AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ಈ ದಿನವನ್ನು ಬಹಳ ಆನಂದದಿಂದ ಕಳೆಯುವಿರಿ

ನೀವು ಇಂದು ಕೈಗೊಳ್ಳುವ ಯಾವುದೇ ಕೆಲಸಕಾರ್ಯಗಳು ಚೆನ್ನಾಗಿರಬೇಕು ಎಂದರೆ ನಿಮ್ಮ ರಾಶಿಫಲ ಚೆನ್ನಾಗಿರಬೇಕು. ಒಂದಷ್ಟು ಮಂದಿ ರಾಶಿಭವಿಷ್ಯ ತಿಳಿದುಕೊಂಡೇ ಮುಂದಿನ ಹೆಜ್ಜೆ ಇಡುತ್ತಾರೆ. ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ ಡಿಸೆಂಬರ್ 20 ರ ನಿಮ್ಮ ಭವಿಷ್ಯ ಹೀಗಿದೆ ನೋಡಿ.

Horoscope: ಈ ದಿನವನ್ನು ಬಹಳ ಆನಂದದಿಂದ ಕಳೆಯುವಿರಿ
ರಾಶಿ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಕಿರಣ್ ಹನುಮಂತ್​ ಮಾದಾರ್|

Updated on: Dec 20, 2023 | 12:45 AM

Share

ಒಂದಷ್ಟು ಮಂದಿ ಬೆಳಗ್ಗೆ ಎದ್ದ ನಂತರ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಧನು, ಮಕರ, ಕುಂಭ, ಮೀನ ರಾಶಿಯವರ ಇಂದಿನ (ಡಿಸೆಂಬರ್ 20) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಮೂಲಾ, ಮಾಸ: ಮಾರ್ಗಶೀರ್ಷ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ರೇವತೀ, ಯೋಗ: ಸಿದ್ಧಿ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 53 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 07 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:30 ರಿಂದ 01:54 ರವರೆಗೆ, ಯಮಘಂಡ ಕಾಲ ಬೆಳಿಗ್ಗೆ 08:17 ರಿಂದ 09:42ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 11:06 ರಿಂದ 12:30ರ ವರೆಗೆ.

ಧನು ರಾಶಿ : ಈ ದಿನವನ್ನು ಬಹಳ ಆನಂದದಿಂದ ಕಳೆಯುವಿರಿ. ಏಕೆಂದರೆ ನೀವು ಇಂದು ಸಕಾರಾತ್ಮಕ ಚಿಂತನೆಯಲ್ಲಿ ಇರುವಿರಿ. ನಿಮ್ಮ ಎಲ್ಲಾ ಶ್ರಮದಾಯಕ ಯೋಜನೆ ಮತ್ತು ಸಂಘಟನೆಯು ಅಂತಿಮವಾಗಿ ಫಲವನ್ನು ನೀಡಲಿದೆ. ವಿಶೇಷವಾಗಿ ಇಂದು ನಿಮ್ಮ ಸಂಗಾತಿಯೊಂದಿಗೆ ಸ್ವಲ್ಪ ಸಮಯ ಕಳೆಯಿರಿ. ನಿಗದಿತ ಸಮಯಕ್ಕಿಂತ ಮೊದಲೇ ಸಾಲವನ್ನು ತೀರಿಸಿದ್ದಕ್ಕೆ ನಿಮ್ಮಲ್ಲಿ ಅಹಂಕಾರವು ಜಾಗರೂಕವಾಗಬಹುದು. ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಎನ್ನುವಂತೆ ನಿಮ್ಮ ಬಹಳ ದಿನದ ಕೂಡಿಟ್ಟ ಹಣವು ಕ್ಷಣಾರ್ಧದಲ್ಲಿ ಖಾಲಿಯಾಗಲಿದ್ದು ನಿಮಗೆ ಬೇಸರ ತರಿಸೀತು. ಸಂಬಂಧಗಳನ್ನು ಬೆಳೆಸಿಕೊಳ್ಳುವ ಇಚ್ಛೆ ಇದ್ದರೂ ಮುನ್ನುಗ್ಗಲು ಮನಸ್ಸು ಇರದು. ತಂದೆಯ ಜೊತೆಗಿನ ಮನಸ್ತಾಪವು ನಿಮ್ಮ ನೆಮ್ಮದಿಯನ್ನು ಹಾಳು ಮಾಡೀತು. ಎಲ್ಲದಕ್ಕೂ ಮುನ್ನುಗಬೇಕೆನ್ನುವ ನಿಮ್ಮ ಯೋಚನೆ ಬದಲಾಗುವುದು. ಭೂಮಿಯ ಬಗ್ಗೆ ಆಸಕ್ತಿಯು ಕಡಿಮೆಯಾಗಲಿದೆ.

