Nitya Bhavishya 12 February: ಈ ರಾಶಿಯವರು ಕೃಷಿಯಲ್ಲಿ ಉತ್ತಮ ಲಾಭ ಸಾಧ್ಯತೆ, ಉದರದ ತೊಂದರೆ ಅನುಭವಿಸುವಿರಿ

ತಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳಲು ಹಲವರು ದಿನದಿಂದ ರಾಶಿಭವಿಷ್ಯವನ್ನು ಓದುತ್ತಾರೆ. ಒಂದಷ್ಟು ಮಂದಿ ಯಾವುದೇ ಕಾರ್ಯವನ್ನು ಪ್ರಾರಂಭಿಸಬೇಕಾದರೆ ಇಂದಿನ ದಿನ ಹೇಗಿದೆ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಇದರ ಜೊತೆಗೆ ನಿತ್ಯಪಂಚಾಂಗವನ್ನೂ ನೋಡುತ್ತಾರೆ. ಹಾಗಿದ್ದರೆ, ಇಂದಿನ ಶುಭಾಶುಭಕಾಲ ಹೇಗಿದೆ? 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ಈ ಕೆಳಗಿನಂತಿದೆ.

Nitya Bhavishya 12 February: ಈ ರಾಶಿಯವರು ಕೃಷಿಯಲ್ಲಿ ಉತ್ತಮ ಲಾಭ ಸಾಧ್ಯತೆ, ಉದರದ ತೊಂದರೆ ಅನುಭವಿಸುವಿರಿ
ಪ್ರಾತಿನಿಧಿಕ ಚಿತ್ರ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ

Updated on: Feb 12, 2024 | 12:02 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಫೆಬ್ರವರಿ​​​​ 12) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಮಕರ ಮಾಸ, ಮಹಾನಕ್ಷತ್ರ: ಶ್ರವಣಾ, ಮಾಸ: ಪೌಷ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಉತ್ತರಾಭಾದ್ರಾ, ಯೋಗ: ಶಿವ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 59 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 34 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 08:26 ರಿಂದ 09:53ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 11:20 ರಿಂದ 12:47 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:14 ರಿಂದ 03:41ರ ವರೆಗೆ.

ಮೇಷ ರಾಶಿ: ಕುಟುಂಬದ ಜವಾಬ್ದಾರಿಯನ್ನು ಅನಿವಾರ್ಯ ಕಾರಣಕ್ಕೆ ಪಡೆಯಬೇಕಾದೀತು. ಗುರಿಯನ್ನು ಸಾಧಿಸಿದ ಸಂಭ್ರಮವು ನಿಮಗೆ ಇರುವುದು. ಆಪ್ತರಿಗೆ ನಿಮ್ಮ ಮೇಲಿರುವ ಭಾವನೆಯು ಬದಲಾಗಬಹುದು. ಸಹೋದ್ಯೋಗಿಗಳ ವರ್ತನೆಯು ಇಷ್ಟವಾಗದೇ ಸಿಟ್ಟಾಗುವಿರಿ. ನಿಮ್ಮ ಕಾರ್ಯ ಕುಶಲತೆಗೆ ಮೆಚ್ಚುಗೆ ಇರುವುದು. ದಿನದ ಆರಂಭದಲ್ಲಿ ಆಲಸ್ಯ ತೋರಿದರೂ ಅನಂತರ ಉತ್ಸಾಹದಿಂದ ಇರುವಿರಿ. ಆಕಸ್ಮಿಕ ದ್ರವ್ಯ ಲಾಭದಿಂದ ಖುಷಿ ಪಡುವಿರಿ. ನಿಮ್ಮ ಉಪಕರಣಗಳು ದುರಸ್ತಿಗೆ ಬರಬಹುದು. ಯೋಗ್ಯತೆಗೆ ಅನುಗುಣವಾದ ಕಾರ್ಯವನ್ನು ಒಪ್ಪಿಕೊಳ್ಳಿ. ಮೂರನೇ ವ್ಯಕ್ತಿಗಳ ಮೂಲಕ ಇಂದು ನಿಮ್ಮ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಮಕ್ಕಳ ಸ್ವಭಾವಕ್ಕೆ ಯಾರನ್ನಾದರೂ ಹೋಲಿಕೆ ಮಾಡುವಿರಿ. ಸಂಗಾತಿಯ ಮಾನಸಿಕತೆಯು ನಿಮಗೆ ಗೊತ್ತಾಗದು. ಎಲ್ಲವೂ ಗೊತ್ತಿದ್ದರೂ ಗೊತ್ತಿಲ್ಲದಂತೆ ಇರುವುದು ಬೇಡ.

