AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Astrology: ಪ್ರೇಮದಲ್ಲಿ ಬಿರುಕು ಬಂದು ಪರಸ್ಪರ ಆರೋಪಗಳು ಆಗಬಹುದು

ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಜೂ.26 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Astrology: ಪ್ರೇಮದಲ್ಲಿ ಬಿರುಕು ಬಂದು ಪರಸ್ಪರ ಆರೋಪಗಳು ಆಗಬಹುದು
ರಾಶಿ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಕಿರಣ್ ಹನುಮಂತ್​ ಮಾದಾರ್|

Updated on: Jun 26, 2024 | 12:32 AM

Share

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಬುಧವಾರ (ಜೂನ್. 26) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಜ್ಯೇಷ್ಠಾ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಧನಿಷ್ಠಾ, ಯೋಗ: ವಿಷ್ಕಂಭ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 07 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ 12:36 ರಿಂದ 02:13 ರವರೆಗೆ, ಯಮಘಂಡ ಕಾಲ ಬೆಳಿಗ್ಗೆ 07:44 ರಿಂದ 09:22ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 10:59 ರಿಂದ 12:36ರ ವರೆಗೆ.

ಸಿಂಹ ರಾಶಿ : ಇಂದು ನಿಮ್ಮ ಗೃಹ ನಿರ್ಮಾಣದ ಕಡೆಗೆ ಗಮನವಾಗಬೇಕಾಗುವುದು. ಇಂದು ಸ್ನೇಹಿತರ ಜೊತೆ ಹೋಗಬೇಕಿದ್ದ ನಿಮ್ಮ ಪ್ರಯಾಣವು ತುರ್ತು ಕಾರ್ಯದಿಂದ ರದ್ದಾಗಬಹುದು. ಬಹಳ ಆಯಾಸವಾದರೂ ಒತ್ತಡಗಳಿದ್ದರೂ ಇಂದಿನ ಕೆಲಸವನ್ನು ಮಾಡಿ ಮುಗಿಸುವಿರಿ. ಅಪರಿಚಿತ ದೂರವಾಣಿಯ ಕರೆಯಿಂದ ಲಾಭದಾಯಕವಾದ ಕೆಲಸವು ಸಿಗಬಹುದು. ಸರ್ಕಾರಿ ಕೆಲಸಗಳು ನಿಧಾನವಾಗಲಿದೆ. ಇನ್ನೊಬ್ಬರ ವಸ್ತುವನ್ನು ನಿಮ್ಮದನ್ನಾಗಿಸಿಕೊಳ್ಳುವಿರಿ. ಬೇಸರ ಪಡುವ ಅವಶ್ಯಕತೆ ಇಲ್ಲ. ನಿಧಾನವಾಗಿಯಾದರೂ ಚಲಿಸುತ್ತದೆ ಎಂಬ ಸಂತೋಷವಿರಲಿ. ನಿಮಗೆ ಆಗದವರು ತೊಂದರೆ ಕೊಡುತ್ತಿದ್ದಾರೆ ಎಂಬ ಅನುಮಾನವು ಬರಬಹುದು. ಇಂದು ವ್ಯಾಪಾರವನ್ನು ಮಾಡುವ ಮನಸ್ಸು ಇಲ್ಲದಿದ್ದರೂ ಮನೆಯಲ್ಲಿ ಕುಳಿತು ಬೇಸರವಾಗಬಹುದು. ವಿದೇಶದವರ ಜೊತೆ ನಿಮ್ಮ ವ್ಯವಹಾರವು ನಡೆಯುವುದು. ನಿಮಗೆ ಬೇಕಾದ ವ್ಯವಸ್ಥೆಯನ್ನು ನೀವು ಮಾಡಿಕೊಳ್ಳುವಿರಿ.

