Daily Horoscope July 12, 2024: ಸಿಂಹ ರಾಶಿಯವರಿಗೆ ಕೆಲಸದ ಸ್ಥಳದಲ್ಲಿ ಪ್ರಶಂಸೆ: ದ್ವಾದಶ ರಾಶಿ ಭವಿಷ್ಯ ಇಲ್ಲಿದೆ

2024 ಜುಲೈ 12 ದಿನ ಭವಿಷ್ಯ: ಶುಕ್ರವಾರದಂದು 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ತಿಳಿದುಕೊಳ್ಳಿ. ಈ ದಿನ ಯಾರಿಗೆ ಯೋಗ, ಶುಭ ಸಂಯೋಗ, ಗ್ರಹಗಳ ಸ್ಥಾನ ಬದಲಾವಣೆಗಳಿಂದ ಮೇಷದಿಂದ ಮೀನ ರಾಶಿವರೆಗಿನ ರಾಶಿ ಭವಿಷ್ಯ ಹೇಗಿರಲಿದೆ? ಶುಭಕಾಲ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ ಎಂಬಿತ್ಯಾದಿ ಮಾಹಿತಿಯನ್ನು ನಿತ್ಯ ಭವಿಷ್ಯದಿಂದ ತಿಳಿಯಿರಿ.

Daily Horoscope July 12, 2024: ಸಿಂಹ ರಾಶಿಯವರಿಗೆ ಕೆಲಸದ ಸ್ಥಳದಲ್ಲಿ ಪ್ರಶಂಸೆ: ದ್ವಾದಶ ರಾಶಿ ಭವಿಷ್ಯ ಇಲ್ಲಿದೆ
ರಾಶಿ ಭವಿಷ್ಯ
Follow us
| Updated By: ರಮೇಶ್ ಬಿ. ಜವಳಗೇರಾ

Updated on: Jul 11, 2024 | 10:03 PM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಶುಕ್ರವಾರ (ಜುಲೈ 12) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಪುನರ್ವಸು, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಉತ್ತರಾಫಲ್ಗುಣೀ, ಯೋಗ: ವ್ಯತಿಪಾತ್, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 11 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ 11:02ರಿಂದ 12:38ರ ವರೆಗೆ, ಯಮಘಂಡ ಕಾಲ 15:52 ರಿಂದ 17:28ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:49 ರಿಂದ 09:25ರ ವರೆಗೆ.

ಮೇಷ ರಾಶಿ :ನಿಮ್ಮ ವೇಗದ ಮಾತು ಇತರರಿಗೆ ಅರ್ಥವಾಗದೇ ಇರಬಹುದು. ಸುಕೃತವು ನಿಮ್ಮ ಪಾಲಿಗೆ ಅನುಕೂಲತೆಯನ್ನು ಒದಗಿಸಿಕೊಟ್ಟೀತು. ಸಹೋದ್ಯೋಗಿಗಳಿಂದ ನೀವು ಕಛೇರಿಯಲ್ಲಿ ಸಹಾಯ ಪಡೆಯುವ ಸಾಧ್ಯತೆ ಇದೆ. ಪುಣ್ಯ ಕರ್ಮವು ನಿಮ್ಮನ್ನು ಆಪತ್ತಿನಿಂದ ರಕ್ಷಿಸುವುದು. ನೀವು ಸುಲಭವಾಗಿ ಎದುರಿಸಬಲ್ಲಿರಿ. ನೀವು ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ಹೊರಗಿನ ವ್ಯಕ್ತಿತ್ವವನ್ನು ನೋಡಿ ನಿಮ್ಮ ತೀರ್ಮಾನವು ಅಸತ್ಯವಾದೀತು. ಹಣಕಾಸಿನ ವಿಚಾರವು ನಿಮಗೆ ಸಂಪೂರ್ಣ ಅರ್ಥವಾಗದೇ ಹೋದೀತು. ಸಂಗಾತಿಯ ಜೊತೆ ವಾಗ್ವಾದ ನಡೆದೀತು. ಸ್ನೇಹ ಸಂಬಂಧವು ಕಡಿಮೆ ಅದೀತು. ವಾಹನ ಸಂಚಾರದಲ್ಲಿ ನಿಯಂತ್ರಣ ಅವಶ್ಯಕ. ಅನಾಹುತಗಳು ಸಣ್ಣದರಲ್ಲಿಯೇ ಆಗುವ ಸಂದರ್ಭವಿದೆ. ಸಮಯ ಸಂದರ್ಭ ನೋಡಿ ನಿಮ್ಮ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಸಿಟ್ಟು ಮಾಡಿಕೊಂಡು ಇಂದು ಆಗಬೇಕಾದ ಕೆಲಸವನ್ನು ಮಾಡಿ ಮುಗಿಸುವಿರಿ.

