Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಅಕ್ಟೋಬರ್ 27ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಅಕ್ಟೋಬರ್ 27ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. 

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಅಕ್ಟೋಬರ್ 27ರ ದಿನಭವಿಷ್ಯ
ಸಾಂದರ್ಭಿಕ ಚಿತ್ರ
Follow us
ಸ್ವಾತಿ ಎನ್​ಕೆ
| Updated By: Ganapathi Sharma

Updated on: Oct 27, 2023 | 1:00 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಅಕ್ಟೋಬರ್ 27ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ವಿವಾಹಕ್ಕಾಗಿ ಪ್ರಯತ್ನ ಮಾಡುತ್ತಿರುವವರಿಗೆ ಸಂಬಂಧಿಕರ ರೆಫರೆನ್ಸ್ ಮೂಲಕವಾಗಿ ಕೆಲವು ಸಂಬಂಧಗಳು ದೊರಕುವ ಅವಕಾಶಗಳಿವೆ. ಉದ್ಯೋಗ ಬದಲಾವಣೆಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಈ ಹಿಂದೆ ನೀವು ಕೆಲಸ ಮಾಡುತ್ತಿದ್ದ ಸ್ಥಳದಿಂದಲೇ ಉದ್ಯೋಗದ ಆಫರ್ ದೊರೆಯಬಹುದು. ಇನ್ನು ನಿಮ್ಮದಲ್ಲದ ತಪ್ಪು ಒಂದಕ್ಕೆ ಭಾರಿ ಬೆಲೆ ತೆರಬೇಕಾದ ಸಂದರ್ಭ ಎದುರಾಗಲಿದೆ. ನಿಮಗೆ ಅಗತ್ಯ ಇಲ್ಲದ ವಸ್ತುವನ್ನು ಯಾವುದೇ ಕಾರಣಕ್ಕೂ ಖರೀದಿ ಮಾಡುವುದಕ್ಕೆ ಹೋಗಬೇಡಿ. ಉದ್ಯೋಗ ನಿಮಿತ್ತವಾಗಿ ಪ್ರಯಾಣ ಹೊರಡಲೇಬೇಕು ಎಂದಾದರೆ ನೀವು ಹೋಗುವ ಕಡೆಗೆ ಕೆಲಸ ಆಗುತ್ತದೆ ಎಂಬುದನ್ನು ಖಾತ್ರಿ ಮಾಡಿಕೊಂಡು ಆ ನಂತರ ಹೊರಡುವುದು ಉತ್ತಮ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಎಲ್ಲರನ್ನೂ ಜೊತೆಗೂಡಿಸಿಕೊಂಡು ಕೆಲಸ ಮಾಡಬೇಕು ಎಂದುಕೊಳ್ಳುವ ನಿಮ್ಮ ಉದ್ದೇಶಕ್ಕೆ ಯಾರೋ ಒಬ್ಬರಿಂದ ದೊಡ್ಡ ಅಡೆತಡೆಯಾಗಲಿದೆ. ನಿಮ್ಮಲ್ಲಿ ಕೆಲವರು ಪದೋನ್ನತಿಗಾಗಿ ಎದುರು ನೋಡುತ್ತಿದ್ದಲ್ಲಿ ಇನ್ನೂ ಸ್ವಲ್ಪ ಸಮಯ ಕಾಯಬೇಕು ಎಂಬುದು ಮೇಲಧಿಕಾರಿಗಳ ಮೂಲಕವಾಗಿ ತಿಳಿದು ಬರಲಿದೆ. ಈ ಹಿಂದೆ ಯಾವಾಗಲೋ ಖರೀದಿಸಿದ್ದ ವಾಹನ ಈಗ ಸಮಸ್ಯೆಗೆ ಕಾರಣ ಆಗಬಹುದು. ಕಾಗದ ದಾಖಲೆ ಪತ್ರಗಳ ಕಡೆಗೆ ಹೆಚ್ಚಿನ ಗಮನವನ್ನು ನೀಡಿ. ಸರ್ಕಾರಕ್ಕೆ ಕಟ್ಟಬೇಕಾದ ನವೀಕರಣ ಶುಲ್ಕ, ಪರವಾನಗಿ ಶುಲ್ಕ ಇಂಥದ್ದನ್ನೇನಾದರೂ ಬಾಕಿ ಉಳಿಸಿಕೊಂಡಿದ್ದಲ್ಲಿ ಅದನ್ನು ಈ ದಿನ ಪಾವತಿಸುವ ಕಡೆಗೆ ಲಕ್ಷ್ಯ ಕೊಡಿ. ಇನ್ನು ನಿಮ್ಮ ವಿರುದ್ಧ ಕೆಲವರು ಮೇಲಧಿಕಾರಿಗಳಿಗೆ ದೂರು ನೀಡುವ ಸಾಧ್ಯತೆಗಳಿವೆ. ಮಾತುಕತೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಪ್ರಯತ್ನಿಸಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಬ್ಯಾಂಕ್ ಗಳಲ್ಲಿ ಸಾಲಕ್ಕಾಗಿ ಪ್ರಯತ್ನ ಮಾಡುತ್ತಿರುವವರಿಗೆ ಸಣ್ಣಪುಟ್ಟ ಅಡೆತಡೆಗಳು ಎದುರಾಗಬಹುದು. ಹೆಣ್ಣು ಮಕ್ಕಳಿಗೆ ಊಟ- ತಿಂಡಿ ವಿಚಾರವಾಗಿ ಕುಟುಂಬ ಸದಸ್ಯರು ಆಕ್ಷೇಪಗಳನ್ನು ಹೇಳಬಹುದು. ಮೇಲ್ನೋಟಕ್ಕೆ ತುಂಬಾ ಸರಳವಾಗಿ ಮುಗಿಯುತ್ತದೆ ಎಂದುಕೊಂಡ ಕೆಲಸ ಒಂದಕ್ಕಾಗಿ ಹೆಚ್ಚು ಸಮಯ, ಹಣವನ್ನು ಮೀಸಲಾಡಬೇಕಾದಂತಹ ಸನ್ನಿವೇಶ ಎದುರಾಗಲಿದೆ. ಇತರರ ವೈಯಕ್ತಿಕ ವಿಚಾರಗಳನ್ನು ನೀವು ಮಾತನಾಡಿದ್ದೀರಿ ಅಥವಾ ಕೆಟ್ಟದಾಗಿ ಹೇಳಿಕೊಂಡು ಬಂದಿದ್ದೀರಿ ಎಂದು ನಿಮ್ಮ ಬಗ್ಗೆ ಆಕ್ಷೇಪ ವ್ಯಕ್ತವಾಗಬಹುದು. ಔಷಧ ಬದಲಾವಣೆ ಅಥವಾ ವೈದ್ಯರ ಬದಲಾವಣೆ ಮಾಡಬೇಕು ಎಂದು ಆಲೋಚನೆ ಮಾಡುತ್ತಿರುವವರು ಸದ್ಯಕ್ಕೆ ಇದನ್ನು ಮುಂದೂಡುವುದು