Horoscope 31 Oct: ದಿನಭವಿಷ್ಯ, ಈ ರಾಶಿಯವರ ರಫ್ತು-ವ್ಯಾಪಾರ ಸುಗಮವಾಗಿ ಸಾಗುವುದು

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹಾಗಾದರೆ ಇಂದಿನ (2023 ಅಕ್ಟೋಬರ್ 31) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

Horoscope 31 Oct: ದಿನಭವಿಷ್ಯ, ಈ ರಾಶಿಯವರ ರಫ್ತು-ವ್ಯಾಪಾರ ಸುಗಮವಾಗಿ ಸಾಗುವುದು
ರಾಶಿ ಭವಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ವಿವೇಕ ಬಿರಾದಾರ

Updated on: Oct 31, 2023 | 12:01 AM

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ಅಕ್ಟೋಬರ್ 31) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ತುಲಾ ಮಾಸ, ಮಹಾನಕ್ಷತ್ರ: ಸ್ವಾತೀ, ಮಾಸ: ಆಶ್ವಯುಜ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಕೃತಿಕಾ, ಯೋಗ: ಶುಭ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 28 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:10 ರಿಂದ 04:37 ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 09: 22 ರಿಂದ 10:49 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:16 ರಿಂದ 13:43ರ ವರೆಗೆ.

ಮೇಷ ರಾಶಿ: ನ್ಯಾಯಾಲಯದ ಆದೇಶಕ್ಕೆ ತಲೆ ಬಾಗಿ ನಿಮ್ಮ ಮುಂದಿನ ಕೆಲಸವನ್ನು ಮಾಡುವಿರಿ. ಕಳೆದುಕೊಂಡ ವಸ್ತುವಿನ ಮೌಲ್ಯವನ್ನು ಪಡೆಯುವಿರಿ. ಹದಗೆಡುವ ಆರೋಗ್ಯವನ್ನು ಮೊದಲೇ ಸರಿಮಾಡಿಕೊಂಡು ಜಾಣರಾಗಿರಿ. ಒಂದೇ ವಿಚಾರದ ಬಗ್ಗೆ ಹೆಚ್ಚು ಹೊತ್ತು ಚಿಂತಿಸಿದರೂ ಪ್ರಯೋಜನವಾಗದು. ದುರಭ್ಯಾಸವನ್ನು ಬೆಳೆಸಿಕೊಳ್ಳುವುದು ಬೇಡ. ಆಕಸ್ಮಿಕವಾಗಿ ಆರ್ಥಿಕಲಾಭವಿದ್ದರೂ ಸಂತೋಷವಾಗದು. ಸಂತೋಷವನ್ನು ಹೇಳಿಕೊಳ್ಳಲು ನಿಮ್ಮ ಜೊತೆ ಯಾರೂ ಇಲ್ಲವೆನಿಸುವುದು. ಆಪ್ತರ ಮಾತಿಗೆ ಕಿವಿಯಾಗಿರುವಿರಿ. ಸಿಕ್ಕ ಅವಕಾಶಗಳನ್ನು ನೀವು ಯೋಗ್ಯ ರೀತಿಯಿಂದ ಬಳಸಿಕೊಳ್ಳಬೇಕಾದೀತು. ಸಮಾರಂಭಗಳಿಗೆ ಒಂಟಿಯಾಗಿ ಹೋಗುವಿರಿ.