ಕನ್ಯಾ ರಾಶಿ : ಇಂದು ಮಕ್ಕಳ ವಿಚಾರಕ್ಕೆ ಹಣವು ವ್ಯಯವಾಗಬಹುದು. ಅಕಾರಣವಾದ ವಿವಾದಗಳಿಂದ ಸಮಯವು ಹಾಳಾಗಬಹುದು.‌ ಹಣ ಸಂಪಾದನೆಗೆ ದೂರಪ್ರಯಾಣ ಮಾಡಬೇಕಾದೀತು. ಮಾಡಲು ತುಂಬ ಕೆಲಸಗಳಿದ್ದು ಯಾವುದನ್ನು ಮಾಡುವುದು ಎಂಬ ಗೊಂದಲ ಸೃಷ್ಟಿಯಾಗಬಹುದು. ಹಿರಿಯರು ನಿಮ್ಮನ್ನು ಪ್ರಶಂಸಿಸುವರು. ದಾಂಪತ್ಯದಲ್ಲಿ ಸಣ್ಣ ಕಲಹವಾಗಬಹುದು. ಬರಬೇಕಾದ ಹಣಕ್ಕಾಗಿ ಕಾಯುವಿರಿ. ಅದರ ಫಲವು ಸಂಜೆಯ ತನಕ ಇರಲಿದೆ. ಒಂದನ್ನು ಪಡೆಯಲು ಹೋಗಿ ಎರಡನ್ನು ಕಳೆದುಕೊಳ್ಳಬೇಕಾದೀತು. ಇಂದು ಬರುವ ಅತಿಥಿಗಳನ್ನು ಸತ್ಕರಿಸಿ. ತುಂಬ ಸಮಸ್ಯೆಗಳು ಬಂದಂತೆ ಕಾಣಬಹುದು. ಹೊಸ ಉದ್ಯೋಗವನ್ನು ಮಾಡುವ ಸಾಮರ್ಥ್ಯ ಇದ್ದರೂ ಅಳುಕು ನಿಮ್ಮನ್ನು ಹಿಂದೆ ಸರಿಯುವಂತೆ ಮಾಡುವುದು. ನಿಮಗೆ ಗೊತ್ತೇ ಇರದ ಕೆಲಸವನ್ನು ನೀವು ಮಾಡಬೇಕಾದೀತು. ಮಾನಸಿಕ ತೊಳಲಾಟವನ್ನು ಪ್ರಯತ್ನಪೂರ್ವಕವಾಗಿ ಕಡಿಮೆ ಮಾಡಿಕೊಳ್ಳಿ. ನಿಮ್ಮ ಬಗ್ಗೆ ಬರುವ ಆರೋಪವನ್ನು ಸುಳ್ಳು ಮಾಡಿ ತೋರಿಸುವ ಕಾರ್ಯಕ್ಕೆ ಮುಂದಾಗುವಿರಿ.

ತುಲಾ ರಾಶಿ : ಉದ್ವೇಗವು ನಿಮ್ಮ ಕೆಲಸವನ್ನು ಅಸ್ತವ್ಯಸ್ತ ಮಾಡಲಿದೆ. ವಾಸಸ್ಥಳದ ಬದಲಾವಣೆಯಿಂದ‌ ನೆಮ್ಮದಿ ಇರುವುದು. ಪ್ರಭಾವಿ ಜನರ ಭೇಟಿಯಿಂದ ಹೊಸ ದಿಕ್ಕು ಲಭಿಸುವುದು. ಆಸ್ತಿ ಖರೀದಿಯ ಬಗ್ಗೆ ಹೆಚ್ಚಿನ ಒಲವಿರಲಿದೆ‌. ಭೂಮಿಯನ್ನು ಪಡೆಯುವ ತವಕದಲ್ಲಿ ವ್ಯವಹಾರವನ್ನು ಸರಿಯಾಗಿ ನೋಡಿಕೊಳ್ಳಿ. ಅಮೂಲ್ಯವಾದ ವಸ್ತುವೊಂದು ನಿಮ್ಮ ಸ್ನೇಹಿತರಿಗೆ ಕೊಡುಗೆಯಾಗಿ ನೀಡುವಿರಿ. ಧಾರ್ಮಿಕಕ್ಷೇತ್ರಕ್ಕೆ ಪ್ರಯಾಣ ಬೆಳೆಸುವ ಸಾಧ್ಯತೆ ಇರುತ್ತದೆ. ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಕ್ಕೆ ನಿಮ್ಮನ್ನು ಗೌರವಿಸಲಿದ್ದಾರೆ. ಪ್ರೇಮದಲ್ಲಿ ಬಿರುಕು ಬಂದು ಪರಸ್ಪರ ಆರೋಪಗಳು ಆಗಬಹುದು. ವಿದೇಶ ಪ್ರವಾಸದ ಕನಸು ಕಾಣುತ್ತಿರುವವರು ನನಸು ಮಾಡಿಕೊಳ್ಳಬಹುದಾಗಿದೆ. ನಿಮ್ಮ ಉಪಕಾರಕ್ಕೆ ಪ್ರತ್ಯುಪಕಾರವು ಸಿಗದೇ ಇರಬಹುದು. ಮನೆಗೆ ಅತಿಥಿಗಳ ಆಗಮನವಾಗಲಿದ್ದು ನಿಮ್ಮ ಇಂದಿನ ಕಾರ್ಯವು ಬದಲಾಗಬಹುದು. ನಿಮ್ಮ ಇಂದಿನ ಗುರಿ ಬದಲಾಗಬಹುದು.

