Taurus Personality Traits: ವೃಷಭ ರಾಶಿಯಲ್ಲಿ ಜನಿಸಿದ್ದೀರಾ ನೀವು? ಹಾಗಾದರೆ ನೀವು ಹೀಗಿರುವಿರಿ…!
ವೃಷಭ ರಾಶಿಯು ರಾಶಿ ಚಕ್ರದಲ್ಲಿ ದ್ವಿತೀಯ ರಾಶಿ ಎನಿಸಿಕೊಂಡಿದೆ. ಇದರ ಅಧಿಪತಿ ಚಂದ್ರ. ಇದು ಚಂದ್ರನ ಮೂಲ ತ್ರಿಕೋಣ ರಾಶಿ ಎಂದೂ ಕರೆಯುತ್ತಾರೆ. ಈ ರಾಶಿಯಲ್ಲಿ ಜನಿಸಿದವರಿಗೆ ಚಂದ್ರನ ವಿಶೇಷ ಅಂಶಗಳು ಇರಲಿವೆ.
ವೃಷಭ ರಾಶಿಯು ರಾಶಿ ಚಕ್ರದಲ್ಲಿ ದ್ವಿತೀಯ ರಾಶಿ ಎನಿಸಿಕೊಂಡಿದೆ. ಇದರ ಅಧಿಪತಿ ಚಂದ್ರ. ಇದು ಚಂದ್ರನ ಮೂಲ ತ್ರಿಕೋಣ ರಾಶಿ ಎಂದೂ ಕರೆಯುತ್ತಾರೆ. ಈ ರಾಶಿಯಲ್ಲಿ ಜನಿಸಿದವರಿಗೆ ಚಂದ್ರನ ವಿಶೇಷ ಅಂಶಗಳು ಇರಲಿವೆ. ಮನಃಕಾರಕನಾದ ಚಂದ್ರನು ತನ್ನ ರಾಶಿಯಲ್ಲಿಯೇ ಇದ್ದರೆ ಆತನ ಮನಸ್ಸು ಸಾಮಾನ್ಯವಾಗಿ ದುರ್ಬಲವಾಗಿ ಇರದು. ಈ ರಾಶಿಯಲ್ಲಿ ಜನಿಸಿದವರು ಅಥವಾ ಈ ರಾಶಿಗೆ ಚಂದ್ರನ ಪ್ರವೇಶವಾದಾಗ ಯಾವೆಲ್ಲ ಗುಣ ಮತ್ತು ಅವಗುಣಗಳು ಇರುತ್ತವೆ ಎನ್ನುವುದನ್ನು ತಿಳಿಯಬಹುದು.
ಆಕರ್ಷಕ ರೂಪವು ಅವರದ್ದಾಗಿತ್ತದೆ. ಸುಂದರವಾದ ಮುಖ ಹಾಗು ಕಣ್ಣುಗಳನ್ನು ಅವರು ಹೊಂದಿರುವರು. ವಿಶಾಲವಾದ ಮುಖವುಳ್ಳವರು. ಮತ್ತೆ ಮತ್ತೆ ನೋಡಬೇಕು ಎನ್ನುವ ಸೌಂದರ್ಯ ರಾಶಿ. ಬಹಳ ಐಷಾರಾಮಿಯಾಗಿ ಬದುಕುವ ಸ್ವಭಾವ ಅವರದ್ದು. ಹಣವನ್ನು ಸುಮ್ಮನೇ ಖರ್ಚು ಮಾಡುತ್ತ ಆದಾಯಕ್ಕೆ ಕಳೆದುಕೊಳ್ಳುತ್ತಾರೆ.
ತ್ಯಾಗ ಬುದ್ಧಿಯುಳ್ಳವರು ಆಗಿರುತ್ತಾರೆ. ಯಾರಾದರೂ ಏನಾದರೂ ಸಹಾಯವನ್ನು ಕೇಳಿದರೆ ಇಲ್ಲ ಎನ್ನದೆ ತಮ್ಮ ಕೈಲಾದುದನ್ನು ಮಾಡುವರು. ಧನ ಸಹಾಯವೂ ಹೌದು, ವಸ್ತು ಸಹಾಯವೂ ಹೌದು. ಒಟ್ಟಿನಲ್ಲಿ ತನ್ನನ್ನು ಕೇಳಿ ಬಂದವರಿಗೆ ಆಗುವುದಿಲ್ಲ ಎನ್ನುವ ಮಾತಿಲ್ಲ.
