AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ಈ ರಾಶಿಯವರು ದುಡುಕಿನ ನಿರ್ಧಾರದಿಂದ ಬೇಸರಪಡಬೇಕಾದೀತು

ಆಗಸ್ಟ್​ 27,​ 2024ರ​​ ನಿಮ್ಮ ರಾಶಿಭವಿಷ್ಯ: ನಿಮ್ಮ‌ ದಿನಚರಿಯನ್ನು ವ್ಯವಸ್ಥಿತವಾಗಿ ಮಾಡಿಕೊಳ್ಳುವುದು ಉತ್ತಮ. ಎಂದಿನಂತೆ ನಿಮ್ಮ ನಿರೀಕ್ಷೆಯು ಸತ್ಯವಾಗಬಹುದು. ಹಗುರಾದ ಮನಸ್ಸಿನಿಂದ ಉತ್ಸಾಹವು ಅಧಿಕವಾಗುವುದು. ಇಂದು ನೀವು ನಿಯಮಗಳನ್ನು ಪಾಲಿಸಲು ಕಷ್ಟಪಡಬೇಕಾದಿಕತು. ಹಾಗಾದರೆ ಆಗಸ್ಟ್​ 27ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Horoscope: ಈ ರಾಶಿಯವರು ದುಡುಕಿನ ನಿರ್ಧಾರದಿಂದ ಬೇಸರಪಡಬೇಕಾದೀತು
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Aug 27, 2024 | 12:10 AM

Share

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2024 ಆಗಸ್ಟ್​ 27) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ಶ್ರಾವಣ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ನವಮೀ, ನಿತ್ಯನಕ್ಷತ್ರ: ಮೃಗಶಿರಾ, ಯೋಗ: ಧ್ರುವ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:46 ಗಂಟೆ, ರಾಹು ಕಾಲ ಮಧ್ಯಾಹ್ನ 03:40 ರಿಂದ 05:13, ಯಮಘಂಡ ಕಾಲ ಬೆಳಿಗ್ಗೆ 09:28 ರಿಂದ 11:01ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:34 ರಿಂದ 02:07ರ ವರೆಗೆ.

ಮೇಷ ರಾಶಿ: ಇಂದು ನೀವು ಎಲ್ಲ ಕಾರ್ಯವನ್ನೂ ಅಚ್ಚುಕಟ್ಟಾಗಿ ಮಾಡಲು ಬಯಸುವಿರಿ. ವಾದ ಮಾಡಿ ಗೆಲ್ಲುವುದಕ್ಕಿಂತ ವಾಸ್ತವವನ್ನು ಅರಿತು ಸುಮ್ಮನಾಗುವುದು ಉತ್ತಮ. ಕಳೆದುಕೊಂಡಿದ್ದರ ಕುರಿತು ಚಿಂತಿಸುತ್ತ ಭವಿಷ್ಯವನ್ನು ಹಾಳುಮಾಡಿಕೊಳ್ಳಬೇಡಿ. ನಿಮ್ಮ‌ ದಿನಚರಿಯನ್ನು ವ್ಯವಸ್ಥಿತವಾಗಿ ಮಾಡಿಕೊಳ್ಳುವುದು ಉತ್ತಮ. ಎಂದಿನಂತೆ ನಿಮ್ಮ ನಿರೀಕ್ಷೆಯು ಸತ್ಯವಾಗಬಹುದು. ಹಗುರಾದ ಮನಸ್ಸಿನಿಂದ ಉತ್ಸಾಹವು ಅಧಿಕವಾಗುವುದು. ಇಂದು ನೀವು ನಿಯಮಗಳನ್ನು ಪಾಲಿಸಲು ಕಷ್ಟಪಡಬೇಕಾದಿಕತು. ಆರ್ಥಿಕ ಹಿಂಜರಿಕೆಯು ನಿಮಗೆ ಅರಗಿಸಿಕೊಳ್ಳದ ತುತ್ತಾಗಬಹುದು. ನಿಮ್ಮಿಂದಾಗದ ಕಾರ್ಯವನ್ನು ಯಾರಿಂದಲಾದರೂ ಮಾಡಿಸುವಿರಿ. ವ್ಯಕ್ತಿಗಳ ಮೇಲೆ‌ನಂಬಿಕೆಯನ್ನು ನೀವು ಕಳೆದುಕೊಳ್ಳುವಿರಿ. ಕೆಲಸಗಳು ಮಂದಗತಿಯಲ್ಲಿ ಸಾಗಲಿದೆ. ಸಹೋದರನಿಂದ ನಿಮಗೆ ಸಲಹೆಗಳು ಸಿಗಬಹುದು. ಕಛೇರಿಯಲ್ಲಿ ಇಂದು ಕೆಲಸ ಮಾಡಲು ಆಸಕ್ತಿ ಕಡಿಮೆ ಇರಲಿದೆ. ನೀರಿನಿಂದ ಭಯವು ಹೆಚ್ಚಾಗುವುದು.