ವೃಶ್ಚಿಕ ರಾಶಿ : ನಿಮ್ಮ ನ್ಯಾಯಾಲಯದ ಕಾರ್ಯಗಳು ಮಂದಗತಿಯಲ್ಲಿ ಸಾಗಲಿವೆ. ಅನೇಕ‌ ಅನುಮಾನಗಳಿಗೆ ಕಾರಣವಾಗಬಹುದು. ಸ್ತ್ರೀಯರು ಮಂಗಳ‌ಕಾರ್ಯಗಳಲ್ಲಿ ತೊಡಗುವರು. ಮನೆ ಬಳಕೆಗೆ ಬೇಕಾದ ವಸ್ತುಗಳನ್ನು ಖರೀದಿಸುವಿರಿ. ಹಣದ ವಿಚಾರದಲ್ಲಿ ನಿಮಗಿಂದು ನಿರಾಸಕ್ತಿ ಬರಬಹುದು. ಕಛೇರಿಯ ಜವಾಬ್ದಾರಿಯಲ್ಲಿ ಮೂಗು ತೂರಿಸುವುದು ಆಗದು. ಆಲೋಚನೆಗೆ ತಕ್ಕಂತೆ ಯಾವುದೂ ನಡೆಯದು ಎಂಬ ಬೇಸರವು ಹೆಚ್ಚಾಗಿ ಕಾಡಬಹುದು. ಹಳೆಯ ಮಿತ್ರರ ಭೇಟಿಯಾಗಲಿದೆ. ವೈಮನಸ್ಯ ಎದುರಾದಾಗ ಹೊಂದಾಣಿಕೆಯ ಜೊತೆ ಹೊಂದಾಣಿಕೆ ಮಾಡಿಕೊಳ್ಳಿ. ನಿಮ್ಮ ಆದಾಯಕ್ಕೆ ಯಾರಾದರೂ ಅಡ್ಡಗಾಲು ಹಾಕುವವರಿರುವರು. ಬಂಧುಗಳ ವರ್ತನೆಯು ನಿಮಗೆ ಬೇಸರ ತರಿಸೀತು. ಮೇಲ್ನೋಟಕ್ಕೆ ಯಾವುದನ್ನೂ ತೀರ್ಮಾನ ಮಾಡುವುದು ಬೇಡ. ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನಹರಿಸುವರು. ದೇವರ ಬಗ್ಗೆ ಶ್ರದ್ಧೆಯು ಕಡಿಮೆಯಾಗಲಿದೆ. ಆಸ್ತಿಯ ಖರೀದಿಯ ವಿಚಾರದಲ್ಲಿ ನೀವು ಸರಿಯಾದ ಮಾಹಿತಿಯನ್ನು ಪಡೆಯುವುದು ಸೂಕ್ತ.

‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