ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಅಕ್ಟೋಬರ್ 30 ಸೋಮವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ತುಲಾ ಮಾಸ, ಮಹಾನಕ್ಷತ್ರ: ಸ್ವಾತೀ, ಮಾಸ: ಆಶ್ವಯುಜ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಭರಣೀ, ಯೋಗ: ಸಾಧ್ಯ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 28 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 07:55 ರಿಂದ 09:22 ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 10: 49 ರಿಂದ 12:16 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 01:43 ರಿಂದ 03:10ರ ವರೆಗೆ.
ಸಿಂಹ ರಾಶಿ : ಸಂಗಾತಿಯ ಮಾತುಗಳು ಕಿರಿಕಿರಿ ಎನಿಸಬಹುದು. ಅನಿರೀಕ್ಷಿತವಾಗಿ ದೂರಪ್ರಯಾಣ ಮಾಡಬೇಕಾದೀತು. ನಿಮ್ಮ ಕೆಲಸಕ್ಕೆ ವೃತ್ತಿಯಲ್ಲಿ ಉತ್ತಮ ಪ್ರಶಂಸೆಯು ಸಿಗುವುದು. ಇಂದು ನಿಮಗೆ ಉತ್ಸಾಹದ ದಿನವೂ ಆಗಲಿದೆ. ಸ್ನೇಹಿತರಿಗಾಗಿ ಮಾಡಿದ ಸಾಲವು ಕೊನೆಗೆ ನಿಮಗೇ ಸುತ್ತಿಕೊಳ್ಳುವುದು. ಸಂಶೋಧನೆಗೆ ಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳುವಿರಿ. ಸರ್ಕಾರಿ ಉದ್ಯೋಗಿಗಳ ಸ್ಥಾನವು ಹೆಚ್ಚಾಗಬಹುದು. ಅನಪೇಕ್ಷಿತ ಸ್ಥಳದಲ್ಲಿ ಇರಲು ಇಷ್ಟಪಡುವುದಿಲ್ಲ. ಎಲ್ಲ ತಪ್ಪುಗಳಿಗೂ ಸಂಗಾತಿಯನ್ನು ಬೊಟ್ಟು ಮಾಡಿ ತೋರಿಸುವಿರಿ. ಮಕ್ಕಳ ಹಠದ ಸ್ವಭಾವಕ್ಕೆ ನೀವು ಮಣಿಯುವಿರಿ. ಯೋಜಿತ ಕಾರ್ಯವನ್ನು ಪೂರೈಸಲು ನಡುವೆ ಅನ್ಯ ಕಾರ್ಯವು ಬರಬಹುದು.
ಕನ್ಯಾ ರಾಶಿ : ಬಂಧುಗಳ ಸಹಾಯಕ್ಕಾಗಿ ಓಡಾಡುವಿರಿ. ನಿದ್ರೆಯಿಂದ ಮಾನಸಿಕ ಕಿರಿಕಿರಿ ಆಗಬಹುದು. ಸಂಗಾತಿಯ ಜೊತೆ ವ್ಯವಹಾರದ ವಿಚಾರಕ್ಕೆ ಕಲಹವಾಗಬಹುದು. ಅಪರೂಪದ ಮಿತ್ರರ ಭೇಟಿಯಿಂದ ಸಂತೋಷವಾಗಲಿದೆ. ದ್ವಿಚಕ್ರದ ವಾಹನವನ್ನು ಚಲಾಯಿಸುವಾಗ ಜಾಗರೂಕತೆ ಇರಲಿ. ನಿಮ್ಮ ಸ್ವಭಾವವು ಇತರರಿಗೂ ಗೊತ್ತಾದೀತು. ನಿಮ್ಮ ಗೌರವಕ್ಕೆ ತೊಂದರೆಯಾಗುವುದು. ತುರ್ತು ಬಸವ ಹೊಂದಿಸುವುದು ನಿಮಗೆ ಕಷ್ಟವಾಗುವುದು. ನಿಮ್ಮ ಬಗ್ಗೆ ಬರುವ ನಕಾರಾತ್ಮಕ ಅಂಶಗಳನ್ನು ಅಲ್ಲಗಳೆಯುವಿರಿ. ಸಹೋದರರ ನಡುವೆ ಭಿನ್ನಾಭಿಪ್ರಾಯ ಬರಬಹುದು. ಕಲಾವಿದರು ಪ್ರಯತ್ನಪೂರ್ವಕವಾಗಿ ಉತ್ತಮ ಅವಕಾಶಗಳನ್ನು ನಿಮ್ಮದಾಗಿಸಿಕೊಳ್ಳುವಿರಿ.
