Horoscope 04 August: ನಿಮ್ಮ ಅಸಹಜ ವರ್ತನೆಯೂ ನಿಮ್ಮರಿಗೆ ಕೋಪ ತರಿಸಬಹುದು, ಎಲ್ಲರನ್ನೂ ಸಮಭಾವದಿಂದ ಕಾಣಿ
ಇಂದಿನ (2023 ಜುಲೈ ಆಗಸ್ಟ್ 04) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಜುಲೈ ಆಗಸ್ಟ್ 04) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಆಶ್ಲೇಷಾ, ಮಾಸ: ಅಧಿಕ ಶ್ರಾವಣ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಪೂರ್ವಾಭಾದ್ರ, ಯೋಗ: ಸೌಭಾಗ್ಯ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 17 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 59 ನಿಮಿಷಕ್ಕೆ. ರಾಹು ಕಾಲ ಬೆಳಗ್ಗೆ 11:03 ರಿಂದ 12 :38ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:49 ರಿಂದ ಸಂಜೆ 05:24ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:53 ರಿಂದ 09:28ರ ವರೆಗೆ.
ಮೇಷ: ಏಕಾಂಗಿಯಾಗಿ ಇರಲು ನೀವು ಬಯಸಬಹುದು. ಆಹಾರ ವ್ಯತ್ಯಾಸದಿಂದ ಅನಾರೋಗ್ಯವು ಕಾಡಬಹುದು. ಬಯಸಿದ್ದನ್ನು ಪಡೆಯಲು ಹೆಚ್ಚು ಪ್ರಯತ್ನ ಪಡಬೇಕಾದೀತು. ಉದ್ಯೋಗದಲ್ಲಿ ಉತ್ತಮ ಅವಕಾಶಗಳು ಸಿಗಬಹುದು. ಮೋಜಿಗಾಗಿ ಹಣವನ್ನು ವ್ಯಯಿಸುವಿರಿ. ಪುಣ್ಯಸ್ಥಳಗಳಿಗೆ ಹೋಗುವ ಮನಸ್ಸಿದ್ದರೂ ಕಾರ್ಯದ ಒತ್ತಡಕ್ಕೆ ಹೋಗಲಾಗದು. ಕಳೆದುಕೊಂಡಿದ್ದನ್ನು ಪಡೆದುಕೊಳ್ಳಲು ನೀವು ಬೇರೆ ಮಾರ್ಗಗಳನ್ನು ಅನುಸರಿಸುವಿರಿ. ಹೆಚ್ಚಿನ ಕೆಲಸವನ್ನು ಮಾಡಲು ಆಸಕ್ತಿಯ ಕೊರತೆ ಇರಲಿದೆ. ಸಿಕ್ಕ ಸಂಪತ್ತಿನ್ನು ಜೋಪಾನ ಮಾಡಿಕೊಳ್ಳಿ.
ವೃಷಭ: ಅಸಂತೋಷದಿಂದ ನೀವು ಹೆಚ್ಚು ದಿನವನ್ನು ಕಳೆಯುವಿರಿ. ಬಂಧುಗಳ ಮಾತಿನಿಂದ ನಿಮಗೆ ಬೇಸರವಾಗಬಹುದು. ಸಂಗಾತಿಯ ಜೊತೆ ವಾದಕ್ಕೆ ಇಳಿಯುವಿರಿ. ಕಛೇರಿಯಲ್ಲಿ ಆದ ಜಗಳವು ಉದ್ಯೋಗವನ್ನು ಕಳೆದುಕೊಳ್ಳುವ ಹಂತಕ್ಕೆ ಹೋಗಬಹುದು. ಸಂಗಾತಿಯನ್ನು ನೀವು ಹಳೆಯ ಘಟನೆಗಳ ಜೊತೆಗೆ ಟೀಕಿಸಬಹುದು. ಜೀವನೋಪಾಯಕ್ಕಾಗಿ ಹೆಚ್ಚು ದುಡಿಮೆಯನ್ನು ಮಾಡಬೇಕಾದೀತು. ಇಷ್ಟವಿಲ್ಲದ ಕಾರ್ಯವನ್ನು ಮಾಡಲು ನೀವು ಹಿಂಜರಿಯುವಿರಿ. ತಾಯಿಯ ಜೊತೆ ಎಲ್ಲವನ್ನೂ ಹೇಳಬೇಕು ಎನಿಸಬಹುದು.
