AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ದಿನಭವಿಷ್ಯ: ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯದ ಕುರಿತು ಆತಂಕ, ಹಿರಿಯರ ಸಲಹೆ ಪಡೆಯುವಿರಿ

ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರಾಗಿದ್ದರೇ, 26 ಮೇ 2024ರ​​ ನಿಮ್ಮ ರಾಶಿಭವಿಷ್ಯ ಹೇಗಿದೆ? ನಿಮಗೆ ಶುಭ ಅಥವಾ ಅಶುಭ ದಿನವಾ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಎಂಬಿತ್ಯಾದಿ ಮಾಹಿತಿಗಳನ್ನು ಇಂದಿನ ರಾಶಿಭವಿಷ್ಯದಿಂದ ತಿಳಿದುಕೊಳ್ಳಿ.

Horoscope: ದಿನಭವಿಷ್ಯ: ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯದ ಕುರಿತು ಆತಂಕ, ಹಿರಿಯರ ಸಲಹೆ ಪಡೆಯುವಿರಿ
ದಿನಭವಿಷ್ಯ: ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯದ ಕುರಿತು ಆತಂಕ, ಹಿರಿಯರ ಸಲಹೆ ಪಡೆಯುವಿರಿ
ಗಂಗಾಧರ​ ಬ. ಸಾಬೋಜಿ
|

Updated on: May 26, 2024 | 12:02 AM

Share

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಮೇ​​​​​ 26ರ ರಾಶಿ ಭವಿಷ್ಯದಲ್ಲಿ ಮೇಷ ರಾಶಿಯಿಂದ ಕಟಕ ರಾಶಿಯವರೆಗೆ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ತೃತೀಯಾ, ನಿತ್ಯನಕ್ಷತ್ರ: ಪೂರ್ವಾಷಾಢ, ಯೋಗ: ಸಾಧ್ಯ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 55 ನಿಮಿಷಕ್ಕೆ, ರಾಹು ಕಾಲ ಸಂಜೆ 05:19 ರಿಂದ 06:56 ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:30 ರಿಂದ 02:06ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:43 ರಿಂದ 05:19ರ ವರೆಗೆ.

ಮೇಷ ರಾಶಿ: ಇಂದು ನಿಮಗೆ ಬರಬೇಕಾದ ಹಣವನ್ನು ಬಲವಂತದಿಂದ ಪಡೆಯಬೇಕಾದೀತು. ಅತ್ಯಂತ ಶ್ರಮವಹಿಸಿ ಕಾರ್ಯವನ್ನು ಮಾಡಲಿದ್ದೀರಿ. ಸ್ನೇಹಿತರ ಸಹಾಯವೂ ದೊರೆಯಲಿದೆ. ದಾಂಪತ್ಯದಲ್ಲಿ ಪರಸ್ಪರ ಮನಸ್ತಾಪವೆದ್ದು ತಣ್ಣಗಾಗಲಿದೆ. ನಾಚಿಕೆಯನ್ನು ಬಿಟ್ಟು ಕೇಳಿದರೆ ನಿಮಗೆ ಬೇಕಾದ ವಸ್ತುಗಳು ಸಿಗಬಹುದು.‌ ಯಾವುದೇ ಕಾರ್ಯದಲ್ಲಿ ಮುಂದುವರಿಯಲು ಹೆದರಿಕೆಯು ಇರಲಿದೆ. ನಿಮಗೆ ನಿಮ್ಮ ಕೆಲಸದಿಂದ ಆದ ತಪ್ಪುಗಳು ಕಾಡಬಹುದು.‌ ನಿಮ್ಮ ಕುಶಲತೆಗೆ ಸರಿಯಾದ ಸ್ಥಾನ ಸಿಗಬಹುದು. ಅಪ್ರಯೋಜನದ ಮಾತುಗಳಿಂದ ನೀವು ಅಪಹಾಸ್ಯಕ್ಕೆ ಒಳಗಾಗುವಿರಿ. ಯಾರ ಮೇಲಿರುವ ಬೇಸರವನ್ನು ಮತ್ಯಾರದೋ ಮೇಲೆ ತೋರಿಸಿ ನಿಮ್ಮವರ ದ್ವೇಷಕ್ಕೆ ಕಾರಣವಾಗಬೇಡಿ. ನೀವು ಇಂದು ಅಸಹಾಯಕರಂತೆ ತೋರುವಿರಿ. ಆರ್ಥಿಕವಾಗಿ ಸಬಲರಾಗಲು ವಿವಿಧ ಆರ್ಥಿಕ ಮೂಲವನ್ನು ಅನ್ವೇಷಿಸಬೇಕಾದೀತು. ಅರ್ಥವಿಲ್ಲದ ಅನ್ವೇಷಣೆಯನ್ನು ಮಾಡುವುದು ಬೇಡ.

