AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ದಿನಭವಿಷ್ಯ, ಕೋಪವನ್ನು ನಿಯಂತ್ರಣದಲ್ಲಿ ಇರಿಸಿದಷ್ಟು ಈ ರಾಶಿಯವರ ಕಾರ್ಯ ಸಫಲವಾಗುವುದು

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ಅಕ್ಟೋಬರ್ 21) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Horoscope: ದಿನಭವಿಷ್ಯ, ಕೋಪವನ್ನು ನಿಯಂತ್ರಣದಲ್ಲಿ ಇರಿಸಿದಷ್ಟು ಈ ರಾಶಿಯವರ ಕಾರ್ಯ ಸಫಲವಾಗುವುದು
ಪ್ರಾತಿನಿಧಿಕ ಚಿತ್ರImage Credit source: iStock Photo
TV9 Web
| Updated By: Rakesh Nayak Manchi|

Updated on: Oct 21, 2023 | 12:30 AM

Share

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಅಕ್ಟೋಬರ್ 21 ಶನಿವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಚಿತ್ರಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಪೂರ್ವಾಷಾಢ, ಯೋಗ: ಅತಿಗಂಡ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 25 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 08 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:22 ರಿಂದ 10:49ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 01:45 ರಿಂದ 03:13ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:26 ರಿಂದ 07:54ರ ವರೆಗೆ.

ಸಿಂಹ ರಾಶಿ: ಮನೆಯಲ್ಲಿ ಹಬ್ಬದ ವಾತಾವರಣ ಇರಲಿದ್ದು ನೀವೂ ಬಹಳ ದಿನಗಳ ಅನಂತರ ಇಂತಹ ಸಂತೋಷವನ್ನು ಪಡೆಯುವಿರಿ.‌ ಕಛೇರಿಯ ಕಾರ್ಯವನ್ನು ಮನೆಯಲ್ಲಿ ಇದ್ದು ಮಾಡಬೇಕಾಗಬಹುದು. ಇಂದು ವ್ಯಾಪಾರವನ್ನು ಮಾಡುವ ಮನಸ್ಸು ಇಲ್ಲದಿದ್ದರೂ ಮನೆಯಲ್ಲಿ ಕುಳಿತು ಬೇಸರವಾಗಬಹುದು. ಸಾಮಾಜಿಕ ತಾಣದಲ್ಲಿ ಹೆಚ್ಚು ಸಮಯ ಕಳೆಯುವಿರಿ. ಸ್ನೇಹಿತರ ತಮಾಷೆಯು ನಿಮಗೆ ಇಷ್ಟವಾಗದು. ದ್ವಿಚಕ್ರ ವಾಹನವನ್ನು ಓಡಿಸುವಾಗ ಎಚ್ಚರ ಇರಲಿ. ಸಂಗಾತಿಯ ಮನಃಸ್ಥಿತಿಗೆ ಪೂರಕವಾಗಿ ನಿಮ್ಮ ಆಲೋಚನೆಯೂ ಇರಲಿದ್ದು ನಿಮಗೆ ಖುಷಿಯಾಗುವುದು. ನಿಮ್ಮವರನ್ನು ಹೊಗಳಿ ಮೆಚ್ಚಿಸಿ ಅವರಿಂದ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಕೋಪವನ್ನು ನಿಯಂತ್ರಣದಲ್ಲಿ ಇರಿಸಿದಷ್ಟು ನೀವು ಕಾರ್ಯದಲ್ಲಿ ಸಫಲರಾಗುವಿರಿ. ಇಂದಿನ ಕೆಲವು ಸಂದಿಗ್ಧತೆಯನ್ನು ಸರಳವಾಗಿ ನಿಭಾಯಿಸಲು ಕಲಿಯುವ ಅವಶ್ಯಕತೆ ಇದೆ.‌

ಕನ್ಯಾ ರಾಶಿ: ಕೆಲವು ಶುಭ ಸೂಚನೆಗಳು ನಿಮಗೆ ಗೊತ್ತಾಗಲಿದ್ದು ನಿರೀಕ್ಷೆಯೂ ಎಂದಿಗಿಂತ ಹೆಚ್ಚಿರಲಿದೆ. ಮಾತುಗಾರರು ಎಂದಿನ ವಾಚಾಳಿತನವನ್ನು ಕಡಿಮೆ‌ಮಾಡುವರು. ಸಿಕ್ಕ ಅವಕಾಶದಲ್ಲಿ ತೃಪ್ತಿ ಪಡೆಯುವುದು ಮುಖ್ಯವಾಗಿರಲಿ. ಮನೆಯ ಕಾರ್ಯದಲ್ಲಿ ಸಮಯವು ಕಳೆದುಹೋಗುವುದು. ನಿಮಗೆ ಗೊತ್ತೇ ಇರದ ಕೆಲಸವನ್ನು ನೀವು ಮಾಡಬೇಕಾದೀತು.‌ ಮನಶ್ಚಾಂಚಲ್ಯದಿಂದ ಕಛೇರಿಯಲ್ಲಿ ಸರಿಯಾದ ಕೆಲಸವನ್ನು ಮಾಡಲಾಗದು. ಪ್ರೀತಿಯು ನಿಮ್ಮ ಯಶಸ್ಸಿನ ವೇಗಕ್ಕೆ ಕಡಿವಾಣ ಹಾಕಬಹುದು. ನಿಮ್ಮ ಉದ್ದೇಶವೇ ಬದಲಾದರೂ ಅಚ್ಚರಿ ಪಡಬೇಕಾಗಿಲ್ಲ. ಸ್ನೇಹಿತರು ನಿಮ್ಮ ಸಮಯವನ್ನು ವ್ಯರ್ಥಮಾಡಿಯಾರು. ಎಲ್ಲ ಕಡೆಗಳಿಂದಲೂ ಮಾನಸಿಕ ಸಂತೃಪ್ತಿ ಇರದೇ ಇರುವುದು ಯಾರ ಬಳಿ ಹೇಳಿಕೊಳ್ಳಬೇಕು ಎಂದು ಗೊತ್ತಾಗದು. ಅನಾರೋಗ್ಯದ ಕಾರಣ ಬಂದ ಹಣವು ನಿಲ್ಲದು.

ತುಲಾ ರಾಶಿ: ಜಾಹಿರಾತು ವಿಭಾಗದಲ್ಲಿ ಇರುವವರಿಗೆ ಅವಕಾಶವು ಹೆಚ್ಚು ಸಿಗಬಹುದು. ವಾಗ್ಮಿಗಳು ಸಿಕ್ಕ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುವರು.‌ ಸಂಪ್ರದಾಯದ ವಿಚಾರದಲ್ಲಿ ನಿಮಗೆ ಆಸಕ್ತಿಯು ಹೆಚ್ಚಾಗಬಹುದು. ಮನೆಗೆ ಅತಿಥಿಗಳ ಆಗಮನವಾಗಲಿದ್ದು ನಿಮ್ಮ‌ ಇಂದಿನ ಕಾರ್ಯವು ಬದಲಾಗಬಹುದು. ನಿಮ್ಮ ಕರ್ತವ್ಯವನ್ನು ಮಾಡಲು ಹಿಂದೇಟು ಹಾಕುವಿರಿ. ನಿಮ್ಮ ಮನಸ್ಸಿಗೆ ಹಿಡಿಸದೇ ಇರುವವರಿಂದ ದೂರ ಉಳಿಯುವಿರಿ. ಅನ್ಯರನ್ನು ಪೀಡಿಸಿ ನಿಮ್ಮ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಕಾನೂನಿನ ಕೆಲಸವನ್ನು ಯಾರ ಸಲಹೆಯನ್ನು ಪಡೆಯದೇ ಮಾಡುವಿರಿ. ಕ್ರೀಡೆಯಲ್ಲಿ ನಿಮಗೆ ಸೋಲಾಗುವುದು. ಯಾವುದೇ ಸ್ಪರ್ಧೆಯಲ್ಲಿ ಭಾಗಹಿಸುವುದು ಬೇಡ.‌ ಧನ ನಷ್ಟ ಮಾಡಿಕೊಳ್ಳುವಿರಿ.