ವೃಷಭ ರಾಶಿ: ನಿಮಗೆ ಸಿಕ್ಕ ಗೌರವವನ್ನು ಬೇರೆಯವರಿಗೆ ಬಿಟ್ಟುಕೊಡುವಿರಿ. ದೊಡ್ಡ ಯೋಜನೆಯು ಚೆನ್ನಾಗಿದ್ದರೂ ಅದನ್ನು ಕಾರ್ಯರೂಪಕ್ಕೆ ತರಲು ಆಗದು. ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಉತ್ತಮ ಅವಕಾಶ ಸಿಗಬಹುದು. ಕುಟುಂಬದಲ್ಲಿ ಅಪಶ್ರುತಿಯನ್ನು ತೆಗೆದುಹಾಕಲು ನೀವು ಪ್ರಯತ್ನಿಸುತ್ತೀರಿ. ವಿದೇಶದಲ್ಲಿ ವಾಸಿಸುವವರಿಂದ ಶುಭವಾರ್ತೆ ಸಿಗುವುದು. ನಿಯಮ‌ಪಾಲನೆಯಲ್ಲಿ ನೀವು ನಿಸ್ಸೀಮರು. ಅನಾದರದಿಂದ ನಿಮಗೆ ಬೇಸರವಾದೀತು. ಉತ್ತಮ ಅವಕಾಶಗಳ ನಿರೀಕ್ಷೆಯಲ್ಲಿ ನೀವು ಇರುವಿರಿ. ಎಲ್ಲ ಸಮಸ್ಯೆಯೂ ನಿಮ್ಮದೇ ಎಂಬಂತೆ ಇರುವಿರಿ. ಪುಣ್ಯಕ್ಷೇತ್ರದ ದರ್ಶನವನ್ನು ಮಾಡಿ. ಮಿತವಾದ ಮಾತು ನಿಮಗೆ ಆಗದು. ಹೊಸತನಕ್ಕೆ ತೆರೆದುಕೊಳ್ಳುವ ಅಗತ್ಯತೆಯು ಇದೆ. ಮಕ್ಕಳ ವಿಚಾರದಲ್ಲಿ ನೀವು ತಿಳಿದುಕೊಳ್ಳಬೇಕಾದುದು ಬಹಳಷ್ಟು ಇವೆ. ಯಾರ ಮಾತಿನಲ್ಲಿಯೂ ನಿಮಗೆ ನಂಬಿಕೆ ಬಾರದು.

