ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ಅಕ್ಟೋಬರ್ 31) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ತುಲಾ ಮಾಸ, ಮಹಾನಕ್ಷತ್ರ: ಸ್ವಾತೀ, ಮಾಸ: ಆಶ್ವಯುಜ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ತೃತೀಯಾ,
ನಿತ್ಯನಕ್ಷತ್ರ: ಕೃತಿಕಾ, ಯೋಗ: ಶುಭ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 28 ನಿಮಿಷಕ್ಕೆ,
ಸೂರ್ಯಾಸ್ತ ಸಂಜೆ 06 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:10 ರಿಂದ 04:37 ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 09: 22 ರಿಂದ 10:49 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:16 ರಿಂದ 13:43ರ ವರೆಗೆ.
ಸಿಂಹ ರಾಶಿ: ಧಾರ್ಮಿಕ ನಾಯಕರ ಜೊತೆ ವಾಗ್ವಾದ ಆಗಬಹುದು. ಕಳೆದುಕೊಂಡ ವಸ್ತುಗಳ ಬಗ್ಗೆ ನಿಮಗೆ ಮೋಹವಿರದು. ಭೂಮಿಯ ವ್ಯವಹಾರದಿಂದ ಹೊರಬರಲು ಪ್ರಯತ್ನಿಸುವಿರಿ. ವಾಹನದಿಂದ ನೋವಾಗುವ ಸಾಧ್ಯತೆ ಇದೆ. ಹಳೆಯ ಸಂಸ್ಥೆಯೊಂದನ್ನು ಮುನ್ನಡೆಸುವ ಜವಾಬ್ದಾರಿಯು ನಿಮಗೆ ಬರಬಹುದು. ಹೆಚ್ಚು ಆದಾಯವನ್ನು ಇಂದಿನ ಕಾರ್ಯದಿಂದ ನಿರೀಕ್ಷಿಸುವಿರಿ. ನಿಮ್ಮ ಕರ್ತವ್ಯದ ಕಡೆ ಗಮನ ಅತಿಯಾಗಿ ಇರಲಿ. ಅದೃಷ್ಟವನ್ನು ನಂಬಿಕೊಂಡು ಸಮಯವನ್ನು ಹಾಳುಮಾಡುವುದು ಬೇಡ. ನಿಮ್ಮ ಕೆಲಸವನ್ನು ನೀವು ಮಾಡಿ. ಮಾತಿಗೆ ತಪ್ಪಿದ್ದಕ್ಕೆ ನಿಮ್ಮನ್ನು ಅವಮಾನಿಸಿಯಾರು. ಆರ್ಥಿಕಬಲವು ನಿಮಗೆ ಅಗತ್ಯವಾಗಿ ಬೇಕಾಗುವುದು. ನಿಮ್ಮ ಕೆಲವರಿಗೆ ಪ್ರಯೋಜನವಾದೀತು. ಹಲವು ದಿನಗಳಿಂದ ನಿಂತು ಹೋಗಿದ್ದ ಕೆಲಸಕ್ಕೆ ಮರು ಚಾಲನೆ ಕೊಡುವ ಯೋಚನೆ ಮಾಡುವಿರಿ.
ಕನ್ಯಾ ರಾಶಿ: ಉದ್ಯೋಗವನ್ನು ಬದಲಿಸುವ ಮನಸ್ಸಿದ್ದರೂ ನಿಯಮಕ್ಕೆ ಕಟ್ಟುಬಿದ್ದು ಕಷ್ಟವಾದೀತು. ಹಣದ ವ್ಯವಹಾರದಿಂದ ನಿಮಗೆ ಅಸಮಾಧಾನವಾಗುವುದು. ಸಾಲವನ್ನು ತೀರಿಸಲು ಏನಾದರೂ ಮಾಡಬೇಕು ಏನಿಸಬಹುದು. ಬಂಧುಗಳ ಮಾತಿನಿಂದ ಸಮಾಧಾನ ಸಿಕ್ಕೀತು. ಉದ್ಯೋಗವನ್ನು ಹುಡುಕಿಕೊಂಡು ಅಲೆದಾಡಬೇಕಾದೀಯು. ಆಗಾಗ ಬರುವ ಸಾಲದ ವಿಚಾರದಿಂದ ಮನೆಯ ವಾತಾವರಣವು ಸರಿಯಾಗಿ ಇರದು. ಕಳೆದ ವಿಷಯವನ್ನು ಪುನಃ ನೆನಪಿಸಿಕೊಂಡು ಮನಸ್ಸು ಭಾರವಾಗುವುದು. ಇಂದಿನ ನಿಮ್ಮ ಪ್ರಯಾಣವು ಕೆಲವು ಅಡೆತಡೆಗಳಿಂದ ಇರಲಿದೆ. ನಿಮ್ಮ ಆಸಕ್ತಿಯ ವಿಚಾರವನ್ನು ಬದಲಿಸುವಿರಿ. ದೂರದಲ್ಲಿ ಇರುವ ಮಿತ್ರರು ನಿಮಗೆ ಸಹಾಯವನ್ನು ಮಾಡಬಹುದು. ಇಂದು ದೈಹಿಕ ಪರಿಶ್ರಮವು ಹೆಚ್ಚು ಮಾಡಬೇಕಾದೀತು.