ವೃಷಭ ರಾಶಿ :ಒತ್ತಡ ಮಾಡಿಕೊಂಡು ಕಾರ್ಯವನ್ನು ಮಾಡುವುದು ಬೇಡ. ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕೆ ಕಷ್ಟಪಡುವರು. ಬಂಧುಗಳು ನಿಮ್ಮನ್ನು ನಿರ್ಲಕ್ಷ್ಯ ಮಾಡಬಹುದು. ನಿಮ್ಮ ಯೋಚನೆಗಳು ಬಹಳ ಬಾಲಿಶವೆಂದು ಅರ್ಥವಾಗುವ ದಿನ ಇಂದು. ಉದ್ಯೋಗದಲ್ಲಿ ನಿಧಾನಗತಿ ಇರಲಿದೆ. ನಿಮ್ಮನ್ನು ನಿರ್ಲಕ್ಷಿಸಿದರೆ ನಿಮಗೇನು ಆಗದು. ಸಹೋದ್ಯೋಗಿಗಳು ನಿಮಗೆ ತೊಂದರೆ ಕೊಡಬಹುದು. ನಿಮ್ಮ ಕೆಲಸವು ಸಮಯಕ್ಕೆ ಸರಿಯಾಗಿ ಮುಗಿಯದು. ಅಧಿಕ ಖರ್ಚಿನಲ್ಲಿ ನಿಮ್ಮ ಗುರಿಯನ್ನು ಸಾಧಿಸಬಹುದಾಗಿದೆ. ಹೊಸ ಮನೆಯ ಖರೀದಿಯ ಬಗ್ಗೆ ಆಸಕ್ತಿ ಬರುವುದು. ಹೂಡಿಕೆ ವಿಚಾರಕ್ಕೆ ಸದ್ಯ ತಲೆ ಹಾಕುವುದು ಬೇಡ. ಹೂಡಿಕೆಯಿಂದ ಹಣವನ್ನು ಕಳೆದುಕೊಳ್ಳುವಿರಿ. ಮಾತಿಗೆ ಉದ್ಯೋಗಕ್ಕೆ ಸೇರಿಕೊಳ್ಳುವುದು ಬೇಡ. ನಿಮ್ಮಿಂದ ಆಗದ ಕಾರ್ಯವನ್ನು ಇತರರೂ ಮಾಡಲು ಇಚ್ಛಿಸರು.

ಮಿಥುನ ರಾಶಿ :ಅನ್ಯರಿಂದ ಅಸಾಧ್ಯ ಎನಿಸಿದ ಕಾರ್ಯವನ್ನು ಮಾಡಲು ನೀವು ಧೈರ್ಯವನ್ನು ಬಿಡಲಾರಿರಿ. ವೃತ್ತಿಜೀವನದಲ್ಲಿ ಕೆಲವು ದೊಡ್ಡ ಬದಲಾವಣೆಗಳು ನಿಮ್ಮ ಪರವಾಗಿರಲಿದೆ. ಎಷ್ಟೋ ವರ್ಷದ ಸಾಲವು ಇಂದು ಮುಕ್ತಾಯವಾಗಲಿದೆ. ಕೆಲಸದ ಒತ್ತಡವು ಅಧಿಕವಿದ್ದರೂ ಇಂದಿನ ಕೆಲಸವನ್ನು ಇಂದೇ ಮುಗಿಸುವುದು ಉತ್ತಮ. ನಿಮ್ಮ ಮಾತುಗಳ ಮೇಲೆ ಗಮನವಿರಲಿ. ಯಾವುದೋ ಆಲೋಚನೆಯಲ್ಲಿ ಮಗ್ನರಾಗುವಿರಿ. ಕುಟುಂಬದಲ್ಲಿ ನಿಮ್ಮ ವಿರುದ್ಧ ಮಾತುಗಳು ಕೇಳಿಬರಹುದು. ನ್ಯಾಯಾಲಯದ ವಿಚಾರದಲ್ಲಿ ಜಯವಾಗುವ ಸಾಧ್ಯತೆ ಇದೆ. ತಾಯಿಯ ಸಂಬಂಧದಿಂದ ಧನಾಗಮನವನ್ನು ನಿರೀಕ್ಷಿಸಬಹುದು. ಗೃಹಕ್ಕೆ ಅವಶ್ಯಕತೆ ಇರುವ ವಸ್ತುಗಳನ್ನು ಖರೀದಿಸುವಿರಿ. ಸಹೋದರರ ನಡುವೆ ದ್ವೇಷವು ಉಂಡಾಗಬಹುದು. ಯಾರ ಪ್ರಶಂಸೆಗೂ ಕಾಯದೇ ಚೆನ್ನಾಗಿ ಕರ್ತವ್ಯವನ್ನು ಮಾಡುವಿರಿ. ನಿಮ್ಮಿಂದಾಗಿ ಸಹೋದ್ಯೋಗಿಗಳಿಗೆ ತೊಂದರೆ ಆಗಬಹುದು.

