Horoscope: ಈ ರಾಶಿಯವರು ಸಂಯಮದಿಂದ ವರ್ತಿಸುವ ಅವಶ್ಯಕತೆವಿರಲಿದೆ

ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರಾಗಿದ್ದರೇ, 26 ಜೂನ್​​ 2024ರ​​ ನಿಮ್ಮ ರಾಶಿಭವಿಷ್ಯ ಹೇಗಿದೆ? ನಿಮಗೆ ಶುಭ ಅಥವಾ ಅಶುಭ ದಿನವಾ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಎಂಬಿತ್ಯಾದಿ ಮಾಹಿತಿಗಳನ್ನು ಇಂದಿನ ರಾಶಿಭವಿಷ್ಯದಿಂದ ತಿಳಿದುಕೊಳ್ಳಿ.

Horoscope: ಈ ರಾಶಿಯವರು ಸಂಯಮದಿಂದ ವರ್ತಿಸುವ ಅವಶ್ಯಕತೆವಿರಲಿದೆ
ರಾಶಿ ಭವಿಷ್ಯ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 26, 2024 | 12:15 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಬುಧವಾರ (ಜೂನ್. 26) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಜ್ಯೇಷ್ಠಾ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಧನಿಷ್ಠಾ, ಯೋಗ: ವಿಷ್ಕಂಭ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 07 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ 12:36 ರಿಂದ 02:13 ರವರೆಗೆ, ಯಮಘಂಡ ಕಾಲ ಬೆಳಿಗ್ಗೆ 07:44 ರಿಂದ 09:22ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 10:59 ರಿಂದ 12:36ರ ವರೆಗೆ.

ಮೇಷ ರಾಶಿ : ಇಂದು ದೈವಭಕ್ತಿಗೆ ನಿಮಗೆ ಅನುಕೂಲಕರ ವಾತಾವರಣವು ಸಿಗಲಿದೆ. ಎಂತಹ ಕಷ್ಟದಲ್ಲಿಯೂ ನೆಮ್ಮದಿಯನ್ನೇ ಹುಡುಕುವಿರಿ. ಹೊಸ ಕಾರ್ಯವನ್ನು ಮಾಡಲು ಅತಿಯಾದ ಭಯವು ಬರಲಿದೆ. ಅಧಿಕಾರದ ದುರುಪಯೋಗವನ್ನು ಮಾಡಿಕೊಳ್ಳುವಿರಿ. ಇದರಿಂದ ನಿಮ್ಮ ಕೆಳಗಿನವರು ಸಿಟ್ಟಗೊಂಡಾರು.‌ ನಿಮ್ಮ ಕೆಲಸದ ಮೇಲೆ ಇದರ ಪರಿಣಾಮವಿರಲಿದೆ. ನಿಮ್ಮ ನಂಬಿ ಹಣವನ್ನು ಕೊಡಬಹುದು. ಅದನ್ನು ಉಳಿಸಿಕೊಳ್ಳಿ. ಸರಿಯಾಗಿ ಸಮಯವನ್ನು ಬಳಸಿ. ಕಷ್ಟದಿಂದ ಮುಕ್ತಿ ಸಿಕ್ಕಿತೆಂಬ ಸಂತೋಷದಲ್ಲಿರುವಾಗ ನಿಮಗೆ ಅನಾರೋಗ್ಯ ಉಂಟಾಗಲಿದೆ. ಮಕ್ಕಳ ಜೊತೆ ಇರಲು ನಿಮಗೆ ಇಂದು ಅಸಾಧ್ಯವಾದೀತು. ಒಳ್ಳೆಯ ಕಾಲದ ನಿರೀಕ್ಷೆಯಲ್ಲಿ ಇರುವಿರಿ. ಯಾವುದೋ ಗಹನವಾದ ಆಲೋಚನೆಯಲ್ಲಿ ನೀವು ಮುಳುಗಿರುವಿರಿ. ಇನ್ನೊಬ್ಬರ ವಸ್ತುವನ್ನು ಕೇಳಿ ಪಡೆಯಿರಿ. ಆಪ್ತರ ಮಾತಿನಿಂದ ನಿಮ್ಮ ಕೆಲವು ಅಭಿಪ್ರಾಯವು ಬದಲಾಗುವುದು.

