Astrology: ರಾಶಿ ಭವಿಷ್ಯ: ನಿಮ್ಮ ಅಹಂಕಾರದಿಂದ ನೀವೇ ಕಷ್ಟಪಡಬೇಕಾದೀತು
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಜೂ.22 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಶನಿವಾರ(ಜೂನ್. 22) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠಾ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಹುಣ್ಣಿಮೆ, ನಿತ್ಯನಕ್ಷತ್ರ: ಮೂಲಾ, ಯೋಗ: ಶುಕ್ಲ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 06 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:21 ರಿಂದ 10:58ರ ವರೆಗೆ, ಯಮಘಂಡ ಕಾಲ 02:12ರಿಂದ 03:49ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:06ರಿಂದ ಬೆಳಗ್ಗೆ 07:44ರ ವರೆಗೆ.
ಸಿಂಹ ರಾಶಿ : ಜಟಿಲ ಸಮಸ್ಯೆಗಳನ್ನು ನಿಮ್ಮ ಬಳಿ ಹೇಳಿಕೊಳ್ಳುವರು. ಯಾರನ್ನೋ ಮೆಚ್ಚಿಸಲು ನಿಮ್ಮ ಸಮಯವನ್ನು ವ್ಯಯಿಸಬೇಕಾಗುವುದು. ಅದರಿಂದ ಯಾವ ಲಾಭವೂ ಆಗದು. ಭೂವ್ಯವಹಾರದಲ್ಲಿ ಅನುಕೂಲಕರವಾದ ಸನ್ನಿವೇಶಗಳನ್ನು ಸೃಷ್ಟಿ ಮಾಡಿಕೊಳ್ಳುವಿರಿ. ನಿಮ್ಮಲ್ಲಿ ವಿದ್ಯೆ, ಸಂಪತ್ತು ಎಲ್ಲವೂ ಇದ್ದರೂ ಪ್ರಯೋಜನಕ್ಕೆ ಬಾರದಾಗಿದೆ. ನಿಮ್ಮಿಂದ ಮನೆಯು ಕೆಲವನ್ನು ನಿರೀಕ್ಷಿಸುತ್ತದೆ. ಕೇಳಿಕೊಂಡು ಮಾಡಿ ನೀವೂ ಹೇಳಬೇಕಾದುದನ್ನು ಹೇಳುವಲ್ಲಿ ಹೇಳಿ. ಸುಮ್ಮನೇ ಹರಟೆ ಹೊಡೆದು ಪ್ರಯೋಜನವಗಾದು. ಅಧಿಕಾರದ ನೀವೂ ದುರುಪಯೋಗ ಮಾಡಿಕೊಳ್ಳಬೇಡಿ, ಬೇರೆಯವರು ಮಾಡದಂತೆ ಎಚ್ಚರವಹಿಸಿ. ನೂತನ ವಸ್ತುಗಳ ಖರೀದಿಯಲ್ಲಿ ಮೋಸ ಹೋಗುವಿರಿ. ಕುಟುಂಬದ ಚಿಂತೆಯಿಂದ ಆರೋಗ್ಯವನ್ನು ಹಾಳುಮಾಡಿಕೊಳ್ಳುವಿರಿ. ಅನವಶ್ಯಕವಾಗಿ ಹಣವನ್ನು ವ್ಯರ್ಥ ಮಾಡಿಕೊಳ್ಳುವಿರಿ. ಸಂಗಾತಿಯ ಬೆಂಬಲ ಸಿಗಲಿದೆ. ಜೀವನಕ್ಕೆ ಕೆಲವು ಮಾರ್ಪಾಡುಗಳು ಅನಿವಾರ್ಯವಾದೀತು.