ಕಟಕ ರಾಶಿ :ನಿಮ್ಮ ಪ್ರಾಮಾಣಿಕತೆಯನ್ನು ತೋರಿಸುವ ಅವಶ್ಯಕತೆ ಇಲ್ಲ. ಸಾಮಾಜಿಕವಾಗಿ ಯಾವುದೇ ಕೆಲಸವನ್ನು ಮಾಡಲು ಅದರ ಬಗ್ಗೆ ಮಾಹಿತಿ ತಿಳಿದಿರಲಿ. ಸ್ವಂತ ಉದ್ಯಮದಲ್ಲಿ ಹೆಚ್ಚು ಪರಿಶ್ರಮ ಇರಬೇಕಾಗಿ ಬರಬಹುದು. ನಿಮ್ಮ ಕೋಪವನ್ನು ನಿಯಂತ್ರಿಸಲು ಪ್ರಯತ್ನಿಸಿ. ಸಣ್ಣ ಪುಟ್ಟ ಅವಮಾನವಾಗುವ ಸಾಧ್ಯತೆ ಇದೆ. ಅಮೂಲ್ಯವಾದ ವಸ್ತುವು ಕಣ್ಮರೆಯಾಗಿ ಅನಂತರ ಸಿಗಲಿದೆ. ಇಂದು ನೀವು ಬಹಳ ಎಚ್ಚರಿಕೆಯಿಂದ ಇರಿ. ನಿಮ್ಮನ್ನು ಕೆಣಕುವ ಸಂಭವವಿದೆ. ಮಕ್ಕಳಿಗೆ ಆಗಬೇಕಾದ ವಿವಾಹದ ಕುರಿತು ಮನೆಯಲ್ಲಿ ಕುಳಿತು ಎಲ್ಲರ‌ ಜೊತೆ ಮಾತನಾಡುವಿರಿ. ಕೈಲಾಗದ ಕೆಲಸವನ್ನು ಮಾಡಿ ಸಮಯ ವ್ಯರ್ಥ ಮಾಡುವಿರಿ. ಭೂಮಿಗೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಹೋಗುವುದು ಬೇಡ. ಸಹೋದರನಿಂದ ಉಡುಗೊರೆಯು ಸಿಗಬಹುದು.‌ ತಾನಾಗಿಯೇ ಬಂದ ಕಾರ್ಯವನ್ನು ಬಿಡುವುದು ಬೇಡ. ಅನಗತ್ಯವಾಗಿ ಮೂಗು ತೂರಿಸುವುದು ಬೇಡ.

ಸಿಂಹ ರಾಶಿ :ಕಾರ್ಯದ ಸ್ಥಳದಲ್ಲಿ ಪ್ರತಿಯೊಬ್ಬರೂ ನಿಮ್ಮ ಕೆಲಸವನ್ನು ಪ್ರಶಂಸಿಸುವರು. ಇಂದು ನಿಮ್ಮ ಸಮಯ ವ್ಯರ್ಥವಾಗಿ ಸುಮ್ಮನೇ ಅಲೆದಾಡವಾಗಬಹುದು. ಸಾಲ ಮಾಡಬೇಕಾದ ಸ್ಥಿತಿಯು ಬರಬಹುದು. ಯಾವ ನಕಾರಾತ್ಮಕ ಚಿಂತೆನೆಗೂ ಕಿವಿಗೊಡದೇ ನಿಮ್ಮ ನಿಷ್ಠೆಯಿಂದ ಕಾರ್ಯವನ್ನು ಸಾಧಿಸುವಿರಿ. ತಾಯಿಯ ಜೊತೆ ಸಿಟ್ಟು ಮಾಡಿಕೊಳ್ಳುವ ಸಂದರ್ಭ ಬರಬಹುದು. ಸಂಶೋಧಕರು ಹೆಚ್ಚಿನ ಸಂಶೋಧನೆಯಲ್ಲಿ ತೊಡಗಿಕೊಳ್ಳುವರು. ಪ್ರೀತಿಪಾತ್ರರ ಜೊತೆ ಮುಜುಗರ ಇಟ್ಟಕೊಳ್ಳಬೇಕಾಗಬಹುದು. ಪರಸ್ಪರ ತಪ್ಪು ಗ್ರಹಿಕೆಯಿಂದ ಸಂಬಂಧದಲ್ಲಿ ಒಡಕಾಗಬಹುದು. ಕೆಟ್ಟ ಕನಸಿನಿಂದ ನೀವು ಖಿನ್ನರಾಗಬಹುದು. ಸರ್ಕಾರದ ಸೌಲಭ್ಯವು ನಿಮಗೆ ಸಿಗದೇ ಹೋಗಬಹುದು. ಹಳೆಯ ವಸ್ತುಗಳೇ ನಿಮಗೆ ಪ್ರಿಯವಾಗಬಹುದು. ಕೃತಜ್ಞತೆಯನ್ನು ಇಟ್ಟುಕೊಳ್ಳುವುದು ಕಷ್ಟವಾದೀತು. ನಿಮ್ಮ ಕೆಲಸದಿಂದ ಸಂದೇಹಕ್ಕೆ ಆಸ್ಪದ ಸಿಗಬಹುದು. ಯಶಸ್ಸನ್ನು ಪಡೆಯುವ ಹಂಬಲವಿರಲಿದೆ.

