AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ರಾಶಿಭವಿಷ್ಯ, ಈ ರಾಶಿಯವರಿಗೆ ವಿಳಂಬವಾಗಿಯಾದರೂ ವಿವಾಹವು ನಡೆಯಲಿ

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಆಗಸ್ಟ್ 04) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ರಾಶಿಭವಿಷ್ಯ, ಈ ರಾಶಿಯವರಿಗೆ ವಿಳಂಬವಾಗಿಯಾದರೂ ವಿವಾಹವು ನಡೆಯಲಿ
ಇಂದಿನ ದಿನಭವಿಷ್ಯImage Credit source: freepik
TV9 Web
| Edited By: Rakesh Nayak Manchi|

Updated on: Aug 04, 2023 | 12:45 AM

Share

ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಕೆಲವರು ಬೆಳಗ್ಗೆ ಎದ್ದ ಕೂಡಲೇ ರಾಶಿ ಭವಿಷ್ಯ (Daily horoscope) ತಪ್ಪದೇ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯದಿಂದ ತಿಳಿದುಕೊಳ್ಳುತ್ತಾರೆ. ಅದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಆಗಸ್ಟ್ 04) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ?, ಯಾರಿಗೆ ಲಾಭ?, ಯಾರಿಗೆ ನಷ್ಟ?, ಯಾರಿಗೆ ಶುಭ, ಅಶುಭ? ಇಲ್ಲಿ ನೋಡಿ ನಿಮ್ಮ ಭವಿಷ್ಯ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಆಶ್ಲೇಷಾ, ಮಾಸ: ಅಧಿಕ ಶ್ರಾವಣ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಪೂರ್ವಾಭಾದ್ರ, ಯೋಗ: ಸೌಭಾಗ್ಯ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 17 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 59 ನಿಮಿಷಕ್ಕೆ. ರಾಹು ಕಾಲ ಬೆಳಗ್ಗೆ 11:03 ರಿಂದ 12 :38ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:49 ರಿಂದ ಸಂಜೆ 05:24ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:53 ರಿಂದ 09:28ರ ವರೆಗೆ.

ಧನು ರಾಶಿ: ವಿಳಂಬವಾಗಿಯಾದರೂ ವಿವಾಹವು ನಡೆಯಲಿದ್ದು, ನಿಮಗೆ ಸಂತೋಷವಾಗಲಿದೆ. ಮಕ್ಕಳ ವಿವಾಹಕ್ಕಾಗಿ ಓಡಾಟ ಮಾಡುವಿರಿ. ದಾಂಪತ್ಯದಲ್ಲಿ ಬರುವ ಕಲಹವನ್ನು ನೀವು ಶಾಂತಗೊಳಿಸಿಕೊಳ್ಳಿ. ನಿಮಗೆ ಸ್ವಾಭಿಮಾವನ್ನು ಬಿಟ್ಟು ವ್ಯವಹರಿಸುದು ಕಷ್ಟವಾದೀತು.‌ ನಾಚಿಕೆಯ ಸ್ವಭಾವದಿಂದ ನೀವು ಹಲವು ವಿಚಾರವನ್ನು ಕಳೆದುಕೊಳ್ಳುವಿರಿ. ಕೆಲವರ ಮಾತುಗಳನ್ನು ನೀವು ವಿರೋಧಿಸುವಿರಿ. ನಿಮಗೆ ಆಗದವರ ಬಗ್ಗೆ ನಿಮ್ಮ ನಿಲುವು ಹಾಗೆಯೇ ಇರಲಿದೆ. ಸಾಮಾಜಿಕ ಗೌರವವನ್ನು ನೀವು ಬಯಸುವಿರಿ. ಹಳೆಯ ಪ್ರೇಮವು ನಿಮಗೆ ತೊಂದರೆಯನ್ನು ಕೊಡಬಹುದು. ಚಾಲಕವೃತ್ತಿಯರಿಗೆ ಶುಭ ಸುದ್ದಿಯು ಇರಲಿದೆ.