ಉತ್ತಮ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಅಷ್ಟೇನೂ ಮುಖ್ಯವಾದದ್ದಲ್ಲ ಎಂದುಕೊಂಡ ಸಂಗತಿಗಳಿಗೆ ವಿಪರೀತ ಪ್ರಾಮುಖ್ಯ ಬರಲಿವೆ. ಆದ್ದರಿಂದ ಉದ್ಯೋಗ ಸ್ಥಳದಲ್ಲಿ ಏನಾದರೂ ಕೆಲಸಗಳನ್ನು ವಹಿಸಿದರೆ ಅದಕ್ಕೆ ತುಂಬಾ ಆಸಕ್ತಿ ವಹಿಸಿ ಪೂರ್ಣಗೊಳಿಸುವ ಕಡೆಗೆ ಗಮನವನ್ನು ನೀಡಿ. ನಿಮ್ಮ ಪಾಲಿಗೆ ಬಂದಿದ್ದ ಕೆಲಸವನ್ನು ಇತರರಿಗೆ ವಹಿಸುವುದಕ್ಕೆ ಹೋಗಬೇಡಿ. ವಿದ್ಯಾರ್ಥಿಗಳಿಗೆ ಪೋಷಕರ ಜೊತೆಗೆ ಕೆಲವು ವಿಚಾರಗಳಿಗೆ ಅಭಿಪ್ರಾಯ ಭೇದಗಳು ಕಾಣಿಸಿಕೊಳ್ಳಲಿವೆ. ಸೋಶಿಯಲ್ ಮೀಡಿಯಾದಲ್ಲಿ ಆದಂತಹ ಪೋಸ್ಟ್ ನಿಮಗೆ ಸಿಟ್ಟು ತರಿಸಲಿದ್ದು, ಕೆಲವರ ಜೊತೆಗಿನ ಸ್ನೇಹವನ್ನು ಕಡಿದುಕೊಳ್ಳುವಂತೆ ಮಾಡುತ್ತದೆ. ಷೇರ್ ಟ್ರೇಡಿಂಗ್ ಮಾಡಬೇಕು ಎಂದುಕೊಳ್ಳುತ್ತಿರುವವರು ತಾತ್ಕಾಲಿಕವಾಗಿ ಈ ನಿರ್ಧಾರವನ್ನು ಮುಂದಕ್ಕೆ ಹಾಕಿಕೊಳ್ಳಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಮಕ್ಕಳ ಆರೋಗ್ಯ ವಿಚಾರವು ನಿಮಗೆ ಆತಂಕಕ್ಕೆ ಕಾರಣ ಆಗಲಿದೆ. ಸಂಗಾತಿಯ ನಿರೀಕ್ಷೆಗೆ ತಕ್ಕಂತೆ ನಡೆದುಕೊಳ್ಳುವುದು ಅಸಾಧ್ಯ ಎಂಬ ಧೋರಣೆ ನಿಮ್ಮಲ್ಲಿ ಮೂಡಲಿದೆ. ಇದೇ ಕಾರಣಕ್ಕೆ ವಾದ- ವಾಗ್ವಾದಗಳು ಆಗುವ ಸಾಧ್ಯತೆಗಳು ಇವೆ. ಈಗಾಗಲೇ ಮನೆ ನಿರ್ಮಾಣ ಮಾಡುತ್ತಿರುವವರಿಗೆ ಹೊಸ ಆಲೋಚನೆಗಳು ಬಂದು, ಹೆಚ್ಚುವರಿಯಾಗಿ ಹಣದ ಅಗತ್ಯ ಕಂಡುಬಂದು, ಬ್ಯಾಂಕ್ ಗಳಲ್ಲಿ ಲೋನ್ ಟಾಪ್ ಅಪ್ ಗೆ ಪ್ರಯತ್ನ ಮಾಡಲಿದ್ದೀರಿ. ಎನ್‌ಜಿಓಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಒಂದಿಷ್ಟು ಒತ್ತಡದ ಸನ್ನಿವೇಶಗಳು ಎದುರಾಗಲಿವೆ. ನಿಮ್ಮ ಮನಸ್ಸಿನ ಸಂತೋಷಕ್ಕಾಗಿ ಮಾಡಿದಂತಹ ಕೆಲಸಗಳಿಂದ ಅನೇಕರಿಗೆ ಸಹಾಯ ಒದಗಿ ಬರಲಿದೆ .