ವೃಷಭ ರಾಶಿ: ರಪ್ತು ವ್ಯಾಪಾರವು ಸುಗಮವಾಗಿ ಸಾಗುವುದು. ನೌಕರರ ಸಮಸ್ಯೆಗಳಿಗೆ ಸ್ಪಂದಿಸುವಿರಿ. ಅಪರಿಚಿತರಿಗೆ ನಿಮ್ಮ ವಾಹನವನ್ನು ಕೊಟ್ಟು ಕೆಡಿಸಿಕೊಳ್ಳುವಿರಿ. ದೂರಪ್ರಯಾಣವನ್ನು ಮಾಡಲು ಮನಸ್ಸು ಒಪ್ಪದು. ಸಮಯಪ್ರಜ್ಞೆಯಿಂದ ನೀವು ಯೋಗ್ಯ ಮಾತುಗಳನ್ನು ಆಡುವಿರಿ. ನಿಮ್ಮ ಆತಂಕವನ್ನು ನೀವು ಆಪ್ತರ ಜೊತೆ ಹೇಳಿಕೊಳ್ಳಿ. ಯಾರದೋ ಪ್ರೇರಣೆಯಿಂದ ನಿಮ್ಮ ಬದುಕು ಬದಲಾವಣೆಯ ಕಡೆ ಹೋಗಲಿದೆ. ಪ್ರೀತಿಯು ಸಿಗದೇ ಮೀನಿನಂತೆ ಒದ್ದಾಡುವಿರಿ. ಕೊಟ್ಟ ಹಣವನ್ನು ಪುನಃ ಹಿಂದಿರುಗಿಸಿ ಪ್ರಶಂಸೆ ಪಡೆಯುವಿರಿ. ನಿಮ್ಮ ಊಹೆಯನ್ನು ಸಮರ್ಥಿಸಿಕೊಳ್ಳಲು ಹೋಗಿ ವಾದ ಮಾಡಬೇಕಾದೀತು.

ಮಿಥುನ ರಾಶಿ: ಮಕ್ಕಳ ವಿವಾಹದ ಆತಂಕವು ನಿಮ್ಮಲ್ಲಿ ಇರಬಹುದು. ತಂದೆಯ ಜೊತೆಗಿನ ಮನಸ್ತಾಪವನ್ನು ನೀವು ಕುಳಿತು ಬಗೆಹರಿಸಿಕೊಳ್ಳುವುದು ಸೂಕ್ತ. ಕಲಾವಿದರು ಹೊಸ ಅವಕಾಶಗಳನ್ನು ಪಡೆದುಕೊಳ್ಳುವರು. ನಿಮ್ಮ ವಿದ್ಯೆಗೆ ಗೌರವ ಸಿಗುವುದು. ಅತಿಯಾದ ಅಸೆಯಿಂದ ನಿಮ್ಮಲ್ಲಿರುವ ವಸ್ತುವು ನಿಮಗೆ ದುಃಖಕೊಟ್ಟೀತು. ಅಪರಿಚಿತರ ಸಲಹೆಗಳು ನಿಮಗೆ ಯೋಗ್ಯವೆನಿಸಬಹುದು. ಸಂಗಾತಿಯನ್ನು ನೋಡುವ ದೃಷ್ಟಿಯು ಬದಲಾದೀತು‌. ನೀವಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳಲು ನಿಮ್ಮವರು ಕಷ್ಟಪಟ್ಟಾರು. ಇಂದು ಕುಟುಂಬದ ಜೊತೆ ಹೆಚ್ಚು ಸಮಯವನ್ನು ಕಳೆಯಲು ಅವಕಾಶ ಇರಲಿದೆ. ಅಧ್ಯಾತ್ಮದಲ್ಲಿ ಪ್ರೀತಿಯು ಹೆಚ್ಚಾಗಬಹುದು.