ಮಕರ ರಾಶಿ: ಆರ್ಥಿಕತೆಯು ಅಭಿವೃದ್ಧಿಯ ಕಡೆಗೆ ಸಾಗುವುದು ನಿಮಗೆ ಸಂತೋಷವನ್ನು ಕೊಡಲಿದೆ. ಕುಟುಂಬದಿಂದ ನಿಮಗೆ ಶುಭ ವಾರ್ತೆಯು ಬರಬಹುದು. ನಿಮ್ಮ ವರ್ತನೆಯಲ್ಲಿ ಬಹಳ ವ್ಯತ್ಯಾಸವು ಇರಲಿದೆ. ಹಿತಶತ್ರುಗಳನ್ನು ನಡವಳಿಕೆಯ ಮೂಲಕ ಗುರುತಿಸುವಿರಿ. ನಿಮ್ಮ ಸಹೋದರನಿಂದ ಹೊಸ ಉದ್ಯೋಗಕ್ಕೆ ಸೇರಿಕೊಳ್ಳಲು ಸಹಾಯವಾಗುವುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಇಟ್ಟ ಹಣವು ಸಾಕಾಗದು.‌ ಇಂದು ನೀವು ಅಂದುಕೊಂಡಷ್ಟು ಕೆಕಸವು ಆಗುವತನಕ ನಿಮ್ಮ ಹಠವು ಇರಲಿದೆ. ಚಿತ್ರಕಾರರಿಗೆ ಉತ್ತಮ ಅವಕಾಶಗಳು ಸಿಗಬಹುದು.

ಕುಂಭ ರಾಶಿ: ಬಂಧುಗಳಿಗೆ ಆರ್ಥಿಕವಾಗಿ ಸಹಾಯವನ್ನು ಮಾಡುವಿರಿ. ಹಳೆಯ ತಪ್ಪಿಗೆ ನೀವು ಇಂದು ಪಶ್ಚಾತ್ತಾಪ ಪಡಬೇಕಾದೀತು. ಅಭಿವೃದ್ಧಿಯ ಕೆಲಸಗಳು ನಿಧಾನವಾಗಿ ಸಾಗುವುದು. ಪ್ರಯಾಣದಲ್ಲಿ ನೀವು ತೊಂದರೆಯನ್ನು ಅನುಭವಿಸುವಿರಿ. ಇಂದು ನಿಮ್ಮ ಆತುರದ ತೀರ್ಮಾನಗಳು ಹಲವು ಗೊಂದಲೆಗಳಿಗೆ ಕಾರಣವಾಗುವುದು. ಯಾವ ಒತ್ತಡಕ್ಕೂ ಸಿಲುಕದೇ ನೆಮ್ಮದಿಯಿಂದ ಕಾರ್ಯವನ್ನು ಮಾಡಿ. ನಿಮ್ಮ ಸಾಲವು ಮರಳಿಬರಬಹುದು. ನಿಮ್ಮ ಮನೋಗತವನ್ನು ನೀವು ಆಪ್ತರ ಜೊತೆ ಹಂಚಿಕೊಳ್ಳುವಿರಿ. ಅನಗತ್ಯ ಖರ್ಚನ್ನು ಕಡಿಮೆ‌ ಮಾಡಲು ಸಂಗಾತಿಗೆ ಸೂಚಿಸುವಿರಿ. ನಕಾರಾತ್ಮಕ ಧೋರಣೆಗಳು ಅಧಿಕವಾಗಿ ಇರಬಹುದು.

ಮೀನ ರಾಶಿ: ಸ್ಥಿರಾಸ್ತಿಯ ಉಳಿಸಿಕೊಳ್ಳಲು ನೀವು ಬಹಳ ಹೋರಾಟವನ್ನು ಮಾಡಬೇಕಾದೀತು. ಬಂಧುಗಳ ಬಳಿ ನೀವು ಸಾಲಕ್ಕೆ ಕೈ ಚಾಚಬೇಕಾಗಬಹುದು. ಮನೆ ಕೆಲಸದಲ್ಲಿ ನೀವು ಮಗ್ನರಾಗುವಿರಿ. ನಿಮ್ಮ ವಸ್ತುಗಳ ಮೇಲೆ ನಿಮಗೆ ಹಿಡಿತವಿರಲಿ. ಸಂಗಾತಿಯ ವರ್ತನೆಯನ್ನು ನೀವು ಪ್ರಶ್ನಿಸುವಿರಿ. ನಿಮ್ಮ ಕೆಲಸವನ್ನು ಬೇರೆಯವರು ಮಾಡಿ ಮುಗಿಸುವರು. ಅತಿಯಾದ ಸಾಲಬಾಧೆಯು ನಿಮ್ಮ ನೆಮ್ಮದಿಯನ್ನು ನಷ್ಟಮಾಡೀತು. ಸ್ನೇಹಿತರು ನಿಮ್ಮ ಜೊತೆಗಿದ್ದು ಎಲ್ಲ ವಿಚಾರದಲ್ಲಿ ಜೊತೆಯಾಗುವರು.‌ ಉದ್ವೇಗಕ್ಕೆ ಒಳಗಾಗದೇ ಸಮಾಧಾನದಿಂದ ಇರಿ. ದುರಭ್ಯಾಸದಿಂದ ಆರೋಗ್ಯವು ಕೆಡಬಹುದು. ಹೆಚ್ಚು ಲಾಭವನ್ನು ಗಳಿಸುವ ತುಡಿತವು ಅಧಿಕವಾಗುವುದು.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್