Horoscope 04 Jan: ಅದೃಷ್ಟವನ್ನು ನಂಬಿ ಸುಮ್ಮನೆ ಕುಳಿತರೆ ಪ್ರಯೋಜನವಾಗದು, ಕಾರ್ಯೋನ್ಮುಖರಾಗಿ
ತಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳಲು ಹಲವರು ದಿನದಿಂದ ರಾಶಿಭವಿಷ್ಯವನ್ನು ಓದುತ್ತಾರೆ. ಒಂದಷ್ಟು ಮಂದಿ ಯಾವುದೇ ಕಾರ್ಯವನ್ನು ಪ್ರಾರಂಭಿಸಬೇಕಾದರೆ ಇಂದಿನ ದಿನ ಹೇಗಿದೆ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಇದರ ಜೊತೆಗೆ ನಿತ್ಯಪಂಚಾಂಗವನ್ನೂ ನೋಡುತ್ತಾರೆ. ಹಾಗಿದ್ದರೆ, ಇಂದಿನ ಶುಭಾಶುಭಕಾಲ ಹೇಗಿದೆ? 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ಈ ಕೆಳಗಿನಂತಿದೆ.
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಜನವರಿ 04) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಪೂರ್ವಾಷಾಢ, ಮಾಸ: ಮಾರ್ಗಶೀರ್ಷ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಚಿತ್ರಾ, ಯೋಗ: ಅತಿಗಂಡ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 59 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 15 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:02 ರಿಂದ 03:26ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:59 ರಿಂದ 08:24ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:49 ರಿಂದ 11:13ರ ವರೆಗೆ.
ಮೇಷ ರಾಶಿ: ನಿಮ್ಮ ಮನಸ್ಸಿನ ಮಾತನ್ನು ಕೇಳದೇ ಬುದ್ಧಿಯಿಂದ ಸರಿಯಾದ ತೀರ್ಮಾನವನ್ನು ಮಾಡಿ. ಆಗಿಹೋದ ಸಾಮಾಜಿಕ ಕಾರ್ಯಗಳಿಗೆ ಪ್ರಶಂಸೆ ಬರಬಹುದು. ಆದಾಯಕ್ಕೆ ಮೂಲವಾದುದನ್ನು ಹುಡುಕಿಕೊಳ್ಳುವುದು ಭವಿಷ್ಯ ದೃಷ್ಟಿಯಿಂದ ಉತ್ತಮ. ಇಷ್ಟಪಟ್ಟವರ ಜೊತೆ ಸಮಯವನ್ನು ಕಳೆಯುವುದು ಕಷ್ಟವಾಗಬಹುದು. ಆದಾಯದ ಮೂಲದಿಂದ ನಿಮಗೆ ನೆಮ್ಮದಿ ಸಿಗುವುದು. ದೂರಪ್ರಯಾಣವನ್ನು ಇಂದು ಇಷ್ಟಪಡುವಿರಿ. ಶತ್ರುಗಳ ಅನ್ಯಾಯಕ್ಕೆ ಸಾಕ್ಷಿಯು ಸಿಗಬಹುದು. ನಕಾರಾತ್ಮಕತೆಯನ್ನು ಬುದ್ಧಿಪೂರ್ವಕವಾಗಿ ಹಿಮ್ಮೆಟ್ಟಿಸಿ. ನಿಮ್ಮ ಮನೋಬಲವು ಹೆಚ್ಚಾಗಿ ಉತ್ಸಾಹದಿಂದ ಇರುವಿರಿ. ಇನ್ನೊಬ್ಬರ ಅನುಭವವನ್ನು ನೀವು ಪಾಠವಾಗಿಸಿಕೊಳ್ಳಿ. ನಿಮ್ಮ ತಾಳ್ಮೆಯನ್ನು ಪರೀಕ್ಷಿಸಲು ಸಂದರ್ಭವು ಬರಬಹುದು.