ಕಟಕ ರಾಶಿ: ರಾಜಕೀಯದ ಅನಿರೀಕ್ಷಿತ ಬದಲಾವಣೆಯ ಬಿಸಿಯು ನಿಮಗೂ ತಟ್ಟಬಹುದು. ಕೆಲವನ್ನು ನೀವು ಹೇಳಿ ಮಾಡುವುದು ಸಾಧ್ಯವಾಗದು. ಕಳ್ಳತನದ ಭೀತಿ ಇರಲಿದೆ. ಅಕಸ್ಮಾತ್ ವಾಹನದಿಂದ ಬೀಳಬಹುದು. ಸಣ್ಣ ಗಾಯಗಳೂ ಆಗಬಹುದು. ಮನೆಯ ಸ್ವಚ್ಛತೆಯ ಕಡೆ ಗಮನ ಇರಲಿದೆ. ಸಣ್ಣ ಉದ್ಯೋಗದವರು ಅಲ್ಪ ಲಾಭವನ್ನು ಗಳಿಸುವರು. ಉದ್ಯೋಗದ ನಿಮಿತ್ತ ಸುತ್ತಾಡುವುದರಿಂದ ಅನಾರೋಗ್ಯಕ್ಕೆ ಕಾರಣವಾಗಬಹುದು. ಅಧಿಕ ಒತ್ತಡವು ನಿಮ್ಮ ಕಾರ್ಯಕ್ಕೆ ಭಂಗ ತರಬಹುದು. ಕಬ್ಬಿಣದ ವ್ಯಾಪರದಿಂದ ಲಾಭವನ್ನು ಪಡೆಯುವಿರಿ. ವೃತ್ತಿಯಲ್ಲಿ ನಿಮ್ಮ ಬಗ್ಗೆ ಸಲ್ಲದ ಮಾತುಗಳು ಕೇಳಿ ಆತಂಕವಾಗಬಹುದು. ಸಾಮಾಜಿಕ ಕೆಲಸಗಳಿಂದ ನೀವು ಪ್ರಶಂಸೆಯನ್ನು ಪಡೆಯಬಹುದು.

ಸಿಂಹ ರಾಶಿ: ಧಾರ್ಮಿಕ ನಾಯಕರ ಜೊತೆ ವಾಗ್ವಾದ ಆಗಬಹುದು. ಕಳೆದುಕೊಂಡ ವಸ್ತುಗಳ ಬಗ್ಗೆ ನಿಮಗೆ ಮೋಹವಿರದು. ಭೂಮಿಯ ವ್ಯವಹಾರದಿಂದ ಹೊರಬರಲು ಪ್ರಯತ್ನಿಸುವಿರಿ. ವಾಹನದಿಂದ ನೋವಾಗುವ ಸಾಧ್ಯತೆ ಇದೆ. ಹಳೆಯ ಸಂಸ್ಥೆಯೊಂದನ್ನು ಮುನ್ನಡೆಸುವ ಜವಾಬ್ದಾರಿಯು ನಿಮಗೆ ಬರಬಹುದು. ಹೆಚ್ಚು ಆದಾಯವನ್ನು ಇಂದಿನ ಕಾರ್ಯದಿಂದ ನಿರೀಕ್ಷಿಸುವಿರಿ. ನಿಮ್ಮ ಕರ್ತವ್ಯದ ಕಡೆ ಗಮನ ಅತಿಯಾಗಿ ಇರಲಿ. ಅದೃಷ್ಟವನ್ನು ನಂಬಿಕೊಂಡು ಸಮಯವನ್ನು ಹಾಳುಮಾಡುವುದು ಬೇಡ. ನಿಮ್ಮ ಕೆಲಸವನ್ನು ನೀವು ಮಾಡಿ. ಮಾತಿಗೆ ತಪ್ಪಿದ್ದಕ್ಕೆ ನಿಮ್ಮನ್ನು ಅವಮಾನಿಸಿಯಾರು. ಆರ್ಥಿಕಬಲವು ನಿಮಗೆ ಅಗತ್ಯವಾಗಿ ಬೇಕಾಗುವುದು. ನಿಮ್ಮ ಕೆಲವರಿಗೆ ಪ್ರಯೋಜನವಾದೀತು. ಹಲವು ದಿನಗಳಿಂದ ನಿಂತು ಹೋಗಿದ್ದ ಕೆಲಸಕ್ಕೆ ಮರು ಚಾಲನೆ ಕೊಡುವ ಯೋಚನೆ ಮಾಡುವಿರಿ.

