AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Astrology: ಈ ರಾಶಿಯವರು ಸಂಗಾತಿಯ ಜೊತೆ ವಾದಕ್ಕಿಳಿದು ಸೋಲಬೇಕಾಗುವುದು

ರಾಶಿ ಭವಿಷ್ಯ ಭಾನುವಾರ (ಆ. 26): ನಿಮ್ಮ ರಾಶಿ ಧನು, ಮಕರ, ಕುಂಭ, ಮೀನ. ಹೊರಗಿನ ಆಹಾರವನ್ನು ತಿನ್ನಲು ನೀವು ಇಚ್ಛಿಸುವಿರಿ. ಆತಂಕದಲ್ಲಿ ನಿಮ್ಮ ಕಾರ್ಯವನ್ನು ಹಾಳುಮಾಡಿಕೊಳ್ಳುವಿರಿ. ‌ಸಂಗಾತಿಯಿಂದ ನೀವು ಉಡುಗೊರೆಯನ್ನು ಪಡೆಯುವಿರಿ. ತಪ್ಪಿಗೆ ಪಶ್ಚಾತ್ತಾಪವನ್ನು ಪಡೆಯುವ ದಿನ ಇಂದು. ಹಾಗಾದರೆ ಆಗಸ್ಟ್​ 26ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Astrology: ಈ ರಾಶಿಯವರು ಸಂಗಾತಿಯ ಜೊತೆ ವಾದಕ್ಕಿಳಿದು ಸೋಲಬೇಕಾಗುವುದು
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Aug 26, 2024 | 12:20 AM

Share

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2024 ಆಗಸ್ಟ್​ 26) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ಶ್ರಾವಣ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಸಪ್ತಮೀ / ಅಷ್ಟಮೀ, ನಿತ್ಯನಕ್ಷತ್ರ: ಕೃತ್ತಿಕಾ / ರೋಹಿಣೀ, ಯೋಗ: ವೃದ್ಧಿ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:47 ಗಂಟೆ, ರಾಹು ಕಾಲ 07:55 ರಿಂದ 09:28, ಯಮಘಂಡ ಕಾಲ 11:01 ರಿಂದ 12:34ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:08 ರಿಂದ ಸಂಜೆ 03:41ರ ವರೆಗೆ.

ಧನು ರಾಶಿ: ನೀವು ಇಂದು ತಪ್ಪನ್ನು ಮಾಡದೇ ಎಲ್ಲರಿಂದ ಸೈ ಎನಿಸಿಕೊಳ್ಳುವಿರಿ. ಪರರ ಕಷ್ಟಗಳಗೆ ಸ್ಪಂದಿಸಲು ಆಗದೇ ಇರಬಹುದು. ಬಂಧುಗಳ ಜೊತೆ ಸಂಬಂಧವನ್ನು ಇಟ್ಟುಕೊಳ್ಳುವುದು ನಿಮ್ಮ ವರ್ತನೆಯ ಮೇಲೆ ಇರುವುದು. ಹೊಸ‌ ಕೆಲಸವನ್ನೇನಾದರೂ ಆರಂಭಿಸಿದರೆ ಅದನ್ನು ನಿಮ್ಮ ಶತ್ರುಗಳು ನಿಲ್ಲಿಸುವರು. ನಿಮ್ಮ ಗೌಪ್ಯ ವಿಚಾರಗಳು ಕೆಲವರಿಗೆ ತಿಳಿದು ಹಾಸ್ಯ ಮಾಡಬಹುದು. ನೆರೆಯವರನ್ನು ಪ್ರೀತಿಯಿಂದ ಮಾತನಾಡಿಸುವುದು ಅನಿವಾರ್ಯವಾಗಲಿದೆ. ಸಂಗಾತಿಯ ಜೊತೆ ವಾದಕ್ಕಿಳಿದು ಸೋಲಬೇಕಾಗುವುದು. ವಿದ್ಯಾಭ್ಯಾಸದ ಹಿನ್ನಡೆಯಿಂದ ನಿಮಗೆ ಆತಂಕ ಹೆಚ್ಚಾಗುವುದು. ಹೊಂದಾಣಿಕೆಯನ್ನು ನೀವು ಬೆಳೆಸಿಕೊಳ್ಳಬೇಕಾಗಬಹುದು. ಸ್ನೇಹಿತರು ವಂಚಿಸುವ ಸಾಧ್ಯತೆ ಇದೆ. ರಾಜಕೀಯ ಒತ್ತಡವು ನಿಮಗೆ ಹೆಚ್ಚು ಬರುವುದು. ಬೇಡದ ಕಾರ್ಯಕ್ಕೆ ಯಾರಾದರೂ ಪ್ರಚೋದಿಸಿಯಾರು. ನಿಮ್ಮ ವಸ್ತುಗಳನ್ನು ಮರುಬಳಕೆ ಮಾಡಲು ಯೋಚಿಸಿ. ನಿಶ್ಚಿತವಾದ ವಿವಾಹವು ಅನ್ಯರಿಂದ ತಪ್ಪಿಹೋಗಬಹುದು.

