AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ಈ ರಾಶಿಯವರ ಮಾತು ಮಿತಿಯಲ್ಲಿ ಇರಬೇಕಾಗುವುದು

ಭವಿಷ್ಯದ ಬಗ್ಗೆ ಚಿಂತೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಹೀಗಾಗಿ ಒಂದಷ್ಟು ಮಂದಿ ದಿನಭವಿಷ್ಯ ನೋಡುತ್ತಾರೆ. ಇದರ ಜೊತೆಗೆ ನಿತ್ಯ ಪಂಚಾಂಗವನ್ನೂ ವೀಕ್ಷಿಸುತ್ತಾರೆ. ಹಾಗಿದ್ದರೆ, ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ ಇಂದಿನ (ಜನವರಿ 04) ಭವಿಷ್ಯಹೇಗಿದೆ ಎಂಬುದು ಇಲ್ಲಿದೆ.

Horoscope: ಈ ರಾಶಿಯವರ ಮಾತು ಮಿತಿಯಲ್ಲಿ ಇರಬೇಕಾಗುವುದು
ರಾಶಿ ಭವಿಷ್ಯ
Follow us
ಕಿರಣ್ ಹನುಮಂತ್​ ಮಾದಾರ್
|

Updated on: Jan 04, 2024 | 12:30 AM

ಒಂದಷ್ಟು ಮಂದಿ ಬೆಳಗ್ಗೆ ಎದ್ದ ನಂತರ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ (ಜನವರಿ 04) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಪೂರ್ವಾಷಾಢ, ಮಾಸ: ಮಾರ್ಗಶೀರ್ಷ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಚಿತ್ರಾ, ಯೋಗ: ಅತಿಗಂಡ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 59 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 15 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:02 ರಿಂದ 03:26ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:59 ರಿಂದ 08:24ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:49 ರಿಂದ 11:13ರ ವರೆಗೆ.

ಸಿಂಹ ರಾಶಿ : ಶ್ರಮಕ್ಕೆ ಯೋಗ್ಯವಾದ ಆದಾಯವನ್ನು ನೀವು ಮಾತ್ರ ಪಡೆಯುವಿರಿ. ಆಕಸ್ಮಿಕ ಧನಲಾಭಕ್ಕೆ ಹಿಂದೇಟು ಹಾಕುವಿರಿ. ಮೋಜಿನಲ್ಲಿ ನಿಮ್ಮ ಸಮಯವು ಕಳೆಯುವುದು. ನಿಮ್ಮ ಒತ್ತಡವನ್ನು ಸಹೋದ್ಯೋಗಿಗಳ ಮೇಲೆ‌ಹಾಕಿ ಸ್ವಲ್ಪ ಹಗುರಾಗಬಹುದು. ಉದ್ಯೋಗದ ಕಾರಣಕ್ಕೆ ಪ್ರವಾಸ ಮಾಡಬೇಕಾಗಬಹುದು. ವಿದೇಶದ ಸಂಪರ್ಕವು ವ್ಯಾಪಾರಕ್ಕಾಗಿ ಇರಲಿದೆ. ಅಪಮಾನವನ್ನು ಸಹಿಸಲಾಗದೇ ಎದುರಿಸಲೂ ಆಗದೇ ಹತಾಶೆಗೊಳ್ಳುವಿರಿ. ದುಃಖವನ್ನು ಆಪ್ತರ ಬಳಿ ಮಾತ್ರ ಹಂಚಿಕೊಳ್ಳಿ. ನಿಮ್ಮ ಮಾತಿಗೆ ಕೆಲವರ ಬೆಂಬಲವು ನಿಮಗೆ ಖುಷಿಕೊಡುವುದು. ಶ್ರಮಪಟ್ಟು ಆರಂಭಿಸಿದ ಕಾರ್ಯಗಳು ಪಿತೂರಿಯಿಂದ ಅರ್ಧಕ್ಕೆ ಸ್ಥಗಿತವಾಗಬಹುದು. ನಿಮ್ಮ ದೌರ್ಬಲ್ಯವು ಶತ್ರುಗಳು ಬಳಸಿಕೊಳ್ಳುವರು. ಎಂದೋ ಬಯಸಿದ ವಸ್ತುವುದು ಇಂದು ನಿಮಗೆ ಅನಿರೀಕ್ಷಿತವಾಗಿ ಸಿಗುವುದು. ಸಂಗಾತಿಯ ಆಯ್ಕೆಯಲ್ಲಿ ಗೊಂದಲ ಇರುವುದು.

