AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ಈ ರಾಶಿಯವರು ಸರಿಯಾಗಿ ಗಮನಿಸಿ ಮುಂದಿನ ಹೆಜ್ಜೆ ಇಡಿ

ಆಗಸ್ಟ್​ 26,​ 2024ರ​​ ನಿಮ್ಮ ರಾಶಿಭವಿಷ್ಯ: ಇಂದು ನೀವು ನಿಮಗೆ ವಹಿಸಿದ ಕೆಲಸವನ್ನು ಬಿಟ್ಟು ಬೇರೆ ಕೆಲಸದಲ್ಲಿ ಮಗ್ನರಾಗುವಿರಿ. ಆಸಕ್ತಿ ಇದ್ದರೂ ಅನಿವಾರ್ಯ ಕಾರಣದಿಂದ ಜವಾಬ್ದಾರಿಯನ್ನು ತಪ್ಪಿಸಿಕೊಳ್ಳುವಿರಿ. ಸ್ವೇಚ್ಛಾಚಾರದ ವರ್ತನೆಯು ನಿಮ್ಮವರಿಗೆ ಇಷ್ಟವಾಗದು. ಹಾಗಾದರೆ ಆಗಸ್ಟ್​ 26ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Horoscope: ಈ ರಾಶಿಯವರು ಸರಿಯಾಗಿ ಗಮನಿಸಿ ಮುಂದಿನ ಹೆಜ್ಜೆ ಇಡಿ
ಈ ರಾಶಿಯವರು ಸರಿಯಾಗಿ ಗಮನಿಸಿ ಮುಂದಿನ ಹೆಜ್ಜೆ ಇಡಿ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Aug 26, 2024 | 12:10 AM

Share

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2024 ಆಗಸ್ಟ್​ 26) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ಶ್ರಾವಣ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಸಪ್ತಮೀ / ಅಷ್ಟಮೀ, ನಿತ್ಯನಕ್ಷತ್ರ: ಕೃತ್ತಿಕಾ / ರೋಹಿಣೀ, ಯೋಗ: ವೃದ್ಧಿ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:47 ಗಂಟೆ, ರಾಹು ಕಾಲ 07:55 ರಿಂದ 09:28, ಯಮಘಂಡ ಕಾಲ 11:01 ರಿಂದ 12:34ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:08 ರಿಂದ ಸಂಜೆ 03:41ರ ವರೆಗೆ.

ಮೇಷ ರಾಶಿ: ಇಂದು ದೈವಭಕ್ತಿಗೆ ನಿಮಗೆ ಅನುಕೂಲಕರ ವಾತಾವರಣವು ಸಿಗಲಿದೆ. ನಿಮ್ಮ ಉತ್ಸಾಹವೇ ಸಮಸ್ಯೆಗಳಿಗೆ ರಾಮಬಾಣ. ನಿಮಗೆ ಸ್ವಂತ ಉದ್ಯೋಗದ ಮೇಲೆ ಇರಬೇಕಾದ ಕಾಳಜಿಯು ಅನ್ಯ ಕಾರಣದಿಂದ‌ ಕಡಿಮೆಯಾಗಿ ನಷ್ಟವನ್ನು ಅನುಭವಿಸಬೇಕಾದೀತು. ಹೂಡಿಕೆಯ ವಿಚಾರದಲ್ಲಿ ಆತುರ ಬೇಡ. ಸರಿಯಾಗಿ ಗಮನಿಸಿ ಮುಂದಿನ ಹೆಜ್ಜೆ ಇಡಿ. ನೀವು ವೃತ್ತಿಪರರಾಗಿದ್ದರೆ ಕಛೇರಿಯಲ್ಲಿ ನಿಮಗೆ ಇಂದು ಅಶುಭವಾರ್ತೆಯು ಬರಬಹುದು. ಧೈರ್ಯವನ್ನು ತಂದುಕೊಳ್ಳುವುದು ಮುಖ್ಯ. ಕಳೆದುಕೊಂಡ ಸಂಗಾತಿಯ ನೆನಪು ನಿಮಗೆ ಅತಿಯಾಗಿ ಕಾಡಬಹುದು. ಮಾನಸಿಕವಾಗಿ ನೀವು ಕುಗ್ಗುವಿರಿ. ಯಾರೋ ಕೆಲವರಿಗಾಗಿ ನೀವು ಬದಲಾಗುವುದು ಬೇಡ. ಅಪರೂಪದ ಸ್ನೇಹಿತರನ್ನು ಮನೆಗೆ ಕರೆದು ಸಂತೋಷಪಡುವಿರಿ. ಯಾವುದೋ ಗಹನವಾದ ಆಲೋಚನೆಯಲ್ಲಿ ನೀವು ಮುಳುಗಿರುವಿರಿ. ಇನ್ನೊಬ್ಬರ ವಸ್ತುವನ್ನು ಕೇಳಿ ಪಡೆಯಿರಿ.