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಈಗ ಮಾಡುತ್ತಿರುವ ಕೆಲಸದಲ್ಲಿ ಒಂದು ಬಗೆಯ ಬೇಸರ ಮೂಡಲಿದೆ. ಅದು ಒಂದೇ ರೀತಿಯದು ಎಂಬ ಕಾರಣಕ್ಕೋ ಅಥವಾ ನಿಮ್ಮ ಸಾಮರ್ಥ್ಯಕ್ಕೆ ಅದು ತುಂಬಾ ಕಡಿಮೆ ಅಂತಲೋ ಅದನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ ನಿಮಗೆ ಮನಸ್ಸು ಆಗುವುದಿಲ್ಲ. ಇತರರು ಒಪ್ಪಿಕೊಂಡಿಯಾಗಿದೆ, ನೀವೂ ಇದನ್ನು ಮಾಡಲೇಬೇಕು ಎಂದು ಕೆಲವರು ನಿಮ್ಮ ಮೇಲೆ ಒತ್ತಡ ಹಾಕುವ ಸಾಧ್ಯತೆಗಳಿವೆ. ಸೆಕೆಂಡ್ ಹ್ಯಾಂಡ್ ದ್ವಿಚಕ್ರ ವಾಹನ ಅಥವಾ ಕಾರು ಖರೀದಿ ಮಾಡುವ ಬಗ್ಗೆ ಅಂತಿಮ ನಿರ್ಧಾರ ಮಾಡಲಿದ್ದೀರಿ. ನಿಮ್ಮಲ್ಲಿ ಕೆಲವರು ಬ್ಯಾಂಕ್ ನಲ್ಲಿ ಮಾಡಿರುವಂತಹ ಎಫ್ ಡಿ ಮುರಿಸುವಂತಹ ಸಾಧ್ಯತೆಗಳಿದ್ದು, ಅದನ್ನು ಬೇರೆ ಕಡೆಗೆ ಹೂಡಿಕೆ ಮಾಡಲಿದ್ದೀರಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ನಿಮ್ಮಲ್ಲಿ ಕೆಲವರು ಈಗ ನೀವು ಮಾಡುತ್ತಿರುವ ಉದ್ಯೋಗ ಅಥವಾ ವೃತ್ತಿಗೆ ಸಂಬಂಧಪಟ್ಟಂತೆ ಹೊಸ ಕೋರ್ಸ್ ಗಳಿಗೆ ಸೇರಿಕೊಳ್ಳುವ ಬಗ್ಗೆ ನಿರ್ಧಾರವನ್ನು ಮಾಡಲಿದ್ದೀರಿ. ಈ ವಿಚಾರದಲ್ಲಿ ಯಾವುದೇ ಗೊಂದಲಗಳನ್ನು ಇಟ್ಟುಕೊಳ್ಳುವುದಕ್ಕೆ ಹೋಗಬೇಡಿ. ಈ ರೀತಿ ಹೊಸ ಕೋರ್ಸ್ ಗಳನ್ನು ಮಾಡುವುದರ ಮೂಲಕ ಹೆಚ್ಚಿನ ಸಂಬಳ ಬರುವಂತಹ ಉದ್ಯೋಗಕ್ಕೆ ತೆರಳಲು ಅಥವಾ ಈಗ ನೀವು ಮಾಡುತ್ತಿರುವ ವೃತ್ತಿಯಲ್ಲಿ ಬರುತ್ತಿರುವ ಆದಾಯಕ್ಕಿಂತ ಹೆಚ್ಚಿನದನ್ನು ಗಳಿಸುವುದಕ್ಕೆ ವೇದಿಕೆ ಸಿದ್ಧವಾಗಲಿದೆ. ಮನೆಯಲ್ಲಿ ಎಲೆಕ್ಟ್ರಿಕಲ್ ಅಥವಾ ಎಲೆಕ್ಟ್ರಾನಿಕ್ ವಸ್ತುಗಳನ್ನು ಚಾರ್ಜಿಂಗ್ ಹಾಕುವಾಗ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಎಚ್ಚರಿಕೆಯನ್ನು ವಹಿಸುವುದು ಅಗತ್ಯ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನೀವು ಒಂದು ವೇಳೆ ಸ್ನೇಹಿತರು ಅಥವಾ ಸಂಬಂಧಿಕರಿಂದ ಸಹಾಯವನ್ನು ಅಪೇಕ್ಷೆ ಮಾಡಿದ್ದಲ್ಲಿ ಈ ದಿನ ಮನಸ್ಸಿಗೆ ಬೇಸರವಾಗುವಂತಹ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ನಿಮ್ಮ ಬಗ್ಗೆ ಕೆಲವರು ಅಪಪ್ರಚಾರವನ್ನು ಸಹ ಮಾಡಬಹುದು, ಇದರಿಂದ ನಿಮ್ಮ ವರ್ಚಸ್ಸಿಗೆ ಧಕ್ಕೆಯಾಗಲಿದೆ. ಒಂದು ವೇಳೆ ನೀವೇನಾದರೂ ಕೃಷಿ ಜಮೀನನ್ನು ಅಥವಾ ಕಟ್ಟಿರುವ ಮನೆಯನ್ನು ಅಥವಾ ಫ್ಲ್ಯಾಟ್ ಮಾರಾಟಕ್ಕೆ ಇಟ್ಟಿದ್ದೀರಿ ಅಂತಾದಲ್ಲಿ ಭಾರಿ ಕಡಿಮೆ ಬೆಲೆಗೆ ಅದನ್ನು ಖರೀದಿಗೆ ಕೇಳಲಿದ್ದಾರೆ, ಇದರಿಂದ ನಿಮ್ಮ ಆತ್ಮಸ್ಥೈರ್ಯ ಕುಗ್ಗುವಂತಹ ಸನ್ನಿವೇಶಗಳು ಸೃಷ್ಟಿಯಾಗಲಿವೆ. ಹೊಸಬರ ಜೊತೆಗೆ ವ್ಯವಹಾರ ಮಾಡುತ್ತಿದ್ದೀರಿ ಅಂತಾದಲ್ಲಿ ನಿಮ್ಮ ಅಂತರಂಗದ ಸಂಗತಿಗಳನ್ನು ಹಂಚಿಕೊಳ್ಳಬೇಡಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ನೀವು ಇಷ್ಟು ಸಮಯ ಉಳಿತಾಯ ಎಂದು ಭಾವಿಸಿದ್ದ ಮೊತ್ತವನ್ನು ತೆಗೆದು, ಅದರಿಂದ ನಿಮ್ಮ ಸಾಲಗಳನ್ನು ತೀರಿಸಿಕೊಳ್ಳುವ ಬಗ್ಗೆ ಆಲೋಚನೆಯನ್ನು ಮಾಡಲಿದ್ದೀರಿ. ಈ ಬಗ್ಗೆ ಕುಟುಂಬದ ಸದಸ್ಯರ ಜೊತೆಗೆ ಚರ್ಚೆ ನಡೆಸಲಿದ್ದೀರಿ. ಈ ಹಿಂದೆ ನೀವು ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ವ್ಯಕ್ತಿಯೊಬ್ಬರಿಗೆ ಮಾಡಿಕೊಟ್ಟಿದ್ದ ಕೆಲಸದ ಫಲವನ್ನು ಈ ದಿನ ಪಡೆಯಲಿದ್ದೀರಿ. ಅಂತಹ ವ್ಯಕ್ತಿ ಒಬ್ಬರು ನಿಮ್ಮನ್ನು ಈಗ ಹುಡುಕಿಕೊಂಡು ಬಂದು, ದೊಡ್ಡ ಆರ್ಡರ್ ನೀಡುವ ಸಾಧ್ಯತೆಗಳಿವೆ. ಈ ದಿನ ಯಾವುದೇ ಕಾರಣಕ್ಕೂ ಬರಿಗಾಲಲ್ಲಿ ಹೆಚ್ಚು ಓಡಾಡದಿರಿ, ಅದರಲ್ಲೂ ಹೊರಾಂಗಣದಲ್ಲಿ ಬರಿಗಾಲಲ್ಲಿ ಓಡಾಟ ನಡೆಸಬೇಡಿ. ಈ ದಿನ ಕಾಲು- ಪಾದದ ಸುರಕ್ಷತೆ ಕಡೆಗೆ ಹೆಚ್ಚಿನ ಗಮನವನ್ನು ನೀಡಬೇಕು.

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