ಕನ್ಯಾ ರಾಶಿ : ಅಪರಿಚಿತರ ಸಹವಾಸವನ್ನು ಗೊತ್ತಿಲ್ಲದೇ ಮಾಡಬೇಕಾಗಬಹುದು. ಸುಳ್ಳನ್ನು ಸತ್ಯವೆಂದು ನಂಬಿಸುವ ಸಾಹಸಕ್ಕೆ ಹೋಗುವುದು ಬೇಡ. ಆಸ್ತಿಯ ದಾಖಲೆಗಳು ಕಾಣದೇ ಆತಂಕ ಉಂಟಾಗಬಹುದು. ಮಿತಿಯಲ್ಲಿ ನಿಮ್ಮ ಮಾತು ಇರಬೇಕಾಗುವುದು. ಸತ್ಯವನ್ನು ಮರೆಮಾಚಲು ತಂತ್ರವನ್ನು ಹೆಣೆಯಬಹುದು. ಮಕ್ಕಳು ನಿಮ್ಮ ಪ್ರತಿ ಬದಲಾವಣೆಯನ್ನೂ ಗಮನಿಸುವರು. ನಿಮ್ಮ ಜಾಣ್ಮೆಯಿಂದ ಆದಾಯವನ್ನು ಅಧಿಕ ಮಾಡಿಕೊಳ್ಳುವಿರಿ. ವಿದೇಶೀಯ ವಸ್ತುಗಳ ಬಳಕೆಯನ್ನು ಮಾಡುವುದು ಕಾರಣಾಂತರಗಳಿಂದ ಇಷ್ಟವಾಗದು. ನಿಮ್ಮ ಅಸಹಾಯಕತೆಯನ್ನು ಮನೆಯವರ ಮುಂದೆ ಹೇಳಿಕೊಳ್ಳುವಿರಿ. ಬಂಧುಗಳ ಜೊತೆ ನಿಮ್ಮ ಬಾಂಧವ್ಯವು ಗಟ್ಟಿಯಾಗಿ ಇರುವುದು. ನಿಮ್ಮ ಆದಾಯಕ್ಕೆ ತಕ್ಕಂತೆ ಜೀವನವಿರಲಿದೆ. ನೀವೇ ಆಶ್ಚರ್ಯವಾಗುವಂತೆ ಆಕರ್ಷಕವಾಗಿ‌ ನೀವು ಇಂದು ಕಾಣಲಿದ್ದೀರಿ.

ತುಲಾ ರಾಶಿ : ಆಕಸ್ಮಿಕವಾಗಿ ತಿರುವುಗಳು ಬರಬಹುದು. ಹೆದರದೇ ಮುನ್ನಡೆಯಿರಿ. ದೇವರ ಇಚ್ಛೆಯಂತೆ ಎಲ್ಲವೂ ಆಗುತ್ತದೆ ಎಂಬ ದಾರ್ಢ್ಯತೆಯು ನಿಮ್ಮ ಎಲ್ಲ ಕೆಲಸಕ್ಕೂ ಬಲವನ್ನು ಕೊಡುವುದು. ಉನ್ನತ ಮಟ್ಟದ ಕಾರ್ಯಕ್ಕೆ ಪರಿಚಿತರ ಬೆಂಬಲವನ್ನು ಪಡೆಯುವಿರಿ. ಕೆಲವನ್ನು ನೀವು ಬುದ್ಧಿಪೂರ್ವಕವಾಗಿ ಮಾಡುವಿರಿ. ಮನೋವಿಕಾರವನ್ನು ಕಡಿಮೆ‌ ಮಾಡಿಕೊಳ್ಳಿ. ಕುಟುಂಬದಲ್ಲಿ ನಡೆಯುವ ಕಾರ್ಯಗಳಿಗೆ ನಿಮ್ಮಿಂದ ಹೆಚ್ಚಿನ ಹಣ ಖರ್ಚು ಮಾಡುವ ಸನ್ನಿವೇಶವು ಬರಬಹುದು. ಕೃಷಿಯ ಉತ್ಪನ್ನಗಳನ್ನು ಸೂಕ್ತ ಸ್ಥಳದಲ್ಲಿ ಸಮಯದಲ್ಲಿ ಮಾರಾಟ ಮಾಡಿ ಆದಾಯವನ್ನು ಹೆಚ್ಚಿಸಿಕೊಳ್ಳುವಿರಿ. ಹೂಡಿಕೆಯಲ್ಲಿ ಉತ್ಸಾಹವಿರುವ ನೀವು ವಿವೇಚನೆಯಿಂದ ಮುಂದುವರಿಯುವಿರಿ. ಎಲ್ಲ ಕೆಲಸಕ್ಕೂ ಬೇರೆಯವರನ್ನು ಅವಲಂಬಿಸಿ ಆರ್ಥಿಕ ನಷ್ಟವನ್ನು ಕಾಣಬೇಕಾಗಬಹುದು. ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಯಾರಿಗೂ ಬಿಡುವುದಿಲ್ಲ. ನಿಮ್ಮ ಸಹಕಾರವನ್ನು ಬಂಧುಗಳು ಮರೆಯಬಹುದು.