ಮಕರ ರಾಶಿ: ನೀವು ಅಪ್ತರ ಸಲಹೆಗಳನ್ನು ಕೇಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. ನಿಮ್ಮ ದುರುಪಯೋಗವನ್ನು ಸ್ನೇಹಿತರು ತಪ್ಪಿಸುವರು. ಇಂದು ನೀವು ಎಲ್ಲವನ್ನೂ ಮಾಡಬಲ್ಲವರು ಎಂಬ ಅಭಿಮಾನ ಉಂಟಾಗಲಿದೆ. ಆಪ್ತರೇ ನಿಮಗೆ ನಂಬಿಕೆಗೆ ದ್ರೋಹ ಬಗೆಯಬಹುದು. ಕೇಳಬೇಕಾದುದನ್ನು ನೇರವಾಗಿ ಕೇಳಿ. ಬಹಳ ದಿನಗಳಿಂದ ಉದ್ಯೋಗವು ಸಿಗದೇ ಮಾನಸಿಕವಾಗಿ ಕುಗ್ಗುವಿರಿ. ಮಕ್ಕಳು ಕೇಳಿದ್ದನ್ನು ಕೊಡಿಸಿ ಅವರನ್ನು ಸಂತೋಷಪಡಿಸುವಿರಿ. ವಿದೇಶ ಪ್ರಯಾಣದ‌ ಕನಸನ್ನು ನನಸು ಮಾಡಿಕೊಳ್ಳಲು ಪ್ರಯತ್ನಿಸಿ. ಊಹಿಸದ ವಾರ್ತೆಯೊಂದು ಬಂದು ಸಂತೋಷವಾಗಿ ಇಡುವುದು. ಉತ್ತಮ ಲಾಭಕ್ಕಾಗಿ ನೀವು ಯೋಜನೆಯನ್ನು ಹಾಕುವಿರಿ. ನಿಮ್ಮ ವಸ್ತುವು ನಿಮಗೆ ಸಿಗಲಿದೆ. ವಿದ್ಯಾರ್ಥಿಗಳಿಗೆ ಅನುಕಂಪ ಬೇಕಸದೀತು. ಎಲ್ಲರ ಮೇಲೂ ಅನುಮಾನ ಪಡುವ ದುರಭ್ಯಾಸವು ಬೆಳೆಯಬಹುದು. ಮನೆಯಲ್ಲಿ ತಾಳ್ಮೆಯಿಂದ ವ್ಯವಹರಿಸಿ. ಮನೆಯ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳುವಿರಿ. ನಿಮ್ಮ ವಾಹನಕ್ಕಾಗಿ ಖರ್ಚನ್ನು ಮಾಡಬೇಕಾಗುವುದು.