ಮಿಥುನ: ನಿಮ್ಮ ಕೆಲಸಕ್ಕೆ ಎಲ್ಲರಿಂದ ಪ್ರಶಂಸೆ ಸಿಗಲಿದೆ. ವಿದ್ಯಾರ್ಥಿಗಳು ತಮ್ಮ ಅಸ್ತಿತ್ವವನ್ನು ತೋರಿಸುವರು. ಸಾಮಾಜಿಕ ಕಾರ್ಯಗಳನ್ನು ಮಾಡಲು ನೀವು ಬಹಳ ಉತ್ಸಾಹದಿಂದ ಇರುವಿರಿ. ಮನಸ್ಸಿನಲ್ಲಿ ಒಂದಿಲ್ಲೊಂದು ಭೀತಿಯು ಕಾಡಬಹುದು. ಅತಿಯಾದೆ ಆಸೆಯಿಂದ ನಿಮಗೆ ದುಃಖವು ಬರಬಹುದು. ಕಲೆಯ ವಿಷಯದಲ್ಲಿ ನಿಮಗೆ ಆಸಕ್ತಿಯು ಹೆಚ್ಚಾಗಬಹುದು. ನಿಮ್ಮ ಬಗ್ಗೆ ನೀವು ಅವಲೋಕನ ಮಾಡಿಕೊಳ್ಳುವ ಅಗತ್ಯ ಇರಲಿದೆ. ಎಲ್ಲವನ್ನೂ ನೀವು ಅತಿಯಾಗಿ ವೈಭವೀಕರಿಸುವಿರಿ. ಅದರಷ್ಟಕ್ಕೆ ಬಿಡುವುದು ಒಳ್ಳೆಯದು. ಸಿಗಬೇಕಾದ ಕಾಲಕ್ಕೆ ಸಿಗುವುದು ಎಂಬ ನಂಬಿಕೆ ಇರಲಿ.
ಕರ್ಕ: ಎಲ್ಲರಿಂದ ಹೊಗಳಿಸಿಕೊಳ್ಳಬೇಕು ಎನಿಸಬಹುದು. ಕೆಲಸದಲ್ಲಿ ನಿಮಗೆ ಬೆಂಬಲವು ಕಡಿಮೆ ಸಿಗಬಹುದು. ಸ್ತ್ರೀಯರಿಗೆ ಮನೆಯ ಕೆಲಸವು ಸಾಕೆನಿಸಿ ಸುತ್ತಾಡುವ ಮನಸ್ಸಾಗುವುದು. ಬಂಧುಗಳ ಬಗ್ಗೆ ನಿಮಗೆ ಅಷ್ಟಾಗಿ ಪ್ರೀತಿ ಇರದು. ಅಸಭ್ಯ ಮಾತುಗಳು ನಿಮ್ಮ ನಡವಳಿಕೆಯನ್ನು ಹೇಳೀತು. ಅಧಿಕಾರವು ಬರುವಹಾಗೆ ಇದ್ದರೂ ಅದನ್ನು ತಪ್ಪಿಸಬಹುದು. ಸರಿಯಾದ ಆಲೋಚನೆಯನ್ನು ಮಾಡದೇ ಕೆಲಸವನ್ನು ಮಾಡಿದ ಕಾರಣ ತೊಂದರೆಗಳು ಬರಬಹುದು. ನಿಮ್ಮನ್ನು ಹೊಗಳಿಕೊಳ್ಳುವುದು ಸರಿ ಕಾಣಿಸದು. ಅಜ್ಜನ ಪ್ರೀತಿಯು ನಿಮಗೆ ಸಿಗಬಹುದು. ಮೇಲ್ನೋಟಕ್ಕೇ ನಿಮ್ಮ ಸ್ವಭಾವದ ಅರಿವಾಗಬಹುದು.
ಸಿಂಹ: ಎಷ್ಟೇ ಪ್ರಯತ್ನಪಟ್ಟರೂ ನೀವು ಮಕ್ಕಳನ್ನು ಸರಿಮಾಡಲು ಆಗದು ಎಂಬ ಹಂತಕ್ಕೆ ಬರುವಿರಿ. ಮುಖ್ಯ ಕೆಲಸಗಳಿಗಿಂತ ಬೇರೆ ಕೆಲಸಕ್ಕೇ ಹೆಚ್ಚು ಪ್ರಾಮುಖ್ಯವನ್ನು ಕೊಡುವಿರಿ. ಪಿತ್ರಾರ್ಜಿತ ಆಸ್ತಿಗಾಗಿ ಪತ್ನಿಯಿಂದ ಪ್ರೇರಣೆ ಪಡೆಯುವಿರಿ. ಉದ್ಯೋಗದ ಕಾರಣಕ್ಕೆ ನೀವು ಯಾರಿಗೋ ಕಾದು ಸಮಯವನ್ನು ವ್ಯರ್ಥ ಮಾಡಿಕೊಳ್ಳುವಿರಿ. ನೀವು ಮಾತನ್ನು ಕಡಿಮೆ ಮಾಡುವುದು ಒಳ್ಳೆಯದು. ಕೂಡಿಬರುವ ವಿವಾಹಭಾಗ್ಯವನ್ನು ನೀವು ನಿರಾಕರಿಸುವುದು ಬೇಡ. ಆತುರದಿಂದ ಏನಾದರೂ ಅಚಾತುರ್ಯವನ್ನು ಮಾಡಿಕೊಳ್ಳಬಹುದು. ಜೀವನವು ಸಪ್ಪೆ ಎನಿಸಬಹುದು. ಧಾರ್ಮಿಕ ವಿಚಾರದ ಬಗ್ಗೆ ಆಸಕ್ತಿ ಹೆಚ್ಚಿರುವುದು.