ವೃಷಭ ರಾಶಿ: ಅದೃಷ್ಟವನ್ನು ನಂಬಿ ಸುಮ್ಮನೆ ಕುಳಿತರೆ ಪ್ರಯೋಜನವಾಗದು. ಕಾರ್ಯೋನ್ಮುಖರಾಗುವ ಅವಶ್ಯಕತೆ ಬಹಳ ಇರಲಿದೆ. ನಿರುದ್ಯೋಗಿಗಳು ಮಾನಸಿಕ ಖಿನ್ನತೆಯನ್ನು ಅನುಭವಿಸಬೇಕಾಗಬಹುದು. ಜೀವನೋತ್ಸಾಹಕ್ಕೆ ನಿಮ್ಮದಾದ ಚಿಂತನೆಗಳು ಇರಲಿ. ಸತ್ಪಾತ್ರರಿಗೆ ಸುವಸ್ತುವನ್ನು ದಾನ ಕೊಡಲು ಇಚ್ಛಿಸುವಿರಿ. ಕೆಲವೊಮ್ಮೆ ನಿಮ್ಮ ಸ್ವಭಾವವು ನಾಟಕೀಯದಂತೆ ತೋರುವುದು. ಕಲ್ಪನೆಯಲ್ಲಿ ಓಡಾಡುವುದನ್ನು ಕಡಿಮೆ ಮಾಡಿ. ಮಕ್ಕಳಿಂದ ನೀವು ಸ್ವತಂತ್ರರಾಗಲು ಬಯಸುವಿರಿ. ಇಂದು ನಿಮ್ಮ ವೈಯಕ್ತಿಕ ಕೆಲಸಗಳಿಗೆ ತೊಂದರೆ ಬರುವುದು. ಇಲ್ಲದೆ ಸಮಸ್ಯೆಯನ್ನು ಸೃಷ್ಟಿಸಿಕೊಳ್ಳಲಿದ್ದೀರಿ. ಭೂಮಿಯ ವ್ಯವಹಾರದಲ್ಲಿ ನೀವು ಜಯಶಾಲಿಯಾಗುವಿರಿ. ಒಬ್ಬರ ಬಳಿಯೇ ಎಲ್ಲವನ್ನೂ ಹೇಳಿಕೊಳ್ಳಿ. ಯಾರದೋ ಮಾತಿನಿಂದ ಹೂಡಿಕೆ ಮಾಡುವಿರಿ. ಹೃದ್ಯವಾದ ವಿಚಾರಗಳ ಕಡೆ ಗಮನವಿರಲಿ.
ಮಿಥುನ ರಾಶಿ: ಮಕ್ಕಳ ವಿವಾಹಕ್ಕೆ ಕುಟುಂಬದ ಹಿನ್ನೆಲೆಯಲ್ಲಿ ತಿಳಿದುಕೊಳ್ಳಲು ಆಸಕ್ತಿಯು ಇರುವುದು. ಮಕ್ಕಳಿಂದ ನಿಮಗೆ ಆಗಬೇಕಾದ ಸಹಾಯವು ಆಗಬಹುದು. ನೌಕರರ ವಿಚಾರದಲ್ಲಿ ಗಟ್ಟಿಯಾದ ನಿಲುವು ಅಗತ್ಯ. ಸಂಗಾತಿಯನ್ನು ವಿಧವಾಗಿ ಪರೀಕ್ಷಿಸುವಿರಿ. ಸುಮ್ಮನೇ ದೇಹಾಯಾಸವನ್ನು ಮಾಡಿಕೊಳ್ಳುವಿರಿ. ನೆರೆಯವರ ಜೊತೆ ಕಲಹವು ಬೇಡ. ನಂಬಿಕೆಯನ್ನು ಕಳೆದುಕೊಳ್ಳಬೇಕಾಗುವುದು. ನಿಮ್ಮಲ್ಲಿ ಎಷ್ಟೇ ಆತ್ಮವಿಶ್ವಾಸವಿದ್ದರೂ ಕೆಲಸಗಳ ಒತ್ತಡದಲ್ಲಿ ಗೊಂದಲದಲ್ಲಿ ಸಿಕ್ಕಿಕೊಳ್ಳುವಿರಿ. ನಿಮ್ಮ ಆಸೆಗಳನ್ನು ಯಾವುದೇ ಪೂರ್ವಾಪರ ವಿಚಾರವಿಲ್ಲದೇ ಪೂರೈಸಿಕೊಳ್ಳುವಿರಿ. ಕುಟುಂಬ ಸದಸ್ಯರ ಮೇಲೆ ವಿನಾಕಾರಣ ಸಿಟ್ಟಾಗುವಿರಿ. ಮಕ್ಕಳ ಮೇಲೇ ಅಕ್ಕರೆ ಇರುವುದು. ಹೇಗಾದರೂ ಮಾಡಿ ಬೆಳೆಯಬೇಕು ಎನ್ನುವ ಬಯಕೆ ಅತಿಯಾಗಿರುವುದು. ಅಸಹಾಯಕತೆಯು ಸಿಟ್ಟಾಗಿ ಪರಿಣಮಿಸಬಹುದು. ಮಕ್ಕಳ ವಿದ್ಯಾಭ್ಯಾಸದಿಂದ ನಿಮಗೆ ಸಂತೃಪ್ತಿ ಸಿಗುವುದು.