ವೃಷಭ ರಾಶಿ: ಇಂದು ದುರಭ್ಯಾಸದಿಂದ ಸಿಗುವ ಉನ್ನತ ಸ್ಥಾನವು ತಪ್ಪಬಹುದು. ಒತ್ತಡವಿದ್ದರೂ ಅದನ್ನು ನಿಭಾಯಿಸಿಕೊಂಡು ಹೋಗುವಿರಿ. ಇಂದು ನೀವು ನಿಮಗೆ ವಹಿಸಿದ ಕೆಲಸವನ್ನು ಬಿಟ್ಟು ಬೇರೆ ಕೆಲಸದಲ್ಲಿ ಮಗ್ನರಾಗುವಿರಿ. ಆಸಕ್ತಿ ಇದ್ದರೂ ಅನಿವಾರ್ಯ ಕಾರಣದಿಂದ ಜವಾಬ್ದಾರಿಯನ್ನು ತಪ್ಪಿಸಿಕೊಳ್ಳುವಿರಿ. ಸ್ವೇಚ್ಛಾಚಾರದ ವರ್ತನೆಯು ನಿಮ್ಮವರಿಗೆ ಇಷ್ಟವಾಗದು. ನಿಮ್ಮ ಕಾರ್ಯಕ್ಕೆ ಸಹಾಯಕರಾಗಿ ಉತ್ತಮರೇ ಸಿಗುತ್ತಾರೆ ಎಂಬ ಆಸೆ ಬೇಡ. ಕಛೇರಿಯ ಕೆಲಸದ ಕಾರಣ ನೀವು ಓಡಾಟ ಮಾಡಬೇಕಾದೀತು. ಪ್ರಯೋಜನವಾಗದೇ ಬೇಸರವಾದೀತು. ದೈಹಿಕವಾಗಿ ಶ್ರಮಿಸುವವರಿಗೆ ಲಾಭವಿದೆ. ತಾಯಿಯ ಮಾತನ್ನು ನೀವು ಕೇಳುವಿರಿ. ಗೊತ್ತಿದ್ದರೂ ಏನನ್ನೂ ಹೇಳದೇ ಮೌನದಿಂದ ಇರಲು ಪ್ರಯತ್ನಿಸುವಿರಿ. ಸ್ತ್ರೀಯರಿಂದ ತೊಂದರೆಯಾಗಲಿದೆ. ದೀರ್ಘಕಾಲದ ಸ್ನೇಹವು ಮತ್ತೆ ಹೊಸದಾಗಿ ಆರಂಭವಾಗಲಿದೆ. ಸೌಂದರ್ಯವರ್ಧನೆಗೆ ಬೇಕಾದ ಸಮಯವನ್ನು ಕೊಡುವಿರಿ. ಐಷಾರಾಮಿಯಾಗಿ ಬದುಕುವ ಕನಸು ಕಾಣುವಿರಿ.