ಕನ್ಯಾ ರಾಶಿ :ನಿಮ್ಮ ಸಂಕಷ್ಟಕ್ಕೆ ಯಾರನ್ನೋ ದೂರುತ್ತ ಇರುವುದು ಸರಿಯಲ್ಲ. ನಿಮ್ಮ ಹಣೆಯಲ್ಲಿ ಬರೆದಿದ್ದರೆ ಅದು ಆಗುತ್ತದೆ ಎಂಬ ವಿಶ್ವಾಸವಿರಲಿ. ಉದ್ಯೋಗಸ್ಥರಿಗೆ ಆತುರ ಮತ್ತು ಅತಿಯಾದ ಆತ್ಮವಿಶ್ವಾಸ ಎರಡೂ ನಿಮಗೆ ಅಪಾಯಕಾರಿ. ಮಿತ್ರರು ನಿಮಗೆ ಅವಶ್ಯಕತೆ ಇರುವ ಸಹಾಯ ಮಾಡುವರು. ಪ್ರೇಮಪಾಶದಲ್ಲಿ ಬಂಧಿಯಾಗಿದ್ದರೆ ದುಃಖಪಡಬೇಕಾದ ಸನ್ನಿವೇಶವು ಬರಬಹುದು. ಮಕ್ಕಳ ಕಾರಣದಿಂದ ನಿಮಗೆ ಕಷ್ಟವಾಗುವುದು. ನಿಮ್ಮ ವ್ಯವಹಾರದಲ್ಲಿ ಅಭಿವೃದ್ಧಿಗೆ ನೀವು ಹೊಸ ರೂಪವನ್ನು ಕೊಡಬಹುದು. ಕ್ಷಣ ಕ್ಷಣದ ಬದಲಾವಣೆಗಳು ನಿಮಗೆ ಕಿರಿಕಿರಿಯನ್ನು ತರಿಸುವುದು. ದಿನದ ಆರಂಭದಲ್ಲಿ ಉತ್ಸಾಹವು ಕಡಿಮೆಯಿರಲಿದೆ. ಮನಸ್ಸು ಸಹಜತೆಗೆ ಮರಳಲು ಸಮಯವನ್ನು ತೆಗದುಕೊಳ್ಳಬಹುದು. ಉದ್ಯೋಗದಲ್ಲಿ ನಿಶ್ಚಲತೆ ಕಾಣಿಸದು. ಸಂಗಾತಿಯ ಭಾವನೆಗೆ ಬೆಲೆ ಕೊಟ್ಟು ಸಂತೋಷಪಡಿಸುವಿರಿ. ವೈವಾಹಿಕ ಸಂಬಂಧವನ್ನು ಸರಿಯಾಗಿ ಇಟ್ಟುಕೊಳ್ಳುವುದು ಕಷ್ಟವಾಗಬಹುದು. ಸಮೀಪದಲ್ಲಿ ಇರುವವರನ್ನು ನಿಮ್ಮ ಕೆಲಸಕ್ಕೆ ಬಳಸಿಕೊಳ್ಳುವಿರಿ.

ತುಲಾ ರಾಶಿ :ಇಂದು ಮೇಲಧಿಕಾರಿಗಳಿಂದ ಹಲವು ರೀತಿಯ ಒತ್ತಡವನ್ನು ನೀವು ಅನುಭವಿಸುವಿರಿ. ಸ್ಥಿರಾಸ್ತಿಯಿಂದ ನಿಮಗೆ ಸಾಲವು ದೊರೆಯಬಹುದು. ಮಿತ್ರರ ಜೊತೆ ಮಾಡಿದ ವಿವಾದವು ಮನಸ್ತಾಪವನ್ನು ಕೊಟ್ಟೀತು. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯು ಇರಲಿದೆ. ಬಂಧುಗಳ ಜೊತೆ ಧನವ್ಯವಹಾರವನ್ನು ಮಾಡುವಿರಿ. ನೀವು ಹೊಸ ಮನೆಯ ನಿರ್ಮಾಣದ ಬಗ್ಗೆ ಯೋಚಿಸಲಿದ್ದೀರಿ. ವಿದ್ಯುತ್ ಉಪಕರಣಗಳು ನಿಮ್ಮ ಧನವನ್ನು ಖಾಲಿ ಮಾಡಿಸಿಯಾವು. ಸರ್ಕಾರಕ್ಕೆ ಸಂಬಂಧಿಸಿದ ನಿಮ್ಮ ಕಾರ್ಯಗಳು ಪ್ರಗತಿ ಇಲ್ಲದೇ ಮಂದಗತಿಯಲ್ಲಿ ಸಾಗಬಹುದು. ಯಾರಿಂದಲೋ ಪ್ರೇರಣೆ ಪಡೆದು ಸರಿಯಾದ ಮಾರ್ಗವನ್ನು ಆರಿಸಿಕೊಳ್ಳುವಿರಿ. ಆಪ್ತರನ್ನು ಕಳೆದುಕೊಂಡ ಬೇಸರವು ಇರಲಿದೆ. ವ್ಯಾಪಾರದ ನಷ್ಟವನ್ನು ನಿಮಗೆ ಅರಗಿಸಿಕೊಳ್ಳಲಾಗದು. ಆತಂಕದಿಂದ ನೀವು ಮುಕ್ತರಾಗಲು ಬಯಸುವಿರಿ. ಇಂದು ಯಾರ ಜೊತೆಗೂ ಆಪ್ತವಾಗಿ ಮಾತನಾಡುವ ಮನಃಸ್ಥಿತಿ ಇರದು.

