Horoscope 09 December: ದಿನಭವಿಷ್ಯ, ಈ ರಾಶಿಯವರು ಗುಣವನ್ನು ಗ್ರಹಿಸಿಕೊಂಡು ಮುಂದುವರಿಯುವುದು ಒಳ್ಳೆಯದು
ರಾಶಿ ಭವಿಷ್ಯ: ಇಂದಿನ (2023 ಡಿಸೆಂಬರ್ 09) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯ ಎದ್ದ ಕೂಡಲೇ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುವ ಅಭ್ಯಾಸ ಕೆಲವರಲ್ಲಿ ಇರುತ್ತದೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ? ಇದೆಯಾ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಇಂದಿನ (ಡಿಸೆಂಬರ್ 9) ನಿಮ್ಮ ರಾಶಿಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಜ್ಯೇಷ್ಠಾ, ಮಾಸ: ಕಾರ್ತಿಕ, ಪಕ್ಷ: ಕೃಷ್ಣಮ, ವಾರ: ಶನಿ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಸ್ವಾತೀ, ಯೋಗ: ಶೋಭನ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 47 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 02 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:36 ರಿಂದ 11ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 01:49 ರಿಂದ 03:14ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:47 ರಿಂದ 08:12ರ ವರೆಗೆ.
ಮೇಷ ರಾಶಿ: ಕೆಲವರ ಕೆಲವು ಮಾತುಗಳಿಗೆ ನಿಮ್ಮ ಮನಸ್ಸನ್ನು ಹಾಳು ಮಾಡಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಅಧಿಕಾರ ಪ್ರಾಪ್ತಿಗೆ ಓಡಾಟವನ್ನು ಮಾಡುವಿರಿ. ಹೇಳಿದ ಸಮಯಕ್ಕೆ ಕೆಲಸವನ್ನು ಮಾಡಿಕೊಡಲಾಗುವುದು. ಹಿರಿಯರ ಸೇವೆಯಲ್ಲಿ ನೀವು ಇರುವಿರಿ. ನಿಮ್ಮ ಪ್ರಗತಿಗೆ ಶತ್ರುಗಳು ಅಡ್ಡಗಾಲು ಹಾಕಬಹುದು. ತಪ್ಪಿಗೆ ಪ್ರಯಶ್ಚಿತ್ತ ಮಾಡಿಕೊಳ್ಳುವಿರಿ. ಬೇಸರದಿಂದ ಹೊರಬರಲು ಮಾರ್ಗವನ್ನು ಹುಡುಕಿಕೊಳ್ಳುವಿರಿ. ನಕಾರಾತ್ಮಕ ಆಲೋಚನೆಗಳನ್ನು ತಲೆಯಿಂದ ತೆಗೆಯಿರಿ. ಕೋಪವನ್ನು ಅಧಿಕಾರಿಗಳಿಂದ ನಿಯಂತ್ರವಿಟ್ಟು ಮಾಡನಾಡಬ ಮೆಚ್ಚುಗೆ ಗಳಿಸುವಿರಿ. ನಿಮ್ಮ ಮಕ್ಕಳ ಬಗ್ಗೆ ಗಮನ ಹೆಚ್ಚು ಬೇಕು. ತಿಳಿವಳಿಕೆ ಇಲ್ಲದವರ ಮುಂದೆ ನಿಮ್ಮ ಉದ್ಯೋಗವನ್ನು ಹೇಳಿಕೊಳ್ಳುವಿರಿ. ಎಲ್ಲವನ್ನೂ ನೀವು ಸಮಾಜಮುಖೀಯಾಗಿ ನೊಡಿಕೊಳ್ಳಿರಿ.