ಮಕರ ರಾಶಿ : ಕಿಟಕಿ ಮುಚ್ಚಿದೆ ಎಂದ ಮಾತ್ರಕ್ಕೆ ದ್ವಾರವೂ ಮುಚ್ಚಿರುತ್ತದೆ ಎಂದು ತಿಳಿದುಕೊಳ್ಳುವುದು ಮೂರ್ಖತನ. ನೀವು ಇಂದು ಸಂಗಾತಿಯ ಜೊತೆ ವಾಸ್ತವ ಬದುಕಿನ ಬಗ್ಗೆ ಚಿಂತನೆಯನ್ನು ನಡೆಸುವಿರಿ. ಉದ್ವೋಗದಿಂದಾಗಿ ಇಂದಿನ ಉತ್ತಮ ಲಾಭದಾಯಕ ವ್ಯಾಪಾರವನ್ನು ಕಳೆದುಕೊಳ್ಳುವಿರಿ. ಗೃಹನಿರ್ಮಾಣವು ನಿಮಗೆ ಅನಿವಾರ್ಯವಾದೀತು. ಬಾಡಿಗೆ ಮನೆಯ ಕಿರಿಕಿರಿಯು ನಿಮಗೆ ಸಾಕಾಗಿ ಹೋಗುವುದು. ಅಧಿಕಾರಿಗಳಿಂದ ನಿಮ್ಮ ಆರ್ಥಿಕತೆಯು ಪರಿಶೀಲನೆಗೊಳ್ಳುವುದು. ದುಡಿಮೆಯ ಸ್ವಲ್ಪ ಭಾಗವನ್ನಾದರೂ ಇತರಿಗೆ ಕೊಡಬೇಕು ಎಂದು ಅನ್ನಿಸಬಹುದು. ಒಬ್ಬರಾದರೂ ತಾಳ್ಮೆಯಿಂದ ಇರಬೇಕಾದೀತು. ನಿಮ್ಮ ಕನಸನ್ನು ಪೂರ್ಣ ಮಾಡಿಕೊಳ್ಳುತ್ತಿರುವುದು ನಿಮಗೆ ಖುಷಿಯಾಗಲಿದೆ. ಭೋಜನವನ್ನು ಸಮಯ ಮೀರಿ ಮಾಡುವುದು ಬೇಡ. ನಿಮ್ಮ ಬದಲಾವಣೆಯು ಪೂರ್ಣ ಸತ್ಯವಾಗಿರದು.

