ರವಿಯ ಸಂಕ್ರಮಣದಿಂದ ಯಾವ ರಾಶಿಯವರಿಗೆ ಸಂಕಟ?
ಗ್ರಹಗಳ ನಾಯಕನಾದ ಸೂರ್ಯನು ಇನ್ನೇನು ಕೆಲವೇ ದಿನಗಳಲ್ಲಿ ಸ್ಥಾನವನ್ನು ಬದಲಿಸುವನು. ಸೂರ್ಯನು ಸಂಚರಿಸಲಿರುವ ರಾಶಿಯ ಅಧಿಪತಿಯು ಚಂದ್ರನಾಗಿದ್ದಾನೆ. ಹೀಗಾಗಿ ರವಿಯ ಸಂಕ್ರಮಣದಿಂದ ಯಾವ ರಾಶಿಯವರಿಗೆ ಸಂಕಟ? ಎನ್ನುವುದನ್ನು ತಿಳಿದುಕೊಳ್ಳಿ
ಗ್ರಹಗಳ ನಾಯಕನಾದ ಸೂರ್ಯನು ಇನ್ನೇನು ಕೆಲವೇ ದಿನಗಳಲ್ಲಿ ಸ್ಥಾನವನ್ನು ಬದಲಿಸುವನು. ಮಿಥುನ ರಾಶಿಯಲ್ಲಿ ಕಳೆದ ಒಂದು ತಿಂಗಳಿನಿಂದ ಇದ್ದಾನೆ. ಇನ್ನು ಕರ್ಕಾಟಕ ರಾಶಿಯನ್ನು ಪ್ರವೇಶಿಸುವನು. ಇದನ್ನು ಅಯನ ಸಂಕ್ರಾಂತಿ ಎಂದೂ ಕರೆಯುತ್ತಾರೆ. ಉತ್ತರ ದಿಕ್ಕಿನ ಕಡೆ ಸಂಚಾರ ಮಾಡುತ್ತಿದ್ದ ಸೂರ್ಯನು ಇನ್ನು ಮೇಲೆ ದಕ್ಷಿಣದ ಕಡೆ ಸಂಚಾರವನ್ನು ಆರಂಭಿಸುವನು. ಹಬ್ಬಗಳು ಇನ್ನು ಒಂದೊಂದಾಗಿ ಆರಂಭವಾಗುತ್ತವೆ.
ಸೂರ್ಯನು ಸಂಚರಿಸಲಿರುವ ರಾಶಿಯ ಅಧಿಪತಿಯು ಚಂದ್ರನಾಗಿದ್ದಾನೆ. ಸೂರ್ಯ ಚಂದ್ರರಿಬ್ಬರೂ ಮುಖ್ಯ ಗ್ರಹರಾಗಿದ್ದು ಹಲವು ಪರಿಣಾಮಗಳನ್ನು ಪರಿವರ್ತನೆಗಳನ್ನು ಇವರು ಉಂಟುಮಾಡುವರು. ಇಲ್ಲಿ ಗಜಕೇಸರೀ ಯೋಗ ರಾಜಯೋಗಗಳೂ ಸಂಭವಿಸುವುವು.
ವೃಷಭ ರಾಶಿ :ಈ ರಾಶಿಯವರಿಗೆ ಚಂದ್ರನು ಈ ರಾಶಿಗೆ ಬಂದ ಸಂದರ್ಭದಲ್ಲಿ ನಿರ್ಧಾರವನ್ನು ಸರಿಯಾಗಿ ತೆಗದುಕೊಳ್ಳಲು ಸಾಧ್ಯವಾಗುವುದು. ಅಲ್ಲಿಯವರೆಗೆ ಗೊಂದಲದಲ್ಲಿಯೇ ನೀವು ಇರುವಿರಿ. ಬೇರೆಯವರ ಸಲಹೆಗಳನ್ನು ನಿಮ್ಮನ್ನು ಚಿಂತೆಗೀಡುಮಾಡುವುದು.