ಮಿಥುನ ರಾಶಿ: ನೀವು ಇಂದು ದೊಡ್ಡ ಗುರಿಯತ್ತ ಸಾಗುವಿರಿ. ಚಿಂತನಾತ್ಮಕ ಕೆಲಸದಲ್ಲಿ ನೀವು ಆಸಕ್ತಿ ಹೊಂದಿರುತ್ತೀರಿ. ಹೊಸ ವ್ಯವಹಾರದ ಪ್ರಸ್ತಾಪವು ನಿಮಗೆ ಒಪ್ಪಿಗೆ ಆದೀತು. ನೀವು ಪಾಲುದಾರಿಕೆಯಲ್ಲಿಯೇ ಇರಲು ಇಷ್ಟಪಡುವಿರಿ. ಯಾವುದೇ ವಸ್ತುವನ್ನು ಕಳೆದುಕೊಂಡರೆ ಅದನ್ನು ಪಡೆಯುವ ಬಯಕೆ ಅತಿಯಾಗಿ ಇರುವುದು. ಭೂವ್ಯವಹಾರದ ಪ್ರಸ್ತಾಪವು ಕುಟುಂಬದಲ್ಲಿ ನಡೆಯಬಹುದು. ಸ್ಥಿರಾಸ್ತಿಯ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳುವಿರಿ. ಅತಿಯಾದ ಬುದ್ಧಿವಂತಿಕೆಯನ್ನು ತೋರಿಸುದು ಬೇಡ. ಅಪಾಯವು ನಿಮ್ಮ ಕಡೆಗೆ ತಿರುಗೀತು. ಕ್ರಿಯಾಶೀಲತೆಯನ್ನು ನೀವು ಬಿಟ್ಟಿರುವುದು ನಿಮ್ಮ ಮನಸ್ಸಿಗೆ ಬರಲಿದೆ. ನೂತನ ವಸ್ತುಗಳಿಂದ ನಿಮಗೆ ಇಂದು ಸಂತೋಷವು ಸಿಗುವುದು. ನಿಮ್ಮ ವ್ಯವಹಾರವು ಇಂದು ಪೂರ್ಣವಾಗಲಾರದು. ಅನಿರೀಕ್ಷಿತ ಸಂಪತ್ತನ್ನು ತಂದೆಯಿಂದ ಪಡೆಯುವಿರಿ.

ಕಟಕ ರಾಶಿ: ನಿಮ್ಮ ಅತಿಯಾದ ಆತ್ಮವಿಶ್ವಾಸವೂ ನಿಮಗೇ ತೊಂದರೆಯನ್ನು ಉಂಟುಮಾಡೀತು. ಎಲ್ಲರಿಂದ ಹೇಳಿಸಿಕೊಳ್ಳುಬಿರಿ. ಅಚಾತುರ್ಯದಿಂದ ಆದ ತಪ್ಪನ್ನು ನೀವು ಸರಿ ಮಾಡಲು ಪ್ರಯತ್ನಿಸುವಿರಿ. ನಿಮ್ಮಲ್ಲಿ ಸಮೃದ್ಧಿಯು ಇರಲಿದೆ. ಎಲ್ಲರ ಜೊತೆ ಬೆರೆಯುವ ಮನಸ್ಸಿದ್ದರೂ ನಿಮ್ಮನ್ನು ಸ್ವೀಕರಿಸರು. ಸಮಾರಂಭಗಳಲ್ಲಿ ಬಂಧುಗಳು ನಿಮ್ಮನ್ನು ಭೇಟಿಯಾಗುವರು. ನಿಮ್ಮ ವಿರೋಧಿಗಳಗೆ ಮಾತಿನಿಂದ ಉತ್ತರಿಸಿ ಉಪಯೋಗವಿಲ್ಲ. ಕೃತಿಯಿಂದ ತೋರಿಸಿ. ಮನೆಯಿಂದ ನಿಮಗೆ ಶುಭಸಂದೇಶದ ಆಗಮನವಾಗಲಿದೆ. ಸಹೋದ್ಯೋಗಿಗಳ ಬೆಂಬಲವು ಉದ್ಯೋಗದಲ್ಲಿ ಸಿಗಲಿದೆ. ಅವಸರದ ನಿರ್ಧಾರವನ್ನು ಮಾಡಲುಹೋಗುವುದು ಬೇಡ. ನಿಮ್ಮ ಮಾತು ಮಿತಿಯನ್ನೂ ಮೀರಬಹುದು. ಹೂಡಿಕೆಯ ಚಿಂತನೆಯನ್ನು ಸಂಗಾತಿಯ ಜೊತೆ ಹಂಚಿಕೊಳ್ಳುವಿರಿ. ಪಕ್ಷಪಾತ ಮನಃಸ್ಥಿತಿಯು ನಿಮಗೆ ಶೋಭೆ ತರದು. ಈ ದಿನವನ್ನು ಕಳೆಯಲು ನೀವು ನಾನಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಿರಿ. ಒಂಟಿತನವು ನಿಮಗೆ ಇಷ್ಟವಾಗದು.

