
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮಾರ್ಚ್ 04) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಶತಭಿಷಾ, ಮಾಸ: ಮಾಘ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ನವಮೀ, ನಿತ್ಯನಕ್ಷತ್ರ: ಮೂಲಾ, ಯೋಗ: ವಜ್ರ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 48 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 40 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 08:18 ರಿಂದ 09:46ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 11:15 ರಿಂದ ಮಧ್ಯಾಹ್ನ 12:44ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:13 ರಿಂದ 03:42ರ ವರೆಗೆ.
ಮೇಷ ರಾಶಿ: ಇಂದು ನಿಮ್ಮ ಮನಸ್ಸಿನಲ್ಲಿ ಕೆಲವರ ವಿಚಾರದಲ್ಲಿ ಗೊಂದಲವು ಉಳಿಯುತ್ತದೆ. ಕೌಟುಂಬಿಕ ವೈಷಮ್ಯದಿಂದ ನಿಮಗೆ ದುಃಖವಾಗಬಹುದು. ಆರೋಗ್ಯದ ಬಗ್ಗೆ ಗಮನ ಕೊಡಿ. ವಾಹನದ ದುರಸ್ತಿ ಇರುವುದು. ಆಗಿಹೋದ ಸಾಮಾಜಿಕ ಕಾರ್ಯಗಳಿಗೆ ಪ್ರಶಂಸೆ ಬರಬಹುದು. ಏಕಾಂತದಲ್ಲಿ ಇರಲು ಇಷ್ಟಪಡುವಿರಿ. ಆದಾಯಕ್ಕೆ ಮೂಲವಾದುದನ್ನು ಹುಡುಕಿಕೊಳ್ಳುವುದು ಭವಿಷ್ಯ ದೃಷ್ಟಿಯಿಂದ ಉತ್ತಮ. ಇಷ್ಟಪಟ್ಟವರ ಜೊತೆ ಸಮಯವನ್ನು ಕಳೆಯುವುದು ಕಷ್ಟವಾಗಬಹುದು. ಆದಾಯದ ಮೂಲದಿಂದ ನಿಮಗೆ ನೆಮ್ಮದಿ ಸಿಗುವುದು. ದೂರಪ್ರಯಾಣವನ್ನು ಇಂದು ಇಷ್ಟಪಡುವಿರಿ. ಶತ್ರುಗಳ ಅನ್ಯಾಯಕ್ಕೆ ಸಾಕ್ಷಿಯು ಸಿಗಬಹುದು. ಸಕಾರಾತ್ಮಕತೆಯಲ್ಲಿ ಇರಲು ನಿಮಗೆ ಇಷ್ಟವಾಗುವುದು.
ವೃಷಭ ರಾಶಿ: ಇಂದು ನೀವು ಸಾಮಾಜಿಕ ಕ್ಷೇತ್ರದಲ್ಲಿ ಅವಮಾನವನ್ನು ಎದುರಿಸಬಹುದು. ವಾಹನಗಳ ಬಳಕೆ ಇತ್ಯಾದಿಗಳಲ್ಲಿ ಜಾಗರೂಕರಾಗಿರಿ. ವ್ಯಾಪಾರ ಕ್ಷೇತ್ರದಲ್ಲಿ ಯಾರಿಗೂ ಸಾಲವಾಗಿ ಹಣ ನೀಡಬೇಡಿ. ಕಾರ್ಯೋನ್ಮುಖರಾಗುವ ಅವಶ್ಯಕತೆ ಬಹಳ ಇರಲಿದೆ. ಜೀವನೋತ್ಸಾಹಕ್ಕೆ ನಿಮ್ಮದಾದ ಚಿಂತನೆಗಳು ಇರಲಿ. ಸತ್ಪಾತ್ರರಿಗೆ ಸುವಸ್ತುವನ್ನು ದಾನ ಕೊಡಲು ಇಚ್ಛಿಸುವಿರಿ. ಕೆಲವಾರು ವ್ಯಕ್ತಿತ್ವಗಳು ನಿಮ್ಮನ್ನು ಆಕರ್ಷಿಸಬಹುದು. ಕೆಲವೊಮ್ಮೆ ನಿಮ್ಮ ಸ್ವಭಾವವು ನಾಟಕೀಯದಂತೆ ತೋರುವುದು. ಕಲ್ಪನೆಯಲ್ಲಿ ಓಡಾಡುವುದನ್ನು ಕಡಿಮೆ ಮಾಡಿ. ಮಕ್ಕಳಿಂದ ನೀವು ಸ್ವತಂತ್ರರಾಗಲು ಬಯಸುವಿರಿ. ಇಂದು ನಿಮ್ಮ ವೈಯಕ್ತಿಕ ಕೆಲಸಗಳಿಗೆ ತೊಂದರೆ ಬರುವುದು. ಇಲ್ಲದೆ ಸಮಸ್ಯೆಯನ್ನು ಸೃಷ್ಟಿಸಿಕೊಳ್ಳಲಿದ್ದೀರಿ. ನಿಮ್ಮ ಕಾರ್ಯದಲ್ಲಿ ತಪ್ಪುಗಳನ್ನು ಹುಡುಕುವರು.