ವೃಶ್ಚಿಕ ರಾಶಿ :ನಿಮ್ಮ ಕಠಿಣ ಪರಿಶ್ರಮವು ಕೆಲಸಕ್ಕೆ ಬಾರದು.‌ ಯುಕ್ತಿಯಿಂದ ನಿರ್ವಹಿಸುವ ಚಾಣಾಕ್ಷತೆ ಬೇಕು. ಕೆಲಸದ ಸ್ಥಳದಲ್ಲಿ ಕೆಲವು ಬದಲಾವಣೆಗಳು ನಿಮ್ಮ ಇಂದಿನ ಕೆಲಸವನ್ನು ನಿಧಾನಗೊಳಿಸಬಹುದು. ಪ್ರಯಾಣಕ್ಕೆ ಸಂಬಂಧಿಸದಂತೆ ತೊಂದರೆ ಬರಬಹುದು. ಅಪರಿಚಿತರ ಸಹಾಯವು ನಿಮಗೆ ದೊರೆಯಬಹದು. ನಂಬಿಕಸ್ಥರನ್ನು ವಿನಾಕಾರಣ ಕಳೆದುಕೊಳ್ಳುವಿರಿ. ಸಜ್ಜನರಿಗೆ ಅಪಮಾನ ಮಾಡಲು ಹೋಗಬೇಡಿ. ನಿಮಗೆ ಇಂದು ಸಿಗುವ ಸೂಚ‌ನೆಗಳು ಸಮೃದ್ಧಯ ಸಂಕೇತವಾಗಿರಬಹುದು. ಸಂತೋಷವನ್ನು ಅನುಭವಿಸಲು ಕಷ್ಟಪಡಬೇಕಾದೀತು. ಅನುಭವದ ಮಾತಿನ ಮೇಲೆ ನೀವು ನಡೆಯಿರಿ. ಬಂಧುಗಳ ಆಗಮನದಿಂದ ಸಂತೋಷವು ಮನೆಯಲ್ಲಿ ಇರಲಿದೆ. ಆರೋಗ್ಯದ ವಿಚಾರದಲ್ಲಿ ಹಿನ್ನಡೆಯಾಗಬಹುದು. ಕೆಲಸದಲ್ಲಿ ಆಸಕ್ತಿಯ‌ ಕೊರತೆ ಕಾಣಿಸುವುದು. ಉದ್ಯಮದಲ್ಲಿ ಹಿನ್ನಡೆಯಾಗುವುದು ನಿಮಗೆ ಮೊದಲೇ ಗೊತ್ತಿದ್ದೂ ಪ್ರಯತ್ನಿಸುವಿರಿ. ಪಕ್ಷಪಾತವನ್ನು ಬಿಟ್ಟು ಕಾರ್ಯವನ್ನು ಮಾಡಿ.

ಧನು ರಾಶಿ :ಇಂದು ನಿಮ್ಮ ಮನೆಯ ದುರಸ್ತಿಯ ಕಡೆ ಯೋಚಿಸುಬಿರಿ. ವಾಹನದ ವ್ಯಾಪಾರಿಗಳು ಪ್ರಗತಿ ಕಾಣುವುದು. ಕೆಲಸದ ಸ್ಥಳದಲ್ಲಿ ಕೆಲವು ಉತ್ತಮ ಅವಕಾಶಗಳು ಲಭಿಸುತ್ತವೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ಕುಟುಂಬದವರ ಸಹಕಾರ ಇರಲಿದೆ. ಇಂದು ನಿಮಗೆ ಸಂಪತ್ತು, ಗೌರವಗಳು ಸಿಗುವ ಸಾಧ್ಯತೆ ಇದೆ. ನಿಮ್ಮ ಕೆಲಸದಲ್ಲಿ ಯಶಸ್ಸು ಸಿಗಬಹುದು. ಪ್ರೇಮಿಗಳಾಗಿದ್ದರೆ ನಿಮ್ಮ ನಡುವೆ ಅಹಂಕಾರದ ಘರ್ಷಣೆ ಇರಲಿದೆ. ಹೊಸ ಉದ್ಯೋಗದಲ್ಲಿ ಉತ್ಸಾಹವು ಹೆಚ್ಚಿರಲಿದೆ. ಅಧ್ಯಾತ್ಮ ಸಾಧನೆಗೆ ಹೆಚ್ಚು ಪೂರಕವಾಗಿ ಇರುವಿರಿ. ಎಲ್ಲಿಗೂ ಇಂದು ಒಂಟಿಯಾಗಿ ಪ್ರಯಾಣವನ್ನು ಮಾಡುವುದು ಬೇಡ. ಯೋಗ್ಯ ಸ್ಥಾನಮಾನವು ಲಭಿಸಬಹುದು. ಅಪರೂಪದ ಉಡುಗೊರೆಯು ನಿಮಗೆ ಸಿಗಲಿದೆ. ಸಂಶೋಧನಾ ವಿಚಾರದಲ್ಲಿ ಆಸಕ್ತಿಯು ಹೆಚ್ಚಾಗುವುದು. ಯಾರ ಯೋಗ್ಯತೆಯನ್ನೂ ಅಳೆಯಲು ಸಾಧ್ಯವಾಗದು. ಅಪಾಯಯಕ್ಕೆ ಸಿಕ್ಕಿಕೊಳ್ಳುವ ಸಂಭವವಿತ್ತು. ಧನವ್ಯಯವನ್ನು ಜಾಣ್ಮೆಯಿಂದ ತಪ್ಪಿಸಿಕೊಳ್ಳುವಿರಿ‌.

