AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ದಿನಭವಿಷ್ಯ, ಈ ರಾಶಿಯವರು ದೇಹವನ್ನು ದಂಡಿಸಿ ಮಾಡುವ ಕೆಲಸಕ್ಕೆ ಹೆಚ್ಚು ಲಾಭವು ಸಿಗಲಿದೆ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಆಗಸ್ಟ್ 04) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ದಿನಭವಿಷ್ಯ, ಈ ರಾಶಿಯವರು ದೇಹವನ್ನು ದಂಡಿಸಿ ಮಾಡುವ ಕೆಲಸಕ್ಕೆ ಹೆಚ್ಚು ಲಾಭವು ಸಿಗಲಿದೆ
ಇಂದಿನ ರಾಶಿಭವಿಷ್ಯImage Credit source: freepik
TV9 Web
| Updated By: Rakesh Nayak Manchi|

Updated on: Aug 04, 2023 | 12:30 AM

Share

ಇಂದಿನ ನಿಮ್ಮ ರಾಶಿ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಆಗಸ್ಟ್ 04) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಆಶ್ಲೇಷಾ, ಮಾಸ: ಅಧಿಕ ಶ್ರಾವಣ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಪೂರ್ವಾಭಾದ್ರ, ಯೋಗ: ಸೌಭಾಗ್ಯ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 17 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 59 ನಿಮಿಷಕ್ಕೆ. ರಾಹು ಕಾಲ ಬೆಳಗ್ಗೆ 11:03 ರಿಂದ 12 :38ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:49 ರಿಂದ ಸಂಜೆ 05:24ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:53 ರಿಂದ 09:28ರ ವರೆಗೆ.

ಸಿಂಹ ರಾಶಿ: ಎಷ್ಟೇ ಪ್ರಯತ್ನಪಟ್ಟರೂ ನೀವು ಮಕ್ಕಳನ್ನು ಸರಿಮಾಡಲು ಆಗಲು ಎಂಬ ಹಂತಕ್ಕೆ ಬರುವಿರಿ. ಮುಖ್ಯ ಕೆಲಸಗಳಿಗಿಂತ ಬೇರೆ ಕೆಲಸಕ್ಕೇ ಹೆಚ್ಚು ಪ್ರಾಮುಖ್ಯವನ್ನು ಕೊಡುವಿರಿ. ಪಿತ್ರಾರ್ಜಿತ ಆಸ್ತಿಗಾಗಿ ಪತ್ನಿಯಿಂದ ಪ್ರೇರಣೆ ಪಡೆಯುವಿರಿ. ಉದ್ಯೋಗದ ಕಾರಣಕ್ಕೆ ನೀವು ಯಾರಿಗೋ ಕಾದು ಸಮಯವನ್ನು ವ್ಯರ್ಥ ಮಾಡಿಕೊಳ್ಳುವಿರಿ. ನೀವು ಮಾತನ್ನು ಕಡಿಮೆ ಮಾಡುವುದು ಒಳ್ಳೆಯದು. ಕೂಡಿಬರುವ ವಿವಾಹಭಾಗ್ಯವನ್ನು ನೀವು ನಿರಾಕರಿಸುವುದು ಬೇಡ. ಆತುರದಿಂದ ಏನಾದರೂ ಅಚಾತುರ್ಯವನ್ನು ಮಾಡಿಕೊಳ್ಳಬಹುದು. ಜೀವನವು ಸಪ್ಪೆ ಎನಿಸಬಹುದು. ಧಾರ್ಮಿಕ ವಿಚಾರದ ಬಗ್ಗೆ ಆಸಕ್ತಿ ಹೆಚ್ಚಿರುವುದು.

ಕನ್ಯಾ ರಾಶಿ: ನೀವು ನಿರೀಕ್ಷಿಸುತ್ತಿರುವ ಸಮಯವು ಇನ್ನೂ ಬಾರದೆಂದು ನಿಮಗೆ ಸಂಕಟವಾಗಬಹುದು. ಆರೋಗ್ಯವನ್ನು ಚಿಂತೆಯಿಂದ ಹಾಳು ಮಾಡಿಕೊಳ್ಳುವಿರಿ. ಬೇಕಾದಷ್ಟು ಸಂಪತ್ತಿದ್ದರೂ ನಿಮಗೆ ನೆಮ್ಮದಿಯ ಕೊರತೆ ಅಧಿಕವಾಗಿ ಇರಿಲಿದೆ. ನೀವು ಕೃತಜ್ಞತೆಯನ್ನು ಮರೆತುವಿರಿ. ಕೈಲಾದ ಸಹಾಯವನ್ನು‌ ಮಾಡಿ. ಸಂಬಂಧಗಳ ಮಹತ್ತ್ವವನ್ನು ನೀವು ಕಳೆದುಕೊಳ್ಳಬಹುದು. ವಿಶ್ವಾಸಕ್ಕೆ ಘಾಸಿಯಾಗದಂತೆ ನೀವು ನೋಡಿಕೊಳ್ಳಿ. ಅಧಿಕಾರವರ್ಗದಿಂದ ನಿಮಗೆ ಮಾನಸಿಕ‌ ಕಿರಿಕಿರಿ ಆಗಬಹುದು. ಉಡುಗೊರೆಯನ್ನು ನೀವು ಆಪ್ತರಿಂದ ಪಡೆಯುವಿರಿ. ನಿಮ್ಮ ಮಾತುಗಳನ್ನು ನಿರ್ಲಕ್ಷ್ಯ ಮಾಡಬಹುದು.

