Horoscope: ಈ ರಾಶಿಯವರು ಮಾತನಾಡುವಾಗ ನಿಮ್ಮ ಮಾತಿನ ಮೇಲೆ ಹಿಡಿತವಿರಲಿ
ನೀವು ಇಂದು ಕೈಗೊಳ್ಳುವ ಯಾವುದೇ ಕೆಲಸಕಾರ್ಯಗಳು ಚೆನ್ನಾಗಿರಬೇಕು ಎಂದರೆ ನಿಮ್ಮ ರಾಶಿಫಲ ಚೆನ್ನಾಗಿರಬೇಕು. ಒಂದಷ್ಟು ಮಂದಿ ರಾಶಿಭವಿಷ್ಯ ತಿಳಿದುಕೊಂಡೇ ಮುಂದಿನ ಕಾರ್ಯ ಆರಂಭಿಸುತ್ತಾರೆ. ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ ಇಂದು ಡಿಸೆಂಬರ್ 08 ರ ನಿಮ್ಮ ಭವಿಷ್ಯ ಹೀಗಿದೆ ನೋಡಿ.
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿರುತ್ತದೆ. ಪ್ರತಿಯೊಂದು ರಾಶಿಗಳು ತಮ್ಮದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಕೈ ಉಜ್ಜಿ ಮುಖಕ್ಕೆ ಒತ್ತಿ ನಿಧಾನವಾಗಿ ಕಣ್ಣು ತೆರೆದು ಪ್ರಪಂಚವನ್ನು ನೋಡಿದ ನಂತರ ಇಂದು ತಮ್ಮ ಭವಿಷ್ಯ ಹೇಗಿದೆ ಎಂದು ಅರಿತುಕೊಳ್ಳುತ್ತಾರೆ. ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ ಇಂದಿನ (ಡಿಸೆಂಬರ್ 08) ರಾಶಿಭವಿಷ್ಯ (Horoscope) ಹೇಗಿದೆ ಎಂಬುದು ಇಲ್ಲಿದೆ.
ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಜೇಷ್ಠಾ, ಮಾಸ: ಕಾರ್ತಿಕ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಚಿತ್ರಾ, ಯೋಗ: ಸೌಭಾಗ್ಯ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 46 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 02 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 10:59 ರಿಂದ 12:24 ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:13 ರಿಂದ ಸಂಜೆ 04:38ರ ವರೆಗೆ, ಗುಳಿಕ ಕಾಲ ಬೆಳಗ್ಗೆ 08:11 ರಿಂದ 09:36ರ ವರೆಗೆ.
ಧನು ರಾಶಿ : ಸ್ನೇಹಿತರ ಜೊತೆ ಅಸಂಬದ್ಧ ವಿಚಾರಗಳಿಗೆ ಮನಸ್ತಾಪವು ಬರುವುದು. ಯಾರನ್ನೂ ಅತಿಯಾಗಿ ಬಳಸಿಕೊಳ್ಳುವುದು ಇಷ್ಟವಾಗದು. ಇಂದು ಆಸ್ತಿ ಸಂಬಂಧಿತ ವಿಷಯಗಳಲ್ಲಿ ನೀವು ಜಾಣ್ಮೆಯಿಂದ ವ್ಯವಹರಿಸುವಿರಿ. ಆಸ್ತಿಯಲ್ಲಿ ಹೂಡಿಕೆ ಮಾಡುವುದು ನಿಮಗೆ ನಿರೀಕ್ಷಿತ ಆದಾಯವನ್ನು ನೀಡುವುದಿಲ್ಲ. ತಮ್ಮ ಮೇಲಧಿಕಾರಿಗಳ ಜೊತೆ ದಕ್ಷತೆಯಿಂದ ವ್ಯವಹರಿಸುವ ಜನರಿಗೆ ಉದ್ಯೋಗದಲ್ಲಿ ಬೆಳೆಯುವ ಅವಕಾಶಗಳು ಸಿಗಲಿವೆ. ನಿಮ್ಮ ಸ್ವಭಾವವು ಇಂದಿನ ವಿಳಂಬದ ಕಾರ್ಯಕ್ಕೆ ಕಾರಣವಾಗಲಿದೆ. ನಿಮ್ಮ ವಸ್ತುಗಳನ್ನು ಭದ್ರವಾಗಿಸಿರಿಕೊಳ್ಳಿ. ದಿನದಲ್ಲಿ ಆಗಬೇಕಾದ ಕಾರ್ಯಗಳನ್ನು ಸಿದ್ಧಮಾಡಿಕೊಳ್ಳಿ. ಪ್ರಮುಖ ವ್ಯಕ್ತಿಗಳಿಗೆ ಕಿರಿಕಿರಿ ಮಾಡಬೇಡಿ. ಮನೆಯಲ್ಲಿಯೇ ಇದ್ದು ನೆಮ್ಮದಿ ಕಾಣುವಿರಿ. ಸಮಸ್ಯೆಗಳನ್ನು ನೀವು ಹಂಚಿಕೊಳ್ಳಲು ಹಿಂಜರಿಯುವಿರಿ. ನಿಮ್ಮ ಜೀವನದ ದಿನಚರಿಯನ್ನು ಬದಲು ಮಾಡಿಕೊಳ್ಳಿ. ದಾಂಪತ್ಯದಲ್ಲಿ ನಿಮಗೆ ವೈಮನಸ್ಯ ಉಂಟಾದರೂ ಸುಮ್ಮನಿದ್ದು, ಸರಿಯಾಗುವುದು.