ಮಕರ ರಾಶಿ :ನಿಮ್ಮ ಪ್ರಮುಖ ದಾಖಲೆಗಳನ್ನು ಯಾರಿಗೂ ಹಸ್ತಾಂತರಿಸುವುದು ಬೇಡ. ಉದ್ಯಮಿಗಳು ಕಾನೂನು ತೊಡಕಿಗೆ ನೇರವಾಗಿ ಪ್ರವೇಶಿಸಿ ಸರಿ ಮಾಡಿಕೊಳ್ಳುವರು. ಕಲಾವಿದರಿಗೆ ಅವಕಾಶಗಳು ಸಿಗಲಿದೆ. ಕೆಲಸವನ್ನು ಬದಲಾಯಿಸುವಿರಿ. ನಿಮ್ಮ ಸ್ನೇಹಿತರಿಗೆ ನಿಮ್ಮಿಂದ ಹೆಚ್ಚಿನ ಸಲಹೆ ಕೊಡುವಿರಿ. ನಿಮ್ಮ ಸಹಾಯವನ್ನು ಅವರು ಬಯಸಬಹುದು. ದಾಂಪತ್ಯದಲ್ಲಿ ಮನಸ್ತಾಪವು ಅಧಿಕವಾಗಬಹುದು. ಆಸಕ್ತಿ ಕಡಿಮೆ ಇದ್ದರೂ ಕರ್ತವ್ಯವನ್ನು ಮಾಡಬೇಕಾದೀತು. ಕಛೇರಿಯಲ್ಲಿ ಒತ್ತಡವು ಹೆಚ್ಚಾಗಬಹುದು. ಪ್ರಯಾಣವನ್ನು ಮಾಡಬೇಕಾದೀತು. ತಂದೆಯ ಆರೋಗ್ಯವು ಸುಧಾರಿಸೀತು. ಮನಸ್ಸಿಗೆ ಬಂದಂತೆ ವರ್ತಿಸುವಿರಿ. ನಿಮ್ಮ ಕೆಲವು ಸಂಕೀರ್ಣ ಕೆಲಸಗಳು ಬೇಗ ಮುಕ್ತಾಯಗೊಳ್ಳಬಹುದು. ಸ್ನೇಹಿತರ ಸಹಕಾರದಿಂದ ಸ್ಥಿರಾಸ್ತಿಯನ್ನು ಖರೀದಿಸುವಿರಿ. ಪ್ರೀತಿಯಲ್ಲಿ ನಿಮಗೆ ಮೋಸವಾಗುವುದು. ಉದ್ಯಮಕ್ಕೆ ಬೇಕಾದ ವಿವರಗಳನ್ನು ಅನುಭವಿಗಳಿಂದ ಪಡೆಯಿರಿ. ಹೊಂದಾಣಿಕೆಯಿಂದ ಸಂಬಂಧಗಳನ್ನು ಸರಿಮಾಡಿಕೊಳ್ಳಿ.