ಕನ್ಯಾ: ನೀವು ನಿರೀಕ್ಷಿಸುತ್ತಿರುವ ಸಮಯವು ಇನ್ನೂ ಬಾರದೆಂದು ನಿಮಗೆ ಸಂಕಟವಾಗಬಹುದು. ಆರೋಗ್ಯವನ್ನು ಚಿಂತೆಯಿಂದ ಹಾಳು ಮಾಡಿಕೊಳ್ಳುವಿರಿ. ಬೇಕಾದಷ್ಟು ಸಂಪತ್ತಿದ್ದರೂ ನಿಮಗೆ ನೆಮ್ಮದಿಯ ಕೊರತೆ ಅಧಿಕವಾಗಿ ಇರಿಲಿದೆ. ನೀವು ಕೃತಜ್ಞತೆಯನ್ನು ಮರೆತುವಿರಿ. ಕೈಲಾದ ಸಹಾಯವನ್ನು ಮಾಡಿ. ಸಂಬಂಧಗಳ ಮಹತ್ತ್ವವನ್ನು ನೀವು ಕಳೆದುಕೊಳ್ಳಬಹುದು. ವಿಶ್ವಾಸಕ್ಕೆ ಘಾಸಿಯಾಗದಂತೆ ನೀವು ನೋಡಿಕೊಳ್ಳಿ. ಅಧಿಕಾರವರ್ಗದಿಂದ ನಿಮಗೆ ಮಾನಸಿಕ ಕಿರಿಕಿರಿ ಆಗಬಹುದು. ಉಡುಗೊರೆಯನ್ನು ನೀವು ಆಪ್ತರಿಂದ ಪಡೆಯುವಿರಿ. ನಿಮ್ಮ ಮಾತುಗಳನ್ನು ನಿರ್ಲಕ್ಷ್ಯ ಮಾಡಬಹುದು.
ತುಲಾ: ನಿಮ್ಮ ಶಿಸ್ತಿನ ಜೀವನವನ್ನು ಯಾರೂ ಪ್ರಶ್ನಿಸಲಾರರು. ಹಣದ ವ್ಯವಹಾರವನ್ನು ಒಬ್ಬರೇ ಮಾಡುವುದು ಬೇಡ. ನಂಬಿಕಸ್ಥರನ್ನು ನಿಮ್ಮ ಜೊತೆ ಇಟ್ಟುಕೊಳ್ಳಿ. ಇನ್ನೊಬ್ಬರನ್ನು ಹಗುರಾಗಿ ಕಾಣುವುದು ನಿಮಗೆ ಅಭ್ಯಾಸವಾಗಿದ್ದು, ಅದನ್ನು ಬಿಡುವುದು ಒಳ್ಳೆಯದು. ಉದ್ಯೋಗದಿಂದ ನೀವು ಹೊರ ನಡೆದು ಹೊಸ ಉದ್ಯಮವನ್ನು ಆರಂಭಿಸಲು ಆಲೋಚಿಸುವಿರಿ. ನಿಮ್ಮ ಮಾತುಗಳು ಕುಟುಂಬದ ಗೌರವವನ್ನು ಕಡಿಮೆ ಮಾಡೀತು. ಹೆಚ್ಚು ಆಹಾರದ ಸೇವೆಯನ್ನು ಮಾಡಿ ಕಷ್ಟಪಡುವಿರಿ. ಭೂಮಿಯ ವ್ಯವಹಾರವನ್ನು ಮಾಡಲು ನಿಮಗೆ ಮನಸ್ಸು ಇಲ್ಲವಾಗಬಹುದು.