ವೃಶ್ಚಿಕ ರಾಶಿ: ಔದಾಸೀನ್ಯದಿಂದ ವ್ಯಾಪಾರದಲ್ಲಿ ನಷ್ಟವಾಗಲಿದೆ. ಅಪರಿಚಿತರ ಜೊತೆ ವಾಗ್ವಾದ ಮಾಡುವಿರಿ. ಪ್ರಯಾಣದಿಂದ ಹಿಂಸೆ ಆಗಬಹುದು.‌ ಮಿತ್ರರಿಂದ ಸಿಗಬೇಕಾದ ಹಣಕ್ಕೆ ಕತ್ತರಿ ಬೀಳುವುದು. ನಿರೀಕ್ಷಿತ ಫಲವು ಲಭಿಸದು. ಆಸ್ತಿಯ ಖರೀದಿಯ ವಿಚಾರದಲ್ಲಿ ನೀವು ಸರಿಯಾದ ಮಾಹಿತಿಯನ್ನು ಪಡೆಯುವುದು ಸೂಕ್ತ. ಸಹೋದ್ಯೋಗಿಗಳ ಮೇಲೆ‌ ನಿಮಗೆ ಅಸೂಯೆ ಉಂಟಾಗಬಹುದು. ನಿಮ್ಮ ಇಚ್ಛಾಶಕ್ತಿಯು ವಹಿಸಿದ ಕೆಲಸವನ್ನು ಪೂರ್ಣಗೊಳಿಸಲು ಸಹಕಾರಿ. ನಿಮ್ಮ ಯೋಜನೆ ಉತ್ತಮವಿದ್ದರೂ ಅದನ್ನು ಕಾರ್ಯರೂಪಕ್ಕೆ ತರಲು ಕಷ್ಟವಾದೀತು. ನಿಮ್ಮ‌ ಕಾರ್ಯಕ್ಕೆ ಇನ್ಯಾರೋ ಯಶಸ್ಸು ಪಡೆವರು. ಸಂಗಾತಿಯ ಬಗ್ಗೆ ಇದ್ದ ಪೂರ್ವಾಗ್ರಹವು ಬದಲಾಗಿ ಅವರ ಜೊತೆ ಅನ್ಯೋನ್ಯವಾಗಿ ಇರುವಿರಿ. ಹಣ ಕೊಡುವುದಾಗಿ ಹೇಳಿ ಇಂದು ಸತಾಯಿಸುವಿರಿ.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಲಾಬಲ ಪ್ರದರ್ಶಿಸುವ ಅವಶ್ಯಕತೆ ಡಿಕೆ ಶಿವಕುಮಾರ್ ಅವರಿಗಿಲ್ಲ: ಡಿಕೆ ಸುರೇಶ್
ಬಲಾಬಲ ಪ್ರದರ್ಶಿಸುವ ಅವಶ್ಯಕತೆ ಡಿಕೆ ಶಿವಕುಮಾರ್ ಅವರಿಗಿಲ್ಲ: ಡಿಕೆ ಸುರೇಶ್
ಪೊಲಾರ್ಡ್, ಪೂರನ್ ಸಿಡಿಲಬ್ಬರ: ಫೈನಲ್​ಗೆ MI ಪಡೆ
ಪೊಲಾರ್ಡ್, ಪೂರನ್ ಸಿಡಿಲಬ್ಬರ: ಫೈನಲ್​ಗೆ MI ಪಡೆ
ಶಿವಣ್ಣನಿಗೆ ವಿಶ್ ಮಾಡಲು ಚಿಕ್ಕಮಗಳೂರಿನಿಂದ ಬಂದ ಕಾಫಿ ನಾಡು ಚಂದು