ಕಷ್ಟವನ್ನು ವ್ಯಕ್ತಪಡಿಸದೇ ತಾನೇ ನುಂಗಿಕೊಳ್ಳುವುದು. ಯಾರ ಬಳಿಯೂ ಹೇಳುವ ಮನಸ್ಸಾಗದು. ತನ್ನ ನೋವನ್ನು ತಾನೇ ಅನುಭವಿಸಬೇಕು ಎನ್ನುವ ಸ್ವಾಭಿಮಾನವು ಎದ್ದು ಕಾಣುತ್ತದೆ.
ನಾಯಕನಾಗುವ ಸ್ವಭಾವವನ್ನು ಇವರು ಹೊಂದಿರುತ್ತಾರೆ. ಎಲ್ಲರನ್ನೂ ಒಗ್ಗೂಡಿಸುವ ಚಾಚಕ್ಯತೆಯುಳ್ಳವರು ಇವರು.
ಸಂತಾನದ ಕೊರಗು ಸದಾ ಕಾಡುವುದು. ಅದರಲ್ಲೂ ಅನ್ಯರ ಸಂತಾನವನ್ನು ಕಂಡಾಗ ಬಹಳ ಬೇಸರವಾಗುವುದು.
ಬಂಧುಗಳ ಜೊತೆಗಿನ ಸಂಪರ್ಕ ಅಷ್ಟಕಗಕಷ್ಟೇ. ಯಾರನ್ನೂ ಅತಿಯಾಗಿ ಬಳಸುವ ಮನಃಸ್ಥಿತಿ ಇರದು. ಒಬ್ಬೊಂಟಿಯಾಗಿ ಸಾಧಿಸಬೇಕು ಎನ್ನುವ ಹಂಬಲವಿರುವುದು.
ತಪ್ಪನ್ನು ಕ್ಷಮಿಸುವ, ಅದನ್ನು ದೊಡ್ಡದಾಗಿ ಮಾಡದೇ ಸಹಜವಾಗಿ ಇರುವ ಸ್ವಭಾವವನ್ನು ಇವರು ಹೊಂದುವರು.
ಇವರದು ಹಸಿವಿನ ಪ್ರಕೃತಿ. ತಿಂದಷ್ಟೂ ಜೀರ್ಣಿಸಿಕೊಳ್ಳುವ ಸಾಮರ್ಥ್ಯ ಇರುವುದು. ಜೀರ್ಣಶಕ್ತಿಯು ಉತ್ತಮ ರೀತಿಯಲ್ಲಿ ಇರಲಿದೆ.
ಸ್ತ್ರೀಯರು ಇವರ ವರ್ತನೆಯನ್ನು ಇಷ್ಟಪಡುವರು. ಹಾಗಾಗಿ ಪ್ರೀತಿಯಲ್ಲಿ ಬೀಳುವ ಸಾಧ್ಯತೆ ಹೆಚ್ಚಿರುತ್ತದೆ. ಸ್ತ್ರೀಸಂಪರ್ಕವನ್ನು ಹೊಂದಿದರು ಇವರಾಗಿರುತ್ತಾರೆ.
ಇವರು ಮಾಡುವ ಗೆಳೆತನವು ಸ್ಥಿರವಾಗಿ ಇರುವುದು. ಅಂದರೆ ಒಮ್ಮೆ ಗೆಳೆತನ ಮಾಡಿದರೆ ಅವರನ್ನು ಬಿಡುವುದಿಲ್ಲ. ಯಾವುದಾದರೂ ಒಂದು ಕಾರಣಕ್ಕೆ ಹಳೆಯ ಗೆಳೆತನವನ್ನೇ ಮುಂದುವರಿಸುವರು.
ಇವರು ತಮ್ಮ ಜೀವನದ ಯೌವನಾವಸ್ಥೆ ಮತ್ತು ವೃದ್ಧಾಪ್ಯದಲ್ಲಿ ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳತ್ತಾ ಸುಖಿಗಳಾಗಿ ಇರುವರು.
ಇಲ್ಲಿ ಹೇಳಿದ ಅಂಶಗಳು ಅವರ ರಾಶಿಯವರಿಗಾದರೂ ಕೆಲವು ಚಂದ್ರನು ವೃಷಭರಾಶಿಯ ಸಂಚಾರ ಕಾಲದಲ್ಲಿ ನೀಡುವನು.
– ಲೋಹಿತ ಹೆಬ್ಬಾರ್ – 8762924271