ಸಿಂಹ ರಾಶಿ: ಇಂದು ನೀವು ವಹಿಸಿಕೊಂಡ ಜವಾಬ್ದಾರಿಯನ್ನು ಇನ್ನೊಬ್ಬರಿಗೆ ನೀಡುವಿರಿ. ಹೊಸ ಪರಿಚಯದವರ ಜೊತೆ ವೃತ್ತಿಯನ್ನು ಮಾಡಬೇಕಾದೀತು. ಯಾರದೋ ಒತ್ತಾಯ ಮೇರೆಗೆ ಹೂಡಿಕೆಯು ಅನಿವಾರ್ಯವಾದೀತು. ಪರೋಪಕಾರಗುಣವು ನಿಮ್ಮಲ್ಲಿ ಇಂದು ಅಧಿಕವಾಗುವುದು. ರಾಜಕೀಯದಿಂದ ಪ್ರೇರಣೆ ಸಿಗಬಹುದು. ಮಕ್ಕಳ ಪ್ರೀತಿಯನ್ನು ಪಡೆದುಕೊಳ್ಳುವಿರಿ. ಸರ್ಕಾರಿ ಉದ್ಯೋಗಿಗಳಿಗೆ ಹೆಚ್ಚುವರಿ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುವುದು. ಪ್ರೀತಿಯಲ್ಲಿ ಸಣ್ಣ ಕಲಹವಾಗಬಹುದು. ಸಂಗಾತಿಯ ಪ್ರೀತಿಯನ್ನು ನೀವು ಅರಗಿಸಿಕೊಳ್ಳಲಾರಿರಿ. ಇಂದು ನಿಮ್ಮ ಆರ್ಥಿಕತೆಯ ಸ್ಥಿತಿಯು ದರಿಯಾ ಗೊತ್ತಾಗಲಿದೆ. ಆಕಸ್ಮಿಕವಾಗಿ ಬರುವ ಹಣವನ್ನು ಭವಿಷ್ಯಕ್ಕಾಗಿ ಕೂಡಿ ಇಡುವಿರಿ. ಖಾಸಗಿ ಸಂಸ್ಥೆಯಲ್ಲಿ ನಿಮ್ಮ ಸ್ಥಾನವು ಏರಲಿದೆ. ಅಧಿಕಾರ ಇದೆ ಎಂದು ಏನನ್ನಾದರೂ ಹೇಳುವುದು ಬೇಡ. ಸಮಯದ ಸದ್ಬಳಕೆಯನ್ನು ಮಾಡಿಕೊಳ್ಳುವಿರಿ. ಪರ ಊರಿನಲ್ಲಿರುವ ನಿಮಗೆ ಆರೋಗ್ಯವು ಹದ ತಪ್ಪಬಹುದು.‌

ಕನ್ಯಾ ರಾಶಿ: ನೀವೇ ಪ್ರಬಲರೆಂಬ ಭಾವವು ಬೇಡ. ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರದ ಪ್ರಯೋಗವು ಆಗಲಿದೆ. ನಿಮ್ಮ ಸ್ಥಾನವನ್ನು ನೀವು ಬಿಟ್ಟುಕೊಡುವುದು ಬೇಡ. ನಿಮ್ಮ ಗಮನವು ಇಂದು ದಾನ ಕಾರ್ಯಗಳ ಕಡೆ ಇರುವುದು. ಕೌಟುಂಬಿಕ ವಿಷಯಗಳಲ್ಲಿ, ನೀವು ಬಾಹ್ಯ ವ್ಯಕ್ತಿಯನ್ನು ಸಂಪರ್ಕಿಸುವುದು ಬೇಡ. ಹೆತ್ತವರ ಆಶೀರ್ವಾದವು ನಿಮಗೆ ಬೆಂಬಲವಾಗಿ ಇರುವುದು. ಮಾರುಕಟ್ಟೆಯ ವ್ಯವಹಾರವನ್ನು ಅರಿತು ಹೂಡಿಕೆ ಮಾಡಿ. ಅನಿರೀಕ್ಷತ ಸಂಕಟಕ್ಕೆ ಹಣದ ಕೊರತೆ ಕಾಣಿಸುವುದು. ಅದನ್ನು ಹೊಂದಿಸುವುದು ಕಷ್ಟವಾದೀತು. ಸಂಗಾತಿಯ ಮಾತಿಗೆ ಸ್ಪಂದನೆಯೂ ಇರದು. ವಾಗ್ವಾದವಾಗುವುದೆಂಬ ಭಯವೂ ನಿಮ್ಮನ್ನು ಕಾಡುವುದು. ನಿಮ್ಮ ಆರ್ಥಿಕತೆಯನ್ನು ಗೌಪ್ಯವಾಗಿ ಇಡಬೇಕು ಎನಿಸುವುದು. ಭೂಮಿಯ ವ್ಯವಹಾರವು ಪೂರ್ಣ ಲಾಭವನ್ನು ತಂದುಕೊಡದು. ಚಿಂತೆಗಳೇ ಇರುವ ಮನಸ್ಸಿನಲ್ಲಿ ದೇವರ ಭಕ್ತಿಯನ್ನು ತುಂಬಿಕೊಂಡು ಸಮಾಧಾನದಿಂದ ಇರಿ. ಸಲ್ಲದ ಆಲೋಚನೆಗಳು ಬರಬಹುದು.

