Horoscope 29 Sep: ಇಂದು ಈ ರಾಶಿಯವರು ನಿರ್ಧಾರಗಳನ್ನು ಸಾಮಾಧಾನವಾಗಿ ಆಲೋಚಿಸಿ ತೆಗೆದುಕೊಂಡರೆ ಉತ್ತಮ
ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹಾಗಾದರೆ ಇಂದಿನ (2023 ಸೆಪ್ಟೆಂಬರ್ 29) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಸೆಪ್ಟೆಂಬರ್ 29) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ಪೂರ್ಣಿಮಾ, ನಿತ್ಯನಕ್ಷತ್ರ: ಉತ್ತರಾಭಾದ್ರ, ಯೋಗ: ವೃದ್ಧಿ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 22 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 10:53 ರಿಂದ ಮಧ್ಯಾಹ್ನ 12:23ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:23 ರಿಂದ 04:53ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:53 ರಿಂದ 09:23ರ ವರೆಗೆ.
ಮೇಷ ರಾಶಿ: ವ್ಯಾಪಾರಸ್ಥರು ಯಾವುದಾರೂ ಸಮಸ್ಯೆಯಲ್ಲಿ ಸಿಕ್ಕಿಕೊಳ್ಳಬಹುದು. ಇಂದಿನ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದು. ಅಗತ್ಯಕ್ಕಿಂತ ಹೆಚ್ಚು ಖರ್ಚು ಬೇಡ. ದಾಂಪತ್ಯದಲ್ಲಿ ಪರಸ್ಪರ ಅಭಿಪ್ರಾಯ ಭೇದವು ಕಾಣಿಸಿಕೊಂಡೀತು. ಪ್ರೀತಿಪಾತ್ರರು ನಿಮಗೆ ಬೇಕಾದ ಸಹಕಾರ ಮಾಡುವರು. ಆಪ್ತರನ್ನು ನೀವು ದೂರ ಮಾಡಿಕೊಳ್ಳುವುದು ಕಷ್ಟವಾಗಬಹುದು. ಕುಟುಂಬದವರನ್ನು ನೀವು ಕಳೆದುಕೊಳ್ಳಬೇಕಾದೀತು. ಪರೀಕ್ಷೆಯ ಸಿದ್ಧತೆಯಲ್ಲಿ ನಿಮ್ಮ ಸಮಯವನ್ನು ಕಳೆಯುವಿರಿ. ಇಂದು ನೀವು ಅಗತ್ಯ ಸೌಲಭ್ಯಗಳನ್ನು ಪಡೆದುಕೊಳ್ಳುವಿರಿ. ಮನೆಯ ಬದಲಾವಣೆಯು ಅನಿವಾರ್ಯವಾದೀತು. ಇಂದಿನ ಎಲ್ಲ ಸಂದರ್ಭದಲ್ಲಿಯೂ ಸಕಾರಾತ್ಮಕ ಆಲೋಚನೆ ಇರಲಿ.
