Horoscope: ಈ ರಾಶಿಯವರ ವಿವಾಹದ ವಿಚಾರಕ್ಕೆ ಶತ್ರುಗಳ ಅಡ್ಡಿಯು ಬರಬಹುದು-ಎಚ್ಚರ
ಭವಿಷ್ಯದ ಬಗ್ಗೆ ಚಿಂತೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಹೀಗಾಗಿ ಒಂದಷ್ಟು ಮಂದಿ ದಿನಭವಿಷ್ಯ ನೋಡುತ್ತಾರೆ. ಇದರ ಜೊತೆಗೆ ನಿತ್ಯ ಪಂಚಾಂಗವನ್ನೂ ವೀಕ್ಷಿಸುತ್ತಾರೆ. ಹಾಗಿದ್ದರೆ, ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ ಇಂದಿನ (ಜನವರಿ 06) ಭವಿಷ್ಯಹೇಗಿದೆ ಎಂಬುದು ಇಲ್ಲಿದೆ.
ಒಂದಷ್ಟು ಮಂದಿ ಬೆಳಗ್ಗೆ ಎದ್ದ ನಂತರ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ (ಜನವರಿ 06) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಪೂರ್ವಾಷಾಢ, ಮಾಸ: ಮಾರ್ಗಶೀರ್ಷ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ದಶಮೀ, ನಿತ್ಯನಕ್ಷತ್ರ: ವಿಶಾಖಾ, ಯೋಗ: ಧೃತಿ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 07 ಗಂಟೆ 00 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 16 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:49 ರಿಂದ 11:14ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:03 ರಿಂದ 03:27ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:00 ರಿಂದ 08:25ರ ವರೆಗೆ.
ಸಿಂಹ ರಾಶಿ : ಯಾರೋ ಟೀಕಿಸಿದ ಮಾತ್ರಕ್ಕೆ ನಿಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳುವ ಅಗತ್ಯವಿಲ್ಲ. ನಿಮ್ಮ ಬಗ್ಗೆ ಒಂದು ಅವಲೋಕನವನ್ನು ನೀವು ಮಾಡಿಕೊಳ್ಳಿ ಸಾಕು. ಹತ್ತಾರು ವೃತ್ತಿಕ್ಷೇತ್ರಗಳು ನಿಮ್ಮ ಕೈಬೀಸಿ ಕರೆದರೂ ಯಾವುದಕ್ಕೂ ಹೋಗಲು ನಿಮಗೆ ಆಸಕ್ತಿ ಇರದು. ನೀವಂದುಕೊಂಡಿದ್ದನ್ನೇ ಮಾಡುವ ಛಾತಿ ಇರುವುದು. ವಿದ್ಯಾರ್ಥಿಗಳು ಅಹಂಕಾರದ ವರ್ತನೆಯನ್ನು ತೋರಿಸಬಹುದು. ಇಂದಿನ ಓಡಾಟದ ದಣಿವು ನಿಮ್ಮ ಉತ್ಸಾಹವನ್ನು ಕುಗ್ಗಿಸೀತು. ತಿಳಿವಳಿಕೆಯನ್ನು ಹೇಳಬೇಕಾದೀತು. ಎಲ್ಲವನ್ನೂ ನಂಬಿಕೆಯ ಆಧಾರದ ಮೇಲೆ ಸ್ವೀಕರಿಸಬೇಕಿಲ್ಲ. ಸರ್ಕಾರಿ ಉದ್ಯೋಗಿಗಳಿಗೆ ನಿಮ್ಮ ಚಾತುರ್ಯದ ಕಾರಣದಿಂದ ಹೆಚ್ಚಿನ ಅಧಿಕಾರವು ಪ್ರಾಪ್ತವಾಗುವುದು. ಧೈರ್ಯದಿಂದ ಮುನ್ನಡೆದರೆ ಯಾವ ತೊಂದರೆಯೂ ತೊಂದರೆಯಾಗಿ ಉಳಿಯದು. ಬಾರದ ಭಾಗ್ಯವನ್ನು ಬಯಸುತ್ತ ಬಳಲುವುದು ಬದುಕಾಗದು. ಪ್ರಯಾಣದಲ್ಲಿ ಯಾವುದೇ ತೊಂದರೆಯು ಬಾರದಂತೆ ದೈವವನ್ನು ಪ್ರಾರ್ಥಿಸಿ. ದಾಂಪತ್ಯದಲ್ಲಿ ಉಂಟಾದ ಕಲಹವನ್ನು ಕುಳಿತು ನೀವೇ ಸರಿ ಮಾಡಿಕೊಳ್ಳಿ.