ವೃಷಭ ರಾಶಿ: ನಿರಂತರ ವೃತ್ತಿಪರತೆಯ ನಿಮ್ಮ ಖುಷಿಯನ್ನು ಇಮ್ಮಡಿಸೀತು. ಪ್ರಾಮಾಣಿಕ ಪ್ರಯತ್ನದಲ್ಲಿ ಯಶಸ್ಸನ್ನು ಕಾಣುವಿರಿ. ವಿನಾಕಾರಣ ಸುತ್ತಾಟದಿಂದ ಆಯಾಸವಾಗುವುದು. ಪ್ರಭಾವಿಗಳ ಭೇಟಿಯಿಂದ ಸಂತೋಷವಾಗಲಿದೆ. ಅನ್ಯಸ್ಥಳದಲ್ಲಿ ನಿಮ್ಮ ವಾಸವು ಇರಲಿದೆ. ಯಾರದೋ ಒತ್ತಡಕ್ಕಾಗಿ ನೀವು ನಿಮ್ಮ ತತ್ತ್ವ ಮರೆತು ವರ್ತಿಸಬೇಕಾಗುತ್ತ. ದೂರದೃಷ್ಟಿಯಿಂದ ಮುಂಬರುವ ತೊಂದರೆಯನ್ನು ಸರಿಮಾಡಿಕೊಳ್ಳುವಿರಿ. ಭವಿಷ್ಯದ ಬಗ್ಗೆ ಅಸ್ಪಷ್ಟವಾದ ಚಿಂತೆಯು ಬೇಡ. ಯಂತ್ರಗಳ ವ್ಯಾಪಾರಿಗಳಿಗೆ ಲಾಭದ ದಿನ. ಆಚರಣೆಗಳನ್ನು ಮಾಡಲು ನಿಮಗೆ ಅಧಿಕ ಆಸಕ್ತಿಯು ಬರಬಹುದು. ಉತ್ಸಾಹವು ಎಷ್ಟೇ ಇದ್ದರೂ ನೆಮ್ಮದಿಯ ಮನಸ್ಸಿನಿಂದ ನಿರ್ಧಾರಿಸಿ. ಹಿರಿಯರಿಂದ ಉತ್ತಮ ವಿಚಾರಗಳನ್ನು ತಿಳಿಯುವಿರಿ. ನಾಯಕರ ಗುಣಗನ್ನು ನೀವು ರೂಡಿಸಿಕೊಳ್ಳುಬಹುದು. ಇಂದು ನಿಮ್ಮ ಪರಿಶ್ರಮವು ವ್ಯರ್ಥವಾದಂತೆ ತೋರುವುದು.
ಮಿಥುನ ರಾಶಿ: ವಿದೇಶಕ್ಕೆ ಹೋಗುವ ಬಗ್ಗೆ ಹತ್ತಾರು ಕನಸುಗಳನ್ನು ಕಾಣುವಿರಿ. ನಿರುದ್ಯೋಗವು ನಿಮ್ಮನ್ನು ಹಾಳು ಮಾಡೀತು. ನಿಮ್ಮ ವಿದ್ಯಾಭ್ಯಾಸಕ್ಕೆ ಯೋಗ್ಯವಾದ ಕೆಲಸದ ಅನ್ವೇಷಣೆಯಲ್ಲಿ ತೊಡಗುವಿರಿ. ಮಹಿಳೆಯರು ಉನ್ನತ ಅಧಿಕಾರವನ್ನು ಪಡೆದು ಅಹಂಕಾರ ಮಡುವುದು ಬೇಡ. ಸ್ವಪ್ರತಿಷ್ಠೆಯಿಂದ ಮನಸ್ಸನ್ನು ಹಾಳುಮಾಡಿಕೊಳ್ಳುವಿರಿ. ಹಿರಿಯರೆದುರು ವಿನಯವಿರಲಿ. ದೇವತಾಕಾರ್ಯಗಳಲ್ಲಿ ಆಸಕ್ತಿಯು ಶ್ರದ್ಧೆಯಿಂದ ಭಾಗವಹಿಸುವಿರಿ. ಕಛೇರಿಯಲ್ಲಿ ಅಧಿಕಾರಿಗಳು ನಿಮ್ಮ ಕಾರ್ಯಕ್ಕೆ ಸಂಬಂಧಿಸಿದಂತೆ ವಾಗ್ವಾದ ಮಾಡಬಹುದು. ಯಾರಿಗೂ ಸಾಲವನ್ನು ಕೊಡುವುದು ಬೇಡ. ನಿಮಗೆ ಸಲ್ಲಬೇಕಾದುದರ ಬಗ್ಗೆ ಮಾತ್ರ ಗಮನವಿರಲಿ. ನಿಮ್ಮ ಸಂಬಂಧಗಳನ್ನು ಬಳಸದೇ ದೂರವಾಗುವುದು.