ಕುಂಭ ರಾಶಿ :ಇಂದು ಯಾವುದನ್ನೂ ಅತಿಯಾಗಿ ಹಚ್ಚಿಕೊಳ್ಳದೇ ಕಾರ್ಯತತ್ಪರರಾಗುವಿರಿ. ನಿಮ್ಮ ಕೆಲವು ಆಸೆಗಳನ್ನು ಈಡೇರಿಸಲು ದಾರಿ ಮಾಡಿಕೊಳ್ಳುವಿರಿ. ವ್ಯಾಪಾರದಲ್ಲಿ ಲಾಭಗಳಿಸಲು ಹೊಸ ಅವಕಾಶಗಳು ಕಾಣಿಸಿಕೊಂಡೀತು.‌ ಮನೆಯಲ್ಲಿ ಸಂತೋಷದ ವಾತಾವರಣವು ಇರಲಿದೆ.‌ ಧರ್ಮದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಸಹೋದರನ ವರ್ತನೆಗಳು ನಿಮಗೆ ಅಸಮಾಧಾನವನ್ನು ತರುವರು. ಅನಿರೀಕ್ಷಿತ ಧನಾಗಮನವು ಸಂತೋಷವನ್ನು ಕೊಡಬಹುದು. ವೇಗದಲ್ಲಿ ಮಾಡುವ ಕೆಲಸದಿಂದ ಅನಾಹುತವಾಗಬಹುದು. ಎಲ್ಲದಕ್ಕೂ ಒಂದು ಕಾರಣವಿರುತ್ತದೆ ಎಂಬುದನ್ನು ತಿಳಿದುಕೊಳ್ಳುವಿರಿ. ನಿಮ್ಮನ್ನು ನೀವೇ ತಿದ್ದಿಕೊಳ್ಳಬೇಕು. ನಿಮ್ಮನ್ನು ನೀವೇ ರೂಪಿಸಿಕೊಳ್ಳುವ ಅನಿವಾರ್ಯತೆ ಬರಬಹುದು. ಅತಿಥಿಗಳ ಆಗಮನವಾಗಲಿದೆ. ನಿರುದ್ಯೋಗದ ಸ್ಥಿತಿಯು ದಾಯಾದಿಗಳಿಗೆ ಸಂತಸವಗುವುದು. ಯಾರನ್ನೋ ನಂಬಿ‌ ಕೆಲಸ ಮಾಡುವುದು ಬೇಡ.

ಮೀನ ರಾಶಿ :ನೀವು ಉದ್ಯಮಿಗಳ ಜೊತೆ ಹೊಸ ಯೋಜನೆಯನ್ನು ಪಡೆಯುವ ತವಕದಲ್ಲಿ ಇರುವಿರಿ. ದೈಹಿಕ ವಿಶ್ರಾಂತಿಯ ಜೊತೆ ಮಾನಸಿಕ ದೃಢತೆಯೂ ಅಗತ್ಯವಾಗಿ ಹೆಚ್ಚಿಸಿಕೊಳ್ಳಬೇಕು. ಹೊಸ ಕೆಲಸವನ್ನು ಮಾಡಲು ಬಯಸಿದರೆ ಸಮಯವು ನಿಮಗೆ ಉತ್ತಮವಾಗಿರುತ್ತದೆ. ಆಂತರಿಕ ಬಲದ ವೃದ್ಧಿಯಾಗುವುದು. ಪ್ರಮುಖ ವ್ಯಕ್ತಿಗಳ ಜೊತೆ ಸಂಬಂಧಗಳು ಹತ್ತಿರವಾಗಬಹುದು. ಸಂಪತ್ತಿನ ಮೂಲವು ಹೆಚ್ವಾಗಬಹುದು. ಸೃಷ್ಟಿಶೀಲತೆಯನ್ನು ಬೆಳೆಸಿಕೊಳ್ಳಿ. ನಿಮ್ಮ ಪ್ರತಿಭೆಯಿಂದ ಬಹಳ ಲಾಭಗಳು ನಿಮಗಾಗುವುದು. ನೀವು ಅಂದುಕೊಂಡ ಮಾತ್ರಕ್ಕೆ ಎಲ್ಲವೂ ಆಗುತ್ತದೆ ಎಂದೇನಲ್ಲ. ನಿಮ್ಮ ಮನಸ್ಸು ಚಂಚಲವಾಗುವುದು. ಶಿಸ್ತಿಗೆ ಹೆಚ್ಚು ಒತ್ತನ್ನು ಇಂದು ಕೊಡುವಿರಿ. ಇದು ಸಹೋದ್ಯೋಗಿಗಳಿಗೆ ಕಿರಿಕಿರಿಯಾದೀತು. ವಿದ್ಯಾರ್ಥಿಗಳಿಗೆ ಓದಲು ಸಮಯವನ್ನು ಇಂದು ಹೊಂದಿಕೆಯಾಗದು. ಇಂದು ನಿಮಗೆ ಗೊತ್ತಿಲ್ಲದೇ ದುಷ್ಟರ ಸಹವಾಸ ಸಿಗಬಹುದು. ವೈಷಮ್ಯವನ್ನು ಎಲ್ಲರೆದುರು ಪ್ರದರ್ಶಿಸುವುದು ಬೇಡ.