ಕನ್ಯಾ ರಾಶಿ : ವಿವಾಹದ ವಿಚಾರಕ್ಕೆ ಶತ್ರುಗಳ ಅಡ್ಡಿಯು ಬರಬಹುದು. ವಾಹನವನ್ನು ಚಲಾಯಿಸುವಾಗ ಸಾವಧಾನತೆ ಇರಲಿ. ಬಂಧುಗಳು ನಿಮ್ಮನ್ನು ಆಡಿಕೊಳ್ಳುವುದು ನಿಮಗೆ ಸಹಿಸಲಾಗದು. ನಿಮ್ಮ ಶ್ರಮದ ಸಾಧನೆಯನ್ನು ಇತರರ ಜೊತೆ ಹಂಚಿಕೊಳ್ಳುವಿರಿ. ದುಡುಕಿ ಏನನ್ನಾದರೂ ತಪ್ಪನ್ನು ಮಾಡಿಕೊಳ್ಳುವುದು ಬೇಡ. ಕಛೇರಿಯಲ್ಲಿ ನಿಮ್ಮ ಅನುಪಸ್ಥಿತಿಯಿಂದ ಗೊಂದಲವಾದೀತು. ನ್ಯಾಯಾಲಯದ ವಿಚಾರದಲ್ಲಿ ನಿಮಗೆ ಹಿನ್ನಡೆಯ ಸಾಧ್ಯತೆ ಇದೆ. ನಿಮಗೆ ಬರಬೇಕಾದ ಹಣದ ವಿಚಾರದಲ್ಲಿಯೂ ನಿಮಗೆ ಸೋಲಾಗುವುದು. ಮನೆಯಲ್ಲಿಯೂ ನಿಮ್ಮ ಮಾತಿಗೆ ಸರಿಯಾದ ಬೆಲೆಯೂ ಸಿಗದು. ಕಛೇರಿಯಲ್ಲಿ ಇಂದು ನಿಮ್ಮಿಂದ ತಪ್ಪಾಗಿದ್ದು ಅದನ್ನು ನೀವು ಒಪ್ಪಿಕೊಳ್ಳಲಾರಿರಿ. ದುರ್ವ್ಯಸನದಿಂದ ಸಂಪತ್ತನ್ನು ನಷ್ಟ ಮಾಡಿಕೊಳ್ಳುವಿರಿ. ನಿಮ್ಮ ತಪ್ಪಿಗೆ ಪಶ್ಚಾತ್ತಾಪವಾದರೂ ಕೊನೆಯ ಹಂತವಾಗಿ ಇರಲಿ.