ವೃಶ್ಚಿಕ: ನಿಮ್ಮ ಅಸಹಜ ವರ್ತನೆಯು ನಿಮ್ಮರಿಗೆ ಸಿಟ್ಟನ್ನು ತರಿಸಬಹುದು. ಎಲ್ಲರನ್ನೂ ನೀವು ಸಮಾನಭಾವದಿಂದ ಕಾಣಬೇಕಾಗುವುದು. ದೇಹವನ್ನು ದಂಡಿಸಿ ಮಾಡುವ ಕೆಲಸಕ್ಕೆ ಹೆಚ್ಚು ಲಾಭವು ಸಿಗಲಿದೆ. ಉದ್ಯೋಗದಲ್ಲಿ ಬರುವ ಅಡೆತಡೆಗಳನ್ನು ನೀವು ಸರಿಮಾಡಿಕೊಳ್ಳಲು ಪ್ರಯತ್ನಿಸಿ. ಪ್ರಯಾಣದಲ್ಲಿ ಸುಖವಿರಲಿದೆ. ನಿಮಗೆ ಇಂದು ನೇರವಾಗಿ ಕೆಲಸಗಳನ್ನು ಮಾಡಲು ಕಷ್ಟವಾದೀತು. ಇನ್ನೊಬ್ಬರ ಮೂಲಕ ಎಲ್ಲ ಕೆಲಸಗಳನ್ನು ಮಾಡಿಸುವಿರಿ. ಉದರಕ್ಕೆ ಸಂಬಂಧಿಸಿದ ರೋಗವು ಕಾಣಿಸಿಕೊಳ್ಳಬಹುದು. ಬೇರೆಯವರ ಜೊತೆ ನಿಮ್ಮ ವರ್ತನೆಯು ಸರಿಯಾಗಿರಲಿ. ಯಾರ ಮೇಲೂ ಅತಿಯಾಗಿ ಸಿಟ್ಟಾಗುವುದು ಬೇಡ.
ಧನು: ವಿಳಂಬವಾಗಿಯಾದರೂ ವಿವಾಹವು ನಡೆಯಲಿದ್ದು, ನಿಮಗೆ ಸಂತೋಷವಾಗಲಿದೆ. ಮಕ್ಕಳ ವಿವಾಹಕ್ಕಾಗಿ ಓಡಾಟ ಮಾಡುವಿರಿ. ದಾಂಪತ್ಯದಲ್ಲಿ ಬರುವ ಕಲಹವನ್ನು ನೀವು ಶಾಂತಗೊಳಿಸಿಕೊಳ್ಳಿ. ನಿಮಗೆ ಸ್ವಾಭಿಮಾವನ್ನು ಬಿಟ್ಟು ವ್ಯವಹರಿಸುದು ಕಷ್ಟವಾದೀತು. ನಾಚಿಕೆಯ ಸ್ವಭಾವದಿಂದ ನೀವು ಹಲವು ವಿಚಾರವನ್ನು ಕಳೆದುಕೊಳ್ಳುವಿರಿ. ಕೆಲವರ ಮಾತುಗಳನ್ನು ನೀವು ವಿರೋಧಿಸುವಿರಿ. ನಿಮಗೆ ಆಗದವರ ಬಗ್ಗೆ ನಿಮ್ಮ ನಿಲುವು ಹಾಗೆಯೇ ಇರಲಿದೆ. ಸಾಮಾಜಿಕ ಗೌರವವನ್ನು ನೀವು ಬಯಸುವಿರಿ. ಹಳೆಯ ಪ್ರೇಮವು ನಿಮಗೆ ತೊಂದರೆಯನ್ನು ಕೊಡಬಹುದು. ಚಾಲಕವೃತ್ತಿಯರಿಗೆ ಶುಭ ಸುದ್ದಿಯು ಇರಲಿದೆ.
ಮಕರ: ಆರ್ಥಿಕತೆಯು ಅಭಿವೃದ್ಧಿಯ ಕಡೆಗೆ ಸಾಗುವುದು ನಿಮಗೆ ಸಂತೋಷವನ್ನು ಕೊಡಲಿದೆ. ಕುಟುಂಬದಿಂದ ನಿಮಗೆ ಶುಭ ವಾರ್ತೆಯು ಬರಬಹುದು. ನಿಮ್ಮ ವರ್ತನೆಯಲ್ಲಿ ಬಹಳ ವ್ಯತ್ಯಾಸವು ಇರಲಿದೆ. ಹಿತಶತ್ರುಗಳನ್ನು ನಡವಳಿಕೆಯ ಮೂಲಕ ಗುರುತಿಸುವಿರಿ. ನಿಮ್ಮ ಸಹೋದರನಿಂದ ಹೊಸ ಉದ್ಯೋಗಕ್ಕೆ ಸೇರಿಕೊಳ್ಳಲು ಸಹಾಯವಾಗುವುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಇಟ್ಟ ಹಣವು ಸಾಕಾಗದು. ಇಂದು ನೀವು ಅಂದುಕೊಂಡಷ್ಟು ಕೆಕಸವು ಆಗುವತನಕ ನಿಮ್ಮ ಹಠವು ಇರಲಿದೆ. ಚಿತ್ರಕಾರರಿಗೆ ಉತ್ತಮ ಅವಕಾಶಗಳು ಸಿಗಬಹುದು.