ಮಕರ ರಾಶಿ : ಕಛೇರಿಯ ಕಾರ್ಯಗಳಲ್ಲಿ ಪ್ರಗತಿ ಕಂಡರೂ ಸ್ವಂತ ಕೆಲಸವನ್ನು ಮಾಡಲು ಸಮಯವನ್ನು ಕೊಡಲಾಗದು. ಕುಲದೇವರ ದರ್ಶನಕ್ಕೆ ಹೋಗುವ ಹಂಬಲವು ಉಂಟಾದೀತು. ಸಾಮಾಜಿಕ ಕಾರ್ಯದಲ್ಲಿ ಪ್ರಶಂಸೆ ಸಿಕ್ಕಿ ಸಂತೋಷವಾಗವುದು. ಇಂದು, ನಿಮ್ಮ ಒಡಹುಟ್ಟಿದವರು ಹಣಕಾಸಿನ ಸಹಾಯಕ್ಕಾಗಿ ನಿಮ್ಮನ್ನು ಸಂಪರ್ಕಿಸಬಹುದು. ಬಹಳ ದಿನಗಳ ಅನಂತರ ಸ್ನೇಹಿತರ ಜೊತೆ ಪ್ರಯಾಣ ಹೊರಟಿರುವಿರಿ. ಈ ದಿನ ನಿಮ್ಮ ಆರೋಗ್ಯದ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕು ಮತ್ತು ಸಮತೋಲಿತ ದಿನಚರಿಯನ್ನು ಅನುಸರಿಸಿ. ಆಸ್ತಿಯ ವಿಚಾರದಲ್ಲಿ ಶತ್ರುಗಳಿಂದ ತೊಂದರೆ ಬಂದೀತು. ನೋವುಗಳನ್ನೇ ನೆನಪಿಸಿಕೊಳ್ಳುವುದರಲ್ಲಿ ಅರ್ಥವಿರದು. ನಿಮ್ಮ ಶತ್ರುಗಳಿಂದ ಸೃಷ್ಟಿಯಾಗುವ ಕೆಲವು ಸಣ್ಣ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅಧಿಕಾರಿಗಳ ಜೊತೆ ವ್ಯವಹರಿಸುವಾಗ ನೀವು ಜಾಗರೂಕರಾಗಿರಬೇಕು ಮತ್ತು ಅವರನ್ನು ವಿರೋಧಿಸದೇ ಕಾರ್ಯವನ್ನು ಮಾಡಿಸಿಕೊಳ್ಳಿ.
