Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಸೆಪ್ಟೆಂಬರ್ 29ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಸೆಪ್ಟೆಂಬರ್ 29ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಸೆಪ್ಟೆಂಬರ್ 29ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಅಂದುಕೊಂಡ ಸಮಯಕ್ಕೆ ಹಾಗೂ ಅಂದುಕೊಂಡ ರೀತಿಯಲ್ಲಿ ಕೆಲಸಗಳು ಮುಗಿಯದೆ ಬಹಳ ಒತ್ತಡಕ್ಕೆ ಒಳಗಾಗುತ್ತೀರಿ. ನೀವು ಇತರರಿಗೆ ವಹಿಸಿದ ಜವಾಬ್ದಾರಿಗಳನ್ನು ಸಹ ಒಮ್ಮೆ ಸಾದ್ಯಂತವಾಗಿ ಪರೀಕ್ಷೆ ಮಾಡಬೇಕಾದಂತಹ ಅಗತ್ಯ ಕಂಡುಬರಲಿದೆ. ಸ್ನೇಹಿತರು ತಮ್ಮ ಕೆಲಸಗಳನ್ನು ಪೂರ್ತಿ ಮಾಡುವ ಸಲುವಾಗಿ ನಿಮ್ಮ ಹೆಸರನ್ನು ಹಾಗೂ ಪ್ರಭಾವವನ್ನು ಬಳಸಿಕೊಳ್ಳುವುದಕ್ಕೆ ಮುಂದಾಗಲಿದ್ದಾರೆ. ನೀವು ಅವರಿಗೆ ಹೂಂ ಎನ್ನುವ ಮೊದಲಿಗೆ ಆ ಕೆಲಸ ಯಾವುದು ಎಂಬುದನ್ನು ಕೇಳಿ, ತಿಳಿದುಕೊಂಡು ಆ ನಂತರ ನಿಮ್ಮ ಅಭಿಪ್ರಾಯವನ್ನು ಹೇಳುವುದು ಒಳ್ಳೆಯದು. ಜ್ಯೋತಿಷಿಗಳು, ವೇದಾಭ್ಯಾಸ ಮಾಡುತ್ತಿರುವವರು, ಸಂಶೋಧನೆಯಲ್ಲಿ ತೊಡಗಿಕೊಂಡವರಿಗೆ ಬಹಳ ಸಮಯದಿಂದ ಹುಡುಕುತ್ತಿದ್ದ ಗ್ರಂಥ ದೊರೆಯುವಂತಹ ಸಾಧ್ಯತೆಗಳಿವೆ. ಈ ದಿನ ಸೋಷಿಯಲ್ ಮೀಡಿಯಾದಲ್ಲಿ ಏನು ಪೋಸ್ಟ್ ಮಾಡುತ್ತಿದ್ದೀರಿ ಎಂಬ ಬಗ್ಗೆ ಒಂದಕ್ಕೆ ನಾಲ್ಕು ಬಾರಿ ಪರೀಕ್ಷೆ ಮಾಡಿಕೊಳ್ಳಿ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಈ ದಿನ ನಿಮ್ಮಿಂದ ಸಂಭವಿಸುವ ಸಣ್ಣ ಅಚಾತುರ್ಯದಿಂದ ದೊಡ್ಡ ಅನಾಹುತ ಆಗುವ ಸಾಧ್ಯತೆಗಳಿವೆ. ಆದ್ದರಿಂದ ಸಾಮಾನ್ಯ ದಿನಗಳಲ್ಲಿ ಇರುವುದಕ್ಕಿಂತ ಹೆಚ್ಚು ಜಾಗ್ರತೆ ವಹಿಸಿ. ವಾಹನ ಚಾಲನೆ ಮಾಡುವಾಗ ಏಕಾಗ್ರತೆ ಬಹಳ ಮುಖ್ಯವಾದದ್ದು. ಮನೆ ನಿರ್ಮಾಣ, ಸೈಟು ಖರೀದಿಗೆ ಅಂತ ದುಡ್ಡು ಹೊಂದಿಸಿಕೊಳ್ಳುತ್ತಿರುವವರಿಗೆ ಈ ದಿನ ಹಿನ್ನಡೆ ಆಗಲಿದೆ. ಮಕ್ಕಳ ಮದುವೆಗಾಗಿ ಚಿನ್ನಾಭರಣಗಳನ್ನು ಖರೀದಿ ಮಾಡಬೇಕು ಎಂದು ಇರುವವರು ಈ ದಿನ ಆತುರಾತುರವಾಗಿ ಕೊಳ್ಳುವಂತಾಗುತ್ತದೆ. ವೃತ್ತಿ , ವ್ಯಾಪಾರ ಇವುಗಳನ್ನು ಮಾಡುತ್ತಿರುವವರು ತೆರಿಗೆ ವಿಚಾರದಲ್ಲಿ ತೋರುವಂತಹ ಸಣ್ಣ ಮಟ್ಟದ ನಿರ್ಲಕ್ಷ್ಯ ಕೂಡ ದೊಡ್ಡ ಬೆಲೆ ತೆರುವಂತೆ ಮಾಡುತ್ತದೆ. ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣ ಮಾಡುತ್ತಿದ್ದೀರಿ ಎಂದು ಬೆಲೆ ಬಾಳುವಂತಹ ವಸ್ತುಗಳನ್ನು ತುಂಬಾ ಜಾಗ್ರತೆಯಿಂದ ನೋಡಿಕೊಳ್ಳಿ. ನೀವಾಗಿಯೇ ವಹಿಸಿಕೊಂಡ ಜವಾಬ್ದಾರಿ ಅಥವಾ ಕೆಲಸವನ್ನು ಹೇಳಿದ ಗಡುವಿನೊಳಗೆ ಮುಗಿಸುತ್ತೇನೆ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ನೀವು ಈ ಹಿಂದೆ ಮಾಡಿದ ಮಹತ್ತರವಾದಂತಹ ಕೆಲಸಕ್ಕೆ ಈ ದಿನ ಗೌರವ ಸಿಗಲಿದೆ. ನಿಮಗೆ ಬೇಕಾದಂತಹ ವಿಭಾಗಕ್ಕೆ ಅಥವಾ ಸ್ಥಳಕ್ಕೆ ವರ್ಗಾವಣೆಯನ್ನು ಕೇಳಿದ್ದಲ್ಲಿ ಅದಕ್ಕೆ ಸಂಬಂಧಪಟ್ಟಂತಹ ಶುಭವಾರ್ತೆಗಳನ್ನು ಕೇಳಲಿದ್ದೀರಿ. ನಿಮ್ಮ ಸ್ನೇಹಿತರ ವಲಯದಲ್ಲಿ ಗೌರವಾದರಗಳು ಹೆಚ್ಚಾಗಲಿದೆ. ಕುಟುಂಬದಲ್ಲಿನ ಶುಭ ಕಾರ್ಯವೊಂದನ್ನು ನಿಮ್ಮದೇ ನೇತೃತ್ವದಲ್ಲಿ ನಡೆಸಬೇಕೆಂದು ಮನೆಯ ಸದಸ್ಯರು ನಿರ್ಧಾರವನ್ನು ಮಾಡಲಿದ್ದಾರೆ. ವಿದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಬೇಕೆಂದು ಪ್ರಯತ್ನ ಮಾಡುತ್ತಿರುವವರಿಗೆ ಏನಾದರೂ ಅಡೆತಡೆಗಳು ಇದ್ದಲ್ಲಿ ಅವುಗಳು ನಿವಾರಣೆ ಆಗಲಿವೆ. ಮಕ್ಕಳಿಗಾಗಿ ಹೊಸ ಗ್ಯಾಜೆಟ್ ಅಥವಾ ಲ್ಯಾಪ್ ಟಾಪ್ ಖರೀದಿಸುವಂತಹ ಸಾಧ್ಯತೆಗಳಿವೆ. ಈ ದಿನದ ಪ್ರಮುಖ ಎಚ್ಚರಿಕೆ ಅಂತಂದರೆ ಮೆಟ್ಟಿಲುಗಳನ್ನು ಹತ್ತುವಾಗ ಹಾಗೂ ಇಳಿಯುವಾಗ ತುಂಬಾ ಜೋಪಾನವಾಗಿರಬೇಕು. ಸ್ವಲ್ಪ ಮೈಮರೆತರೂ ಪೆಟ್ಟು ಮಾಡಿಕೊಳ್ಳಲಿದ್ದೀರಿ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕು ಎಂಬ ನಿಮ್ಮ ಪ್ರಯತ್ನ ವಿಫಲವಾಗಲಿದೆ. ಕೆಲವರು ನಿಮ್ಮನ್ನೇ ಗುರಿಯಾಗಿಟ್ಟುಕೊಂಡು ಮಾತುಗಳ ಮೂಲಕ ದಾಳಿ ಮಾಡಲಿದ್ದಾರೆ. ನಿಮ್ಮ ಉದ್ದೇಶ ಹಾಗೂ ಗುರಿ ಎಷ್ಟೇ ವಿವರಿಸಲು ಪ್ರಯತ್ನ ಪಟ್ಟರೂ ಕೇಳುವ ಸ್ಥಿತಿಯಲ್ಲಿ ಅವರು ಇರುವುದಿಲ್ಲ. ನಿಮ್ಮ ಸಣ್ಣದೊಂದು ತಪ್ಪನ್ನು ದೊಡ್ಡದು ಮಾಡಿ, ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸುವುದಕ್ಕೆ ಬಹಳ ಪ್ರಯತ್ನ ಪಡುತ್ತಾರೆ. ನಾನಾಯಿತು ನನ್ನ ಪಾಡಾಯಿತು ಎಂದು ಇದ್ದರೂ ನಿಮ್ಮನ್ನು ಕೆಣಕುತ್ತಾ ಜಗಳ ಮಾಡುವುದಕ್ಕೆ ಕಾಯುತ್ತಾ ಇರುತ್ತಾರೆ. ವೃತ್ತಿ ಮಾಡುತ್ತಾ ಇರುವವರಿಗೆ ತಮ್ಮ ಆದಾಯದಲ್ಲಿ ಇಳಿಕೆ ಆಗಲಿದೆ. ಮುಖ್ಯವಾಗಿ ನಿಮ್ಮ ಪ್ರತಿಸ್ಪರ್ಧಿಗಳು ಬಹಳ ಕಡಿಮೆ ದರದಲ್ಲಿ ಸೇವೆಗಳನ್ನು ಕೊಡುವುದಾಗಿ ತಮ್ಮತ್ತ ಸೆಳೆದುಕೊಳ್ಳಲು ಪ್ರಾರಂಭಿಸುತ್ತಾರೆ. ಈ ದಿನ ಮನೆಯಿಂದ ಹೊರಡುವ ಮುನ್ನ ದುರ್ಗಾದೇವಿಯ ಆರಾಧನೆಯನ್ನು ಮಾಡಿದರೆ ಉತ್ತಮ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಇಷ್ಟು ಸಮಯ ನಿಮ್ಮ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿರುವವರಿಗೆ ತಮ್ಮ ತಪ್ಪಿನ ಅರಿವಾಗಲಿದೆ. ಬಹಳ ಮುಖ್ಯವಾದ ಕೆಲಸಗಳನ್ನು ನೀವೇ ಮಾಡಬೇಕೆಂದು ಕೇಳಿಕೊಳ್ಳುವ ಸಾಧ್ಯತೆಗಳಿವೆ. ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳುವುದಕ್ಕೆ ಹಾಗೂ ಹಣಕಾಸಿನ ಹರಿವನ್ನು ಜಾಸ್ತಿ ಮಾಡಿಕೊಳ್ಳುವುದಕ್ಕೆ ಬೇಕಾದ ಮಾರ್ಗಗಳು ಗೋಚರವಾಗಲಿವೆ. ಹೊಸ ಉದ್ಯಮ ಅಥವಾ ವ್ಯಾಪಾರ ಆರಂಭ ಮಾಡುವಂತೆ ಸ್ನೇಹಿತರಿಂದ ಪ್ರಸ್ತಾವ ಬರಬಹುದು. ಸೋದರ ಅಥವಾ ಸೋದರಿಯರ ಕೌಟುಂಬಿಕ ಸಂಗತಿಗಳು ನಿಮ್ಮನ್ನು ಸ್ವಲ್ಪ ಮಟ್ಟಿಗೆ ಆತಂಕಕ್ಕೆ ದೂಡಬಹುದು. ಹಣಕಾಸಿನ ವಿಚಾರಕ್ಕೆ ಈ ಹಿಂದೆ ನೀವು ಕೊಟ್ಟಿದ್ದ ಮಾತಿನಂತೆ ನಡೆದುಕೊಳ್ಳಲೇಬೇಕಾದ ಸನ್ನಿವೇಶ ಎದುರಾಗುವುದರಿಂದ ಬ್ಯಾಂಕ್ ನಲ್ಲಿಯೋ ಅಥವಾ ಖಾಸಗಿ ಹಣಕಾಸು ಸಂಸ್ಥೆಗಳಲ್ಲಿಯೋ ಸಾಲ ಮಾಡಬೇಕಾಗಿ ಬರಬಹುದು. ಇದೇ ಮೊದಲ ಬಾರಿಗೆ ಎಂದು ಪ್ರಯತ್ನ ಮಾಡಿದ ಕೆಲಸಗಳಲ್ಲಿ ಅದ್ಭುತವಾದ ಯಶಸ್ಸನ್ನು ಕಾಣಲಿದ್ದೀರಿ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಹೋಟೆಲ್ ಉದ್ಯಮಿಗಳಿಗೆ ವ್ಯಾಪಾರ ವಿಸ್ತರಣೆಗೆ ಹಲವಾರು ಅವಕಾಶಗಳು ಏಕಕಾಲಕ್ಕೆ ತೆರೆದುಕೊಳ್ಳಲಿವೆ. ಹೂಡಿಕೆ ವಿಚಾರಗಳಿಗೆ ನೀವು ಈ ಹಿಂದೆ ಸಲಹೆ ನೀಡಿದ್ದವರಿಗೆ ಅತ್ಯುತ್ತಮ ಲಾಭ ದೊರೆತು, ಅವರು ಮತ್ತೆ ನಿಮ್ಮಲ್ಲಿಗೆ ಸಲಹೆ ಕೇಳಿಕೊಂಡು ಬರಲಿದ್ದಾರೆ. ವ್ಯಾಪಾರವಾಗಲಿ, ವ್ಯವಹಾರವಾಗಲಿ ಅಥವಾ ಯಾವುದೇ ವಿಚಾರವಾಗಲಿ ಎದುರಿಗಿರುವ ವ್ಯಕ್ತಿಯನ್ನು ಒಪ್ಪಿಸುವಂತಹ ವಾಕ್ ಚಾತುರ್ಯ ಈ ದಿನ ನಿಮ್ಮಲ್ಲಿ ಇರಲಿದೆ. ಮುಖ್ಯವಾದ ಕೆಲಸಗಳಿಗಾಗಿ ತೆರಳುವವರು ಅಥವಾ ಮುಖ್ಯವಾದ ವ್ಯಕ್ತಿಗಳನ್ನು ಭೇಟಿ ಮಾಡಬೇಕು ಎಂದಿರುವವರು ಈ ದಿನ ಸ್ವಲ್ಪ ಬೇಗನೆ ಆ ಸ್ಥಳವನ್ನು ತಲುಪುವುದು ಉತ್ತಮ. ಹಳೆಯ ವಿಚಾರವನ್ನು ಈ ದಿನ ನಿಮ್ಮನ್ನು ತುಂಬಾ ಕಾಡಲಿದೆ. ಅದರಲ್ಲೂ ಕೆಲಸದ ವಿಚಾರದಲ್ಲಿ ಆ ಕೆಲಸ ಬಿಡಬಾರದಿತ್ತು ಎಂದು ಪದೇ ಪದೇ ಅನಿಸಲಿದೆ. ಈ ದಿನದ ಮುಖ್ಯ ಎಚ್ಚರಿಕೆ ಏನೆಂದರೆ, ಯಾರಿಗೂ ಸಾಲಕ್ಕಾಗಿ ಜಾಮೀನು ನಿಲ್ಲಬೇಡಿ. ನಿಮ್ಮದಲ್ಲದ ವಿಚಾರಕ್ಕೆ ಮೂಗು