ಕಟಕ ರಾಶಿ: ಇಂದು ನಿಮ್ಮ ಸಮಯವನ್ನಷ್ಟೇ ಅಲ್ಲದೇ ಇತರರ ಸಮಯವನ್ನೂ ಹಾಳುಮಾಡುವಿರಿ. ನಿಶ್ಚಿತ ಕೆಲಸದಲ್ಲಿ ಆಲಸ್ಯದಿಂದ ಇದ್ದು ಎಲ್ಲರಿಂದ ಹೇಳಿಸಿಕೊಳ್ಳಬೇಕಾಗುವುದು. ಯಾರಿಗಾದರೂ ನಿಜವನ್ನು ತಿಳಿಸಬೇಕಾದರೆ ಮನಸ್ಸಿಗೆ ನೋವಾಗದಂತೆ ತಿಳಿಸಿ. ಉಪಕಾರದ ವಿಚಾರದಲ್ಲಿ ನೀವು ಹಿಂದಿರುವಿರಿ. ವೃತ್ತಿಯು ಬೇಸರ ತರಿಸಬಹುದು. ಇಂದು ಸರ್ಕಾರಿ ನೌಕರರು ಅಧಿಕ ಕಾರ್ಯಗಳ ಕಡೆ ಗಮನ ಹರಿಸಬೇಕಾದೀತು. ಎಂದೋ ಆದ ಘಟನೆಯನ್ನು ಮತ್ತೆ ನೆನಪಿಸಿಕೊಂಡು ಮನಸ್ತಾಪವನ್ನು ತಂದುಕೊಳ್ಳುವಿರಿ. ಅಧಿಕಾರಿಗಳಿಂದ ಆರ್ಥಿಕತೆಯ ಪರಿಶೀಲನೆ ನಡೆಯುವುದು. ಅಪರಿಚಿತ ವ್ಯಕ್ತಿಗಳ ಜೊತೆ ಯಾವ ವ್ಯವಹಾರವನ್ನು ಕಡಮೆ ಮಾಡಿ. ಯಾರ ಮಾತನ್ನೂ ನಂಬದ ಸ್ಥಿತಿಯನ್ನು ನೀವೇ ತಂದುಕೊಳ್ಳುವಿರಿ. ಹೊಸ ಉದ್ಯಮವನ್ನು ಆರಂಭಿಸಲು ನಿಮಗೆ ಧೈರ್ಯ ಸಾಲದು.