ಕರ್ಕ ರಾಶಿ: ಗುಣವನ್ನು ಗ್ರಹಿಸಿಕೊಂಡು ಮುಂದುವರಿಯುವುದು ಒಳ್ಳೆಯದು. ಪುಣ್ಯ ಸ್ಥಳಗಳು ನಿಮ್ಮ ಮನಸ್ಸನ್ನು ಉದ್ವೇಗದಿಂದ ಸರಿ ಮಾಡೀತು. ಚರಾಸ್ತಿಯಲ್ಲಿ ಗೊಂದಲ ಇರುವುದು. ಪ್ರಯತ್ನಿಸಿದ ಕಾರ್ಯಕ್ಕೆ ಫಲವನ್ನು ನಿರ್ದಿಷ್ಟ ಮಾಡಿಕೊಳ್ಳುವಿರಿ. ಮನೆಯ ಸ್ಥಳವನ್ನು ಬದಲಾಯಿಸುವಿರಿ. ಅನ್ಯಾನ್ಯ ಮಾರ್ಗಗಳಿಂದ ಹಣವು ಬರಬಹುದು. ಕಳೆದಕೊಂಡ ವಸ್ತುವಿಗೆ ತೀವ್ರ ಹುಡುಕಾಟ ಇರುವುದು. ಉತ್ಸಾಹಕ್ಕೆ ತೊಂದರೆ ಆಗುವ ಕಡೆ ನೀವು ಇರಲಾರಿರಿ. ನಿಮ್ಮ ಉದ್ಯೋಗದ ಸ್ಥಳವನ್ನು ನೀವು ಬದಲಾಯಿಸುವಿರಿ. ನಿಮ್ಮ ಕೆಲಸವನ್ನು ಬಿಟ್ಟು ಬೇರೆಯವತ ಕಾರ್ಯದ ಕಡೆ ಗಮನ ಇರುವುದು. ಉದ್ಯೋಗದಲ್ಲಿ ಅಧಿಕ ಲಾಭಕ್ಕಾಗಿ ಶ್ರಮಿರಿಸಿದರೂ ಲಾಭವು ಕಷ್ಟವಾದೀತು. ತಂದೆ-ತಾಯಿಯರನ್ನು ಗೌರವಿಸುವುದು ನಿಮಗೆ ಶ್ರೇಯಸ್ಸಿಗೆ. ಪ್ರಾಮಾಣಿಕತೆಯಿಂದ ನಿಮಗೆ ಉನ್ನತ ಸ್ಥಾನವನ್ನು ನಿರೀಕ್ಷಿಸುವಿರಿ. ದಾನವಾಗಿ ಕೊಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.
ಸಿಂಹ ರಾಶಿ: ನಿಮ್ಮ ತಪ್ಪಿನಿಂದ ಆದಾಯದ ಮಾರ್ಗವು ತಪ್ಪಿಹೋಗುವುದು. ಯಾರ ಮಾತನ್ನೂ ಅನಾದರ ಮಾಡುವುದು ಬೇಡ. ನಿಮ್ಮ ಯೋಚನೆಯ ಕ್ರಮವನ್ನು ಬದಲಿಸಿಕೊಳ್ಳಲು ಸೂಕ್ತ. ದಿನದ ಆರಂಭವು ಬಹಳ ಉತ್ಸಾಹದಿಂದ ಇರುವುದು. ನೇರ ನಡೆಗೆ ನೀವು ಪ್ರಸಿದ್ಧರಾಗಿರುವಿರಿ. ಸಾಲದಿಂದ ಮುಕ್ತರಾಗಲು ನಿಮಗೆ ಅನುಕೂಲವಾಗುವುದು. ತಾಯಿಯ ವಾತ್ಸಲ್ಯವು ಸಿಗುವುದು. ಅಸೂಯೆಯಿಂದ ನಿಮ್ಮ ಇತರ ಕೆಲಸಗಳನ್ನು ಹಾಳುಮಾಡಿಕೊಳ್ಳುವಿರಿ. ಬರುವ ಹಣವನ್ನು ನೀವು ತದೇಕ ಚಿತ್ತದಿಂದ ನಿರೀಕ್ಷಿಸಬಹುದು. ಸ್ನೇಹಿತರ ಸಹಾಯದಿಂದ ನಿಮಗೆ ಬಲವು ಬರುವುದು. ನಿಮ್ಮವರನ್ನು ಒಬ್ಬೊಬ್ಬರನ್ನೇ ಕಳೆದುಕೊಳ್ಳುವ ಸಾಧ್ಯತೆ ಇದೆ. ದೂರದ ಬಂಧುಗಳಿಂದ ಸಹಾಯವು ಸಿಗಬಹುದು. ದಾಂಪತ್ಯದಲ್ಲಿ ಮಧುರ ಕ್ಷಣಗಳಿಂದ ಖುಷಿಯಾಗಲಿದೆ. ಎಲ್ಲವನ್ನೂ ತಿಳಿದುಕೊಂಡರೂ ಹಿಂದೆ ಸರಿಯುವಿರಿ.