ವೃಶ್ಚಿಕ ರಾಶಿ : ಪ್ರಮದ ಕಾರಣ ಇಂದಿನ ಉದ್ಯಮವನ್ನು ಯೋಗ್ಯ ರೀತಿಯಿಂದ ನಿಭಾಯಿಸಲಾಗದು. ಉದ್ಯೋಗಕ್ಕೆ ಸಂಬಂಧಿಸಿದಂತೆ ದೇವತೋಪಾಸನೆಯನ್ನು ಮಾಡುವುದು ಅನಿವಾರ್ಯವಾದೀತು. ಹೇಳಿಕೊಳ್ಳುವಷ್ಟು ಆದಾಯವಿಲ್ಲದಿದ್ದರೂ ಅಹಂಕಾರಕ್ಕೇನು ಕೊರತೆ ಇರದು. ನಿಮ್ಮ ಮಾತಿನಿಂದ‌ ಶತ್ರುಗಳು ಹುಟ್ಟಿಕೊಳ್ಳಬಹುದು. ಮೇಲಿಂದ‌ ಮೇಲೆ‌ ಬರುತ್ತಿರುವ ಆರೋಗ್ಯದ ತೊಂದರೆಯು ನಿಮಗೆ ಅಸತಂಕವನ್ನು ಉಂಟುಮಾಡಬಹುದು. ಕಛೇರಿಯಲ್ಲಿ ಎಲ್ಲರ ಜೊತೆ ಒಂದಿಲ್ಲೊಂದು ವಿಚಾರಕ್ಕೆ ಕಿರಿಕ್ ಮಾಡಿಕೊಳ್ಳುವಿರಿ. ನಿಮ್ಮ ಕಾರ್ಯದಲ್ಲಿ ತಾಳ್ಮೆಯು ಅಗತ್ಯವಾಗಿ ಬೇಕಾಗುವುದು. ಶತ್ರುವನ್ನು ಉಪಾಯದಿಂದ ಗೆಲ್ಲುವ ತಂತ್ರ ಬಳಸಿ. ಅಳತೆಯನ್ನು ಅರಿತು ವ್ಯವಹರಿಸುವುದು ಎಲ್ಲ ದೃಷ್ಟಿಯಿಂದ ಉತ್ತಮ. ನಿಧಾನವಾಗಿ ವರ್ಧಿಸುತ್ತಿರುವ ಆದಾಯದಿಂದ ನಿಮ್ಮ ಆರ್ಥಿಕ ಪರಿಸ್ಥಿತಿಯು ಸುಧಾರಿಸುವುದು. ವಿದ್ಯಾರ್ಥಿಗಳು ತಮಗೆ ಬರುವ ಸೌಲಭ್ಯವನ್ನು ಸದುಪಯೋಗ ಮಾಡಿಕೊಳ್ಳಬಹುದು.