ಕನ್ಯಾ ರಾಶಿ: ಉದ್ಯೋಗವನ್ನು ಬದಲಿಸುವ ಮನಸ್ಸಿದ್ದರೂ ನಿಯಮಕ್ಕೆ ಕಟ್ಟುಬಿದ್ದು ಕಷ್ಟವಾದೀತು. ಹಣದ ವ್ಯವಹಾರದಿಂದ ನಿಮಗೆ ಅಸಮಾಧಾನವಾಗುವುದು. ಸಾಲವನ್ನು ತೀರಿಸಲು ಏನಾದರೂ ಮಾಡಬೇಕು ಏನಿಸಬಹುದು. ಬಂಧುಗಳ ಮಾತಿನಿಂದ ಸಮಾಧಾನ ಸಿಕ್ಕೀತು. ಉದ್ಯೋಗವನ್ನು ಹುಡುಕಿಕೊಂಡು ಅಲೆದಾಡಬೇಕಾದೀಯು. ಆಗಾಗ ಬರುವ ಸಾಲದ ವಿಚಾರದಿಂದ ಮನೆಯ ವಾತಾವರಣವು ಸರಿಯಾಗಿ ಇರದು. ಕಳೆದ ವಿಷಯವನ್ನು ಪುನಃ ನೆನಪಿಸಿಕೊಂಡು ಮನಸ್ಸು ಭಾರವಾಗುವುದು. ಇಂದಿನ‌ ನಿಮ್ಮ ಪ್ರಯಾಣವು ಕೆಲವು ಅಡೆತಡೆಗಳಿಂದ ಇರಲಿದೆ. ನಿಮ್ಮ ಆಸಕ್ತಿಯ ವಿಚಾರವನ್ನು ಬದಲಿಸುವಿರಿ. ದೂರದಲ್ಲಿ ಇರುವ ಮಿತ್ರರು ನಿಮಗೆ ಸಹಾಯವನ್ನು ಮಾಡಬಹುದು. ಇಂದು ದೈಹಿಕ ಪರಿಶ್ರಮವು ಹೆಚ್ಚು ಮಾಡಬೇಕಾದೀತು.

ತುಲಾ ರಾಶಿ: ಉದ್ಯೋಗವನ್ನು ಕಳೆದುಕೊಳ್ಳುವುದು ಅನಿವಾರ್ಯವಾಗಬಹುದು. ಧೃತಿಗೆಡದೇ ಹೊಸ ಉದ್ಯೋಗಕ್ಕೆ ತೆರಳುವಿರಿ. ವ್ಯವಹಾರದ ನಷ್ಟವು ನಿಮ್ಮ ಮನಸ್ಸನ್ನು ವಿಚಲಿತ ಮಾಡೀತು. ಯಾರದೋ ಮಾತಿನ ಮೇಲೆ ನಿಮ್ಮ ಗೆಳೆತನವನ್ನು ದೂರ ಮಾಡಿಕೊಳ್ಳಬಹುದು. ಅನಿರೀಕ್ಷಿತವಾಗಿ ಸಿಕ್ಕ ಉನ್ನತ ಅಧಿಕಾರದಿಂದ ಸಂತೋಷವಾಗಬಹುದು. ದಾಂಪತ್ಯದಲ್ಲಿ ಬರುವ ಸಮಸ್ಯೆಗಳನ್ನು ಪರಸ್ಪರ ಮಾತು ಕತೆಯಿಂದ ಸರಿ ಮಾಡಿಕೊಳ್ಳಿ. ಬಹಿರಂಗಪಡಿಸಿ ನಿಮ್ಮ ಮಾನವನ್ನು ಕಳೆದುಕೊಳ್ಳಬೇಕಾಗಬಹುದು. ಸಾಧ್ಯವಾದಷ್ಟು ಮಾತನ್ನು ಕಡಿಮೆ ಮಾಡಿ, ಕಾರ್ಯದಲ್ಲಿ ತೋರಿಸುವಿರಿ. ಇಂದಿನ ನಿಮ್ಮ ಹೆಚ್ಚಿನ ಸಮಯವು ಖರೀದಿಗೆ ಹೋಗಲಿದೆ. ನಿಮ್ಮ ಮೇಲಿನ ಆರೋಪವು ಸುಳ್ಳಾಗವುದು. ಜಾಣತನದಿಂದ ಸಮಸ್ಯೆಯನ್ನು ಪರಿಹರಿಸಿಕೊಳ್ಳಿ.