ಕನ್ಯಾ ರಾಶಿ: ನಿಮ್ಮ ಇಂದಿನ ಮಾನಸಿಕ ಸ್ಥಿತಿಯನ್ನು ಹೇಳಿಕೊಳ್ಳಲಾಗದೇ ಕಷ್ಟಪಡುವಿರಿ. ಸ್ತ್ರೀಯರು ಒತ್ತಡವನ್ನು ಇನ್ನೊಬ್ಬರಿಗೆ ಹಾಕಿ ನಿಶ್ಚಿಂತರಾಗುವಿರಿ. ಕಷ್ಟಗಳ ನಿವಾರಣೆಗೆ ದೈವಕ್ಕೆ ಶರಣಾಗುವುದು ಉತ್ತಮ. ನಿಮ್ಮ ಸಮಾಜಮುಖೀ ಕಾರ್ಯಗಳಿಗೆ ಕುಟುಂಬದ ಬೆಂಬಲವು ಸಿಗುವುದು. ಬಂಧುಗಳಿಂದ ನಿಮಗೆ ಇಂದು ಆಲಸ್ಯದ ಪಟ್ಟವು ಸಿಗಬಹುದು. ನಿಮ್ಮ ಉದ್ಯೋಗವನ್ನು ಅಪಹಾಸ್ಯ ಮಾಡಬಹುದು. ಸಂಗಾತಿಯನ್ನು ದೂರ ಮಾಡಿಕೊಂಡು ಮನೆಯಲ್ಲಿ ಕಷ್ಟವಾದೀತು. ನಿಮ್ಮ ಗುರಿಯಾಗಿಸಿಕೊಂಡು ಸಹೋದ್ಯೋಗಿಗಳು ಕೆಲಸವನ್ನು ಮಾಡುವರು. ಕೈಗೆ ಸಿಕ್ಕ ಭೂಮಿಯು ತಪ್ಪಿ ಹೋಗಬಹುದು. ನಿಮ್ಮ ಮಾತನಾಡುವ ಸ್ವಭಾವವು ಇತರರಿಗೆ ಕಿರಿಕಿರಿ ಉಂಟಾದೀತು. ಮಾತು ಸರಳವಾಗಿಬಿರಲಿ. ಉನ್ನತ ವ್ಯಾಸಂಗಕ್ಕಾಗಿ ನೀವು ಸ್ನೇಹಿತನ ಜೊತೆ ತೆರಳುವಿರಿ. ಸ್ಥಾನಚ್ಯುತಿಯ ಭಯವು ಇರುವುದು. ಮನೆಯ ಪರಿಸ್ಥಿತಿಯನ್ನು ನೆನೆದು ಸಂಕಟವಾಗುವುದು.
ತುಲಾ ರಾಶಿ: ಸಹೋದರರ ನಡುವೆ ಬರುವ ಭಿನ್ನಾಭಿಪ್ರಾಯವನ್ನು ನೀವು ಮುಂದುವರಿಸದೇ ಅಲ್ಲಿಯೇ ನಿಲ್ಲಿಸಿ. ವ್ಯಾಪಾರದಲ್ಲಿ ಸ್ತ್ರೀಯರ ಸಹಾಯದಿಂದ ಲಾಭವನ್ನು ಪಡೆಯುವಿರಿ. ಅನಿರೀಕ್ಷಿತ ದೂರ ಪ್ರಯಾಣವನ್ನು ಮಾಡಲಿದ್ದೀರಿ. ಸಣ್ಣ ವಿಚಾರಗಳಿಗೂ ಕೋಪ ಮಾಡಿಕೊಳ್ಳುವಿರಿ. ಇಂದು ಹಣದ ವಿಚಾರದಲ್ಲಿ ನಿಮಗೆ ಹಿನ್ನಡೆಯಾಗುವುದು. ಅಧಿಕಾರಿಗಳು ಹೆಚ್ಚು ಒತ್ತಡದಿಂದ ಇರುವರು. ವ್ಯವಹಾರಕ್ಕೆ ಸಂಬಂಧಪಟ್ಟಂತೆ ಮಾತುಗಳು ನಿಖರವಾಗಿ ಇರಲಿ. ಖರ್ಚಿನ ನಿಯಂತ್ರಣವನ್ನು ಮಾಡುವುದು ಕಷ್ಟವಾದೀತು. ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ನಿಯಮಗಳನ್ನು ಹಾಕಿಕೊಳ್ಳುವುದು ಉತ್ತಮ. ಸಹೋದ್ಯೋಗಿಗಳ ಜೊತೆ ಸಲುಗೆಯಿಂದ ಇರುವಿರಿ. ನಿಮ್ಮ ಕಾರ್ಯಗಳೇ ನಿಮಗೆ ಆಶ್ಚರ್ಯವನ್ನು ಉಂಟುಮಾಡೀತು. ಅಧಿಕಲಾಭಕ್ಕಾಗಿ ಏನನ್ನಾದರೂ ಮಾಡಲು ಹೋಗುವುದು ಬೇಡ.