ವೃಷಭ ರಾಶಿ: ಬಂಧುಗಳ ಆಗಮನದಿಂದ ಹೆಚ್ಚು ಸಂತೋಷವು ಇರುವುದು. ನಿಮ್ಮ ಪ್ರೀತಿಪಾತ್ರರ ಜೊತೆ ಆಪ್ತವಾದ ಸಮಯವನ್ನು ಕಳೆಯುವಿರಿ. ಕಚೇರಿಯಲ್ಲಿ ನಿಮ್ಮ ಸಹೋದ್ಯೋಗಿಗಳ ಜೊತೆ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಳ್ಳಿ. ನಿಮ್ಮ ಆರ್ಥಿಕ ಸ್ಥಿತಿ ಆರೋಗ್ಯದ ಕಡೆ ಸ್ವಲ್ಪ ಹೆಚ್ಚು ಗಮನವಿರಲಿ. ನಿಮ್ಮ ಕೆಲಸವು ಕೇವಲ ಸುತ್ತಾಟದಲ್ಲಿಯೇ ಮುಕ್ತಾಯವಾಗುವುದು. ಆಲಂಕಾರಿಕ ವಸ್ತುಗಳ ಬಗ್ಗೆ ಅಸದ ಅಸೆ ಇರುವುದು. ನಿಮ್ಮ ವರ್ತನೆಯು ಇಷ್ಟವಾಗುವುದು. ಬಂಧುಗಳು ನಿಮ್ಮ ಬಗ್ಗೆ ಹಗುರವಾದ ಭಾವವನ್ನು ಇಟ್ಟುಕೊಳ್ಳುವರು. ಸಂಗಾತಿಯ ಜೊತೆ ಪ್ರೀತಿಯನ್ನು ಹಂಚಿ. ಅಪರಿಚಿತರ ಸಹವಾಸವು ಇಂದು ಬೇಡ. ನಿಮ್ಮ ಸಂಪತ್ತು ನಷ್ಟವಾಗಬಹುದು.
ಮಿಥುನ ರಾಶಿ: ಇಂದಿನ ನಿಮ್ಮ ದಿನವು ಆತ್ಮವಿಶ್ವಾಸದಿಂದ ಇರಲಿದೆ. ನಿಮ್ಮ ಕಾರ್ಯಗಳು ಅಂದುಕೊಂಡಂತೆ ಪೂರ್ಣವಾಗುವುದು. ಹಳೆಯ ವಿಚಾರವನ್ನು ಇಂದು ವಿರೋಧಿಗಳು ಪುನಃ ಮೇಲಕ್ಕೆ ತಂದು ಕಲಹ ಮಾಡಬಹುದು. ಅವಕಾಶವನ್ನು ಬಿಟ್ಟು ನೀವು ದೊಡ್ಡವರಾಗುವುದು ಬೇಡ. ಕೆಟ್ಟ ಮಾತುಗಳನ್ನು ಇನ್ನೊಬ್ಬರ ಬಗ್ಗೆ ತಪ್ಪಿ ಆಡುವಿರಿ. ಗೊತ್ತಿಲ್ಲದೇ ಯಾರ ಬಗ್ಗೆಯೂ ಮಾತನಾಡುವುದು ಬೇಡ. ನಿರಂತರ ಕ್ರಿಯಾಶೀಲತೆಯು ನಿಮ್ಮ ಮಾನಸಿಕ ಒತ್ತಡವನ್ನು ನಿವಾರಿಸುವುರು. ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಆತಂಕವಿರಲಿದೆ. ಸಹೋದ್ಯೋಗಿಗಳು ನಿಮ್ಮ ವರ್ತನೆಯನ್ನು ಗಮನಿಸುವರು. ಹೊಸ ಭೂಮಿಯ ಖರೀದಿಗೆ ಆಪ್ತರನ್ನು ಜೊತೆಗೆ ಇಟ್ಟುಕೊಳ್ಳಿ. ಮನೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿವೆ.