ತೂರಿಸಬೇಡಿ. ಇವೆರಡನ್ನು ಅನುಸರಿಸಿದರೆ ಈ ದಿನ ಬಹುತೇಕ ಸಂತೋಷದಾಯಕವಾಗಿರುತ್ತದೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ನಿಮಗೆ ಬಹಳ ಪ್ರೀತಿ ಪಾತ್ರರಾದವರೊಂದಿಗೆ ಉತ್ತಮವಾದ ಸಮಯವನ್ನು ಕಳೆಯುವಂತಹ ಯೋಗ ಈ ದಿನ ನಿಮ್ಮ ಪಾಲಿಗೆ ದೊರೆಯಲಿದೆ. ಯಾವುದೇ ಕೆಲಸವನ್ನು ಆಗಲಿ ಅಥವಾ ಜವಾಬ್ದಾರಿಯನ್ನಾಗಲಿ ಯಶಸ್ವಿಯಾಗಿ ಮಾಡಿ ಮುಗಿಸಬಲ್ಲೆ ಎಂಬ ಆತ್ಮವಿಶ್ವಾಸ ನಿಮ್ಮಲ್ಲಿ ಇರಲಿದೆ. ಏಕಕಾಲಕ್ಕೆ ಬಹಳ ಜನರಿಗೆ ನಿಮ್ಮ ನೆರವಿನ ಅಗತ್ಯ ಬೀಳಬಹುದು. ಅದರಲ್ಲೂ ಕಮಿಷನ್ ಆಧಾರದಲ್ಲಿ ಕೆಲಸ ಮಾಡುವಂಥವರಿಗೆ ಬೇಡಿಕೆ ಹೆಚ್ಚಾಗಲಿದೆ. ನೀವು ಕೇಳುವುದಕ್ಕಿಂತ ಹೆಚ್ಚಿನ ಹಣವನ್ನು ನೀಡಿ, ಕೆಲಸ ಮಾಡಿಸಿಕೊಳ್ಳುವುದಕ್ಕೆ ಜನ ಮುಂದು ನಾ ಮುಂದು ಎಂದು ಬರಲಿದ್ದಾರೆ. ಯಾರು ಮನೆಯನ್ನು ನಿರ್ಮಿಸುತ್ತಿದ್ದು ಒಂದು ವೇಳೆ ತೊಂದರೆಗಳು ಎದುರಾಗುತ್ತಿದ್ದರೆ ಅಥವಾ ಅಡೆತಡೆಗಳು ಎದುರಾಗುತ್ತಿದ್ದರೆ ಭೂ ವರಾಹ ಸ್ವಾಮಿ ದೇವರನ್ನು ಆರಾಧನೆ ಮಾಡಿದಲ್ಲಿ ಅನುಕೂಲಗಳು ಒದಗಿ ಬರಲಿವೆ. ಮಕ್ಕಳ ಶಿಕ್ಷಣ ಹಾಗೂ ಆರೋಗ್ಯ ವಿಚಾರ ಕುಟುಂಬದಲ್ಲಿ ಪ್ರಾಮುಖ್ಯ ಪಡೆದುಕೊಳ್ಳಲಿವೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಕೆಲಸವನ್ನು ಮಾಡಿಕೊಡುತ್ತೇನೆ ಎಂದು ಮಾತು ಕೊಟ್ಟಿರುವವರು ಕೊನೆ ಕ್ಷಣದಲ್ಲಿ ಏನಾದರೂ ಒಂದು ಕಾರಣ ನೀಡಿ ಅಥವಾ ಅವರಿಗೆ ಏನಾದರೂ ಒಂದು ಸಮಸ್ಯೆ ಎದುರಾಗಿ ಮಾಡಿಕೊಡಲಾರರು. ಆದ್ದರಿಂದ ಈ ದಿನ ಅನಿರೀಕ್ಷಿತಗಳು ಹಾಗೂ ಅನಪೇಕ್ಷಿತಗಳಿಗೆ ಸಿದ್ಧವಾಗಿರುವುದು ಉತ್ತಮ. ಚರ್ಮ, ಕೂದಲು ಇತ್ಯಾದಿಗೆ ಸಂಬಂಧಪಟ್ಟಂತಹ ಅನಾರೋಗ್ಯ ಸಮಸ್ಯೆಗಳು ತೀವ್ರವಾಗಬಹುದು. ಒಂದು ವೇಳೆ ಪರಿಸ್ಥಿತಿ ತೀರಾ ಬಿಗಡಾಯಿಸಿದಲ್ಲಿ ಸೂಕ್ತ ವೈದ್ಯರನ್ನು ಕಂಡು, ಚಿಕಿತ್ಸೆ ಪಡೆಯುವುದಕ್ಕೆ ಆದ್ಯತೆ ಕೊಡಿ. ಯಾವುದೇ ಕಾರಣಕ್ಕೂ ಮನೆ ಮದ್ದು ಎಂಬ ಪ್ರಯೋಗಕ್ಕೆ ಮುಂದಾಗದಿರಿ. ಕೋಲು ಕೊಟ್ಟು ಹೊಡೆಸಿಕೊಂಡರು ಎಂಬಂತೆ ನಿಮ್ಮ ವಿರೋಧಿಗಳಿಗೆ ನೀವೇ ಕಾರಣಗಳನ್ನು ಮಾಡಿಕೊಡಲಿದ್ದೀರಿ. ನಿಮಗೆ ಯಾವ ಕೆಲಸವೂ ಬರುವುದಿಲ್ಲ ಎಂದು ಸಾಬೀತು ಮಾಡುವ ಮಟ್ಟಿಗೆ ವಿರೋಧಿಗಳಲ್ಲಿ ಆತ್ಮವಿಶ್ವಾಸ ಮಾಡಲಿದೆ. ಈ ದಿನ ಮನಸ್ಸಿನಲ್ಲಿ ಮಹಾ ಸುದರ್ಶನನ್ನು ನೆನಪಿಸಿಕೊಳ್ಳಿ. ನರಸಿಂಹ ದೇವರ ಚಿತ್ರವನ್ನು ಸಾಧ್ಯವಾದರೆ ಮೊಬೈಲ್ ಫೋನ್ ನಲ್ಲಿ ಸ್ಕ್ರೀನ್ ಸೇವರ್ ಆಗಿ ಮಾಡಿಕೊಳ್ಳಿ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ನಿಮ್ಮ ಜೊತೆ ಕೆಲಸ ಮಾಡುವವರ ಪಾಲಿಗೆ ಅಚ್ಚರಿಯಂತೆ ಕಂಡು ಬರಲಿದ್ದೀರಿ. ವಿರೋಧಿಗಳು ಶತ್ರುಗಳ ವಿರುದ್ಧ ನಿಮ್ಮ ಕೈ ಮೇಲಾಗಲಿದೆ. ಕೋರ್ಟು, ಕಚೇರಿ ಇತ್ಯಾದಿ ವಿಚಾರಗಳು ಸಂಧಾನದ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ಅವಕಾಶಗಳು ತೆರೆದುಕೊಳ್ಳಲಿವೆ. ಸಂಗಾತಿ ಸಲುವಾಗಿ ಒಡವೆ ವಸ್ತ್ರಗಳನ್ನು ಖರೀದಿಸುವಂತಹ ಯೋಗ ಈ ದಿನ ಇದೆ. ದೂರದ ಊರಿನಿಂದ ಸಂಬಂಧಿಕರು ಮನೆಗೆ ಬರಲಿದ್ದಾರೆ. ಸೋಫಾ, ಕುರ್ಚಿ ಮೊದಲಾದ ಗೃಹ ಉಪಯೋಗಿ ವಸ್ತುಗಳನ್ನು ಖರೀದಿಸುವಂತಹ ಯೋಗ ಇದೆ. ನಿಮಗೆ ಏನು ಬೇಕು ಎಂಬುದನ್ನು ಸ್ಪಷ್ಟವಾದ ಮಾತುಗಳಿಂದ ಖಚಿತಪಡಿಸಲಿದ್ದೀರಿ. ಇಷ್ಟು ಸಮಯ ನಿಮ್ಮ ಮನಸ್ಸಿನಲ್ಲಿ ಉಳಿದು ಹೋಗಿದ್ದ ವಿಚಾರಗಳನ್ನು ಎದುರಿನವರಿಗೆ ಹೇಳುವುದರೊಂದಿಗೆ ಒಂದು ಬಗೆಯ ಸಮಾಧಾನ ನಿಮ್ಮಲ್ಲಿ ಮೂಡಲಿದೆ. ನಿಮ್ಮ ವೃತ್ತಿಗೆ ಅನುಕೂಲವಾಗುವಂಥ ಸಲಕರಣೆಯನ್ನು ಬಹಳ ಕಡಿಮೆ ವೆಚ್ಚದಲ್ಲಿ ಖರೀದಿ ಮಾಡಲಿದ್ದೀರಿ.