ವೃಷಭ ರಾಶಿ : ನಿಮಗೆ ದುರಭ್ಯಾಸದಿಂದ ಉನ್ನತ ಸ್ಥಾನವು ತಪ್ಪಬಹುದು. ಒತ್ತಡವಿದ್ದರೂ ಅದನ್ನು ನಿಭಾಯಿಸಿಕೊಂಡು ಹೋಗುವಿರಿ. ತಂದೆಯಿಂದ ಬರಬಹುದಾದ ಧನವು ವಿಳಂಬವಾಗಲಿದೆ. ನಿಮ್ಮ ವಿವಾಹವನ್ನು ಮಾಡಿಸಬೇಕೆಂಬ ಪ್ರಯತ್ನವು ವ್ಯರ್ಥವಾದೀತು. ರಾಜಕಾರಿಣಿಗಳಿಗೆ ಒಳ್ಳೆಯ ಬೆಂಬಲ ಸಿಗಲಿದೆ‌. ಅನ್ಯ ವ್ಯಕ್ತಿಯ ಮೂಲಕ ನಿಮ್ಮ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಅಧಿಕಾರದಿಂದ ಕೆಳಗಿಳಿಯಬೇಕಾಗಿದೆ ಎಂಬ ಆತಂಕ ಇರಲಿದೆ. ಧನಲಾಭವಾಗುವುದೆಂದು ಕೆಟ್ಟ ಕಾರ್ಯದಲ್ಲಿ ಮಗ್ನರಾಗುವಿರಿ. ಎಷ್ಟೇ ಅನುಕೂಲವಿದ್ದರೂ ಪ್ರತಿಕೂಲ ಸನ್ನಿವೇಶಗಳನ್ನು ಚಿಂತಿಸುವಿರಿ. ಅಂದುಕೊಂಡಿದ್ದನ್ನು ಬಿಡದೇ ಮುಂದುವರಿಸಿ. ದೀರ್ಘಕಾಲದ ಸ್ನೇಹವು ಮತ್ತೆ ಹೊಸದಾಗಿ ಆರಂಭವಾಗಲಿದೆ. ಸೌಂದರ್ಯವರ್ಧನೆಗೆ ಬೇಕಾದ ಸಮಯವನ್ನು ಕೊಡುವಿರಿ. ಸ್ಪರ್ಧಾತ್ಮಕವಾಗಿ ನೀವು ಕ್ರಿಯಾಶೀಲತೆಯನ್ನು ತೋರಿಸುವಿರಿ.

ಮಿಥುನ ರಾಶಿ : ನಿಮ್ಮ ಇಂದಿನ ಹೊಸ ಪ್ರಯತ್ನಗಳು ಕಾರ್ಯಕ್ಕೆ ಬೇಕಾದ ಉತ್ಸಾಹವನ್ನು ಕೊಡುವುದು. ಸಣ್ಣ ಸಣ್ಣ ವಿಚಾರಕ್ಕೂ ಕಲಹ ಮಾಡುವುದನ್ನು ಕಡಿಮೆ ಮಾಡಿ. ನಿಮ್ಮ ಬಗ್ಗೆ ಹಿಂದಿನಿಂದ ಮಾತನಾಡಿಕೊಳ್ಳುವರು. ಬಂಧುಗಳು ನಿಮ್ಮನ್ನು ಪ್ರೀತಿಸಬಹುದು. ಇಂದು ಹಣದ ಅವಶ್ಯಕತೆಯಿದ್ದು ಸಹೋದರನನ್ನು ಕೇಳುವಿರಿ. ನೂತನ ವಾಹನವನ್ನು ಖರೀದಿಸುವ ಬಗ್ಗೆ ಯೋಚಿಸುವಿರಿ. ಆಪ್ತರಿಂದ ಹಣದ ವಿಚಾರದಲ್ಲಿ ಮೋಸ ಹೋಗುವಿರಿ. ನಿಮ್ಮನ್ನು ಇಷ್ಟಪಡುವ ವ್ಯಕ್ತಿಗಳು ಇರಲಿದ್ದಾರೆ. ಅವರ ಜೊತ ಸಮಯವನ್ನು ಕಳೆಯಲು ಬಯಸುವಿರಿ. ಆರ್ಥಿಕತೆಯ ಬಗ್ಗೆ ಹೆಚ್ಚು ಆಲೋಚನೆ ಇರುವುದು. ಕಛೇರಿಯಲ್ಲಿ ಇಂದು ನೀವು ಸ್ವತಂತ್ರರು. ಮನೋರಥವನ್ನು ಈಡೇರಿಸಿಕೊಳ್ಳುವುದು ನಿಮಗೆ ಕಷ್ಟವಾಗುವುದು. ಮಕ್ಕಳ ಜೊತೆ ಸಮಯವನ್ನು ಕಳೆಯುವಿರಿ. ಸಂಯಮದಿಂದ ವರ್ತಿಸುವ ಅವಶ್ಯಕತೆವಿರಲಿದೆ.