ವೃಶ್ಚಿಕ ರಾಶಿ: ಅಪರಿಚಿತ ಪ್ರದೇಶಕ್ಕೆ ಉದ್ಯೋಗದ ಕಾರಣಕ್ಕೆ ಹೋಗುವಿರಿ. ಆಸ್ತಿಯ ಕುರಿತು ದೂರುಗಳು ಬರಬಹುದು. ಅಧಿಕ ಹೂಡಿಕೆಯನ್ನು ಅನಿವಾರ್ಯವಾಗಿ ಮಾಡಬೇಕಾದೀತು. ಉದ್ಯಮದ ಬೆಳವಣಿಗೆಗೆ ಉತ್ತಮ ಅವಕಾಶವನ್ನು ಕಾಯುತ್ತಿರುವಿರಿ. ಯಾರದೋ ಮಾತಿನಿಂದ ನಿಮ್ಮ ನೆಮ್ಮದಿಯನ್ನು ಕಳೆದುಕೊಳ್ಳುವ ಅವಶ್ಯಕತೆ ಇಲ್ಲ. ಏನೂ ಲಾಭವಿಲ್ಲದೇ ಪ್ರಯಾಣವು ನಿಮಗೆ ಬೇಸರ ಎನಿಸುವುದು. ಇಂದು ನಿಮಗೆ ಪ್ರಶಂಸೆಯಿಂದ ಜವಾಬ್ದಾರಿಗಳೂ ಹೆಚ್ಚುವುದು. ನಿಮ್ಮ ಪಾಲಿನದ್ದಷ್ಟನ್ನು ಜೋಪಾನವಾಗಿ ಇರಿಸಿಕೊಳ್ಳಿ. ನಿಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ನೌಕರರು ಒಪ್ಪುವುದಿಲ್ಲ. ಪ್ರಯಾಣದ ಆಯಾಸವನ್ನು ಪರಿಹರಿಸಿಕೊಳ್ಖುವುದು ನಿಮಗೆ ಕಷ್ಟವಾದೀತು. ವಿವಾಹದ ಒಪ್ಪಂದವು ಮುರಿದು ಹೋಗುವ ಸಾಧ್ಯತೆ ಇದೆ.
