Horoscope: ಶತ್ರುಗಳಿಂದ ಮನೆಯಲ್ಲಿ ಕಿರಿಕಿರಿಯಾಗಲಿದೆ-ಎಚ್ಚರ

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ, ಜೂ. 26 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ಶತ್ರುಗಳಿಂದ ಮನೆಯಲ್ಲಿ ಕಿರಿಕಿರಿಯಾಗಲಿದೆ-ಎಚ್ಚರ
ದಿನಭವಿಷ್ಯ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 26, 2024 | 12:45 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಬುಧವಾರ (ಜೂನ್. 26) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಜ್ಯೇಷ್ಠಾ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಧನಿಷ್ಠಾ, ಯೋಗ: ವಿಷ್ಕಂಭ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 07 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ 12:36 ರಿಂದ 02:13 ರವರೆಗೆ, ಯಮಘಂಡ ಕಾಲ ಬೆಳಿಗ್ಗೆ 07:44 ರಿಂದ 09:22ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 10:59 ರಿಂದ 12:36ರ ವರೆಗೆ.

ಧನು ರಾಶಿ : ನೀವು ಇಂದು ಮಾಡಿದ ತಪ್ಪನ್ನು ಮಾಡದೇ ಎಲ್ಲರಿಂದ ಸೈ ಎನಿಸಿಕೊಳ್ಳುವಿರಿ. ಪರರ ಕಷ್ಟಗಳಗೆ ಸ್ಪಂದಿಸಲು ಆಗದೇ ಇರಬಹುದು. ಆಗಿಹೋದ ವಿಷಯವನ್ನು ಮತ್ತೆ ನೆನಪಿಸಿಕೊಂಡು ದಾಂಪತ್ಯದಲ್ಲಿ ಜಗಲಕವಾಗಬಹುದು. ಶತ್ರುಗಳಿಂದ ಮನೆಯಲ್ಲಿ ಕಿರಿಕಿರಿಯಾಗಲಿದೆ. ಮಕ್ಕಳಿಂದ ನಿಮಗೆ ಅಶುಭವಾರ್ತೆಯು ಬರಲಿದೆ. ಆರ್ಥಿಕಸ್ಥಿತಿಯನ್ನು ಊರ್ಜಿತಗೊಳಿಸಲು ಬಹಳ ಶ್ರಮ ಪಡುವಿರಿ. ಪಶ್ಚಾತ್ತಾಪದಿಂದ ಆಗಬೇಕಾದುದು ಏನಿಲ್ಲ ಎಂದು ಭಾವಿಸುವುದು ಬೇಡ. ತಂದೆ ಹಾಗು ತಾಯಿಯರ ಆಶೀರ್ವಾದವನ್ನು ಪಡೆದು ನಿಮ್ಮ ಕೆಲಸಕ್ಕೆ ತೆರಳಿ. ಪಾಲುದಾರಿಕೆಯ ವಿಚಾರದಲ್ಲಿ ನೀವು ಆತುರಪಡಬಾರದು. ತಂತ್ರಜ್ಞರಿಗೆ ಉನ್ನತಸ್ಥಾನಕ್ಕೆ ಹೋಗುವ ಸಾಧ್ಯತೆ ಇದೆ. ನೂತನ ವಾಹನದಲ್ಲಿ ಸಂಚರಿಸುವಿರಿ. ಅತಿಯಾಗಿ ಮಾತಾನಾಡಿ ಗುಟ್ಟನ್ನು ರಟ್ಟು ಮಾಡುವಿರಿ. ಬೇಡದ ಕಾರ್ಯಕ್ಕೆ ಯಾರಾದರೂ ಪ್ರಚೋದಿಸಿಯಾರು. ನಿಶ್ಚಿತವಾದ ವಿವಾಹವು ಅನ್ಯರಿಂದ ತಪ್ಪಿಹೋಗಬಹುದು. ಸಾಮಾಜಿಕವಾದ ಗೌರವವನ್ನು ನೀವು ಅನಾಯಾಸವಾಗಿ ಪಡೆದುಕೊಳ್ಳುವಿರಿ.