ಮಿಥುನ ರಾಶಿ: ನಿಮ್ಮ ಇಂದಿನ ಹೊಸ ಪ್ರಯತ್ನಗಳು ಕಾರ್ಯಕ್ಕೆ ಬೇಕಾದ ಉತ್ಸಾಹವನ್ನು ಕೊಡುವುದು. ನಿಮಗೆ ಗೊತ್ತಿಲ್ಲದ ಕಾರ್ಯವನ್ನೂ ನೀವು ಒಪ್ಪಿಕೊಳ್ಳುವಿರಿ. ಮಕ್ಕಳಿಗೆ ಇಂದು ಸ್ವಲ್ಪ ಹಣವನ್ನು ಖರ್ಚುಮಾಡಬೇಕಾದೀತು. ಓಡಾಟಕ್ಕೆ ವಾಹನದ ಅವಶ್ಯಕತೆ ಬೇಕೆನಿಸಬಹುದು. ಸುಳ್ಳು ಹೇಳಿ‌ ಸ್ವಾರ್ಥವನ್ನು ಸಾಧಿಸಿಕೊಳ್ಳುವಿರಿ. ಹೆಚ್ಚು ಮಾತನಾಡಲು ನಿಮಗೆ ಸಮಯದ ಅಭಾವ ಇರುವುದು. ಕೃಷಿಯಲ್ಲಿ ಲಾಭ ಗಳಿಸುವ ಉಪಾಯವನ್ನು ಮಾಡುವಿರಿ. ನಿಮ್ಮ ಹಳೆಯ ಸಂಬಂಧವು ಮತ್ತೆ ಚಿಗುರೊಡೆಯಬಹುದು. ಹಿಂದಿನ ಶ್ರಮವು ಸಾರ್ಥಕವಾದೀತು. ಆಸ್ತಿಯ ಖರೀದಿಯನ್ನು ಮುಂದಕ್ಕೆ ಹಾಕಿ. ನಿಮ್ಮ ಆತುರವು ಇನ್ನೊಬ್ಬರಿಗೆ ಪರಿಹಾಸವಾದೀತು. ಕಛೇರಿಯಲ್ಲಿ ಇಂದು ನೀವು ಸ್ವತಂತ್ರರು. ಮನೋರಥವನ್ನು ಈಡೇರಿಸಿಕೊಳ್ಳುವುದು ನಿಮಗೆ ಕಷ್ಟವಾಗುವುದು. ಮಕ್ಕಳ ಜೊತೆ ಸಮಯವನ್ನು ಕಳೆಯುವಿರಿ.

ಕರ್ಕಾಟಕ ರಾಶಿ; ಇಂದು ನೀವು ಎಂತಹ ಚಟುವಟಿಕೆಯಿಂದ ಇದ್ದರೂ ನಿಮ್ಮ ಕೆಲಸ ಮಾತ್ರ ಆಗದೇ ಇರುವುದು. ವ್ಯಾಪಾರದ ಸ್ಥಳದಲ್ಲಿ ಕಲಹವಾಗುವ ಸಾಧ್ಯತೆ ಇದೆ. ಸಮಯವನ್ನು ನೋಡಿ ನೀವು ಮಾತನಾಡುವುದು ಒಳ್ಳೆಯದು. ಎಲ್ಲ ಸಂದರ್ಭದಲ್ಲಿ ನಿಮಗೆ ಗೌರವವು ಸಿಗುತ್ತದೆ ಎಂದು ನಂಬ ಬೇಡಿ. ನಿಮ್ಮ‌ ಸ್ಥಾನವನ್ನು ಉಳಿಸಿಕೊಳ್ಳಲು ಬಹಳ ಶ್ರಮಪಡುವಿರಿ. ನಿಮ್ಮ ದೃಷ್ಟಿಯಲ್ಲಿ ಯಾವುದೂ ಸರಿಯಾಗದು. ಆದಾಯದ‌ ಮೂಲವು ಬದಲಾಗಬಹುದು. ದಿನನಿತ್ಯದ ಕೆಲಸದಲ್ಲಿ ವ್ಯತ್ಯಾಸವನ್ನು ಕಾಣುವಿರಿ. ಕಛೇರಿಯಲ್ಲಿ ನಿಮ್ಮ ಬಗ್ಗೆ ಸಲ್ಲದ ಮಾತುಗಳು ಬರಬಹುದು. ಸಮಯದಲ್ಲಿ ಮುಗಿಸುವ ಕೆಲಸವನ್ನೂ ಮುಗಸಿ ಮುಂದಿನ ಆಲೋಚನೆಯನ್ನು ಮಾಡಿ. ನೀವು ಅನುಸರಿಸುವ ಕ್ರಮದಲ್ಲಿ ವ್ಯತ್ಯಾಸ ಇರಬಹುದು. ವಿವಾಹಕ್ಕೆ ಬರುವ ಉತ್ತಮ ಸಂಬಂಧವನ್ನು ಉಳಿಸಿಕೊಳ್ಳಿ. ನಿಮ್ಮ ಮಾತುಗಳಿಂದ ನೋವಾಗಲಿದೆ. ಹೇಳಬೇಕಾದುದನ್ನು ನೇರವಾಗಿ ಹೇಳಿ.