ಕನ್ಯಾ ರಾಶಿ : ಇಂದು ಬಿಡಲಾಗದ ದುಶ್ಚಟಗಳು ನಿಮ್ಮ ವ್ಯಕ್ತಿತ್ವವನ್ನು ಘಾಸಿಗೊಳಿಸಬಹುದು. ಹಣದ ಆಮಿಷವನ್ನು ತೋರಿಸಿ ನಿಮ್ಮನ್ನು ವಂಚಿಸುವ ಸರಳ ಉಪಾಯವಾಗಿದೆ. ನಿಮ್ಮ ಮಾತುಗಳು ದುರುದ್ದೇಶದಿಂದ ಕೂಡಿದೆ ಎಂದು ನಿಮಗಾಗದವರು ಗುಲ್ಲೆಬ್ಬಿಸಬಹುದು. ಇಂದು ಮನೆಯಲ್ಲಿ ಸಣ್ಣ ಸಣ್ಣ ಖರ್ಚುಗಳಿಗೆ ಧನವನ್ನು ಖರ್ಚು ಮಾಡಬೇಕಾಗಬಹುದು. ಅದೇ ಒಂದು ದೊಡ್ಡ ಮೊತ್ತವಾಗಲಿದೆ. ನಿಮ್ಮ ಜೀವನವನ್ನು ಲಘುವಾಗಿ ಕಾಣುವುದು ಬೇಡ. ಸಮಯ ಬಂದಾಗ ಅದು ತೆರೆದುಕೊಳ್ಳುವ ಸ್ಥಳದಲ್ಲಿ ತೆರೆಯುತ್ತದೆ. ನಿಮಗೇ ಹಾಗಿನ್ನಿಸಿದರೆ ಮುಂದಿನದು ಕಷ್ಟವಾದೀತು. ಪ್ರಕೃತಿಗೆ ವಿರುದ್ಧವಾಗಿರುವ ನಿಮ್ಮ ಯೋಜನೆಯನ್ನು ಬಿಟ್ಟುಬಿಡಿ. ಅಧಿಕಾರಿಗಳನ್ನು ದೂರಿ ಪ್ರಯೋಜನವಿಲ್ಲ. ವ್ಯವಸ್ಥೆ ಇರುವುದೇ ಹೀಗೆ ಎಂಬ ನಿರ್ಧಾರದಿಂದ ಸಮಾಧಾನ ಸಿಗಲಿದೆ. ಸುಮ್ಮನೇ ಖರ್ಚಿಗೊಂದು ದಾರಿಯಾಗುದು. ಸಾಮರ್ಥ್ಯವನ್ನು ಬಳಕೆಯಾಗುವಲ್ಲಿ ಉಪಯೋಗಿಸಿ. ಮಕ್ಕಳನ್ನು ದೂರ ಮಾಡಿಕೊಂಡು ಬೇಸರಗೊಳ್ಳುವಿರಿ.
ತುಲಾ ರಾಶಿ : ದಾನವನ್ನು ಪಡೆಯಲಿಕ್ಕಾಗಿ ಇಂದು ನಿಮ್ಮ ಬಳಿ ಯಾರಾದರೂ ಬರಬಹುದು. ಕೆಲಸದಲ್ಲಿ ಉತ್ಸಾಹ ಕಡಿಮೆ ಎನಿಸಿದಾಗ ಸ್ವಲ್ಪ ಸಮಯ ಬೇರೆ ಕಾರ್ಯದಲ್ಲಿ ಮಗ್ನರಾಗಿ. ನಿಮ್ಮ ಸಾಮಾಜಿಕ ಸೇವೆಗೆ ಗೌರವವು ಸಿಗಲಿದೆ. ರಾಜಕೀಯ ವ್ಯಕ್ತಿಗಳ ಬಲದ ಪ್ರದರ್ಶನವು ಇಂದಾಗಲಿದೆ. ಸ್ವಲ್ಪ ಕಾಲದ ಏನನ್ನೂ ಯೋಚಿಸದೇ ಮೌಲವಾಗಿರುವುದನ್ನು ಅಭ್ಯಾಸ ಮಾಡಿ. ಅದೇ ನಿಮಗೆ ಶಕ್ತಿಯನ್ನು ತಂದುಕೊಡುವುದು. ಇಂದು ನೀವು ನಕಾರಾತ್ಮಕ ಚಿಂತನೆಯನ್ನು ಬಿಟ್ಟ ಕಾರ್ಯದಲ್ಲಿ ತೊಡಗಿ. ಆರ್ಥಿಕ ಸಮಸ್ಯೆಯನ್ನು ಎದುರಿಸಲು ದೇವರ ಅನುಗ್ರಹದ ಅವಶ್ಯಕತೆ ಇದೆ. ಶ್ರಮವನ್ನು ವ್ಯರ್ಥಮಾಡಬೇಡಿ. ವ್ಯಾಪರಸ್ಥರಿಗೆ ಉತ್ತಮಲಾಭದ ದಿನವಾಗಲಿದೆ. ನಂಬಿಕೆಯನ್ನು ಉಳಿಸಿಕೊಳ್ಳುವ ಬಗ್ಗೆ ಯೋಚಿಸಿ ಮಾರುಕಟ್ಟೆಯಿಂದ ಹೆಚ್ಚಿನ ಲಾಭವನ್ನು ಪಡೆಯಲು ಆಗುವುದು. ನಿಮ್ಮ ವ್ಯಾಪಾರ ವಿಸ್ತರಣೆಯನ್ನು ಮಾಡಲು ನಿರ್ಧಾರ ಮಾಡುವಿರಿ. ನಿಮ್ಮ ಅಹಂಕಾರದಿಂದ ನೀವೇ ಕಷ್ಟಪಡಬೇಕಾದೀತು. ಹಳೆಯ ಘಟನೆಯನ್ನು ನೆನಪಿಸಿಕೊಂಡು ಸಂಕಟಪಡುವುದು ಬೇಡ. ಕಳ್ಳರ ಭೀತಿಯು ಕಾಡಬಹುದು.