ಮಕರ ರಾಶಿ : ನೀವು ಅಪ್ತರ ಸಲಹೆಗಳನ್ನು ಕೇಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. ವೃತ್ತಿಕ್ಷೇತ್ರದಲ್ಲಿ ಸಹೋದ್ಯೋಗಿಯಿಂದ ತೊಂದರೆ ಬರಬಹುದು. ಮಾತನಾಡಲು ಬಹಳ ಮುಜುಗರವಾದೀತು. ನಿಮಗೆ ಬೇಕಾದುದನ್ನೇ ಮಾಡಿಸಿಕೊಳ್ಳುವ ಹಠದ ಸ್ವಭಾವ ಹೆಚ್ಚಿರುವುದು. ಹೆಚ್ಚಿನ ಜವಾಬ್ದಾರಿಗಳು ಸಿಗಬಹುಸು. ಓಡಾಟದಿಂದ ದೇಹಕ್ಕೆ ಆಯಾಸವಾಗಬಹುದು. ಸಮಯೋಚಿತವಾಗಿ ಕಾರ್ಯವನ್ನು ಮಾಡಿ. ದೂರಪ್ರಯಾಣವನ್ನು ಮೊಟಕುಗೊಳಿಸಿ. ಜವಾಬ್ದಾರಿಯು ಹಿಡಿತ ತಪ್ಪಬಹುದು ಎಂಬ ಭಯವೂ ಇರಲಿದೆ. ಮಾತಿನಿಂದ ಕಲಹವಾಗಬಹುದು. ತಂದೆಗೆ ಸಮಾನರಾದವರ ಜೊತೆ ಕಲಹವನ್ನು ಮಾಡಿಕೊಳ್ಳಬೇಡಿ. ವಿದ್ಯಾರ್ಥಿಗಳಿಗೆ ಅನುಕಂಪ ಬೇಕಸದೀತು. ಎಲ್ಲರ ಮೇಲೂ ಅನುಮಾನ ಪಡುವ ದುರಭ್ಯಾಸವು ಬೆಳೆಯಬಹುದು. ಮನೆಯ ಸಮೀಪದಲ್ಲಿಯೇ ನಿಮ್ಮ ಉದ್ಯೋಗವು ಸಿಗಲಿದೆ. ಮನೆಯಲ್ಲಿ ತಾಳ್ಮೆಯಿಂದ ವ್ಯವಹರಿಸಿ. ನಿಮ್ಮ ವಾಹನಕ್ಕಾಗಿ ಖರ್ಚನ್ನು ಮಾಡಬೇಕಾಗುವುದು.

ಕುಂಭ ರಾಶಿ : ಇಂದು ಉದ್ಯಮದ ಅಭಿವೃದ್ಧಿಗೆ ಬೇಕಾದ ಸಭೆಯನ್ನು ಕರೆಯುವಿರಿ. ಹಿತಶತ್ರುಗಳು ನಿಮಗೆ ಹಿನ್ನಡೆ ತಂದಾರು. ಸಂತೋಷದಿಂದ ಇಂದು ಇರುವಿರಿ. ನಿಮ್ಮ ಕಾರ್ಯಕ್ಕೆ ಉತ್ತಮವಾದ ಯಶಸ್ಸು ಸಿಗಲಿದೆ‌. ನಿಮ್ಮನ್ನು ಪರಿಚಿತರು ಮಾತನಾಡಿಸದೇ ಇರಬಹುದು. ಕೃಷಿಕರು ಇಂದು ತಮ್ಮ ಕಾರ್ಯದಲ್ಲಿ ಮಂದಗತಿಯನ್ನು ಕಾಣಬಹುದಾಗಿದೆ. ಭೂಮಿಯ ಮೇಲೆ ಹೂಡಿಕೆ ಮಾಡಲು ಸಲಹೆಗಳು ಬರಬಹುದು. ವೃತ್ತಿಪರರು ಬಹಳ ಉತ್ಸಾಹದಿಂದ ಕಛೇರಿಯಲ್ಲಿ ಕೆಲಸವನ್ನು ಮಾಡುವರು. ಮನಸ್ಸಿನಲ್ಲಿ ಕೆಟ್ಟದ್ದಿದ್ದರೆ ಜೀವನವೂ ಹಾಳಾಗುತ್ತದೆ ಎಂಬ ಸತ್ಯವು ನೆನಪಿನಲ್ಲಿ ಇರಲಿ. ಸಂಪತ್ತಿನ ವಿಚಾರದಲ್ಲಿ ಜಾಗಕರೂಕರಾಗಿರಿ. ನಿಮ್ಮನ್ನು ನಂಬಿಸಿ ಕೆಲಸ ಮಾಡಿಸಿಕೊಳ್ಳುವರು. ಪರಿಚಿತರ ಮೂಲಕ ನಿಮಗೆ ಅಪರಿಚಿತರ ಸಹಾಯ ದೊರೆಯುವುದು. ದಿನದ ಕೆಲಸವೇ ಇಂದು ಬಹಳ ಆಗಲಿದ್ದು ಇನ್ನೊಬ್ಬರ ಕೆಲಸವನ್ನು ಮಾಡಿಕೊಡಲು ತಾಳ್ಮೆ ಇರಲಾರದು. ಹೂಡಿಕೆಗೆ ಯಾರಿಂದಲಾದರೂ ಪ್ರೇರಣೆ ಸಿಗಬಹುದು.

ಮೀನ ರಾಶಿ : ಇಂದು ನಿಮಗೆ ನೌಕರರಿಂದ ತೊಂದರೆ ಬರಬಹುದು. ವಿಶೇಷ ದ್ರವ್ಯ ಲಾಭದಿಂದ ಸಂತೋಷಪಡುವಿರಿ. ವ್ಯಾಪಾರದಿಂದ ಅಧಿಕ ಹಣವು ಉಳಿತಾಯವಾಗಲು ಚಿಂತನೆ ನಡೆಸುವಿರಿ. ಕೆಲಸವನ್ನು ಮಾಡಿಸಿಕೊಳ್ಳಲು ಜಾಣ್ಮೆಯಿಂದ ಮಾತನಾಡುವಿರಿ. ವಿದ್ಯಾರ್ಥಿಗಳು ಮುಂದಿನ ಓದಿಗೆ ಬೇಕಾದ ತಯಾರಿ ನಡೆಸುವರು. ಉದ್ಯೋಗದಲ್ಲಿ ಜವಾಬ್ದಾರಿ ಸ್ಥಾನವವನ್ನು ಪಡೆಯುವಿರಿ. ಯಾವುದನ್ನೇ ಆದರೂ ನಿಷ್ಠೆಯಿಂದ ಕಾರ್ಯ ಮಾಡುವಿರಿ. ಬಂಧುಗಳ ಬೆಂಬಲ‌ ನಿಮ್ಮ ಕಾರ್ಯಕ್ಕೆ ಸದಾ ಇರಲಿದೆ. ಇಂದು ನಿಧಾನವಾಗಿ ಕೆಲಸಕಾರ್ಯಗಳು ನಡೆಯಲಿವೆ. ಪುಣ್ಯಕ್ಣೇತ್ರಗಳ ಭೇಟಿಯನ್ನು ಮಾಡುವಿರಿ. ಸಂಗಾತಿಯನ್ನು ಸಂಬಾಳಿಸಿಕೊಂಡು ಹೋಗಬೇಕಾಗುವುದು. ಸಾಲಬಾಧೆಯಿಂದ ನೀವು ಮುಕ್ತಾರಾಗಲಿದ್ದೀರಿ. ಮನೆಯ ಹಿರಿಯರ ಬಗ್ಗೆ ಪ್ರೀತಿ ಹೆಚ್ಚಾಗಬಹುದು. ಸಂಗಾತಿಯ ಜೊತೆ ಭಿನ್ನಮತವು ಬರಬಹುದು. ಕುಟುಂಬದ ಹಿರಿಯರ ಅನಾರೋಗ್ಯದ ಕಾರಣ ನಿಮ್ಮ ಸ್ವಂತ ಕಾರ್ಯವನ್ನು ಮಾಡಿಕೊಳ್ಳಲಾಗದು.

-ಲೋಹಿತ ಹೆಬ್ಬಾರ್ – 8762924271 (what’s app only)