ಶಿವಣ್ಣನಿಗೆ ವಿಶ್ ಮಾಡಲು ಚಿಕ್ಕಮಗಳೂರಿನಿಂದ ಬಂದ ಕಾಫಿ ನಾಡು ಚಂದು
ಆರೋಗ್ಯವಂತ ಬಾಣಂತಿಯರ ಹಾಲನ್ನು ಮಾತ್ರ ಸಂಗ್ರಹಿಸಲಾಗುತ್ತದೆ: ವೈದ್ಯಾಧಿಕಾರಿ
ಆರೋಗ್ಯವಂತ ಬಾಣಂತಿಯರ ಹಾಲನ್ನು ಮಾತ್ರ ಸಂಗ್ರಹಿಸಲಾಗುತ್ತದೆ: ವೈದ್ಯಾಧಿಕಾರಿ
Wimbledon 2025: ನೊವಾಕ್ ನಾಗಾಲೋಟಕ್ಕೆ ಸಿನ್ನರ್ ಬ್ರೇಕ್
Wimbledon 2025: ನೊವಾಕ್ ನಾಗಾಲೋಟಕ್ಕೆ ಸಿನ್ನರ್ ಬ್ರೇಕ್
ಕೇಂದ್ರ ನೀಡುವ 5 ಕೇಜಿ ಅಕ್ಕಿ ಹಂಚುವ ಯೋಗ್ಯತೆ ರಾಜ್ಯ ಸರ್ಕಾರಕ್ಕಿಲ್ಲ: ಜೋಶಿ
ಕೇಂದ್ರ ನೀಡುವ 5 ಕೇಜಿ ಅಕ್ಕಿ ಹಂಚುವ ಯೋಗ್ಯತೆ ರಾಜ್ಯ ಸರ್ಕಾರಕ್ಕಿಲ್ಲ: ಜೋಶಿ
ಪತಿಯನ್ನು ನದಿಗೆ ತಳ್ಳಿದ ಪತ್ನಿ, ಆಮೇಲೆ ನಡೆಯಿತು ಯಾರೂ ಊಹಿಸದ ಘಟನೆ!
ಪತಿಯನ್ನು ನದಿಗೆ ತಳ್ಳಿದ ಪತ್ನಿ, ಆಮೇಲೆ ನಡೆಯಿತು ಯಾರೂ ಊಹಿಸದ ಘಟನೆ!
ಶಿವರಾಜ್​ಕುಮಾರ್ ಜನ್ಮದಿನ; ಮಧ್ಯರಾತ್ರಿ ಅಭಿಮಾನಿಗಳ ಜೊತೆ ಕೇಕ್ ಕಟ್
ಶಿವರಾಜ್​ಕುಮಾರ್ ಜನ್ಮದಿನ; ಮಧ್ಯರಾತ್ರಿ ಅಭಿಮಾನಿಗಳ ಜೊತೆ ಕೇಕ್ ಕಟ್
ಸಂಜು ಬಸಯ್ಯ ಪತ್ನಿಗೆ ಯುವಕನಿಂದ ಅಶ್ಲೀಲ ಸಂದೇಶ; ಬುದ್ಧಿ ಕಲಿಸಿದ ನಟ
ಸಂಜು ಬಸಯ್ಯ ಪತ್ನಿಗೆ ಯುವಕನಿಂದ ಅಶ್ಲೀಲ ಸಂದೇಶ; ಬುದ್ಧಿ ಕಲಿಸಿದ ನಟ
ಆಲ್ಕೋಹಾಲ್ ಬಾಟಲಿ ಕದಿಯಲು ಹೋಗಿ ಕಿಟಕಿ ಸರಳಲ್ಲಿ ತಲೆ ಸಿಲುಕಿಸಿಕೊಂಡ ಕುಡುಕ
ಆಲ್ಕೋಹಾಲ್ ಬಾಟಲಿ ಕದಿಯಲು ಹೋಗಿ ಕಿಟಕಿ ಸರಳಲ್ಲಿ ತಲೆ ಸಿಲುಕಿಸಿಕೊಂಡ ಕುಡುಕ