ವೃಷಭ ರಾಶಿ; ಇಂದು ನೀವು ಯಾರ ಮಾತನ್ನು ಒಪ್ಪಿದರೂ ನಿಮ್ಮ ಆಲೋಚನೆಯನ್ನು ಬದಲಾಯಿಸುವುದಿಲ್ಲ. ದುಡುಕಿನ ನಿರ್ಧಾರದಿಂದ ಬೇಸರಪಡಬೇಕಾದೀತು. ಆಕಸ್ಮಿಕ‌ ಪ್ರಯಾಣವು ಬಂದಿದ್ದು, ಇದರಿಂದ ನಿಮಗೆ ಉದ್ಯೋಗದಲ್ಲಿ ತೊಂದರೆಯಾಗಬಹುದು. ಎಲ್ಲಿಗಾದರೂ ಪ್ರಯಾಣ ಮಾಡುವ ಉತ್ಸಾಹವಿರುವುದು. ವಿದ್ಯಾರ್ಥಿಗಳು ಅಧ್ಯಯನಕ್ಕೆ ಪರಿಸರವನ್ನು ಬದಲಿಸುವ ಸಾಧ್ಯತೆ ಇದೆ. ಸಹೋದ್ಯೋಗಿಗಳ ಸಹಕಾರವಿಲ್ಲದೇ ಇಂದು ನಿಮ್ಮ ಕೆಲಸವು ಆಗಲಿದೆ. ದೂರುಗಳು ನಿಮ್ಮನ್ನು ಜಾಗರೂಕಮಾಡಬಹುದು. ಸ್ನೇಹಿತರ ಜೊತೆ ಮನೋರಂಜನೆಯಲ್ಲಿ‌ ಕಾಲವನ್ನು ಕಳೆಯುವಿರಿ. ನಿಮ್ಮ‌ ಮಾನಸಿಕತೆಯನ್ನು ತಿಳಿಯಲು ಕಷ್ಟಪಡುವರು. ನಿಮ್ಮದಲ್ಲದ್ದನ್ನು ಇಷ್ಟಪಡುವುದು ಬೇಡ. ಪರರ ಭಾವನೆಗೆ ಅನಾದರ ತೋರುವುದು ಬೇಡ. ತೆರೆಯಲ್ಲಿರುವುದನ್ನು ಕಾಣಲು ಪರದೆ ಸರಿಯಬೇಕು. ನಿಮ್ಮ ಮೇಲಿಟ್ಟ ನಂಬಿಕೆಯನ್ನು ಕಷ್ಟಪಟ್ಟು ಉಳಿಸಿಕೊಳ್ಳಬೇಕಾದೀತು.