ತುಲಾ ರಾಶಿ : ಪ್ರಶಾಂತವಾದ ಸ್ಥಳಗಳಲ್ಲಿ ಇಂದಿನ ಸಮಯವು ಕಳೆದುಹೋಗುವುದು. ನಿಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಧನವನ್ನು ಸಂಪಾದಿಸುವಿರಿ. ಮಂಗಲಕಾರ್ಯದಲ್ಲಿ ಇಂದು ನೀವು ಸಂತೋಷದಿಂದ ಪಾಲ್ಗೊಳ್ಳುವಿರಿ. ಇದರಿಂದ ನಿಮ್ಮ ನೆಮ್ಮದಿಯೂ ದೂರವಾದೀತು. ವಿದ್ಯಾಭ್ಯಾಸದಲ್ಲಿ ಯಶಸ್ಸನ್ನು ಸಾಧಿಸಲು ಅನೇಕ ಮಾರ್ಗಗಳು ಇರಲಿದೆ. ಜೀವನಕ್ಕೆ ಸಂಬಂಧಿಸಿದ ವಿಚಾರದಲ್ಲಿ ಗಟ್ಟಿಯಾದ ತೀರ್ಮಾನವನ್ನು ಪಡೆಯುವುದು ಕಷ್ಟವಾಗುವುದು. ನಿಮ್ಮನ್ನು ಬಳಸಿಕೊಳ್ಳಬಹುದು, ಯಾರನ್ನೂ ಅತಿಯಾಗಿ ನಂಬಿ ನೀವು ಮೋಸಹೋಗಬಹುದು. ವಿವಾಹಕ್ಕೆ ಸಂಬಂಧಿಸಿದಂತೆ ತುರ್ತಾಗಿ ತೀರ್ಮಾನವನ್ನು ತೆಗೆದುಕೊಳ್ಳುವುದು ಸೂಕ್ತ. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವ ಭೀತಿಯು ಇರಲಿದೆ. ನಿಮ್ಮವರ ತಪ್ಪುಗಳನ್ನು ತಿದ್ದಿಕೊಳ್ಳಲು ಸಮಯವನ್ನು ಕೊಡಿ. ಭೂಮಿಯ ವ್ಯವಹಾರದಿಂದ ಅಲ್ಪ ಅಭಿವೃದ್ಧಿಯು ಆಗಲಿದೆ.
ವೃಶ್ಚಿಕ ರಾಶಿ : ಇಂದು ನಿಮ್ಮ ಕಾರ್ಯವನ್ನು ಪ್ರಶಂಸಿಸುವವರು ಸಿಕ್ಕಾರು. ಅವರ ಮಾತಿನಿಂದ ನಿಮ್ಮ ಬಲದ ವೃದ್ಧಿಯಾಗುವುದು. ಸಣ್ಣ ಅಂತರದಲ್ಲಿ ಅವಕಾಶಗಳನ್ನು ತಪ್ಪಿಸಿಕೊಂಡು ಬೇಸರಿಸುವಿರಿ. ಕುಟುಂಬದಲ್ಲಿ ಎಲ್ಲರೂ ಸುಖದಿಂದ ಜೀವಿಸುವ ಕಾರಣ ನಿಮ್ಮಲ್ಲಿಯೂ ನೆಮ್ಮದಿಯು ಕಾಣಿಸುವುದು. ದಾಂಪತ್ಯದಲ್ಲಿ ಪರಸ್ಪರ ನೋವು ಹಂಚಿಕೊಂಡು ಸಮಾಧಾನವಾಗುವಿರಿ. ಮನೆಯ ನಿರ್ಮಾಣ ಕಾರ್ಯವು ಬಹಳ ವಿಳಂಬದಂತೆ ಅನ್ನಿಸುವುದು. ನಿಮ್ಮ ನಡವಳಿಕೆಗೆ ಬಂಧುಗಳಿಂದ ಪ್ರಶಂಸೆಯು ಸಿಗಲಿದೆ. ಅಂದುಕೊಂಡಂತೆ ಕಾರ್ಯವು ಸಾಗದು ಎಂಬ ಕೊರಗು ಇರುವುದು. ನಿಮ್ಮ ಬಲದ ಮೇಲೇ ಕೆಲಸವನ್ನು ಪ್ರಾರಂಭಿಸಿ. ಆಲಂಕಾರಿಕ ವಿಚಾರಗಳ ಬಗ್ಗೆ ಹೆಚ್ಚು ಗಮನವಿರುವುದು. ಇನ್ನೊಬ್ಬರ ಗೊತ್ತಿಲ್ಲದ ವಿಚಾರವನ್ನು ಹೇಳುವುದು ಬೇಡ. ಅನೇಕ ದಿನಗಳಿಂದ ಉದ್ಯೋಗ ನಿರ್ವಹಣೆಯಲ್ಲಿ ಬೇಸರ ಉಂಟಾಗಿದ್ದು ಹೊರಗೆ ಸುತ್ತಾಡುವ, ವಿರಾಮವನ್ನು ಪಡೆಯುವ ಮನಸ್ಸು ಇರಲಿದೆ.