ತುಲಾ ರಾಶಿ: ನೀವು ಅಧ್ಯಾತ್ಮದಲ್ಲಿ ಆಸಕ್ತಿ ಇರುತ್ತದೆ. ಹಿರಿಯರ ಮಾರ್ಗದರ್ಶನದಲ್ಲಿ ನೀವು ಮುಂದುವರಿಯಿರಿ. ನಿಮ್ಮ ವೈಯಕ್ತಿಕ ವಿಷಯದಲ್ಲಿ ಯಾರಾದರೂ ಮಧ್ಯಪ್ರವೇಶ ಮಾಡಬಹುದು. ನಿಮ್ಮ ಆಪ್ತರೊಂದಿಗೆ ನೀವು ಮನೋರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸುವಿರಿ. ಪ್ರವಾಸದ ಮನೋಭಾವದಲ್ಲಿ ಚುರುಕುತನ ಇಂದು ಹೆಚ್ಚಿರುವುದು. ನಿಮ್ಮ ವಿದ್ಯಾಭ್ಯಾಸದ ಕನಸನ್ನು ಕುಟುಂಬದಲ್ಲಿ ಹಂಚಿಕೊಳ್ಳುವಿರಿ. ನಿಮ್ಮ ಹಳೆಯ ಪ್ರತಿಜ್ಞೆಯನ್ನು ಇಂದು ಪೂರ್ಣ ಮಾಡಿದ ಸಂತೋಷವು ಇರುವುದು. ವಿವಾಹದ ಸುಖದಲ್ಲಿ ನೀವಿರುವಿರಿ. ಯಾರನ್ನೂ ಸರಿಯಾಗಿ ಅರ್ಥಮಾಡಿಕೊಳ್ಳದೇ ನಿಮ್ಮ ಬಳಿ ಅವರನ್ನು ಬಿಟ್ಟುಕೊಳ್ಳಬೇಡಿ. ಹಳೆಯ ಯೋಜನೆಗಳಿಗೆ ಮರುಜೀವ ಕೊಡುವಿರಿ. ಯಾರದೋ ಕೈಗೊಂಬೆಯಾಗಿ ವರ್ತಿಸಬೇಕಗುವುದು. ವೃತ್ತಿಯಲ್ಲಿ ನಿಮ್ಮ ತಿಳಿವಳಿಕೆಯನ್ನು ಪ್ರದರ್ಶಿಸಿ ನಿಮ್ಮ ಸಾಮರ್ಥ್ಯವನ್ನು ಪರಿಚಯಿಸುವಿರಿ.

ವೃಶ್ಚಿಕ ರಾಶಿ: ಇಂದು ಸಾಮಾಜಿಕ ಸೇವಾಕ್ಷೇತ್ರಕ್ಕೆ ಪ್ರಶಂಸೆ ಸಿಗುವುದು. ಸ್ನೇಹಿತರ ಬೆಂಬಲವು ನಿಮಗೆ ಅಗತ್ಯವಾಗಿ ಸಿಗಲಿದೆ. ಕೆಲವು ಅಪರಿಚಿತರ ಜೊತೆ ನೀವು ಎಚ್ಚರಿಕೆಯಿಂದ ಇರುವುದು ಮುಖ್ಯವಾಗಲಿ. ಅವಸರದಲ್ಲಿ ಯಾವುದೇ ಕಾರ್ಯವನ್ನು ಮಾಡುವುದು ಬೇಡ. ಮನಸ್ಸು ದುರ್ಬಲವಾದಂತೆ ಅನ್ನಿಸಬಹುದು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸುವಿರಿ. ಮನೆಗೆ ಬೇಕಾದ ವಸ್ತುಗಳ ಖರೀದಿಯಲ್ಲಿ ನೀವು ಮಗ್ನರಾಗುವಿರಿ. ಗೃಹನಿರ್ಮಾಣದ ದಾಖಲಾತಿಗೆ ನೀವು ಓಡಾಟ ಮಾಡಬೇಕಾಗುವುದು. ಆಡಂಬರಕ್ಕೆ ಹೆಚ್ಚು ಒತ್ತು ನೀಡುವಿರಿ. ಸಾರ್ವಜನಿಕ ಮನ್ನಣೆಯನ್ನು ಗಳಿಸವಿರಿ. ಉದ್ಯಮದ ವಿಸ್ತರಣೆಗೆ ನಿಮ್ಮ ಕ್ರಮವು ಯಶಸ್ವಿಯಾಗುವುದು. ಏಕಾಗ್ರ ಮನಸ್ಸಿನಿಂದ ನೀವು ಇಂದಿನ ಕೆಲಸದಲ್ಲಿ ತೊಡಗುವಿರಿ. ಕೆಲವು ಘಟನೆಗಳು ಕೌಟುಂಬಿಕ ಕಾಳಜಿಯನ್ನು ಹೆಚ್ಚು ಮಾಡುವುದು.

ಧನು ರಾಶಿ: ಇಂದು ನೀವು ಕೆಲವು ವಿಷಯಗಳನ್ನು ರಹಸ್ಯವಾಗಿಡಬೇಕಾಗುತ್ತದೆ. ಸುಮ್ಮನೇ ಯಾರದೋ ಸಲಹೆಯನ್ನು ಅನುಸರಿಸುವುದರಿಂದ ಅರ್ಥವಿಲ್ಲ. ನಾಯಕತ್ವ ಕೌಶಲ್ಯಗಳು ಇತರರಿಗೆ ಗೊತ್ತಾಗುವುದು. ನಿಮ್ಮ ಭರವಸೆಗಳನ್ನು ಸಮಯಕ್ಕೆ ಸರಿಯಾಗಿ ಪೂರೈಸಲು ಪ್ರಯತ್ನಿಸಿ. ವ್ಯಾಪಾರದಲ್ಲಿ ಉತ್ತಮ ಲಾಭ ಪಡೆಯುವ ಸಾಧ್ಯತೆ ಇದೆ. ನೀವು ಖಾಸಗಿ ವಿಷಯಗಳಲ್ಲಿ ಸಕ್ರಿಯರಾಗಿರುತ್ತೀರಿ. ದಾಂಪತ್ಯ ಜೀವನದಲ್ಲಿ ಮಾಧುರ್ಯವಿರುತ್ತದೆ ಮತ್ತು ಕುಟುಂಬ ಸಂಬಂಧಗಳಿಗೆ ಪ್ರಾಮುಖ್ಯವನ್ನು ನೀಡುತ್ತದೆ. ಭೂಮಿಯ ಲಾಭಕ್ಕಾಗಿ ಓಡಾಟವನ್ನು ಮಾಡಬೇಕಾದೀತು. ಒಂದು ರೀತಿಯಲ್ಲಿ ನಿಮಗೆ ಆತಂಕದ ದಿನವೂ ಇದಾಗಬಹುದು. ನೀವು ಕೆಲವು ಅಪೂರ್ಣ ಕಾರ್ಯಗಳನ್ನು ಮಾಡಿ ಮುಗಿಸುವಿರಿ. ದೈವದ ಬಗ್ಗೆ ನಿಮಗೆ ಅಪನಂಬಿಕೆ ಬರಬಹುದು. ಮಕ್ಕಳ ಹಠಸ್ವಭಾವವು ಇಮಗೆ ಇಷ್ಟವಾಗದು. ನೀವು ಸಹನೆಯನ್ನು ಮೀರಿ ವರ್ತಿಸುವಿರಿ.