-ಲೋಹಿತ ಹೆಬ್ಬಾರ್ – 8762924271 (what’s app only)

ತಾಜಾ ಸುದ್ದಿ
ಚಾಮರಾಜನಗರ: ಸೆಲ್ಫಿ ಶೋಕಿಗೆ ಡೆಡ್ಲಿ ಸ್ಪಾಟ್ ತಲುಪಿ ಪ್ರವಾಸಿಗರ ಹುಚ್ಚಾಟ!
ಚಾಮರಾಜನಗರ: ಸೆಲ್ಫಿ ಶೋಕಿಗೆ ಡೆಡ್ಲಿ ಸ್ಪಾಟ್ ತಲುಪಿ ಪ್ರವಾಸಿಗರ ಹುಚ್ಚಾಟ!
ಭಾನುವಾರ ಮನೆ ಬಳಿ ಪೌರ ಕಾರ್ಮಿಕರಿಗೆ ಸೆಲ್ಫಿ ನೀಡಿದ ನಟ ಧ್ರುವ ಸರ್ಜಾ
ಭಾನುವಾರ ಮನೆ ಬಳಿ ಪೌರ ಕಾರ್ಮಿಕರಿಗೆ ಸೆಲ್ಫಿ ನೀಡಿದ ನಟ ಧ್ರುವ ಸರ್ಜಾ
ಉತ್ತರ ಕನ್ನಡ: ಗುಡ್ಡ ಕುಸಿತದಲ್ಲಿ ಸಂಬಂಧಿಕರನ್ನ ಕಳೆದುಕೊಂಡು ಮಹಿಳೆಯ ಗೋಳಾಟ
ಉತ್ತರ ಕನ್ನಡ: ಗುಡ್ಡ ಕುಸಿತದಲ್ಲಿ ಸಂಬಂಧಿಕರನ್ನ ಕಳೆದುಕೊಂಡು ಮಹಿಳೆಯ ಗೋಳಾಟ
ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಮಿಲಿಟರಿ: ಮಣ್ಣು ತೆರವು ಕಾರ್ಯಾಚರಣೆ ಶುರು
ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಮಿಲಿಟರಿ: ಮಣ್ಣು ತೆರವು ಕಾರ್ಯಾಚರಣೆ ಶುರು
ನೀರಿನಲ್ಲಿ ಈಜಿಕೊಂಡು ಹೋಗಿ ಗ್ರಾಮಗಳಿಗೆ ಬೆಳಕು ನೀಡಿದ ಪವರ್ ಮ್ಯಾನ್
ನೀರಿನಲ್ಲಿ ಈಜಿಕೊಂಡು ಹೋಗಿ ಗ್ರಾಮಗಳಿಗೆ ಬೆಳಕು ನೀಡಿದ ಪವರ್ ಮ್ಯಾನ್
ನಟಿಯರ ಕ್ರಿಕೆಟ್: ರೋಷಾವೇಷದಲ್ಲಿ ಬ್ಯಾಟ್ ಬೀಸಿದ ಸಪ್ತಮಿ ಗೌಡ
ನಟಿಯರ ಕ್ರಿಕೆಟ್: ರೋಷಾವೇಷದಲ್ಲಿ ಬ್ಯಾಟ್ ಬೀಸಿದ ಸಪ್ತಮಿ ಗೌಡ
ಕನ್ನಡಿಗರ ಉದ್ಯೋಗ ಮೀಸಲಾತಿಗೆ ವಿರೋಧಿಸಿದ ಕಿರಣ್ ಮಜುಂದಾರ್ ಸಂಸ್ಥೆಗೆ ಮಸಿ
ಕನ್ನಡಿಗರ ಉದ್ಯೋಗ ಮೀಸಲಾತಿಗೆ ವಿರೋಧಿಸಿದ ಕಿರಣ್ ಮಜುಂದಾರ್ ಸಂಸ್ಥೆಗೆ ಮಸಿ
ತಮಿಳುನಾಡಿನೊಂದಿಗಿನ ನೀರು ಸಂಘರ್ಷಕ್ಕೆ 1 ವರ್ಷ ವಿರಾಮ: ಕುಮಾರಸ್ವಾಮಿ
ತಮಿಳುನಾಡಿನೊಂದಿಗಿನ ನೀರು ಸಂಘರ್ಷಕ್ಕೆ 1 ವರ್ಷ ವಿರಾಮ: ಕುಮಾರಸ್ವಾಮಿ
ಮಿಲಿಟರಿ ಬರುವ ಕಾಲ ಬರುತ್ತೆ, ಕರೆದುಕೊಂಡು ಬರೋಣ: ಹೆಚ್​ಡಿಕೆ ಎಚ್ಚರಿಕೆ
ಮಿಲಿಟರಿ ಬರುವ ಕಾಲ ಬರುತ್ತೆ, ಕರೆದುಕೊಂಡು ಬರೋಣ: ಹೆಚ್​ಡಿಕೆ ಎಚ್ಚರಿಕೆ
ಪ್ರತಿ ಭಾನುವಾರ ಫ್ಯಾಮಿಲಿ ಬದಲು ಫ್ಯಾನ್ಸ್​ಗೆ ಸಮಯ ಮೀಸಲು: ಧ್ರುವ ಸರ್ಜಾ
ಪ್ರತಿ ಭಾನುವಾರ ಫ್ಯಾಮಿಲಿ ಬದಲು ಫ್ಯಾನ್ಸ್​ಗೆ ಸಮಯ ಮೀಸಲು: ಧ್ರುವ ಸರ್ಜಾ