ವೃಶ್ಚಿಕ ರಾಶಿ: ನಿಮಗೆ ಆಸಕ್ತಿ ಇಲ್ಲದಿದ್ದರೂ ಹೊಸ ಕೆಲಸವನ್ನು ಮಾಡಬೇಕಾದೀತು. ಪರರ ಮನೆಯಲ್ಲಿ ಆಹಾರವನ್ನು ಸ್ವೀಕಾರ ಮಾಡುವಿರಿ. ನಿಮ್ಮ ಮಾತು ನಿಮಗೇ ಹೆಚ್ಚಾದಂತೆ ತೋರುವುದು. ಬರಹಗಾರರು ಪ್ರಶಂಸೆಯನ್ನು ಗಳಿಸುವರು. ಆರ್ಥಿಕ ನಷ್ಟದಿಂದ ನಿಮಗೆ ಚಿಂತೆಯಾಗಬಹುದು. ಸಾಮೂಹಿಕ ಕೆಲಸವು ನಿಮಗೆ ಕಿರಿಕಿರಿ ಕೊಡಬಹುದು. ತಂದೆಯಿಂದ ನಿಮಗೆ ಬೇಕಾದ ಕೆಲಸವು ಮಾಡಿಸಿಕೊಳ್ಳುವಿರಿ. ಧಾರ್ಮಿಕ ಕಾರ್ಯಗಳಲ್ಲಿ ನಿಮಗೆ ಆಸಕ್ತಿ ಹೆಚರಚಾಗುವುದು. ನಿಮ್ಮ ಯೋಜನೆಯನ್ನು ಯಾರ ಬಳಿಯೂ ಪ್ರಕಟಮಾಡಿಕೊಳ್ಳುವುದು ಬೇಡ. ಸಂಕೋಚದಿಂದ ನಿಮಗೆ ಸಮಸ್ಯೆಗೆ ಪರಿಹಾರವು ಸಿಗದೇಹೋಗಬಹುದು. ಬಂಧುಗಳ ಜೊತೆಗೆ ಮಾತುಕತೆಯು ಇಷ್ಟವಾಗದು. ವಾಹನದಲ್ಲಿ ದೂರಪ್ರಯಾಣವನ್ನು ನಿಲ್ಲಿಸಿ. ಯಾರೋ‌ ಮಾಡಿದ ನಿಯಮದಿಂದ ನಿಮಗೆ ತೊಂದರೆಯಾಗಬಹುದು.

ಧನು ರಾಶಿ: ಅಹಂಕಾರದ ಮಾತುಗಳು ನಿಮಗೆ ಶೋಭೆಯಾಗದು. ಕುಟುಂಬದವರ ಜೊತೆ ನಿಮ್ಮ ಒಡಾನಾಟವು ಕಡಿಮೆ ಆಗಬಹುದು. ಕೃಷಿಯ ಚಟುವಟಿಕೆಯಿಂದ ಲಾಭವಾಗುವುದು. ಮಿತ್ರರ ಸಹಾಯವನ್ನು ನೀವು ಉಪೇಕ್ಷಿಸುವಿರಿ. ಓಡಾಟದಿಂದ ಕೆಲಸವಾಗದು. ಜಾಣ್ಮೆಯಿಂದ ಕೆಲಸವನ್ನು ಮುಗಿಸುಕೊಳ್ಳಿ. ನಿಮ್ಮ ಸ್ವಾಭಿಮಾನಕ್ಕೆ ಪೆಟ್ಟು ಬೀಳಬಹುದು. ನೀವು ಆಪ್ತರಿಗೆ ಎಲ್ಲವನ್ನೂ ಹೇಳಬೇಕು ಎಂದುಕೊಂಡರೂ ನಿಮಗೆ ಹೇಳಲಾಗದೆ ದುಃಖವಾಗುವುದು. ಅಪರಿಚಿತರ ಸ್ನೇಹವನ್ನು ಮಾಡುವಾಗ ಜಾಗರೂಕತೆ ಇರಲಿ. ಸ್ನೇಹವೇ ಪ್ರೇಮವಾಗಿ ಬದಲಾಗಬಹುದು. ಮುಖ್ಯ ಕೆಲಸವು ಮರೆತುಹೋಗಬಹುದು. ಮೇಲಧಿಕಾರಿಗಳು ನಿಮ್ಮ ಮೇಲಿಟ್ಟ ವಿಶ್ವಾಸಕ್ಕೆ ಭಂಗಬಾರದಂತೆ ನಿಮ್ಮ ವರ್ತಿಸಿ. ವಿದ್ಯಾರ್ಥಿಗಳು ಓದಿಗೆ ಸರಿಯಾದ ಸಮಯವನ್ನು ನಿರ್ಧರಿಸಿಕೊಳ್ಳಿ. ಉದ್ಯೋಗಸ್ಥರು ವಿದೇಶ ಪ್ರಯಾಣಕ್ಕೆ ಹೋಗಬಹುದು.

ಮಕರ ರಾಶಿ: ಉದ್ಯಮದ ಸ್ಥಳವನ್ನು ಬದಲಾವಣೆ ಮಾಡುವಿರಿ. ಮೇಲಧಿಕಾರಿಗಳ ವರ್ತನೆಯನ್ನು ಸಹಿಸಲು ಕಷ್ಟವಾದೀತು. ಹಿರಿಯರ ಮಾರ್ಗದರ್ಶನವನ್ನು ನೀವು ಅಲ್ಲಗಳೆಯುವಿರಿ. ಧನವ್ಯಯವಾಗುವ ಸಂದರ್ಭವು ಬರಬಹುದು.‌ ತುರ್ತು ಹಣ‌ ಸಂಪಾದನೆಯನ್ನು ಮಾಡಬೇಕಾದೀತು. ಸಂಗಾತಿಯ ಜೊತೆ ವಾಗ್ವಾದ ಮಾಡಿ ಮನಸ್ಸನ್ನು ಕೆಡಿಸಿಕೊಳ್ಳುವಿರಿ. ನಿಮ್ಮ ಸತ್ಯದಿಂದ ಸಹೋದ್ಯೋಗಿಯ ಕೆಲಸವು ಹೋಗಬಹುದು. ನಿಮ್ಮ ನಡೆಯುವುದು ಇತರರಿಗೆ ತೊಂದರೆಯನ್ನು ಉಂಟುಮಾಡೀತು. ಅತಿಯಾದ ನಿದ್ರೆಯಿಂದ ಆರೋಗ್ಯಕ್ಕೆ ತೊಂದರೆ ಆಗಬಹುದು. ಸಾಮಾಜಿಕ ಗೌರವವನ್ನು ನೀವು ಪಡೆಯಲಿದ್ದೀರಿ. ನಿರಂತರ ಕೆಲಸಕ್ಕೆ ಫಲವು ಸಿಗಲಿದೆ. ಯೋಚಿಸಿ ಕಾರ್ಯದಲ್ಲಿ ತೊಡಗಿಕೊಳ್ಳಿ.

ಕುಂಭ ರಾಶಿ: ಪೂರ್ವಾರ್ಜಿತ ಆಸ್ತಿಯ ಬಗ್ಗೆ ನಿಮಗೆ ಪೂರ್ಣ ಸಮಾಧಾನ ಇರದು. ನಿಮ್ಮ ತಪ್ಪುಗಳು ಅರ್ಥವಾಗದೇ ಬೇರೆಯವರ ಮೂಲಕ ನೀವು ತಿಳಿದುಕೊಳ್ಳಬೇಕಾದೀತು. ಸಾಲವನ್ನು ಮಾಡುವಾಗ ಯಾರದ್ದಾದರೂ ಸಲಹೆಯನ್ನು ಪಡೆಯುವುದು ಉತ್ತಮ. ರಾಜಕೀಯ ವ್ಯಕ್ತಿಗಳು ನಿಮ್ಮನ್ನು ಬಳಸಿಕೊಳ್ಳಬಹುದು. ಯಾವ ಕೆಲಸವನ್ನು ಒಪ್ಪಿಕೊಳ್ಳುವಾಗಲೂ ಜಾಗರೂಕತೆ ಇರಲಿ. ಇನ್ನೊಬ್ಬರ ಒತ್ತಾಯಕ್ಕೆ ನೀವು ಮಣಿದು ಹಣದ ಹೂಡಿಕೆಯನ್ನು ಮಾಡುವಿರಿ. ಆದಾಯದ‌ ಮೂಲವು ಬದಲಾಗಬಹುದು. ಚರಾಸ್ತಿಯನ್ನು ಕೊಟ್ಟು ಅಲ್ಪ ಲಾಭವನ್ನು ಮಾಡಿಕೊಳ್ಳುವಿರಿ. ನಿಮ್ಮ ಮಾತಿಗೆ ಬೆಲೆ ಕೊಡದೇ ಇರುವುದರಿಂದ ಬೇಸರವಾದೀತು. ನಿಮ್ಮ ಉದ್ಯಮದ ಬಗ್ಗೆ ಒಂದು ಅವಲೋಕನ ಅವಶ್ಯಕ. ನಿಮ್ಮ ಕೆಲವು ಅಭ್ಯಾಸವನ್ನು ಬಿಡಬೇಕಾದೀತು.

ಮೀನ ರಾಶಿ: ಇಂದು ನಿಮ್ಮ ಸರ್ಕಾರಕ್ಕೆ ಸಂಬಂಧಪಟ್ಟ ಕೆಲಸಗಳು ವೇಗವಾಗಿ ಆಗುತ್ತವೆ. ಆಸ್ತಿಯ ದಾಖಲಾತಿಗಳನ್ನು ಸರಿಯಾಗಿ ರಕ್ಷಿಸಿಕೊಳ್ಳಿ. ರಾಜಕೀಯ ವ್ಯಕ್ತಿಗಳ ಪ್ರಭಾವವನ್ನು ಬಳಸಿಕೊಳ್ಳುವಿರಿ. ನಿಮ್ಮ ಆಸೆಗಳನ್ನು ಪೂರ್ಣ ಮಾಡಿಕೊಳ್ಳಲಾಗದು. ಭಾವನೆಗಳಿಗೆ ಬೆಲೆ ಕೊಡದೇ ಇರುವುದು ನಿನಗೆ ಬೇಸರವಾಗಬಹುದು. ಬಂಧುಗಳ ಆಗಮನದಿಂದ ಇಂದಿನ ವ್ಯವಹಾರದಲ್ಲಿ ಬದಲಾವಣೆ ಇರುವುದು. ಎಲ್ಲ ಸಮಯದಲ್ಲಿಯೂ ನಿಮ್ಮ ಪರಿಸ್ಥಿತಿಯು ಸಕಾರಾತ್ಮಕವಾಗಿ ಇರದು. ಮಾತಿನ ಮೇಲೆ ಹಿಡಿತವು ಬೇಕಾದೀತು. ನಿಮಗೆ ಸಂಗಾತಿಯ ಮೇಲೆ ಸಿಟ್ಟಾಗುವ ಸನ್ನಿವೇಶವು ಬರಲಿದೆ. ಇಂದು ನಿಮ್ಮ ವಿರುದ್ಧ ಮಾತನಾಡುವವರಿಗೆ ಉತ್ತರವನ್ನು ಕೊಡುವ ಅವಶ್ಯಕ ಇರುವುದಿಲ್ಲ. ಉದ್ಯೋಗದಲ್ಲಿ ವಿಶ್ವಾಸಗಳಿಸುವುದು ಮುಖ್ಯ. ವ್ಯವಹಾರವು ಪಾರದರ್ಶಕ ಆಗಿರಲಿ. ಉನ್ನತ ವಿದ್ಯಾಭ್ಯಾಸಕ್ಕೆ ವಿಷಯದ ಆಯ್ಕೆ ಕಷ್ಟವಾದೀತು.

-ಲೋಹಿತಶರ್ಮಾ 8762924271 (what’s app only)

ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