ವೃಷಭ ರಾಶಿ: ಇಂದು ನಿಮ್ಮ ಮಾತು ಎಲ್ಲರಿಗೂ ಪ್ರಿಯವಾದುದು. ಅಚಾತುರ್ಯದಿಂದ ಅನಾಹುತ ಮಾಡಿಕೊಳ್ಳುವಿರಿ. ಆಲಸ್ಯದಿಂದ ಮೇಲೆಳಬೇಕಾದ ಸ್ಥಿತಿ ಇದೆ. ನಿಮ್ಮ ಪ್ರತಿಭೆಯ ಅನಾವರಣಕ್ಕೆ ಸಕಾಲವಾಗಿದೆ. ನಿಮ್ಮವರನ್ನು ಬಂಧಿಸಿಡುವ ಕೆಲಸಕ್ಕೆ ಹೋಗಬೇಡಿ. ಪ್ರೀತಿಯಿಂದ ಕೊಟ್ಟ ಉಡುಗೊರೆಯನ್ನು ಸ್ವೀಕರಿಸುವಿರಿ. ನಿಮ್ಮ ಸಹಕಾರದ ಗುಣವು ಎಲ್ಲರಿಗೂ ಮೆಚ್ಚುಗೆಯಾಗುವುದು. ನಿಮ್ಮ ಕೆಲಸಕ್ಕೆ ಸರಿಯಾಗಿ ಹಣವು ಹರಿದು ಬರುವುದು. ಎಲ್ಲವೂ ಸರಿಯಾಗಿ ಆಗುವುದು. ಅತಿಯಾದ ನಿರೀಕ್ಷೆಯಿಂದ ದುಃಖವಾದೀತು. ಪ್ರೇಮದಲ್ಲಿ ಹಿನ್ನಡೆಯಾಗಲಿದೆ. ತಾಳ್ಮೆಯಿಂದ ಮುಖ್ಯ ಆಯುಧವಾಗಿರಲಿ. ವ್ಯಾಪಾರಸ್ಥರಿಗೆ ಸ್ವಲ್ಪ ಆಲಸ್ಯವು ಇರುವುದು. ಒಂದೇ ವಿಚಾರವನ್ನು ಮನನ‌ ಮಾಡುವಿರಿ. ಸಂಗಾತಿಯ ನಡುವೆ ಭಿನ್ನಾಭಿಪ್ರಾಯ ಬರಲಿದೆ. ಪ್ರಯಾಣದಿಂದ ಆಯಾಸವಾಗಬಹುದು.