ಕುಂಭ: ಬಂಧುಗಳಿಗೆ ಆರ್ಥಿಕವಾಗಿ ಸಹಾಯವನ್ನು ಮಾಡುವಿರಿ. ಹಳೆಯ ತಪ್ಪಿಗೆ ನೀವು ಇಂದು ಪಶ್ಚಾತ್ತಾಪ ಪಡಬೇಕಾದೀತು. ಅಭಿವೃದ್ಧಿಯ ಕೆಲಸಗಳು ನಿಧಾನವಾಗಿ ಸಾಗುವುದು. ಪ್ರಯಾಣದಲ್ಲಿ ನೀವು ತೊಂದರೆಯನ್ನು ಅನುಭವಿಸುವಿರಿ. ಇಂದು ನಿಮ್ಮ ಆತುರದ ತೀರ್ಮಾನಗಳು ಹಲವು ಗೊಂದಲೆಗಳಿಗೆ ಕಾರಣವಾಗುವುದು. ಯಾವ ಒತ್ತಡಕ್ಕೂ ಸಿಲುಕದೇ ನೆಮ್ಮದಿಯಿಂದ ಕಾರ್ಯವನ್ನು ಮಾಡಿ. ನಿಮ್ಮ ಸಾಲವು ಮರಳಿಬರಬಹುದು. ನಿಮ್ಮ ಮನೋಗತವನ್ನು ನೀವು ಆಪ್ತರ ಜೊತೆ ಹಂಚಿಕೊಳ್ಳುವಿರಿ. ಅನಗತ್ಯ ಖರ್ಚನ್ನು ಕಡಿಮೆ ಮಾಡಲು ಸಂಗಾತಿಗೆ ಸೂಚಿಸುವಿರಿ. ನಕಾರಾತ್ಮಕ ಧೋರಣೆಗಳು ಅಧಿಕವಾಗಿ ಇರಬಹುದು.
ಮೀನ: ಸ್ಥಿರಾಸ್ತಿಯ ಉಳಿಸಿಕೊಳ್ಳಲು ನೀವು ಬಹಳ ಹೋರಾಟವನ್ನು ಮಾಡಬೇಕಾದೀತು. ಬಂಧುಗಳ ಬಳಿ ನೀವು ಸಾಲಕ್ಕೆ ಕೈ ಚಾಚಬೇಕಾಗಬಹುದು. ಮನೆ ಕೆಲಸದಲ್ಲಿ ನೀವು ಮಗ್ನರಾಗುವಿರಿ. ನಿಮ್ಮ ವಸ್ತುಗಳ ಮೇಲೆ ನಿಮಗೆ ಹಿಡಿತವಿರಲಿ. ಸಂಗಾತಿಯ ವರ್ತನೆಯನ್ನು ನೀವು ಪ್ರಶ್ನಿಸುವಿರಿ. ನಿಮ್ಮ ಕೆಲಸವನ್ನು ಬೇರೆಯವರು ಮಾಡಿ ಮುಗಿಸುವರು. ಅತಿಯಾದ ಸಾಲಬಾಧೆಯು ನಿಮ್ಮ ನೆಮ್ಮದಿಯನ್ನು ನಷ್ಟಮಾಡೀತು. ಸ್ನೇಹಿತರು ನಿಮ್ಮ ಜೊತೆಗಿದ್ದು ಎಲ್ಲ ವಿಚಾರದಲ್ಲಿ ಜೊತೆಯಾಗುವರು. ಉದ್ವೇಗಕ್ಕೆ ಒಳಗಾಗದೇ ಸಮಾಧಾನದಿಂದ ಇರಿ. ದುರಭ್ಯಾಸದಿಂದ ಆರೋಗ್ಯವು ಕೆಡಬಹುದು. ಹೆಚ್ಚು ಲಾಭವನ್ನು ಗಳಿಸುವ ತುಡಿತವು ಅಧಿಕವಾಗುವುದು.
-ಲೋಹಿತಶರ್ಮಾ – 8762924271 (what’s app only)