ತುಲಾ ರಾಶಿ : ಸಣ್ಣ ವ್ಯಾಪಾರವೂ ಇಂದು ಎಂದಿಗಿಂತ ಅಧಿಕ ಲಾಭವನ್ನು ಗಳಿಸಬಹುದು. ದೂರದ ಊರಿಗೆ ಉದ್ಯೋಗಕ್ಕೆ ಆಹ್ವಾನ ಬರಬಹುದು. ಸ್ನೇಹಿತರಿಂದ ವಿಶ್ವಾಸವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಉದ್ಯಮದಲ್ಲಿ ಉಂಟಾದ ಬೆಳವಣಿಗೆಯನ್ನು ಸಕಾರಾತ್ಮಕವಾಗಿ ಆಲೋಚಿಸಿ. ರಾಜಕೀಯ ವ್ಯಕ್ತಿಗಳು ತಮ್ಮ ಲಾಭವನ್ನು ಪಡೆದುಕೊಳ್ಳುವರು. ಯಾರನ್ನೋ ನಂಬಿ ನೀವು ಇರುವ ಸಣ್ಣ ಕೆಲಸವನ್ನೂ ಬಿಡುವಿರಿ. ಹಿತಶತ್ರುಗಳ ಪಿತೂರಿಯು ನಿಮ್ಮ ಶ್ರೇಯಸ್ಸಿಗೆ ತೊಂದರೆಯನ್ನು ಮಾಡೀತು. ಯಾರನ್ನೋ ಹೊಗಳಿ ನಿಮ್ಮ ಕೆಲಸವನ್ನು ಮಾಡಿಸಿಕೊಳ್ಳುವಿರಿ. ವಿವಾಹದ ಬಗ್ಗೆ ಇರುವ ಗೊಂದಲವು ನಿವಾರಣೆಯಾಗಲಿದೆ. ಆಗದವರು ನಿಮ್ಮ ರಹಸ್ಯ ವಿಚಾರಗಳನ್ನು ತಿಳಿದುಕೊಳ್ಳಲು ಇಚ್ಛಿಸುವರು. ನಿಮ್ಮ ವಿವಾಹದ ಬಗ್ಗೆ ತಂದೆಯವರೇ ನಿಮ್ಮ ಬಳಿ ಮಾತನಾಡಬಹುದು. ಒಳ್ಳೆಯ ಭೂಮಿಯ ಲಾಭಕ್ಕಾಗಿ ಓಡಾಟ ಮಾಡುವಿರಿ.
ವೃಶ್ಚಿಕ ರಾಶಿ : ಮಹಿಳಾ ಅಧಿಕಾರಿಗಳಿಂದ ನಿಮಗೆ ಪೀಡೆ ಇರುವುದು. ಸ್ವಂತ ಉದ್ಯಮದಲ್ಲಿ ಅಡೆತಡೆಗಳು ಕಾಣಿಸಿಕೊಳ್ಳುವುದು. ಇಂದು ಎಲ್ಲದಕ್ಕೂ ಹೆಚ್ಚು ಹಣವನ್ನು ಖರ್ಚು ಮಾಡುವಿರಿ. ಗೊತ್ತಿಲ್ಲದೇ ಕೆಟ್ಟ ಮಾರ್ಗವನ್ನು ನೀವು ಅನುಸರಿಸಬಹುದು. ನಿಮ್ಮ ಪ್ರಾಮಾಣಿಕತೆಗೆ ಬೆಲೆ ಇಲ್ಲವೆನಿಸುವುದು. ಹೂಡಿಕೆಗೆ ನಿಮ್ಮದಾದ ತಂತ್ರವನ್ನು ಬಳಸುವಿರಿ. ಉದ್ಯೋಗದ ಹುಡುಕಾಟಕ್ಕೆ ಓಡಾಡುವುದು ನಿಮಗೆ ಕಷ್ಟವಾದೀತು. ಅಪರಿಚಿತರ ವಿದ್ಯಾಭ್ಯಾಸಕ್ಕೆ ನಿಮ್ಮಿಂದ ಸಹಾಯವು ಸಿಗಲಿದೆ. ಅಧಿಕಾರಿಗಳು ವೃತ್ತಿಯನ್ನು ಸರಿಯಾಗಿ ನಿರ್ವಹಿಸುವರು. ಒತ್ತಾಯಪೂರ್ವಕವಾಗಿ ಯಾರ ಸ್ನೇಹವನ್ನೂ ಬಯಸದಿರಿ. ಉತ್ತಮ ಕುಲದ ಸಂಗಾತಿಯ ಜೊತೆ ವಿವಾಹವು ಆಗಬಹುದು. ದೇವರಲ್ಲಿ ಶ್ರದ್ಧೆ ಇರಲಿದೆ. ಕೋಪವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಬೇಕಾದೀತು.