ಒಂದಷ್ಟು ಮಂದಿ ಬೆಳಗ್ಗೆ ಎದ್ದ ನಂತರ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ (ಡಿಸೆಂಬರ್ 20) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಮೂಲಾ, ಮಾಸ: ಮಾರ್ಗಶೀರ್ಷ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ರೇವತೀ, ಯೋಗ: ಸಿದ್ಧಿ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 53 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 07 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:30 ರಿಂದ 01:54 ರವರೆಗೆ, ಯಮಘಂಡ ಕಾಲ ಬೆಳಿಗ್ಗೆ 08:17 ರಿಂದ 09:42ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 11:06 ರಿಂದ 12:30ರ ವರೆಗೆ.
ಸಿಂಹ ರಾಶಿ : ಪರರ ಗುಣದಲ್ಲಿ ಅಸೂಯೆ ಇರುವುದು. ಸಂಗಾತಿಯ ಪ್ರೀತಿಗೆ ನೀವು ಸೋಲಬಹುದು. ಎಷ್ಟೋದಿನಗಳಿಂದ ಬಯಸಿದ್ದ ವಸ್ತುವನ್ನು ನೀವು ಅನಾಯಾಸವಾಗಿ ಯಾರಿಂದಲೋ ಪಡೆಯುವುರಿ. ನಿಮ್ಮ ಬಗ್ಗೆ ಇರುವ ಕಾಳಜಿಗೆ ನೀವು ಮನಸೋಲುವಿರಿ. ಮನೆಯ ಕೆಲಸಲ್ಲಿ ಸಮಯವು ಹೋಗಿದ್ದೇ ಗೊತ್ತಾಗದು. ಇಂದು ನೀವು ಹೆಚ್ಚು ಉತ್ಸಾಹ ಹಾಗೂ ನಗುಮುಖದಲ್ಲಿ ಇರುವುದು ಎಲ್ಲರಿಗೂ ಗೊತ್ತಾಗಲಿದೆ. ನಿಮ್ಮ ಹೊಸ ಸುದ್ದಿಯು ಎಲ್ಲರಿಗೂ ಅಚ್ಚರಿ ಮೂಡಿಸುವುದು. ಕುಟುಂಬದಿಂದ ದೂರವಿದ್ದರೂ ಮಾತುಕತೆಗಳ ಮೂಲಕ ಹತ್ತಿರವಾಗುವಿರಿ. ಹೊಸ ಯೋಜನೆಗಳು ನಿಮ್ಮ ತಲೆಯಲ್ಲಿ ಓಡುತ್ತಿದ್ದು ಅದನ್ನು ಕಾರ್ಯರೂಪಕ್ಕೆ ತರಲು ನೋಡುವಿರಿ. ನಿಮ್ಮ ವೈಯಕ್ತಿಕ ಕಾರ್ಯದಲ್ಲಿ ಹೆಚ್ಚು ತೊಡಗಿಕೊಳ್ಳುವಿರಿ. ನೀವು ನಿರೀಕ್ಷಿಸಿದ ಹಣವು ಬಾರದೇ ಹೋಗಬಹುದು. ನಿಮ್ಮ ಹೆಸರನ್ನು ಹೇಳಿ ಯಾರಾದರೂ ವಂಚಿಸಿಯಾರು.
ಕನ್ಯಾ ರಾಶಿ : ವ್ಯಾಪಾರದ ವಿಚಾರದಲ್ಲಿ ಮನೆಯವರ ಜೊತೆ ಜಗಳ ಮಾಡಿಕೊಳ್ಳುವಿರಿ. ನಿಮಗೆ ದ್ವಂದ್ವಗಳು ಒಂದು ಸರಿಯಾದ ನಿರ್ಧಾರಕ್ಕೆ ಬರಲು ಅನುಕೂಲ ಮಾಡಿಕೊಡುವುದಿಲ್ಲ. ನಿಮಗೆ ಸಿಕ್ಕ ಜವಾಬ್ದಾರಿಯನ್ನು ತಪ್ಪಿಸಿಕೊಳ್ಳಲು ಮಾರ್ಗವನ್ನು ಹುಡುಕುವಿರಿ. ಇಂದು ನೀವು ನಂಬಿದ ಅದೃಷ್ಟವು ಕೈ ಕೊಡಬಹುದು. ನಿಮಗೆ ಸಿಗಬೇಕಾದ ಹಣವು ಸಿಗದೇ ಇರುವುದರಿಂದ ಬೇಸರ ಬೇಡ. ಸ್ತ್ರೀಯರ ಬಗ್ಗೆ ನಿಮಗೆ ಅನುಕಂಪವಿದ್ದರೂ ಅದನ್ನು ಹೇಳಿಕೊಳ್ಳಲಾಗದು. ಅಪಹಾಸ್ಯಕ್ಕೆ ಸಿಲುಕುವಿರಿ. ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಭಾವಿಸಿ ಸುಮ್ಮನಿರುವುದು ಉತ್ತಮ. ಸಂಗಾತಿಯು ಸಾಲವನ್ನು ಮಾಡಲು ಪ್ರಚೋದನೆ ಕೊಡಬಹುದು. ಕತ್ತಲೆಯಲ್ಲಿ ಗುದ್ದಾಟ ಮಾಡಿ ಆಯಾಸ ಮಾಡಿಕೊಳ್ಳುವಿರಿ. ಕಳೆದುಕೊಂಡ ವಿಶ್ವಾಸವನ್ನು ಮತ್ತೆ ಕೂಡಿಸಲು ಪ್ರಯತ್ನಿಸುವಿರಿ. ಅದು ಕನ್ನಡಿಯ ಗಾಜಿನಂತೆ. ಎಷ್ಟೇ ಕೂಡಿಸಿದರೂ ಬಿರುಕು ಎದ್ದು ತೋರುವುದು.
ತುಲಾ ರಾಶಿ : ನಿಮ್ಮ ಹೊಂದಿಕೊಳ್ಳುವ ಗುಣವನ್ನು ಎಲ್ಲರೂ ಶ್ಲಾಘಿಸುವರು. ಕೃತಘ್ನರಾಗಿ ಮೆರೆಯುವುದು ಬೇಡ. ಜಾರಿ ಬೀಳಲು ಹೆಚ್ಚು ಸಮಯ ಬೇಡ. ಅಂಗಳವನ್ನೇ ಹಾರಲಾರದವನು ಆಕಾಶವನ್ನು ಹಾರಿಯಾನು ಎಂದು ನಿಮ್ಮನ್ನು ಲೇವಡಿ ಮಾಡಬಹುದು. ಇದು ನಿಮಗೆ ಸಾಧನೆಗೆ ಪ್ರೇರಣೆಯೂ ಆಗಬಹುದು. ಹತ್ತಾರೂ ಆಲೋಚನೆಗಳು ಒಂದಾದಮೇಲೆ ಒಂದರಂತೆ ಬಂದು ನಿಮ್ಮ ದಿನಚರಿಯನ್ನು ಹಾಳು ಮಾಡಬಹುದು. ವಿದ್ಯಾರ್ಥಿಗಳ ಆಸೆಯನ್ನು ಮನೆಯವರು ಅರ್ಥಮಾಡಿಕೊಳ್ಳುವುದು ಕಷ್ಟವಾದೀತು. ವೃತ್ತಿಯಲ್ಲಿ ಅನಿರೀಕ್ಷಿತ ಒತ್ತಡಗಳು ಬರಲಿದ್ದು ಇಂದಿನ ಕಾರ್ಯವನ್ನು ಹಾಳುಮಡುವುದು. ಸ್ತ್ರೀಯರು ಕೆಲವರ ಬಗ್ಗೆ ಇರುವ ಪೂರ್ವಾಗ್ರಹವನ್ನು ಕಳೆದುಕೊಳ್ಳುವರು. ಪ್ರೀತಿಯು ನಿಮಗಾಗದವರ ಮೂಲಕ ಎಲ್ಲರಿಗೂ ತಿಳಿಯುವುದು. ಇದರಿಂದ ನಿಮಗೆ ಬಹಳ ಮುಜುಗರವಾಗಬಹುದು. ತಾಳ್ಮೆಯನ್ನು ಕಳೆದುಕೊಳ್ಳದೇ ವರ್ತಿಸಿ.
ವೃಶ್ಚಿಕ ರಾಶಿ : ಕಾರ್ಯಕ್ಕೆ ಹೊರಡುವ ಮೊದಲೇ ತನ್ನ್ನಿಂದ ಏನೂ ಆಗದು ಎಂಬ ಭಾವವನ್ನು ಮೊದಲು ತಲೆಯಿಂದ ತೆಗೆದುಹಾಕಬೇಕು. ನೀವು ಶಿಸ್ತಿಗೆ ಒಳಪಟ್ಟಷ್ಟು ನಿಮ್ಮ ಕೆಲಸಗಳು ಸುಲಲಿತವಾಗುವುದು. ಏಕಕಾಲದಲ್ಲಿ ಅನೇಕ ವಿಚಾರಗಳ ಚಿಂತನೆಯನ್ನು ನಡೆಸುವಿರಿ. ಕಛೇರಿಯಲ್ಲಿ ನಿಮ್ಮದಾದ ಅಸ್ತಿತ್ವವನ್ನು ಹೆಚ್ಚಿಸಿಕೊಳ್ಳುವಿರಿ. ಕೆಲವು ಸಂದರ್ಭಗಳು ನಿಮ್ಮ ಪರೀಕ್ಷೆಗಾಗಿ ಬರಲಿದ್ದು ಅದನ್ನು ಎದುರಿಸುವುದು ನಿಮ್ಮ ಮೇಲಿದೆ. ಮೂರ್ಖರಂತೆ ವರ್ತಿಸಿ ಎಲ್ಲರ ನಡುವೆ ನಗೆಪಾಟಲಾಗುವಿರಿ. ಸಂಗಾತಿಯ ಹೆಸರಿನಲ್ಲಿ ಸ್ಥಿರಾಸ್ತಿಯನ್ನು ಖರೀದಿಸುವಿರಿ. ಎಷ್ಟೇ ಸೌಕರ್ಯವಿದ್ದರೂ ಇನ್ನಷ್ಟು ಬೇಕೆನಿಸಬಹುದು. ಆರ್ಥಿಕ ಸ್ಥಿತಿಯು ನಿಮಗೆ ಸಮಾಧಾನ ಕೊಡುವುದು. ಹಳೆಯ ವಸ್ತುಗಳು ನಿಮಗೆ ಭಾರವಾದೀತು. ತಾಳ್ಮೆಯನ್ನು ಕಳೆದುಕೊಂಡು ಎಲ್ಲರೆದುರು ಸಣ್ಣವರಾಗಬೇಕಾದೀತು. ಕಠೋರ ಮಾತುಗಳು ನಿಮ್ಮರಿಗೆ ಇಷ್ಟವಾಗದು. ನಿಮ್ಮ ಬಗ್ಗೆ ಸಲ್ಲದ್ದನ್ನು ಹೇಳಬಹುದು.