Horoscope: ಇಂದು ಈ ರಾಶಿಯವರು ತಮ್ಮ ಜೀವನಕ್ಕೆ ಸಂಬಂಧಿಸಿದ ಕೆಲವು ನಿರ್ಧಾರ ತೆಗೆದುಕೊಳ್ಳಬೇಕಾದೀತು

| Updated By: Rakesh Nayak Manchi

Updated on: Sep 29, 2023 | 12:30 AM

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ಸೆಪ್ಟೆಂಬರ್ 29) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Horoscope: ಇಂದು ಈ ರಾಶಿಯವರು ತಮ್ಮ ಜೀವನಕ್ಕೆ ಸಂಬಂಧಿಸಿದ ಕೆಲವು ನಿರ್ಧಾರ ತೆಗೆದುಕೊಳ್ಳಬೇಕಾದೀತು
ರಾಶಿಭವಿಷ್ಯ
Image Credit source: iStock Photo
Follow us on

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ಸೆಪ್ಟೆಂಬರ್ 29) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ಪೂರ್ಣಿಮಾ, ನಿತ್ಯನಕ್ಷತ್ರ: ಉತ್ತರಾಭಾದ್ರ, ಯೋಗ: ವೃದ್ಧಿ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 22 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 10:53 ರಿಂದ ಮಧ್ಯಾಹ್ನ 12:23ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:23 ರಿಂದ 04:53ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:53 ರಿಂದ 09:23ರ ವರೆಗೆ.

ಸಿಂಹ ರಾಶಿ: ಕಛೇರಿಯಲ್ಲಿ ಕಾರ್ಯಗಳು ಒತ್ತಡದಿಂದ ಇದ್ದು ಕೆಲವು ತಪ್ಪು ಆಗಬಹುದು.‌ ಅಧಿಕಾರಿಗಳಿಂದ ಕ್ರಮ ತೆಗೆದುಕೊಳ್ಳಬಹುದು. ವಾಹನ‌ಸಂಚಾರದಿಂದ ಆಯಾಸವಾಗುವುದು.‌ ಅಹಂಕಾರದಿಂದ ಬೀಗುವುದು ಬೇಡ. ನಿಮ್ಮನ್ನು ಇತರರು ನೋಡುವರು. ರಾಜಕಾರಣಿಗಳು ಕಾರ್ಯಕ್ರಮದ ಒತ್ತಡದಲ್ಲಿ ಇರುವರು. ಮಾನಸಿಕ ಒತ್ತಡದಿಂದ ಬೇರೆ ಕೆಲಸದಲ್ಲಿ ತೊಡಗಿಕೊಳ್ಳುವಿರಿ. ಪೋಷಕರ ಜೊತೆ ನಿಮ್ಮ ದಿನವು ಆನಂದದಿಂದ ಇರುವುದು. ಮನಸ್ಸು ಅನ್ಯ ಆಲೋಚನೆಯಲ್ಲಿ ಮಗ್ನವಾಗಿರುವುದು. ಆಪ್ತರ ಸಲಹೆಯು ನಿಮ್ಮ ಉದ್ಯೋಗಕ್ಕೆ ಸಹಕಾರಿಯಾಗಲಿದೆ. ನಿಮಗೆ ಪದವಿಯನ್ನು ಪಡೆದುಕೊಳ್ಳುವ ಬಯಕೆ ಇರಲಿದೆ. ಮಾತಿನ ಪರಿಣಾಮವು ಇಂದು ಗೊತ್ತಾಗಲಿದೆ.

ಕನ್ಯಾ ರಾಶಿ: ಇಂದು ನಿಮ್ಮ ಜೀವನಕ್ಕೆ ಸಂಬಂಧಿಸಿದ ಕೆಲವು ನಿರ್ಧಾರವನ್ನು ತೆಗೆದುಕೊಳ್ಳಬೇಕಾದೀತು. ಭವಿಷ್ಯದಲ್ಲಿ ನೀವು ಒಳ್ಳೆಯ ಫಲಿತಾಂಶವನ್ನು ಪಡೆಯುವಿರಿ. ಸಹೋದ್ಯೋಗಿಗಳ ಜೊತೆ ವೈಮನಸ್ಯ ಉಂಟಾಗಬಹುದು‌‌. ನಿಮ್ಮ ವಿರೋಧಿಗಳು ಹೆಚ್ಚಾಗಬಹುದು. ಆದಾಯದ ಮೂಲವನ್ನು ಹೆಚ್ಚು ಮಾಡಿಕೊಳ್ಳಲು ಓಡಾಡಬೇಕಾದೀತು. ಕಷ್ಟದಲ್ಲಿ ಇರುವವರಿಗೆ ಕರುಣೆ ಇರಲಿದೆ. ನಿಮಗೆ ಆಗುವ ಸಹಾಯವನ್ನು ಮಾಡಿ.‌ ನಿಮ್ಮ ರೋಗಕ್ಕೆ ವೈದ್ಯಕೀಯ ಚಿಕಿತ್ಸೆಯನ್ನು ಮಾಡಿಕೊಳ್ಳಿ. ಧಾರ್ಮಿಕ ಆಚರಣೆಗೆ‌ ಮನಸ್ಸಿದ್ದರೂ ಸಮಯದ ಅಭಾವದಿಂದ ಸಾಧ್ಯಬಾಗದು. ನಿಮ್ಮ ಭಾವನೆಗಳನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳುವಿರಿ. ಮನಸ್ಸು ಸಮಾಧಾನವಾಗಲಿದೆ.