ಕಟಕ ರಾಶಿ: ಕಾನೂನಿನ ಮಾರ್ಗದಲ್ಲಿ ಆಸ್ತಿಗೆ ಸಂಬಂಧಿಸಿದಂತೆ ಕೆಲವು ಪ್ರಯೋಜನವನ್ನು ಪಡೆಯುವಿರಿ. ನಿಮ್ಮ ಸಂಗಾತಿಯ ಮನಃಸ್ಥಿತಿಯು ಬದಲಾಗಿದ್ದು ನಿಮಗೆ ಸಮಸ್ಯೆಯಾಗುವುದು. ನೀವು ಜಾಣ್ಮೆಯಿಂದ ವರ್ತಿಸಬೇಕಾದೀತು. ಇಂದು ನಿಮ್ಮ ಕೆಲಸಕ್ಕೆ ಸಂಬಂಧಿಸಿದ ಒಳ್ಳೆಯ ಸುದ್ದಿಯು ಇರಲಿದೆ. ಮನೆಯಿಂದ ದೂರ ಇರಬೇಕಾದೀತು. ಸಜ್ಜನರ ಸಹವಾಸವನ್ನು ಹೆಚ್ಚು ಇಷ್ಟಪಡುವಿರಿ. ಇತರರಿಗೆ ನೋವಾಗದಂತೆ ಮಾತುಗಳನ್ನಾಡಿ. ಭೋಗವಸ್ತುಗಳನ್ನು ಖರೀದಿಸುವಿರಿ. ನಿಮ್ಮ ಗೌರವಕ್ಕೆ ಸರಿಯಾದ ಕಾರ್ಯವನ್ನು ಮಾಡಿ. ಹಿರಿಯ ಹಿತವಚನವು ನಿಮಗೆ ಕಿರಿಕಿರಿಯಂತೆ ತೋರುವುದು. ಆಹಾರದಿಂದ ಇಂದು ಅನಾರೋಗ್ಯವು ಬರಬಹುದು. ಸಂಗಾತಿಯ ಮಾತನ್ನು ವಿರೋಧಿಸುವಿರಿ. ಸುಲಭವಾಗಿ ಸಿಕ್ಕಿದ್ದನ್ನು ಬಿಟ್ಟುಕೊಡುವಿರಿ.
ಸಿಂಹ ರಾಶಿ: ಕಛೇರಿಯಲ್ಲಿ ಕಾರ್ಯಗಳು ಒತ್ತಡದಿಂದ ಇದ್ದು ಕೆಲವು ತಪ್ಪು ಆಗಬಹುದು. ಅಧಿಕಾರಿಗಳಿಂದ ಕ್ರಮ ತೆಗೆದುಕೊಳ್ಳಬಹುದು. ವಾಹನಸಂಚಾರದಿಂದ ಆಯಾಸವಾಗುವುದು. ಅಹಂಕಾರದಿಂದ ಬೀಗುವುದು ಬೇಡ. ನಿಮ್ಮನ್ನು ಇತರರು ನೋಡುವರು. ರಾಜಕಾರಣಿಗಳು ಕಾರ್ಯಕ್ರಮದ ಒತ್ತಡದಲ್ಲಿ ಇರುವರು. ಮಾನಸಿಕ ಒತ್ತಡದಿಂದ ಬೇರೆ ಕೆಲಸದಲ್ಲಿ ತೊಡಗಿಕೊಳ್ಳುವಿರಿ. ಪೋಷಕರ ಜೊತೆ ನಿಮ್ಮ ದಿನವು ಆನಂದದಿಂದ ಇರುವುದು. ಮನಸ್ಸು ಅನ್ಯ ಆಲೋಚನೆಯಲ್ಲಿ ಮಗ್ನವಾಗಿರುವುದು. ಆಪ್ತರ ಸಲಹೆಯು ನಿಮ್ಮ ಉದ್ಯೋಗಕ್ಕೆ ಸಹಕಾರಿಯಾಗಲಿದೆ. ನಿಮಗೆ ಪದವಿಯನ್ನು ಪಡೆದುಕೊಳ್ಳುವ ಬಯಕೆ ಇರಲಿದೆ. ಮಾತಿನ ಪರಿಣಾಮವು ಇಂದು ಗೊತ್ತಾಗಲಿದೆ.