ಮಕರ ರಾಶಿ: ಈ ದಿನ ನಿಮಗೆ ಬಹಳ ಉತ್ಸಾಹದಿಂದ ಮುನ್ನಡೆಯುವಿರಿ. ನಿಮ್ಮ ಅಗತ್ಯ ಕೆಲಸಗಳು ಸಮಯಕ್ಕೆ ಪೂರ್ಣಗೊಳ್ಳಬಹುದು. ನೀವು ಧರ್ಮ ಕಾರ್ಯಗಳಲ್ಲಿ ಮುನ್ನಡೆಯುವುದು ಉತ್ತಮ. ಮಕ್ಕಳಿಗೆ ನೀವು ಆದರ್ಶರಾಗುವಿರಿ. ನಿಮ್ಮ ಸಂಪೂರ್ಣ ಗಮನವು ವೈಯಕ್ತಿಕ ವಿಷಯಗಳ ಮೇಲೆ ಇರುತ್ತದೆ. ಹಿರಿಯ ಸದಸ್ಯರಿಗೆ ನಿಮ್ಮ ಸಹಕಾರವು ಇರಲಿದೆ. ಕೃಷಿಯಲ್ಲಿ ಲಾಭ ಗಳಿಸಬೇಕೆಂದು ನಾನಾ ಪ್ರಯತ್ನವನ್ನು ಮಾಡುವಿರಿ. ಇಂದಿನ ಆದಾಯಕ್ಕೆ ತಕ್ಕಂತೆ ಖರ್ಚೂ ಇರಲಿದೆ. ನಿಮ್ಮ ಪ್ರೀತಿಗೆ ಇಂದು ಅಧಿಕೃತ ಮುದ್ರೆಯು ಬೀಳಲಿದ್ದು ನಿಮಗೆ ಖುಷಿಯಾಗಲಿದೆ. ನಿಮ್ಮ ವೃತ್ತಿಯ ಕುರಿತು ಯಾರಾದರೂ ಕೇಳಿಯಾರು. ಆದಾಯವನ್ನೂ ಕೇಳಬಹುದು. ಉನ್ನತ ವಿದ್ಯಾಭ್ಯಾಸವು ಯಶಸ್ವಿಯಾಗಿ ಪೂರೈಸುವಿರಿ. ವಿದೇಶದ ವ್ಯವಹಾರವು ನಿಮಗೆ ಸರಿಯಾಗಿ ಆಗಿಬಾರದು. ಉದರದ ತೊಂದರೆಯನ್ನು ಕಡಿಮೆ‌ ಮಾಡಿಕೊಳ್ಳಿ.