ತುಲಾ ರಾಶಿ: ಉದ್ಯೋಗವನ್ನು ಕಳೆದುಕೊಳ್ಳುವುದು ಅನಿವಾರ್ಯವಾಗಬಹುದು. ಧೃತಿಗೆಡದೇ ಹೊಸ ಉದ್ಯೋಗಕ್ಕೆ ತೆರಳುವಿರಿ. ವ್ಯವಹಾರದ ನಷ್ಟವು ನಿಮ್ಮ ಮನಸ್ಸನ್ನು ವಿಚಲಿತ ಮಾಡೀತು. ಯಾರದೋ ಮಾತಿನ ಮೇಲೆ ನಿಮ್ಮ ಗೆಳೆತನವನ್ನು ದೂರ ಮಾಡಿಕೊಳ್ಳಬಹುದು. ಅನಿರೀಕ್ಷಿತವಾಗಿ ಸಿಕ್ಕ ಉನ್ನತ ಅಧಿಕಾರದಿಂದ ಸಂತೋಷವಾಗಬಹುದು. ದಾಂಪತ್ಯದಲ್ಲಿ ಬರುವ ಸಮಸ್ಯೆಗಳನ್ನು ಪರಸ್ಪರ ಮಾತು ಕತೆಯಿಂದ ಸರಿ ಮಾಡಿಕೊಳ್ಳಿ. ಬಹಿರಂಗಪಡಿಸಿ ನಿಮ್ಮ ಮಾನವನ್ನು ಕಳೆದುಕೊಳ್ಳಬೇಕಾಗಬಹುದು. ಸಾಧ್ಯವಾದಷ್ಟು ಮಾತನ್ನು ಕಡಿಮೆ ಮಾಡಿ, ಕಾರ್ಯದಲ್ಲಿ ತೋರಿಸುವಿರಿ. ಇಂದಿನ ನಿಮ್ಮ ಹೆಚ್ಚಿನ ಸಮಯವು ಖರೀದಿಗೆ ಹೋಗಲಿದೆ. ನಿಮ್ಮ ಮೇಲಿನ ಆರೋಪವು ಸುಳ್ಳಾಗವುದು. ಜಾಣತನದಿಂದ ಸಮಸ್ಯೆಯನ್ನು ಪರಿಹರಿಸಿಕೊಳ್ಳಿ.
ವೃಶ್ಚಿಕ ರಾಶಿ: ನಿಮಗೆ ಆಸಕ್ತಿ ಇಲ್ಲದಿದ್ದರೂ ಹೊಸ ಕೆಲಸವನ್ನು ಮಾಡಬೇಕಾದೀತು. ಪರರ ಮನೆಯಲ್ಲಿ ಆಹಾರವನ್ನು ಸ್ವೀಕಾರ ಮಾಡುವಿರಿ. ನಿಮ್ಮ ಮಾತು ನಿಮಗೇ ಹೆಚ್ಚಾದಂತೆ ತೋರುವುದು. ಬರಹಗಾರರು ಪ್ರಶಂಸೆಯನ್ನು ಗಳಿಸುವರು. ಆರ್ಥಿಕ ನಷ್ಟದಿಂದ ನಿಮಗೆ ಚಿಂತೆಯಾಗಬಹುದು. ಸಾಮೂಹಿಕ ಕೆಲಸವು ನಿಮಗೆ ಕಿರಿಕಿರಿ ಕೊಡಬಹುದು. ತಂದೆಯಿಂದ ನಿಮಗೆ ಬೇಕಾದ ಕೆಲಸವು ಮಾಡಿಸಿಕೊಳ್ಳುವಿರಿ. ಧಾರ್ಮಿಕ ಕಾರ್ಯಗಳಲ್ಲಿ ನಿಮಗೆ ಆಸಕ್ತಿ ಹೆಚರಚಾಗುವುದು. ನಿಮ್ಮ ಯೋಜನೆಯನ್ನು ಯಾರ ಬಳಿಯೂ ಪ್ರಕಟಮಾಡಿಕೊಳ್ಳುವುದು ಬೇಡ. ಸಂಕೋಚದಿಂದ ನಿಮಗೆ ಸಮಸ್ಯೆಗೆ ಪರಿಹಾರವು ಸಿಗದೇಹೋಗಬಹುದು. ಬಂಧುಗಳ ಜೊತೆಗೆ ಮಾತುಕತೆಯು ಇಷ್ಟವಾಗದು. ವಾಹನದಲ್ಲಿ ದೂರಪ್ರಯಾಣವನ್ನು ನಿಲ್ಲಿಸಿ. ಯಾರೋ ಮಾಡಿದ ನಿಯಮದಿಂದ ನಿಮಗೆ ತೊಂದರೆಯಾಗಬಹುದು.