ಕನ್ಯಾ ರಾಶಿ: ಇಂದು ನಿಮ್ಮ ಜೀವನಕ್ಕೆ ಸಂಬಂಧಿಸಿದ ಕೆಲವು ನಿರ್ಧಾರವನ್ನು ತೆಗೆದುಕೊಳ್ಳಬೇಕಾದೀತು. ಭವಿಷ್ಯದಲ್ಲಿ ನೀವು ಒಳ್ಳೆಯ ಫಲಿತಾಂಶವನ್ನು ಪಡೆಯುವಿರಿ. ಸಹೋದ್ಯೋಗಿಗಳ ಜೊತೆ ವೈಮನಸ್ಯ ಉಂಟಾಗಬಹುದು. ನಿಮ್ಮ ವಿರೋಧಿಗಳು ಹೆಚ್ಚಾಗಬಹುದು. ಆದಾಯದ ಮೂಲವನ್ನು ಹೆಚ್ಚು ಮಾಡಿಕೊಳ್ಳಲು ಓಡಾಡಬೇಕಾದೀತು. ಕಷ್ಟದಲ್ಲಿ ಇರುವವರಿಗೆ ಕರುಣೆ ಇರಲಿದೆ. ನಿಮಗೆ ಆಗುವ ಸಹಾಯವನ್ನು ಮಾಡಿ. ನಿಮ್ಮ ರೋಗಕ್ಕೆ ವೈದ್ಯಕೀಯ ಚಿಕಿತ್ಸೆಯನ್ನು ಮಾಡಿಕೊಳ್ಳಿ. ಧಾರ್ಮಿಕ ಆಚರಣೆಗೆ ಮನಸ್ಸಿದ್ದರೂ ಸಮಯದ ಅಭಾವದಿಂದ ಸಾಧ್ಯಬಾಗದು. ನಿಮ್ಮ ಭಾವನೆಗಳನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳುವಿರಿ. ಮನಸ್ಸು ಸಮಾಧಾನವಾಗಲಿದೆ.
ತುಲಾ ರಾಶಿ: ಇಂದು ವಿದ್ಯಾರ್ಥಿಗಳಿಗೆ ಪ್ರಶಂಸೆ ಸಿಗುವ ದಿನ. ಪರೀಕ್ಷೆಯ ಫಲಿತಾಂಶವು ನಿಮಗೆ ಸಂತೋಷವನ್ನು ಕೊಡುವುದು. ನೀವು ಉದ್ಯೋಗವನ್ನು ಬದಲಾಯಿಸಲು ಕಷ್ಟವಾದೀತು. ಮಕ್ಕಳಿಂದ ನಿಮಗೆ ತೊಂದರೆ ಆಗಬಹುದು. ಭೂಮಿಯ ವಿಚಾರದಲ್ಲಿ ನಷ್ಟವಾಗಿ ತೊಂದರೆ ಪಡುವಿರಿ. ಮನಸ್ಸಿನ ನಿಯಂತ್ರಣದಲ್ಲಿ ನಿಮಗೆ ಕಷ್ಟವಾದೀತು. ಹಣದ ದುರ್ಬಳಕೆಯನ್ನು ತಪ್ಪಿಸಿಕೊಳ್ಳಿ. ಕುಟುಂಬದ ತೊಡಕುಗಳನ್ನು ಸೂಕ್ಷ್ಮವಾಗಿ ಪರಿಹರಿಸಿಕೊಳ್ಳಿ. ಇನ್ನೊಬ್ಬರಿಗೆ ಸಹಾಯವನ್ನು ಮಾಡುವ ಆಸೆಯು ಇರುವುದು. ನಿಮ್ಮ ಅಮೂಲ್ಯ ವಸ್ತುನ್ನು ಕಳೆದುಕೊಳ್ಳುವಿರಿ. ಇಂದಿನ ವ್ಯವಹಾರವನ್ನು ಸಂಗಾತಿಗೆ ಬಿಟ್ಟುಕೊಡುವಿರಿ.
