ್ಳಬಹುದು. ಲ್ಯಾಪ್‌ಟಾಪ್ ಮುಂದೆ ಹೆಚ್ಚು ಕೆಲಸ ಮಾಡುವಂಥವರು ಇದನ್ನು ನಿರ್ಲಕ್ಷ್ಯ ಮಾಡದಿರಿ. ಬೇರೆಯವರಿಗೆ ಚೆಕ್ ಬರೆದುಕೊಡುತ್ತಿದ್ದೀರಿ ಎಂದಾದರೆ ಎಲ್ಲ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ. ದೊಡ್ಡ ದೊಡ್ಡ ಯೋಜನೆಗಳನ್ನು ಏಕಾಏಕಿ ಹೇಳಿಕೊಂಡು ಬಿಡಬೇಡಿ. ಸಮಯಕ್ಕೆ ಕಾಯಿರಿ, ಅವುಗಳು ಇನ್ನೊಂದಿಷ್ಟು ಗಟ್ಟಿ ಆಗಲಿ.
ಲೇಖನ- ಎನ್.ಕೆ.ಸ್ವಾತಿ