ಮಿಥುನ ರಾಶಿ: ಇಂದು ನಿಮ್ಮ ಉತ್ಸಾಹಕ್ಕೆ ಯಾರಾದರೂ ಭಂಗ ಮಾಡಬಹುದು. ಹಳೆಯ ಘಟನೆಗಳು ಮತ್ತೆ ಮರುಕಳಿಸಬಹುದು. ಮನಸ್ಸು ಸಂತೋಷದಿಂದ ಕೂಡಿರುತ್ತದೆ. ನಿಮ್ಮ ಆರೋಗ್ಯ ಇಂದು ಉತ್ತಮವಾಗಿರುತ್ತದೆ. ಮಕ್ಕಳಿಂದ ನಿಮಗೆ ಆಗಬೇಕಾದ ಸಹಾಯವು ಆಗಬಹುದು. ನೌಕರರ ವಿಚಾರದಲ್ಲಿ ಗಟ್ಟಿಯಾದ ನಿಲುವು ಅಗತ್ಯ. ಸಂಗಾತಿಯನ್ನು ವಿಧವಾಗಿ ಪರೀಕ್ಷಿಸುವಿರಿ. ನಂಬಿಕೆಯನ್ನು ಕಳೆದುಕೊಳ್ಳಬೇಕಾಗುವುದು. ನಿಮ್ಮಲ್ಲಿ ಎಷ್ಟೇ ಆತ್ಮವಿಶ್ವಾಸವಿದ್ದರೂ ಕೆಲಸಗಳ ಒತ್ತಡದಲ್ಲಿ ಗೊಂದಲದಲ್ಲಿ ಸಿಕ್ಕಿಕೊಳ್ಳುವಿರಿ. ಸ್ಪರ್ಧೆಗಳಿಗೆ ನಿಮ್ಮ ಆಸೆಗಳನ್ನು ಯಾವುದೇ ಪೂರ್ವಾಪರ ವಿಚಾರವಿಲ್ಲದೇ ಪೂರೈಸಿಕೊಳ್ಳುವಿರಿ. ಕುಟುಂಬ ಸದಸ್ಯರ ಮೇಲೆ ವಿನಾಕಾರಣ ಸಿಟ್ಟಾಗುವಿರಿ. ಮಕ್ಕಳ ಮೇಲೇ ಅಕ್ಕರೆ ಇರುವುದು. ನಿಮ್ಮನ್ನು ಸಮಾಜಮುಖಿಯಾಗಿ ಕಾಣುವ ಮನಸ್ಸು ಇರುವುದು.
ಕಟಕ ರಾಶಿ: ಇಂದು ಸಜ್ಜನರ ಸಹವಾಸ ಸಿಗುವ ಸಾಧ್ಯತೆ ಇದೆ. ಬಂಧುಗಳ ಬಗ್ಗೆ ನಿಮಗೆ ಸದ್ಭಾವವು ಕಡಿಮೆ ಆಗಲಿದೆ. ಭೂಮಿಯ ಬಗ್ಗೆ ನಿಮಗೆ ಆಸಕ್ತಿ ಕಡಿಮೆ ಆಗಲಿದೆ. ನಿಶ್ಚಿತ ಕೆಲಸದಲ್ಲಿ ಆಲಸ್ಯದಿಂದ ಇದ್ದು ಎಲ್ಲರಿಂದ ಹೇಳಿಸಿಕೊಳ್ಳಬೇಕಾಗುವುದು. ಯಾರಿಗಾದರೂ ನಿಜವನ್ನು ತಿಳಿಸಬೇಕಾದರೆ ಮನಸ್ಸಿಗೆ ನೋವಾಗದಂತೆ ತಿಳಿಸಿ. ಉಪಕಾರದ ವಿಚಾರದಲ್ಲಿ ನೀವು ಹಿಂದಿರುವಿರಿ. ವೃತ್ತಿಯು ಬೇಸರ ತರಿಸಬಹುದು. ಎಂದೋ ಆದ ಘಟನೆಯನ್ನು ಮತ್ತೆ ನೆನಪಿಸಿಕೊಂಡು ಮನಸ್ತಾಪವನ್ನು ತಂದುಕೊಳ್ಳುವಿರಿ. ಅಶಿಸ್ತಿನಿಂದ ನೀವು ವರ್ತಿಸುವುದು ಕಡಿಮೆ ಆಗಬಹುದು. ಅಧಿಕಾರಿಗಳಿಂದ ಆರ್ಥಿಕತೆಯ ಪರಿಶೀಲನೆ ನಡೆಯುವುದು. ಅಪರಿಚಿತ ವ್ಯಕ್ತಿಗಳ ಜೊತೆ ಯಾವ ವ್ಯವಹಾರವನ್ನು ಕಡಮೆ ಮಾಡಿ. ಯಾರ ಮಾತನ್ನೂ ನಂಬದ ಸ್ಥಿತಿಯನ್ನು ನೀವೇ ತಂದುಕೊಳ್ಳುವಿರಿ. ಹೊಸ ವಸ್ತುಗಳನ್ನು ಖರೀದಿಸಿ ಹಾಳುಮಾಡಿಕೊಳ್ಳುವಿರಿ.
ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