ಕುಂಭ ರಾಶಿ : ನೀವು ಯಾರನ್ನಾದರೂ ಅಳೆಯುವ ಮೊದಲು ಅವರೇ ನಿಮ್ಮ ಬಗ್ಗೆ ಎಲ್ಲವನ್ನೂ ಹೇಳಬಹುದು. ಇನ್ನೊಬ್ಬರ ನಿರ್ಧಾರಗಳನ್ನು ನಿಯಂತ್ರಿಸುವ ಮೂಲಕ ನೀವು ಎಂದಿಗೂ ಪ್ರೀತಿ ಮತ್ತು ಮೆಚ್ಚುಗೆಯನ್ನು ಪಡೆಯುವುದಿಲ್ಲ. ನಿಮ್ಮ ಸುತ್ತಲಿನ ಜನರು ತಮ್ಮದೇ ಮಿತಿಯಲ್ಲಿ ಇರುವರು. ಅದಕ್ಕಾಗಿ ಅವರ ಜೊತೆ ಮನಸೋ ಇಚ್ಛೆ ವರ್ತಿಸುವುದು ಬೇಡ. ಅವರಿಗೆ ತಮ್ಮಷ್ಟಕ್ಕೆ ನಿರ್ಧಾರ ಕೈಗೊಳ್ಳುವ ಅವಕಾಶ ನೀಡಿ. ಆಕಸ್ಮಿಕವಾಗಿ ನೀವು ಅಶುಭ ಸಮಾಚಾರವನ್ನು ಕೇಳಬೇಕಾಗುವುದು. ನಿಮ್ಮ ಸುತ್ತಲೂ ನಡೆಯುವುದನ್ನು ಹತ್ತಿರದಿಂದ ಗಮನಿಸಿ, ನೀವು ನಿಮ್ಮನ್ನು ಸರಿಯಾಗಿ ಕಂಡುಕೊಳ್ಳಿ. ವೃತ್ತಿ ಜೀವನದಲ್ಲಿ ಗೌರವವನ್ನು ಪಡೆಯಬೇಕು ಎನಿಸುವುದು. ಅನಗತ್ಯ ಖರ್ಚಿಗೆ ಇಂದು ಹಲವು ಹಾದಿಗಳು ನಿಮ್ಮ ಕಣ್ಣಿಗೆ ಬೀಳಬಹುದು. ಆರ್ಥಿಕ ವ್ಯವಸ್ಥೆಯು ಎತ್ತು ಏರಿಗೆ ಕೋಣ ನೀರಿಗೆ ಎನ್ನುವ ಸ್ಥಿತಿಯು ಬರಬಹುದು. ಒಂದು ಕಡೆ ಬಾಗಲು ಮುಚ್ಚಿದರೆ ಇನ್ಮೊಂದು ಕಡೆ ಕಿಟಕಿ ತೆರುವುದು.

ಮೀನ ರಾಶಿ : ನಿಜವಾದ ಸ್ನೇಹಿತ ನಿಮ್ಮ ಅಗತ್ಯದ ಸಮಯದಲ್ಲಿ ಜೊತೆಯಾಗುವರು. ಅಂತಹವರನ್ನು ಕಳೆದುಕೊಂಡು ಅನಂತರ ಸಂಕಟಪಡುವಿರಿ. ನೀವು ಇನ್ನೊಬ್ಬರ ಅಹಂಕಾರವನ್ನು ಹೆಚ್ಚಿಸಲು ಹೋಗುವುದು ಬೇಡ. ಅತ್ಯಂತ ಮುಖ್ಯವೆಂದು ಪರಿಗಣಿಸುವ ವಿಷಯಗಳಲ್ಲಿ ನಿಮ್ಮ ಪ್ರಯತ್ನಗಳನ್ನು ಮುಂದುವರೆಸಿ. ಬಹಳ ದಿನಗಳಿಂದ ಇದ್ದ ಆಸ್ತಿಯ ಮೇಲಿನ ಮೋಹವು ಕಡಿಮೆ ಆಗುವುದು. ರಾಜಕೀಯದ ಜೊತೆ ಸಂಪರ್ಕವು ಬೆಳೆಯವಹುದು. ಆರ್ಥಿಕ ಸಮಸ್ಯೆಯು ತಾತ್ಕಾಲಿಕವಾಗಿ ನಿವಾರಣೆಯಾಗಿ ಒತ್ತಡದಿಂದ ಹೊರಬರುವಿರಿ. ಇಂದು ನಿಮ್ಮ ಪ್ರಯತ್ನದಲ್ಲಿ ಯಶಸ್ಸು ನಿರೀಕ್ಷಿಸಬಹುದು. ಸಂಗಾತಿಗೆ ಬೇಕಾದ ಸಹಕಾರವನ್ನು ಖುಷಿಯಿಂದ ಮಾಡುವಿರಿ. ಶತ್ರುಗಳಿಗೆ ಏನನ್ನಾದರೂ ಮಾಡಲು ಯಾರಿಂದಲಾದರೂ ಪ್ರೇರಣೆ ಸಿಕ್ಕೀತು. ಗ್ರಾಹಕರಿಂದ ಮೆಚ್ಚುಗೆ ಸಿಗಲಿದೆ. ಅಶಿಸ್ತು ನಿಮ್ಮ ಕಾರ್ಯವನ್ನು ಯೋರಿಸುತ್ತದೆ. ಸ್ವಂತ ಕಾರ್ಯದ ಕಾರಣ ಕಛೇರಿಗೆ ವಿರಾಮ ಹೇಳುವಿರಿ.

ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!