ಮಿಥುನ ರಾಶಿ: ಆಪ್ತರು ನಿಮಗೆ ಒದಗುವ ಸಂಕಟದಲ್ಲಿ ಜೊತೆಯಾಗುವರು. ಧೈರ್ಯದಿಂದ ನೀವು ಇರಬಹುದು. ತಂತ್ರಜ್ಞರಿಗೆ ಉತ್ತಮ ಕೆಲಸ ಸಿಗಲಿದೆ ಅಥವಾ ಈಗಾಗಲೇ ಕೆಲಸ ಮಾಡುತ್ತಿದ್ದರೆ ಬಡ್ತಿ ಸಿಗಲಿದೆ. ಹೊಸದಾದ ವಾಹನವನ್ನು ಖರೀದಿ ಮಾಡಲಿದ್ದೀರಿ. ಸಾಲದ ಹೊರೆಯನ್ನು ಕಂಡು ಚಿಂತೆಗೆ ಒಳಗಾಗಬೇಕಾಗಬಹುದು. ಅವಸರವನ್ನು ಬಿಟ್ಟು ನಿಧಾನವಾಗಿ ಆಲೋಚಿಸಿ. ರಕ್ಷಣಾ ಪಡೆಗೆ ಸೇರುವವರಿಗೆ ಅವಕಾಶಗಳು ಸಿಗಬಹುದು. ಒಂದೇ ಕೆಲಸ ನಿಮಗೆ ನಿರಾಸಕ್ತಿಯನ್ನು ಮೂಡಿಸೀತು. ಕಛೇರಿಯ ಕೆಲಸವನ್ನು ಮನೆಗೂ ತಂದುಕೊಳ್ಳುವಿರಿ. ಇಂದು ಮಾನಸಿಕವಾಗಿ ನೀವು ಕುಗ್ಗುವಿರಿ. ಕೆಲಸದಿಂದ ಸ್ವಲ್ಪ ವಿಶ್ರಾಂತಿಯನ್ನು ಪಡೆಯುವುದು ಉತ್ತಮ. ಒಂದೇ ಕೆಲಸದಿಂದ ಎರಡು ಪ್ರಯೋಜನವನ್ನು ಪಡೆಯುವಿರಿ. ಭೂಮಿಯ ವ್ಯವಹಾರವು ಸುಲಭಕ್ಕೆ ಕೈ ಹಿಡಿಯದು. ವೇತನವನ್ನು ಹೆಚ್ಚಿಸಿಕೊಳ್ಳಲು ಅನ್ಯ ಮಾರ್ಗವನ್ನು ಹುಡುಕುವ ಅವಶ್ಯಕತೆ ಬರಬಹುದು.

ಕಟಕ ರಾಶಿ: ನಿಮ್ಮ ಸಹೋದರಿಯರ ನಡುವೆ ಸಣ್ಣ ಭಿನ್ನಾಭಿಪ್ರಾಯ ಬರಬಹುದು. ಉದ್ಯೋಗದ ಸ್ಥಳದಿಂದ ನಿಮ್ಮನ್ನು ಕೈ ಬಿಡವ ಸಾಧ್ಯತೆ ಇದೆ. ನಿರಾಸೆಯು ಮೂಡಲಿದೆ. ವ್ಯಾಪರವು ಅಧೋಗತಿಗೆ ಹೋಗಲಿದೆ. ಶತ್ರುಗಳ ಪಿತೂರಿಯ ಕುರಿತು ನಿಮಗೆ ಶಂಕೆ ಉಂಟಾಗಲಿದೆ. ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯದ ಕುರಿತು ಆತಂಕವಿರಬಹುದು. ನಿಮಗೆ ಬೇಕಾದ ಭೂಮಿಯ‌ನ್ನು ನೀವು ಪಡೆಯುವಿರಿ. ಬುದ್ಧಿಗೆ ಸದ್ವಿಚಾರಗಳನ್ನು ನೀಡಿ. ಸಂಬಂಧ ಬೆಳೆಸುವ ವಿಚಾರದಲ್ಲಿ ನೀವು ಆತುರರಾಗುವಿರಿ. ಭವಿಷ್ಯದ ಬಗ್ಗೆ ಪತಿಯಾದ ಚಿಂತನೆ ಇರಲಿದೆ. ನಿಮ್ಮರನ್ನು ನೀವು ಕಳೆದುಕೊಳ್ಳುವ ಭೀತಿಯು ಇರುವುದು. ಆಲಸ್ಯದಿಂದ ನಿಮ್ಮ ಅನೇಕ ಕಾರ್ಯಗಳು ಹಿಂದುಳಿಯಬಹುದು. ಮಕ್ಕಳು ನಿಮ್ಮ ಕೆಲಸಕ್ಕೆ ತೊಂದರೆ ಕೊಡಬಹುದು. ಬೇಡದ ಇರುವ ವಸ್ತುಗಳನ್ನು ದಾನವಾಗಿ ಕೊಡುವಿರಿ.

ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!