ಕುಂಭ ರಾಶಿ: ನಿಮ್ಮ ಆದಾಯವನ್ನು ಹೆಚ್ಚಿಸುವ ಪ್ರಯತ್ನಗಳು ಪೂರ್ಣವಾಗಿ ಸಫಲವಾಗದು. ನೀವು ಸ್ನೇಹಿತರು ಮತ್ತು ಸಹೋದ್ಯೋಗಿಗಳಿಂದ ಹಣಕಾಸಿನ ಬೆಂಬಲವನ್ನು ಪಡೆಯುತ್ತೀರಿ. ಕಾರ್ಯಕ್ಷೇತ್ರದಲ್ಲಿ, ನೀವು ಬಯಸಿದ ಕೆಲಸವನ್ನು ಮಾಡುವಿರಿ. ನೀವು ಶುಭ ಕಾರ್ಯಗಳಿಗೆ ಹಣವನ್ನು ಖರ್ಚು ಮಾಡುತ್ತೀರಿ. ಕಾರ್ಯನಿರ್ವಹಣೆಗೆ ಪ್ರಶಂಸೆಯು ಸಿಗಲಿದೆ. ಒಪ್ಪಂದಕ್ಕೆ ಪೂರ್ಣ ಒಪ್ಪಿಗೆ ಸಿಕ್ಕಮೇಲೆ ಮುಂದುವರಿಯುವುದು ಒಳ್ಳೆಯದು. ಗ್ರಾಹಕರಿಂದ ಮೋಸ ಹೋಗಬೇಕಾದೀತು. ಸಣ್ಣ ಉದ್ಯೋಗವನ್ನು ವಿಸ್ತರಿಸುವ ಮನೋಭಾವವಿರುವುದು. ನಿಮ್ಮನ್ನು ಕೇಳಿಕೊಂಡು ಯಾರಾದರೂ ಅಪರಿಚಿತರು ಬರಬಹುದು. ಯಾರನ್ನಾದರೂ ಕಳೆದುಕೊಳ್ಳುವ ಭೀತಿಯು ಇರಲಿದೆ. ನಿಮಗೇ ನೆರವು ಬೇಕಾಗಿದ್ದರೂ ಇನ್ನೊಬ್ಬರ ಸಹಾಯಕ್ಕೆ ಹೋಗುವಿರಿ. ನಿಮ್ಮ ವಿರೋಧಿಗಳ ಸಂಖ್ಯೆ ಕಡಿಮೆಯಾಗುವುದು. ನಿಮ್ಮ ದುಡಿಮೆ ನ್ಯಾಯದ ಹಾದಿಯಲ್ಲಿರಲಿ.

ಮೀನ ರಾಶಿ: ಇಂದು ನಿಮ್ಮ ಬಹುಕಾಲದಿಂದ ಬಾಕಿ ಉಳಿದಿರುವ ಕಾರ್ಯಗಳನ್ನು ಪೂರ್ಣಗೊಳಿಸುವ ದಿನವಾಗಿದೆ. ನಿಮ್ಮ ಖರ್ಚುಗಳನ್ನು ನೀವು ನಿಯಂತ್ರಿಸಿದರೆ, ಒಳ್ಳೆಯದೇ. ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದಿಂದ ಪ್ರಯೋಜನವುದೆ. ಒಂದಕ್ಕಿಂತ ಹೆಚ್ಚು ಮೂಲಗಳಿಂದ ಆದಾಯು ಸಿಗಬಹುದು. ಸರ್ಕಾರಿ ನೌಕರಿಗಾಗಿ ತಯಾರಿ ನಡೆಸುತ್ತಿರುವವರು ತಮ್ಮ ಪ್ರಯತ್ನವನ್ನು ಬಿಡಬಾರದು. ನಿಮ್ಮ ಸಂಗಾತಿಯಿಂದ ಮನೋಬಲವು ಹೆಚ್ಚಾಗುವುದು. ನಿರ್ಮಾಣ ಕಾರ್ಯದ ಅಗತ್ಯವನ್ನು ಪೂರೈಸುವಿರಿ.. ಸ್ನೇಹಿತರ ಮಾತಿನಿಂದ ವಿದೇಶಕ್ಕೆ ಹೋಗುವ ಆಸೆ ಅತಿಯಾಗುವುದು. ನ್ಯಾಯಾಲಯಕ್ಕೆ ಸಂಬಂಧಿಸಿದಂತೆ ಸಕಾರಾತ್ಮಕ ನಿಲುವು ಇರಲಿ. ಮಕ್ಕಳು ನಿಮ್ಮ ಜೊತೆ ವಾಗ್ವಾದ ಬರಬಹುದು. ಒಳ್ಳೆಯ ಸುದ್ದಿಯು ನಿಮ್ಮ ಉತ್ಸಾಹವನ್ನು ಹೆಚ್ಚಿಸುವುದು. ಮನೆಯ ಬಗ್ಗೆ ಚಿಂತಿಸಬೇಕಾಗುವುದು. ನಿಮ್ಮನ್ನು ಸೋಲನ್ನು ನಿರೀಕ್ಷಿಸುವವರಿಗೆ ಆಹಾರವಾಗುವಿರಿ.

ಲೋಹಿತ ಹೆಬ್ಬಾರ್ – 8762924271 (what’s app only)

ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