ತಾಜಾ ಸುದ್ದಿ
ದರ್ಶನ್​ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು
ದರ್ಶನ್​ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು
ಸಿಎಂ ವಿವಾದ ಸಿದ್ದರಾಮಯ್ಯ ಕಾರ್ಯವೈಖರಿ ಮೇಲೆ ಪ್ರಭಾವ ಬೀರಿದೆ: ಶೆಟ್ಟರ್
ಸಿಎಂ ವಿವಾದ ಸಿದ್ದರಾಮಯ್ಯ ಕಾರ್ಯವೈಖರಿ ಮೇಲೆ ಪ್ರಭಾವ ಬೀರಿದೆ: ಶೆಟ್ಟರ್
ಹೋರಿ ಬೆದರಿಸುವುದನ್ನು ನೋಡಲು ವಿದ್ಯುತ್​ ಟಿಸಿ ಏರಿ ಕೂತರು: ಜನರ ಹುಚ್ಚಾಟ
ಹೋರಿ ಬೆದರಿಸುವುದನ್ನು ನೋಡಲು ವಿದ್ಯುತ್​ ಟಿಸಿ ಏರಿ ಕೂತರು: ಜನರ ಹುಚ್ಚಾಟ
ಸೋತಲ್ಲೇ ಗೆಲುವ ಹುಡುಕುವ ಛಲ ಮಗನಲ್ಲಿ ಹುಟ್ಟಿದೆ: ಲಕ್ಷ್ಮಿ ಹೆಬ್ಬಾಳ್ಕರ್
ಸೋತಲ್ಲೇ ಗೆಲುವ ಹುಡುಕುವ ಛಲ ಮಗನಲ್ಲಿ ಹುಟ್ಟಿದೆ: ಲಕ್ಷ್ಮಿ ಹೆಬ್ಬಾಳ್ಕರ್
ಕಾಂಗ್ರೆಸ್ ನಾಯಕರು ಯಾರನ್ನೇ ಸಿಎಂ ಮಾಡಿದರೂ ನಂಗೆ ಸಂಬಂಧಿಸದ ವಿಷಯ: ರೇವಣ್ಣ
ಕಾಂಗ್ರೆಸ್ ನಾಯಕರು ಯಾರನ್ನೇ ಸಿಎಂ ಮಾಡಿದರೂ ನಂಗೆ ಸಂಬಂಧಿಸದ ವಿಷಯ: ರೇವಣ್ಣ
ದರ್ಶನ್ ಬಂಧನದ ದಿನ ‘ಡೆವಿಲ್’ ಸಿನಿಮಾ ಸೆಟ್​ನಲ್ಲಿ ಏನಾಯ್ತು? ವಿನಯ್
ದರ್ಶನ್ ಬಂಧನದ ದಿನ ‘ಡೆವಿಲ್’ ಸಿನಿಮಾ ಸೆಟ್​ನಲ್ಲಿ ಏನಾಯ್ತು? ವಿನಯ್
ಡಿಕೆ ಸುರೇಶ್​ರನ್ನು ಸೋಲಿಸಿದ್ದು ಸಿದ್ದರಾಮಯ್ಯ; ಅಶೋಕರಿಂದ ಅಸಂಬದ್ಧ ಹೇಳಿಕೆ
ಡಿಕೆ ಸುರೇಶ್​ರನ್ನು ಸೋಲಿಸಿದ್ದು ಸಿದ್ದರಾಮಯ್ಯ; ಅಶೋಕರಿಂದ ಅಸಂಬದ್ಧ ಹೇಳಿಕೆ
ಸಿಎಂ ಮತ್ತು ಡಿಸಿಎಂ ಆಯ್ಕೆ ಮಾಡೋದು ಸ್ವಾಮೀಜಿಗಳಲ್ಲ: ಸಿದ್ದರಾಮಯ್ಯ, ಸಿಎಂ
ಸಿಎಂ ಮತ್ತು ಡಿಸಿಎಂ ಆಯ್ಕೆ ಮಾಡೋದು ಸ್ವಾಮೀಜಿಗಳಲ್ಲ: ಸಿದ್ದರಾಮಯ್ಯ, ಸಿಎಂ
ಸ್ವಾಮೀಜಿಗಳು ಹೇಳುತ್ತಿರುವ ಹಿಂದೆ ಬಿಜೆಪಿ ಕೈವಾಡ ಇರಬಹುದು: ಚಲುವರಾಯಸ್ವಾಮಿ
ಸ್ವಾಮೀಜಿಗಳು ಹೇಳುತ್ತಿರುವ ಹಿಂದೆ ಬಿಜೆಪಿ ಕೈವಾಡ ಇರಬಹುದು: ಚಲುವರಾಯಸ್ವಾಮಿ
ದರ್ಶನ್ ನಡೆದು ಬಂದ ಹಾದಿಯ ಬಗ್ಗೆ ಸಾರಾ ಗೋವಿಂದು ವಿಶ್ಲೇಷಣೆ
ದರ್ಶನ್ ನಡೆದು ಬಂದ ಹಾದಿಯ ಬಗ್ಗೆ ಸಾರಾ ಗೋವಿಂದು ವಿಶ್ಲೇಷಣೆ