ಧನು ರಾಶಿ: ಗಣ್ಯರ ಜೊತೆ ಇಂದು ಚರ್ಚೆಯನ್ನು ಮಾಡುವ ಅವಕಾಶವು ದೊರೆಯಲಿದೆ. ಚರಾಸ್ತಿಯ ಗಣನೆಯನ್ನು ಮಾಡುವಿರಿ. ಮಕ್ಕಳು ನಿಮ್ಮ ಮಾತಿಗೆ ಸ್ಪಂದಿಸುವರು. ಆಸ್ತಿಯ ಖರೀದಿಗೆ ಎರಡು ಮನಸ್ಸು ಇರುವುದು. ಗೊಂದಲದಿಂದ ಹೊರಬರುವುದು ಕಷ್ಟವಾದೀತು. ನಂಬಿಕೆಯಿಂದ ಕೆಲಸವನ್ನು ಮಾಡುವಿರಿ. ಪ್ರಯತ್ನಿಸಿದ ಕಾರ್ಯಗಳು ನಿಮಗೆ ಬಹುಪಾಲು ಉತ್ತಮ ಫಲಿತಾಂಶವು ಕೊಡುವುದು. ಸ್ವಂತ ಉದ್ಯೋಗಸ್ಥರು ಲಾಭ ಗಳಿಸುವರು. ಯಾರೊಂದಿಗೂ ವೈರ ಬೇಡ. ಸರ್ಕಾರದಿಂದ ಕೆಲವು ವಿಚಾರಕ್ಕೆ ಕಿರಿಕಿರಿ ಉಂಟಾದೀತು. ಸ್ವತಂತ್ರವಾಗಿದ್ದರೂ ಏನನ್ನಾದರೂ ಕಳೆದುಕೊಳ್ಳುತ್ತೇನೆ ಎಂಬ ಭಯವು ಇರಲಿದೆ. ದಾಂಪತ್ಯದ ಬಿರುಕನ್ನು ನೀವು ಸರಿ ಮಾಡಲು ಪ್ರಯತ್ನಿಸಿದರೆ ಆಗುವುದು. ಹೊಸತನ್ನು ಕಲಿಯುವ ಅವಕಾಶವನ್ನು ಹುಡುಕಿಕೊಳ್ಳುವಿರಿ. ಹಂಚಿಕೊಂಡು ಕೆಲಸವನ್ನು ಮಾಡಿ.
ಮಕರ ರಾಶಿ: ನಿಮ್ಮ ಸಹನೆಯನ್ನು ಪರೀಕ್ಷಿಸುವ ಸಂದರ್ಭಗಳು ಬರಬಹುದು. ಆಸ್ತಿಯ ಭಾಗವನ್ನು ಮಾರಾಟ ಮಾಡಬೇಕಾದೀತು. ಮ್ಮ ಚುರುಕುತನಕ್ಕೆ ಅಚ್ಚರಿಗೊಳ್ಳುವರು. ಜವಾಬ್ದಾರಿಯು ನಿಮಗೆ ಅತಿಯಾಗುವುದು. ಒತ್ತಡವನ್ನು ನಿಭಾಯಿಸಕೊಳ್ಳಲು ಕಷ್ಟವಾದೀತು. ಸಹೋದ್ಯೋಗಿಗಳ ಜೊತೆ ಮನಸ್ತಾಪ ಬಂದು ಜಗಳವಾಡುವಿರಿ. ಮೇಲಧಿಕಾರಿಗಳ ಜೊತೆ ವಿನಾಕಾರಣ ವಾಗ್ವಾದ ಬೇಡ. ಎಷ್ಟೋ ಕೆಲಸಗಳು ನಿಮ್ಮ ಬಳಿಯೇ ಬಾಕಿ ಇರುವುದು. ಆಲಸ್ಯದಿಂದ ಮುಖ್ಯ ಕೆಲಸವನ್ನೇ ಮರೆಯುವಿರಿ. ನೀವು ಹೇಳಬೇಕಾದ ವಿಷಯಗಳನ್ನು ಇನ್ನೊಬ್ಬರಿಗೆ ಹೇಳುವಿರಿ. ಯಾವುದೋ ಯೋಚನೆಯಲ್ಲಿ ಮುಖ್ಯ ಕಾರ್ಯಗಳು ಮರೆತುಹೋಗಬಹುದು. ಭೂಮಿಯ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ಕಾನೂನಾತ್ಮಕ ತೊಂದರೆ ಬರುವುದು. ಸಂತೋಷದ ಕೂಟದಲ್ಲಿ ನೀವು ಭಾಗಿಗಳಾಗುವಿರಿ. ಉದ್ಯಮವನ್ನು ಮಾಡುವ ಮೊದಲು ಸರಿಯಾದ ಯೋಜನೆಯನ್ನು ತಯಾರಿಸಿ.