ಸಿಂಹ ರಾಶಿ: ಶ್ರಮಕ್ಕೆ ಯೋಗ್ಯವಾದ ಆದಾಯವನ್ನು ನೀವು ಮಾತ್ರ ಪಡೆಯುವಿರಿ. ಆಕಸ್ಮಿಕ ಧನಲಾಭಕ್ಕೆ ಹಿಂದೇಟು ಹಾಕುವಿರಿ. ಮೋಜಿನಲ್ಲಿ ನಿಮ್ಮ ಸಮಯವು ಕಳೆಯುವುದು. ನಿಮ್ಮ ಒತ್ತಡವನ್ನು ಸಹೋದ್ಯೋಗಿಗಳ ಮೇಲೆಹಾಕಿ ಸ್ವಲ್ಪ ಹಗುರಾಗಬಹುದು. ಉದ್ಯೋಗದ ಕಾರಣಕ್ಕೆ ಪ್ರವಾಸ ಮಾಡಬೇಕಾಗಬಹುದು. ವಿದೇಶದ ಸಂಪರ್ಕವು ವ್ಯಾಪಾರಕ್ಕಾಗಿ ಇರಲಿದೆ. ಅಪಮಾನವನ್ನು ಸಹಿಸಲಾಗದೇ ಎದುರಿಸಲೂ ಆಗದೇ ಹತಾಶೆಗೊಳ್ಳುವಿರಿ. ದುಃಖವನ್ನು ಆಪ್ತರ ಬಳಿ ಮಾತ್ರ ಹಂಚಿಕೊಳ್ಳಿ. ನಿಮ್ಮ ಮಾತಿಗೆ ಕೆಲವರ ಬೆಂಬಲವು ನಿಮಗೆ ಖುಷಿಕೊಡುವುದು. ಶ್ರಮಪಟ್ಟು ಆರಂಭಿಸಿದ ಕಾರ್ಯಗಳು ಪಿತೂರಿಯಿಂದ ಅರ್ಧಕ್ಕೆ ಸ್ಥಗಿತವಾಗಬಹುದು. ನಿಮ್ಮ ದೌರ್ಬಲ್ಯವು ಶತ್ರುಗಳು ಬಳಸಿಕೊಳ್ಳುವರು. ಎಂದೋ ಬಯಸಿದ ವಸ್ತುವುದು ಇಂದು ನಿಮಗೆ ಅನಿರೀಕ್ಷಿತವಾಗಿ ಸಿಗುವುದು. ಸಂಗಾತಿಯ ಆಯ್ಕೆಯಲ್ಲಿ ಗೊಂದಲ ಇರುವುದು.
ಕನ್ಯಾ ರಾಶಿ: ಅಪರಿಚಿತರ ಸಹವಾಸವನ್ನು ಗೊತ್ತಿಲ್ಲದೇ ಮಾಡಬೇಕಾಗಬಹುದು. ಸುಳ್ಳನ್ನು ಸತ್ಯವೆಂದು ನಂಬಿಸುವ ಸಾಹಸಕ್ಕೆ ಹೋಗುವುದು ಬೇಡ. ಆಸ್ತಿಯ ದಾಖಲೆಗಳು ಕಾಣದೇ ಆತಂಕ ಉಂಟಾಗಬಹುದು. ಮಿತಿಯಲ್ಲಿ ನಿಮ್ಮ ಮಾತು ಇರಬೇಕಾಗುವುದು. ಸತ್ಯವನ್ನು ಮರೆಮಾಚಲು ತಂತ್ರವನ್ನು ಹೆಣೆಯಬಹುದು. ಮಕ್ಕಳು ನಿಮ್ಮ ಪ್ರತಿ ಬದಲಾವಣೆಯನ್ನೂ ಗಮನಿಸುವರು. ನಿಮ್ಮ ಜಾಣ್ಮೆಯಿಂದ ಆದಾಯವನ್ನು ಅಧಿಕ ಮಾಡಿಕೊಳ್ಳುವಿರಿ. ವಿದೇಶೀಯ ವಸ್ತುಗಳ ಬಳಕೆಯನ್ನು ಮಾಡುವುದು ಕಾರಣಾಂತರಗಳಿಂದ ಇಷ್ಟವಾಗದು. ನಿಮ್ಮ ಅಸಹಾಯಕತೆಯನ್ನು ಮನೆಯವರ ಮುಂದೆ ಹೇಳಿಕೊಳ್ಳುವಿರಿ. ಬಂಧುಗಳ ಜೊತೆ ನಿಮ್ಮ ಬಾಂಧವ್ಯವು ಗಟ್ಟಿಯಾಗಿ ಇರುವುದು. ನಿಮ್ಮ ಆದಾಯಕ್ಕೆ ತಕ್ಕಂತೆ ಜೀವನವಿರಲಿದೆ. ನೀವೇ ಆಶ್ಚರ್ಯವಾಗುವಂತೆ ಆಕರ್ಷಕವಾಗಿ ನೀವು ಇಂದು ಕಾಣಲಿದ್ದೀರಿ.