ಮಿಥುನ ರಾಶಿ: ಇಂದು ತಂದೆಯು ಯಾವುದೋ ಕಾರ್ಯಕ್ಕೆ ನಿಮ್ಮಿಂದ ಧನವನ್ನು ನಿರೀಕ್ಷಿಸಬಹುದು. ಲೆಕ್ಕ ಶೋಧಕರಿಗೆ ಒತ್ತಡ ಹೆಚ್ಚು. ನಿಮ್ಮ‌ ಪ್ರಯಾಣದಲ್ಲಿ ಕೆಲವು ತೊಂದರೆಗಳು ಆಗಬಹುದು. ನಿಮ್ಮವರ ಅನಾರೋಗ್ಯವನ್ನು ಸರಿಮಾಡಿಕೊಳ್ಳಲು ಓಡಾಟ ಮಾಡಬೇಕಾದೀತು. ಮಿತಿಯರಿತು ನೀವು ವ್ಯವಹರಿಸುವುದು ಮುಖ್ಯ. ಸಾಲ ಮಾಡವ ಸ್ಥಿತಿಯೂ ಬರಬಹುದು. ಶಿಸ್ತಿನ ಕೆಲಸಕ್ಕೆ ನಿಮ್ಮನ್ನು ಪ್ರಶಂಸಿಸಬಹುದು. ಅಧಿಕವೇತನವು ಸಿಗುವ ಕೆಲಸವನ್ನು ಅನ್ವೇಷಿಸುವಿರಿ. ಹಣದ ಹಿಂದೆ ಬಿದ್ದು, ನೀವು ಮಾಡಬಾರದ ಕೆಲಸಕ್ಕೆ ಕೈ ಹಾಕಬೇಕಾದೀತು. ಎಂದೋ ಆಡಿದ ಮಾತಿಗೆ ಇಂದು ಅನುಭವಿಸುವ ಸ್ಥಿತಿ ಬರಬಹುದು. ನಿಮ್ಮವರು ನಿಮ್ಮನ್ನು ನಿರ್ಲಕ್ಷಿಸಬಹುದು. ಯಾವುದೋ ಯೋಚನೆಯಲ್ಲಿ ನೀವು ಮಗ್ನರಾಗಿ ಚಿಂತೆಪಡುವ ಸಾಧ್ಯತೆ ಇದೆ. ಕೊಟ್ಟ ಹಣವನ್ನು ಹೊಂಪಡೆಯುವುದು ಕಷ್ಟ. ನಿಮ್ಮ ನೋವಿಗೆ ಯಾರಾದರೂ ಸ್ಪಂದಸುವರು. ಕಷ್ಟಕ್ಕೆ ಸ್ಪಂದಿಸುವ ಮನೋಭಾವವಿರಲಿ. ಸಂಗಾತಿಯ ಖರ್ಚನ್ನು ನಿಭಾಯಿಸಬೇಕಾಗುವುದು.

ಕರ್ಕಾಟಕ ರಾಶಿ; ಇಂದು ನೀವು ಉದ್ಯೋಗದ ಕಾರಣಕ್ಕೆ ಬೇರೆ ಕಡೆಗೆ ಹೋಗುವಿರಿ. ನ್ಯಾಯಾಲಯದ ವಿಚಾರದಲ್ಲಿ ನಿಮಗೆ ಸಂಪೂರ್ಣ ವಿಶ್ವಾಸ ಬರಬಹುದು. ನಿಮ್ಮ ನಡವಳಿಕೆಯಿಂದ ಮೇಲಧಿಕಾರಿಗಳಿಗೆ ಅಸಮಾಧಾನವಾಗಲಿದೆ. ತಪ್ಪಿಗೆ ಪಶ್ಚಾತ್ತಾಪವು ಸಣ್ಣ ಪ್ರಾಯಶ್ಚಿತ್ತವಾಗುವುದು. ಅಮೂಲ್ಯ ವಸ್ತುಗಳನ್ನು ಖರೀದಿಸುವಿರಿ. ನಿಮಗೆ ಕಷ್ಟವಾದ ವಿಚಾರಗಳನ್ನು ನೀವು ತಪ್ಪಿಸಿಕೊಳ್ಳಲು ಪ್ರಯತ್ನಿಸುವಿರಿ. ನಿಮ್ಮನ್ನು ನೀವು ಅಲ್ಪರೆಂದು ಭಾವಿಸುವಿರಿ. ಮನಸ್ಸು ಭಾರವಾಗಿದ್ದು ಎಲ್ಲದರಿಂದ ದೂರವಿರಲು ಇಚ್ಛಿಸುವಿರಿ. ನಿಮ್ಮ ಮಾತುಗಳಿಗೆ ಅಪಾರ್ಥವು ಬಂದು ಅಪವಾದವೂ ಕೇಳಿ ಬರಬಲಿದೆ. ಅನಿರೀಕ್ಷಿತ ವಾರ್ತೆಯನ್ನು ನೀವು ಕೇಳುವಿರಿ. ನಿಮ್ಮ ಆತಂಕವನ್ನು ಇನ್ನೊಬ್ಬರ ಬಳಿ ಹೇಳಿಕೊಳ್ಳುವಿರಿ. ಕಾರ್ಯದ ಒತ್ತಡದಿಂದ ಮನಸ್ಸು ಭಾರವಾಗಲಿದೆ. ಸ್ಥಾನವನ್ನು ಬಯಸಿ ನೀವು ಇಂದು ಕೆಲಸವನ್ನು ಮಾಡುವಿರಿ. ಸಮಾರಂಭಗಳು ಇಂದು ನಿಮಗೆ ಸಪ್ಪೆ ಅನ್ನಿಸಬಹುದು. ದಾಂಪತ್ಯದಲ್ಲಿ ಹೊಂದಾಣಿಕೆಯು ಕಷ್ಟವಾದೀತು.

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್