ತುಲಾ ರಾಶಿ: ಇಂದು ವಿದ್ಯಾರ್ಥಿಗಳಿಗೆ ಪ್ರಶಂಸೆ ಸಿಗುವ ದಿನ. ಪರೀಕ್ಷೆಯ ಫಲಿತಾಂಶವು ನಿಮಗೆ ಸಂತೋಷವನ್ನು ಕೊಡುವುದು. ನೀವು ಉದ್ಯೋಗವನ್ನು ಬದಲಾಯಿಸಲು ಕಷ್ಟವಾದೀತು. ಮಕ್ಕಳಿಂದ ನಿಮಗೆ ತೊಂದರೆ ಆಗಬಹುದು. ಭೂಮಿಯ ವಿಚಾರದಲ್ಲಿ ನಷ್ಟವಾಗಿ ತೊಂದರೆ ಪಡುವಿರಿ. ಮನಸ್ಸಿನ ನಿಯಂತ್ರಣದಲ್ಲಿ ನಿಮಗೆ ಕಷ್ಟವಾದೀತು. ಹಣದ ದುರ್ಬಳಕೆಯನ್ನು ತಪ್ಪಿಸಿಕೊಳ್ಳಿ. ಕುಟುಂಬದ ತೊಡಕುಗಳನ್ನು ಸೂಕ್ಷ್ಮವಾಗಿ ಪರಿಹರಿಸಿಕೊಳ್ಳಿ. ಇನ್ನೊಬ್ಬರಿಗೆ ಸಹಾಯವನ್ನು ಮಾಡುವ ಆಸೆಯು ಇರುವುದು. ನಿಮ್ಮ ಅಮೂಲ್ಯ ವಸ್ತುನ್ನು ಕಳೆದುಕೊಳ್ಳುವಿರಿ. ಇಂದಿನ ವ್ಯವಹಾರವನ್ನು ಸಂಗಾತಿಗೆ ಬಿಟ್ಟುಕೊಡುವಿರಿ.

ವೃಶ್ಚಿಕ ರಾಶಿ: ಇಂದಿನ ನಿಮ್ಮ ಕಾರ್ಯವೇ ಗೌರವವನ್ನು ಹೆಚ್ಚು ಮಾಡುವುದು. ನಿಮ್ಮ ಸಂಗಾತಿಯ ಜೊತೆ ನಿಮ್ಮ ಸಂಬಂಧವು ಹಿಂದಿಗಿಂತ ಗಟ್ಟಿಯಾಗುವುದು. ನೀವು ಇಂದು ದೊಡ್ಡ ಖರೀದಿಯನ್ನು ಮಾಡಲು ತೀರ್ಮಾನಿಸಿದ್ದೀರಿ. ಸಾಲ ಕೊಟ್ಟ ಹಣವು ನಿಮಗೆ ಮರಳಿಬರುವುದು. ನಿಮಗೆ ಸಂಸ್ಥೆಯನ್ನು ಮುನ್ನಡೆಸುವ ಹೊಣೆಗಾರಿಕೆ ಸಿಗಲಿದೆ. ಇಂದು ಇನ್ನೊಬ್ಬರ ನೋವಿಗೆ ಸ್ಪಂದಿಸಲು ಆಗದು. ನೀವು ತೆಗೆದುಕೊಂಡ ತೀರ್ಮಾನವನ್ನು ಇತರರು ಬದಲಿಸಿದ್ದು ನಿಮ್ಮ ಕೋಪ ಬರುವುದು. ನಿಮ್ಮ ಕೆಲಸಕ್ಕೆ ಕುಟುಂಬ ಬೆಂಬಲವು ಪೂರ್ಣವಾಗಿ ಸಿಗದು. ವ್ಯಾಪಾರದಲ್ಲಿ ಅಲ್ಪ ಲಾಭಕ್ಕೆ ತೃಪ್ತಿ. ಇಂದು ಎಲ್ಲರ ಜೊತೆ ಬೆರೆಯಬೇಕಾದೀತು. ನೀವು ಅಧಿಕಾರವನ್ನು ದುರುಪಯೋಗದ ಮಾಡಿಕೊಳ್ಳುವಿರಿ. ಮಾತುನ್ನು‌ ಕೇಳಿಸಿಕೊಳ್ಳುವ ಸಮಾಧಾನ ಇರಲಿ.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