ತುಲಾ ರಾಶಿ: ನಿಮ್ಮ ಶಿಸ್ತಿನ ಜೀವನವನ್ನು ಯಾರೂ ಪ್ರಶ್ನಿಸಲಾರರು. ಹಣದ ವ್ಯವಹಾರವನ್ನು ಒಬ್ಬರೇ ಮಾಡುವುದು ಬೇಡ. ನಂಬಿಕಸ್ಥರನ್ನು ನಿಮ್ಮ ಜೊತೆ ಇಟ್ಟುಕೊಳ್ಳಿ. ಇನ್ನೊಬ್ಬರನ್ನು ಹಗುರಾಗಿ ಕಾಣುವುದು ನಿಮಗೆ ಅಭ್ಯಾಸವಾಗಿದ್ದು, ಅದನ್ನು ಬಿಡುವುದು ಒಳ್ಳೆಯದು. ಉದ್ಯೋಗದಿಂದ ನೀವು ಹೊರ ನಡೆದು ಹೊಸ ಉದ್ಯಮವನ್ನು ಆರಂಭಿಸಲು ಆಲೋಚಿಸುವಿರಿ. ನಿಮ್ಮ ಮಾತುಗಳು ಕುಟುಂಬದ ಗೌರವವನ್ನು ಕಡಿಮೆ ಮಾಡೀತು. ಹೆಚ್ಚು ಆಹಾರದ ಸೇವೆಯನ್ನು ಮಾಡಿ ಕಷ್ಟಪಡುವಿರಿ. ಭೂಮಿಯ ವ್ಯವಹಾರವನ್ನು ಮಾಡಲು ನಿಮಗೆ ಮನಸ್ಸು ಇಲ್ಲವಾಗಬಹುದು.

ವೃಶ್ಚಿಕ ರಾಶಿ: ನಿಮ್ಮ ಅಸಹಜ ವರ್ತನೆಯು ನಿಮ್ಮರಿಗೆ ಸಿಟ್ಟನ್ನು ತರಿಸಬಹುದು. ಎಲ್ಲರನ್ನೂ ನೀವು ಸಮಾನಭಾವದಿಂದ ಕಾಣಬೇಕಾಗುವುದು. ದೇಹವನ್ನು ದಂಡಿಸಿ ಮಾಡುವ ಕೆಲಸಕ್ಕೆ ಹೆಚ್ಚು ಲಾಭವು ಸಿಗಲಿದೆ. ಉದ್ಯೋಗದಲ್ಲಿ ಬರುವ ಅಡೆತಡೆಗಳನ್ನು ನೀವು ಸರಿಮಾಡಿಕೊಳ್ಳಲು ಪ್ರಯತ್ನಿಸಿ. ಪ್ರಯಾಣದಲ್ಲಿ ಸುಖವಿರಲಿದೆ. ನಿಮಗೆ ಇಂದು ನೇರವಾಗಿ ಕೆಲಸಗಳನ್ನು ಮಾಡಲು ಕಷ್ಟವಾದೀತು. ಇನ್ನೊಬ್ಬರ ಮೂಲಕ ಎಲ್ಲ ಕೆಲಸಗಳನ್ನು ಮಾಡಿಸುವಿರಿ. ಉದರಕ್ಕೆ ಸಂಬಂಧಿಸಿದ ರೋಗವು ಕಾಣಿಸಿಕೊಳ್ಳಬಹುದು. ಬೇರೆಯವರ ಜೊತೆ ನಿಮ್ಮ ವರ್ತನೆಯು ಸರಿಯಾಗಿರಲಿ. ಯಾರ ಮೇಲೂ ಅತಿಯಾಗಿ ಸಿಟ್ಟಾಗುವುದು ಬೇಡ.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