ತುಲಾ ರಾಶಿ: ಆಕಸ್ಮಿಕವಾಗಿ ತಿರುವುಗಳು ಬರಬಹುದು. ಹೆದರದೇ ಮುನ್ನಡೆಯಿರಿ. ದೇವರ ಇಚ್ಛೆಯಂತೆ ಎಲ್ಲವೂ ಆಗುತ್ತದೆ ಎಂಬ ದಾರ್ಢ್ಯತೆಯು ನಿಮ್ಮ ಎಲ್ಲ ಕೆಲಸಕ್ಕೂ ಬಲವನ್ನು ಕೊಡುವುದು. ಉನ್ನತ ಮಟ್ಟದ ಕಾರ್ಯಕ್ಕೆ ಪರಿಚಿತರ ಬೆಂಬಲವನ್ನು ಪಡೆಯುವಿರಿ. ಕೆಲವನ್ನು ನೀವು ಬುದ್ಧಿಪೂರ್ವಕವಾಗಿ ಮಾಡುವಿರಿ. ಮನೋವಿಕಾರವನ್ನು ಕಡಿಮೆ ಮಾಡಿಕೊಳ್ಳಿ. ಕುಟುಂಬದಲ್ಲಿ ನಡೆಯುವ ಕಾರ್ಯಗಳಿಗೆ ನಿಮ್ಮಿಂದ ಹೆಚ್ಚಿನ ಹಣ ಖರ್ಚು ಮಾಡುವ ಸನ್ನಿವೇಶವು ಬರಬಹುದು. ಕೃಷಿಯ ಉತ್ಪನ್ನಗಳನ್ನು ಸೂಕ್ತ ಸ್ಥಳದಲ್ಲಿ ಸಮಯದಲ್ಲಿ ಮಾರಾಟ ಮಾಡಿ ಆದಾಯವನ್ನು ಹೆಚ್ಚಿಸಿಕೊಳ್ಳುವಿರಿ. ಹೂಡಿಕೆಯಲ್ಲಿ ಉತ್ಸಾಹವಿರುವ ನೀವು ವಿವೇಚನೆಯಿಂದ ಮುಂದುವರಿಯುವಿರಿ. ಎಲ್ಲ ಕೆಲಸಕ್ಕೂ ಬೇರೆಯವರನ್ನು ಅವಲಂಬಿಸಿ ಆರ್ಥಿಕ ನಷ್ಟವನ್ನು ಕಾಣಬೇಕಾಗಬಹುದು. ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಯಾರಿಗೂ ಬಿಡುವುದಿಲ್ಲ. ನಿಮ್ಮ ಸಹಕಾರವನ್ನು ಬಂಧುಗಳು ಮರೆಯಬಹುದು.