ವೃಶ್ಚಿಕ ರಾಶಿ : ನೋಡಲಷ್ಟೇ ಸುಂದರವಗಿದ್ದರೆ ಸಾಲದು. ಮನಸ್ಸೂ ಸುಂದರವಾಗಿರಬೇಕು ಕೊಳಕುಗಳು ಇಲ್ಲದಂತೆ. ನಿಮ್ಮ ಇಂದಿನ ಕಾರ್ಯದ ಒತ್ತಡ ನಿಮ್ಮನ್ನು ಒತ್ತಡಕ್ಕೆ, ಉದ್ವೇಗಕ್ಕೆ ಒಯ್ಯಬಹುದು. ಇಂತಹ ಸಂದರ್ಭಗಳಲ್ಲಿ ಸುಮ್ಮನೆ ಸ್ವಲ್ಪ ಹೊತ್ತು ಮಾಡುವ ಕೆಲಸಗಳತ್ತ ಗಮನಹರಿಸಿ. ನೀವು ಮಾಡಲಿರುವ ಕೆಲಸಗಳು ಪರ್ವತದಷ್ಟು ಇರಲಿದೆ. ದಾಂಪತ್ಯದಲ್ಲಿ ಕಲಹವಾಗಿ ಸಂಧಿಯಲ್ಲಿ ಮುಕ್ತಾಯವಾಗುವುದು. ಇಬ್ಬರ ನಡುವೆ ಪ್ರರಿಷ್ಠೆಯು ಬಂದು ಕಲಹಕ್ಕೆ ಕಾರಣವಾಗಲಿದೆ. ಚಂಚಲವಾದ ಮನಸ್ಸಿನಿಂದ ನಿಶ್ಚಿತವಾದ ಗುರಿ ಸಾಧ್ಯವಾಗದು. ನಿರೀಕ್ಷಿತ ಲಾಭದಿಂದ ನಿಮಗೆ ಸಂತೋಷವಾಗುವುದು. ದೂರಪ್ರಯಾಣವನ್ನು ಮುಂದೂಡುವುದು ಒಳ್ಳೆಯದು. ಸರ್ಕಾರಿ ಕೆಲಸಗಳು ಕುಂಟುತ್ತ ಸಾಗುವುದು. ನಿಮ್ಮ ಹಾದಿಯನ್ನು ನೋಡಿಕೊಳ್ಳುವ ಸಮಯವಿದಾಗಿರುತ್ತದೆ. ಯಾರನ್ನೋ ದೂಷಿಸುವುದರಿಂದ ಯಾವ ಲಾಭವೂ ಆಗದು. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಆಸಕ್ತಿ ಕಳೆದುಕೊಳ್ಳಬಹುದು, ಪ್ರೀತಿ ಪಾತ್ರರನ್ನು ನೀವು ಚೆನ್ನಾಗಿ ನೋಡಿಕೊಳ್ಳುವಿರಿ. ನೆರ ಮನೆಯವರ ವರ್ತನೆಯಿಂದ ನೀವು ಸಿಟ್ಟಾಗುವಿರಿ.