ಕರ್ಕ ರಾಶಿ : ಇಂದು ನೀವು ಎಂತಹ ಚಟುವಟಿಕೆಯಿಂದ ಇದ್ದರೂ ನಿಮ್ಮ ಕೆಲಸ ಮಾತ್ರ ಆಗದೇ ಇರುವುದು. ನಿಮ್ಮ ಮಾತಿನ ಶಕ್ತಿಯನ್ನು ದುರುಪಯೋಗ ಪಡಿಸಿಕೊಳ್ಳಬೇಡಿ. ಆಮೇಲೆ ಅದಕ್ಕೆ ಬೆಲೆಯೇ ಇಲ್ಲದಂತಾದೀತು. ಕೃಷಿಯ ಚಟುವಟಿಕೆಯಲ್ಲಿ ತೊಡಗುವ ಮನಸ್ಸಾದೀತು. ನಿಮ್ಮ ಮೇಲಿರುವ ದೂರನ್ನು ತಳ್ಳಿಹಾಕುವಿರಿ. ಉದ್ಯೋಗದಲ್ಲಿ ಸಿಗುವ ಪದೋನ್ನತಿಯು ಸಿಗುವುದು ತಪ್ಪಲಿದೆ. ಆಪ್ತರ ಜೊತೆ ಈ ಕುರಿತು ಸಮಾಲೋಚನೆ ಮಾಡುವಿರಿ. ಸಕಾರಾತ್ಮಕವಾದ ಚಿಂತನೆ ಇರಲಿ. ಮನೆಯಿಂದ ದೂರ ಬರುವ ನಿಮಗೆ ಸ್ವತಂತ್ರ ಸಿಕ್ಕಂತೆ ಆಗುವುದು. ಹಿರಿಯರಿಗೆ ನೋವುಂಟು ಮಾಡದಂತೆ ಮಾತನಾಡಿ. ಮನಸ್ಸು ಭಾರವಾಗಬಹುದು. ವಾಯುವಿಹಾರ ಮಾಡಿ ಬನ್ನಿ. ನಿಮ್ಮ ಮಾತುಗಳಿಂದ ನೋವಾಗಲಿದೆ. ಹೇಳಬೇಕಾದುದನ್ನು ನೇರವಾಗಿ ಹೇಳಿ. ನಿಮ್ಮಿಂದ ಆಗುವ ಕಾರ್ಯವನ್ನು ಮಾಡಿಕೊಡಿ.