ಕುಂಭ ರಾಶಿ: ಇಂದು ನಿಮ್ಮನ್ನು ಅಪರಿಚಿತರು ವಶ ಮಾಡಿಕೊಳ್ಳಲು ಪ್ರಯತ್ನಿಸುವರು. ಉದ್ಯೋಗದ ಸ್ಥಳವನ್ನು‌ ಸದ್ಯ ಅನ್ವೇಷಿಸುವುದು ಬೇಡ.‌ ಒಂದು ಕಡೆ ಸುಮ್ನನೆ‌ ಕುಳಿತು ಅಭ್ಯಾಸವಿರದು. ಬೇರೆಯವರಿಗೆ ಉಪಕಾರ ಮಾಡಲು ಹೋಗಿ ನಿಮಗೆ ಸಿಗುವುದು ಕಷ್ಟ. ಯಾರಮೇಲಾದರೂ ಅಪವಾದವನ್ನು ಮಾಡುವ ಮೊದಲು ಆಲೋಚಿಸಿ. ಆಪ್ತರ ಮಾತನ್ನು ಕೇಳದೇ ಬೇಸರಿಸುವ ಸಂದರ್ಭವು ಬರಬಹುದು. ವಾಹನದಲ್ಲಿ ಸಂಚಾರವು ನಿಮಗೆ ಹೆಚ್ಚು ಇಷ್ಟವಾಗುವುದು. ಅಪರಿಚಿತರ ಜೊತೆ ಮಾತುಗಳನ್ನು ಕಡಿಮೆ‌ ಮಾಡಿ. ಇಂದಿನ‌ ಕಾರ್ಯಗಳ ಬಗ್ಗೆ ಹೆಚ್ಚಿನ ಗಮನವಿರಲಿದೆ. ಮೇಲಧಿಕಾರಿಗಳ ನಡುವೆ ಚರ್ಚೆ ಮಾಡಲಿದ್ದೀರಿ. ಸಮಯವನ್ನು ಹಾಳು ಮಾಡಿಕೊಂಡು ದುಃಖಿಸುವಿರಿ. ನಿಮ್ಮನ್ನು ನಂಬಿಸಿ ಕೆಲಸ ಮಾಡಿಸಿಕೊಳ್ಳುವರು. ಪರಿಚಿತರ ಮೂಲಕ ನಿಮಗೆ ಅಪರಿಚಿತರ ಸಹಾಯ ದೊರೆಯುವುದು. ದಿನದ ಕೆಲಸವೇ ಇಂದು ಬಹಳ ಆಗಲಿದ್ದು ಇನ್ನೊಬ್ಬರ ಕೆಲಸವನ್ನು ಮಾಡಿಕೊಡಲು ತಾಳ್ಮೆ ಇರಲಾರದು. ಹೂಡಿಕೆಗೆ ಯಾರಿಂದಲಾದರೂ ಪ್ರೇರಣೆ ಸಿಗಬಹುದು.

ಮೀನ ರಾಶಿ: ಇಂದು ನಿಮಗೆ ನೌಕರರಿಂದ ತೊಂದರೆ ಬರಬಹುದು. ವಿಶೇಷ ದ್ರವ್ಯ ಲಾಭದಿಂದ ಸಂತೋಷಪಡುವಿರಿ. ಆಕಸ್ಮಿಕ ಭೇಟಿಯು ಪ್ರೇಮವಾಗಿ ಬದಲಾಗಬಹುದು. ಮಕ್ಕಳ ಜೊತೆ ನೀವು ಹೆಚ್ಚಿನ ಸಮಯವನ್ನು ಕಳೆಯುವಿರಿ. ಯಾರ‌ ಮಾತನ್ನೋ‌ ನಂಬಿ ನಿಮ್ಮವರ ಮೇಲೆ‌ ಅನುಪಡುವಿರಿ. ಹೊರಗಿನ ಆಹಾರವನ್ನು ತಿನ್ನಲು ನೀವು ಇಚ್ಛಿಸುವಿರಿ. ಆತಂಕದಲ್ಲಿ ನಿಮ್ಮ ಕಾರ್ಯವನ್ನು ಹಾಳುಮಾಡಿಕೊಳ್ಳುವಿರಿ. ‌ಸಂಗಾತಿಯಿಂದ ನೀವು ಉಡುಗೊರೆಯನ್ನು ಪಡೆಯುವಿರಿ. ತಪ್ಪಿಗೆ ಪಶ್ಚಾತ್ತಾಪವನ್ನು ಪಡೆಯುವ ದಿನ ಇಂದು. ದೇವರಿಗೆ ಶರಣಾಗಿ ನಿಮಗೆ ಆಗಬೇಕಾದ ಕೆಲಸವನ್ನು ನಿವೇದಿಸಿಕೊಳ್ಳುವಿರಿ. ಮನೋರಂಜನೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುವಿರಿ. ನಿಮ್ಮ ಕೇಳಿಕೊಂಡು ಬಂದವರಿಗೆ ಸಹಾಯವನ್ನು ಮಾಡಲು ಒಪ್ಪಿಕೊಳ್ಳುವಿರಿ. ಸೇವಾ ಮನೋಭಾವ ಕಡಿಮೆ ಆಗುವುದು.

Published On - 12:20 am, Mon, 26 August 24

ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?