ಕುಂಭ ರಾಶಿ : ಪರಮಾಪ್ತರಿಗೆ ಅಮೂಲ್ಯವಾದ ಉಡುಗೊರೆಯೊಂದನ್ನು ನೀಡುವಿರಿ. ಅಧಿಕಾರಿಗಳ ಮನಸ್ಸನ್ನು ಗೆಲ್ಲುವ ಪ್ರಯತ್ನ ಮಾಡುವಿರಿ. ಆರ್ಥಿಕ ಅಡೆತಡೆಗಳು ಇಂದು ಕುಟುಂಬ ವೈಷಮ್ಯಕ್ಕೆ ಕಾರಣವಾಗುವುದು. ಅಂತಹ ಸಂದರ್ಭಗಳಲ್ಲಿ, ಕುಟುಂಬದ ಸದಸ್ಯರ ಜೊತೆ ಮಾತನಾಡುವಾಗ ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ಉಳಿದ ಸಾಲವನ್ನು ತೀರಿಸುವಿರಿ. ದುರಭ್ಯಾಸಗಳು ನಿಮ್ಮ ಏಳಿಗೆಯನ್ನು ಕುಂಠಿತ ಮಾಡೀತು. ಹಣಕ್ಕಾಗಿ ಸ್ನೇಹಿತರಿಂದ ಕಿರಿಕಿರಿಯನ್ನು ಅನುಭವಿಸಬೇಕಾದೀತು. ಅತಿಯಾದ ಅನಾರೋಗ್ಯದಿಂದ ವೈದ್ಯರ ಸಲಹೆಯನ್ನು ಪಡೆಯಿರಿ. ಸಕಾರಾತ್ಮ ಆಲೋಚನೆಗಳಿಂದ ನೀವು ಸಂತೋಷವಾಗಿ ಇರುವಿರಿ. ಇನ್ನೊಬ್ಬರ ಅನವಶ್ಯಕ ವಿಚಾರಕ್ಕೆ ನೀವು ತಲೆ ಹಾಕಬೇಕಾಗಿಬರಬಹುದು. ತಂದೆಯಿಂದ ತಪ್ಪಿನ ಕೆಲಸಕ್ಕೆ ಬೈಗುಳ ಸಿಕ್ಕೀತು. ಸೌಂದರ್ಯಕ್ಕೆ ಹೆಚ್ಚು ಮಹತ್ತ್ವ ಕೊಡುವಿರಿ. ಆಸ್ತಿಯ ಸಂರಕ್ಷಣೆಗೆ ಕಷ್ಟವಾದೀತು.
ಮೀನ ರಾಶಿ : ಕುಟುಂಬದಲ್ಲಿ ಆದ ಮನಸ್ತಾಪ ಇಂದಿನ ದಿನವನ್ನೇ ಹಾಳುಮಾಡುವುದು. ಆಕಸ್ಮಿಕವಾಗಿ ಹಣದ ವ್ಯಯವೂ ಆಗಲಿದ್ದು ಮನಸ್ಸಿಗೆ ಇನ್ನಷ್ಟು ನೋವನ್ನು ಕೊಟ್ಟೀತು. ನಿಮ್ಮ ದೈಹಿಕ ಚೈತನ್ಯವನ್ನು ಕಾಪಾಡಿಕೊಳ್ಳಲು ಕೆಲವು ಸಮಯವಲ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಿರಿ. ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬೇಡ. ಹಣಕಾಸಿನ ವಹಿವಾಟಿನ ಜೊತೆ ವ್ಯವಹರಿಸುವಾಗ ಜಾಗರೂಕತೆ ಇರಲಿ. ಆರೋಗ್ಯದಲ್ಲಿ ಜಾಗರೂಕತೆ ಅವಶ್ಯಕ. ದೂರಪ್ರಯಾಣಕ್ಕೆ ಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳಿ. ನಿಮ್ಮ ವಿವಾಹವು ಮುಂದೆ ಮುಂದೆ ಹೋಗುವುದಕ್ಕೆ ಕಾರಣವನ್ನು ದೈವಜ್ಞರಿಂದ ಪಡೆಯಿರಿ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧವಾಗುವರು. ನೀವು ಆಡಿದ ಮಾತೇ ನಿಮಗೆ ಬೇರೆಯವರ ಮೂಲಕ ಬರಲಿದೆ. ಹಳೆಯ ವಾಹನದ ಮಾರಾಟದಿಂದ ನಿಮಗೆ ಆರ್ಥಿಕ ಲಾಭವು ಆಗುವುದು. ಧಾರ್ಮಿಕ ಆಚರಣೆಗಳಲ್ಲಿ ನಿರಾಸಕ್ತಿ ಇರುವುದು. ನಾಯಕರಿಗೆ ಕೆಲವು ತೊಂದರೆಗಳು ಬರಬಹುದು.
-ಲೋಹಿತ ಹೆಬ್ಬಾರ್ – 8762924271 (what’s app only)