ಕುಂಭ ರಾಶಿ: ಅಪರೂಪದ ಬಂಧುಗಳ ಜೊತೆ ಕಲಹವಾಗಬಹುದು. ಕೆಲವು ಸಂಗತಿಗಳು ನಿಮ್ಮನ್ನು ಪರೀಕ್ಷಿಸಬಹುದು. ಆರ್ಥಿಕತೆಯು ನಿಮ್ಮನ್ನು ಚಿಂತೆಗೀಡುಮಾಡುವುದು. ನಿಮ್ಮ ತಪ್ಪುಗಳೇ ಫಲಿತಾಂಶದಲ್ಲಿ ಬರುವುದು. ಮಂದಗತಿಯ ಕಾರ್ಯಕ್ಕೆ ನಿಮ್ಮನ್ನು ಯಾರಾದರೂ ಹೀಯಾಳಿಸಬಹುದು. ನೀವು ಪ್ರಯಾಣ ಮಾಡದೇ ಬಹಳ ದಿನಗಳಾದಂತೆ ಅನ್ನಿಸುವುದು. ಮಕ್ಕಳಿಗೆ ನಿಮ್ಮ ಬಗ್ಗೆ ಪ್ರೀತಿ ಉಂಟಾಗುವುದು. ಸಾಮಾಜಿಕ ಕಾರ್ಯಗಳು ನಿಮಗೆ ಯಶಸ್ಸನ್ನು ತಂದುಕೊಡುವುದು. ಇರುವ ಸಮಯವನ್ನು ವ್ಯರ್ಥ ಮಾಡಿಕೊಳ್ಳದೇ ಸದುಪಯೋಗ ಆಗುವಂತೆ ಮಾಡಿ. ಕೆಲವನ್ನು ನೀವಾಗಿಯೇ ತಂದುಕೊಳ್ಳುವಿರಿ. ವೃತ್ತಿಯಲ್ಲಿ ನಿಮಗೆ ತಪ್ಪಿನ ಭಯವು ಕಾಡಲಿದ್ದು ಯಾರ ಬಳಿಯಾದರೂ ಹೇಳಿಕೊಳ್ಳಿ. ನಿಮ್ಮ ಸಾಮರ್ಥ್ಯವು ಇಂದು ಕಾಣಿಸಿಕೊಳ್ಳದು. ಪ್ರೀತಿಪಾತ್ರರ ಜೊತೆ ಸಂತೋಷ ಸಮಯವನ್ನು ಕಳೆಯುವಿರಿ.
ಮೀನ ರಾಶಿ: ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆಯಾಗಿ ಎಲ್ಲವೂ ಕಬ್ಬಿಣದ ಕಡಲೆಯಂತೆಯಾಗುವುದು. ಮನೆಯ ಅಭಿವೃದ್ಧಿಗೆ ಶ್ರಮವನ್ನು ಹಾಕುವಿರಿ. ಇಂದು ಪರೋಪಕಾರಕ್ಕೆ ನಿಮ್ಮ ಮನಸ್ಸು ಕರಗುವುದು. ಸ್ತ್ರೀಯರು ಈ ದಿನವನ್ನು ಬಹಳ ಉತ್ಸಾಹದಿಂದ ಕಳೆಯುವರು. ಕುಟುಂಬದ ಸೌಖ್ಯದಲ್ಲಿ ನೀವು ಭಾಗಿಯಾಗುವಿರಿ. ದಿನದ ಕಾರ್ಯವು ಹೆಚ್ಚು ಕಡಿಮೆ ಆಗಲಿದೆ. ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಂಡು ಕಾರ್ಯದಲ್ಲಿ ಪ್ರಗತಿಯನ್ನು ಕಾಣುವಿರಿ. ಸ್ಥಿರಾಸ್ತಿಗೆ ಸಂಬಂಧಿಸಿದಂತೆ ಕೆಲವು ದಾಖಲೆಗಳನ್ನು ಮಾಡಿಕೊಳ್ಳುವಿರಿ. ಮಕ್ಕಳಿಂದ ಆಗುವ ಅಸಮಾಧಾನವನ್ನು ಸಹಿಸಲಾರಿರಿ. ವಿರೋಧಿಗಳ ಮಾತನ್ನು ನೀವು ನಿರ್ಲಕ್ಷಿಸುವಿರಿ. ನಿಮ್ಮ ಉದ್ಯೋಗದ ತೊಂದರೆಗಳನ್ನು ಸರಿಮಾಡಿಕೊಂಡು ಮುನ್ನಡೆಯುವಿರಿ. ಯುವಕರಿಗೆ ಸರಿಯಾದ ಮಾರ್ಗದರ್ಶನ ಸಿಗುವುದು. ವಾಹನ ಖರೀದಿಯ ವ್ಯವಹಾರವು ನಿಮಗೆ ಸರಿಯಾಗದು.
-ಲೋಹಿತ ಹೆಬ್ಬಾರ್ – 8762924271 (what’s app only)
ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