ವೃಶ್ಚಿಕ ರಾಶಿ: ಪ್ರಮದ ಕಾರಣ ಇಂದಿನ ಉದ್ಯಮವನ್ನು ಯೋಗ್ಯ ರೀತಿಯಿಂದ ನಿಭಾಯಿಸಲಾಗದು. ಉದ್ಯೋಗಕ್ಕೆ ಸಂಬಂಧಿಸಿದಂತೆ ದೇವತೋಪಾಸನೆಯನ್ನು ಮಾಡುವುದು ಅನಿವಾರ್ಯವಾದೀತು. ಹೇಳಿಕೊಳ್ಳುವಷ್ಟು ಆದಾಯವಿಲ್ಲದಿದ್ದರೂ ಅಹಂಕಾರಕ್ಕೇನು ಕೊರತೆ ಇರದು. ನಿಮ್ಮ ಮಾತಿನಿಂದ ಶತ್ರುಗಳು ಹುಟ್ಟಿಕೊಳ್ಳಬಹುದು. ಮೇಲಿಂದ ಮೇಲೆ ಬರುತ್ತಿರುವ ಆರೋಗ್ಯದ ತೊಂದರೆಯು ನಿಮಗೆ ಅಸತಂಕವನ್ನು ಉಂಟುಮಾಡಬಹುದು. ಕಛೇರಿಯಲ್ಲಿ ಎಲ್ಲರ ಜೊತೆ ಒಂದಿಲ್ಲೊಂದು ವಿಚಾರಕ್ಕೆ ಕಿರಿಕ್ ಮಾಡಿಕೊಳ್ಳುವಿರಿ. ನಿಮ್ಮ ಕಾರ್ಯದಲ್ಲಿ ತಾಳ್ಮೆಯು ಅಗತ್ಯವಾಗಿ ಬೇಕಾಗುವುದು. ಶತ್ರುವನ್ನು ಉಪಾಯದಿಂದ ಗೆಲ್ಲುವ ತಂತ್ರ ಬಳಸಿ. ಅಳತೆಯನ್ನು ಅರಿತು ವ್ಯವಹರಿಸುವುದು ಎಲ್ಲ ದೃಷ್ಟಿಯಿಂದ ಉತ್ತಮ. ನಿಧಾನವಾಗಿ ವರ್ಧಿಸುತ್ತಿರುವ ಆದಾಯದಿಂದ ನಿಮ್ಮ ಆರ್ಥಿಕ ಪರಿಸ್ಥಿತಿಯು ಸುಧಾರಿಸುವುದು. ವಿದ್ಯಾರ್ಥಿಗಳು ತಮಗೆ ಬರುವ ಸೌಲಭ್ಯವನ್ನು ಸದುಪಯೋಗ ಮಾಡಿಕೊಳ್ಳಬಹುದು.
ಧನು ರಾಶಿ: ಹೂಡಿಕೆಯನ್ನು ನೀವು ಒತ್ತಾಯದಿಂದ ಮಾಡಿದರೂ ಅದರ ಫಲದಿಂದ ಸಂತೋಷವಂತೂ ಸಿಗಲಿದೆ. ಭೂಮಿಯ ವ್ಯವಹಾರವು ಪೂರ್ಣವಾಗಿ ಗೊತ್ತಾಗಲು ಸಮಯವನ್ನು ತೆಗೆಸುಕೊಳ್ಳುವಿರಿ. ಸ್ನೇಹಿತರ ನಿರೀಕ್ಷೆಯಲ್ಲಿ ಹೆಚ್ಚಿನ ಸಮಯವು ಕಳೆದುಹೋಗುವುದು. ಅಪರಿಚಿತರ ಮೂಲಕ ನಿಮ್ಮ ಹಣವನ್ನು ಕಳೆದುಕೊಳ್ಳಲಿದ್ದೀರಿ. ವೃತ್ತಿಯಲ್ಲಿ ನಿಮಗೆ ವಿರಾಮವು ಇಂದು ಸಿಗದೇ ನಿಮ್ಮ ಸ್ವಂತ ಕಾರ್ಯವನ್ನು ಕೈ ಬಿಡಬೇಕಾಗುವುದು. ಒಪ್ಪಿಕೊಂಡ ಕೆಲಸದಲ್ಲಿ ಯಶಸ್ಸು ಸಾಧಿಸುವುದು ಆಗದು. ಸಂಗಾತಿಯ ಬೆಂಬಲವು ನಿಮ್ಮ ಕಾರ್ಯಗಳಿಗೆ ಸಿಗಲಿದೆ. ಅಗತ್ಯವಿದ್ದಾಗ ಮಾತ್ರ ಸಾಲದ ಬಗ್ಗೆ ಆಲೋಚಿಸಿ. ಸರ್ಕಾರಿ ಉದ್ಯೋಗದವರು ವರ್ಗಾವಣೆಯಿಂದ ದೂರವಿರಬೇಕಾಗಬಹುದು. ಗೃಹ ನಿರ್ಮಾಣದ ಕಾರ್ಯವನ್ನು ಕೆಲವು ದಿನ ಮುಂದೂಡುವುದು ಉತ್ತಮ. ಹಣದ ಕೊರೆತೆ ಇಲ್ಲದಿದ್ದರೂ ಹಳೆಯ ಮನೆಯನ್ನೇ ಅವಶ್ಯಕತೆಗೆ ಸರಿಯಾಗಿ ಗಟ್ಟಿ ಮಾಡಿಕೊಳ್ಳಿ.