ವೃಶ್ಚಿಕ ರಾಶಿ: ಇಂದಿನ ನಿಮ್ಮ ಕಾರ್ಯವೇ ಗೌರವವನ್ನು ಹೆಚ್ಚು ಮಾಡುವುದು. ನಿಮ್ಮ ಸಂಗಾತಿಯ ಜೊತೆ ನಿಮ್ಮ ಸಂಬಂಧವು ಹಿಂದಿಗಿಂತ ಗಟ್ಟಿಯಾಗುವುದು. ನೀವು ಇಂದು ದೊಡ್ಡ ಖರೀದಿಯನ್ನು ಮಾಡಲು ತೀರ್ಮಾನಿಸಿದ್ದೀರಿ. ಸಾಲ ಕೊಟ್ಟ ಹಣವು ನಿಮಗೆ ಮರಳಿಬರುವುದು. ನಿಮಗೆ ಸಂಸ್ಥೆಯನ್ನು ಮುನ್ನಡೆಸುವ ಹೊಣೆಗಾರಿಕೆ ಸಿಗಲಿದೆ. ಇಂದು ಇನ್ನೊಬ್ಬರ ನೋವಿಗೆ ಸ್ಪಂದಿಸಲು ಆಗದು. ನೀವು ತೆಗೆದುಕೊಂಡ ತೀರ್ಮಾನವನ್ನು ಇತರರು ಬದಲಿಸಿದ್ದು ನಿಮ್ಮ ಕೋಪ ಬರುವುದು. ನಿಮ್ಮ ಕೆಲಸಕ್ಕೆ ಕುಟುಂಬ ಬೆಂಬಲವು ಪೂರ್ಣವಾಗಿ ಸಿಗದು. ವ್ಯಾಪಾರದಲ್ಲಿ ಅಲ್ಪ ಲಾಭಕ್ಕೆ ತೃಪ್ತಿ. ಇಂದು ಎಲ್ಲರ ಜೊತೆ ಬೆರೆಯಬೇಕಾದೀತು. ನೀವು ಅಧಿಕಾರವನ್ನು ದುರುಪಯೋಗದ ಮಾಡಿಕೊಳ್ಳುವಿರಿ. ಮಾತುನ್ನು ಕೇಳಿಸಿಕೊಳ್ಳುವ ಸಮಾಧಾನ ಇರಲಿ.
ಧನು ರಾಶಿ: ಕೆಲಸದ ವಿಷಯದಲ್ಲಿ ಇಂದು ನಿಮಗೆ ಉತ್ತಮ ದಿನವಾಗಿದೆ. ಕೆಲಸದ ನಿಮಿತ್ತ ಪ್ರಯಾಣ ಮಾಡಬೇಕಾಗುವುದು. ನಿಮ್ಮ ಈ ಪ್ರಯಾಣವು ತುಂಬಾ ಪ್ರಯೋಜನಕಾರಿಯಾಗಲಿದೆ. ನಿಮಗೆ ಪ್ರೇಮ ವಿವಾಹವನ್ನು ಮಾಡಿಕೊಳ್ಳಲು ಮನಸ್ಸು ಇರುವುದು. ಭೂಮಿಯ ವ್ಯವಹಾರವನ್ನು ಮಾಡಲು ಬಹಳ ಉತ್ಸಾವಿರಲಿದೆ. ಕಛೇರಿಯಲ್ಲಿ ನಿಮ್ಮ ದಾಖಲೆಗಳು ಕಾಣಿಸದೇ ಹೋಗಬಹುದು. ನಿಮಗೆ ಬೇಡದ ವಸ್ತುವಾದರೂ ಇಂದು ಯಾರಿಗೂ ಕೊಡುವುದು ಬೇಡ. ಆರ್ಥಿಕ ಸ್ಥಿತಿಯನ್ನು ಬಲಪಡಿಸಿಕೊಳ್ಳುವ ಪ್ರಯತ್ನ ಮಾಡುವಿರಿ. ಮಕ್ಕಳ ಶುಭವಾರ್ತೆಯು ಇರಲಿದೆ. ಒಗಟಾದ ಮಾತುಗಳು ಇಂದು ಹೆಚ್ಚು ಆಡುವಿರಿ. ಧನವನ್ನು ಕೇಳಬೇಕಾದವರಲ್ಲಿ ಕೇಳಿ.