ಕರ್ಕಾಟಕ ರಾಶಿ :ಕರ್ಕಾಟಕವು ಗುರುವಿನ ಉಚ್ಚರಾಶಿಯೂ ಆಗಿದ್ದು, ಸದ್ಯ ಗುರುವಿನ ಉಪಸ್ಥಿತಿಯು ವೃಷಭದಲ್ಲಿ ಇದೆ. ವೃಷಭವೂ ಚಂದ್ರ ರಾಶಿಯಾದ ಕಾರಣ ಅನೇಕ ಶುಭಫಲವು ಈ ರಾಶಿಯವರಿಗೆ ಇದೆ. ಆಗಬೇಕಾದ ಕಾರ್ಯವನ್ನು ಸುಲಭವಾಗಿ ಮಾಡಿಮುಗಿಸುವಿರಿ. ಆರ್ಥಿಕತೆಯು ಉತ್ತಮವಾಗಲಿದೆ. ಬೇರೆ ಬೇರೆ ಮೂಲಗಳಿಂದ ಧನಲಾಭವಾಗುವುದು. ಗೌರವಾದರಗಳು ಈ ರಾಶಿಯವರ ಪಾಲಿಗೆ ಇದೆ. ದಾಂಪತ್ಯದಲ್ಲಿ ಉಂಟಾದ ಕಲಹವು ಸರಿಯಾಗುವ ಸಂದರ್ಭವು ಬರುವುದು.
ಈ ರಾಶಿಯವರಿಗೆ ಚಂದ್ರನು ವೃಷಭರಾಶಿಗೆ ಅಥವಾ ಕರ್ಕಾಟಕ ರಾಶಿಗೆ ಬಂದಾಗ ಹೆಚ್ಚಿನ ಉತ್ತಮ ಫಲದ ನಿರೀಕ್ಷೆ ಇರುವುದು.
ಮಕರ ರಾಶಿ :ಈ ರಾಶಿಯವರಿಗೆ ಸೂರ್ಯನ ಸಂಕ್ರಮಣದ ಫಲವು ಪ್ರಾಪ್ತವಾಗಲಿದೆ. ಮಕ್ಕಳ ನಡುವಣ ವೈಮನಸ್ಯ ಸರಿಯಾಗಿ, ಸಂಬಂಧವು ಸಹಜವಾಗಲಿದೆ.
ಮೀನ ರಾಶಿ :ಸಾಮಾಜಿಕ ಕ್ಷೇತ್ರದಲ್ಲಿ ಸಾಧಿಸಿದವರಿಗೆ ಸಮ್ಮಾನಗಳು ಸಿಗುವುದು. ಕೃಷಿ, ಶಿಕ್ಷಣ, ವೈದ್ಯರಿಗೆ ವಿಶೇಷ ಸ್ಥಾನವನ್ನು ಪಡೆಯಲು ಸಾಧ್ಯವಾಗುವುದು.
ಪುನರ್ವಸು ನಕ್ಷತ್ರದ ಗ್ರಹವೂ ಗುರುವೇ ಆಗಿರುವ ಕಾರಣ ಅದೇ ರಾಶಿಯಲ್ಲಿ ಸೂರ್ಯನ ಸಂಚಾರವೂ ಇದೆ. ಹಾಗಾಗಿ ಮೀನ ರಾಶಿಗೆ ವಿಶೇಷ ಲಾಭವೂ ಸ್ಥಾನಮಾನಗಳ ಅಪೇಕ್ಷೆಗಳೂ ಪೂರ್ಣವಾಗುವುದು. ರಾಜನಿಗೆ ಸಮಾನವಾದ ಅವಕಾಶಗಳು ಸೌಕರ್ಯಗಳು ಸಿಗಲಿವೆ. ಅದರ ಜೊತೆಗೆ ವೃಶ್ಚಿಕ, ಧನು ರಾಶಿಗಳಿಗೂ ಸೂರ್ಯನ ಪರಿವರ್ತನೆಯಿಂದ ಅಲ್ಪ ಪರಿಣಾಮ ಇರಲಿದೆ.
– ಲೋಹಿತ ಹೆಬ್ಬಾರ್ – 8762924271