ಮಕರ ರಾಶಿ: ನಿಮ್ಮ ಇಷ್ಟದ ಕ್ಷೇತ್ರದಲ್ಲಿ ಅನ್ಯರ ಆಗಮನವು, ಸಲಹೆಯನ್ನು ಕೊಡುವುದು ಇಷ್ಟವಾಗದು. ಅಚ್ಚುಕಟ್ಟಾದ ಕಾರ್ಯಕ್ಕೆ ಪ್ರಸಿದ್ಧಿ ಸಿಗುವುದು. ಸಂಗಾತಿಯ ಸಂಪತ್ತಿನಿಂದ ನಿಮಗೆ ಬೇಕಾದುದನ್ನು ಪಡೆಯುವಿರಿ. ಅತಿಯಾದ ಬಾಯಾರಿಕೆ ಆಗಬಹುದು. ಯಾರ ಮಾತನ್ನು ಒಪ್ಪಿಕೊಳ್ಳದೇ ನಿಮ್ಮದೇ ಆದ ದಾರಿಯಲ್ಲಿ ನಡೆಯುವಿರಿ. ಕಛೇರಿಯ ಕೆಲಸದಲ್ಲಿ ನಿಮ್ಮ ಮಧ್ಯೆ ಅನಗತ್ಯರ ಪ್ರವೇಶದಿಂದ ಕೋಪಗೊಳ್ಳುವಿರಿ. ಅಲ್ಪ ಆದಾಯದಲ್ಲಿ ತೃಪ್ತಿ ಹೊಂದಬೇಕಾದೀತು. ಹೆಚ್ಚಿನ ಆದಾಯದಿಂದ ದುರಭ್ಯಾಸವು ಹೆಚ್ಚಾಗಬಹುದು. ಶಿಕ್ಷಕರು ವೇತನವನ್ನು ಹೆಚ್ಚಿಸಿಕೊಳ್ಳುವರು. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದು ಉತ್ತಮ. ವಿದ್ಯಾರ್ಥಿಗಳ ಉತ್ಸಾಹವನ್ನು ಕುಗ್ಗಸುವುದು ಬೇಡ. ಸರಿಯಾದ ಮಾರ್ಗವನ್ನು ತೋರಿಸಿ. ನಿಮ್ಮ ಮಕ್ಕಳ ವರ್ತನೆಯಿಂದ ಬೇಸರ ಆಗುವುದು. ಬೇರೆಯವರಿಂದ ದೂರನ್ನೂ ಕೇಳಬೇಕಾದೀತು. ವಿಚಲಿತವಾಗದೇ ತಾಳ್ಮೆಯಿಂದ ವ್ಯವಹರಿಸಿ.
ಕುಂಭ ರಾಶಿ: ಮಕ್ಕಳಿಗೆ ಬೇಕಾದ ವ್ಯವಸ್ಥೆಯನ್ನು ಮಾಡುವ ಹೊರೆಯನ್ನು ಹೊತ್ತು ಓಡಾಟಮಾಡುವಿರಿ. ಬಾಯಿಯ ಚಪಲಕ್ಕೆ ವಿರುದ್ಧ ಆಹಾರವನ್ನು ತಿಂದು ಹೊಟ್ಟೆಯನ್ನು ಹಾಳುಮಾಡಿಕೊಳ್ಳಬೇಕಾಗುವುದು. ಕೆಲಸದ ಸ್ಥಳದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗಲಿದೆ. ಆರೋಗ್ಯದ ಬಗ್ಗೆ ಎಚ್ಚರವಹಿಸಿ. ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲಕರವಿದ್ದರೂ ಅದನ್ನು ಬಳಸಿಕೊಳ್ಳುವ ಜಾಣತನವೂ ಅಗತ್ಯವಿದೆ. ಶುಭ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶಗಳಿದ್ದರೂ ಕಾರ್ಯದ ಒತ್ತಡದಿಂದ ಸಾಧ್ಯವಾಗದು. ನಿಮ್ಮ ಬದುಕಿನ ಬದಲಾವಣೆಯನ್ನು ಅನಿವಾರ್ಯವಾಗಿ ಮಾಡಿಕೊಳ್ಳಬೇಕಾಗಬಹುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗುವುದು. ಸಹೋದ್ಯೋಗಿಗಳಿಗೆ ಸಹಕರಿಸುವ ಮನಸ್ಸಾಗುವುದು. ಮೋಜಿನ ಕಾರಣಕ್ಕೆ ಸುತ್ತಾಟ ಮಾಡುವಿರಿ. ಬಂಧುಗಳ ಜೊತೆ ಅನಗತ್ಯ ವಾಗ್ವಾದ ಬೇಡ. ನಿಮ್ಮ ಮೇಲಿನ ಪ್ರೀತಿ ಕಡಿಮೆ ಆಗುವುದು. ಯಾವುದೂ ಬೇಡವೆನ್ನುವ ಭಾವವು ಇರುವುದು.