ತಾಜಾ ಸುದ್ದಿ
ದರ್ಶನ್​ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು
ದರ್ಶನ್​ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು
ಸಿಎಂ ವಿವಾದ ಸಿದ್ದರಾಮಯ್ಯ ಕಾರ್ಯವೈಖರಿ ಮೇಲೆ ಪ್ರಭಾವ ಬೀರಿದೆ: ಶೆಟ್ಟರ್
ಸಿಎಂ ವಿವಾದ ಸಿದ್ದರಾಮಯ್ಯ ಕಾರ್ಯವೈಖರಿ ಮೇಲೆ ಪ್ರಭಾವ ಬೀರಿದೆ: ಶೆಟ್ಟರ್
ಹೋರಿ ಬೆದರಿಸುವುದನ್ನು ನೋಡಲು ವಿದ್ಯುತ್​ ಟಿಸಿ ಏರಿ ಕೂತರು: ಜನರ ಹುಚ್ಚಾಟ
ಹೋರಿ ಬೆದರಿಸುವುದನ್ನು ನೋಡಲು ವಿದ್ಯುತ್​ ಟಿಸಿ ಏರಿ ಕೂತರು: ಜನರ ಹುಚ್ಚಾಟ
ಸೋತಲ್ಲೇ ಗೆಲುವ ಹುಡುಕುವ ಛಲ ಮಗನಲ್ಲಿ ಹುಟ್ಟಿದೆ: ಲಕ್ಷ್ಮಿ ಹೆಬ್ಬಾಳ್ಕರ್
ಸೋತಲ್ಲೇ ಗೆಲುವ ಹುಡುಕುವ ಛಲ ಮಗನಲ್ಲಿ ಹುಟ್ಟಿದೆ: ಲಕ್ಷ್ಮಿ ಹೆಬ್ಬಾಳ್ಕರ್
ಕಾಂಗ್ರೆಸ್ ನಾಯಕರು ಯಾರನ್ನೇ ಸಿಎಂ ಮಾಡಿದರೂ ನಂಗೆ ಸಂಬಂಧಿಸದ ವಿಷಯ: ರೇವಣ್ಣ
ಕಾಂಗ್ರೆಸ್ ನಾಯಕರು ಯಾರನ್ನೇ ಸಿಎಂ ಮಾಡಿದರೂ ನಂಗೆ ಸಂಬಂಧಿಸದ ವಿಷಯ: ರೇವಣ್ಣ
ದರ್ಶನ್ ಬಂಧನದ ದಿನ ‘ಡೆವಿಲ್’ ಸಿನಿಮಾ ಸೆಟ್​ನಲ್ಲಿ ಏನಾಯ್ತು? ವಿನಯ್
ದರ್ಶನ್ ಬಂಧನದ ದಿನ ‘ಡೆವಿಲ್’ ಸಿನಿಮಾ ಸೆಟ್​ನಲ್ಲಿ ಏನಾಯ್ತು? ವಿನಯ್
ಡಿಕೆ ಸುರೇಶ್​ರನ್ನು ಸೋಲಿಸಿದ್ದು ಸಿದ್ದರಾಮಯ್ಯ; ಅಶೋಕರಿಂದ ಅಸಂಬದ್ಧ ಹೇಳಿಕೆ
ಡಿಕೆ ಸುರೇಶ್​ರನ್ನು ಸೋಲಿಸಿದ್ದು ಸಿದ್ದರಾಮಯ್ಯ; ಅಶೋಕರಿಂದ ಅಸಂಬದ್ಧ ಹೇಳಿಕೆ
ಸಿಎಂ ಮತ್ತು ಡಿಸಿಎಂ ಆಯ್ಕೆ ಮಾಡೋದು ಸ್ವಾಮೀಜಿಗಳಲ್ಲ: ಸಿದ್ದರಾಮಯ್ಯ, ಸಿಎಂ
ಸಿಎಂ ಮತ್ತು ಡಿಸಿಎಂ ಆಯ್ಕೆ ಮಾಡೋದು ಸ್ವಾಮೀಜಿಗಳಲ್ಲ: ಸಿದ್ದರಾಮಯ್ಯ, ಸಿಎಂ
ಸ್ವಾಮೀಜಿಗಳು ಹೇಳುತ್ತಿರುವ ಹಿಂದೆ ಬಿಜೆಪಿ ಕೈವಾಡ ಇರಬಹುದು: ಚಲುವರಾಯಸ್ವಾಮಿ
ಸ್ವಾಮೀಜಿಗಳು ಹೇಳುತ್ತಿರುವ ಹಿಂದೆ ಬಿಜೆಪಿ ಕೈವಾಡ ಇರಬಹುದು: ಚಲುವರಾಯಸ್ವಾಮಿ
ದರ್ಶನ್ ನಡೆದು ಬಂದ ಹಾದಿಯ ಬಗ್ಗೆ ಸಾರಾ ಗೋವಿಂದು ವಿಶ್ಲೇಷಣೆ
ದರ್ಶನ್ ನಡೆದು ಬಂದ ಹಾದಿಯ ಬಗ್ಗೆ ಸಾರಾ ಗೋವಿಂದು ವಿಶ್ಲೇಷಣೆ