ಮಕರ ರಾಶಿ: ಇಂದು ಕಛೇರಿಯಲ್ಲಿ ಕೊಡುವ ಕೆಲಸವನ್ನು ಬಹಳ ಜವಾಬ್ದಾರಿಯಿಂದ ಮಾಡಬೇಕಾದೀತು. ಆರೋಗ್ಯ ಸಮಸ್ಯೆಗಳು ನಿಮ್ಮ ಸರಿಯಿಲ್ಲದ ದಿನಚರಿಯಿಂದ ಬರಲಿದೆ. ಇದರಿಂದ ನೀವು ಸರಿಯಾದ ಫಲಿತಾಂಶವನ್ನು ಪಡೆಯುವಿರಿ. ವ್ಯಾಪಾರಸ್ಥರು ಅಧಿಕ ಲಾಭವನ್ನು ಗಳಿಸುವರು. ಮನೆಯಲ್ಲಿ ವಾತಾವರಣ ಚೆನ್ನಾಗಿರುವುದಿಲ್ಲ. ಸರ್ಕಾರದ ಕೆಲಸಕ್ಕೆ ತೊಂದರೆಯಾಗುವುದು. ಆರ್ಥಿಕ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವರನ್ನು ದೂರಮಾಡಿಕೊಳ್ಳಬೇಕಾದೀತು. ಯಾರದೋ ಒತ್ತಾಯಕ್ಕಾಗಿ ಪ್ರಯಾಣ ಮಾಡಬೇಕಾದೀತು. ಪತ್ನಿಯು ನಿಮ್ಮನ್ನು ದೂಷಿಸಬಹುದು. ನಿಮ್ಮ ಪ್ರಾಮಾಣಿಕತೆಗೆ ಫಲವು ಲಭಿಸಿ, ಸಂತಸವಾಗುವುದು. ಖಾಸಗಿಯ ಸಮಾರಂಭದಲ್ಲಿ ಭಾಗವಹಿಸುವಿರಿ. ಇಂದು ನಿಮಗೆ ಒತ್ತಡದ ಕೆಲಸವು ಬಂದು ಮನೆಯ ಕೆಲಸವು ಮರೆತುಹೋದೀತು.
ಕುಂಭ ರಾಶಿ: ಇಂದು ನಿಮ್ಮ ನಿರ್ಧಾರಗಳನ್ನು ನೀವು ಸಾಮಾಧಾನವಾಗಿ ಆಲೋಚಿಸಿ ತೆಗೆದುಕೊಂಡರೆ ಉತ್ತಮ. ಕೆಲಸದ ವಿಷಯದಲ್ಲಿ ನೀವು ಯಾರ ಮಾತನ್ನೂ ನೀವು ಕೇಳುವುದಿಲ್ಲ. ನಿಮ್ಮ ಕುಟುಂಬದ ಜೊತೆ ಇಂದು ಸಮಯವನ್ನು ಕಳೆಯಲು ಸಾಧ್ಯವಾಗುವುದು. ನಿಮ್ಮ ಇಂದಿನ ಆದಾಯವು ಮಧ್ಯಮಕ್ಕಿಂತ ಚೆನ್ನಾಗಿ ಇರುವುದು. ಇಂದು ನೀವು ಅಚಾತುರ್ಯದಿಂದ ನಿರ್ಧಾರ ತೆಗೆದುಕೊಳ್ಳಬೇಡಿ. ಶತ್ರುಗಳ ಚಿಂತೆಯಿಂದ ಮಾನಸಿಕವಾಗಿ ಕುಗ್ಗುವಿರಿ. ನಿಮ್ಮಷ್ಟಕ್ಕೆ ನೀವಿರಲು ಸಾಧ್ಯವಾಗದು. ಹಿಂದಿನಿಂದ ಮಾತನಾಡಿಕೊಳ್ಳುವರಿಗೆ ಬೆಲೆಯನ್ನು ಕೊಡುವುದಿಲ್ಲ. ಇಂದು ನಿಮಗಾದ ವಿಶ್ವಾಸದ್ರೋಹದಿಂದ ಎಲ್ಲರ ಮೇಲೆ ಅಸಮಾಧಾನ ತೋರುವಿರಿ. ನಿಮ್ಮದಲ್ಲದ ವಸ್ತುವಿನ ಮೇಲೇ ಮೋಹವೇಕೆ? ಸಿಗದೇ ದುಃಖಿಸುವುದ್ಕಕಿಂತ ಸಿಕ್ಕಿದ್ದರಲ್ಲಿ ಖುಷಿಪಡಿ. ಕೆಲಸವನ್ನು ನಿಭಾಯಿಸಲು ಸರಳ ತಂತ್ರವನ್ನು ಬಳಸುವಿರಿ. ಇನ್ನೊಬ್ಬರ ಬಗ್ಗೆ ತಪ್ಪು ಕಲ್ಪನೆ ಇರಬಹುದು.
ಮೀನ ರಾಶಿ: ಇಂದು ದಾಂಪತ್ಯದಲ್ಲಿ ನಡೆಯುತ್ತಿರುವ ದೊಡ್ಡ ದೊಡ್ಡ ಸಮಸ್ಯೆಗಳು ದೂರಾಗಿ ನಿಮ್ಮ ಪರಸ್ಪರ ಸಂಬಂಧವು ಸರಿಯಾಗುತ್ತ ಸಾಗುವುದು. ನಿಮ್ಮ ವರ್ತನೆಯನ್ನು ಬೇರೆಯವರ ಮೂಲಕದಿಂದ ತಿದ್ದಿಕೊಳ್ಳುವಿರಿ. ಕಛೇರಿಯ ಕೆಲಸದಲ್ಲಿ ನಿಮ್ಮ ಗುಂಪಿನಿಂದ ತಪ್ಪಾಗದಂತೆ ಪರೀಕ್ಷಿಸಿ. ನಿಮಗೆ ಗೊತ್ತಾಗದಂತೆ ಖರ್ಚು ಅಧಿಕವಾಗುವುದು. ಇಂದು ನಿಮ್ಮ ರಪ್ತು ಅಡೆತಡೆಗಳಿಲ್ಲದೇ ನಡೆಸುವಿರಿ. ಸ್ತ್ರೀಯರಿಗೆ ಕೆಲವು ಲಾಭಗಳು ಆಗಬಹುದು. ವಾಹನ ಖರೀದಿಗೆ ದಾಖಲೆಗಳನ್ನು ತಯಾರಿಸಿಕೊಳ್ಳುವಿರಿ. ಇಂದು ನಿಮ್ಮ ತಲೆಯಲ್ಲಿ ಅಪೂರ್ಣ ಕಾರ್ಯಗಳೇ ತುಂಬಿರುವುದು. ನಿಮ್ಮ ಮಗನ ಮೇಲೆ ಸಂಪತ್ತಿನ ದೂರುವಿರಿ. ತುರ್ತು ಕಾರ್ಯಕ್ಕಾಗಿ ಮನೆಯಿಂದ ಬೇಗ ಹೊರಡಬೇಖಾಗುವುದು. ಹೇಳಿದ ಕೆಲಸಗಳು ಸಮಯಕ್ಕೆ ಆಗಿಲ್ಲ ಎಂದು ನೌಕರರ ಮೇಲೆ ಕೋಪಗೊಳ್ಳುವಿರಿ.
-ಲೋಹಿತಶರ್ಮಾ (ವಾಟ್ಸ್ಆ್ಯಪ್ 8762924271)
ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