ಮೀನ ರಾಶಿ: ಇಂದಿನ ನಿಮ್ಮ ವ್ಯಾಪಾರವು ಬಹಳ ಶಿಸ್ತುಬದ್ಧವಾಗಿರಲಿದ್ದು, ಹಣದ ಹರಿವೂ ನಿಮಗೆ ಎಣಿಸಿದಂತೆ ಇರಲಿದೆ. ಹಳೆಯ ದಾಂಪತ್ಯವಾದರೂ ಸಂತೋಷಕ್ಕೆ ಕೊರತೆ ಇಲ್ಲದಂತೆ ಇರುವಿರಿ. ಸಾಮಾಜಿಕ ಕಾರ್ಯಕ್ಕೆ ನಿಮ್ಮ ಕೊಡುಗೆಯನ್ನು ನೀಡುವಿರಿ. ಕಛೇರಿಯ ಕೆಲಸಗಳನ್ನು ವೇಗವಾಗಿ ಮಾಡಿ ಜವಾಬ್ದಾರಿಯನ್ನು ಮುಗಿಸುವಿರಿ. ಕೆಲವು ಸಂಗತಿಗಳನ್ನು ನಿರೀಕ್ಷಿಸದೇ ಬರಬಹುದು. ನಿಮ್ಮನ್ನು ಕೆಲವರು ಅನಾದರ ಮಾಡಿದಂತೆ ಕಾಣಿಸೀತು. ಖಾಸಗಿ ಸಂಸ್ಥೆಯಲ್ಲಿ ಇರುವವರಿಗೆ ವೇತನವು ಹೆಚ್ಚಾಗಬಹುದು. ನೀವು ವರ್ಗಾವಣೆಗೆ ಒತ್ತಡವನ್ನು ತರುವಿರಿ. ಅಸಮಯದ ಆಹಾರವು ನಿಮಗೆ ಅಭ್ಯಾಸವಾಗಲಿದೆ. ಮಕ್ಕಳ ಆರೋಗ್ಯಕ್ಕೆ ಖರ್ಚು ಮಾಡಬೇಕಾದೀತು. ವ್ಯವಹಾರದಲ್ಲಿ ಹೆಚ್ಚಿನ ಲಾಭವು ಬರಬಹುದು. ಪ್ರಸಾರ ಮಾಧ್ಯಮದವರು ದೂರ ಹೀಗಬೇಕಾಗಬಹುದು. ಸಾಹಿತ್ಯ ಕ್ಷೇತ್ರದಲ್ಲಿ ಇರುವವರಿಗೆ ಸಮ್ಮಾನ ಸಿಗುವುದು. ಅವಿವಾಹಿತರು ಕಂಕಣಬಲವನ್ನು ನಿರೀಕ್ಷಿಸಬಹುದು. ಪ್ರಸಿದ್ಧ ಸಂಸ್ಥೆಗೆ ಹೂಡಿಕೆ ಮಾಡಲಿದ್ದೀರಿ.
ಲೋಹಿತ ಹೆಬ್ಬಾರ್ – 8762924271 (what’s app only)